Tuesday, February 24, 2026
Google search engine
Home Blog Page 296

ಕನಿಷ್ಠ ವೇತನ ಹೆಚ್ಚಳ, ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು: ರಾಷ್ಟ್ರೀಯ ಸಮಾನ ಕನಿಷ್ಟ ವೇತನ 21 ಸಾವಿರ ರೂಪಾಯಿ ನೀಡಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ಕನಿಷ್ಟ ಖಾತ್ರಿ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತುಮಕೂರಿನ ಭಾರತ್ ಸಂಚಾರ್ ನಿಗಮ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಡಿಸೆಲ್, ಪೆಟ್ರೋಲ್ ಮತ್ತು ದಿನಸಿ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ. ಬೆಲೆ ನಿಯಂತ್ರಿಸಲು ಕೇಂದ್ರ ಮುಂದಾಗಿಲ್ಲ ಎಂದು ದೂರಿದರು.

ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಉದ್ದಿಮಗಳು ಮುಚ್ಚುತ್ತಿವೆ. ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ತಯಾರಿಕೆ ಮತ್ತು ಉತ್ಪಾದನೆ ಕುಂಠಿತವಾಗಿದೆ. ನಿರುದ್ಯೋಗ ಹೆಚ್ಚಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಲು ಕೇಂದ್ರ ಉದ್ದೇಶಿಸಿದೆ. ಇದರಿಂದ ಕಾರ್ಖಾನೆಗಳ ಮಾಲಿಕರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ ಎಂದು ಟೀಕಿಸಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಶಾಸನಬದ್ಧ ಭವಿಷ್ಯನಿಧಿ ಜಾರಿಗೊಳಿಸಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಕಲ್ಪಿಸಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತ್ರಿಪಡಿಸಬೇಕು. ರೈತರು ಮತ್ತು ಕೃಷಿಕೂಲಿಕಾರರ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ಗುತ್ತಿಗೆ ಪದ್ದತಿ ರದ್ದುಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ ಮಾತನಾಡಿ, ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ಮುಂದುವರಿದಿವೆ. ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇದುವರೆಗೂ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ದೇಶದಲ್ಲಿ ಕೃಷಿ ಬಿಕ್ಕಟ್ಟು ತಲೆದೋರಿದೆ. ಯಾವುದೇ ಸೌಲಭ್ಯಗಳಿಲ್ಲದೆ ರೈತರು ಪರದಾಡುತ್ತಿದ್ದಾರೆ. ರೈತ ಪರವಾದ ನೀತಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ. ರೈತರು ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ. ಹೀಗಾಗಿ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ಸಿಪಿಐ ಮುಖಂಡ ಕಂಬೇಗೌಡ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಎಐಯುಟಿಯುಸಿ ಮಂಜುಳ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಅಶ್ವಿನಿ ಮೊದಲಾದವರು ಮಾತನಾಡಿದರು.

ಮುಷ್ಕರಕ್ಕೆ ಬೆಂಬಲ; ತುಮಕೂರಿನಲ್ಲಿ ಕಾರ್ಮಿಕರ ಪ್ರತಿಭಟನೆ, ಬ್ಯಾಂಕ್ ಸ್ಥಬ್ದ

ತುಮಕೂರು: ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಿಸಬೇಕು. ಇಂತಹ ನೀತಿಗಳಿಂದ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರ, ಉದ್ಯಮಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬರಬೇಕು. ಉದ್ಯೋಗ ಸೃಷ್ಟಿಗೆ ಪೂರಕ ನೀತಿ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಿನ್ನೆಲೆಯಲ್ಲಿ ತುಮಕೂರಿನ ಟೌನ್ ಹಾಲ್ ನಲ್ಲಿ ಸಮಾವೇಶಗೊಂಡು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ರೈತ-ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ಜನವಿರೋಧಿ ನೀತಿಗಳಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಏರಿಕೆ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಮಾಡಬೇಕು. ರೈತರ ಆತ್ಮಹತ್ಯೆಗಳನ್ನು ತಡೆಯಬೇಕು. ರೈತರ ಸಾಲ ಮನ್ನಾ ಮಾಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಯೋಜನೆ ಬಲಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಜಾರಿಗೊಳಿಸಬೇಕು. ತುಮಕೂರು ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ರೂಪಿಸಬೇಕು, ಗುತ್ತಿಗೆ ಪದ್ದತಿ ನಿಯಂತ್ರಣ, ಖಾತ್ರಿ ಪಿಂಚಣಿ, ಕಾರ್ಮಿಕರ ವಿರೋಧಿ ನೀತಿಗಳನ್ನು ಕೈಬಿಡಬೇಕು. ಸಾರ್ವಜನಿಕ ಉದ್ದಿಮೆಗಳ ರಕ್ಷಣೆ, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ರೈತಪರ ಸಂಘಟನೆಗಳು ಸೇರಿದಂತೆ 200ಕ್ಕೂ ಹೆಚ್ಚು ಸಂಘಟನೆಗಳು ಗ್ರಾಮೀಣ ಭಾರತ್ ಬಂದ್ ನಡೆಸುತ್ತಿದ್ದು ಗ್ರಾಮಾಂತರ ಪ್ರದೇಶದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.

ಮುಷ್ಕರದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಸ್ ಸಂಚಾರ ಎಂದಿಗಿಂತ ಕಡಿಮೆ ಇದೆ. ಮುಷ್ಕರದಲ್ಲಿ ಕೆಎಸ್ ಆರ್ ಟಿಸಿ ನೌಕರರು ಭಾಗವಹಿಸದಂತೆ ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ. ದ್ವಿಚಕ್ರವಾಹನ, ಆಟೋ ಸಂಚಾರ ಎಂದಿನಂತೆಯೇ ಇದೆ. ಶಾಲಾ ಕಾಲೇಜುಗಳು ರಜೆ ಘೋಷಿಸಿಲ್ಲ. ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಬಹುತೇಕ ಬ್ಯಾಂಕ್ ವಹಿವಾಟು ಸ್ಥಬ್ದವಾಗಿದೆ. ಬ್ಯಾಂಕುಗಳು ಅರ್ಧ ಬಾಗಿಲು ಮುಚ್ಚಿವೆ. ಗ್ರಾಹಕರು ಕಂಡುಬರುತ್ತಿಲ್ಲ.

