Sunday, March 15, 2026
Google search engine
Home Blog Page 92

ತುರುವೇಕೆರೆಯಲ್ಲಿ ರೆಡ್ ಅಲರ್ಟ್ ಘೋಷಣೆ: ಜಿಲ್ಲಾಧಿಕಾರಿ


ಮಳೆರಾಯನ ಅಬ್ಬರಕ್ಕೆ  ತುರುವೇಕೆರೆ ತತ್ತರ | ಅಸ್ತವ್ಯಸ್ತಗೊಂಡ ಜನಜೀವನ | ಸಾವಿರಾರು ಕೋಳಿ ಮರಿಗಳು ಜಲ ಸಮಾಧಿ |

ತುರುವೇಕೆರೆ : ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ  ಹಿಂದೆಂದೂ ಕಂಡರಿಯದ , ಕೇಳರಿಯದ ರೀತಿಯಲ್ಲಿ ಸುರಿದ ಮಳೆರಾಯನ ಅಬ್ಬರಕ್ಕೆ  ವಾಸದ ಮನೆಗಳು ನೆಲಕಚ್ಚಿ ಹೋಗಿವೆ. ಅಲ್ಲದೆ ರಸ್ತೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು  ಮಾತ್ರವಲ್ಲದೇ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಜನತೆ ತತ್ತರ ಗೊಂಡಿದ್ದಾರೆ.

ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವ  ರಾಷ್ಟ್ರೀಯ ಹೆದ್ದಾರಿ 150 ಎ ನಲ್ಲಿ ಜಲಪ್ರವಾಹವಾದ ಹಿನ್ನಲೆಯಲ್ಲಿ ವಿಶ್ವನಾಥಪುರ ಮಾಳೆ ಗೇಟ್ ಬಳಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.  ವಿಶ್ವನಾಥಪುರ ಮಾಳೆಯ ಬಳಿಯ ಪೆಟ್ರೋಲ್ ಬಂಕ್, ಡಾಬಾ, ಹಾಗೂ ಆಸುಪಾಸಿನ ಜಮೀನುಗಳಲ್ಲಿ, ಲೇ ಔಟ್‌ಗಳತ್ತ ಅಪಾರ ಪ್ರಮಾಣದ ನೀರು ನುಗ್ಗಿ ನಷ್ಟವುಂಟು ಮಾಡಿದೆ. ಪಟ್ಟಣದ ತಿಪಟೂರು ರಸ್ತೆಯಲ್ಲಿನ ಕೃಷ್ಣ ಚಿತ್ರಮಂದಿರ ಆವರಣ ಸಂಪೂರ್ಣ ಜಲಾವೃತಗೊಂಡು ಹಾವಾಳ ಕಡೆಯಿಂದ  ಬರುವ ವಾಹನಗಳು ಆತಂಕದಲ್ಲೇ ವಾತಾವರಣದಲ್ಲಿ ಪಟ್ಟಣವನ್ನು ಪ್ರವೇಶಿಸುವಂತಾಗಿತ್ತು. ಪಟ್ಟಣದ ಅಮಾನಿಕೆರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಕೋಡಿ ಮುಖಾಂತರ ಹರಿದು ಬಾಣಸಂದ್ರ ರಸ್ತೆಯ ಸೇತುವೆ ಕಣ್ಣುಗಳ ತುಂಬ ಹರಿಯುವ ಮೂಲಕ ಭಯದ ವಾತಾವರಣವನ್ನು ಸೃಷ್ಟಿಸಿತ್ತು.

ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯಕ್ಕೂ ಸಹ ನೀರು ನುಗ್ಗಿ ನೀರು ಹೊರ ಹಾಕಲು ಪರದಾಡಬೇಕಾಯಿತು.  ಡಿ.ಕಲ್ಕೆರೆ ಗ್ರಾಮ ಕೋಳಿ ಫಾರಂವೊಂದಕ್ಕೆ  ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ  ಸಾವಿರಾರು ಕೋಳಿ ಮರಿಗಳು ಜಲಸಮಾಧಿಯಾಗಿವೆ. ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್‌ನ  ಕಾಲಭೈರವೇಶ್ವರ ಕಲ್ಪತರು ಆಶ್ರಮದ  ಆವರಣದಲ್ಲಿದ್ದ ವೃದ್ಧಾಶ್ರಮಕ್ಕೆ  ನೀರು ನುಗ್ಗಿ ಆತಂಕ ಸೃಷ್ಟಿಸಿದೆ. ನೀರಿನ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಗ್ರಾಮೀಣ ರಸ್ತೆಗಳ ಸ್ವರೂಪ ಕಳೆದುಕೊಂಡಿವೆ. ಮಲ್ಲೂರು ಹಾಗೂ ಸೂಳೆಕೆರೆ ಕೆರೆಗಳಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಗೊಂಡ ಹಿನ್ನಲೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ  ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ತರುವೇಕೆರೆ ರೆಡ್ ಅಲರ್ಟ್: 

ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಅಪಾರ ಮಳೆಯಿಂದ ನಷ್ಟ ಸಂಭವಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಎಸ್. ಪಾಟೀಲ್ ಅವರು ಶಾಸಕ ಮಸಾಲಜಯರಾಮ್ ಅವರೊಂದಿಗೆ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಕಳೆದ ಬುಧವಾರ ರಾತ್ರಿ  ತುರುವೇಕೆರೆ ಹಾಗೂ ಕುಣಿಗಲ್ ನಲ್ಲಿ  ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಸುರಿದ ಬಗ್ಗೆ ಮಳೆಮಾಪನ ಕೇಂದ್ರಗಳು ದಾಖಲಿಸಿದ್ದು, ರೆಡ್ ಅಲರ್ಟ್ ಪ್ರದೇಶಗಳೆಂದು ಗುರುತಿಸಲಾಗಿದೆ.  ಕೆರೆ ಕೋಡಿ ಪ್ರದೇಶಗಳಿಗೆ ಸನಿಹವಿರುವ ಶಾಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಗತ್ಯವಿದ್ದರೆ ಶಾಲೆಗೆ ಆಯಾ ಶಾಲೆಯ ಮುಖ್ಯ ಶಿಕ್ಷಕರುಗಳೇ  ಸುರಕ್ಷತಾ ಕ್ರಮವಾಗಿ ಶಾಲೆಗೆ ರಜೆ  ನೀಡಬಹುದಾಗಿದೆ.  ಆಯಾ ಪ್ರದೇಶಗಳ ಪರಿಸ್ಥಿಯನ್ನಾದರಿಸಿ ಶಾಸಕರುಗಳ ನಿರ್ದೇಶನದಂತೆ ಕಾಳಜಿ ಕೇಂದ್ರ ತೆರೆದು ಸಾರ್ವಜನಿಕರ ಹಿತ ಕಾಪಾಡಲು ಆದ್ಯತೆ ನೀಡುವುದು,  ಸರಕಾರಿ ನೌಕರರು ಕೇಂದ್ರ ಸ್ಥಾನದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಾಗರಿಕರು ಎಚ್ಚರಿಕೆಯಿಂದಿರಲು ಮನವಿ: ಮಸಾಲ ಜಯರಾಮ್

ಶಾಸಕ ಮಸಾಲ ಜಯರಾಮ್ ಮಾತನಾಡಿ, ತುರುವೇಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ಅಪಾಯದ ಸ್ಥಿತಿಯನ್ನು ಮೀರಿ ಹರಿಯುತ್ತಿವೆ. ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು, ಮಳೆಯ ತೀವ್ರತೆ  ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾಗರಿಕರು ಸುರಕ್ಷಿತ ಸ್ಥಳದಲ್ಲಿರಬೇಕು, ಸುರಕ್ಷತೆಗೆ ಧಕ್ಕೆ ಬಂದರೇ ಕೂಡಲೇ ತಾಲೂಕು ಆಡಳಿತ ಅಥವಾ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದರು.

ಹಲವು ವರ್ಷಗಳ ನಂತರ ತಾಲೂಕಿನಲ್ಲಿ ಉತ್ತಮ ಮಳೆ ಸಂತಸ ತಂದಿದೆ; ಚಿದಾನಂದ್ ಎಂ.ಗೌಡ

Publicstory/prajayoga

ಹೊಸಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ವಿಪ ಸದಸ್ಯ

ಶಿರಾ: ಗ್ರಾಮೀಣ ಪ್ರದೇಶಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ವರುಣ ಕೃಪೆ ತೋರಿದ್ದು, ದಶಕಗಳ ನಂತರ ಹಲವಾರು ಕೆರೆಗಳು ಭರ್ತಿಯಾಗಿ ತುಂಬಿ ಕೋಡಿ ಬಿದ್ದಿರುವುದು ಸಂತಸ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹರ್ಷ ವ್ಯಕ್ತಪಡಿಸಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿ ಹರಿದಿದ್ದು, ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಮದಲೂರು  ಕಳ್ಳಂಬೆಳ್ಳ ಶಿರಾ ದೊಡ್ಡಕೆರೆ ಹೇಮಾವತಿ ವ್ಯಾಪ್ತಿಯ ಇತರೆ ಕರೆಗಳು ಭರ್ತಿಯಾಗಿದ್ದು ಬಿಟ್ಟರೆ ನೈಸರ್ಗಿಕವಾಗಿ ವರುಣನ ಕೃಪೆಯಿಂದ ಹಲವಾರು ಕೆರೆಗಳು ಭರ್ತಿಯಾಗಿ ಎರಡು ದಶಕವೇ ಕಳೆದಿತ್ತು. ಇದೀಗ ಕಾಮಗೊಂಡನಹಳ್ಳಿ,  ಹೆಂದೊರೆ, ಹೊಸಹಳ್ಳಿ, ವೀರಪುರ, ಕಲ್ಲಹಳ್ಳಿ, ಕರಿರಾಮನಹಳ್ಳಿ, ಹುಳಿಗೆರೆ, ರಂಗಪುರ ಸೇರಿದಂತೆ ತಾಲೂಕಿನಲ್ಲಿ ಸುರಿದ ಕುಂಭದ್ರಣ ಮಳೆಗೆ ಸುಮಾರು 25 ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿರುವುದು ಮುಂಬರುವ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಗ್ರಾಮಗಳಲ್ಲಿ ಜನನೆಮ್ಮದಿಯಿಂದ ಬದುಕಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ ಶ್ರೀರಂಗಯ್ಯ, ಸದಸ್ಯರಾದ ಮಲ್ಲಿಕಾರ್ಜುನ್, ಗಂಗಾಧರ್, ಮಾಜಿ ಸದಸ್ಯ ಚಿದಾನಂದ್, ಪ್ರಸನ್ನ, ಪುಟ್ಟಯ್ಯ, ಮುಖಂಡ ಸಿದ್ದಲಿಂಗಪ್ಪ, ಗೋಪಿ ಕುಂಟೆ ಶ್ರೀನಿವಾಸ್, ನಾದೂರು ಕುಮಾರ್, ಮಾಜಿ ತಾಪಂ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಹೆಚ್. ಎಸ್. ಪ್ರಕಾಶ್, ಶಿವಣ್ಣ, ಹನುಮಂತರಾಯ, ಪಿಡಿಓ ತಿಪ್ಪೇಸ್ವಾಮಿ, ದೊಡ್ಡ ಹನುಮಯ್ಯ ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು.

ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರೆದ ಶೋಧ ಕಾರ್ಯ

Publicstory/prajayoga

ತುರುವೇಕೆರೆ :ತಾಲೂಕಿನ ವ್ಯಾಪ್ತಿಯ ಕೊಂಡಜ್ಜಿ -ಸೊಪ್ಪನಹಳ್ಳಿ ನಡುವಿನ ಸೇತುವೆ ಬಳಿ  ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಹೋದ  ವ್ಯಕ್ತಿಗಾಗಿ ಅಗ್ನಿಶಾಮಕ ದಳ ಶೋಧನ ಕಾರ್ಯ ಮುಂದುವರೆಸಿದ್ದಾರೆ.

  ತಿಪಟೂರು  ತಾಲೂಕು ಗಡಬನಹಳ್ಳಿ ನಿವಾಸಿಗಳಾದ  ಪುಟ್ಟಸಿದ್ದಯ್ಯ (65)) ಹಾಗೂ ಅವರ ಸೋದರ ಪಟೇಲ್ ಕುಮಾರಸ್ವಾಮಿ(68) ಸಂಬಂಧಿಕರ ಮದುವೆಗೆ ತೆರಳಲು ಕೊಂಡಜ್ಜಿ ಮಾರ್ಗವಾಗಿ ಬುಧವಾರ ರಾತ್ರಿ  ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.  ಕೊಂಡಜ್ಜಿ ಹಳ್ಳದಲ್ಲಿ ಹರಿಯುತ್ತಿದ್ದ  ಮಳೆಯ ನೀರಿನ ರಭಸಕ್ಕೆ ಕಾರು ಸಹಿತ ಪಟೇಲ್ ಕುಮಾರಸ್ವಾಮಿ ಕೊಚ್ಚೊಹೋಗುವ ಮೂಲಕ  ಕತ್ತಲಲ್ಲೇ ಕಣ್ಮರೆಯಾಗಿದ್ದಾರೆ. ಅದೇ ಕಾರಿನಲ್ಲಿದ್ದ ಪುಟ್ಟಸಿದ್ದಯ್ಯ ಕಾರಿನಿಂದ ಜಿಗಿದು ನೀರು ಹರಿಯುತ್ತಿದ್ದ ದಿಕ್ಕಿನಲ್ಲಿ ಎದುರಾದ ಮರದ ಕೊಂಬೆಯನ್ನಿಡಿದು ಜೀವ ಉಳಿಸಿಕೊಂಡಿದ್ದಾರೆ.

