Tuesday, May 5, 2026
Google search engine
Home Blog Page 131

ನಾಳೆ ‘ಮಾರ್ಗಾನ್ವೇಷಣೆ’ ಪುಸ್ತಕ ಲೋಕಾರ್ಪಣೆ

Publicstory.in


ತುಮಕೂರು: ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಗಸ್ಟ್ 7ರ ಬೆಳಿಗ್ಗೆ 10:30 ಗಂಟೆಗೆ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ‘ಮಾರ್ಗಾನ್ವೇಷಣೆ'(ಸಾಹಿತ್ಯ ಸಂಶೋಧನೆಯ ರೀತಿ-ನೀತಿ) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸಾರಾಂಗ ತುಮಕೂರು ವಿಶ್ವವಿದ್ಯಾಲಯ ಮತ್ತು ಬೆಸುಗೆ ಟ್ರಸ್ಟ್ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

ಕನ್ನಡದ ಪ್ರಖ್ಯಾತ ವಿಮರ್ಶಕರೂ, ಇಂಟೆಲ್ ದಕ್ಷಿಣ ಏಷಿಯಾದ ಸಲಹೆಗಾರರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ಗೌರವ ನಿರ್ದೇಶಕರೂ ಆದ ಎಸ್ ಆರ್ ವಿಜಯಶಂಕರ ಮತ್ತು ಕವಿ-ನಾಟಕಕಾರ-ರಂಗ ನಿರ್ದೇಶಕ, ನೀನಾಸಂ, ರಂಗಾಯಣ, ನವದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ಸಂದರ್ಶಕ ಪ್ರಾಧ್ಯಾಪಕರಾದ ರಘುನಂದನ ಪುಸ್ತಕ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕರ್ನಲ್ (ಪ್ರೊ) ವೈ ಎಸ್ ಸಿದ್ದೇಗೌಡ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ ಹ ರಮಾಕುಮಾರಿ, ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಕೆ ಶಿವಚಿತ್ತಪ್ಪ, ಸಾಹಿತ್ಯ-ಸಂಶೋಧನಾಸಕ್ತರು ಉಪಸ್ಥಿತರಿರಲಿದ್ದಾರೆ.

ಪಶುಇಲಾಖೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ಕೊರಟಗೆರೆ:

ಪಶು ಆಸ್ಪತ್ರೆ ಇಲಾಖೆ ವತಿಯಿಂದ ಪರಿಶಿಷ್ಠ ಜಾತಿ, ಪಂಗಡ ಹಾಗೂ ಇತರೆ ವರ್ಗದ ಹೈನುಗಾರರಿಗೆ ವಿವಿಧ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹರಿಗೆ ಹಾಲು ಕರೆಯುವ ಯಂತ್ರ(Milking Mechine) ಮತ್ತು ರಬ್ಬರ್ ನೆಲದ ಹಾಸು(Rubber cow mat)ಗಳನ್ನು ಒದಗಿಸಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ ಶೇ.90ರಷ್ಟು ಸಹಾಯಧನದಡಿ ಈ ಸೌಲಭ್ಯ ವಿತರಿಸಲಾಗುತ್ತದೆ.

ಅದೇ ರೀತಿ ಅಮೃತ ಸಿರಿ ಯೋಜನೆಯಡಿ ಪಶು ಸಂಗೋಪನಾ ಇಲಾಖೆಯ ಜಾನುವಾರು ಸಂವರ್ಧನೆ ಕ್ಷೇತ್ರಗಳಲ್ಲಿ ಹುಟ್ಟುವ ಹಳ್ಳಿಕಾರ್ ಹೆಣ್ಣು ಕರು, ಕಡಸುಗಳನ್ನು ರೈತರು, ದೇವದಾಸಿಯರು, ವಿಧವೆಯರು, War widows, ಶವಸಂಸ್ಕಾರ ಕಾರ್ಮಿಕರಿಗೆ ವಿತರಿಸಲು ಕರುವಿನ ಬೆಲೆಯ ಶೇ.25ರಷ್ಟು ರೈತರ ವಂತಿಗೆ ಸೇರಿದಂತೆ ಶೇ.75ರಷ್ಟು ಸಹಾಯಧನ ಸೌಲಭ್ಯ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ತಮ್ಮ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಆ.20ರೊಳಗಾಗಿ ಕೊರಟಗೆರೆ ಪಶು ಆಸ್ಪತ್ರೆಗೆ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಕೊರಟಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ (ಮೊ.ಸಂಖ್ಯೆ: 9980351579) ಯನ್ನು ಸಂಪರ್ಕಿಸಬಹುದಾಗಿದೆ HB ಎಂದು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಸಿದ್ಧನಗೌಡ ತಿಳಿಸಿದ್ದಾರೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ: ಹೈಕೋರ್ಟ್ ನೋಟೀಸ್