ಪ್ರತಿಭಟನೆಯಲ್ಲಿ ಐಎನ್ ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯ, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ 200ಕ್ಕೂ ಹೆಚ್ಚು ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ನೀಡಿವೆ.

ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ಜಾತ್ಯತೀತ ಜನತಾ ದಳ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದೆ.

1.5 ಲಕ್ಷ ರೂ ಮೌಲ್ಯದ ಸರ ಕದ್ದು ಪರಾರಿ

ಪಾವಗಡ: ಪಟ್ಟಣದ ಜಾಮಿಯಾ ಮಸೀದಿ ಬಳಿ ಮಹಿಳೆಯೋರ್ವರ ಚಿನ್ನದ ಮಾಂಗಲ್ಯದ ಸರವನ್ನು ಸೋಮವಾರ ರಾತ್ರಿ ಸರಗಳ್ಳನೋರ್ವ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.

ಪಟ್ಟಣದ ಶಿಲ್ಪ ಎಂಬುವರು ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾಗ ಬಿಳಿಯ ಷರ್ಟ್ ಧರಿಸಿದ್ದ 30 ರಿಂದ 35 ವರ್ಷದ ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸುಮಾರು 50 ಗ್ರಾಂ ತೂಕದ 1.5 ಲಕ್ಷ ರೂಪಾಯಿ ಮೌಲ್ಯದ ಸರ ಕಳುವಾಗಿದೆ ಎಂದು ಶಿಲ್ಪಾ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.  ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ಮೂಡಲಪಾಯ ಯಕ್ಷಗಾನ ಸಮ್ಮೇಳನ

Publicstory. in


ತುಮಕೂರು: ಜ.9ರಂದು ಮೂಡಲಪಾಯ ಯಕ್ಷಗಾನ ಪರಂಪರೆ-ಸಮಾವೇಶ ಕನ್ನಡ ಭವನದಲ್ಲಿ ಜನವರಿ 9ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದ್ದು, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ.

ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಮಂಡ್ಯ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಬಿ. ಜಯಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಧ್ಯಾಹ್ನ 12.30 ಗಂಟೆಗೆ ಮೂಡಲಪಾಯ ಯಕ್ಷಗಾನದ ಪುನರ್ ಚೇತನದ ಸಾಧ್ಯತೆಗಳ ಬಗ್ಗೆ ಹಿರಿಯ ಜಾನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ ಹಾಗೂ ಮೂಡಲಪಾಯ ಯಕ್ಷಗಾನದ ಪ್ರಾದೇಶಿಕತೆಯ ಅನನ್ಯತೆ ಕುರಿತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ನಂತರ ಮಧ್ಯಾಹ್ನ 2.30 ಗಂಟೆಗೆ ಈಡಿಗರ ದಾಸರಹಳ್ಳಿ ಭಾ. ರಮಾನಂದ ತಂಡದವರಿಂದ ಮೂಡಲಪಾಯ ಯಕ್ಷಗಾನ “ಇಂದ್ರಜಿತ್ ಕಾಳಗ” ಪ್ರದರ್ಶನ ನಡೆಯಲಿದೆ.

ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುಸ್ತಕ(ಅರಳಗುಪ್ಪೆ ಕಲ್ಮನೆ ಎ.ಎಸ್. ನಂಜಪ್ಪ ಅವರ “ ಮೂಡಲಪಾಯ ಯಕ್ಷಗಾನ ಭಾಗವತಿಕೆಯ ಪ್ರವೇಶಿಕೆ”) ಬಿಡುಗಡೆ ಮಾಡಲಿದ್ದಾರೆ.

ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಹಿಂದಿನ ಕತೆ ಗೊತ್ತಾ ನಿಮಗೆ ?

1

ಎಸ್. ತಾರಾನಾಥ್ ಭದ್ರಾವತಿ


ಕುಣಿಗಲ್: ನೂರು ಜನ ಒಂದೇ ಹಾದಿಯಲ್ಲಿ ಹೋಗುತ್ತಿದ್ದರೆ ಕಣ್ಣು ಮುಚ್ಚಿಕೊಂಡು ನಾವು ಅತ್ತ ಹೋಗುತ್ತೀವಿ. ಬದಲಿಗೆ ಬೇರೆ ದಾರಿ ತುಳಿಯಬೇಕು. ಆಗ ನಮಗೆ ಹೊಚ್ಚ ಹೊಸ ಅನುಭವ, ಸಾಹಸ, ರೋಮಾಂಚನ ಎಲ್ಲವೂ ಸಿಗುತ್ತವೆ. ಕುರುಡು ಅನುಕರಣೆ ನಮ್ಮನ್ನು ಬೆಳೆಸುವುದಿಲ್ಲ.

ಸುಮಾರು 28 ವರ್ಷಗಳ ಹಿಂದಿನ ಮಾತು. ಮೇ 20, 1991ರಂದು ತುಮಕೂರಿನ ಆಸ್ಪತ್ರೆಯ ಆವರಣದಲ್ಲಿ ಮಮತಾಮೂತರ್ಿರವರ ಹೃದಯ ಮಿಡಿತ ಅಂದು ತುಸು ಹೆಚ್ಚೇ ಇತ್ತು. ಜೊತೆಯಲ್ಲಿ ಅವರ ಸಂಬಂಧಿಕರೆಲ್ಲರಿಗೂ ಆತಂಕ. ಜೊತೆಗೆ ಕುತೂಹಲ.

