Friday, March 13, 2026
Google search engine
Home Blog Page 47

JDS ಕಾರ್ಯಾಧ್ಯಕ್ಷರಾಗಿ‌ ವಕೀಲ ನವೀನ್ ನೇಮಕ

ತುಮಕೂರು; ತುಮಕೂರು ನಗರದ JDS ಕಾನೂನು ಘಟಕದ ಕಾರ್ಯಾಧ್ಯಕ್ಷರಾಗಿ ವಕೀಲರಾದ ಎಂ.ಬಿ.ನವೀನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ವಕೀಲರಾದ ನವೀನ್ ಕುಮಾರ್ ಅವರು ತುಮಕೂರಿನ ನೆಲಮನೆ ವಂಶಸ್ಥದವರು. ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು.

ಚತುರ ವಾಗ್ಮಿ ಹಾಗೂ ಸಂಘಟಕರಾದ ಅವರ ನೇಮಕ ಜೆಡಿಎಸ್ ನಲ್ಲಿ ಯುವಕರ ನಡುವೆ ಹೊಸ ಹುರುಪು ಮೂಡಿಸಿದೆ.

ರಾಜಕೀಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಅವರ ನೇಮಕ ನಡೆದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜೆಡಿಎಸ್ ನಗರದಲ್ಲಿ ಗಟ್ಟಿಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರ ಅಭಿಮಾನಿಗಳ ಪಡೆಯೇ ಇದೆ.‌ ಇದು ಜೆಡಿಎಸ್ ಗೆಲುವಿಗೆ ಕಾರಣವಾಗಲಿದೆ. ನನ್ನ ನೇಮಕಕ್ಕೆ ಕಾರಣರಾದ ಎಚ್.ಡಿ.ಕುಮಾರಸ್ವಾಮಿ, ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ಎ.ಪಿ.ರಂಗನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

50 ಸಾವಿರ ಅಂತರದಲ್ಲಿ ಗೆಲುವು: ಸುರೇಶಗೌಡ

0

ತುಮಕೂರು. : ತುಮಕೂರು ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗಾಗಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ.ಹಾಗಾಗಿ ಈ ಬಾರಿ ಬಿಜೆಪಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಮಾಜಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸುರೇಶಗೌಡರು, ಜ್ಯೋತಿ ಗಣೇಶ, ಡಾ.ಹುಲಿನಾಯ್ಕರ್

ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಅರ್ಧನಾರಿಶ್ವರ ದೇವಾಲಯದಿಂದ ಜಿಲ್ಲಾಧಿಕಾರಿ ಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗ್ರಾಮಾಂತರ ಜನತೆ ಹೆಬ್ಬೂರು,ಗೂಳೂರು ಏತ ನೀರಾವರಿ, ತಮ್ಮ ಗ್ರಾಮದ ಕೆರೆ ಕಟ್ಟೆಗಳಿಗೆ ಹೇಮಾವತಿ ನೀರು, ಗ್ರಾಮದ ದೇವಾಲಯಗಳ ಅಭಿವೃದ್ಧಿಗಾಗಿ ಬದಲಾವಣೆ ಬಯಸಿದ್ದು, ಅಭಿವೃದ್ಧಿ ಶೂನ್ಯ ಜೆಡಿಎಸ್ ವಿರುದ್ದವಾಗಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದರು.

ಕಳೆದ ಐದು ವರ್ಷಗಳಲ್ಲಿ ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಹೋಗಿದೆ. ಐದು ನಯಾಪೈಸೆ ಕೆಲಸ ಆಗಿಲ್ಲ. ಕಳೆದ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ, ಜನರಿಗೆ ಮೋಸ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸುಪ್ರೀಂಕೋರ್ಟ್ ಪೂರ್ಣ ಪ್ರಮಾಣದಲ್ಲಿ ಅವರಿಗೆ ತಡೆಯಾಜ್ಞೆ ನೀಡಿಲ್ಲ.ಅಂತಿಮ ತೀರ್ಪಿಗೆ ಒಳಪಟ್ಟು ಸ್ಪರ್ಧೆಗೆ ಅವಕಾಶ ನೀಡಿದೆ.ಹಾಗಾಗಿ ಗ್ರಾಮಾಂತರದ ಜನತೆ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಲು ಸುರೇಶಗೌಡ ಮನವಿ ಮಾಡಿದರು.

