Wednesday, March 11, 2026
Google search engine
Home Blog Page 55

ಮಲತಾಯಿ ಜೈಲಿಗೆ, ಮಕ್ಕಳು ಸ್ಕೂಲಿಗೆ

0

Publicstory


ತುಮಕೂರು: ಸಣ್ಣ ಮಕ್ಕಳು, ಮಹಿಳೆಯರ ಮೇಲಿನ ಹಲ್ಲೆ ತಪ್ಪಿಸುವಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಜಿ. ಪವಿತ್ರಾ ತಿಳಿಸಿದರು.

ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಲತಾಯಿ ಒಬ್ಬರು ಇಬ್ಬರು ಮಕ್ಕಳಿಗೆ ಹಿಂಸೆ ನೀಡುತ್ತಿದ್ದ ದೂರು ಬಂದಿತು. ಪ್ರಕರಣ ಗಂಭೀರವಾಗಿ ತೆಗೆದುಕೊಂಡೆವು. ಈಗ ಮಲತಾಯಿ ಜೈಲಿಗೆ ಹೋಗಿದ್ದಾರೆ. ತಂದೆ ಜತೆಗೆ ಹೋಗದ ಇಬ್ಬರು ಮಕ್ಕಳನ್ನು ಇಲಾಖೆಯೇ ನೋಡಿಕೊಳ್ಳುತ್ತಿದೆ. ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದರು.
ನೊಂದ ಮಹಿಳೆಯರು ಧೈರ್ಯವಾಗಿ ಇಲಾಖೆಯ ಸಹಾಯ ಪಡೆಯಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ರಮೇಶ್ ಮಾತನಾಡಿ, ಮನೆಯಲ್ಲಿ ಮಹಿಳೆಯರಿಗೆ ಗೌರವ ಕೊಡಬೇಕು. ಮಹಿಳೆಯ ಸಬಲೀಕರಣಕ್ಕಾಗಿ ಹಲವು ಕಾನೂನುಗಳಿವೆ. ಅವುಗಳನ್ನು ಹೆಚ್ಚು ಜನಪ್ರಿಯಗೊಳಿಸಬೇಕಾಗಿದೆ. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.


ಸಾಂತ್ವನ ಕೇಂದ್ರದ ಪಾರ್ವತ್ತಮ್ಮ ರಾಜ್ ಕುಮಾರ್ ಮಾತನಾಡಿ, ಮಹಿಳೆಯರು ಪುರುಷರ ನಡುವೆ ತಾರತಮ್ಯ ಅಗಾಧವಿದೆ. ಇದನ್ನು ಹೋಗಲಾಡಿಸಲು ಎಲ್ಲರೂ ಕೆಲಸ ಮಾಡಬೇಕು ಎಂದರು.

ಮಹಿಳೆಯರು ಕಿರುಕುಳ, ವರದಕ್ಷಿಣಿ, ಗೃಹ ಹಿಂಸೆ, ವರದಕ್ಷಿಣೆ ಮುಂತಾದ ಪ್ರಕರಣಗಳಲ್ಲಿ ಸಾಂತ್ವ ಕೇಂದ್ರ ಹೇಗೆ ನೆರವಾಗುತ್ತಿದೆ ಎಂಬುದನ್ನು ವಿವರಿಸಿದರು.

ಇನ್ಸ್ಪೆಕ್ಟರ್ ಸುರೇಶ್ ಮಾತನಾಡಿ ನಾ ಕಂಡಂತೆ ಇತ್ತೀಚೆಗೆ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ಮೊಬೈಲ್ ದುರ್ಬಳಕೆಯಿಂದ ಹಾಗಾಗಿ ಮಕ್ಕಳಿಗೆ ಒಂದು ಎಚ್ಚರಿಕೆ ಮೊಬೈಲನ್ನು ಸದುದ್ದೇಶಕ್ಕಾಗಿ ಬಳಸಿ ಎಂದು ಕಿವಿ ಮಾತು ಹೇಳಿದರು.