ಇವರ ಆತಂಕ ಕಂಡು ಇನ್ನೂ ಮೂರ್ನಾಲ್ಕು ಹಿತೈಷಿಗಳ ಸೇರ್ಪಡೆ. ಆದರೆ ಅಕ್ಕ-ಪಕ್ಕದವರಿಗೆ ಯಾತಕ್ಕಾಗಿ ಈ ರೀತಿ ಇವರು ಚಪಡಿಸುತ್ತಿದ್ದಾರೆ ಎಂದು ಅರಿಯುವಷ್ಟರಲ್ಲಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಆಗ ತಾನೆ ಜನಿಸಿದ ಮಗುವಿನ ಅಳುವಿನ ಆರ್ಥನಾದ..! ಮೆಲ್ಲನೆ ಬಾಗಿಲ ಚಿಲಕ ತೆಗೆದ ನರ್ಸ್ ಗೆ ಮೂರ್ತಿಯವರು ಕುತೂಹಲ ತಡೆಯಲಾರದೆ ಏನಾಯ್ತು ಸಿಸ್ಟರ್? ಅಂತ ಕೇಳಿಯೇ ಬಿಟ್ಟರು.

ಹೋ.. ಮಮತಾ ರವರಿಗೆ ಗಂಡು ಮಗು ಜನನವಾಗಿದೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ವಾಡರ್್ಗೆ ಶಿಫ್ಟ್ ಮಾಡುತ್ತೇವೆ ಎನ್ನುತ್ತ ಹೊರಟು ಹೋದರು. ಮೂತರ್ಿರವರ ಕಣ್ಣಲ್ಲಿ ಆನಂದ ಬಾಷ್ಪ ಜೊತೆಗೆ ಮಂದಹಾಸದ ಕಿರುನಗೆ. ಹೌದು..! ಅಂದು ಸಂಗೀತ ಕ್ಷೇತ್ರಕ್ಕೆ ಒಂದು ನಕ್ಷತ್ರ ಜನನವಾಗಿತ್ತು. ಆ ನಕ್ಷತ್ರವೇ ‘ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್’ ನ ಅಮಿತ್ ವಿಟ್ಠಲ್.

ಅಮಿತ್

ಪ್ರಾಮಾಣಿಕತೆ, ಶ್ರಮ, ಶ್ರದ್ಧೆ ಇವೆಲ್ಲವೂ ಇದ್ದರೆ ಯಾರೇ ಆಗಲಿ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಯಶಸ್ಸುಗಳಿಸಬಹುದು ಎನ್ನುವುದಕ್ಕೆ ಅಮೀತ್ ವಿಟ್ಠಲ್ನೇ ಸಾಕ್ಷಿ. ತಾನು ಬಾಲ್ಯದಲ್ಲಿ ಓದಿದ ಕ್ಲಾರೆನ್ಸ್ ಇಂಗ್ಲೀಷ್ ಶಾಲೆಯಲ್ಲಾಗಲಿ, ತುಮಕೂರಿನ ವಾಸವಿ ವಿದ್ಯಾ ಪೀಠ ಶಾಲೆಯಲ್ಲಿ ಪ್ರೌಢಶಾಲೆಯಲ್ಲಾಗಲಿ ಓದಿನಲ್ಲಿ ಸದಾ ಪ್ರಥಮ ಶ್ರೇಣಿಯಲ್ಲಿರುತ್ತಿದ್ದ ಅಮಿತ್ ತನ್ನ ಓದಿನ ಜೊತೆ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳತೊಡಗಿದರು.

ಪ್ರಸ್ತುತ ಎಲೆಕ್ಟ್ರಿಕಲ್ ಡಿಪ್ಲಮೊ ಓದಿರುವ ಅಮೀತ್ ತನ್ನ ಸಂಗೀತ ಪಯಾಣವನ್ನು ಪ್ರಾರಂಭಿಸಿದ್ದು 2000ನೇ ಇಸವಿಯಲ್ಲಿ. ಶ್ರೀಯುತ ಪ್ರಸನ್ನ ಕುಮಾರ್ ಮತ್ತು ಶ್ರೀಮತಿ ವನಜಾಕ್ಷ್ಮಿ ರವರ ಬಳಿ ಸಂಗೀತಭ್ಯಾಸ ಮಾಡಿರುವ ಅಮಿತ್ ಕನರ್ಾಟಿಕ್ ಜ್ಯೂನಿಯರ್ ಮತ್ತು ಸೀನಿಯರ್ ನಲ್ಲಿ ಪಾಸಾಗಿದ್ದಾರೆ.

ಮುಳ್ಳುಗಳು ಒಂದೇ ಗಡಿಯಾರದೊಳಗಿದ್ದರೂ ಪರಸ್ಪರ ಜೊತೆ ಸೇರುವುದು ಆಗೊಮ್ಮೆ-ಈಗೊಮ್ಮೆ. ಅದೂ ಒಂದು ಕ್ಷಣ. ಹಾಗೆಂದು ಅವು ಒಂದಾಗದೆ ಕಾಲ ಸರಿಯುವುದಿಲ್ಲ. ಹಾಗೆಯೇ ಯಾವುದೇ ಒಂದು ಕ್ಷೇತ್ರದಲ್ಲಿ ಏನಾದರೂ ಒಂದು ಸಾಧಿಸಬೇಕೆಂದರೆ ಅದಕ್ಕೆ ಕಲಿಸುವ, ಪ್ರೋತ್ಸಾಯಿಸುವ, ತಪ್ಪಾದರೆ ತಿದ್ದಿ ಸರಿಪಡಿಸುವ ಗುರುಗಳು ಬೇಕೇ ಬೇಕು. ಗುರು ಹಾಗೂ ಶಿಷ್ಯ ಒಂದಾದರೆ ಮಾತ್ರ ಕಲಿಕೆಗೆ ಮಹತ್ವ ಬರುವುದು. ಈ ನಿಟ್ಟಿನಲ್ಲಿ ನಾದಬ್ರಹ್ಮ ಹಂಸಲೇಖರವರ ಬಳಿ ಶಿಷ್ಯನಾಗಿ ಅಮೀತ್ ಸೇರಿಕೊಂಡರು. ಹಂಸಲೇಖರವರು ಸಹ ಅಮೀತ್ಗೆ ಇರುವ ಸಂಗೀತಾಸಕ್ತಿಯನ್ನು ಗುರುತಿಸಿ ಸಂಗೀತ ಶಾಲೆಗೆ ಒಂದು ಸಾಧರಣ ಕಲ್ಲಿನಂತೆ ಸೇರಿಕೊಂಡ ಅಮೀತ್ನಲ್ಲಿ ಒಂದು ಶಿಲ್ಪಕಲೆಯಾಗಿ ರೂಪಿಸಿದರು. ಇಂದು ಅಮೀತ್ ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧಿಸಿದ್ದರೆ ಅದರ ಯಶಸ್ವು ತನ್ನ ಗುರುಗಳಾದ ಪ್ರಸನ್ನ ಕುಮಾರ್, ಶ್ರೀಮತಿ ವನಜಲಕ್ಷ್ಮಿ ಹಾಗೂ ಹಂಸಲೇಖ ಸರ್.

