Monday, March 9, 2026
Google search engine
Home Blog Page 49

ಊರ್ಡಿಗೆರೆಗೆ ಕಾಲೇಜು, ದೇವರಾಯನದುರ್ಗಕ್ಕೆ ರೋಪ್ ವೇ

ತುಮಕೂರು; ಊರ್ಡಿಗೆರೆ ಹೋಬಳಿ ಸರ್ವತ್ತೋಮುಖ ಅಭಿವೃದ್ಧಿ ನನ್ನ ಮುಂದಿನ ಗುರಿಯಾಗಿದೆ. ಊರ್ಡಿಗೆರೆಗೆ ಪದವಿ ಕಾಲೇಜು ಹಾಗೂ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ನೀಡಿದರು.

ಇಲ್ಲಿನ ಊರ್ಡಿಗೆರೆ, ದೇವರಾಯನದುರ್ಗಕ್ಕೆ ಬುಧವಾರ ಭೇಟಿ ನೀಡಿ ಬಿರುಸಿನ‌ ಚುನಾವಣಾ ಪ್ರಚಾರ ನಡೆಸಿದರು.

ಮತದಾರರೊಂದಿಗೆ ಮಾತನಾಡಿದ ಅವರು, ಊರ್ಡಿಗೆರೆಗೆ ಕಾಲೇಜಿನ ಅಗತ್ಯವಿದೆ. ಇಲ್ಲಿಗೆ ವಸಂತನರಾಸಪುರ, ದಾಬಸಪೇಟೆ ಕೈಗಾರಿಕಾ ಪ್ರದೇಶ ಎರಡೂ ಹತ್ತಿರದಲ್ಲಿವೆ. ಇವುಗಳ ಪ್ರಯೋಜನ ಪಡೆಯಬೇಕಾದರೆ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಮನೆ ಬಾಗಿಲಲ್ಲೇ ಶಿಕ್ಷಣ ಸಿಗುವಂತಾಗಬೇಕಾಗಿದೆ ಎಂದರು.
ನಾನು ಶಾಸಕ‌ನಾಗಿ ಆಯ್ಕೆಯಾದರೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತೇನೆ.‌ ಹಳ್ಳಿ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಒದಗಿಸುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದರು.

ದೇವರಾಯನದುರ್ಗ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ರೋಪ್ ವೇ ಅಳವಡಿಸುವುದರಿಂದ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಇಲ್ಲಿ ಉದ್ಯೋಗದ ಜತೆಗೆ ಸ್ಥಳೀಯರಿಗೆ ಸ್ಥಳೀಯ ವಹಿವಾಟಿಗೂ ಅವಕಾಶವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಚಾರದ ವೇಳೆ ಮಹಿಳಾ ಮತದಾರರು ಮಾಜಿ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಅಭಿವೃದ್ಧಿ ಕುರಿತ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಪ್ರಚಾರದಲ್ಲಿ ಅನೇಕ ಮುಖಂಡರು ಹಾಜರಿದ್ದರು. ಜೆಡಿಎಸ್ ನ ಕಾರ್ಯಕರ್ತರನೇಕರು ಸುರೇಶಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.

ತುರುವೇಕೆರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಎಫ್ ಐಆರ್

ತುರುವೇಕೆರೆ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ  ಆರೋಪದ ಹಿನ್ನೆಯಲ್ಲಿ ತುರುವೇಕೆರೆ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ವಿರುದ್ದ ಪಟ್ಟಣದ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕು ಬ್ಲಾಕ್‍ ಕಾಂಗ್ರೆಸ್‍ ವತಿಯಿಂದ ತುರುವೇಕೆರೆ ತಾಲ್ಲೂಕು ವೀರಶೈವ ಲಿಂಗಾಯತ ಕಾಂಗ್ರೆಸ್‍ ಸಮಾವೇಶವನ್ನು ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಾರ್ಚ್‍ 31ರಂದು ಹಮ್ಮಿಕೊಳ್ಳಲಾಗಿತ್ತು.