ತುಮಕೂರು:

ರಾಜ್ಯದಲ್ಲಿ ಅವಧಿ ಮುಗಿದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಶೀಘ್ರ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್‌ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎಸ್‌. ಓಕಾ, ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ ಗೌಡ ಅವರಿದ್ದ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಚುನಾವಣೆ ಮುಂದೂ ಡುವ ಸರ್ಕಾರದ ನಿರ್ಣಯಕ್ಕೆ ಚುನಾವಣಾ ಆಯೋಗ ಬದ್ಧವಾಗಿರಬೇಕೆಂದೇನೂ ಇಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿ, ವಿಚಾರಣೆಯನ್ನು ಆ. 13ಕ್ಕೆ ಮುಂದೂಡಿದೆ.

ಡಿಸೆಂಬರ್‌ ಅಂತ್ಯಕ್ಕೆ ಮುಂದೂಡಿಕೆ:

ಸರ್ಕಾರದ ಪರ ವಕೀಲರು ಹಾಜರಾಗಿ, ಕೋವಿಡ್‌ 2ನೇ ಅಲೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಡಿಸೆಂಬರ್‌ ಅಂತ್ಯದವರೆಗೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಮೇ 17ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದರು. ನಿರ್ಣಯದ ದಾಖಲೆಯನ್ನು ನ್ಯಾಯಪೀಠಕ್ಕೆ ಒದಗಿಸಿದರು.

ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಚುನಾವಣೆಗಳನ್ನು ಮುಂದೂಡುವುದಕ್ಕೆ ಸರ್ಕಾರ ಕೋವಿಡ್‌ ನೆಪ ಹೇಳಿದೆ. ಪ.ಬಂಗಾಲದಲ್ಲಿ ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಲ್ಲದೆ ಸಚಿವ ಸಂಪುಟದ ನಿರ್ಣಯಕ್ಕೆ ಸಮರ್ಥನೆ ನೀಡುವಂತೆ ಸರಕಾರಕ್ಕೆ ಸೂಚಿಸಿತು.

ಚುನಾವಣಾ ಆಯೋಗಕ್ಕೆ ನಿರ್ದೇಶನ :

ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾಯಿತ ಅವಧಿ ಪೂರ್ಣಗೊಂಡಿದೆ. ಸಂವಿಧಾನದ ಪರಿಚ್ಛೇದ 243(ಯು) ಪ್ರಕಾರ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕೆಂದು ಈ ಹಿಂದೆಯೇ ಹೈಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಆದ್ದರಿಂದ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿತು.

ಮಾರಮ್ಮನ ಉತ್ಸವದಲ್ಲಿ ಮಹಿಳೆಯರಿಗೆ ಬಳೆ ಕೊಡಿಸಿದ ಪರಮೇಶ್ವರ್

ಕೊರಟಗೆರೆ:
ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಬಳೆಗಾರನ ಮಲಾರದಲ್ಲಿ ಬಳೆ ತೊಡಿಸುವ ಮೂಲಕ ಶಾಸಕ ಡಾ. ಜಿ. ಪರಮೇಶ್ವರ ಎಲ್ಲರ ಗಮನ ಸೆಳೆದರು.

ಇದು ನಡೆದದ್ದು ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ.
ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಗ್ರಾಮದ ಮಹಿಳೆಯರಿಗೆ ಅಣ್ಣನ ರೀತಿ ಬಳೆ ಮಲಾರದ ಮುಂದೆ ಕುಳಿತು ಬಳೆ ತೊಡಿಸಿ ಗ್ರಾಮದ ಜನರ ಮೆಚ್ಚುಗೆ ಪಾತ್ರರಾದರು. ತುಂಬಾಡಿ ಗ್ರಾಮದೇವತೆ ಮಾರಮ್ಮನ ಉತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದ ಬಳಿಕ. ಬಳೆ ಅಂಗಡಿ ಮುಂದೆ ನಿಂತಿದ್ದ ಗ್ರಾಮದ ಹೆಣ್ಣು ಮಕ್ಕಳು ಬಳೆ ಖರೀದಿ ಮಾಡುವುದನ್ನು ಕಂಡು ಶಾಸಕರು ಅಲ್ಲಿದ್ದ ಹೆಣ್ಣು ಮಕ್ಕಳಿಗೆ ತಾವೇ ಮುಂದೆ ನಿಂತು ಅಣ್ಣನ ರೀತಿ ಬಳೆ ತೊಡಿಸಿ ಅಂಗಡಿಯವರಿಗೆ ಹಣ ನೀಡಿದರು.