ಹಳ್ಳದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಧ್ವನಿಯನ್ನು ಆಲಿಸಿದ ಸ್ಥಳಿಯರಾದ ಕೊಂಡಜ್ಜಿವಿಶ್ವನಾಥ್, ಆನಂದ್ ಮತ್ತು ಗೆಳೆಯರು ಸಹಾಯಕ್ಕೆ ಮುಂದಾಗಿದ್ದಾರೆ. ಹಳ್ಳದಲ್ಲಿ ಕೊಂಬೆಯನ್ನಿಡಿದು ಜೀವ ರಕ್ಷಿಸುವಂತೆ ಕೂಗಿಕೊಳ್ಳುತ್ತಿದ್ದ ಪುಟ್ಟ ಸಿದ್ದಯ್ಯನನ್ನು ಪತ್ತೆ ಹಚ್ಚಿದ್ದಾರೆ.  ಜೀವ ಭಯ ತೊರೆದು ಅಪಾಯದಲ್ಲಿದ್ದ ಪುಟ್ಟಸಿದ್ದಯ್ಯನ ಪ್ರಾಣವನ್ನು ರಕ್ಷಿಸಿದ್ದಾರೆ.

ಕಾರು ಸಹಿತ  ಸಹೋದರ ಪಟೇಲ್‌ಕುಮಾರಸ್ವಾಮಿ ಕೊಚ್ಚಿಹೋದ ವಿಚಾರವನ್ನು  ಪುಟ್ಟಸಿದ್ದಯ್ಯನಿಂದ ತಿಳಿದ ಸ್ಥಳೀಯರು  ಅಗ್ನಿಶಾಮಕ ಸಿಬ್ಬಂದಿ  ಸಹಾಯದೊಂದಿಗೆ ಶೋಧನ ಕಾರ್ಯಕ್ಕೆ ಮುಂದಾಗಿದ್ದಾರೆ.   ಬುಧವಾರ ಎಡೆಬಿಡದೇ ಸುರಿಯುತ್ತಿದ್ದ ಮಳೆ ಹಾಗೂ ಕತ್ತಲು ಶೋಧ ಕಾರ್ಯಕ್ಕೆ ತೊಡಕಾದ ಹಿನ್ನಲೆಯಲ್ಲಿ  ಶೋಧ ಕಾರ್ಯ ಸ್ಥಗಿತಗೊಳಿಸಿದ್ದರು.

ಗುರುವಾರ ಬೆಳಿಗ್ಗಿನಿಂದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಹಾಲಿಂಗ ಎಸ್ ಅವರ  ಮಾರ್ಗದರ್ಶನದಲ್ಲಿ ಬೋಟ್ ಹಾಗೂ ಕ್ರೇನ್ ಬಳಕೆ ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳದಲ್ಲಿ ಉಪವಿಭಾಗಾಧಿಕಾರಿ ಕಲ್ಪಶ್ರೀ,ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಈ.ಸತೀಶ್ ಕುಮಾರ್ ತಂದ ಸ್ಥಳದಲ್ಲಿ ಬೀಡು ಬಿಟ್ಟಿದೆ.

ಘಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ , ಎಸ್.ಪಿ.ರಾಹುಲ್ ಕುಮಾರ್ ಶಹಾಪುರ್ ವಾಡ್ ಹಾಗೂ ಸಿ.ಇ.ಓ. ವಿದ್ಯಾಕುಮಾರಿ ರವರೊಂದಿಗೆ ಶಾಸಕ ಮಸಾಲಜಯರಾಮ್  ಭೇಟಿ ನೀಡಿ  ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೇ ಶೋಧ ಕಾರ್ಯ ಕುರಿತು ಸಮಲೋಚನೆ  ನಡೆಸಿದರು.

ಪಾವಗಡ: ಮಹಾಮಳೆಯ ತುರ್ತು ಸಹಾಯವಾಣಿ ಆರಂಭ

0

Publicstory/prajayoga

ಪಾವಗಡ:  ತಾಲೂಕಿನಾದ್ಯಂತ  ಸತತವಾಗಿ ಮಹಾಮಳೆಯಾಗುತ್ತಿರುವ ಹಿನ್ನೆಲೆ ಕೆರೆ ಕಟ್ಟೆಗಳು ಹೊಡೆದು ಭೂಕುಸಿತ, ಮನೆಕುಸಿತ,  ಜನನಿಬಿಡ  ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ  ದೂರುಗಳನ್ನು ಸ್ವೀಕರಿಸಿ ತುರ್ತಾಗಿ ಕ್ರಮ ಕೈಗೊಳ್ಳಲೆಂದು ಜಿಲ್ಲಾಧಿಕಾರಿಯು ಆದೇಶಿಸಿದ್ದಾರೆ. ಇದರ ಮೇರೆಗೆ ಪಾವಗಡ ತಾಲೂಕು ಕಚೇರಿಯಲ್ಲಿ ಸಹಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು,  ದೂರವಾಣಿ ಸಂಖ್ಯೆ 08136-295573 ಸಂಖ್ಯೆಗೆ  ಸಾರ್ವಜನಿಕರು 24×7 ಕರೆ ಮಾಡಿ ತುರ್ತುಸೇವೆ ಪಡೆಯಲು ಸಂಪರ್ಕಿಸಬಹುದೆಂದು ತಹಶೀಲ್ದಾರ್ ವರದರಾಜು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.6 ರಂದು ಡಾ.ಜಿ.ಪರಮೇಶ್ವರ್ ಹುಟ್ಟು ಹಬ್ಬದ ಅಂಗವಾಗಿ ರಕ್ತಧಾನ ಶಿಬಿರ

