ತುಮಕೂರು: ರಾಮನವಮಿಯ ಕಾರಣ ಮಾಜಿ ಶಾಸಕ ಬಿ.ಸುರೇಶಗೌಡರ ಗೆಲುವಿಗೆ ವಿಶೇಷ ಪೂಜೆ ನೆರವೇರಿಸಿದ ಹೆಬ್ಬೂರು ಸಮೀಪದ ಕಂಬಾಳಪುರ ಗ್ರಾಮಸ್ಥರು ಚುನಾವಣಾ ಪ್ರಚಾರ ಆರಂಭಿಸಿದರು.
ಇಂದಿನಿಂದಲೇ ಊರಿನಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದ್ದೇವೆ. ಸುರೇಶಗೌಡರ ಗೆಲುವಿಗೆ ಗ್ರಾಮದ ದೇವರಲ್ಲಿ ಬೇಡಿಕೊಂಡು ಪ್ರಚಾರ ಆರಂಭಿಸಿದ್ದೇವೆ ಎಂದು ಗ್ರಾಮದ ಮುಖಂಡ ಶಿವಕುಮಾರ್ ತಿಳಿಸಿದರು.
ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಕೆಲಸ ಸಿಗಬೇಕು. ಈ ಸಲ ಸುರೇಶಗೌಡರು ಗೆದ್ದರೆ ರಪ್ತೋಧ್ಯಮ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದಾರೆ. ನಮ್ಮೂರಷ್ಟೇ ಅಲ್ಲ ನಮ್ಮೂರಿನ ಜನರು ನಮ್ಮ ಹೋಬಳಿಯ ಎಲ್ಲ ಕಡೆ ಸ್ವಯಂ ಪ್ರೇರಿತರಾಗಿ ತೆರಳಿ ಪ್ರಚಾರ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಬ್ಯಾಟರಾಮಯ್ಯ, ರಂಗರಾಜು, ಶಿವಕುಮಾರ್, ವೆಂಕಟರಂಗಯ್ಯ ಇತರರು ಇದ್ದರು.