ಜಸ್ಟ್ ನ್ಯೂಸ್

ವೈಕುಂಠ ಧ್ವಾರ ಪ್ರವೇಶ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಹುತೇಕ ವಿಷ್ಣು ದೇಗುಲಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಾಧಿಗಳನ್ನು ಏರ್ಪಡಿಸಲಾಗಿತ್ತು.

ಪಟ್ಟಣದ ಸಂತಾನ ವೆಣುಗೋಪಾಲಸ್ವಾಮಿ ದೇಗುಲವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಅಭಿಷೇಕಾದಿ ಪೂಜೆ ನಂತರ ವೈಕುಂಠ ಧ್ವಾರದಲ್ಲಿ ಉತ್ಸವ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಕೃಷ್ಣಾಪುರದ ವೆಂಕಟೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಭಕ್ತಾದಿಗಳಿಗೆ ವೈಕುಂಠ ಧ್ವಾರದ ಮೂಲಕ ಹಾದು ಹೋಗಲು ಅನುವು ಮಾಡಿಕೊಡಲಾಯಿತು. ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ  ಭಕ್ತಾದಿಗಳಿಗೆ ಲಾಡು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪದಾಧಿಕಾರಿಗಳಾದ ಎಂ.ಎಸ್.ವಿಶ್ವನಾಥ್, ಪಿ.ಎಸ್.ಅನಿಲ್ ಕುಮಾರ್ ಇತರರು ಪೂಜೆಯ ಸಂಪೂರ್ಣ ಜವಬ್ಧಾರಿ ನೋಡಿಕೊಂಡರು.

ಪಾವಗಡ ಸಂತಾನ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವೈಂಕುಂಠ ಧ್ವಾರ ಏರ್ಪಡಿಸಲಾಗಿತ್ತು.

ಕಿರು ತಿರುಪತಿ ಎಂದು  ಜನಪ್ರಿಯತೆ ಗಳಿಸಿರುವ  ಕೃಷ್ಣಾಪುರದ ಪರಿವಾರ ರಾಮ ದೇವರು, ಲಕ್ಷ್ಮಿ, ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತಾದಿಗಳು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದರು.  ವೈಕುಂಠ ಧ್ವಾರದಿಂದ ಹಾದು ಬರಲು ಭಕ್ತ ಸಾಗರವೇ ನೆರೆದಿತ್ತು.

ಪಾವಗಡ ಸಂತಾಣ ವೇಣುಗೋಪಾಲಸ್ವಾಮಿ ಮೂಲ ವಿಗ್ರಹ.

ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಗೆ ವಿಧಿ ಪುರಸ್ಸರವಾಗಿ ದೇಗುಲದ ಪ್ರಾಂಗಣದಲ್ಲಿ ಕಲ್ಯಾಣೋತ್ಸವ ನಡೆಸಲಾಯಿತು. ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ ಭಕ್ತರು ಯಾವಶಕ್ತಿಯಂತೆ ವಧೂ, ವರರಿಗೆ ಕೊಡುಗೆಗಳನ್ನು ಕೊಟ್ಟರು.

ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಭಕ್ತಾದಿಗಳಿಗೆ ಲಾಡು ಪ್ರಸಾದ ವಿತರಣೆ.

ಪಟ್ಟಣದ ಭಜಂತ್ರಿ ಬೀದಿಯ ವೆಂಕಟೇಶ್ವರ ದೇಗುಲದಲ್ಲಿಯೂ ವೈಕುಂಠ ಏಕಾದಶಿ ಆಚರಣೆ ನಡೆಸಲಾಯಿತು.

Comment here