ಪ್ರಯೋಜನಕ್ಕೆ ಬಾರದ ಕಾಗದ ಗಾಳಿಯೊಂದಿಗೆ ಹಾರಿ ಹೋಗುತ್ತದೆ. ಆದರೆ ಹಕ್ಕಿ ಇದೆಯಲ್ಲ… ಅದು ಗಾಳಿಯಲ್ಲಿ ಇರುವಾಗ ರಕ್ಕೆಯನ್ನು ಬಡಿಯಲೇಬೇಕು. ಅದು ತನ್ನ ಗುರಿಯನ್ನು ತಲುಪವವರೆಗೂ ಪ್ರಯತ್ನ ಪಡಲೇಬೇಕು. ಹಾಗಾಗಿ ಅಮಿತ್ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಗೀತದ ನಾನಾ ಪ್ರಕಾರಗಳಾದ ಗಾಯನ, ತಬಲ, ಗಿಟಾರ್, ವೀಣೆ, ಮ್ಯೂಸಿಕ್ ಕೀಬೋರ್ಡ್, ಡ್ರಂ ಇತರೆಗಳೆಲ್ಲವೂ ಕಲಿತಿರಬೇಕು. ಆಗ ಮಾತ್ರ ಪರಿಪೂರ್ಣ ಸಂಗೀತಗಾರನಾಗಲು ಸಾಧ್ಯ. ಹಾಗಾಗಿ ಅಮೀತ್ ಎಲ್ಲಾ ವಿಭಾಗಗಳನ್ನು ಕಲಿತಿದ್ದರೂ ಹೆಚ್ಚು ಒಲವು ಇದ್ದದ್ದು ಮಾತ್ರ ಗಿಟಾರ್ ಕಲಿಯುವುದರಲ್ಲಿ.

ಒಂದು ಹಕ್ಕಿ ತಾನು ಕುಳಿತಿದ್ದ ಮರದಿಂದ ಮತ್ತೊಂದು ಮರಕ್ಕೆ ಹಾರಿ ಹೋಗುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಅದು ಸುಮ್ಮ ಸುಮ್ಮನೆ ಹಾರುವುದಿಲ್ಲ. ಬೇರೊಂದು ಮರಕ್ಕೆ ಹಾರಿದಾಗ ಅದಕ್ಕೆ ಏನಾದರೂ ಸಿಗಲೇಬೇಕು. ಆಗ ಮಾತ್ರ ಅದು ಹಾರಿದ್ದಕ್ಕೆ ಸಾರ್ಥಕ. ಹಾಗೆಯೇ ಅಮೀತ್ ಗಿಟಾರ್ ನುಡಿಸುವುದರಲ್ಲಿ ಹೆಚ್ಚಿನದನ್ನು ಕಲಿತು ಏನಾದರೊಂದು ಸಾಧಿಸಬೇಕೆಂಬ ಹಂಬಲದಿಂದ ಪಕ್ಕದ ಚೆನ್ನೈಗೆ ಪ್ರಯಾಣ ಬೆಳೆಸಿ ಅಲ್ಲಿ ‘ಸ್ವರ್ಣಭೂಮಿ ಅಕಾಡೆಮಿ ಆಫ್ ಮ್ಯೂಸಿಕ್’ ನಲ್ಲಿ ಗಿಟಾರ್, ಕೀ ಬೋರ್ಡ್, ಡ್ರಂ ಮುಂತಾದ ಹಲವು ಪ್ರಕರಗಳಲ್ಲಿ ಸಂಗೀತಭ್ಯಾಸ ಮಾಡಿದರು.

ತಾನು 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ‘ಅರಳು ಮಲ್ಲಿಗೆ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಅಮೀತ್ ವಿಟ್ಠಲ್ ಇದುವರೆಗೂ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಜನಮನ್ನಣೆ ಗಳಿಸಿದ್ದಾರೆ. ಜೊತೆಗೆ ಅನೇಕ ಆಕರ್ೆಸ್ಟ್ರಾಗಳಲ್ಲಿ ತನ್ನ ಗಾಯನದ ಜೊತೆ ಹಿನ್ನಲೆ ಸಂಗೀತವನ್ನು ನುಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

ಆಲೋಚನೆಗಳು ಎಲ್ಲಿಂದಲೋ ಹುಟ್ಟುವುದಿಲ್ಲ. ಅದರ ಸೃಷ್ಟಿಕರ್ತರು ನಾವೇ ಆಗಿರುತ್ತೇವೆ. ಈ ನಿಟ್ಟಿನಲ್ಲಿ ಅಮೀತ್ ವಿಟ್ಠಲ್ ಈಗ ತುಮಕೂರಿನಲ್ಲಿ ತಾವೇ ಸ್ವತ: ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯಲ್ಲಿ ಪ್ರಸ್ತುತ 120 ಕ್ಕಿಂತ ಹೆಚ್ಚು ಸಂಗೀತಾಸಕ್ತ ಮಕ್ಕಳಿಗೆ ಗಿಟಾರ್, ಕೀ ಬೋರ್ಡ್ ಮತ್ತು ಡ್ರಂ ಗಳ ಬಗ್ಗೆ ತರಬೇತಿಯನ್ನು ಕೊಡುತ್ತಿದ್ದಾರೆ.