Publicstory/prajayoga

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಛಲವಾದಿ ಮಹಾಸಭಾ ಹಾಗು ಸಿದ್ದಾರ್ಥ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಗಸ್ಟ್ 06ರ ಶನಿವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಪಾಲಿಕೆ ಸದಸ್ಯೆ ಪ್ರಭಾವತಿ ಸುಧೀಶ್ವರ್ ವಹಿಸುವರು. ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್ ರಿಜಿಸ್ಟ್ರಾರ್ ಡಾ.ಎಂ.ಜೆಡ್.ಕುರಿಯನ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ರಮೇಶ್ ಮಣ್ಣೆ, ನಗರಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯೆ ಗೀತಾ ರುದ್ರೇಶ್, ಪಾಲಿಕೆ ಸದಸ್ಯ ಮಂಜುನಾಥ್, ಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಕಾಂಗ್ರೆಸ್ ಮುಖಂಡರಾದ ಆಟೋರಾಜು, ಹೆಗ್ಗೆರೆ ಗ್ರಾಮಪಂಚಾಯಿತಿ ಸದಸ್ಯೆ ಮಮತಾ ಗುರೂಜಿ ಭಾಗವಹಿಸಲಿದ್ದಾರೆ.

ಸ್ವಯಂ ಪ್ರೇರಿತ ರಕ್ತದಾನದಲ್ಲಿ ಭಾಗವಹಿಸುವವರು ಕಾರ್ಯಕ್ರಮದ ಆಯೋಜಕರಾದ ಶಿವಪ್ರಸಾದ್.ದೂ. 7892693935 ಕ್ಕೆ ಸಂಪರ್ಕಿಸ ಬಹುದಾಗಿದೆ.

ಆ.5ರಿಂದು ಹದ್ದಿನಕಲ್ಲು ಆಂಜನೇಯ ಸ್ವಾಮಿ ದೇವಾಲಯ ಲೋಕಾರ್ಪಣೆ

Publicstory/prajayoga

ತಿಪಟೂರು : ತಾಲೂಕಿನ ಕಸಬಾ ಹೋಬಳಿ ಹೊಸಹಳ್ಳಿ-ಸುಕ್ಷೇತ್ರ ರಂಗಾಪುರಕ್ಕೆ ಹೊಂದಿಕೊಂಡಿರುವ ರಾಯರ ತೋಟದಲ್ಲಿ ಹದ್ದಿನಕಲ್ಲು ಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಮತ್ತು ಶಿಖರ ಕಳಶ ಪ್ರತಿಷ್ಠಾನಾ ಮಹೋತ್ಸವ ಇದೇ ಆಗಸ್ಟ್ 5 ರಿಂದ 7ರವರೆಗೆ ನಡೆಯಲಿದೆ ಎಂದು ಹದ್ದಿನಕಲ್ಲು ಆಂಜೀನೆಯಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ ತಿಳಿಸಿದರು.

ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಆಗಸ್ಟ್ 5 ರಿಂದ 7 ದೇವಾಲಯದ ಲೋಕಾರ್ಪಣೆ ಹಾಗೂ ಶಿಖರ ಕಳಶ ಪ್ರತಿಷ್ಠಾಪನೆ ಹಾಗೂ ಆಗಸ್ಟ್ 06 ರಂದು ಧಾರ್ಮಿಕ ಸಮಾರಂಭ ಏರ್ಪಡಿಸಲಾಗಿದೆ. ಕೆರಗೋಡಿ ರಂಗಾಪುರ ಗುರು ಪರದೇಶಿಕೇಂದ್ರ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಇಮ್ಮಡಿ ಕರಿ ಬಸವದೇಶಿಕೇಂದ್ರ ಮಹಾಸ್ವಾಮೀಜಿ,  ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಪೂರ್ಣಾನಂದಪುರಿ ಸ್ವಾಮೀಜಿ, ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳು, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಗೃಹಸಚಿವ ಅರಗಜ್ಞಾನೇಂದ್ರ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಯುವ ಮುಖಂಡ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಕೆ.ಷಡಕ್ಷರಿ ಸೇರಿದಂತೆ ಟ್ರಸ್ಟ್ ಗೌರವಾಧ್ಯಕ್ಷ ಡಾ. ಶ್ರೀಧರ್, ಭಾಗವಹಿಸಲಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ  ಸರಿಗಮಪ ಖ್ಯಾತಿಯ ಕಂಬದರಂಗಯ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ  ಹದ್ದಿನಕಲ್ಲು ಆಂಜೀನೆಯಸ್ವಾಮಿ ಟ್ರಸ್ಟ್‌ನ ಉಪಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ರಂಗಸ್ವಾಮಿ, ಸಹಕಾರ್ಯದರ್ಶಿ ಅರವಿಂದ್, ಖಜಾಂಚಿ ಕುಮಾರಸ್ವಾಮಿ, ಜಿ.ಎನ್.ಪ್ರಕಾಶ್, ಕೆರೆಗೋಡಿ ದೇವರಾಜು, ಸಿದ್ದರಾಮಯ್ಯ, ಮುಂತಾದವರು ಉಪಸ್ಥಿತರಿದರು.

