ತುಮಕೂರು; ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿರುವ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್, ರೋಹಿತ್ ಚಕ್ರವರ್ತಿ ತಮಗೆ ವಹಿಸಿದ ಜವಾಬ್ದಾರಿಯನ್ನು ಮೀರಿ ಮಹನೀಯರ ಮತ್ತು ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಪೂಲೆ, ನಾರಾಯಣಗುರು, ವಾಲ್ಮೀಕಿ, ಕೆಂಪೇಗೌಡ ಮುಂತಾದ ದಾರ್ಶನೀಕರ ವಿಚಾರಧಾರೆಗಳನ್ನು ವಿಕೃತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಈ ದುಷ್ಕೃತ್ಯದ ಹೊಣೆಯನ್ನು ಹೊತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಬೇಕೆಂದು ಸರ್ಕಾರವನ್ನು ಕೆ.ದೊರೈರಾಜ್ ರವರು ಆಗ್ರಹಿಸಿದರು.
ನಂತರ ಮಾತನಾಡಿದ ಪಂಡಿತ್ ಜವಾಹರ್ ಡಾ.ಬಿ,ಆರ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲವನ್ನು ಒಳಗೊಳ್ಳುವ ತತ್ವವನ್ನು ರೋಹಿತ್ ಚಕ್ರತೀರ್ತ ಸಮಿತಿ ಬದಿಗಿಟ್ಟಂತೆ ಕಾಣುತ್ತಿದ್ದು ಇದೇ ಸರ್ಕಾರ ೨೦ ವರ್ಷಗಳು ಮುಂದುವರಿದರೇ ಗಾಂಧೀಜಿ ಚರಿತ್ರೆಯನ್ನೇ ಹೊಸಕಿಹಾಕುವ ಹುನ್ನಾರವನ್ನು ಹೊಂದಿದೆ ಎಂದರು.
ಕೂಡಲೇ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡ ಸೈಯದ್ ಮುಜೀಬ್ ಒತ್ತಾಯಿಸಿದರು.
ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಮಯ್ಯ ಪರಿಷ್ಕಣೆಯಿಂದಾಗಿ ಬೊಕ್ಕಸದ ಮೇಲಾಗಿರುವ ವೆಚ್ಚವನ್ನು ಶಿಕ್ಷಣ ಸಚಿವರು ಮತ್ತು ರೋಹಿತ್ ಚಕ್ರತೀರ್ಥರಿಂದಲೇ ಭರಿಸಬೇಕು ಎಂದು ಆಗ್ರಹಿಸಿದರು.
SFI ಜಿಲ್ಲಾದ್ಯಕ್ಷರಾದ ಶಿವಣ್ಣ. ಈ ಮಾತನಾಡಿ ತುಮಕೂರು ವಿ.ವಿ.ಯಲ್ಲೂ ಅಂಬೇಡ್ಕರ್ ಪಠ್ಯ ಕೈ ಬಿಡಲಾಗಿದ್ದು ಅದನ್ನು ಕೂಡಲೆ ಸೇರ್ಪಡೆ ಮಾಡಬೇಕು ಮತ್ತು ರಾಜ್ಯಸರ್ಕಾರ ಪಠ್ಯ ತಿರುಚುವ ಕೆಲಸ ಕೈ ಬಿಡಬೆಕು ಎಂದು ಒತ್ತಾಯಿಸಿದರು.
ಪಠ್ಯಪರಿಷ್ಕರಣೆಯಿಂದ ವಿದ್ಯಾರ್ಥಿಗಳ ಅರಿವಿನ ಮತ್ತು ಬೆಳವಣಿಗೆಯನ್ನು ಸಂಪೂರ್ಣವಾಗಿ ಸರ್ಕಾರ ನಿರ್ಲಕ್ಷಿಸಿದೆ ಬೇಗನೆ ಹಳೇ ಪಠ್ಯಪುಸ್ತಕ ಕ್ರಮಗಳನ್ನೇ ಎಲ್ಲಾ ಶಾಲಾ ಮಕ್ಕಳಿಗೆ ಸಿಗುವಂತಾಗಬೇಕು ಎಂದು ರಂಗದಾಮಯ್ಯ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ರೈತಸಂಘಟನೆಯ ಬಿ.ಉಮೇಶ್. ಕೊಳಗೇರಿ ಸಮಿತಿಯ ಅರುಣ್ ಮಾತನಾಡಿದರು. ಪ್ರತಿಭಟನೆ ನೇತೃತ್ವನ್ನು ಸುಬ್ರಮಣ್ಯ, ತಿರುಮಲಯ್ಯ, ವೆಂಕಟೇಶ್, ನಾಗರಾಜು ಹನುಮಂತರಾಯಿ,ರವೀಶ್.ಲೋಕೇಶ್ ರಫೀಕ್.ಗುಲ್ಜಾರ್.ಮಹಾಲಕ್ಷ್ಮಿ ಗಂಗಾಮ್ಮ. ಮುಂತಾದವರು ವಹಿಸಿದ್ದರು
ತುಮಕೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿ ಕೋಮುವಾಧಿಕರಣ ವಿರೋಧಿಸಿ ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್ ರವರು ಪ್ರಸಕ್ತ ಸಾಲಿನ ಶಾಲಾ ಪಠ್ಯಗಳಲ್ಲಿ ಇರಬಹುದಾದ ಸೂಕ್ಷö್ಮ ಸಂಕೀರ್ಣ ವಿಷಯಗಳನ್ನು ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರವರ್ತಿ ತಮಗೆ ವಹಿಸಿದ ಜವಾಬ್ದಾರಿಯನ್ನು ಮೀರಿ ಮಹನೀಯರ ಮತ್ತು ಈ ನಾಡಿನ ಸಾಕ್ಷಿ ಪ್ರಜ್ಞೆಗಳಾದ ಕುವೆಂಪು, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಪೂಲೆ, ನಾರಾಯಣಗುರು, ವಾಲ್ಮೀಕಿ, ಕೆಂಪೇಗೌಡ ಮುಂತಾದ ದಾರ್ಶನೀಕರ ವಿಚಾರಧಾರೆಗಳನ್ನು ವಿಕೃತಗೊಳಿಸಿ ಶೈಕ್ಷಣೀಕ ಕ್ಷೇತ್ರದಲ್ಲಿ ಸಂವಿಧಾನ ಬಾಹೀರವಾಗಿ ಕೇಸರೀಕರಣವನ್ನು ಸೇರಿಸುವ ಹುನ್ನಾರದಿಂದ ಪರಿಷ್ಕೃತ ಪಠ್ಯಕ್ರಮವನ್ನು ಪರಿಷ್ಕರಣಕ್ಕೆ ಮುಂದಾದ ದುಷ್ಕೃತ್ಯವನ್ನು ಖಂಡಿಸಿ ಈ ಹೊಣೆಯನ್ನು ಹೊತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಬೇಕೆಂದು ಸರ್ಕಾರವನ್ನು ಕೆ.ದೊರೈರಾಜ್ ರವರು ಆಗ್ರಹಿಸಿದರು.
ನಂತರ ಮಾತನಾಡಿದ ಪಂಡಿತ್ ಜವಾಹರ್ ಡಾ.ಬಿ,ಆರ್ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲವನ್ನು ಒಳಗೊಳ್ಳುವ ತತ್ವವನ್ನು ರೋಹಿತ್ ಚಕ್ರತೀರ್ತ ಸಮಿತಿ ಬದಿಗಿಟ್ಟಂತೆ ಕಾಣುತ್ತಿದ್ದು ಇದೇ ಸರ್ಕಾರ ೨೦ ವರ್ಷಗಳು ಮುಂದುವರಿದರೇ ಗಾಂಧೀಜಿ ಚರಿತ್ರೆಯನ್ನೇ ಹೊಸಕಿಹಾಕುವ ಹುನ್ನಾರವನ್ನು ಹೊಂದಿದೆ ಎಂದರು.
ಹಾಲಿ ಶಿಕ್ಷಣ ಸಚಿವರು ಸಬ್ಯತೆಯನ್ನು ಮೀರಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಅವೈಜ್ಞಾನಿಕವಾಗಿ ನಾಡಿನ ಎಲ್ಲಾ ಮಹನೀಯರ ಮೌಲ್ಯಗಳನ್ನು ತಿರುಚುವ ಮತ್ತು ಪಠ್ಯಕ್ರಮಗಳನ್ನು ಕೈಬಿಡುವ ಮತ್ತು ಕೋಮುವಾದಿಕರಣಕ್ಕೆ ಮುಂದಾಗಿರುವ ಕ್ರಮಗಳನ್ನು ಖಂಡಿಸಿ ಕೂಡಲೇ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡ ಸೈಯದ್ ಮುಜೀಬ್ ಒತ್ತಾಯಿಸಿದರು.
ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಮಯ್ಯ ಮಾತನಾಡಿ ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸಬೇಕು ಪರಿಷ್ಕರಣಾ ಪಟ್ಟಿಯ ಹೆಸರಿನಲ್ಲಿ ಬೊಕ್ಕಸದ ಮೇಲಾಗಿರುವ ವೆಚ್ಚವನ್ನು ಶಿಕ್ಷಣ ಸಚಿವರು ಮತ್ತು ರೋಹಿತ್ ಚಕ್ರತೀರ್ತರಿಂದಲೇ ಬರಿಸಬೇಕು ಎಂದು ಆಗ್ರಹಿಸಿದರು.