ಈ ವಿಚಾರವಾಗಿ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಅವರು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಂದ ಸಮಾವೇಶ ನಡೆಸಲು ಅನುಮತಿಯನ್ನು ಪಡೆದುಕೊಂಡಿದ್ದು ಸರಿಯಷ್ಟೇ ಆದರೆ   ವೇದಿಕೆಯ ಹಿಂದಿನ ಫ್ಲೆಕ್ಸ್‍ನಲ್ಲಿ ಬಳಸಿರುವ ‘ವೀರಶೈವ ಲಿಂಗಾಯತ ಕಾಂಗ್ರೆಸ್‍ ಸಮಾವೇಶ’  ಎಂದು ಹಾಕಿರುವುದು ನೀತಿ ಸಂಹಿತೆಯ ಕಾಲಾವಧಿಯಲ್ಲಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇದಕ್ಕೆ ಕಾರಣರಾದವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಫ್ಲೈಯಿಂಗ್‍ ಸ್ವ್ಕಾಡ್ ಚುನಾವಣಾಧಿಕಾರಿ  ಪ್ರಭಾಕರ್‍ ಪಟ್ಟಣದ ಪೊಲೀಸ್‍ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಕಾಂಗ್ರೆಸ್‍ ಜಿಲ್ಲಾ  ಪ್ರಚಾರ ಸಮಿತಿಯ ಅಧ್ಯಕ್ಷ  ರಾಯಸಂದ್ರ ರವಿಕುಮಾರ್, ತಿಪಟೂರು ಮಾಜಿ ಶಾಸಕ ಕೆ.ಷಡಕ್ಷರಿ, ಹಾಗು ಕಾಂಗ್ರೆಸ್‍ ಅಭ್ಯರ್ಥಿ ಬೆಮೆಲ್‍ ಕಾಂತರಾಜ್‍  ಪಾಲ್ಗೊಂಡಿದ್ದರು.

ಅಮೆರಿಕದ ಮಾಜಿ ಅಧ್ಯಕ್ಷರ ಬಂಧನ

ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ,ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಈ ಪ್ರಕರಣ ಅನೇಕ ದಿನಗಳಿಂದ ಚರ್ಚೆಯಲ್ಲಿತ್ತು. ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಟ್ರಂಪ್ ಅವರನ್ನು ಬಂಧಿಸಬಹುದು ಎಂದು ಹೇಳಲಾಗುತ್ತಿತ್ತು

ತಮ್ಮ ಅಟಾರ್ನಿ ಅವರೊಂದಿಗೆ ಬಂದ ಟ್ರಪ್ ಪೊಲೀಸರಿಗೆ ಶರಣಾದರು.‌

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಸಲ ಚುನಾವಣೆಗೆ ನಿಲ್ಲಲು ತಯಾರಿ ನಡೆಸುತ್ತಿದ್ದರು.

ಅಂಕಳಕೊಪ್ಪ ಜಾತ್ರೆ

ಗುಬ್ಬಿ : ತಾಲೂಕಿನ ಸಿಎಸ್ ಪುರ ಹೋಬಳಿ ಅಂಕಳಕೊಪ್ಪ ಮಜರೆ ವೀರಣ್ಣನಗುಡಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಏ.6 ರಂದು ಮಧ್ಯಾಹ್ನ 1ಕ್ಕೆ ಅದ್ದೂರಿಯಾಗಿ ನಡೆಯುವುದು.
ಇತಿಹಾಸ ಪ್ರಸಿದ್ಧ ಭದ್ರಕಾಳಿ ವೀರಭದ್ರ ಸ್ವಾಮಿಯ ಜಾತ್ರೆಯ ಅಂಗವಾಗಿ ಏಪ್ರಿಲ್ 2 ರಿಂದ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆ ಸಂಜೆ ನಡೆಯುತ್ತವೆ ಎಂದು ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.

