ಮೈಸೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ, ಎಂಎಸ್.ಡಬ್ಲ್ಯೂ ಸೋಸಿಯಲೈಟ್ಸ್ ಹಾಗೂ ಸಮಾಜ ಕಾರ್ಯ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಸಭಾಂಗಣ ದಲ್ಲಿ ಅಕ್ಟೋಬರ್ 31ರಂದು ಬೆಳಗ್ಗೆ 10 ರಿಂದ 11ಗಂಟೆಯವರೆಗೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದೆ.
ನವದೆಹಲಿಯ ಭಾರತೀ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿಟ್ಕರ್ ವಿಚಾರಸಂಕಿರಣ ಉದ್ಘಾಟಿಸಿ ಮುಖ್ಯಭಾಷಣ ಮಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಕೆ.ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಸಿದ್ದೇಗೌಡ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಚಂದ್ರಮೌಳಿ ಭಾಗವಹಿಸುವರು. ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ದೇಗೌಡ ಅವರನ್ನು ಇದೇ ವೇಳೆ ಸನ್ಮಾನಿಸುವರು.
ಕುಲಪತಿಗಳಾಗಿರುವ ಸಿದ್ಧೇಗೌಡರ ಅಭಿನಂದನವು ಅ.31ರಂದು ಬೆಳಗ್ಗೆ 7 ಗಂಟೆಗೆ ಗಂಗೋತ್ರಿ ಆವರಣದಲ್ಲಿ 37 ಸಸಿಗಳನ್ನು ನಡೆಸಲಾಗುವುದು, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಭಾಷ್ಯಂ ಸ್ವಾಮೀ ಸಾನಿಧ್ಯ ವಹಿಸುವರು, . ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ಕನ್ನಡ ಹೋರಾಟಗಾರ ಪ.ಮಲ್ಲೇಶ್, ಡಾ.ಬಿಷ್ಣು ಮೋಹನ್ ದಾಸ್ ಇನ್ನಿತರರು ಹಾಜರಿರಲಿದ್ದಾರೆ.
ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಿರ್ಮಲನಾಥ ಸ್ವಾಮೀಜಿ, ಸಚಿವರಾದ ಡಾ.ಸಿ.ಅಶ್ವಥ್ ನಾರಾಯಣ ಹಾಗೂ ಇತರರು ಇರಲಿದ್ದಾರೆ. ಡಾ.ವೈ.ಎಸ್.ಎಸ್. ಕುರಿತ ಅಭಿನಂದನಾ ಗ್ರಂಥ ‘ಸವ್ಯಸಾಚಿ’ ಬಿಡುಗಡೆಗೊಳಿಸಲಾಗುವುದು..









ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲಕ್ಕೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಡ್ಯಾಂನ ಕೋಡಿ ಭಾಗದಲ್ಲಿರುವ ಸೈಫನ್ ಸ್ಥಳದಲ್ಲಿ 80 ಅಡಿ ಜಾಕ್ ವೆಲ್ ನಿರ್ಮಿಸಿ ಪಂಪ್ ಮಾಡುವ ಕಾಮಗಾರಿಗೆ ನಮ್ಮ ವಿರೋಧವಿದೆ. 80 ಅಡಿ ಆಳದಲ್ಲಿ ಜಾಕ್ ವೆಲ್ ನಿರ್ಮಿಸಿದರೆ ಡ್ಯಾಂಗೆ ಧಕ್ಕೆಯಾಗಲಿದೆ.ಇದರ ಜೊತೆಗೆ ರಾಷ್ಟ್ರೀಯ ಹಸಿರು ಪೀಠದ ಆದೇಶವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಡ್ಯಾಂ ಹಿನ್ನೀರಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿ ಡ್ಯಾಂ ಒಳಗೆ ಕಾಮಗಾರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅನಂದ್ ಪಟೇಲ್ ಕಿಡಿ ಕಾರಿದ್ದಾರೆ.
ಮಾರ್ಕೋನಹಳ್ಳಿ ಜಲಾಶಯವನ್ನು ನೀರಾವರಿ ಉಪಯೋಗಕ್ಕೆಂದೇ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಯಾವುದೇ ನದಿಗಳ ಸಂಪರ್ಕವೂ ಇಲ್ಲ. ಯಾವುದೇ ಅಲೋಕೇಶನ್ ಕೂಡ ಇಲ್ಲ. ಕುಣಿಗಲ್ ನ ಅಮೃತೂರು, ಎಡೆಯೂರು ಮತ್ತು ಹುಲಿಯೂರುದುರ್ಗ ಮತ್ತು ನಾಗಮಂಗಲದ ಕೆಲವು ಭಾಗಗಳಲ್ಲಿ ಕೈಗೊಂಡಿರುವ ನೀರಾವರಿಗೆ ಈ ಡ್ಯಾಂನಿಂದ ನೀರುಣಿಸಲಾಗುತ್ತಿತ್ತು. ಹೀಗಾಗಿ ಈಗಿನ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ತೊಂದರೆಯಾಗಲಿದೆ ಎಂದರು.ನಾಗಮಂಗಲಕ್ಕೆ ಶ್ರವಣಬೆಳಗೊಳ ಬ್ಯಾಂಕ್ ಕೆನಾಲ್, ನಾಗಮಂಗಲ ಬ್ಯಾಂಕ್ ಕೆನಾಲ್ ನಿಂದ ನೀರು ಪಡೆಯಲಾಗುತ್ತಿದೆ. ಹೇಮಾವತಿಯಿಂದಲೂ ಮತ್ತಷ್ಟು ನೀರು ಪಡೆಯಲು ಅವಕಾಶವಿದೆ. ಆದರೆ ಮಾರ್ಕೋನಹಳ್ಳಿ ಡ್ಯಾನಿಂದ ಅವೈಜ್ಞಾನಿಕ ಕಾಮಗಾರಿ ಮೂಲಕ ನೀರು ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಹೇಳಿದರು.