ಗಂಜಿ ಕೇಂದ್ರಕ್ಕೆ ಬರುವಂತೆ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಮನವಿ

0

Publicstory/prajayoga

ಮಧುಗಿರಿ: ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು ತಗ್ಗುಪ್ರದೇಶದಲ್ಲಿರುವ ನಿವಾಸಿಗಳು ಸಮೀಪದ ಗಂಜಿ ಕೇಂದ್ರಕ್ಕೆ ರವಾನೆಯಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಮನವಿ ಮಾಡಿದ್ದಾರೆ.

ಶಾಲೆಗೆ ರಜೆ ಘೋಷಣೆ

ನದಿ ತೀರದ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕೆರೆ-ಕಟ್ಟೆಗಳಲ್ಲಿ ನೀರು ಕಾಣಲಾಗುತ್ತಿದೆ. ಆದರೆ, ಈ ಬಾರಿಯ ಪೂರ್ವ ಮುಂಗಾರಲ್ಲೇ ಬಹುತೇಕ ಜಲಮೂಲಗಳು ಭರ್ತಿಯಾಗಿವೆ. ವೀರಾಪುರ, ವೀರನಾಗೇನಹಳ್ಳಿ, ರೆಡ್ಡಿ ಹಳ್ಳಿ, ಸೂರನಾಗೇನಹಳ್ಳಿ ಚನ್ನಸಾಗರ ಇಮ್ಮಡಗೊಂಡನಹಳ್ಳಿ ರೆಡ್ ಅರ್ಲಟ್ ಪ್ರದೇಶವೆಂದು ಗುರುತಿಸಲಾಗಿದೆ ಈ ಗ್ರಾಮಗಳು ಜಯಮಂಗಲಿ ನದಿಯ ಸಮೀಪ ವಿರುವುದರಿಂದ ಗ್ರಾಮವು ಸಂಪೂರ್ಣ ವಾಗಿ ಜಲಾವೃತ್ತವಾಗಿದೆ ಹಾಗೂ ಗ್ರಾಮದ 80ಹೆಚ್ಚು ಕುಟುಂಬಗಳನ್ನು ಸ್ಥಳಾಂತರಕ್ಕೆ ಇಗಾಗಲೇ ಸೂಚನೆ ನೀಡಲಾಗಿದ್ದು ಗ್ರಾಮದ ಸರ್ವೋದಯ ಶಾಲೆಯ ಬಳಿ ಗಂಜಿ ಕೇಂದ್ರ ತೆರಯಲು ಸಂಪುರ್ಣ ವಾದ ಸಿದ್ಧತೆಗಳು ಆರಂಭಸಿಲಾಗಿದ್ದು ಸುಮಾರು 15 ವಿದ್ಯುತ್ ಕಂಬಗಳು ನದಿಯ ರಭಸಕ್ಕೆ ಮುರಿದು ಬಿದ್ದಿವೆ ಎಂದರು.

ಸಾರ್ವಜನಿಕರ ಸೇವೆಯಲ್ಲಿ ನಮ್ಮ ಅಧಿಕಾರಿಗಳು 24/7 ಸಿದ್ದರಿದ್ದು ಸಮಸ್ಯೆ ತೊಂದರೆಯಾದಲ್ಲಿ ತಕ್ಷಣ ತಹಶಿಲ್ದಾರ್ ಅಥವ ಉಪವಿಭಾಗಧಿಕಾರಿಗಳಿಗೆ ಕರೆ ಮಾಡಿ ಎಂದರು. ಅವಶ್ಯಕತೆ ಬಿದ್ದಲ್ಲಿ ಜನರ ಸ್ಥಳಾಂತರಕ್ಕಾಗಿ ಬೆಂಗಳೂರಿನಿಂದ ಎರಡು ಬೋಟ್ ಗಳನ್ನು ತರುವ ವ್ಯವಸ್ಥೆ ಮಾಡಲಾಗಿದ್ದು ಎನ್ ಡಿ ಆರ್ ಎಫ್ ತಂಡದ ನೆರವು ಪಡೆಯಲಾಗುತ್ತದೆ ಎಂದರು.