ವಕೀಲರು ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು

ತಿಪಟೂರು: ವಕೀಲರು ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ಬುದ್ಧಿವಂತಿಕೆ ಇರುವ ಕಡೆ ಭಯ ಇರುವುದಿಲ್ಲ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪುಷ್ಪಾವತಿ ಹೇಳಿದರು.
ತಿಪಟೂರು‌ ತಾಲ್ಲೂಕು ವಕೀಲರ ಸಂಘ ವಕೀಲರಿಗಾಗಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ಘಟನೆಯನ್ನು ನಾನಾ ರೀತಿಯಲ್ಲಿ ನೋಡಲಾಗುತ್ತದೆ. ಈ ಜ್ಞಾನ ವಕೀಲರಿಗೂ ಇರಬೇಕು. ಇಂಥ ಕಾರ್ಯಾಗಾರಗಳು ವಕೀಲರು ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗಲಿವೆ ಎಂದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಮಹಮ್ಮದ್ ಅರೀಫ್ ಮಾತನಾಡಿ, ವಕೀಲರು ಹಾಗೂ ನ್ಯಾಯಾಧೀಶರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದಂತೆ. ವಕೀಲರು ವಾದದ ವೇಳೆ ಶಿಕ್ಷಕರಾಗುತ್ತಾರೆ. ಜಡ್ಜ್ ಮೆಂಟ್ ನೀಡುವಾಗ ನ್ಯಾಯಾಧೀಶರು ಶಿಕ್ಷಕರಾಗುತ್ತಾರೆ ಎಂದರು.
ನ್ಯಾಯಾಧೀಶರಾದ ದೀಪಾ, ಚಂದನ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ರೈಲಿನಲ್ಲಿ ಕುಳಿತಲ್ಲೇ ಸಾವು

ತುಮಕೂರು: ರೈಲಿಗೆ ಹತ್ತಿ ಕುಳಿತ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಯೊಬ್ಬರು ಸಾವಿಗೀಡಾದ ಘಟನೆ ಶನಿವಾರ ತುಮಕೂರು- ಶಿವಮೊಗ್ಗ ಡೆಮು ರೈಲಿನಲ್ಲಿ ನಡೆಯಿತು.

ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಹತ್ತಿದ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾದರು. ಜೇಬಿನಲ್ಲಿ ಅಮ್ಮಸಂದ್ರ ಅಲ್ಲೇಗೌಡ ಎಂದು ಹೆಸರಿರುವ ಆಧಾರ್ ಕಾರ್ಡ್ ಸಿಕ್ಕಿದೆ. ತಿಪಟೂರು ರೈಲು ನಿಲ್ದಾಣದಲ್ಲಿ ಶವವನ್ನು ಸಹ ಪ್ರಯಾಣಿಕರು ಇಳಿಸಿದರು. ಅವರ ಮನೆಯವರಿಗೆ ವಿಷಯ ಮುಟ್ಟಿಸಿದರು.

SSLC; ಪರೀಕ್ಷೆ ಸುಗುಮ

ತುರುವೇಕೆರೆ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಶುಕ್ರವಾರ ಸುಗಮವಾಗಿ ನಡೆಯಿತು.

ಪಟ್ಟಣದಲ್ಲಿ ಜಿಜೆಸಿ, ಸರಸ್ವತಿ ಭಾಲಿಕಾ, ಜೆಪಿ ಆಂಗ್ಲಮಾಧ್ಯಮ, ಎಸ್.ಬಿ.ಜಿ ವಿದ್ಯಾಲಯ ಟಿ.ಬಿ.ಕ್ರಾಸ್, ನೆಹರೂ ಬಾಲಿಕಾ ಪ್ರೌಢ ಶಾಲೆ ಮಾಯಸಂದ್ರ, ಸರ್ಕಾರಿ ಪ್ರೌಢ ಶಾಲೆ ದಬ್ಬೇಘಟ್ಟ, ದಂಡಿನಶಿವರ ಕೆಪಿಎಸ್ ಶಾಲೆ ಮತ್ತು ಹುಲ್ಲೇಕೆರೆಯ ಬಸವೇಶ್ವರ ಪ್ರೌಢಶಾಲಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.

ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆ, ವಸತಿ ಶಾಲೆ 6, ಅನುದಾನಿತ 26, ಅನುದಾನರಹಿತ 9 ಒಟ್ಟು 57 ಶಾಲೆಗಳ 1907 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಮ್ಮ ಹೆಸರುಗಳನ್ನು ಪ್ರಸಕ್ತ ಸಾಲಿನಲ್ಲಿ ನೋಂದಾಯಿಸಿಕೊಂಡಿದ್ದರು. ಆ ಪೈಕಿ 25 ಮಕ್ಕಳು ಮಾತ್ರ ಗೈರಾಗಿದ್ದರು. ಒಟ್ಟು 1882 ಮಕ್ಕಳು ಮಾತ್ರ ಶುಕ್ರವಾರ ಪರೀಕ್ಷೆ ಬರೆದರು.