ಸಂಗೀತ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಿಕೊಡಬೇಕು, ಸಂಗೀತವೇ ನನ್ನ ದೇವರು, ಉಸಿರು ಎಂಬ ಅಭಿಲಾಶೆ ಹೊಂದಿರುವ ತುಮಕೂರಿನ ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಸಂಸ್ಥಾಪಕ, ಉತ್ಸಾಹಿ ಯುವಕ ಅಮಿತ್ ವಿಟ್ಠಲ್ ಮತ್ತಷ್ಟು ಎತ್ತರಕ್ಕೆ ಬೆಳೆದ ಸಾಧನೆ ಮಾಡಲಿ. ಸಂಗೀತ ಕಲಿಯಲು ಇಚ್ಛಿಸುವವರು, ಶುಭಹಾರೈಸುವವರು ಅಮಿತ್ ವಿಟ್ಠಲ್ ಅವರನ್ನು 9916156616 ನಲ್ಲಿ ಸಂಪರ್ಕಿಸಬಹುದು.

ಈ ದೇವಸ್ಥಾನವೀಗ ಬರೀ ದೈವ ಕೇಂದ್ರವಾಗಿಲ್ಲ, ಜೊತೆಗೆ ಶಿಕ್ಷಣ ಕೇಂದ್ರವೂ ಹೌದು.

0

ಲಕ್ಷ್ಮೀಕಾಂತರಾಜು ಎಂಜಿ


ಚೇಳೂರು: ಅದೊಂದು ಸುಂದರ‌ ಗುಡ್ಡ ಇರುವ ಪ್ರದೇಶ. ಗುಡ್ಡವೇರಿ ವೀಕ್ಷೀಸಿದರೆ ಎಳೆಂಟು ಕಿಮೀ ವ್ಯಾಸದ ಪ್ರಕೃತಿ ಕಣ್ಮನ ಸೆಳೆಯುತ್ತದೆ. ಇಂಥಹ ಸುಂದರ ತಾಣದಲ್ಲಿ ಶ್ರೀರಂಗನಾಥ ಸ್ವಾಮಿ ನೆಲೆಸಿ ಗುಡ್ಡದ ಶ್ರೀ ರಂಗನಾಥಸ್ವಾಮಿಯು ಅನಾದಿ‌ ಕಾಲದಿಂದಲೂ ಇಲ್ಲಿ ನೆಲೆಸಿದ್ದಾನೆ.

ಹೌದು. ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿಯ ಹೂವಿನಕಟ್ಟೆಯಲ್ಲಿರುವ ಗುಡ್ಡದ ಮೇಲೆ ಶ್ರೀ ಗುಡ್ಡದ ರಂಗನಾಥಸ್ವಾಮಿ ನೆಲೆಸಿ ಅಪಾರ ಸಂಖ್ಯೆಯ ಭಕ್ತ ಸಮೂಹವೊಂದಿ ಈ ಭಾಗದ ಪ್ರಮುಖ ದೈವ ಕೇಂದ್ರವಾಗಿದೆ.

ದೂರದಿಂದ ಕಾಣುವ ಶಾಲಾ ಸಮುಚ್ಛಯ

ಈ ದೇವಸ್ಥಾನಕ್ಕೆ ಸ್ಥಳೀಯ ಭಕ್ತರನ್ನ ಹೊರತು ಪಡಿಸಿಯೂ ದೂರದ ಬೆಂಗಳೂರು ಸೇರಿದಂತೆ ಎಲ್ಲ ಕಡೆಯೂ ಭಕ್ತ ವರ್ಗವಿದ್ದು ಪ್ರತಿ ಶನಿವಾರ ಇಲ್ಲಿ‌ ಪ್ರಮುಖ ಪೂಜೆಯಿದ್ದು ಸಾಕಷ್ಟು ಸಂಖ್ಯೆಯಲ್ಲಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ

ಭಕ್ತರು ತಮ್ಮ ಬೇಡಿಕೆಗಳನ್ನ ಈಡೇರಿಸಿದ ಮೇಲೆ ಈ ಗುಡ್ಡದ ರಂಗನಾಥಸ್ವಾಮಿಯವರಿಗೆ ಹರಿಕೆ ರೂಪದಲ್ಲಿ ಕಾಣಿಕೆ ಹಾಗೂ ಇಲ್ಲಿ ಬಂದು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ.

ಈ‌ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲಾಖೆ ಹಾಗೂ ಭಕ್ತರ ನೆರವಿನಿಂದ ದೇವಸ್ಥಾನವು ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿಯಾಗಿದೆ

ರಂಗನಾಥಸ್ವಾಮಿಯ ಕೇಂದ್ರವೀಗ ಶಿಕ್ಷಣ ಕೇಂದ್ರವೂ ಹೌದು

ನೋಡಲು ಚೆಂದ ಈ ಕ್ಯಾಪಸ್


ಸುಂದರ ಬೆಟ್ಟದಲ್ಲಿ‌ ಗುಡ್ಡದ ರಂಗನಾಥಸ್ವಾಮಿ ನೆಲೆಸಿರುವ ಜೊತೆಗೆ ಇಲ್ಲಿ ಈಗ ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಬೆಟ್ಟದ ತಪ್ಪಲಿನಲ್ಲಿ ಮೊರಾರ್ಜಿ‌‌‌ದೇಸಾಯಿ ವಸತಿ ಶಾಲೆಯು ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾಗಿ ಈ ಶಾಲೆಯಲ್ಲಿ‌ ಸ್ಥಳೀಯ ಹಾಗೂ ಹೊರಗಿನ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ‌ ಮಾಡುತ್ತಿರುವದರಿಂದ ಇದೊಂದು ಕ್ಯಾಪಂಸ್ ಮಾದರಿಯಾಗಿ ಮಾರ್ಪಟ್ಟಿದೆ.

ಇದೇ ಬೆಟ್ಟದ ಮತ್ತೊಂದು ಭಾಗದ ತಪ್ಪಲಿನಲ್ಲಿ‌ ಕಿತ್ತೂರು ಚೆನ್ನಮ್ಮ‌ವಸತಿ ಶಾಲೆಯು ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ.‌ಕಟ್ಟಡದ ಕಾಮಗಾರಿ‌ ಅಂತಿಮ ಹಂತಕ್ಕೆ ಬಂದಿದ್ದು ಬಹುಶಃ ಮುಂದಿನ ಶೈಕ್ಷಣಿಕ‌ ವರ್ಷದಿಂದ ಆರಂಭವಾಗುವ ಲಕ್ಷಣಗಳಿವೆ.