ಈ ವೇಳೆ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್, ಉಪ ವಿಭಾಗಧಿಕಾರಿ ಸೋಮಪ್ಪ ಕಡಕೋಳ, ತಹಶಿಲ್ದಾರ್ ಸುರೇಶ್ ಆಚಾರ್ ಹಾಗೂ ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಮಳೆ‌ಹಾನಿ‌ ಪರಿಶೀಲನೆಗೆ ಟ್ರ್ಯಾಕ್ಟರ್ ಏರಿದ ಡಿಸಿ: ಬ್ರೇಕಿಂಗ್

0

Publicstory/prajayoga

ಜಿಲ್ಲಾಧಿಕಾರಿಯ ಅವಿರತ ಕಾರ್ಯಕ್ಕೆ ಎಲ್ಲೆಡೆಯೂ ಶ್ಲಾಘನೆ ವ್ಯಕ್ತ

ಮಧುಗಿರಿ:  ಜಮೀನುಗಳು, ಮನೆ.ಶಾಲೆಗಳು ಮುಳುಗಡೆಯಾದ ಸ್ಥಳಗಳಿಗೆ  ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಟ್ರ್ಯಾಕ್ಟರ್ ಹತ್ತಿ ಬಂದಿದ್ದು ಗಮನ ಸೆಳೆಯಿಸತು.

ಮಳೆ ಹಾನಿ ಪರಿಶೀಲನೆಗೆ ಬಂದಿದ್ದ ವೇಳೆ ಕಾರಿಳಿದು ಟ್ರ್ಯಾಕ್ಟರ್ ನಲ್ಲಿ ಧಾವಿಸಿ ವೀಕ್ಷಣೆ ನಡೆಸಿದ್ದಾರೆ. ಅವರು ನಿರಂತರವಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸುತ್ತಿರುವ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಯಮಂಗಲಿ ತೀರದ ಚೆನ್ನಸಾಗರ, ಸೂರನಾಗೇನಹಳ್ಳಿ, ಎಂ.ಹೊಸಹಳ್ಳಿ, ಕಾಳೇನಹಳ್ಳಿ, ಸಿ.ವೀರಾಪುರ, ಕೋಡ್ಲಾಪುರ, ಇಮ್ಮುಡಗಹಳ್ಳಿ ಗ್ರಾಮಗಳು ಜಲಾವೃತಗೊಂಡಿವೆ. ಗ್ರಾಮದ ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿಂತ ನೀರಿನ ಹರಿವಿನ ಪ್ರಮಾಣ ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದೆ. ಮಳೆ ನೀರಿನಿಂದ ಬಾದಿತರಾದವರಿಗೆ ರಕ್ಷಣೆ ನೀಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮ ಕಾರ್ಯಪಡೆಗೆ ಈಗಾಗಲೇ ನಿರ್ದೇಶನ ನೀಡಿದ್ದು, ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಈ ವೇಳೆ ಜಿಲ್ಲಾಧಿಕಾರಿ  ತಿಳಿಸಿದರು.

ಮುಳುಗಿದ ಗಾರ್ಡನ್ ರಸ್ತೆ: ಡೀಸಿಗೆ ಮೊರೆ ಬಿದ್ದ ಜನ

Publicstory


Tumkuru: ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿರುವ ದೊಡ್ಡ ಚರಂಡಿ (ರಾಯಗಾಲುವೆ) ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮತ್ತು ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಟಿ.ಹೆಚ್. ರಾಮು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಹಾಗೂ ಸರ್ಕಾರಿ ಆಡಳಿತ ಯಂತ್ರದ ಕೂದಲೆಳೆಯ ಅಂತರದಲ್ಲಿರುವ ಚಿಕ್ಕಪೇಟೆಯ ಗಾರ್ಡನ್ರಸ್ತೆಯ ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ನಿವಾಸಿಗಳು ಮಳೆ ಬಂದಾಗ ಕಲುಷಿತ ನೀರು ಸಂಗ್ರಹವಾಗಿ ನರಕಯಾತನೆಯನ್ನು ಪಡುವ ಸ್ಥಿತಿ ಇದೆ.

ಇದೇ ಭಾಗದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಮಳೆನೀರು ಸಂಗ್ರಹವಾಗಿ ಶವಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತದೆ. ಅರ್ಧಕ್ಕೆ ನಿಂತಿರುವ ದೊಡ್ಡಚರಂಡಿ (ರಾಯಗಾಲುವೆ) ಸಮಸ್ಯೆಯನ್ನು ಇತ್ಯಾರ್ಥಪಡಿಸುವಂತೆ ತುಮಕೂರು ಮಹಾನಗರಪಾಲಿಕೆಗೆ ಹಲವು ಬಾರಿ ಮನಿವಿ ಸಲ್ಲಿಸಿದರು.