ಅಮ್ಮಸಂದ್ರದ ಮೈಸೆಂಕೋ ಆಂಗ್ಲ ಪ್ರೌಢ ಶಾಲೆಯ ಮಕ್ಕಳು ಪ್ರಥಮ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ಬರೆದರೆ; ಇನ್ನುಳಿದ ಎಲ್ಲಾ ಮಕ್ಕಳೂ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕೊಡುವ ಮತ್ತು ಉತ್ತರ ಪತ್ರಿಕೆಗಳನ್ನು ತರಲು 3 ಮಾರ್ಗಾಧಿಕಾರಿಗಳು ತಂಡ ರಚಿಸಲಾಗಿತ್ತು. 8 ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾದೀನಾಧಿಕಾರಿಗಳು, ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರು, ಹಾಗು 130 ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು.

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಡಯಟ್ನ ಮಮತಾಮಣಿ, ನಟರಾಜ್, ಬಿ.ಇ.ಒ ಎಸ್.ಕೆ.ಪದ್ಮನಾಭ ಹಾಗು ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಕೆ.ಸಿದ್ದಪ್ಪ ಭೇಟಿ ನೀಡಿದ್ದರು.

‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಸಂತೋಷದಿಂದ ಪರೀಕ್ಷೆ ಬರೆದರು. ಯಾವುದೇ ಅವ್ಯವಹಾರಗಳಿಗೆ ಆಸ್ಪದ ಕೊಡದೆ ಶಾಂತಿಯುತವಾಗಿ ನಡೆಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ತಿಳಿಸಿದರು’.

ರೈತರು- ಅರಣ್ಯ ಸಿಬ್ಬಂದಿ ಜಟಾಪಟಿ: ಹಲ್ಲೆ

0

ಗುಬ್ಬಿ: ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಘರ್ಷಣೆ ಇಬ್ಬರಿಗೆ ಗಾಯ.
ಚೇಳೂರು ಹೋಬಳಿ, ಗಂಗಯ್ಯನಪಾಳ್ಯದಲ್ಲಿ ಅರಣ್ಯಪ್ರದೇಶ ಒತ್ತುವರಿ ವಿಚಾರದಲ್ಲಿ ಕಳೆದ 15 ದಿನಗಳಿಂದಲೂ ರೈತರು ಮತ್ತು ಅರಣ್ಯ ಇಲಾಖೆಯ ಮಧ್ಯೆ ಘರ್ಷಣೆ ಮುಂದುವರೆದಿದ್ದು,
ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಕಂದಕ ತೆಗೆಯುವ ಸಂದರ್ಭದಲ್ಲಿ ರೈತ ಮುಖಂಡ ದೊಡ್ಡನಂಜಯ್ಯನವರ ನೇತೃತ್ವದಲ್ಲಿ ಕೆಲಸಕ್ಕೆ ಅಡ್ಡಿಪಡಿಸಿದರು.

ಅರಣ್ಯ ಇಲಾಖೆಯವರು ಆತನನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ವರದಿಯಾಗಿದೆ.


ಈ ಘರ್ಷಣೆಯಲ್ಲಿ ಕುಣಿಗಲ್ ವಲಯ ಅರಣ್ಯಅಧಿಕಾರಿ ಮನ್ಸೂರ್ ಹಾಗೂ ಗಸ್ತು
ವನಪಾಲಕ ವಿಜಯ ದೇವೇಂದ್ರ ಹಟ್ಟಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.ಗಾಯಾಳುಗಳಿಗೆ ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.