ಕಾರ್ಯಕರ್ತರು ಹಾಗು ಪಕ್ಷದ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ರಾಜ್ಯಸಭಾ ಸದಸ್ಯ ಜಗ್ಗೇಶ್, ಡಾ.ಎಂ.ಆರ್.ಹುಲಿನಾಯ್ಕರ್, ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್, ಹೆಚ್.ಎನ್.ದೀಪಕ್, ಅರಕೆರೆ ರವೀಶ್ ಸೇರಿದಂತೆ ಗ್ರಾಮಾಂತರದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು

ಇಂದು ಸುರೇಶಗೌಡರಿಂದ ನಾಮ‌ಪತ್ರ ಸಲ್ಲಿಕೆ

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಸುರೇಶಗೌಡರು 18 ರಂದು (ಮಂಗಳವಾರ) ನಾಮಪತ್ರ ಸಲ್ಲಿಸುವವರು.

ಕ್ಷೇತ್ರದ ವಿವಿಧ ಭಾಗಗಳಿಂದ‌ ಬರುವ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರುವವರು.

ಮಧ್ಯಾಹ್ನ 12.30 ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸುವರು. ಶಾಸಕ ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ರವಿ ಹೆಬ್ಬಾಕ ಸೇರಿದಂತೆ ಹಲವು ಮುಖಂಡರು ಹಾಜರಿರುವರು.

ನಾಮಪತ್ರ ಸಲ್ಲಿಸಿದ ಮಸಾಲ ಜಯರಾಮ್

ತುರುವೇಕೆರೆ: ಮೇ.10 ರಂದು ನಡೆಯಲಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.


ಬಿಜೆಯಿಂದ ಎ.ಎಸ್.ಜಯರಾಮ್ (ಮಸಾಲೆ ಜಯರಾಮ್) ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ಕೊಟ್ಟಿರುವ ಬಿ.ಫಾರಂ ಹಾಗು ಬೆಂಬಲಿಗರಾದ ಅರಳೀಕೆರೆ ಶಿವಕುಮಾರ್ ಸ್ವಾಮಿ, ವಿ.ಟಿ.ವೆಂಕಟರಾಮ್, ಮೃತ್ಯುಂಜಯ ಮತ್ತು ಆಪ್ತ ಕಾರ್ಯದಶರ್ಿ ಸುರೇಶ್ರೊಂದಿಗೆ ತಾಲ್ಲೂಕು ಚುನಾವಣಾ ಕಚೇರಿಗೆ ತೆರಳಿ ಎರಡು ನಾಮಪತ್ರವನ್ನು ಸಾಂಕೇತಿಕವಾಗಿ ಸಲ್ಲಿಸಿದರು.
ಜೆಡಿಎಸ್ ಅಭ್ಯಥರ್ಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ನೀಡಿರುವ ಬಿ.ಫಾರಂನೊಂದಿಗೆ ಹಾಗು ತಮ್ಮ ಬೆಂಬಲಿಗರಾದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿ, ಮುಖಂಡರುಗಳಾದ ಹಿರಿಯಣ್ಣ, ಬಿ.ಎಸ್.ದೇವರಾಜ್, ವೆಂಕಟಾಪುರ ಯೋಗೀಶ್ರೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯಥರ್ಿ ಕಾಂತರಾಜ್ ಬಿ.ಎಂ ಅವರು ತಮ್ಮ ಕಚೇರಿಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರುಗಳೊಂದಿಗೆ ಮೆರವಣಿಗೆಯಲ್ಲಿ ಹೊರಟು ಪಟ್ಟಣದ ಉಡಿಸಲಮ್ಮ ದೇವಿ ಹಾಗು ಬೇಟೆರಾಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಕಾಂತರಾಜ್ ಬಿ.ಎಂ. ಅವರು ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ಕೊಟ್ಟಿರುವ ಬಿ.ಫಾರಂನೊಂದಿಗೆ ಹಾಗು ಬೆಂಬಲಿಗರಾದ ಗುಬ್ಬಿ ಮಾಜಿ ಶಾಸಕ ಶ್ರೀನಿವಾಸ್, ಶ್ರೀಕಂಠೇಗೌಡ, ನಾಗೇಶ್ರೊಂದಿಗೆ ನಾಮ ಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಮೂರು ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ಘೋಷಣೆ ಕೂಗಿ ಬೆಂಬಲ ಸೂಚಿಸಿದರು.


ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಸ್.ಎನ್.ಮಂಜುನಾಥ್, ಸಹಾಯಕ ಚುನಾವಣಾಧಿಕಾರಿ ವೈ.ಎಂ.ರೇಣುಕುಮಾರ್ ಇದ್ದರು.

.

ತುರುವೇಕೆರೆ ಕಾಂಗ್ರೆಸ್ ಗೆ ಗೆಲುವು: ಬೆಮಲ್ ಭವಿಷ್ಯ

0

ತುರುವೇಕೆರೆ : ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‍ ಅಭ್ಯರ್ಥಿ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿಯವರು ಏ.25ರೊಳಗೆ ತುರುವೇಕೆರೆಗೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್‍ ಅಭ್ಯರ್ಥಿ ಬೆಮೆಲ್ ಕಾಂತರಾಜು ತಿಳಿಸಿದರು.

ಪಟ್ಟಣದ ಬೆಮೆಲ್‍ ಕಾಂತರಾಜು ಕಚೇರಿಯಲ್ಲಿ ನಡೆದ ಮಾಯಸಂದ್ರ ಹೋಬಳಿ ಮತ್ತು ದಬ್ಬೇಘಟ್ಟ ಹೋಬಳಿಯ ನೂರಾರು ಕಾರ್ಯಕರ್ತರು ಜೆಡಿಎಸ್‍ ಮತ್ತು ಬಿಜೆಪಿ ತ್ಯಜಿಸಿ ಕಾಂಗ್ರೆಸ್‍ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುರುವೇಕೆರೆ ಮೂಲಕ ಹಾಯ್ದು ಹೋಗಿದ್ದ ರಾಹುಲ್‍ ಗಾಂಧಿಯವರ ಭಾರತ್‍ ಜೋಡೋಯಾತ್ರೆ ಯಶಸ್ವಿಯಾಗಿದೆ. ಸಾವಿರಾರು ಜನ ಈ ಯಾತ್ರೆಯಲ್ಲಿ ಭಾಗವಹಿಸಿದ್ದು, ಇದನ್ನು ಮನಗಂಡ ರಾಹುಲ್‍ ಗಾಂಧಿ ಅವರು ಪುನಃ ಈ ಕ್ಷೇತ್ರಕ್ಕೆ ಬಂದು ನನ್ನ ಪರವಾಗಿ ಪ್ರಚಾರ ಮಾಡಲಿದ್ದಾರೆ.