ಗುಬ್ಬಿ ತಾಲ್ಲೂಕಿನ ಒಂದೇ ಗ್ರಾಮಕ್ಕೆ ಎರೆಡು ವಸತಿ ಶಾಲೆಗಳು ಮಂಜೂರಾಗಿ ಗುಡ್ಡದ ರಂಗನಾಥಸ್ವಾಮಿ‌‌ ನೆಲೆಸಿದ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿದ್ದು ಈ ದೇವಸ್ಥಾನವೀಗ ಕೇವಲ‌ ಧಾರ್ಮಿಕ ಕೇಂದ್ರವಾಗಿರದೇ ಶೈಕ್ಷಣಿಕ ಕೇಂದ್ರವಾಗಿ‌ ಮಾರ್ಪಟ್ಟಿರುವುದು ವಿಶೇಷವಾಗಿದೆ.


ನಮ್ಮೂರಿನ‌ ರಂಗನಾಥ ಸ್ವಾಮಿ ಗುಡ್ಡದ ಮೇಲೆ ಉದ್ಬವವಾಗಿರುವುದಕ್ಕೆ ಅನೇಕ ದಂತ ಕತೆಗಳಿವೆ. ಅಪಾರ ಮಹಿಮೆ ಹೊಂದಿರುವ ರಂಗನಾಥಸ್ವಾಮಿಯು ಸಕಲ ಭಕ್ತರ ಹಿತ ಕಾಯುತ್ತಾನೆ. ಇದರ ನಡುವೆ ಇದೇ ಕೇಂದ್ರದಲ್ಲಿ ವಸತಿ‌ ಶಾಲೆಗಳು ಆರಂಭವಾಗಿ ಇದೊಂದು ಶೈಕ್ಷಣಿಕ‌ ಕೇಂದ್ರವೂ ಆಗಿದೆ

ಗರಿಕಡ್ಡಿ ಶಿವಣ್ಣ
ಮಾಜಿ ತಾಪಂ ಅಧ್ಯಕ್ಷರು. ಹೂವಿನಕಟ್ಟೆ


ಹೂವಿನಕಟ್ಟೆ ಎಂದರೀಗ…

ನಮ್ಮೂರಿನಲ್ಲಿ ಎರಡು ವಸತಿ‌ ಶಾಲೆಗಳಿದ್ದು ಅಲ್ಲಿ ಹೊರ ತಾಲ್ಲೂಕು ಹಾಗೂ ಜಿಲ್ಲೆಗಳ ವಿದ್ಯಾರ್ಥಿಗಳು ಬಂದು ಇಲ್ಲಿ ಅಧ್ಯಯನ ಮಾಡುತ್ತಿರುವುದರಿಂದ ನಮ್ಮ‌ಹೂವಿನಕಟ್ಟೆಯು ಇಂದು ಶಾಲೆಗಳಿಂದ ಗುರುತಿಸಿಕೊಳ್ಳುವಂತಾಗಿದೆ.

ರಂಗನಾಥ್,ವಿಎಸ್ ಎಸ್ ಎನ್ ಕಾರ್ಯದರ್ಶಿ. ಹೂವಿನಕಟ್ಟೆ.

ಫೆಬ್ರವರಿ 8ರಂದು ದೆಹಲಿ ಚುನಾವಣೆ

Publicstory. in


ತುಮಕೂರು: ಫೆಬ್ರವರಿ 8ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

[ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗಾಗಿ ದೆಹಲಿಯಾದ್ಯಂತ 13 ಸಾವಿರ ಮತಕೇಂದ್ರಗಳನ್ನು ತೆರೆಯಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 1,46,92,132 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.

ಜನವರಿ 21ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಆಯೋಗ ತಿಳಿಸಿದೆ.

ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೆಹಲಿಯ ಅಮ್ ಆದ್ಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಕೇವಲ ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅಭಿವೃದ್ಧಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದಾರೆ.

ಆಮ್ ಆದ್ಮಿ ಪಕ್ಷದ ಸರ್ಕಾರ ದೆಹಲಿಯಲ್ಲಿ ಉತ್ತಮ ಆರೋಗ್ಯ,ವ್ಯವಸ್ಥೆ ಕಲ್ಪಿಸಿದೆ. ಶಿಕ್ಷಣ ಬಡವರಿಗೂ ಸಿಗುವಂತೆ ಮಾಡಿದೆ. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದೆ. ಜನರ ಸಮಸ್ಯೆಗಳಿಗೆ ದೆಹಲಿ ಸರ್ಕಾರ ಸ್ಪಂದಿಸಿದೆ ಎಂದು ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡಿದರು.

ಜೆಎನ್ ಯು ವಿದ್ಯಾರ್ಥಿಗಳ ಮೇಲೆ ದಾಳಿ – ವ್ಯಾಪಕ ಖಂಡನೆ


ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ನುಗ್ಗಿದ ಮುಸುಕುಧಾರಿಗಳ ಗುಂಪು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಮುಸುಕುಧಾರಿಗಳು ನುಗ್ಗಲು ಹೇಗೆ ಸಾಧ್ಯವಾಯಿತು. ಮುಸುಕುಧಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಪಿಠೋಪರಣಗಳನ್ನು ಧ್ವಂಸಗೊಳಿಸುತ್ತಿದ್ದರೂ ಪೊಲೀಸರು ಮೌನ ವಹಿಸಿದ್ದು ಏಕೆ ಎಂದು ಹಲವು ಮುಖಂಡರು ಪ್ರಶ್ನಿಸಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಘಟನೆಯನ್ನು ಖಂಡಿಸಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದೇ ವೇಳೆ ಜೆಎನ್ ಯು ಟೀಚರ್ಸ್ ಅಸೋಸಿಯೇಷನ್ ಶಾಂತಿಯುತ ಪ್ರತಿಭಟನೆ ನಡೆಸಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಗೂಂಡಾಗಳು ದಾಳಿ ನಡೆಸಿದ್ದು, ಇದರಲ್ಲಿ ಎಬಿವಿಪಿ ಭಾಗಿಯಾಗಿದೆ. ಈ ಹಿನ್ನೆಲೆಯಲ್ಲಿ ಕುಲಪತಿ ಜಗದೀಶ್ ಕುಮಾರ್ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ತುಮಕೂರು ನ್ಯಾಯಾಲಯಕ್ಕೆ ಗದ್ದರ್ ಹಾಜರು

ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ನಡೆದಿದ್ದ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಕವಿ, ಪ್ರಕರಣದಲ್ಲಿ ಆರೋಪಿಯಾಗಿರುವ ಗದ್ದರ್ ಸೋಮವಾರ ತುಮಕೂರು ನ್ಯಾಯಾಲಯಕ್ಕೆ ಹಾಜರಾದರು.