ಕಾನೂನು ಸಲಹೆಗಾರರಾದ ಸುಧಾರಾಣಿ ಮಾತನಾಡಿದರು. ಉಪ ಪ್ರಾಂಶುಪಾಲ ಓಬಣ್ಣ, ಕಾಲೇಜಿನ ಅಧೀಕ್ಷಕರಾದ ಜಗದೀಶ್, ಗ್ರಂಥಪಾಲಕ ಸುಬ್ರಹ್ಮಣ್ಯ ಇತರರು ಇದ್ದರು.

ಬಾ.ಹ.ಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ

ತುಮಕೂರು: ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಭಾಜನರಾಗಿದ್ದಾರೆ.

ಲೇಖಕಿಯಾಗಿ ಹಲವು ಕೃತಿಗಳನ್ನು ಬರೆದಿರುವ ಬಾ.ಹ.ರಮಾಕುಮಾರಿ ಕರ್ನಾಟಕ ಲೇಖಕಿಯ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ತುಮಕೂರಿನಲ್ಲಿ ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರಸ್ತುತ ಜಿಲ್ಲಾ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಾ.ಹ.ರಮಾಕುಮಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನಾವರಣ, ಕಳೆದು ಹೋಗಿದ್ದಾನೆ, ಅನಾಮಿಕ ಹಕ್ಕಿಯ ಸ್ವಗತ, ನಕ್ಕಾವು ಚುಕ್ಕಿ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಧಗಧಗಿಸುವ ಆತ್ಮಗಳು, ಕನಸಿನಾಳದ ಕಣ್ಣು, ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ ಲೇಖನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ.

ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ-ದೇವಯ್ಯ, ರಾಯಸದ ಮಂಚಣ್ಣ-ರಾಯಮ್ಮ ವ್ಯಕ್ತಿ ಚಿತ್ರಣಗಳು, ಹೀಗೊಂದು ಪ್ರೇಮ ಕಥೆ ಕಥಾ ಸಂಕಲವನ್ನು ಬರೆದಿದ್ದಾರೆ.

ಓದುವ ವಯಸ್ಸಿನಲ್ಲಿ ದುಡಿಮೆ ಯಾಕೆ, ದತ್ತು ತೆಗೆದುಕೊಳ್ಳುವುದು ಹೇಗೆ, ವೈದ್ಯಕೀಯ ಗರ್ಭಪಾತ, ರಂಗಾಪುರದ ಹುಡುಗರು, ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನವಸಾಕ್ಷರ ಸಾಹಿತ್ಯವನ್ನು ರಚಿಸಿದ್ದಾರೆ.

ಬಾಣಸಂದ್ರದ ಬೆಳ್ಳಿಕಿರಣ, ಸುವರ್ಣಸಿರಿ, ತುಮಕೂರು ಜಿಲ್ಲೆಯ ಸಾಹಿತಿಗಳ ಮಾಹಿತಿ ಕೋಶ ಸೇರಿದಂತೆ ಒಟ್ಟು 22 ಕೃತಿಗಳನ್ನು ಬರೆದಿದ್ದಾರೆ.

ತೋವಿನಕೆರೆ: ಮಾರ್ಚ್ 6 ರಂದು ಅಡಿಕೆ ಬೆಳೆಯ ಕಾರ್ಯಾಗಾರ

0

ತೋವಿನಕೆರೆ ಸಮೀಪದ ಜೋನಿಗರಹಳ್ಳಿ ನಿವೃತ್ತ ಶಿಕ್ಷಕ ರಂಗನಾಥ ಅಡಿಕೆ ತೋಟದಲ್ಲಿ ಅಡಿಕೆ ಬೆಳೆ ಸುತ್ತಮುತ್ತ
ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಮಾರ್ಚ್ 6 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಜ್ಙಾನ ಕೇಂದ್ರ ಕೊನೆಹಳ್ಳಿ, ಕಾರ್ಯನಿರತ. ಪತ್ರಕರ್ತರ ಸಂಘ ಕೊರಟಗೆರೆ, ಸನ್ಮಿತ್ರ ಸಹಕಾರ ವೇದಿಕೆ, ಹಳ್ಳಿಸಿರಿ, ಶ್ರಮಿಕ ಸಿರಿ ತೋವಿನಕೆರೆ ಸಹಕಾರದಿಂದ ಕಾರ್ಯಾಗಾರ ನಡೆಯುತ್ತದೆ.

