ತುರುವೇಕೆರೆ: ಮೇ.10 ರಂದು ನಡೆಯಲಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ಬಿಜೆಯಿಂದ ಎ.ಎಸ್.ಜಯರಾಮ್ (ಮಸಾಲೆ ಜಯರಾಮ್) ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ಕೊಟ್ಟಿರುವ ಬಿ.ಫಾರಂ ಹಾಗು ಬೆಂಬಲಿಗರಾದ ಅರಳೀಕೆರೆ ಶಿವಕುಮಾರ್ ಸ್ವಾಮಿ, ವಿ.ಟಿ.ವೆಂಕಟರಾಮ್, ಮೃತ್ಯುಂಜಯ ಮತ್ತು ಆಪ್ತ ಕಾರ್ಯದಶರ್ಿ ಸುರೇಶ್ರೊಂದಿಗೆ ತಾಲ್ಲೂಕು ಚುನಾವಣಾ ಕಚೇರಿಗೆ ತೆರಳಿ ಎರಡು ನಾಮಪತ್ರವನ್ನು ಸಾಂಕೇತಿಕವಾಗಿ ಸಲ್ಲಿಸಿದರು.
ಜೆಡಿಎಸ್ ಅಭ್ಯಥರ್ಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ನೀಡಿರುವ ಬಿ.ಫಾರಂನೊಂದಿಗೆ ಹಾಗು ತಮ್ಮ ಬೆಂಬಲಿಗರಾದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸ್ವಾಮಿ, ಮುಖಂಡರುಗಳಾದ ಹಿರಿಯಣ್ಣ, ಬಿ.ಎಸ್.ದೇವರಾಜ್, ವೆಂಕಟಾಪುರ ಯೋಗೀಶ್ರೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯಥರ್ಿ ಕಾಂತರಾಜ್ ಬಿ.ಎಂ ಅವರು ತಮ್ಮ ಕಚೇರಿಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರುಗಳೊಂದಿಗೆ ಮೆರವಣಿಗೆಯಲ್ಲಿ ಹೊರಟು ಪಟ್ಟಣದ ಉಡಿಸಲಮ್ಮ ದೇವಿ ಹಾಗು ಬೇಟೆರಾಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಕಾಂತರಾಜ್ ಬಿ.ಎಂ. ಅವರು ತಮ್ಮ ನಾಮ ಪತ್ರದ ಜೊತೆಗೆ ಪಕ್ಷದ ವರಿಷ್ಠರು ಕೊಟ್ಟಿರುವ ಬಿ.ಫಾರಂನೊಂದಿಗೆ ಹಾಗು ಬೆಂಬಲಿಗರಾದ ಗುಬ್ಬಿ ಮಾಜಿ ಶಾಸಕ ಶ್ರೀನಿವಾಸ್, ಶ್ರೀಕಂಠೇಗೌಡ, ನಾಗೇಶ್ರೊಂದಿಗೆ ನಾಮ ಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಮೂರು ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ಘೋಷಣೆ ಕೂಗಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಸ್.ಎನ್.ಮಂಜುನಾಥ್, ಸಹಾಯಕ ಚುನಾವಣಾಧಿಕಾರಿ ವೈ.ಎಂ.ರೇಣುಕುಮಾರ್ ಇದ್ದರು.
.