ಯುವ ಮುಖಂಡ ಎಸ್. ರಾಘವೇಂದ್ರ ಮಾತನಾಡಿ, ತುಮಕೂರು ಅಮಾನಿಕೆರೆಯಿಂದ ಪ್ರಾರಂಭವಾಗುವ (ರಾಯಗಾಲುವೆ) ದೊಡ್ಡಚರಂಡಿಯು ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸ್ಮಶಾನದ ಮುಂಭಾಗ ದೊಡ್ಡ ಚರಂಡಿ ಅರ್ದಕ್ಕೆ ನಿಂತು ಸುಮಾರು ವರ್ಷಗಳೇ ಕಳೆದಿವೆ ಈ ದೊಡ್ಡ ಚರಂಡಿಯೂ ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧಿಕರಣ ಘಟಕಕ್ಕೆ ಸಂಪರ್ಕವನ್ನು ಹೊಂದುತ್ತದೆ ಭೀಮಸಂದ್ರ ಕೆರೆಗೆ ಸಂಪರ್ಕ ಹೊಂದುವ ಚರಂಡಿಯು ಅರ್ದಕ್ಕೆ ನಿಂತು ಹಲವು ವರ್ಷಗಳೆ ಕಳೆದರೂ ಸಹ ಇದುವರೆಗೂ ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಇಲ್ಲಿನ ಸಮಸ್ಯೆಯನ್ನು ಇತ್ಯಾರ್ಥಪಡಿಸುವಂತೆ ಹಲವು ಬಾರಿ ಮನವಿಗಳನ್ನು ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಮಳೆ ಬಂದಾಗ ಕೊಳಚೆ ನೀರು ಸರಗವಾಗಿ ಹರಿಯಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೆ ಇಲ್ಲಿನ ಹೊಲ ಗದ್ದೆಗಳಿಗೆ ಪ್ಲಾಸ್ಟಿಕ್, ಕಸಕಡ್ಡಿ ಕಲುಷಿತ ನೀರು ಸೇರಿ ವಾಸನೆ ಬರುವುದರಿಂದ ಇಲ್ಲಿನ ಜನರು ವಾಸಮಾಡುವುದೇ ಕಷ್ಟವಾಗಿದೆ. ಅಲ್ಲದೆ ಇರುವ ಒಂದು ಚಿಕ್ಕ ರಸ್ತೆಯೂ ಸಹ ಮುಚ್ಚಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಕಿಡಿಕಾರಿದರು.

ಮಹಾನಗರಪಾಲಿಕೆಗೆ ಹಲವು ಬಾರಿ ಮನವಿ ನೀಡಲಾಗಿದೆ. ಅಮೃತ್ ಯೋಜನೆಯಡಿಯಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿ ಇದುವರೆಗೂ ಆರಂಬಿಸಿಲ್ಲ. ಇಲ್ಲಿನ ನಿವಾಸಿಗಳಿಗೆ ಬರಿ ಆಶ್ವಾಸನೆಗಳನ್ನು ನೀಡುತ್ತಿದ್ದು ಜಿಲ್ಲಾಧಿಕಾರಿಗಳು ಸಮಸ್ಯೆಯ ಇತ್ಯಾರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಹೋರಾಟ ಸಮಿತಿಯ ಟಿ. ಗೋವಿಂದರಾಜು, ಗವಿರಾಜು, ಗಂಗಣ್ಣ ಸೇರಿದಂತೆ ಇತರರು ಇದ್ದರು.

ಕಲ್ಲೂರು ಶಾಲೆ‌ ಮಕ್ಕಳ ಮುಡಿಗೆ ಕಿರೀಟ

0

Publicstory


Gubbi; ಕಡಬಾ ಹೋಬಳಿಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಕಲ್ಲೂರಿನ ಪ್ರಗತಿ ಶಾಲೆಯು ಗಂಡು ಮಕ್ಕಳ ವಾಲಿಬಾಲ್ ಥ್ರೋ ಬಾಲ್ ಪ್ರಥಮ ಬಹುಮಾನ ಹಾಗೂ ಕಬಡಿ ದ್ವಿತೀಯ ಬಹುಮಾನವಿಜೇತರಾಗಿದ್ದಾರೆ.

ಹೆಣ್ಣು ಮಕ್ಕಳ ವಾಲಿಬಾಲ್ ಪ್ರಥಮ ಸ್ಥಾನ ಪಡೆದರು.

ಗುಂಡು ಎಸೆತ, ಇನ್ನೂರು ಮೀಟರ್ ಓಟದಲ್ಲಿ ತೃತೀಯ ಹಾಗೂ ದ್ವಿತೀಯ ಸ್ಥಾನ ಪಡೆದರು.