*ಕಿರು ಉದ್ದಿಮೆಗಳ ಸ್ಥಾಪನೆ ಮತ್ತು ತೆಂಗು ಮರ ಹತ್ತುವವರಿಗೆ ವಿಮೆಯ ಸೌಲಭ್ಯ
ಡಾ.ವಿ.ಗೋವಿಂದೇಗೌಡರು.
ಮುಖ್ಯಸ್ಥರು ಮತ್ತು ಹಿರಿಯ ವಿಜ್ಙಾನಿಗಳು.

ತೆಂಗಿನ ಮೌಲ್ಯವರ್ಧನೆ ಪ್ರಾತ್ಯಕ್ಷಿಕೆ
ಡಾ.ನಿತ್ಯಶ್ರೀ ವಿಜ್ಙಾನಿಗಳು. ಗೃಹ ವಿಜ್ಙಾನಿಗಳು

ತೆಂಗು ಹಾಗು ಅಡಿಕೆಯಲ್ಲಿ ಬರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳ ಬಗ್ಗೆ
ಡಾ.ಮನೋಜ್ . ಎಚ್. ವಿಜ್ಙಾನಿಗಳು ಸಸ್ಯ ಸಂರಕ್ಷಣೆ.

ತೆಂಗು ಮತ್ತು ಅಡಿಕೆ ಕೊಯ್ಲು ಉಪಕರಣಗಳ ಪ್ರಾತ್ಯಕ್ಷಿಕೆ

ಕೃಷಿ ವಿಜ್ಙಾನ ಕೇಂದ್ರ. ಕೊನೆಹಳ್ಳಿ ತಿಪಟೂರು ತಾಲ್ಲೂಕು

ಅಡಿಕೆ ಉತ್ಪನ್ನಗಳ ಬಳಕೆಯ ಇತರ ಸಾಧ್ಯತೆ ಗಳು
ಮಹಾಲಿಂಗಪ್ಪ .ಪಿ
ಬೆಳೆಗಾರರು, ನಿವೃತ್ತ ಉಪನ್ಯಾಸಕರು. ರಂಗಾಪುರ ಮಧುಗಿರಿ ತಾಲ್ಲೂಕು.

ಸಾವಯವದಲ್ಲಿ ಅಡಿಕೆ ಬೆಳೆ
ಶ್ರೀಕಂಠ ಮೂರ್ತಿ ಸಾವಯವ ಕೃಷಿಕರು ಅದಲಗೆರೆ ಗುಬ್ಬಿ ತಾಲ್ಲೂಕು.

ಕಡಿಮೆ ಸಮಯದಲ್ಲಿ ಮತ್ತು ಸರಳವಾದ ಮಾರ್ಗದಲ್ಲಿ ಅಡಿಕೆ ಸಂಸ್ಕರಣೆ
ಅನಂದ್ ಅತ್ತಿಕಟ್ಟೆ ಗುಬ್ಬಿ ತಾಲ್ಲೂಕು.

ಶ್ರಮದಾಯಕವಲ್ಲದ ಅಡಿಕೆ ಸಂಸ್ಕರಣೆ
ಗುರುಲಿಂಗಪ್ಪ ತಿಪ್ಪೂರು ಗುಬ್ಬಿ ತಾಲ್ಲೂಕು.
ಡಿ.ಟಿ.ರೇಣುಕರಾಧ್ಯ, ತೋಟದ ಮಾಲೀಕ ಜೆ.ಎಂ.ರಂಗನಾಥ ಮಾತನಾಡುತ್ತಾರೆ. ಅಡಿಕೆ ಹಾಲು ಬಳಸಿ ಬಟ್ಟೆಗಳಿಗೆ ಬಣ್ಣ ಹಾಕಿ ಮಾರಾಟ ಮಾಡುವ ದೇಸಿ ಸಂಸ್ಥೆಯವರು ಪ್ರದರ್ಶನ ಮಾರಾಟ ವಿರುತ್ತದೆ.