ಪ್ರಕರಣಲ್ಲಿ ಆರೋಪಿಗಳಾಗಿದ್ದ 19 ಮಂದಿಯನ್ನು ತುಮಕೂರು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಆದರೆ ಪ್ರಕರಣದಲ್ಲಿ ಪಿತೂರಿದಾರರು ಎಂದು ಹೆಸರಿಸಿದ್ದ ಗದ್ದರ್,‌ವರವರ ರಾವ್ ಅವರು ತಲೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಹೈಕೋರ್ಟ್ ನಿರ್ದೇಶನದಂತೆ ಪ್ರಕರಣ ಮರು‌ವಿಚಾರಣೆ ಇವರಿಬ್ಬರ ಮೇಲೆ ನಡೆಯುತ್ತಿದೆ.‌ಈಚೆಗಷ್ಟೇ ಗದ್ದರ್ ಪಾವಗಡದ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ತುಮಕೂರು‌‌ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾದೀಶರ ಮುಂದೆ ಹಾಜರಾಗಿ ಜಾಮೀನು ಪಡೆದರು.

ಗದ್ದರನ್ನು ಅವರನ್ನು ನೋಡಲು ವಕೀಲರು, ಕಕ್ಷಿದಾರರು, ಮಾಧ್ಯಮದವರು ನ್ಯಾಯಾಲಯದ ಆವರಣದಲ್ಲಿ ಕಿಕ್ಕಿರಿದು ಸೇರಿದ್ದರು.

0

ಏಕಾದಶಿ ಆಚರಣೆಗೆ ಕಾರಣವೆನೆಂಬ ಪುರಾಣ ಕಥೆ ಇದು ಓದಿ ತಿಳಿದುಕೊಳ್ಳಿ…

ಮುರ ರಾಕ್ಷಸ:
“ಮುರ” ಹೆಸರಿನ ರಾಕ್ಷಸನು ಧೇವತೆಗಳಿಗೆ ತೊಂದರೆ ಕೊಡುತ್ತಿರುತ್ತಾನೆ.

ಆಗ ದೇವತೆಗಳು ವಿಷ್ಣುವಿಗೆ ಮುರ ರಾಕ್ಷಸನು ಕೊಡುತ್ತಿರುವ
ತೊಂದರೆಯನ್ನು ತಿಳಿಸಿ ವಿಷ್ಣುವಿನ ಸಹಾಯವನ್ನು ಬೇಡುತ್ತಾರೆ.

ಆಗ
ಶ್ರೀ ವಿಷ್ಣು ದೇವತೆಗಳಿಗೆ ನೀವೆಲ್ಲರು ಒಟ್ಟಾಗಿ ರಾಕ್ಷಸನ ಸಂಗಡ ಯುಧ್ಧ
ಮಾಡಿ, ನಾನು ನಿಮಗೆ ಸಹಾಯ ಮಾಡುತ್ತೇನೆ ಏಂದು ಹೇಳುತ್ತಾರೆ.

ಆಗ
ದೇವತೆಗಳು ಒಟ್ಟಾಗಿ ವಿಷ್ಣುವಿನ ಸಹಾಯದೊಂದಿಗೆ ಮುರ ನೊಡನೆ
ಯುಧ್ಧ ಮಾಡುತ್ತಾರೆ. ಆದರೆ ಮುರನು ದೇವತೆಗಳನ್ನು ಸೋಲಿಸಿ
ವಿಷ್ಣುವಿನೊಡನೆ ಒಂದು ಸಾವಿರ ವರ್ಷ ಘೋರ ಯುಧ್ಧ ಮಾಡುತ್ತಾನೆ.

ಈ ಘೋರ ಯುಧ್ಧದ ಪರಿಣಾಮವಾಗಿ ವಿಷ್ಣುವಿಗೆ ಆಯಾಸ
ವಾಗುತ್ತದೆ.

ಆಗ ಶ್ರೀ ವಿಷ್ಣು ವಿಶ್ರಾಂತಿಗಾಗಿ ಹಿಮಾಲಯ
ಪರ್ವತದ ಬದರಿಕಾಶ್ರಮದಲ್ಲಿರುವ ಹಿಮವತಿ ಹೆಸರಿನ ಒಂದು
ಗುಹೆಯಲ್ಲಿ ಮಲಗುತ್ತಾರೆ. ಇದನ್ನು ತಿಳಿದ ಮುರನು ಅಲ್ಲಿಗೆ ಬಂದು
ವಿಷ್ಣು ಮಲಗಿರುವದನ್ನು ನೋಡಿ ವಿಷ್ಣುವನ್ನು ಕೊಲ್ಲಲು ಇದೇ
ಸರಿಯಾದ ಸಮಯವೆoದು ಯೋಚನೆ ಮಡುತ್ತಾನೆ.

ಆಗ ಶ್ರೀ
ವಿಷ್ಣುವಿನ ದೇಹದಿಂದ ಒಂದು ಹೆಣ್ಣು ಶಕ್ತಿ ಹೊರ ಬರುತ್ತದೆ. ಆ ಹೆಣ್ಣು ರೂಪ ಮುರ ನೊಡನೆ
ಯುದ್ದಮಾಡಿ ಮುರನನ್ನು ಸೋಲಿಸುತ್ತದೆ.

