Thursday, February 29, 2024
Google search engine
Homeಜನಮನಭಾರತೀಯ ಮಹಿಳೆಯರ ಬಾಳಿನ ನಿಜ ಬೆಳಕಿನ ಸೂರ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

ಭಾರತೀಯ ಮಹಿಳೆಯರ ಬಾಳಿನ ನಿಜ ಬೆಳಕಿನ ಸೂರ್ಯ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್

ರಾಧಾ ಬಿ.ರಮೇಶ್


“ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಮಾಪನವಾಗಿ ಪರಿಗಣಿಸಬೇಕು” -ಡಾಕ್ಟರ್ ಬಿ ಆರ್ ಅಂಬೇಡ್ಕರ್ .

ಪಾಶ್ಚಾತ್ಯ ವಿದ್ಯಾಭ್ಯಾಸ ಹಾಗೂ ಪ್ರೇರಣೆಯಿಂದ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗಾಗಿ ಶ್ರಮಿಸಿದರು .ಹದಿನೆಂಟು ನೂರ ನಲವತ್ತ ಎಂಟರಲ್ಲಿ ಜ್ಯೋತಿಬಾ ಪುಲೆಯವರು ವಿದ್ಯೆಯಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಶಾಲೆಯನ್ನು ಪ್ರಾರಂಭ ಮಾಡಿದರು .

ಬಾಲ್ಯವಿವಾಹ
ವಿಧವಾ ಪದ್ಧತಿ.
ಶಿಕ್ಷಣದ ಹಕ್ಕು ನಿರಾಕರಣೆ ಆಸ್ತಿಹಕ್ಕು ನಿರಾಕರಣೆಯಂಥ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದ್ದರು .

ಆದರೆ ಮಹಿಳೆಯ ವ್ಯಕ್ತಿತ್ವದ ಶೋಷಣೆಯ ವಿವಿಧ ಮಗ್ಗಲುಗಳ ಬಗ್ಗೆ ಆಳವಾಗಿ ಚಿಂತಿಸಿ ಮಹಿಳೆಯರು ತಮ್ಮದಲ್ಲದ ಕಾರಣಕ್ಕಾಗಿ ಹಕ್ಕುಗಳಿಂದ ವಂಚಿತರಾಗಿರುವ ರೆಂದು ಧಾರ್ಮಿಕ ಸಾಮಾಜಿಕ ರಾಜಕೀಯ ಹಕ್ಕುಗಳನ್ನು ಸಂವಿಧಾನ ದತ್ತವಾಗಿ ನೀಡಲು ಶ್ರಮಿಸಿದ ವ್ಯಕ್ತಿ ಡಾಕ್ಟರ್ ಬಿ ಆರ್.ಅಂಬೇಡ್ಕರ್ ಅವರು ಹೆಣ್ಣುಮಕ್ಕಳ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕೂಡು ಕುಟುಂಬ ಯೋಜನೆ ವಿಧಾನವನ್ನು ಜನಪ್ರಿಯಗೊಳಿಸಬೇಕೆಂದು ಹೇಳಿದ್ದರು .

ಮದುವೆಯಾದ ಹೆಣ್ಣು ಗಂಡನ ಪಕ್ಕಾ ಸರಿಸಮಾನಳಾಗಿ ನಿಲ್ಲಬೇಕು ದಾಸಿ ಅಂತಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು .

ಮಹಿಳೆಯರು ಎದುರಿಸಬೇಕಾದ ದೈಹಿಕ ಕಷ್ಟಗಳ ಕುರಿತು ಅವಳು ನಿಭಾಯಿಸಬೇಕಾದ ಜವಾಬ್ದಾರಿ ಯನ್ನು ಕುರಿತು ಅವರಲ್ಲಿ ಸ್ಪಷ್ಟತೆಯಿತ್ತು .

ಸಾಮಾಜಿಕ ಬದಲಾವಣೆಯನ್ನು ಬಯಸಬೇಕಾದರೆ ಅದಕ್ಕೆ ಸೂಕ್ತ ಕಾನೂನಿನ ಚೌಕಟ್ಟಿನ ಅವಶ್ಯಕತೆ ಮನಗಂಡಿದ್ದರು .
ಅಂಬೇಡ್ಕರರ ವಿದ್ವತ್ತು ಚಿಂತನಾಶಕ್ತಿ ಸಂಘಟನಾ ಸಂಕಲ್ಪಗಳ ಕಾರಣವಾಗಿ ಅಂಬೇಡ್ಕರ್ ಸ್ವತಂತ್ರ ಭಾರತದ ಪ್ರಥಮ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದರು .

ಸಾಮಾಜಿಕ ಸಮಾನತೆಯ ಪರಿಕಲ್ಪನೆಗಳಿಗೆ ಎಡೆಮಾಡಿಕೊಡುವ ಹಿಂದೂ ಸಂಹಿತೆ ಮಸೂದೆ ಅಥವಾ ಹಿಂದೂ ಕೋಡ್ ಬಿಲ್ ಅನ್ನು ನಿರೂಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು .

ಮಹಿಳಾ ಸಮಾನತೆಯ ಹಕ್ಕುಗಳನ್ನು ಎತ್ತಿಹಿಡಿಯುವ ಹಿಂದೂ ಸಂಹಿತೆ ಮಸೂದೆ ಯಲ್ಲಿ 7 ಪ್ರಸ್ತಾಪಗಳಿದ್ದವು.

೧ ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿಯ ಪಾಲು .
೩ವಿಧವೆಯರು ಪಡೆದ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು .೩ಬಹುಪತ್ನಿತ್ವ ನಿರಾಕರಣೆ .೪ಅಂತರ್ಜಾತಿ ವಿವಾಹಕ್ಕೆ ಅವಕಾಶ .೫ಹೆಣ್ಣು ಮಕ್ಕಳಿಗೆ ವಿವಾಹ ವಿಚ್ಛೇದನಕ್ಕೆ ಮನವಿ ಸಲ್ಲಿಸುವ ಹಕ್ಕು .೬ಪೋಷಕತ್ವ .೭ವೈಯಕ್ತಿಕ ಆಸ್ತಿ ಪದ್ದತಿಗೆ ಕಾನೂನು ಮಾಡುವುದು .

ಮೊದಲಿದ್ದ ಹಲವು ತೆರನಾದ ಮದುವೆ ಪದ್ಧತಿ ರದ್ದುಗೊಳಿಸಿ ಏಕಪತ್ನಿತ್ವವನ್ನು ಪ್ರತಿಪಾದಿಸಿದರು. ವಿವಾಹ ವಿಚ್ಛೇದನದ ನಿಯಮಗಳು ವಿಸ್ತಾರಗೊಳಿಸಲ್ಪ ಟ್ಟವು .ಶಾಸ್ತ್ರೋಕ್ತ ವಿವಾಹ ಹಾಗೂ ನಾಗರೀಕ ವಿವಾಹ ಎಂಬ ಎರಡೂ ಪದ್ಧತಿಗಳಲ್ಲಿ ನಾಗರಿಕ ವಿವಾಹ ಕಾನೂನುಬದ್ದ ಕಳಿಸಲ್ಪಟ್ಟಿತು .

ಶಾಸ್ತ್ರೋಕ್ತ ವಿವಾಹ ವಿಚ್ಛೇದನಕ್ಕೆ ಅವಕಾಶವಿರಲಿಲ್ಲ ಆದರೆ ಪ್ರಸ್ತುತ ಮಸೂದೆಯ ವಿಚ್ಚೇದನಕ್ಕೆ ಮಾನ್ಯ ಮಾಡಿತು .

ವಧುವು ವರದಕ್ಷಿಣೆ ರೂಪದಲ್ಲಿ ತವರಿನಿಂದ ತರುವ ಆಸ್ತಿಯನ್ನು ಭವಿಷ್ಯದಲ್ಲಿ ಆಕೆಗೆ ಭದ್ರತೆ ಒದಗಿಸುವ ಸಲುವಾಗಿ ಟ್ರಸ್ಟ್ ನ ಆಸ್ತಿ ಎಂದು ಪರಿಗಣಿಸಿ ಆಕೆ ನಿರ್ಗತಿಕಳ ಆಗುವುದನ್ನು ತಪ್ಪಿಸುವುದು .ವಿವಾಹ ಹಾಗೂ ದತ್ತು ಪಡೆಯುವ ವಿಷಯಗಳಲ್ಲಿ ಜಾತಿ ಭೇದವನ್ನು ತೊಡೆದು ಹಾಕಲ್ಪಟ್ಟಿತು.

