Thursday, May 7, 2026
Google search engine
Home Blog Page 115

ಕೊನೆಗೂ ರಾಜೀನಾಮೆ ಘೋಷಿಸಿದ‌ ಸಚಿವ ಈಶ್ವರಪ್ಪ

Publicstory


ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದ್ದಾರೆ.

ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು ನಾಳೆ ರಾಜೀನಾಮೆ ನೀಡುತ್ತೇನೆ. ನಿನ್ನೆಯೇ ನೀಡಬೇಕೆಂದಿದ್ದೆ. ಆದರೆ ಕೆಲವರು ಬೇಡ ಎಂದಿದ್ದರು ಎಂದು ಹೇಳಿದರು.

ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ನನಗೆ ಹೇಳಿದ್ದಾರೆ. ನಾಳೆ ರಾಜೀನಾಮೆ ಸಲ್ಲಿಸುವವರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಹೇಳಿದರು.

ಈಶ್ವರಪ್ಪ ಅವರ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ಸಂತೋಷ ಪಾಟೀಲ ಆತ್ನಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಈಶ್ವರಪ್ಪ ಮೊದಲ ಆರೋಪಿಯಾಗಿದ್ದಾರೆ..

ಈಶ್ವರಪ್ಪ ರಾಜೀನಾಮೆ ಗೆ ಒತ್ತಾಯಿಸಿ ಕಾಂಗ್ರೆಸ್ ತೀವ್ರ ಪ್ರತಿಭಟನೆಯಲ್ಲಿ ತೊಡಗಿತ್ತು.

ಬಿಜೆಪಿಗೆ ತೀವ್ರ ಮುಖಭಂಗದ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯುವಂತೆ ಹೈ ಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.

ಭಾರತೀಯ ಮಹಿಳೆಯರ ಬಾಳಿನ ನಿಜ ಬೆಳಕಿನ ಸೂರ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

0

ರಾಧಾ ಬಿ.ರಮೇಶ್


“ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಮಾಪನವಾಗಿ ಪರಿಗಣಿಸಬೇಕು” -ಡಾಕ್ಟರ್ ಬಿ ಆರ್ ಅಂಬೇಡ್ಕರ್ .

ಪಾಶ್ಚಾತ್ಯ ವಿದ್ಯಾಭ್ಯಾಸ ಹಾಗೂ ಪ್ರೇರಣೆಯಿಂದ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗಾಗಿ ಶ್ರಮಿಸಿದರು .ಹದಿನೆಂಟು ನೂರ ನಲವತ್ತ ಎಂಟರಲ್ಲಿ ಜ್ಯೋತಿಬಾ ಪುಲೆಯವರು ವಿದ್ಯೆಯಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಶಾಲೆಯನ್ನು ಪ್ರಾರಂಭ ಮಾಡಿದರು .

ಬಾಲ್ಯವಿವಾಹ
ವಿಧವಾ ಪದ್ಧತಿ.
ಶಿಕ್ಷಣದ ಹಕ್ಕು ನಿರಾಕರಣೆ ಆಸ್ತಿಹಕ್ಕು ನಿರಾಕರಣೆಯಂಥ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದ್ದರು .

ಆದರೆ ಮಹಿಳೆಯ ವ್ಯಕ್ತಿತ್ವದ ಶೋಷಣೆಯ ವಿವಿಧ ಮಗ್ಗಲುಗಳ ಬಗ್ಗೆ ಆಳವಾಗಿ ಚಿಂತಿಸಿ ಮಹಿಳೆಯರು ತಮ್ಮದಲ್ಲದ ಕಾರಣಕ್ಕಾಗಿ ಹಕ್ಕುಗಳಿಂದ ವಂಚಿತರಾಗಿರುವ ರೆಂದು ಧಾರ್ಮಿಕ ಸಾಮಾಜಿಕ ರಾಜಕೀಯ ಹಕ್ಕುಗಳನ್ನು ಸಂವಿಧಾನ ದತ್ತವಾಗಿ ನೀಡಲು ಶ್ರಮಿಸಿದ ವ್ಯಕ್ತಿ ಡಾಕ್ಟರ್ ಬಿ ಆರ್.ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕೂಡು ಕುಟುಂಬ ಯೋಜನೆ ವಿಧಾನವನ್ನು ಜನಪ್ರಿಯಗೊಳಿಸಬೇಕೆಂದು ಹೇಳಿದ್ದರು .

ಮದುವೆಯಾದ ಹೆಣ್ಣು ಗಂಡನ ಪಕ್ಕಾ ಸರಿಸಮಾನಳಾಗಿ ನಿಲ್ಲಬೇಕು ದಾಸಿ ಅಂತಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು .

ಮಹಿಳೆಯರು ಎದುರಿಸಬೇಕಾದ ದೈಹಿಕ ಕಷ್ಟಗಳ ಕುರಿತು ಅವಳು ನಿಭಾಯಿಸಬೇಕಾದ ಜವಾಬ್ದಾರಿ ಯನ್ನು ಕುರಿತು ಅವರಲ್ಲಿ ಸ್ಪಷ್ಟತೆಯಿತ್ತು .

ಸಾಮಾಜಿಕ ಬದಲಾವಣೆಯನ್ನು ಬಯಸಬೇಕಾದರೆ ಅದಕ್ಕೆ ಸೂಕ್ತ ಕಾನೂನಿನ ಚೌಕಟ್ಟಿನ ಅವಶ್ಯಕತೆ ಮನಗಂಡಿದ್ದರು .
ಅಂಬೇಡ್ಕರರ ವಿದ್ವತ್ತು ಚಿಂತನಾಶಕ್ತಿ ಸಂಘಟನಾ ಸಂಕಲ್ಪಗಳ ಕಾರಣವಾಗಿ ಅಂಬೇಡ್ಕರ್ ಸ್ವತಂತ್ರ ಭಾರತದ ಪ್ರಥಮ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದರು .

ಸಾಮಾಜಿಕ ಸಮಾನತೆಯ ಪರಿಕಲ್ಪನೆಗಳಿಗೆ ಎಡೆಮಾಡಿಕೊಡುವ ಹಿಂದೂ ಸಂಹಿತೆ ಮಸೂದೆ ಅಥವಾ ಹಿಂದೂ ಕೋಡ್ ಬಿಲ್ ಅನ್ನು ನಿರೂಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು .

ಮಹಿಳಾ ಸಮಾನತೆಯ ಹಕ್ಕುಗಳನ್ನು ಎತ್ತಿಹಿಡಿಯುವ ಹಿಂದೂ ಸಂಹಿತೆ ಮಸೂದೆ ಯಲ್ಲಿ 7 ಪ್ರಸ್ತಾಪಗಳಿದ್ದವು.

೧ ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿಯ ಪಾಲು .
೩ವಿಧವೆಯರು ಪಡೆದ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು .೩ಬಹುಪತ್ನಿತ್ವ ನಿರಾಕರಣೆ .೪ಅಂತರ್ಜಾತಿ ವಿವಾಹಕ್ಕೆ ಅವಕಾಶ .೫ಹೆಣ್ಣು ಮಕ್ಕಳಿಗೆ ವಿವಾಹ ವಿಚ್ಛೇದನಕ್ಕೆ ಮನವಿ ಸಲ್ಲಿಸುವ ಹಕ್ಕು .೬ಪೋಷಕತ್ವ .೭ವೈಯಕ್ತಿಕ ಆಸ್ತಿ ಪದ್ದತಿಗೆ ಕಾನೂನು ಮಾಡುವುದು .

ಮೊದಲಿದ್ದ ಹಲವು ತೆರನಾದ ಮದುವೆ ಪದ್ಧತಿ ರದ್ದುಗೊಳಿಸಿ ಏಕಪತ್ನಿತ್ವವನ್ನು ಪ್ರತಿಪಾದಿಸಿದರು. ವಿವಾಹ ವಿಚ್ಛೇದನದ ನಿಯಮಗಳು ವಿಸ್ತಾರಗೊಳಿಸಲ್ಪ ಟ್ಟವು .ಶಾಸ್ತ್ರೋಕ್ತ ವಿವಾಹ ಹಾಗೂ ನಾಗರೀಕ ವಿವಾಹ ಎಂಬ ಎರಡೂ ಪದ್ಧತಿಗಳಲ್ಲಿ ನಾಗರಿಕ ವಿವಾಹ ಕಾನೂನುಬದ್ದ ಕಳಿಸಲ್ಪಟ್ಟಿತು .

ಶಾಸ್ತ್ರೋಕ್ತ ವಿವಾಹ ವಿಚ್ಛೇದನಕ್ಕೆ ಅವಕಾಶವಿರಲಿಲ್ಲ ಆದರೆ ಪ್ರಸ್ತುತ ಮಸೂದೆಯ ವಿಚ್ಚೇದನಕ್ಕೆ ಮಾನ್ಯ ಮಾಡಿತು .

ವಧುವು ವರದಕ್ಷಿಣೆ ರೂಪದಲ್ಲಿ ತವರಿನಿಂದ ತರುವ ಆಸ್ತಿಯನ್ನು ಭವಿಷ್ಯದಲ್ಲಿ ಆಕೆಗೆ ಭದ್ರತೆ ಒದಗಿಸುವ ಸಲುವಾಗಿ ಟ್ರಸ್ಟ್ ನ ಆಸ್ತಿ ಎಂದು ಪರಿಗಣಿಸಿ ಆಕೆ ನಿರ್ಗತಿಕಳ ಆಗುವುದನ್ನು ತಪ್ಪಿಸುವುದು .ವಿವಾಹ ಹಾಗೂ ದತ್ತು ಪಡೆಯುವ ವಿಷಯಗಳಲ್ಲಿ ಜಾತಿ ಭೇದವನ್ನು ತೊಡೆದು ಹಾಕಲ್ಪಟ್ಟಿತು.

ವಿಧವೆ ಪಡೆದ ಪಾಲಿನ ಮೇಲೆ ಆಕೆಗಿದ್ದ ಭಾಗಶಃ ಸ್ವಾಮ್ಯವನ್ನು ಸಂಪೂರ್ಣ ಹಕ್ಕನ್ನಾಗಿ ಪರಿವರ್ತಿಸಿರುವುದು ಮೊದಲಿದ್ದ ವಾರಸುದಾರಿಕೆ ಪದ್ದತಿಯಲ್ಲಿ ಸ್ತ್ರೀ ವಾರಸುದಾರಳು ವಾರಸುದಾರಳ ಸ್ಥಿತಿಯನ್ನು ಬಡವಳು /ಶ್ರೀಮಂತಳು .ವಿವಾಹಿತೆ /ಅವಿವಾಹಿತೆ .ಸಂತಾನ ಉಳ್ಳವಳೂ /ಬಂಜೆ ಎಂಬ ಭೇದಗಳನ್ನು ವೇದಗಳ ಮೂಲಕ ವಾರಸುದಾರಿಕೆ ಹಕ್ಕನ್ನು ನಿರಾಕರಿಸಲ್ಪಟ್ಟಿತ್ತು. ಆದರೆ ಪ್ರಸ್ತುತ ಸಂಹಿತೆಯಲ್ಲಿ ಎಲ್ಲ ಭೇದಗಳನ್ನು ಅನೂರ್ಜಿತಗೊಳಿಸಿ ಎಲ್ಲಾ ಸ್ತ್ರೀಯರನ್ನು ವಾರಸುದಾರ ಳೆಂದು ಮಾನ್ಯ ಮಾಡಲಾಗಿದೆ .