ಅಲ್ಲಿದ್ದ ಹೆಣ್ಣು ಮಕ್ಕಳು ತಮಗೆ ಇಷ್ಟವಾದ ಹಾಗೂ ಕೇಳಿದಷ್ಟು ಬಳೆ ತೊಡುವಂತೆ ಸ್ವತಃ ಶಾಸಕರೇ ಅಪ್ಪಣೆ ನೀಡಿ ಅದರಹಣವನ್ನು ಅವರೇ ಭರಿಸಿದರು.

ಕರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿದರೆ ಗ್ರಾಮ ರೋಗ ಮುಕ್ತವಾಗುವುದೆಂದು ಹಲವು ವರ್ಷಗಳಿಂದ ಜನರಲ್ಲಿ ನಂಬಿಕೆ ಇದೆ. ಅದಕ್ಕಾಗಿ ಈ ವಿಶೇಷ ಉತ್ಸವನ್ನು ಪ್ರತೀ ಗ್ರಾಮದಲ್ಲಿ ಮಾಡುತ್ತಿದ್ದಾರೆ. ಇಂತ ಧಾರ್ಮಿಕ ಆಚರಣೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಪ್ರದಾಯಿಕ ಆಚರಣೆ ಮಾಡಬೇಕು.

ಗ್ರಾಮ ದೇವತೆ ಉತ್ಸವಗಳಿಗೆ ಮದುವೆಯಾಗಿ ಗಂಡನ ಮನೆ ಹೋಗಿರುವ ಹೆಣ್ಣು ಮಕ್ಕಳು ಊರಿಗೆ ಉತ್ಸವಕ್ಕೆ ಬರುವುದು ಪ್ರತೀತಿ.  ಇಂತಹ ಸಮಯದಲ್ಲಿ ಅವರು ಬಳೆಗಳನ್ನು ಕೊಂಡುಕೊಳ್ಳುವುದು ಸಂಪ್ರದಾಯ. ಈ ವೇಳೆ ಕ್ಷೇತ್ರದ ಶಾಸಕನಾಗಿ ಹೆಣ್ಣು ಮಕ್ಕಳಿಗೆ ಅಣ್ಣನಾಗಿ ಬಳೆಯನ್ನು ಕೊಡಿಸಿರುವುದು ಸಂತಸ ತಂದಿದೆ. ಸಂಪ್ರದಾಯಗಳನ್ನು ಗೌರವಿಸಬೇಕಿರುವುದು ನಮ್ಮ ಆದ್ಯ ಕರ್ತವಯ ಎಂದು ಶಾಸಕ ಡಾ. ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.

ಬೆಳಂಬೆಳಗ್ಗೆ ಶಾಸಕ ಜಮೀರ್ ಮನೆ ಮೇಲೆ ಐಟಿ ದಾಳಿ

ತುಮಕೂರು

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಕಂಟೋನ್ಮೆಂಟ್ ಬಳಿ ಇರುವ ಜಮೀರ್ ಅಹ್ಮದ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಆದಾಯ ಆಸ್ತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.

ಜಮೀರ್ ಅಹಮದ್ ಗೆ ಸಂಬಂಧಿಸಿದ ಕಚೇರಿ, ಮನೆ ಹಾಗೂ ಫ್ಲಾಟ್ ಗಳ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಆದಾಯ ವಿವರ, ಹೂಡಿಕೆ, ಸಂಪಾದನೆ, ಆಸ್ತಿ ಮೊದಲಾದ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಮನೆ ಮಾರದ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಂಡ

ಗುಬ್ಬಿ: ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹುನ್ನಾರದಿಂದ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕಡಬ ಹೋಬಳಿ ಜನ್ನೇನಹಳ್ಳಿ ಗ್ರಾಮದ ಮಮತಾ ಪತಿ ಯಿಂದ ದೈಹಿಕ ಹಲ್ಲೆ ಗೆ ಒಳಗಾಗಿ ಅಪಾಯದಿಂದ ಪಾರಾದ ಮಹಿಳೆ ಎಂದು ತಿಳಿದುಬಂದಿದೆ.

ಮೂಲತಃ ಕೆ.ಕಲ್ಲಹಳ್ಳಿ ಗ್ರಾಮದ ವಾಸಿಯಾಗಿದ್ದ ಮಮತಾ ಎಂಬುವ ಮಹಿಳೆ ಯನ್ನು ಸ್ಥಳೀಯ ಜನ್ನೇನಹಳ್ಳಿ ಗ್ರಾಮದ ವೈರಮುಡಿ ಎಂಬುವ ನೊಂದಿಗೆ 15 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ಇವರ ಕುಟುಂಬ ಬೆಂಗಳೂರಿನ ಕಡಬಗೆರೆಯಲ್ಲಿ ವಾಸವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಆಸ್ತಿ ವಿಚಾರವಾಗಿ ಹಲ್ಲೆ ಒಳಗಾಗಿರುವ ಮಮತಾ ಮತ್ತು ಈಕೆಯ ಪತಿ ವೈರಮುಡಿ ಗೆ ಹಲವು ಬಾರಿ ಸಂಘರ್ಷ ಗಳು ನೆಡೆದಿದೆ ಎನ್ನಲಾಗಿದೆ.

ಇನ್ನು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಮತಾ ತಾಯಿ ಮಹದೇವಮ್ಮ ನನ್ನ ಅಳಿಯ ಕಡಬಗೆರೆ ಮನೆ ಮಾರಾಟ ಮಾಡುವಂತೆ ಕಳೆದ ಆರು ತಿಂಗಳಿಂದ ನನ್ನ ಮಗಳೊಂದಿಗೆ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಈ ವಿಚಾರವಾಗಿ ಹಲವು ಬಾರಿ ನಾವುಗಳು ಬುದ್ಧಿ ಹೇಳಿದರು ಯಾರು ಮಾತು ಕೇಳುತ್ತಿರಲಿಲ್ಲ ಕಳೆದ ಎರಡು ದಿವಸಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಮಾಡುವುದಾಗಿ ಕರೆಸಿಕೊಂಡು ಸೋಮವಾರ ಮದ್ಯಾಹ್ನದ ವೇಳೆಯಲ್ಲಿ ಜನ್ನೇನಹಳ್ಳಿ ಗ್ರಾಮದ ಸಮೀಪದ ನಿರ್ಜನ ತೋಪಿನಲ್ಲಿ ನನ್ನ ಮಗಳಿಗೆ ಮನಸೋ ಇಚ್ಚೆಥಳಿಸಿ ಮಾರಾಣಾಂತಿಕವಾಗಿ ದೈಹಿಕ ಹಲ್ಲೆ ನೆಡೆಸಿ ಇದು ಸಾಲವೆಂಬತೆ ನನ್ನ ಅಳಿಯ ವೈರಮುಡಿ ಹಾಗೂ ಈತನ ಜೊತೆಯಲ್ಲಿ ನನ್ನ ಸಂಬಂಧಿಗಳಾದ ಸುರೇಶ್, ಚಲುವರಾಜು,ನಾರಾಯಣಿ ಎಂಬುವರು ಗುಂಪಾಗಿ ಸೇರಿ ದ್ವಿ ಚಕ್ರ ವಾಹನವನ್ನು ಕಾಲಿನ ಮೇಲೆ ಹತ್ತಿಸುವ ಜೊತೆಗೆ ದೇಹದ ಎಲ್ಲಾ ಭಾಗಗಳಿಗೂ ಕೈಗೆ ಸಿಕ್ಕ ಆಯುಧಗಳಿಂದ ದೈಹಿಕ ಹಲ್ಲೆ ಮಾಡಿದ್ದಾರೆ ಇದರ ಜೊತೆಗೆ ನನಗೂ ಸಹ ಸಾಕಷ್ಟು ಹಲ್ಲೆ ನೆಡೆಸಿ ನಮ್ಮ ಕೊಲೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಗಾಯಾಳು ಮಮತಾ ನನಗೆ ನನ್ನ ಪತಿ ಮನೆಮಾರಾಟ ಮಾಡಿ ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದ. ಕುಟುಂಬದ ಕಲಹದ ಹಿನ್ನಲೆಯಲ್ಲಿ ನನ್ನ ಮಕ್ಕಳು ನನ್ನ ಗಂಡನಮನೆಯಲ್ಲಿ ವಾಸವಿದ್ದರಿಂದ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿ ಯಾವುದೇ ನ್ಯಾಯ ಮಾಡದೇ ನನ್ನ ನಡು ರಸ್ತೆಯಲ್ಲಿ ಮಾನವೀಯತೆ ಇಲ್ಲದಂತೆ ಹಾಕಿರುವ ಬಟ್ಟೆ ಹರಿಯುಂತೆ ಮನಬಂದಂತೆ ಹೊಡೆದು ಎದ್ದು ಹೋಗದಂತೆ ಕಾಲುಗಳ ಮೇಲೆ ಬೈಕ್ ಗಳನ್ನೂ ಹತ್ತಿಸಿದ್ದಾರೆ‌.

