Publicstory/prajayoga
ಪಾವಗಡ: ತಾಲೂಕಿನಾದ್ಯಂತ ಸತತವಾಗಿ ಮಹಾಮಳೆಯಾಗುತ್ತಿರುವ ಹಿನ್ನೆಲೆ ಕೆರೆ ಕಟ್ಟೆಗಳು ಹೊಡೆದು ಭೂಕುಸಿತ, ಮನೆಕುಸಿತ, ಜನನಿಬಿಡ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೂರುಗಳನ್ನು ಸ್ವೀಕರಿಸಿ ತುರ್ತಾಗಿ ಕ್ರಮ ಕೈಗೊಳ್ಳಲೆಂದು ಜಿಲ್ಲಾಧಿಕಾರಿಯು ಆದೇಶಿಸಿದ್ದಾರೆ. ಇದರ ಮೇರೆಗೆ ಪಾವಗಡ ತಾಲೂಕು ಕಚೇರಿಯಲ್ಲಿ ಸಹಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ದೂರವಾಣಿ ಸಂಖ್ಯೆ 08136-295573 ಸಂಖ್ಯೆಗೆ ಸಾರ್ವಜನಿಕರು 24×7 ಕರೆ ಮಾಡಿ ತುರ್ತುಸೇವೆ ಪಡೆಯಲು ಸಂಪರ್ಕಿಸಬಹುದೆಂದು ತಹಶೀಲ್ದಾರ್ ವರದರಾಜು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.