ಶ್ರೀ ವಿಷ್ಣು ನಿದ್ದೆ ಇಂದ ಎದ್ದು ಎದುರಿಗೆ ನಿಂತಿರುವ ಹೆಣ್ಣು ರೂಪ ಮುರನನ್ನು ಕೊಂದಿರುವುದನ್ನ ನೋಡಿ ಸಂತೋಷದಿಂದ, ನೀನು ಬಹಳ ಉತ್ತಮವಾದ ಕೆಲಸವನ್ನು ಮಾಡಿರುವೆ ,ನನಗೆ ಬಹಳ ಸಂತೋಷ ವಾಗಿದೆ. ನೀನು ಒಂದು ವರವನ್ನು ಕೇಳು ಏನ್ನುತ್ತಾರೆ.

ಆಗ ಆ ಹೆಣ್ಣು ಈ ದಿನ ಯಾರು
ಉಪವಾಸ ಮಾಡುತ್ತಾರೊ ಅವರ ಪಾಪಗಳನ್ನು ಮನ್ನಿಸಿ ಅವರಿಗೆ
ಸದ್ಗತಿಯನ್ನು ಕರುಣಿಸ ಬೇಕೆಂದು ಬೇಡುತ್ತಾಳೆ.

ಆಗ ಶ್ರೀ
ವಿಷ್ಣು ಸಂತೋಷದಿಂದ ಈ ರೀತಿ ಹೇಳುತ್ತಾರೆ. ನೀನು
ಅವಿರ್ಭವಿಸುರುವುದು ಈ ಪಕ್ಷದ ಹನ್ನೊಂದನೇ ದಿನ. ಆದ್ದರಿಂದ
ನಿನಗೆ ‘ಏಕಾದಶ್ಯಂ’ ಎಂದು ಹೆಸರು ಇಡುತ್ತೇನೆ.

ಇನ್ನು ಮುಂದೆ ಯಾರು
ಪಕ್ಷದ ಹನ್ನೊಂದನೇ ದಿವಸ ಉಪವಾಸ ಮಾಡುತ್ತಾರೊ ಅವರ
ಪಾಪಗಳನ್ನು ಮನ್ನಿಸಿ ಸದ್ಗತಿ ಯನ್ನು ಕರುಣಿಸುತ್ತೇನೆ ಎಂದು
ಹೇಳುತ್ತಾರೆ.

ಅಂದಿನಿಂದ ಏಕಾದಶಿಯ ದಿನ ಉಪವಾಸದ ಆಚರಣೆ
ಪ್ರಾರಂಭ ವಾಯಿತು.”

ಸುದಿನಮಸ್ತು ಧನ್ಯವಾದಗಳು

ವೈಕುಂಠ ಧ್ವಾರ ಪ್ರವೇಶ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಹುತೇಕ ವಿಷ್ಣು ದೇಗುಲಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಾಧಿಗಳನ್ನು ಏರ್ಪಡಿಸಲಾಗಿತ್ತು.

ಪಟ್ಟಣದ ಸಂತಾನ ವೆಣುಗೋಪಾಲಸ್ವಾಮಿ ದೇಗುಲವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಅಭಿಷೇಕಾದಿ ಪೂಜೆ ನಂತರ ವೈಕುಂಠ ಧ್ವಾರದಲ್ಲಿ ಉತ್ಸವ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಕೃಷ್ಣಾಪುರದ ವೆಂಕಟೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಭಕ್ತಾದಿಗಳಿಗೆ ವೈಕುಂಠ ಧ್ವಾರದ ಮೂಲಕ ಹಾದು ಹೋಗಲು ಅನುವು ಮಾಡಿಕೊಡಲಾಯಿತು. ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ  ಭಕ್ತಾದಿಗಳಿಗೆ ಲಾಡು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪದಾಧಿಕಾರಿಗಳಾದ ಎಂ.ಎಸ್.ವಿಶ್ವನಾಥ್, ಪಿ.ಎಸ್.ಅನಿಲ್ ಕುಮಾರ್ ಇತರರು ಪೂಜೆಯ ಸಂಪೂರ್ಣ ಜವಬ್ಧಾರಿ ನೋಡಿಕೊಂಡರು.

ಪಾವಗಡ ಸಂತಾನ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವೈಂಕುಂಠ ಧ್ವಾರ ಏರ್ಪಡಿಸಲಾಗಿತ್ತು.

ಕಿರು ತಿರುಪತಿ ಎಂದು  ಜನಪ್ರಿಯತೆ ಗಳಿಸಿರುವ  ಕೃಷ್ಣಾಪುರದ ಪರಿವಾರ ರಾಮ ದೇವರು, ಲಕ್ಷ್ಮಿ, ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತಾದಿಗಳು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದರು.  ವೈಕುಂಠ ಧ್ವಾರದಿಂದ ಹಾದು ಬರಲು ಭಕ್ತ ಸಾಗರವೇ ನೆರೆದಿತ್ತು.

ಪಾವಗಡ ಸಂತಾಣ ವೇಣುಗೋಪಾಲಸ್ವಾಮಿ ಮೂಲ ವಿಗ್ರಹ.

ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಗೆ ವಿಧಿ ಪುರಸ್ಸರವಾಗಿ ದೇಗುಲದ ಪ್ರಾಂಗಣದಲ್ಲಿ ಕಲ್ಯಾಣೋತ್ಸವ ನಡೆಸಲಾಯಿತು. ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ ಭಕ್ತರು ಯಾವಶಕ್ತಿಯಂತೆ ವಧೂ, ವರರಿಗೆ ಕೊಡುಗೆಗಳನ್ನು ಕೊಟ್ಟರು.

ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಭಕ್ತಾದಿಗಳಿಗೆ ಲಾಡು ಪ್ರಸಾದ ವಿತರಣೆ.

ಪಟ್ಟಣದ ಭಜಂತ್ರಿ ಬೀದಿಯ ವೆಂಕಟೇಶ್ವರ ದೇಗುಲದಲ್ಲಿಯೂ ವೈಕುಂಠ ಏಕಾದಶಿ ಆಚರಣೆ ನಡೆಸಲಾಯಿತು.