ಈ ಪ್ರಚಾರದಲ್ಲಿ ಸು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದು, ತುರುವೇಕೆರೆಯಲ್ಲೂ ಸಹ ಕಾಂಗ್ರೆಸ್ ಪಕ್ಷ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ನಾಯಕರುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗು ಜಮೀರ್ ಅಹಮದ್ ಕ್ಷೇತ್ರಕ್ಕೆ ಆಗಮಿಸಲಿದ್ದು ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಮಾಯಸಂದ್ರ ಹೋಬಳಿಯ ಅಜ್ಜೇನಹಳ್ಳಿ, ನಾಗೇಗೌಡನ ಬ್ಯಾಲ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಯುವಕರು ಕಾಂಗ್ರೆಸ್‍ ಪಕ್ಷದ ತತ್ವಗಳಿಗೆ ಪ್ರೇರಿತರಾಗಿ ಕಾಂಗ್ರೆಸ್‍ ಸೇರುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ನಾಗೇಶ್, ಗೋಣಿತುಮಕೂರು ಲಕ್ಷ್ಮೀಕಾಂತ್, ನಂಜುಂಡಪ್ಪ, ಮುತ್ತುಗದಹಳ್ಳಿ ಕೆಂಪರಾಜ್, ಕೋಳಾಲ ಕೆ.ಎಂ. ನಾಗರಾಜ್, ಗುರುದತ್, ದಂಡಿನಶಿವರ ಕುಮಾರ್, ಲಕ್ಷ್ಮಿದೇವಮ್ಮ, ಸೈಯದ್‍ ಯುನಸ್ ಸೇರಿದಂತೆ ಕಾಂಗ್ರೆಸ್‍ ಕಾರ್ಯಕರ್ತರು ಉಪಸ್ಥಿತರಿದ್ದರು.

JDS ಗೆ ಬಂದ BJP ಬೆಟ್ಟಸ್ವಾಮಿ, Congressನ ಹೊನ್ನಗಿರಿಗೌಡ

ಗುಬ್ಬಿ : ಗುಬ್ಬಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಅಕಾಂಕ್ಷಿಗಳಾಗಿದ್ದ ಬಿಜೆಪಿಯ ಜಿ.ಎನ್.ಬೆಟ್ಟಸ್ವಾಮಿ ಮತ್ತು ಕಾಂಗ್ರೆಸ್‍ನ ಹೊನ್ನಗಿರಿಗೌಡ ಅವರುಗಳು ಬೆಂಗಳೂರಿನಲ್ಲಿ ಜೆಡಿಎಸ್‍ನ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದರು.

ಇವರ ಜೊತೆಗೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ನರಸಿಂಹಯ್ಯ ಸಹ ಇದ್ದರು.

ಬೆಟ್ಟಸ್ವಾಮಿ ಮತ್ತು ಹೊನ್ನಗಿರಿಗೌಡ ಅವರು ಇಬ್ಬರೂ ಬಿಜೆಪಿ ಮತ್ತು ಕಾಂಗ್ರಸ್ ಪಕ್ಷವನ್ನು ಗುಬ್ಬಿ ಕ್ಷೇತ್ರದಲ್ಲಿ ಕಟ್ಟಿ ಬೆಳಸುವಲ್ಲಿ ಪ್ರಮುಖ ನಾಯಕರಾಗಿದ್ದು, ಈ ಬಾರಿ ಇಬ್ಬರೂ ಟಿಕೆಟ್ ಅಕಾಂಕ್ಷಿಗಾಳಗಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ಇವರನ್ನು ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಲ್ಲದೆ, ಇವರು ಪಕ್ಷ ಕಟ್ಟಿದ ನಾಯಕರು ಎಂಬುದನ್ನೂ ಸಹ ಲೆಕ್ಕಕ್ಕೆ ಇಟ್ಟುಕೊಳ್ಳದೆ ಇವರನ್ನು ಕಡೆಗಣಿಸಿ, ಬೇರೆಯವರಿಗೆ ಟಿಕೆಟ್ ನೀಡಲಾಯಿತು.
ಈ ಎರಡೂ ಪಕ್ಷಗಳು ಸೌಜನ್ಯಕ್ಕಾದರೂ ಈ ಇಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲಲ್ಲ, ಇದರಿಂದ ನೊಂದ ಇವರು ಜೆಡಿಎಸ್ ಪಕ್ಷವನ್ನು ಯಾವುದೇ ಷರತ್ತುಗಳಿದೆ ಸೇರ್ಪಡೆಗೊಳ್ಳಲು ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿಯವರು ಇವರನ್ನು ಇಂದು ಮಧ್ಯಾಹ್ನ ಗುಬ್ಬಿಯಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಇಬ್ಬರೂ ಜೆಡಿಎಸ್‍ಗೆ ಬರುತ್ತಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎನ್ನಲಾಗಿದೆ.
ಇದರಿಂದ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತಷ್ಟು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ

ಹಾಸನ ಟಿಕೆಟ್ ಘೋಷಿಸಿದ ಜೆಡಿಎಸ್

ರಾಜ್ಯದ ಎಲ್ಲಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ಟಿಕೆಟ್ ಅನ್ನು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ಈ ವೇಳ ಎಚ್.ಡಿ.ರೇವಣ್ಣ, ಪಕ್ಷದ ಅಧ್ಯಕ್ಷ ಇಬ್ರಾಹಿಂ ಇದ್ದರು. ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು ರೇವಣ್ಣ ಅವರೊಂದಿಗೆ ಸಭೆ ನಡೆಸಿದರು.

ಹಾಸನ ಟಿಕೆಟ್ ಗೆ ತೀವ್ರ ಪೈಪೋಟಿ ನಡೆಸಿದ್ದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿಲ್ಲ. ಬದಲಿಗೆ ಎಚ್.ಪಿ. ಸ್ವರೂಪ್ ಅವರಿಗೆ ನೀಡಲಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದರು.

ಹಾಸನದ ಅಭ್ಯರ್ಥಿಗಳ ಪಟ್ಟಿಯನ್ನು ರೇವಣ್ಣ ಪ್ರಕಟಿಸಿದರು. ರಾಜ್ಯದ ಉಳಿದ ಎರಡನೇ ಪಟ್ಟಿಯನ್ನು ಕುಮಾರಸ್ವಾಮಿ ಪ್ರಕಟಿಸಿದರು.

ಹಿರೇಹಳ್ಳಿ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು

ತುಮಕೂರು : ಹಿರೇಹಳ್ಳಿಯ ದೇವರ ಹೊಸಹಳ್ಳಿ ಬಳಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಐದು ಮಂದಿ ಮೃತಪಟ್ಟಿದ್ದಾರೆ.

ಮೃತಪಟ್ಟವರು ಚಳ್ಳಕೆರೆ ತಾಲ್ಲೂಕಿನವರು ಎಂದು ಹೇಳಲಾಗಿದ್ದು, ಶಿರಾದಿಂದ ಬೆಂಗಳೂರಿಗೆ ಹೊರಟಿದ್ದ ವಿಜಯಲಕ್ಷ್ಮಿ ಎಂಬ ಖಾಸಗಿ ಬಸ್ ಡಿವೈಡರ್‍ಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವಿಂದನಾಯ್ಕ(58) ತಿಪ್ಪಮ್ಮ(52) ದಿನೇಶ್(12) ಪಿಂಕಿ) ಹಾಗೂ ವಾಹನ ಚಾಲಕ ಕುಣಿಗಲ್ ಮೂಲದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶ್ರೀಕಂಠಪ್ಪ, ಮಂಜುನಾಥ್, ಪುಟ್ಟಮ್ಮ, ಭಗ್ಯಮ್ಮ, ಮಂಜುನಾರ್ಥ, ಕರಿಯಮ್ಮ, ಮಂಜುಳಾ ಅವರುಗಳು ಗಾಯಗೊಂಡಿದ್ದಾರೆ.

ಈ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.