ಆಸ್ತಿಯ ಮೇಲೆ ಇದ್ದ ಜನ್ಮಸಿದ್ಧವಾದ ಹಕ್ಕು
ಅಂದರೆ ವಂಶಾವಳಿಯ ಸದಸ್ಯರಿಗೆ ಆಸ್ತಿ ಸೇರುತ್ತಿತೆ ವಿನಃ ಮೃತರ ಸಂತಾನಕ್ಕೆಲ್ಲ ಇದನ್ನು ತೆಗೆದು ಹಾಕಿ ಬದುಕಿ ಉಳಿದಿರುವ ವಾರಸುದಾರರ ಹಕ್ಕನ್ನು ಮಾನ್ಯ ಮಾಡಿರುವುದು .ದಿವಂಗತ ತಂದೆಯ ಆಸ್ತಿಯಲ್ಲಿ ಅರ್ಧದಷ್ಟು ಪಾಲನ್ನು ಹೆಣ್ಣು ಸಂತಾನ ಪಡೆಯುವ ಹಕ್ಕನ್ನು ಕಾನೂನುಬದ್ಧಗೊಳಿಸಿರುವುದು ವಧುವು ವರದಕ್ಷಿಣೆ ರೂಪದಲ್ಲಿ ತವರಿನಿಂದ ತರುವ ಆಸ್ತಿಯನ್ನು. ಭವಿಷ್ಯದ ಲಿ ಆಕೆಗೆ ಭದ್ರತೆ ಒದಗಿಸುವ ಸಲುವಾಗಿ ಟ್ರಸ್ಟ್ ನ ಆಸ್ತಿ ಎಂದು ಪರಿಗಣಿಸಿ ಆಕೆ ನಿರ್ಗತಿಕ ಳಾಗುವುದನ್ನು ತಪ್ಪಿಸುತ್ತದೆ.

ಮೊದಲಿದ್ದ ಕಾನೂನಿನ ಪ್ರಕಾರ 1ಹೆಣ್ಣು ತನ್ನ ಗಂಡನ ಜೊತೆ ಸಂಸಾರ ಮಾಡದಿದ್ದರೆ ಆಕೆಗೆ ಜೀವನಾಂಶ ಪಡೆಯುವ ಹಕ್ಕು ಇರಲಿಲ್ಲ .

ಪ್ರಸ್ತುತ ಮಸೂದೆಯಲ್ಲಿ ಹೆಂಡತಿ ಗಂಡನಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದಲ್ಲಿ ಆಕೆ ಜೀವನಾಂಶ ಹಕ್ಕುದಾರಳು ಎಂದು ಪರಿಗಣಿಸುತ್ತದೆ .

ಹಿಂದೂ ಕೋಡ್ ಬಿಲ್ ನಿಂದ ವರ್ಣ ಹಾಗೂ ವರ್ಗ ಬೇಧಗಳು
ಲಿಂಗ ಭೇದ ಭಾವನೆಗಳು. ಆರ್ಥಿಕ ಅಸಮಾನತೆಗಳು ತೊಲಗಿ
ಸಮಾಜ ಸಮಗ್ರ ವಿಕಾಸಕ್ಕೆ ನಾಂದಿ ಹಾಡುವುದು ಎಂದು ಅಂಬೇಡ್ಕರ್ ಭಾವನೆ . ಸಮುದಾಯವನ್ನು ಏಕಸೂತ್ರಕ್ಕೆ ಒಳಪಡಿಸಲು ಹಿಂದೂ ಕೋಡ್ ಬಿಲ್ ಅಗತ್ಯ ಎಂದು ಮನಗಂಡಿದ್ದರು .ಆದರೆ ಹಲವರು ಹಿಂದೂ ಸಂಹಿತೆ ಮಸೂದೆ ಗೆ ತೀವ್ರವಾದ ಅಸಮಾಧಾನ ತೋರಿದರು ಇದರ ವಿರುದ್ಧ ಹಲವು ಪ್ರತಿಭಟನಾ ಸಭೆಗಳು ನಡೆದವು ಸದನದ ಒಳಗೂ ಹೊರಗೂ ವಿರೋಧಗಳು ವ್ಯಕ್ತವಾದವು. ಪುರುಷಪ್ರಧಾನ ಸಮಾಜಕ್ಕೂ. ಕುಟುಂಬ ವ್ಯವಸ್ಥೆಗೂ. ಬದಲಾವಣೆ ತರಬಯಸಿದ್ದ ಹಿಂದೂ ಕೋಡ್ ಬಿಲ್ ಮೂರರಿಂದ 4ವರ್ಷ ಸಂಸತ್ತಿನಲ್ಲಿ ಚರ್ಚೆಗೊಳಗಾಯಿತು ಚರ್ಚೆ ಪರಿಪೂರ್ಣವಾಗದೆ ಮತಕ್ಕೆ ಹಾಕಿದಾಗ೨೮/೨೩ ಅಂತರದಲ್ಲಿ ಬೆಂಬಲವಿಲ್ಲದೆ ತಿರಸ್ಕೃತವಾಯಿತು.

ಸಮಾಜ ಸುಧಾರಣೆಗೆ ಬಹುಮುಖ್ಯವಾದ ಹಿಂದೂ ಕೋಡ್ ಬಿಲ್ ಬೆಂಬಲವಿಲ್ಲದೆ ತಿರಸ್ಕೃತವಾದಾಗ ಅಂಬೇಡ್ಕರ್ ಅತೀವ ನೊಂದು ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು .ಪುನಃ ನೆಹರೂ ಅವರು ಸರ್ಕಾರ ರಚಿಸಿದಾಗ ಅಂಬೇಡ್ಕರರ ಹಿಂದೂ ಕೋಡ್ ಬಿಲ್ ನ ಸುಧಾರಣೆಗಳು ಸರಕಾರದ ಮುಖ್ಯ ಆದ್ಯತೆ ಆಯಿತು . ಎಲ್ಲಾ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತೆ ಆಯಿತು .

…”ಪ್ರಕಾಶಪಡಿಸುವ ಹಣತೆಯಂತೆ ಇರು. ಬೆಳಕಿಗಾಗಿ ಬೇರೆಯವರ ಆಶ್ರಯಿಸದಿರು. ಯಾರಿಗೂ ವಶವಾಗದಿರು. ನಿನ್ನಲ್ಲಿ ನೀನು ನಂಬಿಕೆಯಿಡು. ನಿನಗೆ ನೀನೇ ಮಾರ್ಗದರ್ಶಕಳಾಗಿರು. ವಿವೇಕದಲ್ಲಿ ಆಶ್ರಯ ಪಡೆದು ಪ್ರಾಮಾಣಿಕಳಾಗಿರು- ಇದು ಅಂಬೇಡ್ಕರ್ ಆಶಯವಾಗಿದೆ


ಶ್ರೀಮತಿ ರಾಧ ಬಿ .ರಮೇಶ್ .
ಲೇಖಕಿ, ತುಮಕೂರು .

ಅತ್ಯಾಚಾರದ ಹೇಳಿಕೆ: ಸ್ವಾಮೀಜಿ ಬಂಧನ

ಪಬ್ಲಿಕ್ ಸ್ಟೋರಿ


ಮುಸ್ಲಿಂ ಸಮುದಾಯದ ವಿರುದ್ಧ ಅತ್ಯಾಚಾರದ ಹೇಳಿಕೆ ನೀಡಿದ ಸ್ವಾಮೀಜಿ ಭಜರಂಗದಾಸ ಮುನಿ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಮೆರವಣಿಗೆ ವೇಳೆ ಮಾತನಾಡಿದ ಸ್ವಾಮೀಜಿ, ಹಿಂದೂ ಹುಡುಗಿಯರನ್ನು ಕಿಚಾಯಿಸಿದರೆ ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಪೊಲೀಸರ ಎದುರೇ ಸ್ವಾಮೀಜಿ ಈ ರೀತಿ ಹೇಳಿರುವ ವಿಡಿಯೊ ದೇಶದಾದ್ಯಂತ ವೈರಲ್ ಆಗಿತ್ತು.

ಇದಾದ ಹತ್ತು ದಿನಗಳ ಬಳಿಕ ಸ್ವಾಮೀಜಿ ಅವರನ್ನು ಸೀತಾಪುರದಲ್ಲಿ ಬಂಧಿಸಿರುವುದಾಗಿ ಉತ್ತರ ಪ್ರದೇಶ ಎಡಿಜಿಪಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತಿಪಟೂರಿಗೆ ಯೋಗೇಂದ್ರ ಯಾದವ್

ಪಬ್ಲಿಕ್ ಸ್ಟೋರಿ


ತಿಪಟೂರು: ಸಂಯುಕ್ತ ಹೋರಾಟ – ತಿಪಟೂರು ಘಟಕವು
ತಿಪಟೂರಿನಲ್ಲಿ 13 ಏಪ್ರಿಲ್, 2022, ಬುಧವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಭಾಗವಹಿಸಲಿದ್ದಾರೆ.
ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ದಿ) ಕಾಯಿದೆ 2020
ಹಾಗು ಎಲ್ಲಾ ರೈತರಿಗೂ, ಎಲ್ಲಾ ಬೆಳೆಗಳಿಗೂ, ಕಾನೂನು ಖಾತ್ರಿ ಪಡಿಸಿದ ಕನಿಷ್ಟ ಬೆಂಬಲ ಬೆಲೆ (MSP) ಕುರಿತು ಯೋಗೇಂದ್ರ ಯಾದವ್
ಮುಖಂಡರು, ಸಂಯುಕ್ತ ಕಿಸಾನ್ ಮೋರ್ಚಾ, ಮಾತನಾಡುವರು.

ಅಧ್ಯಕ್ಷತೆ : ಸಿ. ಯತಿರಾಜು,
ಜಿಲ್ಲಾ ಸಂಚಾಲಕರು, ಸಂಯುಕ್ತ ಹೋರಾಟ – ಕರ್ನಾಟಕ, ಇವರು ವಹಿಸುವರು.

ಡಾ‌ ಮಂಜುನಾಥ್
ಸಹಜ ಬೇಸಾಯ ತಜ್ಞ
ವಿಷಯ : ಬೆಳೆಗಳ ವೈವಿಧ್ಯತೆ ಮತ್ತು MSP

ಶ್ರೀಕಾಂತ್ ಕೆಳಹಟ್ಟಿ
ಬೆಲೆ ಕಾವಲು ಸಮಿತಿ, ತಿಪಟೂರು.
ವಿಷಯ : ಕೊಬ್ಬರಿಗೆ ಬೆಳೆಗೆ MSP

ಯಶ್ವಂತ್, ಪ್ರಾಂತ್ಯ ರೈತ ಸಂಘ, ಬೆಂಗಳೂರು ಮಾತನಾಡುವರು.

ಉಪಸ್ಥಿತಿ : ಬಡಗಲಪುರ ನಾಗೇಂದ್ರ. ಕ.ರಾ.ರೈ.ಸಂ.

ಬಿ. ಯೋಗೀಶ್ವರಸ್ವಾಮಿ ಕ.ರಾ.ರೈ.ಸಂ ತಿಪಟೂರು.

ಸಿ.ಬಿ.ಶಶಿಧರ್ (ಟೂಡಾ), ಜನಸ್ಪಂದನ, ತಿಪಟೂರು.

ಕನ್ನಡ ಅನುವಾದ : ದಿಲಾವರ್ ರಾಮದುರ್ಗ, ಹಿರಿಯ ಪರ್ತಕರ್ತರು

ನಮ್ಮೊಂದಿಗೆ :
ಎ. ಗೋವಿಂದರಾಜು, ವಕೀಲರು, ಕ.ರಾ.ರೈ.ಸಂ
ಅಜ್ಜಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘ
ಬಸ್ತೀಹಳ್ಳಿ ರಾಜಣ್ಣ, ಕ.ರಾ.ರೈ.ಸಂ.
ಕುಂದೂರು ತಿಮ್ಮಯ್ಯ, ದಲಿತ ಮುಖಂಡರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಬದುಕಿನ ಸಂಭ್ರಮ ಹೆಚ್ಚಿಸಿದ ಹೆಮ್ಮೆಗೆ ಸಾಕ್ಷಿಯಾದ ರೋಟೇರಿಯನ್ನರು…

ಪಬ್ಲಿಕ್ ಸ್ಟೋರಿ


ತುರುವೇಕೆರೆ:, ಬದುಕಿನ ಸಂಭ್ರಮಗಳನ್ನು ಅಸಹಾಯಕರಿಗೆ, ದೀನದಲಿತರಿಗೆ ಸಹಾಯ ಹಸ್ತ ನೀಡುವ ಮೂಲಕ ಆಚರಿಸಿಕೊಂಡರೆ ಆ ಕ್ಷಣಗಳಿಗೆ ಸಾರ್ಥಕತೆ ಮೂಡುತ್ತದೆ ಎಂದು ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.

ರೋಟರಿ ಭವನದಲ್ಲಿ ನಡೆದ ರೋಟೇರಿಯನ್ ಸದಸ್ಯರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಸಮುದಾಯದ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಮಾಜದಲ್ಲಿನ ದುರ್ಬಲರಿಗೆ ಸಹಾಯ ಹಸ್ತ ಚಾಚುವ ಮೂಲಕ ರೋಟರಿ ಸಂಸ್ಥೆ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಗ್ಯಾಂಗ್ರೀನ್‌ನಿಂದ ಬಳಲುತ್ತಿರುವ ಗುಜರಿ ವ್ಯಾಪಾರಿ ಮಹಮದ್ ಖಾನ್ ಅವರಿಗೆ ಅಭಿನೇತ್ರಿ ಮೆಡಿಕಲ್ಸ್ನ ಮಾಲೀಕರಾದ ನರಸಿಂಹಮೂರ್ತಿ ಅವರು ತಮ್ಮ ಅಜ್ಜಿ ಗೌರಮ್ಮನವರ ನೆನಪಿನಲ್ಲಿ ಕೊಡುಗೆಯಾಗಿ ನೀಡಿದ ಔಷಧಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಉಪಾಧ್ಯಾಕ್ಷರಾಗಿ ಆಯ್ಕೆಯಾದ ಎಂ.ಬಸವರಾಜ್ ಅವರನನು ಅವರನ್ನು ಅಭಿನಂದಿಸಲಾಯಿತು. ಇನ್ನರ್‌ವೀಲ್ ಅಧ್ಯಕ್ಷೆ ಗೀತಾ ಸುರೇಶ್, ರೋಟರಿ ಟ್ರಸ್ಟ್ ಕಾರ್ಯದರ್ಶಿ ಸಾ.ಶಿ.ದೇವರಾಜ್, ಖಜಾಂಚಿ ಎಚ್.ಆರ್. ತುಕಾರಾಮ್, ಡಾ.ಚೇತನ್, ಬರಹಗಾರ ಪ್ರಸಾದ್, ಮಂಜುಳಾ ಪ್ರಭುಸ್ವಾಮಿ, ತೇಜಸ್ವಿನಿ ಸುಧೀರ್, ಇತರರು ಭಾಗವಹಿಸಿದ್ದರು.
ರೋಟರಿ ಅಧ್ಯಕ್ಷ ಜಿ.ಪ್ರಭುಸ್ವಾಮಿ ಸ್ವಾಗತಿಸಿದರು. ಪೂರ್ಣಿಮ ವಂದಿಸಿದರು. ಕಾರ್ಯದರ್ಶಿ ಶಿವರಾಜ್ ನಿರೂಪಿಸಿದರು.

ಅಮ್ಮ ಸಾಯಲಿಲ್ಲ

0

ಡಾ. ರಜನಿ ಎಂ


ನಾನು ಬಟ್ಟೆ ಮೇಲೆ
ಬಿಡಿಸುವ
ಬಣ್ಣದ ಚಿತ್ತಾರದಲ್ಲಿ..

ಒಬ್ಬಟ್ಟಿನ ಹೂರಣ
ಚೆನ್ನಾಗಿ ಹುರಿ … ಎಂದು
ಹೇಳುವಾಗ.

ನಾನು ಹಾಕುವ
ಕ್ರೋಶಾ ಕೈ
ಚೀಲದಲ್ಲಿ..

ಹಸಿರು ಮಸಾಲೆಯ
ಮಟನ್
ಚಾಪ್ಸಿನಲ್ಲಿ..

ತುರುಬಿಗೆ
ಚುಚ್ಚಿದ
ಜಡೆಬಿಲ್ಲೆಯಲ್ಲಿ.

ಹೇಳಿಕೊಟ್ಟಿದ್ದ
ಕೃಷ್ಣನ ತೊಟ್ಟಿಲ
ರಂಗೋಲಿಯಲ್ಲಿ..

ಕೇಳುತ್ತಿದ್ದ
ಪಿ.ಕಾಳಿಂಗರಾವ್
ಹಾಡಿನಲ್ಲಿ..

ವಿವಿಧಭಾರತಿ
ಟ್ಯೂನ್ ನಲ್ಲಿ..

ಕಲೆಸುತ್ತಿದ್ದ ತುಪ್ಪ
ಬೇಳೆ ಸಾರಿನ
ಹದದಲ್ಲಿ.

ಹಣೆಯ
ಶಿಂಗಾರ್ ಸ್ಟಿಕರ್ ನಲ್ಲಿ
ಅವಲಕ್ಕಿ ಸರದಲ್ಲಿ
ಹರಳು ಬಳೆಯಲ್ಲಿ.

ಬೆಳ್ಳುಳ್ಳಿ ಸುಳಿಯಲು
ಬಿಡುತ್ತಿದ್ದ ಹೆಬ್ಬೆಟ್ಟು
ಉಗುರಿನಲ್ಲಿ…

ಬಾ ಊಟಕ್ಕೆ
ಎಂದು ಮುತ್ತಿಡುತ್ತಿದ್ದ
ತುಟಿಯ ಸ್ಪರ್ಶದಲ್ಲಿ…

ರಮ್ಮಿ ಕಾರ್ಡ್ ಅನ್ನೇ
ಎಸೆದು
ಥೂ …ಎನ್ನುತ್ತಿದ್ದ ವರಸೆಯಲ್ಲಿ

ಅವಿತು ಹೋಗಿದ್ದಾಳೆ..

” ಅಮ್ಮ ” “ಅಜ್ಜಿ'” ಎಂದರೆ ಅವರವರದೇ ಆದ ನೆನಪುಗಳು.
ಅದು ತಮ್ಮದೇ ವಿಶೇಷ ನೆನಪಿನ ಮೂಸೆ .
ರಂಗೋಲಿ ಬಿಡುವಾಗ, ನಗುವಾಗ , ದೋಸೆ ಹುಯ್ಯುವಾಗ, ಕಿರುಬೆರಳ ಉಗುರು …..
ಎಲ್ಲೆಂದರಲ್ಲಿ ದುತ್ತನೆ ಹಾದು ಹೋಗುತ್ತಾಳೆ.
ನಾಳೆ ನಾವೂ ಯಾವುದೋ ತೆರದಲ್ಲಿ.
ಪೀಳಿಗೆ ಪೀಳಿಗೆಗೆ ದಾಟಿ ಹೋಗುವ ನೆನಪುಗಳು.
ಆಚರಣೆಗಳು. ನೆನಪಿನ ಹಾಯಿ ದೋಣಿ ಈ ಕವನ ಓದಿದ ನಂತರ ಎಲ್ಲರಿಗೂ ಅಮ್ಮ ಅಜ್ಜಿ ನೆನೆಪು ಮರುಕಳಿಸುತ್ತದೆ.

ನೀಲಿಚುಕ್ಕಿಯ ನೆರಳು..

ಡಾ. ಶ್ವೇತಾರಾಣಿ. ಹೆಚ್

ಕಾವ್ಯಕ್ಕೂ ನನಗೂ ಬಾಂಧವ್ಯ ಅಷ್ಟಕ್ಕಷ್ಟೇ.. ಕಾವ್ಯವೆನ್ನುವುದು ಪ್ರಸವ ವೇದನೆ ಇದ್ದಹಾಗೆ. ತೀವ್ರವಾಗಿದ್ದಾಗಲೇ ಹಡೆದು ಬಿಡಬೇಕು. ಎನ್ನುವುದು ನನ್ನ ಇಂಗಿತ ಯಾವಾಗಲಾದರೂ ಒಂದೊ ಎರಡೊ ಗೀಚುತ್ತೇನೆ ಆದರೂ ಈ ಕವಿತೆ ಅಪ್ಪ ಅಮ್ಮನಿಗೆ ನಡುಕಲ ಮಗನಂತೆ .

ಕಾವ್ಯ ಕುತೂಹಲ ಹುಟ್ಟಿಸುವುದಿಲ್ಲ ಎಂಬುದು ನನ್ನ ವಾದ.. ಕುತೂಹಲ ವಿಲ್ಲದಿದ್ದರೆನಂತೆ ಅದರಲ್ಲಿ ಕರುಳಿದೆ.

ಬಹುರೂಪಿ ಪ್ರಕಾಶನ ಪ್ರಕಟಿಸಿರುವ ಮಧುರಾಣಿ ಎಚ್ ಎಸ್ ಅವರ ” ನೀಲಿ ಚುಕ್ಕಿಯ ನೆರಳು” ಕವನ ಸಂಕಲನದ ಮುಖಪುಟದ ಮೇಲಿದ್ದ ” ಈ ಹೊತ್ತಿಗೆ ಮೊದಲ ಕಾವ್ಯ ಪ್ರಶಸ್ತಿ ವಿಜೇತ ಕೃತಿ ” ಎಂಬ ತಲೆ ಬರಹವನ್ನು ನೋಡಿ ಓದುವ ಕುತೂಹಲದಿಂದ ಕೈಗೆತ್ತಿಕೊಂಡೆ.
ಹಾಳೆಗಳ ಬಿಡಿಸುತ್ತಾ ಸಾಗಿದಂತೆ ಕೊನೆ ಪುಟ ತಲುಪಿದ್ದು ಗೊತ್ತಾಗಲಿಲ್ಲ. ಇಲ್ಲಿ ಈ ಮೊದಲು ಕಾಣದ ಹೆಣ್ಣಿನ ವಿಭಿನ್ನ ಆಯಾಮ ಕಾಣಸಿಗುತ್ತದೆ.

ಮಧುರಾಣಿಯವರ ಕವಿತೆಗಳಲ್ಲಿ ಗೊಳು ಕರೆಯುವ ಹೆಣ್ಣು ಸಿಗುವುದಿಲ್ಲ. ಸಂದಿಗ್ಧ ಹಂತದಲ್ಲೂ ಅದನ್ನು ಮೀರುವ, ಹಾರುವ, ಅರಳುವ, ಬಿಡಿಸಿಕೊಳ್ಳುವ ಹೆಣ್ಣಿನ ಚಿತ್ರಣವಿಲ್ಲಿದೆ… ಒಮ್ಮೆ ಓದಿ

ಪ್ರತಿಗಳಿಗಾಗಿ ಸಂಪರ್ಕಿಸಿ. 7019182729

ಕವನ ಓದಿ: ಚೆರ್ರಿ ಹೂವಿನ ಪ್ರೇಮ…

1
ಜಪಾನ್‌ನಲ್ಲಿ ಚೆರ್ರಿ ಹೂವುಗಳು ಜೀವನದ ಭಾಗ . ಚೆರ್ರಿ ಹೂ ಗಳನ್ನು ಆಸ್ವಾದಿಸುವ ಬಗೆಯ ಬಗ್ಗೆ ಒಂದು ಸಂಪ್ರದಾಯವೇ ಇದೆ. ಜೊತೆಗೆ ಜೀವನದ ಅಲ್ಪಕಾಲಿಕ ಸ್ವಭಾವಕ್ಕೆ ನಿರಂತರ ರೂಪಕವಾಗಿದೆ,ಹೂವುಗಳ ಅಸ್ಥಿರತೆ, ಅಂದವಾದ ಸೌಂದರ್ಯ ಮತ್ತು ಚಂಚಲತೆ . . ಬೆಂಗಳೂರಿನಲ್ಲೂ ಚೆರ್ರಿ ಹೂಗಳನ್ನು ಆಸ್ವಾದಿಸಬಹುದು. ಇದು cherry blossom ಕಾಲ.ಚೆರ್ರಿ ಮರದ ಕೆಳಗೆ ಪ್ರಿಯತಮೆ …ಓದಿ ಡಾll ರಜನಿಯವರ ಕಣ್ಣಲ್ಲಿ.

ಚೆರ್ರಿ ಹೂಗಳು

***********

ವಸಂತದ ತನಕ
ಕಾಯುತ್ತಿಯಲ್ಲಾ
ಎಲ್ಲಿ ಅಡಗಿಸಿಟ್ಟಿದ್ದೆ ?
ಒಟ್ಟಿಗೆ ಅರಳುವೆಯಲ್ಲಾ.

ದಾರಿ ಪಕ್ಕದಲ್ಲೇ , ಕೆರೆ

ಮಗ್ಗುಲಲ್ಲೇ ಅರಳಿ ನಿಂತೆಯಲ್ಲಾ

ನಾಚಿಕೆ ಇಲ್ಲದೆ.

ಅದೆಷ್ಟು ಬಣ್ಣ ?
ಬದಲಾಗುವ ನಿನ್ನ
ಮುಖಾರವಿಂದದಂತೆ.

ಗಾಳಿಗೆ ತುಸುವೇ
ಅಲ್ಲಾಡುವ ಪಕಳೆಗಳು..
ನಿನ್ನ ಅಧರದ ಹಾಗೆ.

ನೋಡಿ ನೋಡಿ
ಸೋಲಬೇಕು..
ನಿನ್ನ ಕುಡಿ ನೋಟದಂತೆ.

ಮೆಲ್ಲಗೆ ಘಮ್ಮನೆ
ನಿನ್ನಡಿಯಲ್ಲಿ ನಡೆಯಬೇಕು…
ತೋಕದಂತೆ.

ಬಿದ್ದ ಹೂಗಳ
ಆಯಬಹುದು …
ನೀನು ಕೃಪೆ ತೋರಿದ
ಪ್ರೀತಿಯಂತೆ.

ಹೋಗೆ ಬಿಡುವೆ
ಎಂದಾಗ ಹೃದಯ
ಹಿಂಡಿದ ಹಾಗೆ…
ಒಣಗಿ ಉದುರೇ ಬಿಡುವೆಯಲ್ಲಾ.

ಇಳಿ ಸಂಜೆಯಲ್ಲಿ
ನಿನ್ನ ಕಣ್ಣುಗಳ ಹೊಳಪಿನಲ್ಲಿ…
ಮಕರಂದದ
ಮತ್ತು.

ಹೊಯ್ದ ಮಳೆಗೆ
ನೆನೆದ ಮಣ್ಣಿನ ವಾಸನೆ ..
ಉದುರಿದ ಚೆರ್ರಿ ಹೂವಿನ ಹಾಸಿಗೆ
ನಿನ್ನ ಅಂಗೈ ಬಿಸಿ …

ತಡವಾದ ಚಂದಿರ
ದೇವಲೋಕದ ದೀಪ…
ನಿನ್ನಂತೆ ಸದ್ದಿಲ್ಲದೆ
ಗೊತ್ತಾಗದಂತೆ ಅರಳಿ

ಚೆರ್ರಿ ಹೂವಿನ ಮರದ ಕೆಳಗೆ
ಕದ್ದ ಮುತ್ತು..
ನಿನ್ನ ಮುಂಗುರುಳಿಗೆ
ಸಿಕ್ಕಿ ಹಾಕಿಕೊಂಡ ಹೂವು.

ನಿನಗೂ ಅದೇ
ತಾನೇ ಬೇಕು
ಅರಳಿ ಉದುರಿದ್ದಕ್ಕೆ
ಸಾರ್ಥಕವಾಗಿ ?


ಡಾII ರಜನಿ

ವಸಂತ ಕಾಲ

0

ಡಾ. ರಜನಿ ಎಂ


ಹಸಿರು ಹುಲ್ಲ
ಹಾಸು
ಎಳೆ ಚಿಗುರು
ತಿಳಿ ಹಸಿರು

ಹೂಂಗೆ ಹೂವ
ಘಾಟು
ಬಿದ್ದ ಹೊಂಗೆ ಹೂವು
ಜೇನ್ನೊಣ

ಒಣ ಎಲೆಯ ಹಾಸಿನೊಳಗಿಂದ
ನುಗ್ಗಿ ಸೂರ್ಯನ
ನೋಡಲು ಬಂದ ಹುಲ್ಲು

ಚಿಲಿ ಪಿಲಿಯೋ
ನಲ್ಲನ ಕೊಗುವ ಕರೆಯೋ..
ಯಾರೂ ಭಾಷಾಂತರಿಗಳಿಲ್ಲ.

ರಾಚುವ ಸೂರ್ಯನಿಗೂ
ಸಡ್ಡು ಹೊಡೆಯುತ..
ಮಿಂಚುವ ಹೊಂಗೆ
ಎಲೆಯೋ.

ಹುಟ್ಟಿದ ಮರುಗಳಿಗೆಯೇ
ಹೆಚ್ಚುವ ಆಯಸ್ಸು
ಮರು ವಸಂತಕ್ಕೆ..
ಸತ್ತು ಹುಟ್ಟುವ ಉಮೇದು.

ಬೋಳಾದ ಮರದಿಂದ
ಭೂಮಿ ಒಳಗಿನಿಂದ ..
ಚಿಗುರಿ , ಸಾಧಾರಪಡಿಸಿದ
ಜೀವ ಸೆಲೆ.

ಒಂದು ಹೂವು
ಒಂದು ಚಿಗುರು
ಒಂದು ಪೀಚು ..
ಜೀವನದ ಹಂತಗಳೆಲ್ಲಾ ಒಟ್ಟಿಗೆ.

ಒಂದು ಸಾಯುತ್ತಾ
ಒಂದು ಹುಟ್ಟುತ್ತಾ
ಒಂದು ಉದುರುತ್ತಾ
ಒಂದು ಕೊನರುತ್ತಾ.

ಒಂದು ಕರೆಯುತ್ತಾ
ಒಂದು ಕಳಿಸುತ್ತಾ
ಒಂದು ಅರಸುತ್ತಾ
ಒಂದು ರಮಿಸುತ್ತಾ

ಹಸಿರ ಹಿನ್ನೆಲೆ
ಕುಂಚಗಾರನ
ಅನೂಹ್ಯ ಬಣ್ಣಗಳ ಮಿಶ್ರಣ.

ಪ್ರಕೃತಿಯ ಬಣ್ಣದೋಕುಳಿಗೆ
ಕರಗದ ಹೃದಯವುಂಟೆ ?
ಕಣ್ಣಳೊಗಿನಿಂದ ಹೃದಯಕ್ಕೆ
ಇಳಿದ ಬಣ್ಣಗಳು.

ವರಷವೊಂದು ಹೆಚ್ಚಾದರೇನು ?
ಹರುಷ ಕ್ಕಿದೆ ರಂಗಿನಾಟ.

ವಸಂತನ ಆಗಮನ ಕವಯಿತ್ರಿ ಕಣ್ಣಿಗೆ ಸಾವು ಬದುಕಿನ
ಜೀವನ ಚಕ್ರಗಳನ್ನು ಒಟ್ಟೊಟ್ಟಿಗೆ ತೋರಿಸಿದೆ. ಜೀವ ಸೆಲೆಯಲ್ಲೇ …ಸಾವು ಮೆಲ್ಲಗೆ ಜೊತೆಯಾಗುವ ವಿಸ್ಮಯ. ಒಂದು ದಿನದ ಚಿಗುರಿಗೆ ಒಂದು ದಿನದ ಆಯಸ್ಸು ಮುಗಿದಿದೆ. ಎಂತಹ ಸತ್ಯ. ಓದಿ ಡಾ|| ರಜನಿಯವರ ಕವನದಲ್ಲಿ.

ಯುಗಾದಿ ಸಂಭ್ರಮ

0


ಡಾ‌. ರಜನಿ ಎಂ

ತಿಳಿ ಹಸಿರು
ಚಿಗುರು
ಮಾವು

ಬಾಲಚಂದಿರ
ಹೊಸ ಬಟ್ಟೆಯ
ಸರಬರ

ಪೂಜೆ ರಂಗೋಲಿಯ
ಸಡಗರ

ಒಬ್ಬಟ್ಟಿನ ಮೇಲಿನ
ಬಿಸಿ ತುಪ್ಪ

ವರ್ಷದ ಪ್ರಾರಂಭ
ಪೂರ್ತಿ ವರ್ಷ
ಚೆನ್ನಾಗಿರಲಿ ಎಂದು ಬೇಡಿದ
ಸಂತೃಪ್ತಿ

ಯಾವ ಬಗೆಯಾದರೇನು
ಯಾವ ದೇವರಾದರೇನು

ಗುಡಿಯಲಿ ನಿದ್ರೆ
ಬಂದರೆ ಸಾಕು

ಲೋಕ ಕಲ್ಯಾಣವಾದರೆ
ಸಾಕು

ಮನೆ ದೇವರ ಬೇಡಿ
ಒಳ್ಳೆ ಸೆಲ್ಫಿ
ಕ್ಲಿಕ್ಕಿಸಿ

ಹಂಚಿಕೊಳ್ಳಲು
ವಾರೆ ವ್ಹಾ…
ಎನ್ನಲು ಗೆಳತಿಯರಿದ್ದರೆ ಸಾಕು.

ಯುಗಾದಿ
ಪರೇಲ್ ಬಿದ್ದ ಹಾಗೆ😍😍