ಮೇಲಿನ ವಿಷಯಗಳ ಬಗ್ಗೆ ತಜ್ಙರು ಹಾಗೂ ಹಲವು ದಶಕಗಳ ಅನುಭವಿ ಬೆಳೆಗಾರರು ಮಾಹಿತಿ ನೀಡುತ್ತಾರೆ

ಹೆಚ್ಚಿನ ಮಾಹಿತಿಗಾಗಿ ಎಚ್.ಜೆ.ಪದ್ಮರಾಜು ತೋವಿನಕೆರೆ
ನಂ 9945323787.

ಯಾಗಕ್ಕೆ ಮೊರೆಹೋದ ಎಚ್ಡಿಕೆ

ಬಿಡದಿ: ವಿಧಾನಸಭೆಯ ಚುನಾವಣೆಯಲ್ಲಿ ದ್ವಿಗ್ವಿಜಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಗದ ಮೊರೆ ಹೋಗಿದ್ದರು.

ಕೇತಗಾನಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ಈ ಮಹಾಯಾಗ ಹಮ್ಮಿಕೊಂಡಿದ್ದಾರೆ. 9 ದಿನಗಳ ಕಾಲ ಮಹಾಯಾಗ ನಡೆಯಲಿದೆ.

ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಅನಿತಾ ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ ಹಾಗೂ ಕುಟುಂಬದ ಕೆಲವರಷ್ಟೇ ಪಾಲ್ಗೊಂಡಿದ್ದಾರೆ.

ಆಯತ ಚಂಡಿಕಾಯಾಗವನ್ನು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಹ ಮಾಡಿದ್ದರು. ಈ ಯಾಗ ಮಾಡುವುದರಿಂದ ಅಧಿಕಾರ ಸಿಗಲಿದೆ ಎಂಬ ನಂಬಿಕೆಯಲ್ಲಿ ಯಾಗ ನಡೆಸಲಾಗುತ್ತಿದೆ ಎಂದರು.

ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ಪಂಚರತ್ನ ಯಾತ್ರೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಎಚ್ ಡಿಕೆ ತಿಳಿಸಿದರು.

ಸುಮಾರು ಮುನ್ನೂರಕ್ಕೂ ಹೆಚ್ಚು ಪುರೋಹಿತರು ಯಾಗದಲ್ಲಿ ಪಾಲ್ಗೊಂಡಿದ್ದಾರೆ.

ಪಾವಗಡ ಎಡಗೈ ಅಪಸ್ವರ: ಇಕ್ಕಟ್ಟಿಗೆ ಕಾಂಗ್ರೆಸ್

ಪಾವಗಡ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂದು ಮಧುಗಿರಿ ಮಾಜಿ ಜಿಪಂ ಸದಸ್ಯ ಕೆಂಚಮಾರಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಎಡಗೈ ಸಮುದಾಯದ ಮುಖಂಡರುಗಳಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

ಮಾ.5ರಂದು ಕೊರಟಗೆರೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದು ಪಾವಗಡ ತಾಲೂಕಿನಿಂದ ಹೆಚ್ಚಿನ ಜನ ಆಗಮಿಸಬೇಕೆಂದು ಮತ್ತು ಪಾವಗಡ ವಿಧಾನಸಭಾ ಕ್ಷೇತ್ರದ ಎಡಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯದವರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ನೀಡಬೇಕೆಂದು ಪಕ್ಷದ ಹೈಕಮಾಂಡ್ ಮುಖಂಡರುಗಳಿಗೆ ಈ ಮೂಲಕ ಕೇಳಿಕೊಂಡರು.

ಹಿರಿಯ ಕಾಂಗ್ರೆಸ್ ಮುಖಂಡ ಕೋರ್ಟ್ ನರಸಪ್ಪ ಮಾತನಾಡಿ,
1989ರಿಂದ ಪಾವಗಡದ ಎಡಗೈ ಸಮುದಾಯದವರಿಗೆ ನಿರ್ಲಕ್ಷ ಮಾಡಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಮ್ಮ ಎಡಗೈ ಸಮುದಾಯದವರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಬೇಕೆಂದು ಕೇಳಿಕೊಂಡರು.

ನಮ್ಮ ಸಮುದಾಯದಿಂದ ಹಿರಿಯರುಗಳಾದ ಮಾಜಿ ಸಂಸದ ಚಂದ್ರಪ್ಪ, ಕೆಂಚಮಾರಣ್ಣ, ಅರುಂಧತಿ ಹಾಗೂ ಕೋರ್ಟ್ ನರಸಪ್ಪನಾದ ನಾನು ಇದ್ದೇವೆ. ಇವರಲ್ಲಿ ಯಾರನ್ನಾದರೂ ಗುರುತಿಸಿ ಪಕ್ಷ ಟಿಕೆಟ್ ನೀಡಿದ್ದಲ್ಲಿ ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಹೇಳಿದರು .

ಸಮುದಾಯದಲ್ಲಿ ಯಾರನ್ನಾದರೂ ಗುರುತಿಸಿ ಟಿಕೆಟ್ ನೀಡಿದ್ದಲ್ಲಿ ಸಮಾಜದ ಅಭಿವೃದ್ಧಿಗೋಸ್ಕರ ನಾವು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮಾಡುತ್ತೇವೆ ಎಂದು ಈ ಮೂಲಕ ಹೇಳಿದರು.

ಪಾವಗಡ ವಿಧಾನಸಭಾ ಮಹಿಳಾ ಆಕಾಂಕ್ಷಿ ಅರುಂಧತಿ ಅವರು ಮಾತನಾಡಿ, ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯದವರಿಗೆ ಅವಕಾಶ ಕಡಿಮೆಯಾಗಿರುವುದರಿಂದ ಈಗಲಾದರೂ ಸಹ ನಮ್ಮ ಎಡಗೈ ಸಮುದಾಯದಲ್ಲಿ ಯಾರಿಗಾದರೂ ಸರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲೇಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಿ ಜೆ ಎಸ್ ನಾರಾಯಣಪ್ಪ, ಕೃಷ್ಣಮೂರ್ತಿ, ಗುತ್ತಿಗೆದಾರ ದುಗ್ಗಪ್ಪ, ನರಸಿಂಹ, ಶಿವಕುಮಾರ್, ಸೇರಿದಂತೆ ದಲಿತ ಸಂಘಟನೆಗಳ ಅಧ್ಯಕ್ಷರುಗಳು ಮುಖಂಡರುಗಳು ಹಾಗೂ ಸಮುದಾಯದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಕುಮಾರ್ ನಾಗಲಾಪುರ

ಶಾಸಕನ ಮಗನ ಮನೆಯಲ್ಲಿ ₹6 ಕೋಟಿ ನಗದು ಪತ್ತೆ

0

ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಕಂತೆ ಕಂತೆ ನೋಟು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗು ಬಡಿದಿದ್ದಾರೆ.

ಮನೆಯಲ್ಲಿದ್ದ 6 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕಚೇರಿಯಲ್ಲಿಟ್ಟಿದ್ದ ಒಂದೂವರೆ ಕೋಟಿ ಸಹ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ‌.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್) ಟೆಂಡರ್ ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ನಿನ್ನೆಯೇ ಬಂಧಿಸಿದ್ದರು. ರಾತ್ರಿ ಅವರ ಮನೆಯನ್ನು ತಪಾಸಣೆ ಮಾಡಿದಾಗ ಹಣದ ರಾಶಿಯೇ ಕಂಡುಬಂತು.

ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದು ತಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿದ್ದ ಶಾಸಕ ವಿರೂಪಾಕ್ಷಪ್ಪ ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ.

ಟೆಂಡರ್ ಸಂಬಂಧ ಲಂಚ ಪಡೆಯುವಾಗ ಆರೋಪಿ ಸಿಕ್ಕಿಬಿದಿದ್ದಾರೆ. ಪ್ರಕರಣದಲ್ಲಿ ಶಾಸಕರನ್ನು ವಿಚಾರಣೆ ಕರೆಯುವ ಸಾಧ್ಯತೆ ನಿಚ್ಚಳವಾಗಿದೆ.

ರಂಗಕಲಾವಿದ ಭೋಜ ರಾಜ್ ಇನ್ನಿಲ್ಲ

0

ಪಾವಗಡ: ನಿವೃತ್ತ ನೊಂದಣಾಧಿಕಾರಿ ಬೋವಿ ಜನಾಂಗದ ಹಿರಿಯರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬೋಜರಾಜ್ (೬೭) ನಿಧನರಾಗಿದ್ದಾರೆ.


ತಾಲ್ಲೂಕಿನ ಚಿನ್ನಮ್ಮನಹಳ್ಳಿಯ ರಂಗಕೌಸ್ತುಭ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಹಿರಿಯ ರಂಗಕಲಾವಿಧ ಅತ್ಯುತ್ತಮ ಸಂಘಟಕ ಬೋಜರಾಜ್ ಕುಟುಂಬದ ಸದಸ್ಯ ರನ್ನುಹಾಗೂ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.


ಇವರ ಅಗಲಿಕೆಗೆ ತಾಲ್ಲುಕಿನಾಧ್ಯಂತ ವ್ಯಾಪಕವಾಗಿ ಸಂತಾಪ ವ್ಯಕ್ತವಾಗಿದ್ದು ಶಾಸಕ ವೆಂಕಟರಮಣಪ್ಪ ಪುತ್ತ ವೆಂಕಟೇಶ್ ಮಾಜಿ ಶಾಸಕ ತಿಮ್ಮರಾಯಪ್ಪ ಮತ್ತು ನಾಗೇಂದ್ರ ಕುಮಾರ್ ಅಲ್ಲದೆ ಅನೇಕ ಗಣ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗೋಸಲ ರಥೋತ್ಸವದಲ್ಲಿ ಮಿಂದೆದ್ದ ಜನರು

ಗುಬ್ಬಿ : ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ರಥೋತ್ಸವ ಬುಧವಾರ ಮಧ್ಯಾಹ್ನ ಸಹಸ್ತಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಆರತಿ ಪೂಜೆಗಳು ನಡೆದು ಗದ್ದುಗೆಗೆ ಹೂವಿನ ಅಲಂಕಾರ ಮಾಡಲಾಗಿತ್ತು.

ಭಕ್ತಾಧಿಗಳು ಭಕ್ತಿಯಿಂದ ರಥವನ್ನು ಎಳೆಯುವ ಮೂಲಕ ಚನ್ನಬಸವೇಶ್ವರಸ್ವಾಮಿಯನ್ನು ನೆನೆದರು. ನಾಡಿನ ನಾನಾ ಭಾಗಗಳಿಂದ ಭಕ್ತಾಗಳ ದಂಡೇ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಹೂ, ನಿಂಬೆಹಣ್ಣು ಹಾಗೂ ಬಾಳೆಹಣ್ಣಿಗೆ ದವನ ಸಿಗಿಸಿಕೊಂಡು ರಥಕ್ಕೆ ಸೂರು ಬಿಟ್ಟು ಭಕ್ತಿ ಸಮರ್ಪಿಸಿದರು.


ಪಾನಕ ಫಲಾರ ವಿತರಣೆ: ಹುರಿ ಬಿಸಿಲಿನಲ್ಲಿ ರಥೋತ್ಸವಕ್ಕೆ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ದಾಹ ಮತ್ತು ಹಸಿವನ್ನು ತಣಿಸಲು ನಾನಾ ಸಂಘಟನೆಗಳಾದ ಗೂಡ್ಸ್, ಆಟೋ ಮತ್ತು ಟೆಂಪೋ ಚಾಲಕರು ಮತ್ತು ಮಾಲಿಕರ ಸಂಘ, ತಿಗಳರ ಸಮಾಜ ಗುಬ್ಬಿ, ಚಿಕ್ಕೋನಹಳ್ಳಿ ಗ್ರಾಮಸ್ಥರು, ಗೋಸಲಚನ್ನಬಸವೇಶ್ವರ ಪತ್ತಿನ ಸೌಹಾರ್ಧ ಸಹಾಕಾರಿ ಸಂಘ, ಗೋಸಲ ಚನ್ನಬಸವೇಶ್ವರರ ಸಂಘ, ವೀರಶೈವ ಸಮಾಜ, ಬೃಂದವನ ಪೇಟ್ರೋಲ್ ಬಂಕ್ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಹೆಸರು ಬೆಳೆ, ಬಾಳೆಹಣ್ಣಿನ ರಸಾಯನ, ಉಪಾಹಾರವನ್ನು ವಿತರಿಸಲಾಯಿತು.

ದೇವಾಲಯದ ಆಡಳಿತ ಮಂಡಳಿಯು ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ, ಕುಡಿಯುವ ನೀರು, ಕೊಬ್ಬರಿ ಮೀಠಾಯಿ, ವಿತರಿಸುವುದರ ಜತೆಗೆ ಪೊಲೀಸ್ ಬಂದೂಬಸ್ತ್, ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸೆ, ಆಗ್ನಿ ಶಾಮಕ ದಳದಿಂದ ಸಿಬ್ಬಂದಿಗಳನ್ನು ವ್ಯವಸ್ಥೆಗೊಳಿಸಿತ್ತು. ಜಾತ್ರೆಯಲ್ಲಿ ರಥೋತ್ಸವ ಮುಗಿದ ನಂತರ ಪಟ್ಟಣ ಪಂಚಾಯಿತಿ ಪೌರಕರ್ಮಿಕರಿಂದ ತ್ವರಿತವಾಗಿ ಸ್ವಚ್ಛತೆ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು:

ಗದ್ದುಗೆಯಿಂದ ರಥಕ್ಕೆ ದೇವರನ್ನು ಕರೆದುಕೊಂಡು ಹೋಗುವಾಗ ಕರಡಿ ವಾದ್ಯ, ನಾದ ದ್ವಾರ, ನಂದಿಧ್ವಜ, ಗಂದ್ ಬಟ್ಟಲು ಮೆರವಣಿಗೆ, ಪತ್ತಿನ ಮೇರವಣಿಗೆ, ದೊಳ್ಳು ಕುಣಿತ ಇನ್ನೂ ಮುಂತಾದ ಜಾನಪದ ಕಲಾ ತಂಡಗಳಿಂದ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರಾತಿ ಮಾಡಿದ ನಂತರ ರಥಕ್ಕೆ ಚಾಲನೀಡಲಾಯಿತು.

ಎಸಿ ಹೋಟೆಲ್ ಶಿವಣ್ಣ, ಮೋಹನ್ ಕುಮಾರ್,
ತಹಸೀಲ್ದಾರ್ ಆರತಿ.ಬಿ ಆರ್ ಐ ರಮೇಶ್, ದೇವಾಲಯದ ತೊರೆಮಠದ ರಾಜಶೇಖರ ಸ್ವಾಮಿಜಿ ಹಾಗೂ ವಿವಿಧ ಸ್ವಾಮೀಜಿಗಳ,ಚುನಾಯಿತ ಪ್ರತಿನಿಧಿಗಳು, ಪಟ್ಟಣದ 18 ಕೋಮಿನ ಮುಖಂಡರುಗಳು ಇದ್ದರು.

ಜನಮೆಚ್ಚಿದ ಶಿಕ್ಷಕರಿಗೆ ಕಿರೀಟ ತೊಡಿಸಿದ ಸುರೇಶಗೌಡ

0

ತುಮಕೂರು: ತಾಲ್ಲೂಕಿನ ಕಂಬಾಳಪುರದಲ್ಲಿ ಜನಮೆಚ್ಚಿದ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹುಚ್ಚಯ್ಯ ಅವರನ್ನು ಮಾಜಿ ಶಾಸಕ ಬಿ. ಸುರೇಶಗೌಡರು ಸನ್ಮಾನಿಸಿದರು.

ಗ್ರಾಮದಲ್ಲಿ ಮಾರುತಿ ಯುವಕ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನಡೆದ ಸಂಪೂರ್ಣ ರಾಮಾಯಣ ನಾಟಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಜನರು ಶಾಂತಿಯುತವಾಗಿ ಬದುಕಬೇಕು. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಜನರ ಮನಸ್ಸು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದರು.

ಬಿಜೆಪಿ ಮುಖಂಡರಾದ ಮಾಸ್ತಿ‌ಗೌಡ, ಶಿವಕುಮಾರ್ ಹಾಗೂ ಗ್ರಾಮದ ಹಲವು ಮುಖಂಡರು ಇದ್ದರು.

ಜೆಡಿಎಸ್ ತುಮಕೂರು ತಾಲ್ಲೂಕು ಅಧ್ಯಕ್ಷ ಬಿಜೆಪಿಗೆ

0

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಜೆಡಿಎಸ್ ನಾಯಕರ ವಲಸೆ ಮುಂದುವರೆದಿದ್ದು, ಆ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರೇ ಈಗ ಪಕ್ಷ ತೊರೆದಿದ್ದಾರೆ.

ಬುಧವಾರ ನಾಗವಲ್ಲಿ ಸಮೀಪ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಂಚೆ ರಾಮಚಂದ್ರಪ್ಪ ಅವರು ಬಿಜೆಪಿ ಸೇರಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪಕ್ಷಕ್ಕೆ ಬರ ಮಾಡಿಕೊಂಡರು. ಮಾಜಿ ಶಾಸಕ ಬಿ.ಸುರೇಶಗೌಡ, ವೈ.ಎಚ್.ಹುಚ್ಚಯ್ಯ ಇತರರು ಇದ್ದರು,

ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಮ್ಮುಖದಲ್ಲಿ ಜೆಡಿಎಸ್ ನ ಹಲವು ಹಿರಿಯ ಮುಖಂಡರು, ಪ್ರಭಾವಿಗಳು ಬಿಜೆಪಿ ಸೇರಿದ್ದರು.

ಈಗ ಆ ಪಕ್ಷದ ತಾಲ್ಲೂಕು ಘಟಕದ ಸಾರಥಿಯೇ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.


ಜೆಡಿಎಸ್ ನಲ್ಲಿ ಪಕ್ಷ ತೊರೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪಂಚೆ ರಾಮಚಂದ್ರಪ್ಪ ಅವರ ಜತೆಗೆ ಅನುಪನಹಳ್ಳಿಯ ಮುಖಂಡರಾದ ಕಿರಣ್, ನಟರಾಜು, ನಾಗರಾಜು, ಅಭಿಲಾಷ, ವೀರನಾಯಕನಹಳ್ಳಿಯ ಮುನಿರಾಜು, ನರಸಿಂಹಮೂರ್ತಿ, ಟಿ.ಜಿ.ಪಾಳ್ಯ, ವಳಕಲ್ಲು, ಚೋಳಂಬಳ್ಳಿ, ಹೊನ್ನುಡಿಕೆ ಭಾಗದ ಹಲವು ಜೆಡಿಎಸ್ ನ ಹಿರಿಯ ಮುಖಂಡರು, ಯುವಕರು ಬಿಜೆಪಿ ಸೇರಿದರು.