ಜಸ್ಟ್ ನ್ಯೂಸ್

ಯಾಗಕ್ಕೆ ಮೊರೆಹೋದ ಎಚ್ಡಿಕೆ

ಬಿಡದಿ: ವಿಧಾನಸಭೆಯ ಚುನಾವಣೆಯಲ್ಲಿ ದ್ವಿಗ್ವಿಜಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಗದ ಮೊರೆ ಹೋಗಿದ್ದರು.

ಕೇತಗಾನಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ಈ ಮಹಾಯಾಗ ಹಮ್ಮಿಕೊಂಡಿದ್ದಾರೆ. 9 ದಿನಗಳ ಕಾಲ ಮಹಾಯಾಗ ನಡೆಯಲಿದೆ.

ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಅನಿತಾ ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ ಹಾಗೂ ಕುಟುಂಬದ ಕೆಲವರಷ್ಟೇ ಪಾಲ್ಗೊಂಡಿದ್ದಾರೆ.

ಆಯತ ಚಂಡಿಕಾಯಾಗವನ್ನು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಹ ಮಾಡಿದ್ದರು. ಈ ಯಾಗ ಮಾಡುವುದರಿಂದ ಅಧಿಕಾರ ಸಿಗಲಿದೆ ಎಂಬ ನಂಬಿಕೆಯಲ್ಲಿ ಯಾಗ ನಡೆಸಲಾಗುತ್ತಿದೆ ಎಂದರು.

ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ಪಂಚರತ್ನ ಯಾತ್ರೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಎಚ್ ಡಿಕೆ ತಿಳಿಸಿದರು.

ಸುಮಾರು ಮುನ್ನೂರಕ್ಕೂ ಹೆಚ್ಚು ಪುರೋಹಿತರು ಯಾಗದಲ್ಲಿ ಪಾಲ್ಗೊಂಡಿದ್ದಾರೆ.

Comment here