ವಿಧವೆ ಪಡೆದ ಪಾಲಿನ ಮೇಲೆ ಆಕೆಗಿದ್ದ ಭಾಗಶಃ ಸ್ವಾಮ್ಯವನ್ನು ಸಂಪೂರ್ಣ ಹಕ್ಕನ್ನಾಗಿ ಪರಿವರ್ತಿಸಿರುವುದು ಮೊದಲಿದ್ದ ವಾರಸುದಾರಿಕೆ ಪದ್ದತಿಯಲ್ಲಿ ಸ್ತ್ರೀ ವಾರಸುದಾರಳು ವಾರಸುದಾರಳ ಸ್ಥಿತಿಯನ್ನು ಬಡವಳು /ಶ್ರೀಮಂತಳು .ವಿವಾಹಿತೆ /ಅವಿವಾಹಿತೆ .ಸಂತಾನ ಉಳ್ಳವಳೂ /ಬಂಜೆ ಎಂಬ ಭೇದಗಳನ್ನು ವೇದಗಳ ಮೂಲಕ ವಾರಸುದಾರಿಕೆ ಹಕ್ಕನ್ನು ನಿರಾಕರಿಸಲ್ಪಟ್ಟಿತ್ತು. ಆದರೆ ಪ್ರಸ್ತುತ ಸಂಹಿತೆಯಲ್ಲಿ ಎಲ್ಲ ಭೇದಗಳನ್ನು ಅನೂರ್ಜಿತಗೊಳಿಸಿ ಎಲ್ಲಾ ಸ್ತ್ರೀಯರನ್ನು ವಾರಸುದಾರ ಳೆಂದು ಮಾನ್ಯ ಮಾಡಲಾಗಿದೆ .

ಆಸ್ತಿಯ ಮೇಲೆ ಇದ್ದ ಜನ್ಮಸಿದ್ಧವಾದ ಹಕ್ಕು
ಅಂದರೆ ವಂಶಾವಳಿಯ ಸದಸ್ಯರಿಗೆ ಆಸ್ತಿ ಸೇರುತ್ತಿತೆ ವಿನಃ ಮೃತರ ಸಂತಾನಕ್ಕೆಲ್ಲ ಇದನ್ನು ತೆಗೆದು ಹಾಕಿ ಬದುಕಿ ಉಳಿದಿರುವ ವಾರಸುದಾರರ ಹಕ್ಕನ್ನು ಮಾನ್ಯ ಮಾಡಿರುವುದು .ದಿವಂಗತ ತಂದೆಯ ಆಸ್ತಿಯಲ್ಲಿ ಅರ್ಧದಷ್ಟು ಪಾಲನ್ನು ಹೆಣ್ಣು ಸಂತಾನ ಪಡೆಯುವ ಹಕ್ಕನ್ನು ಕಾನೂನುಬದ್ಧಗೊಳಿಸಿರುವುದು ವಧುವು ವರದಕ್ಷಿಣೆ ರೂಪದಲ್ಲಿ ತವರಿನಿಂದ ತರುವ ಆಸ್ತಿಯನ್ನು. ಭವಿಷ್ಯದ ಲಿ ಆಕೆಗೆ ಭದ್ರತೆ ಒದಗಿಸುವ ಸಲುವಾಗಿ ಟ್ರಸ್ಟ್ ನ ಆಸ್ತಿ ಎಂದು ಪರಿಗಣಿಸಿ ಆಕೆ ನಿರ್ಗತಿಕ ಳಾಗುವುದನ್ನು ತಪ್ಪಿಸುತ್ತದೆ.

ಮೊದಲಿದ್ದ ಕಾನೂನಿನ ಪ್ರಕಾರ 1ಹೆಣ್ಣು ತನ್ನ ಗಂಡನ ಜೊತೆ ಸಂಸಾರ ಮಾಡದಿದ್ದರೆ ಆಕೆಗೆ ಜೀವನಾಂಶ ಪಡೆಯುವ ಹಕ್ಕು ಇರಲಿಲ್ಲ .

ಪ್ರಸ್ತುತ ಮಸೂದೆಯಲ್ಲಿ ಹೆಂಡತಿ ಗಂಡನಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದಲ್ಲಿ ಆಕೆ ಜೀವನಾಂಶ ಹಕ್ಕುದಾರಳು ಎಂದು ಪರಿಗಣಿಸುತ್ತದೆ .

