ತಿಪಟೂರು: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಮತ್ತು ಬೆಳೆಸಿ, ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ಹಾಗೂ ಅಂಬೇಡ್ಕರ್ ಅವರ ಜೀವನ ಪಥದಲ್ಲಿ ಆಗಿ ಹೋದ ಘಟನೆಗಳನ್ನು ಅನುಸರಿಸಿದರೆ ಭಾರತೀಯತೆ ತಾನಾಗಿಯೇ ಮೈಗೂಡುತ್ತದೆ ಎಂದು ಚೈತನ್ಯ ಭಾರತ ಸಮಿತಿಯ ನಿರ್ಮಾತೃಗಳಾದ ಸಂತೋಷ್ ಜಿ ರವರು ಹೇಳಿದರು.
ಗುರುವಾರ ನಗರದ ಚೈತನ್ಯ ಭಾರತ ಸಮಿತಿಯ ಕಾರ್ಯಾಲಯ ಗಾಯತ್ರಿನಗರ ತಿಪಟೂರಿನಲ್ಲಿ ನಡೆದ ವಿವೇಕ ಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತೀಯ ಆದರ್ಶಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಚೈತನ್ಯ ಭಾರತ ಸಮಿತಿಯ ಸದಸ್ಯರುಗಳು ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ, ಚಿಕ್ಕನಾಯಕನಹಳ್ಳಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಮುಖ್ಯವಾಗಿ ಹಳೆಪಾಳ್ಯದ ಚೌಡೇಶ್ವರಿ ದೇವಾಲಯದ 40ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ದೃಶ್ಯಕಾವ್ಯ ನಾಟಕ ನೃತ್ಯಗಳನ್ನು ಮಾಡಿ ಊರಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದರು .ಇವರಿಗೆ ಬುದ್ಧನ ವಿಗ್ರಹಗಳನ್ನು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಈ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಯದುನಂದನ್ ರವರು ಗೋಪಾಲ್ ಕೃಷ್ಣರವರು ರುಕ್ಮಿಣಮ್ಮನವರು ಸದಸ್ಯರುಗಳಾದ ಮೇಘ, ಚರಣ್ ರಾಜ್, ಜಾನ್ಹವಿ, ಕಾವ್ಯ, ಚಂದನ ಇತರರು ಭಾಗವಹಿಸಿದ್ದರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು