Sunday, September 8, 2024
Google search engine
Homeಜಸ್ಟ್ ನ್ಯೂಸ್ಪಾವಗಡ ಎಡಗೈ ಅಪಸ್ವರ: ಇಕ್ಕಟ್ಟಿಗೆ ಕಾಂಗ್ರೆಸ್

ಪಾವಗಡ ಎಡಗೈ ಅಪಸ್ವರ: ಇಕ್ಕಟ್ಟಿಗೆ ಕಾಂಗ್ರೆಸ್

ಪಾವಗಡ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂದು ಮಧುಗಿರಿ ಮಾಜಿ ಜಿಪಂ ಸದಸ್ಯ ಕೆಂಚಮಾರಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಎಡಗೈ ಸಮುದಾಯದ ಮುಖಂಡರುಗಳಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

ಮಾ.5ರಂದು ಕೊರಟಗೆರೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದು ಪಾವಗಡ ತಾಲೂಕಿನಿಂದ ಹೆಚ್ಚಿನ ಜನ ಆಗಮಿಸಬೇಕೆಂದು ಮತ್ತು ಪಾವಗಡ ವಿಧಾನಸಭಾ ಕ್ಷೇತ್ರದ ಎಡಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯದವರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ನೀಡಬೇಕೆಂದು ಪಕ್ಷದ ಹೈಕಮಾಂಡ್ ಮುಖಂಡರುಗಳಿಗೆ ಈ ಮೂಲಕ ಕೇಳಿಕೊಂಡರು.

ಹಿರಿಯ ಕಾಂಗ್ರೆಸ್ ಮುಖಂಡ ಕೋರ್ಟ್ ನರಸಪ್ಪ ಮಾತನಾಡಿ,
1989ರಿಂದ ಪಾವಗಡದ ಎಡಗೈ ಸಮುದಾಯದವರಿಗೆ ನಿರ್ಲಕ್ಷ ಮಾಡಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನಮ್ಮ ಎಡಗೈ ಸಮುದಾಯದವರನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಬೇಕೆಂದು ಕೇಳಿಕೊಂಡರು.

ನಮ್ಮ ಸಮುದಾಯದಿಂದ ಹಿರಿಯರುಗಳಾದ ಮಾಜಿ ಸಂಸದ ಚಂದ್ರಪ್ಪ, ಕೆಂಚಮಾರಣ್ಣ, ಅರುಂಧತಿ ಹಾಗೂ ಕೋರ್ಟ್ ನರಸಪ್ಪನಾದ ನಾನು ಇದ್ದೇವೆ. ಇವರಲ್ಲಿ ಯಾರನ್ನಾದರೂ ಗುರುತಿಸಿ ಪಕ್ಷ ಟಿಕೆಟ್ ನೀಡಿದ್ದಲ್ಲಿ ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಹೇಳಿದರು .

ಸಮುದಾಯದಲ್ಲಿ ಯಾರನ್ನಾದರೂ ಗುರುತಿಸಿ ಟಿಕೆಟ್ ನೀಡಿದ್ದಲ್ಲಿ ಸಮಾಜದ ಅಭಿವೃದ್ಧಿಗೋಸ್ಕರ ನಾವು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮಾಡುತ್ತೇವೆ ಎಂದು ಈ ಮೂಲಕ ಹೇಳಿದರು.

ಪಾವಗಡ ವಿಧಾನಸಭಾ ಮಹಿಳಾ ಆಕಾಂಕ್ಷಿ ಅರುಂಧತಿ ಅವರು ಮಾತನಾಡಿ, ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯದವರಿಗೆ ಅವಕಾಶ ಕಡಿಮೆಯಾಗಿರುವುದರಿಂದ ಈಗಲಾದರೂ ಸಹ ನಮ್ಮ ಎಡಗೈ ಸಮುದಾಯದಲ್ಲಿ ಯಾರಿಗಾದರೂ ಸರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲೇಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಿ ಜೆ ಎಸ್ ನಾರಾಯಣಪ್ಪ, ಕೃಷ್ಣಮೂರ್ತಿ, ಗುತ್ತಿಗೆದಾರ ದುಗ್ಗಪ್ಪ, ನರಸಿಂಹ, ಶಿವಕುಮಾರ್, ಸೇರಿದಂತೆ ದಲಿತ ಸಂಘಟನೆಗಳ ಅಧ್ಯಕ್ಷರುಗಳು ಮುಖಂಡರುಗಳು ಹಾಗೂ ಸಮುದಾಯದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಕುಮಾರ್ ನಾಗಲಾಪುರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?