ಹಿಂದೂ ಕೋಡ್ ಬಿಲ್ ನಿಂದ ವರ್ಣ ಹಾಗೂ ವರ್ಗ ಬೇಧಗಳು
ಲಿಂಗ ಭೇದ ಭಾವನೆಗಳು. ಆರ್ಥಿಕ ಅಸಮಾನತೆಗಳು ತೊಲಗಿ
ಸಮಾಜ ಸಮಗ್ರ ವಿಕಾಸಕ್ಕೆ ನಾಂದಿ ಹಾಡುವುದು ಎಂದು ಅಂಬೇಡ್ಕರ್ ಭಾವನೆ . ಸಮುದಾಯವನ್ನು ಏಕಸೂತ್ರಕ್ಕೆ ಒಳಪಡಿಸಲು ಹಿಂದೂ ಕೋಡ್ ಬಿಲ್ ಅಗತ್ಯ ಎಂದು ಮನಗಂಡಿದ್ದರು .ಆದರೆ ಹಲವರು ಹಿಂದೂ ಸಂಹಿತೆ ಮಸೂದೆ ಗೆ ತೀವ್ರವಾದ ಅಸಮಾಧಾನ ತೋರಿದರು ಇದರ ವಿರುದ್ಧ ಹಲವು ಪ್ರತಿಭಟನಾ ಸಭೆಗಳು ನಡೆದವು ಸದನದ ಒಳಗೂ ಹೊರಗೂ ವಿರೋಧಗಳು ವ್ಯಕ್ತವಾದವು. ಪುರುಷಪ್ರಧಾನ ಸಮಾಜಕ್ಕೂ. ಕುಟುಂಬ ವ್ಯವಸ್ಥೆಗೂ. ಬದಲಾವಣೆ ತರಬಯಸಿದ್ದ ಹಿಂದೂ ಕೋಡ್ ಬಿಲ್ ಮೂರರಿಂದ 4ವರ್ಷ ಸಂಸತ್ತಿನಲ್ಲಿ ಚರ್ಚೆಗೊಳಗಾಯಿತು ಚರ್ಚೆ ಪರಿಪೂರ್ಣವಾಗದೆ ಮತಕ್ಕೆ ಹಾಕಿದಾಗ೨೮/೨೩ ಅಂತರದಲ್ಲಿ ಬೆಂಬಲವಿಲ್ಲದೆ ತಿರಸ್ಕೃತವಾಯಿತು.

ಸಮಾಜ ಸುಧಾರಣೆಗೆ ಬಹುಮುಖ್ಯವಾದ ಹಿಂದೂ ಕೋಡ್ ಬಿಲ್ ಬೆಂಬಲವಿಲ್ಲದೆ ತಿರಸ್ಕೃತವಾದಾಗ ಅಂಬೇಡ್ಕರ್ ಅತೀವ ನೊಂದು ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು .ಪುನಃ ನೆಹರೂ ಅವರು ಸರ್ಕಾರ ರಚಿಸಿದಾಗ ಅಂಬೇಡ್ಕರರ ಹಿಂದೂ ಕೋಡ್ ಬಿಲ್ ನ ಸುಧಾರಣೆಗಳು ಸರಕಾರದ ಮುಖ್ಯ ಆದ್ಯತೆ ಆಯಿತು . ಎಲ್ಲಾ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತೆ ಆಯಿತು .

…”ಪ್ರಕಾಶಪಡಿಸುವ ಹಣತೆಯಂತೆ ಇರು. ಬೆಳಕಿಗಾಗಿ ಬೇರೆಯವರ ಆಶ್ರಯಿಸದಿರು. ಯಾರಿಗೂ ವಶವಾಗದಿರು. ನಿನ್ನಲ್ಲಿ ನೀನು ನಂಬಿಕೆಯಿಡು. ನಿನಗೆ ನೀನೇ ಮಾರ್ಗದರ್ಶಕಳಾಗಿರು. ವಿವೇಕದಲ್ಲಿ ಆಶ್ರಯ ಪಡೆದು ಪ್ರಾಮಾಣಿಕಳಾಗಿರು- ಇದು ಅಂಬೇಡ್ಕರ್ ಆಶಯವಾಗಿದೆ


ಶ್ರೀಮತಿ ರಾಧ ಬಿ .ರಮೇಶ್ .
ಲೇಖಕಿ, ತುಮಕೂರು .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?