ಊರವರಿಗೆ ಬುದ್ಧನ ವಿಗ್ರಹ

0

ತಿಪಟೂರು: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಮತ್ತು ಬೆಳೆಸಿ, ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ಹಾಗೂ ಅಂಬೇಡ್ಕರ್ ಅವರ ಜೀವನ ಪಥದಲ್ಲಿ ಆಗಿ ಹೋದ ಘಟನೆಗಳನ್ನು ಅನುಸರಿಸಿದರೆ ಭಾರತೀಯತೆ ತಾನಾಗಿಯೇ ಮೈಗೂಡುತ್ತದೆ ಎಂದು ಚೈತನ್ಯ ಭಾರತ ಸಮಿತಿಯ ನಿರ್ಮಾತೃಗಳಾದ ಸಂತೋಷ್ ಜಿ ರವರು ಹೇಳಿದರು.


ಗುರುವಾರ ನಗರದ ಚೈತನ್ಯ ಭಾರತ ಸಮಿತಿಯ ಕಾರ್ಯಾಲಯ ಗಾಯತ್ರಿನಗರ ತಿಪಟೂರಿನಲ್ಲಿ ನಡೆದ ವಿವೇಕ ಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತೀಯ ಆದರ್ಶಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಚೈತನ್ಯ ಭಾರತ ಸಮಿತಿಯ ಸದಸ್ಯರುಗಳು ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ, ಚಿಕ್ಕನಾಯಕನಹಳ್ಳಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಮುಖ್ಯವಾಗಿ ಹಳೆಪಾಳ್ಯದ ಚೌಡೇಶ್ವರಿ ದೇವಾಲಯದ 40ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ದೃಶ್ಯಕಾವ್ಯ ನಾಟಕ ನೃತ್ಯಗಳನ್ನು ಮಾಡಿ ಊರಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದರು .ಇವರಿಗೆ ಬುದ್ಧನ ವಿಗ್ರಹಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಈ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಯದುನಂದನ್ ರವರು ಗೋಪಾಲ್ ಕೃಷ್ಣರವರು ರುಕ್ಮಿಣಮ್ಮನವರು ಸದಸ್ಯರುಗಳಾದ ಮೇಘ, ಚರಣ್ ರಾಜ್, ಜಾನ್ಹವಿ, ಕಾವ್ಯ, ಚಂದನ ಇತರರು ಭಾಗವಹಿಸಿದ್ದರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು

ಸಿಎಂ ಪೋಸ್ಟರ್ ಹರಿದ ನಾಯಿ ಮೇಲೆ ಕೇಸ್ ಹಾಕಿದ ಪೊಲೀಸರು!

0

ಈ ನಾಯಿ ಹೋಗಿ ಹೋಗಿ ಭಾರಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.

ಗೋಡೆ ಮೇಲೆ ಅಂಟು ಹಾಕಿದ ಸಿಎಂ ಪೋಸ್ಟರ್ ಅರಿದು ಹಾಕಿದ ತಪ್ಪಿಗೆ ಈಗ ಪೊಲೀಸರ ಅತಿಥಿಯಾಗಬೇಕಾಗಿದೆ.

ಇದು ನಡೆದಿರುವುದು ಆಂಧ್ರಪ್ರದೇಶದಲ್ಲಿ. ರಾಜ್ಯದ ವಿಜಯವಾಡದಲ್ಲಿ. ವಿಜಯವಾಡದಲ್ಲಿ ಆಂದ್ರಮುಖ್ಯ ವೈ.ಜಗಮೋಹನ್ ರೆಡ್ಡಿ ಅವರ ಕುರಿತ ಪೋಸ್ಟರ್ ಅಂಟು ಹಾಕಲಾಗಿತ್ತು. ನಾಯಿಯೊಂದು ಈ ಪೋಸ್ಟರ್ ಕೀಳುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊ ಆಧರಿಸಿ ತೆಲುಗು ದೇಶಂ ನ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಅವರನ್ನು ಗೇಲಿ ಮಾಡಲೆಂದೇ ಈ ದೂರು ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.