ಸ್ಥಳಕ್ಕೆ ಪೊಲೀಸರು ಆಗಮಿಸಿ ಕ್ರಮ ವಹಿಸಿದ್ದಾರೆ. ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿರುವಂತೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈತರ ಮೇಲೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಗಲಾಟೆಯಲ್ಲಿ ಹಲವು ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಕೆಲವು ರೈತರನ್ನು ಬಂಧಿಸಿದ್ದಾರೆ ಎಂದು ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್ ತಿಳಿಸಿದರು.

ಗೌಡರ ಹೆಸರಲ್ಲಿ ಪೂಜೆ; ಪ್ರಚಾರ ಆರಂಭಿಸಿದ ಗ್ರಾಮಸ್ಥರು

0

ತುಮಕೂರು: ರಾಮನವಮಿಯ ಕಾರಣ ಮಾಜಿ ಶಾಸಕ ಬಿ.ಸುರೇಶಗೌಡರ ಗೆಲುವಿಗೆ ವಿಶೇಷ ಪೂಜೆ ನೆರವೇರಿಸಿದ ಹೆಬ್ಬೂರು ಸಮೀಪದ ಕಂಬಾಳಪುರ ಗ್ರಾಮಸ್ಥರು ಚುನಾವಣಾ ಪ್ರಚಾರ ಆರಂಭಿಸಿದರು.

ಇಂದಿನಿಂದಲೇ ಊರಿನಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದ್ದೇವೆ. ಸುರೇಶಗೌಡರ ಗೆಲುವಿಗೆ ಗ್ರಾಮದ ದೇವರಲ್ಲಿ ಬೇಡಿಕೊಂಡು ಪ್ರಚಾರ ಆರಂಭಿಸಿದ್ದೇವೆ ಎಂದು ಗ್ರಾಮದ ಮುಖಂಡ‌ ಶಿವಕುಮಾರ್ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಕೆಲಸ ಸಿಗಬೇಕು. ಈ ಸಲ ಸುರೇಶಗೌಡರು ಗೆದ್ದರೆ ರಪ್ತೋಧ್ಯಮ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದಾರೆ. ನಮ್ಮೂರಷ್ಟೇ ಅಲ್ಲ ನಮ್ಮೂರಿನ ಜನರು ನಮ್ಮ ಹೋಬಳಿಯ ಎಲ್ಲ ಕಡೆ ಸ್ವಯಂ ಪ್ರೇರಿತರಾಗಿ ತೆರಳಿ ಪ್ರಚಾರ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಬ್ಯಾಟರಾಮಯ್ಯ, ರಂಗರಾಜು, ಶಿವಕುಮಾರ್, ವೆಂಕಟರಂಗಯ್ಯ ಇತರರು ಇದ್ದರು.

ಆಯ್ಕೆ ಅಸಿಂಧು: ಗೌರಿಶಂಕರ್ ನಡೆ ಏನು?

ಬೆಂಗಳೂರು: ಚುನಾವಣಾ ಅಕ್ರಮ ಸಾಬೀತಾದ ಕಾರಣ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಯ್ಕೆಯನ್ನು ಅಸಿಂಧು ಎಂದು ಹೈಕೋರ್ಟ್ ಹೇಳಿದೆ.

ಹೀಗಾಗಿ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಿದ್ದಾರೆ.

ಚುನಾವಣೆ ಘೋಷಣೆಯಾಗಿರುವುದರಿಂದ‌ ಆದೇಶಕ್ಕೆ ತಡೆ ನೀಡಬೇಕೆಂದು ಗೌರಿಶಂಕರ್ ಪರ ವಕೀಲರಾದ ಹೇಮಂತ್ ಕುಮಾರ್ ಅರ್ಜಿ ಸಲ್ಲಿಸಿದರು. ಹೀಗಾಗಿ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಮೂವತ್ತು ದಿನಗಳ ಕಾಲ ಅವಕಾಶ ನೀಡಿತು.

ಗೌರಿಶಂಕರ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ

ಚುನಾವಣೆಯಲ್ಲಿ ಮಕ್ಕಳಿಗೆ ಅಕ್ರಮವಾಗಿ ಹೆಲ್ತ್ ಇನ್ಯೂಷ್ಯೂರೆನ್ಸ್ ಬಾಂಡ್ ಹಂಚಿ ಗೆಲುವು ಸಾಧಿಸಲಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.