ಈ ವಿಚಾರದಲ್ಲಿ ನನ್ನ ಸಂಬಂಧಿಗಳು ‌ಸಹ ನನ್ನ ಗಂಡನೊಂದಿಗೆ ಸೇರಿ ನನ್ನ ಮತ್ತು ನನ್ನ ತಾಯಿಯ ಕೊಲೆಗೆ ಸಂಚುರೂಪಿಸಿದ್ದಾರೆ .ನನ್ನ ಮತ್ತು ನನ್ನ ತಾಯಿ ಇಬ್ಬರನ್ನು ಕೊಲೆ ಮಾಡಿದರೆ ಇರುವ ಎಲ್ಲಾ ಆಸ್ತಿ ನಮಗೆ ಸಿಗುತ್ತದೆ ಎಂಬ ದುರಾಸೆ ಇಂದ ಈ ಹಲ್ಲೆ ಮಾಡಿದ್ದು ಇವರಿಗೆ ಕಾನೂನು ರೀತ್ಯಾ ಶಿಕ್ಷೆ ಆಗಬೇಕು ನನಗಾಗಿರುವ ಅನ್ಯಾಯ ಬೇರೆ ಯಾವುದೇ ಹೆಣ್ಣಿಗೆ ಆಗಬಾರದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಮನವಿಮಾಡಿದರು.

ಸ್ನೇಹಜೀವಿ ಗೂಳೂರು ನಟರಾಜ್ ಗೆ ಅಭಿನಂದನೆಗಳ ಮಹಾಪೂರ

0

ಪಬ್ಲಿಕ್ ಸ್ಟೋರಿ.ಇನ್


ತುಮಕೂರು: ಅಲ್ಲಿ ಹಳೆಯ ಹಲವು ನೆನಪುಗಳ ಮೆಲುಕು. ನಗು, ಕಣ್ಣಂಚಿನಲ್ಲಿ ಸ್ನೇಹದ ಅಭಿಮಾನ. ಹಾರ, ತುರಾಯಿಯ ನಡುವೆ ಆಲಿಂಗನದ ಅಪ್ಪುಗೆ.

ಇದೆಲ್ಲ ಕಂಡು ಬಂದಿದ್ದು ನಗರದಲ್ಲಿ ನಡೆದ ಜಾನುವಾರು ಅಭಿವೃದ್ಧಿ ಅಧಿಕಾರಿ ಗೂಳೂರು ನಟರಾಜ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ.

ಪಶುವೈದ್ಯಕೀಯ ವೈದ್ಯರ ಸಂಘದ ಅಧ್ಯಕ್ಷರೂ ಆಗಿದ್ದ ಗೂಳೂರು ನಟರಾಜ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ಕಾರಣ ಸ್ನೇಹಿತರೆಲ್ಲ ಸೇರಿ ಅವರನ್ನು ಬೀಳ್ಕೊಟ್ಟರು.

ಮಾಜಿ ಸಚಿವ ವೈ.ಕೆ.ರಾಮಯ್ಯ, ಮಾಜಿ ಶಾಸಕರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಅಚ್ಚುಮೆಚ್ಚಿನ ಶಿಷ್ಯರು. ಗೂಳೂರು ನಟರಾಜ್ ಯಾರಿಗೂ ಜಗ್ಗದವರಲ್ಲ, ಬಗ್ಗದವರಲ್ಲ. ಇಲಾಖೆಯ ಭ್ರಷ್ಟಾಚಾರದ ಬಗ್ಗೆಯು ದೊಡ್ಡಮಟ್ಟದ ದನಿ ತೆಗೆದವರು. ಬಡ್ತಿ ವಿಚಾರವೇ ಇರಲಿ, ವೈದ್ಯರ ಬೇಡಿಕೆಗಳೇ ಇರಲಿ ಎಲ್ಲದರಲ್ಲೂ ಅವರದೇ ಮುಂದಾಳು. ಈ ಎಲ್ಲ ನೆನಪುಗಳನ್ನು ಸ್ನೇಹಿತರು ನೆನಪಿನ ಬುತ್ತಿಯಿಂದ ಮೊಗೆಮೊಗೆದು ಹಂಚಿದರು.

ಪಶು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್ ಅವರು ನಟರಾಜ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಅವರ ಕಾರ್ಯವೈಖರಿಯ ನೆನಪು ಮಾಡಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಟರಾಜ್, ಇನ್ಮುಂದೆ ಸಾಮಾಜಿಕ‌ರಂಗದಲ್ಲಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರೇ ನನ್ನ ಗುರುಗಳು. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಸಮಾಜ ಸಂಘಟನೆಯಲ್ಲಿ ತೊಡುಗುವೆ. ನಾನು ರಾಜಣ್ಣ ಅವರ ಕಟ್ಟಾ ಬೆಂಬಲಿಗ. ಅವರಷ್ಟು ಸಮಾಜಮುಖಿ ರಾಜಕಾರಣಿಯನ್ನು ನಾನು ನೋಡಿಲ್ಲ. ವೈಕೆಆರ್ ಬಿಟ್ಟರೆ ರಾಜಣ್ಣ ಅವರೊಬ್ಬರೇ ಜಿಲ್ಲೆಯಲ್ಲಿರುವ ಜೀವಪರ, ಸಮಾಜಮುಖಿ ರಾಜಕಾರಣಿಯಾಗಿದ್ದಾರೆ ಎಂದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಎ.ಸಿ. ದಿವಾಕರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ಜಾನುವಾರು ಅಧಿಕಾರಿ ನಾಗರಾಜು, ಮಹದೇವ್, ಕಾಂತರಾಜು ಇದ್ದರು. ಕೊನೆಯಲ್ಲಿ ನಟರಾಜ್ ಅವರನ್ನು ಸನ್ಮಾನಿಸಲಾಯಿತು.

ತುರುವೇಕೆರೆ: ಸಾಧನೆ ಮೆರೆದ ಚೈತನ್ಯ, ಪ್ರಜ್ವಲ್

Public story


ತುರುವೇಕೆರೆ: ಪಟ್ಟಣದ ವಿರಕ್ತ ಮಠದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆಯು ಸತತ ನಾಲ್ಕನೇ ಬಾರಿಗೆ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಜ್ವಲ್ ಎಂ. ಶೇ94 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಚೈತನ್ಯ ಶೇ93 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರುಚಿತ್ ಎಂ.ಡಿ ಮತ್ತು ಹರ್ಷಿಣಿ ಟಿ.ಕೆ ತಲಾ ಶೇ.92 ಅಂಕ ಗಳಿಸಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.

ನಿಶು ಶೇ.91, ಮೊಹಮ್ಮದ್ ಫುರ್ಕಾನ್ ಶೇ90 ಅಂಕ ಪಡೆದಿದ್ದಾರೆ.

ಶೇ.100 ಫಲಿತಾಂಶ ಬರಲು ಶ್ರಮವಹಿಸಿದ ಪ್ರಾಂಶುಪಾಲೆ ಪುಷ್ಪಾ ಎಸ್ ಪಾಟೀಲ್, ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಯೋಗೀಶ್ವರ ಮಹಾಸ್ವಾಮೀಜಿಗಳು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಐಪಿಎಸ್ ಶಾಲಾ ಆಡಳಿತಾಧಿಕಾರಿ ಡಾ.ರುದ್ರಯ್ಯ ಹೀರೇಮಠ್ ತಿಳಿಸಿದ್ದಾರೆ.

ರೈತರು ಸಾಲ ಸಹಾಯಧನವನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡು ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ಹೇಳಿದರು

ಪಾವಗಡ: ಸಾಲ, ಸಹಾಯಧನವನ್ನು ರೈತರು ಕೃಷಿ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಸೋಮವಾರ ಶೇ 3 ರ ಬಡ್ಡಿ ಧರದಲ್ಲಿ ರೈತರಿಗೆ ಟ್ರಾಕ್ಟರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ಯಂತ ಕಡಿಮೆ ಧರದಲ್ಲಿ ಟ್ರಾಕ್ಟರ್, ಕೃಷಿ ಅಭಿವೃದ್ಧಿ ಗಾಗಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದೆ. ಸಾಲ ಪಡೆದ ನಂತರ ಕೃಷಿಅಭಿವೃದ್ಧಿಗಾಗಿ ಸಾಲದ ಹಣ ಬಳಸಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ರೈತರ ಶ್ರೇಯಸ್ಸಿಗಾಗಿ ಶ್ರಮಿಸುವ ಬ್ಯಾಂಕ್ ಗಳಿಗೆ ರೈತರು ಸಾಲದ ಕಂತನ್ನು ಪ್ರಾಮಾಣಿಕವಾಗಿ ಮರುಪಾವತಿಸಬೇಕು. ಇದರಿಂದ ಇತರೆ ರೈತರಿಗೆ ಹೆಚ್ಚಿನ ಸಾಲ ನೀಡಲು ಅನುಕೂಲವಾಗುತ್ತದೆ. ಸಾಲ ಮರುಪಾವತಿಸದಿದ್ದಲ್ಲಿ ಬ್ಯಾಂಕ್ ನಷ್ಟದತ್ತ ಸಾಗುತ್ತದೆ ರೈತರಿಗೂ ಸಮಸ್ಯೆಯಾಗುತ್ತದೆ. ಸಾಲ ಸೌಲಭ್ಯ ಸಿಗದೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಬ್ಯಾಂಕ್ ಕಟ್ಟಡ ಅಭಿವೃದ್ಧಿಗೆ ಶಾಸಕರ ನಿಧಿಯಲ್ಲಿ ಈಗಾಗಲೆ 5 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ಅಧ್ಯಕ್ಷ ಸೀತಾರಾಮು, ಶೇ 55 ರಷ್ಟು ಸಾಲ ವಸೂಲಾತಿಯಾಗಿದೆ. ಹೆಚ್ಚಿನ ಸಾಲ ವಸೂಲಾತಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಬ್ಯಾಂಕ್ ಅಭಿವೃದ್ಧಿಗೆ ರೈತರು ಕೈ ಜೋಡಿಸಬೇಕು ಎಂದರು.
ಜಿಲ್ಲಾ ವ್ಯವಸ್ಥಾಪಕ ವಿ.ವೇಣುಗೋಪಾಲನಾಯ್ಕ, ವ್ಯವಸ್ಥಾಪಕ ಮಂಜುನಾಥ್, ನಿರ್ದೇಶಕ ಎನ್.ಆರ್.ಅಶ್ವಥಕುಮಾರ್, ಶೇಷಗಿರಿ, ಎಂ.ಎಲ್.ಗೋಪಿ, ಪೆದ್ದಾರೆಡ್ಡಿ, ಮಹಲಿಂಗಪ್ಪ, ಶಾಂತಕುಮಾರ್, ಓಬಳೇಶಪ್ಪ, ಗುಟ್ಟಹಳ್ಳಿ ಅಂಜಿನಪ್ಪ, ಹನುಮಂತರಾಯಪ್ಪ, ನಾಗರಾಜು ಉಪಸ್ಥಿತರಿದ್ದರು.

ದುಂಡ ಗ್ರಾಮ ಆದರ್ಶ ಗ್ರಾಮ ಮಾಡಲು ಪಣತೊಟ್ಟ ಭಾರತ ಜನ ಸೇವಾ ಪ್ರತಿಷ್ಠಾನ

Publicstory


ತುರುವೇಕೆರೆ: ‘ದೇಶದ ಅಭಿವೃದ್ದಿ ಗ್ರಾಮಗಳ ಮೂಲಕವೇ ಆಗಬೇಕಿರುವುದರಿಂದ; ತಾಲ್ಲೂಕಿನ ದುಂಡ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆಂದು’ ಬೆಂಗಳೂರಿನ ಭಾರತ ಜನ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಪ್ರೊ.ಮಮತಾ.ಡಿ.ಜಿ ಹೇಳಿದರು.
ತಾಲ್ಲೂಕಿನ ದಂಡ ಗ್ರಾಮದಲ್ಲಿ ಬೆಂಗಳೂರಿನ ಭಾರತ ಜನ ಸೇವಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಆದರ್ಶ ಗ್ರಾಮ ಉದ್ಘಾಟನೆ ಮತ್ತು ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಗ್ರಾಮಗಳಿಂದ ಆಯ್ಕೆಯಾಗಿ ಬಂದ ಎಷ್ಟೊಂದು ಜನಪ್ರತಿನಿಧಿಗಳು ಅಧಿಕಾರ ನಡೆಸಿದರೂ ಯಾವ ಗ್ರಾಮಗಳ ಉದ್ದಾರ ಇನ್ನೂ ಸಾದ್ಯವಾಗಿಲ್ಲವೆಂದು ವಿಷಾಧ ವ್ಯಕ್ತಪಡಿಸಿದರು.

ದೇಶದ ಜನರು ಕಟ್ಟುವ ಟ್ಯಾಕ್ಸ್ ಹಣ ಏನಾಯಿತು. ಅದರಲ್ಲಿ ಅಲ್ಪವನ್ನಾದರೂ ಬಳಸಿದರೆ ಈ ದೇಶದ ಮೂಲಭೂತ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಡ ಸಹಿತ ಕಿತ್ತು ಹಾಕ ಬಹುದಿತ್ತು.
ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ದುಂಡಾ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು, ಮಕ್ಕಳಿಗೆ ಬಾಲಚೇತನ ಕಾರ್ಯಕ್ರಮ, ಯೋಗ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ಯುವಕರಿಗೆ ನಾಯಕತ್ವದ ತರಬೇತಿ ನೀಡುವುದು, ಸಾವಯವ ಕೃಷಿಯ ಮಹತ್ವ, ಗಿಡಗಳನ್ನು ನೆಡುವುದು, ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಮದ್ಯಪಾನ, ದೂಮಪಾನದ ಅರಿವು, ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂಗಳ ಬಗ್ಗೆ ಅರಿವು,
ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ವ್ಯಕ್ತಿ ವಿಕಸನ ತರಬೇತಿ, ಸಣ್ಣ ಮತ್ತು ಗುಡಿಕೈಗಾರಿಕೆಗೆ ಆದ್ಯತೆ.

ಮಹಿಳೆಯರಿಗೆ ವರಮಾನ ಗಳಿಸುವುದು, ಶೌಚಾಲ ನಿರ್ಮಾಣದ ಅರಿವು ಮೂಡಿಸುವುದು, ಮಕ್ಕಳಿಗೆ ಕ್ರೀಡಾಕೂಟ ಏರ್ಪಡಿಸುವುದು, ಶಾಲೆಯ ಗೋಡೆಯ ಮೇಲೆ ಚಿತ್ರ ಬಿಡಿಸುವುದು, ಪ್ರಜಾಪ್ರಭುತ್ವದ ಬಗ್ಗೆ ಅರಿವು, ಮತದಾನದ ಬಗ್ಗೆ ಜಾಗೃತಿ, ಶಾಲೆಗೆ ಕ್ರೀಡಾ ಮತ್ತು ಇನ್ನಿತರ ಸಲಕರಣೆಗಳನ್ನು ವಿತರಿಸುವುದು, ಗುಡಿಸಲು ಮುಕ್ತ ಗ್ರಾಮ ದೇವಾಲಯದ ಜೀರ್ಣೋದ್ದಾರಕ್ಕೆ ನೆರವು, ಗೋಶಾಲೆಗಳ ನಿರ್ಮಾಣ, ಗೋವುಗಳನ್ನು ದತ್ತು ಸ್ವೀಕರಿಸುವುದು, ಅನಾಥ ಮಕ್ಕಳಿಗೆ ಶಿಕ್ಷಣ ನೀಡುವುದು ಹೀಗೆ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀಮತಿ.ವಿ. ಅವರು ಶರೀರ ಮತ್ತು ಮನಸ್ಸಿನ ಆರೋಗ್ಯ, ದ್ಯಾನ ಮಹತ್ವ, ಸಹಕಾರ ಮನೋಭಾವಗಳ ಬಗ್ಗೆ ತಿಳಿಸಿಕೊಟ್ಟರು.

ಬೆಂಗಳೂರು ವಿಜಯ ಕಾಲೇಜು ಸಹಾಯಕ ಪ್ರಾಧ್ಯಾಪಕಿ ರಾಧಾ.ಆರ್.ವಿ ಅವರು ಸಾವಯವ ಕೃಷಿ ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಇದಕ್ಕೂ ಮೊದಲು ಭಾರತ ಜನ ಸೇವಾ ಪ್ರತಿಷ್ಠಾನದ ಸದಸ್ಯರುಗಳನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಜನಪದ ಸೊಗಡಿನ ಸೋಮನಕುಣಿ ಮತ್ತು ವಾದ್ಯಗೋಷ್ಠಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಡಿ.ಬಿ.ಶಿವಕುಮಾರ ಸ್ವಾಮಿ, ಲತಾ, ನವೀನ್ ಕುಮಾರ್, ಡಿ.ಎಂ.ಸುರೇಶ್, ಎಸ್.ರೇಣುಕಯ್ಯ, ದೊರೆರಾಜು, ಆಹ್ವಾನಿತರಾದ ಡಾ.ಕವಿತಾ ಶಾಸ್ತ್ರಿ, ಲಕ್ಷ್ಮಿ, ಸುಪ್ರೀತ, ಪ್ರೊ.ನಳಿನಿ ಕೆ.ಎನ್, ಲಕ್ಷ್ಮಿಆರ್.ಆರ್, ರೂಪಶ್ರೀ, ಸೌಮ್ಯ, ನಂದಿನಿ ಗ್ರಾಮಸ್ಥರು ಪಾಲ್ಗೊಂಡಿದ್ದರು.