ಪಠ್ಯಪರಿಷ್ಕರಣೆಯಿಂದ ವಿದ್ಯಾರ್ಥಿಗಳ ಅರಿವಿನ ಮತ್ತು ಬೆಳವಣಿಗೆಯನ್ನು ಸಂಪೂರ್ಣವಾಗಿ ಸರ್ಕಾರ ನಿರ್ಲಕ್ಷಿಸಿದೆ ಬೇಗನೆ ಹಳೇ ಪಠ್ಯಪುಸ್ತಕ ಕ್ರಮಗಳನ್ನೇ ಎಲ್ಲಾ ಶಾಲಾ ಮಕ್ಕಳಿಗೆ ಸಿಗುವಂತಾಗಬೇಕು ಎಂದು ರಂಗದಾಮಯ್ಯ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ರೈತಸಂಘಟನೆಯ ಬಿ.ಉಮೇಶ್. ಕೊಳಗೇರಿ ಸಮಿತಿಯ ಅರುಣ್. ವಿದ್ಯಾರ್ಥಿ ಸಂಘಟನೆಯ ಶಿವಣ್ಣ ಮಾತನಾಡಿದರು. ಪ್ರತಿಭಟನೆ ನೇತೃತ್ವನ್ನು ಸುಬ್ರಮಣ್ಯ, ತಿರುಮಲಯ್ಯ, ವೆಂಕಟೇಶ್, ನಾಗರಾಜು ಹನುಮಂತರಾಯಿ,ರವೀಶ್.ಲೋಕೇಶ್ ರಫೀಕ್.ಗುಲ್ಜಾರ್ ಮುಂತಾದವರು ವಹಿಸಿದ್ದರು
ಸಾಗರದ ಭೋರ್ಗರೆತ ದಂತೆ ನಿನ್ನ ಉಸಿರಾಟವೂ. ನನ್ನನ್ನು ಚಿಂತನೆಗೆ ತಳ್ಳುವುದು.
ದಡದಲ್ಲಿ ನಿಂತ ಹಡಗು ಸುರಕ್ಷಿತ…. ಹಾಗಂತ ಪ್ರೀತಿ ಅಲೆಯಲ್ಲಿ ತೇಲದೆ ಇರುವುದೆ?
ಸಮುದ್ರ – series 3
ಮತ್ಸ್ಯ ಕನ್ಯೆ ತಿಮಿಂಗಿಲವಾಗಿ ನುಂಗಿದ್ದು ಯಾವಾಗ?
ದ್ವೀಪಗಳು ಬರೇ ಮೇಲೆ ಕಾಣಲು ಕೆಳಗೆ…. ಒಂದೇ ಸಮುದ್ರ ನಮ್ಮಿಬ್ಬರ ಹಾಗೆ.
ದಣಿದು ಬಂದರೆ ಕಾಲು ತೊಳೆದು ಕರೆಯುವೆಯೆಲ್ಲ….
ನನ್ನ ಪ್ರೀತಿಗೂ ಅಲೆಯಂತೆ ಏರಿಳಿತ ಇವೆ… ಸಹಿಸಿಕೊ.
ಪೂರ್ಣ ಚಂದಿರನ ನೋಡಿ… ಉಬ್ಬದ ಸಾಗರವೇ
ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರಿಗೆ ಸಾಗರ ಬೇರೆಯದೇ ಭಾವ .
ತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ 24 (ಎನ್ಎಸ್ಯುಐ) ಕಾರ್ಯಕರ್ತರುಗಳಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಬುಧವಾರ ಸಂಜೆ ಮಂಜೂರಾಗಿದೆ.
ಜೂ.1ರಂದು ಘಟನೆ ನಡೆದ ದಿನವೇ ಎನ್ಎಸ್ಯುಐನ 15 ಹಾಗೂ ಜೂ.2ರಂದು 7 ಹಾಗೂ ಇಬ್ಬರು ಒಟ್ಟು 24 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ಇನ್ನೂ ಬಂಧಿತ ಜೂ.3 ರಿಂದ ಕಳೆದ 5-6 ದಿನಗಳಿಂದಲೂ ಜಾಮೀನಿಗಾಗಿ ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬಂಧಿತ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಶನಿವಾರಕ್ಕೆ ಜಾಮೀನು ತೀರಸ್ಕøತಗೊಂಡಿದ್ದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನಿಗಾಗಿ ಪುನಃ ಅರ್ಜಿ ಸಲ್ಲಿಸಿದ್ದು, ಬುಧವಾರ ಸಂಜೆ ಜಾಮೀನು ಮಂಜೂರಾಗಿದೆ.
ಜಾಮೀನು ಮಂಜೂರಾಗಿದ್ದು ಅಧಿಕೃತವಾಗಿ ನ್ಯಾಯಾಲಯದಿಂದ ಆದೇಶದ ಪ್ರತಿಯೂ ಸಂಜೆ ಸಿಗಲಿದ್ದು ಅದನ್ನು ನಗರಠಾಣೆ ಹಾಗೂ ತುಮಕೂರಿನ ಕಾರಾಗೃಹಕ್ಕೆ ಕಳುಹಿಸುವ ವೇಳೆಗೆ ಸಂಜೆ ಆಗಲಿದ್ದು ವಕೀಲರೇ ತಿಳಿಸುವವಂತೆ ಗುರುವಾರ ಬೆಳ್ಳಿಗ್ಗೆ ಎಲ್ಲರಿಗೂ ಬಿಡುಗಡೆಯ ಭಾಗ್ಯ ದೊರೆಯಲಿದೆ.
ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿ ಭಾರತದ ಪಶ್ಚಿಮ ಭಾಗದಲ್ಲಿರುವ ಒಂದು ಪ್ರಬುದ್ಧವಾದ ಪರ್ವತ ಶ್ರೇಣಿಯಾಗಿದೆ. ಪಶ್ಚಿಮ ಘಟ್ಟ ಮಹಾರಾಷ್ಟ್ರ – ಗುಜರಾತ್ ಗಡಿ ಭಾಗದಲ್ಲಿರುವ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗಿ ಕನ್ಯಾಕುಮಾರಿಯವರೆಗೆ ಹರಡಿಕೊಂಡಿದೆ. ಸುಮಾರು ೧೬೦೦ ಕಿಮಿ ಉದ್ದವಿರುವ ಸಹ್ಯಾದ್ರಿ ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಹಬ್ಬಿದೆ.
ಸಹ್ಯಾದ್ರಿ ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯ ನೆಲೆಗಳಲ್ಲಿ ಒಂದಾಗಿದ್ದು, ಸುಮಾರು 7402 ವಿವಿಧ ಹೂ ಬಿಡುವ( Angiosperms) ಸಸ್ಯಗಳನ್ನು ಹೊಂದಿದೆ. ಅದರಲ್ಲೂ ಅಂದಾಜು 1273 ವಿವಿಧ ಸಸ್ಯಗಳಿಗೆ ತವರೂರು ಆಗಿದೆ. ಹಾಗೆಯೇ 139 ಬಗೆಯ ಸಸ್ತನಿಗಳು, 508 ಪ್ರಭೇದದ ಪಕ್ಷಿಗಳು ಮತ್ತು 179 ಉಭಯವಾಸಿಗಳಿಗೆ ನೆಲೆಯಾಗಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳು ಸಹ ಪಶ್ಚಿಮಘಟ್ಟಗಳಲ್ಲಿ ನೆಲೆಸಿವೆ. ನಾಲ್ಕು ಬಗೆಯ ಅರಣ್ಯ ವಲಯಗಳನ್ನು ಇಲ್ಲಿ ನೋಡಬಹುದಾಗಿದೆ ಯಾವುದೆಂದರೆ ಉತ್ತರ – ಪಶ್ಚಿಮ ಘಟ್ಟಗಳ ಎಲೆ ಉದುರಿಸುವ ಕಾಡುಗಳು, ಮಳೆಕಾಡುಗಳು, ದಕ್ಷಿಣ – ಪಶ್ಚಿಮ ಎಲೆ ಉದುರಿಸುವ ಕಾಡುಗಳು ಹಾಗೂ ದಕ್ಷಿಣ – ಪಶ್ಚಿಮ ಮಳೆಕಾಡುಗಳು. ಇನ್ನು ಹೆಚ್ಚಿನ ಎತ್ತರದಲ್ಲಿನ ಭಾಗದಲ್ಲಿ ಸದಾ ಹಸಿರಿನ ಕಾಡುಗಳಿದ್ದು ( Evergreen forest) ಲಾರೆಸಿ ( Lauraceae), ರುಬಿಯೇಸಿ ( Rubiaceae), ಮೊರೆಸಿ (Moraceae) ಕುಟುಂಬಕ್ಕೆ ಸೇರಿದ ಮರಗಳು ಹೆಚ್ಚಾಗಿ ಕಾಣಬರುತ್ತದೆ.
ಜಗತ್ತಿನ ಬೇರೆ ಯಾವ ಭಾಗಗಳಲ್ಲೂ ಕಾಣದ ಸುಮಾರು 84 ಜಾತಿಯ ದ್ವಿಚರಿಗಳು, 16 ಪಕ್ಷಿಗಳು, 7 ಸಸ್ತನಿಗಳು ಪಶ್ಚಿಮ ಘಟ್ಟದಲ್ಲಿ ನೋಡಬಹುದಾಗಿದೆ. ಇಂತಹ ಸಂಪತ್ತನ್ನು ಹೊಂದಿರುವ ಶ್ರೇಣಿಯನ್ನು ಸಂರಕ್ಷಿಸುವ ಸಲುವಾಗಿ ಭಾರತ ದೇಶವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಂತೆಯೇ ಸುಮಾರು 13 ರಾಷ್ಟ್ರೀಯ ಉದ್ಯಾನವನಗಳು, ರಕ್ಷಿತ ಅರಣ್ಯಗಳು, ವನ್ಯಜೀವಿ ಧಾಮಗಳನ್ನು ರಚಿಸಲಾಗಿದೆ. ಪಶ್ಚಿಮ ಘಟ್ಟ ಸಾವಿರಾರು ಪ್ರಾಣಿ ಪಕ್ಷಿಗಳ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳನ್ನು ಸಹ ಒಳಗೊಂಡಿದೆ.
ಸಹ್ಯಾದ್ರಿ ಕಾಡಿನಲ್ಲಿ ಹಲವಾರು ಔಷದೀಯ ಗುಣಗಳಿರುವ ಸಸ್ಯಗಳನ್ನು ಕಾಣಬಹುದು ಅದನ್ನು ಬಳಸಿ ವಿವಿಧ ಗಿಡಮೂಲಿಕೆಗಳನ್ನು ಅರಣ್ಯ ವಾಸಿಗಳು ತಯಾರಿಸುತ್ತಾರೆ ಹಾಗೂ ಅದನ್ನು ಹಲವಾರು ಕಾಯಿಲೆಗಳಿಗೆ ಮದ್ಧಾಗಿ ಬಳಸುತ್ತಾರೆ. ಅಷ್ಟಲ್ಲದೆ ನಮ್ಮ ದೇಶದಲ್ಲಿ ಆಯುರ್ವೇದ ಔಷಧ ಪದತ್ತಿಯು ಬಹಳ ಪ್ರಾಚೀನ ಕಾಲದಿಂದಲೂ ಅನುಸರಿಸುತ್ತ ಬಂದಿದೆ. ಔಷಧಿ ಸಸ್ಯಗಳ ತೊಗಟೆ, ಬೇರು, ನಾರು, ಎಲೆ, ಹೂ, ಹಣ್ಣು ಮುಂತಾದವನ್ನು ಬಳಸಿ ಗಿಡಮೂಲಿಕೆಗಳನ್ನು ತಯಾರಿಸುತ್ತಾರೆ. ಅದು ಎಷ್ಟೋ ಕಾಯಿಲೆಗಳಿಗೆ ರಾಮಬಾಣವಾಗಿದೆ. ಆಯುರ್ವೇದ ಪದ್ಧತಿಯ ಪಿತಾಮಹರಾದ ಶುಶೃತ ಮತ್ತು ಚರಕರು ಸಂಸ್ಕೃತದಲ್ಲಿ ಬರೆದಿರುವ ಪುಸ್ತಕದಲ್ಲಿ ಅಂದಾಜು 700 ಔಷದೀಯ ಗುಣಗಳಿರುವ ಸಸ್ಯವನ್ನು ಹೆಸರಿಸಿದ್ದಾರೆ. ಇಂತಹ ಮಹತ್ವದ ಬರವಣಿಗೆಗಳನ್ನು ಇಟ್ಟುಕೊಂಡು ಕೆಲವು ಪಶ್ಚಿಮ ಘಟ್ಟಗಳಲ್ಲಿ ಸಿಗುವ ನೈಸರ್ಗಿಕ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಕುರಿತು ಪರಿಚಯ ಮಾಡಬಯಸುತ್ತೇನೆ.
ಅಪೋರೋಸ ಸುಮಾರು 15 ಮಿ ಎತ್ತರ ಬೆಳೆಯುವ ಯುಫೋರ್ಬಿಯೇಸಿ ಪರಿವಾರಕ್ಕೆ ಸೇರಿದ ಮರವಾಗಿದೆ.
ಎಲೆಗಳು ಸಾಮಾನ್ಯ ಹಸಿರಾಗಿದ್ದು ಅದರ ತೊಟ್ಟು ದಪ್ಪವಾಗಿರುತ್ತದೆ. ಇದರ ಪುಷ್ಪ ವಿನ್ಯಾಸವನ್ನು ಕಂಡರೆ ಗಂಡು ಹೂಗಳು ತುದಿಯಲ್ಲಿ ಹಾಗೂ ತೂಗು ಪುಷ್ಪ ಮಂಜರಿಯಲ್ಲಿ (catkin) ಹಾಗು ಹೆಣ್ಣು ಹೂಗಳು ಸೀಮಾಕ್ಷ ಪುಷ್ಪ ಮಂಜರಿಯಲ್ಲಿ (cymose) ಕಾಣ ಸಿಗುತ್ತದೆ. ಇದರ ಹಣ್ಣುಗಳನ್ನು ಕ್ಯಾಪ್ಸೂಲ್ ಎಂದು ಕರೆಯುತ್ತಾರೆ. ಇಂತಹ ಮರಗಳನ್ನು ಪಶ್ಚಿಮ ಘಟ್ಟ ಹಾಗೂ ಶ್ರೀಲಂಕಾದ ದಟ್ಟ ಕಾಡುಗಳಲ್ಲಿ ನೋಡಬಹುದು.
ಉಪಯೋಗಗಳು:
ಬೇರುಗಳ ಕಷಾಯವನ್ನು ಜ್ವರ ಮತ್ತು ಚರ್ಮ ಕಾಯಿಲೆಗಳಿಗೆ ಬಳಸುತ್ತಾರೆ.
ಹಣ್ಣುಗಳನ್ನು ತಿನ್ನಬಹುದು ಹಾಗೂ ಅದರಲ್ಲಿ Vit-C ಹೇರಳವಾಗಿರುತ್ತದೆ.
ವಾಟೆ ಹುಳಿ ಮರವು ಸದಾ ಹಸಿರು ಕಾಡುಗಳಲ್ಲಿ ಬೆಳೆಯುವ ಹಲಸಿನ ಜಾತಿಗೆ ಸೇರಿದ ಒಂದು ಮರವಾಗಿದೆ. ಇದರ ಎತ್ತರ ಸುಮಾರು 35 ಮೀ ಇದ್ದು ಇದರ ಎಲೆಗಳು ಸಾಮಾನ್ಯ, ಎಲೆಗಳ ಜೋಡಣೆಯ ಕ್ರಮ ಅಕ್ಕ – ಪಕ್ಕ ವಾಗಿರುತ್ತದೆ. ಇದರ ಪುಷ್ಪ ವಿನ್ಯಾಸದಲ್ಲಿ, ಗಂಡು ಹೂಗಳು ಗೊಂಡೆ (Head) ವಿನ್ಯಾಸದಲ್ಲಿ ಹಾಗೂ ಹೆಣ್ಣು ಹೂಗಳು ಮತ್ತೊಂದು ಗೊಂಡೆ ಪುಷ್ಪ ವಿನ್ಯಾಸದಲ್ಲಿ ನೋಡಬಹುದಾಗಿದೆ. ಇದರ ಹಣ್ಣುಗಳನ್ನು ಸೋರೋಸಿಸ್ ಎಂದು ಕರೆಯುತ್ತಾರೆ. ಈ ಮರವು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಸಿಗುವ ಒಂದು ಅಪರೂಪದ ಮರವಾಗಿದೆ.
ಉಪಯೋಗಗಳು:
ಇದರ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಬಿಸಿಲಿನಲ್ಲಿ ಒಣಗಿಸಿ, ಪುಡಿಮಾಡಿ ಅದನ್ನು ಹುಳಿಯ ಪದಾರ್ಥವಾಗಿ ಅಡುಗೆಗೆ ಬಳಸುತ್ತಾರೆ.
ತೊಗಟೆಯನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ಹಸುವಿನ ಹಾಲಿನಲ್ಲಿ ಬೆರೆಸಿ ಹರ್ಪಿಸ್ಗೆ ಲೇಪನ ಮಾಡುತ್ತಾರೆ.
ತೊಗಟೆಯ ಕಷಾಯವನ್ನು ಜೆಂತು ಹುಳುವಿನ ನಿವಾರಣೆಗೆ ಬಳಸುತ್ತಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಪ್ರೊ.ಮೇಜರ್ ಡಿ.ಚಂದ್ರಪ್ಪ (76ವರ್ಷ) ಅವರು ಇಂದು ಮಧ್ಯಾಹ್ನ 2 ಗಂಟೆಯಲ್ಲಿ ನಿಧನ ಹೊಂದಿದರು.
ಚಂದ್ರಪ್ಪ ಅವರು ಕಳೆದ ಒಂದು ವಾರದಿಂದ ಅನಾರೋಗ್ಯ ಕ್ಕೆ ತುತ್ತಾಗಿ ಸಿದ್ಧಗಂಗಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.
ಮೇಜರ್ ಡಿ.ಚಂದ್ರಪ್ಪ ಅವರು ತಮ್ಮ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ನಂತರ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕಳೆದ ಎರಡು ಕ.ಸಾ.ಪ.ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಚಟುವಟಿಕೆ ಯಿಂದಲೇ ಇದ್ದ ಚಂದ್ರಪ್ರನವರು ಕಳೆದ ವಾರ ತೀವ್ರ ಅನಾರೋಗ್ಯ ಕ್ಕೆ ತುತ್ತಾಗಿ ಆಸ್ಪತ್ರೆ ಗೆ ದಾಖಲಾಗಿದ್ದರು.
ಮೃತರು ಮೂವರು ಹೆಣ್ಣು ಮಕ್ಕಳು, ಪತ್ನಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಳೆ ಅಂತ್ಯಕ್ರಿಯೆ :- ಗುಬ್ಬಿ ತಾಲ್ಲೂಕಿನ ತಿಪ್ಪೂರು ಪಾಳ್ಯದ ಅವರ ತೋಟದಲ್ಲಿ ನಾಳೆ (ಜೂನ್ 9) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಮುದ್ರ / ಸಾಗರ ದಿನ ಸಾಗರ ದಿನವನ್ನು ಜೂನ್ 8 ಆಚರಿಸುತ್ತಾರೆ. ಜಲ ಸಂಪತ್ತು , ಜಲ ಮಾಲಿನ್ಯ ತಡೆಯುವಿಕೆ ಇತ್ಯಾದಿ ಇದರ ಉದ್ದೇಶ. ಆದಾಗ್ಯೂ, ಕವಿ ಮನಸ್ಸಿನವರಿಗೆ ಸಾಗರ ಬೇರೆಯದೇ ಭಾವ .
ಸಾಗರ
ನೀನು ಸಾಗರದಂತೆ.. ನನ್ನೆಡೆಗೆ ಒಮ್ಮೆ ಚಿಪ್ಪು ಇನ್ನೊಮ್ಮೆ ಮುತ್ತು. ಶಂಖು … ಕಸ .. ಏನನ್ನು ಎಸೆಯುವೆ ಎಂದು ಎಸೆದಾಗಲೇ ಗೊತ್ತಾಗುವುದು.
ನೀನು ಕೈ ಬೀಸಿ ಕರೆದದ್ದಕ್ಕೆ… ತಾನೇ ನಾನು ಬಂದದ್ದು.
ನಿನ್ನೊಂದಿಗೆ ನನ್ನ ಕನಸುಗಳು… ಸಮುದ್ರ ದಂಡೆಯ ಮರಳ ಮೇಲೆ ಕಟ್ಟಿದ ಮನೆಯಂತೆ.
ಕೊರಟಗೆರೆ :- ತಾಲ್ಲೂಕಿನ ಬೋಡಬಂಡೇನಹಳ್ಳಿ ಗ್ರಾಮದ ರಮೇಶ್ ನಾಗರತ್ನಮ್ಮ ಎಂಬ ದಂಪತಿಗೆ ಸೇರಿದ 22 ಮೇಕೆಗಳನ್ನು ತಡರಾತ್ರಿ ಕಳ್ಳತನ ಮಾಡಲಾಗಿದೆ.
ಅಕ್ಕಪಕ್ಕದ ಮನೆಗಳ ಬಾಗಿಲುಗಳಿಗೆ ಬೀಗ ಹಾಕಿದ ಖದೀಮರು ಸುಮಾರು 3 ಲಕ್ಷ ಬೆಲೆಯ ಮೇಕೆಗಳನ್ನು ಕದ್ದು ಹೋಗಿದ್ದಾರೆ.
ಮೇಕೆಗಳ ಒಡತಿ ನಾಗರತ್ನಮ್ಮ ಮಾತನಾಡಿ :-
ಸಾಲವನ್ನು ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ನಮ್ಮ ಮುಂದಿನ ಭವಿಷ್ಯಕ್ಕೆ ಎಂದು 22ಮೇಕೆಗಳನ್ನು ಸಾಕಿದ್ದೆವು. ಆದರೆ ತಡರಾತ್ರಿ ಎಲ್ಲರೂ ಮಲಗಿದ ಸಮಯವನ್ನು ನೋಡಿದ ಕಳ್ಳರು 1ಮೇಕೆಯನ್ನು ಬಿಡದಂತೆ ಕದ್ದುಕೊಂಡು ಹೋಗಿದ್ದಾರೆ. ನಮ್ಮ ಜೀವನಕ್ಕೆ ಆಧಾರವಾಗಿದ್ದ ಮೇಕೆಗಳನ್ನು ನಮಗೆ ಹುಡುಕಿಸಿ ಕೊಡಿ ಎಂದು ಅಂಗಲಾಚಿದರು.
ಪಕ್ಕದ ಮನೆಯ ಯುವತಿ ಸಿಂಧು ಮಾತನಾಡಿ :- ರಾತ್ರಿ 11 ಗಂಟೆವರೆಗೂ ಎಲ್ಲರೂ ಮಾತನಾಡಿಕೊಂಡು ಹೊರಗಡೆಯೇ ಇದ್ದೆವು ತದನಂತರ ಮಲಗಲು ಒಳಹೋದಾಗ 1ಗಂಟೆ ಸುಮಾರಿಗೆ ಹೊರಗಿನಿಂದ ನಮ್ಮ ಮನೆಗಳ ಲಾಕ್ ಮಾಡಿದ್ದಾರೆ. ಹೊರಗಡೆ ಬರಬೇಕಾದರೆ ಬಾಗಿಲು ಓಪನ್ ಆಗಲಿಲ್ಲ. ಅಕ್ಕಪಕ್ಕದ ಮನೆಯವರಿಗೆ ಫೋನ್ ಮೂಲಕ ಮಾತನಾಡಿ ಡೋರ್ ಓಪನ್ ಮಾಡಿಸಿಕೊಂಡು ಹೊರಬಂದು ಏನಾಗಿದೆ ಎಂದು ನೋಡಿದಾಗ ಮೇಕೆಗಳನ್ನು ಕದ್ದುಕೊಂಡು ಹೋಗಿರುವುದು ನಮಗೆ ತಿಳಿಯಿತು ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಿಪಟೂರು : ನಗರದ ವಿನಾಯಕ ನಗರದಲ್ಲಿ ನ್ಯಾಯಾಧೀಶರ ನಿವಾಸದಲ್ಲಿ ಕಳ್ಳತನ ನಡೆದಿದ್ದು ಸೋಮವಾರ ರಾತ್ರಿ ಪ್ರಕರಣ ತಿಪಟೂರು ನಗರಠಾಣೆಯಲ್ಲಿ ದೂರು ದಾಖಲಾಗಿದೆ.
ತಿಪಟೂರು ನ್ಯಾಯಾಲಯದ ನ್ಯಾಯಾಧೀಶ ಚಂದನ್ರ ಕುಟುಂಬಸ್ಥರು ಮದುವೆಯ ಸಂಬಂಧ ಮೇ.24 ರಿಂದ ಜೂ.5ರವರಗೆ ಊರಿನಲ್ಲಿ ಇರುವುದಿಲ್ಲ.
ಇದನ್ನು ಗಮನಿಸಿದ ಕಳ್ಳರು ಹೊಂಚು ಹಾಕಿ ಹಿಂಭಾಗಿಲಿನಿಂದ ಬಂದು ಕಳ್ಳತನ ಮಾಡಿದ್ದು ಜೂ.6 ರಂದು ಸೋಮವಾರ ಮನೆಗೆ ಬಂದಾಗ ಅವರ ಗಮನಕ್ಕೆ ಬಂದಿದೆ. ಪ್ರಕರಣದಲ್ಲಿ ಕಳ್ಳರು ಮನೆಯಲ್ಲಿನ ಸಿಸಿ ಕ್ಯಾಮರದ ಡಿವಿಆರ್ ಕಳ್ಳತನ ಮಾಡಿದ್ದಾರೆ.
ಸುಮಾರು 1 ಲಕ್ಷ 11 ಸಾವಿರ ಮೌಲ್ಯದ ಕಳ್ಳತನ ನಡೆದಿದ್ದು 46 ಸಾವಿರ ನಗದು, 600 ಗ್ರಾಂ ಬೆಳ್ಳಿ ವಸ್ತುಗಳು, ಸಿಸಿ ಕ್ಯಾಮರಾದ ಡಿವಿಆರ್ ಕಳುವಾಗಿದೆ.
ತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್ಯುಐ) ವಿದ್ಯಾರ್ಥಿಗಳನ್ನು ನ್ಯಾಯಾಲಯದ ಮುಂಭಾಗದಲ್ಲಿ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕಡೆಗೂ ಜೂ.5ರ ಸೋಮವಾರ ರಾತ್ರಿ ದೂರು ದಾಖಲಾಗಿದೆ.
ದೂರಿನಲ್ಲಿ ಕೈಗಳಿಂದ ಹಲ್ಲೆ, ಪ್ರಾಣಬೆದರಿಕೆ, ಗಾಡಿ ಜಕಂ ಮಾಡಿರುವ ಬಗ್ಗೆ ಜಯಸಿಂಹ ಮಾದಿಹಳ್ಳಿ ಮತ್ತು ಇತರರು ಎಂದು ದೂರು ದಾಖಲಾಗಿದೆ.
ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿರುವ ಬಗ್ಗೆ ಜೂ.2 ರಂದೆ ನಗರಠಾಣೆಗೆ ದೂರು ನೀಡಿದರು ದಾಖಲಿಸಲು ನಿರಾಕರಿಸಿದ್ದ ಪೊಲೀಸರು ರಾಜ್ಯದಾದ್ಯಂತ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಜೂ.6 ರಾತ್ರಿ ದೂರು ದಾಖಲಿಸಿದ್ದಾರೆ. ಪೊಲೀಸರ ನಡೆಗೆ ವ್ಯಾಪಕ ಖಂಡನೇ ವ್ಯಕ್ತವಾಗಿದ್ದು ಆಡಳಿತ ಪಕ್ಷದ ಕೈಗೊಂಬೆ ಆಗಿದ್ದಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅನೇಕ ಮುಖಂಡರು ಆರೋಪಿಸಿದ್ದರು.
ಜೂ.1ರಂದು ಘಟನೆ ನಡೆದ ದಿನವೇ ಎನ್ಎಸ್ಯುಐನ 15 ಹಾಗೂ ಜೂ.2ರಂದು 7 ಒಟ್ಟು 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.
ಇನ್ನೂ ಬಂಧಿತ ವಿದ್ಯಾರ್ಥಿಗಳಿಗೆ ಕಳೆದ 5-6 ದಿನಗಳಿಂದಲೂ ಜಾಮೀನಿಗಾಗಿ ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬಂಧಿತ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಶನಿವಾರಕ್ಕೆ ಜಾಮೀನು ತೀರಸ್ಕೃತಗೊಂಡಿದ್ದು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನಿಗಾಗಿ ಪುನಃ ಅರ್ಜಿ ಸಲ್ಲಿಸಲಾಗಿದೆ.