Thursday, May 7, 2026
Google search engine
Home Blog Page 135

ಆಧುನಿಕತೆಯ ಜೊತೆಗೆ ಸಂಸ್ಕೃತಿ ಮರೆಯಬಾರದು

ಪಾವಗಡ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಹೆಬ್ಬೂರು ಕೋದಂಡ ಆಶ್ರಮದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಜತ ಮಹೋತ್ಸವ ಸಂಕೀರ್ಣದ ಪೂಜೆ, ಹೋಮಾದಿ ಕಾರ್ಯಕ್ರಮಗಳಲ್ಲಿ ಮಾತನಾಡಿದರು.

ಸಂಪಾದನೆ, ಆಧುನಿಕತೆಯ ಜೊತೆ ಜೊತೆಗೆ ಸಂಸ್ಕೃತಿಯನ್ನು ಮರೆಯಬಾರದು ಭಾರತ ದೇಶ ಸಂಸ್ಕೃತಿ, ಪರಂಪರೆಗಳಿಂದ ಜಗತ್ತಿನ ಗಮನ ಸೆಳೆದಿದೆ. ರಾಮಕೃಷ್ಣ ಪರಮಹಂಸರು, ವಿವೇಕಾನಂದರಂತಹ ಮಹಾನ್ ಸಾಧಕರನ್ನು ವಿಶ್ವ ನೆನಯುತ್ತದೆ ಎಂದರು. ಈ
ತಾಲ್ಲೂಕು ತೋಳಗಳಿಂದ ಹೆಸರು ಪಡೆದಿತ್ತು. ಸಧ್ಯ ಸ್ವಾಮಿ ಜಪಾನಂದಜೀ ರವರ ಆಧ್ಯಾತ್ಮಿಕ, ಆರೋಗ್ಯ, ಸಾಮಾಜಿಕ ಸೇವೆಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ರಾಮಕೃಷ್ಣ ವಿವೇಕಾನಂದ ವೇದಾಂತದ ಅನುಷ್ಠಾನ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸ್ವಾಮಿ ಜಪಾನಂದಜಿ, ನೂತನ ಆಸ್ಪತ್ರೆ ಸಂಕೀರ್ಣ ಲಕ್ಷಾಂತರ ಮಂದಿಗೆ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ. ವಿವಿಧ ಆರೋಗ್ಯ ಸಮಸ್ಯೆ ಹೊತ್ತು ವಿವಿಧ ಭಾಗಗಳಿಂದ ಬರುವ ಜನತೆಗೆ ದಶಕಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆಯೂ ಆಧುನಿಕ ತಂತ್ರಜ್ಞಾನದೊಂದಿಗೆ ಸೇವೆ ವಿಸ್ತರಿಸಲಾಗುವುದು ಎಂದರು.ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಕಾರದಿಂದ ದಕ್ಷಿಣ ಭಾರತದಲ್ಲಿಯೇ ಆಧುನಿಕ ಕಣ್ಣಿನ ಆಸ್ಪತ್ರೆ ಸಂಕೀರ್ಣದ ಪ್ರಾರಂಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗಣ ಹೋಮ, ಸುದರ್ಶನ ಹೋಮ, ಧನ್ವಂತರಿ ಹೋಮ, ಶ್ರೀ ಚಕ್ರದ ಯಂತ್ರ ಆವಾಹನೆ, ಲಲಿತಾರ್ಚನೆ, ಪೂರ್ಣಾಹುತಿ ನಡೆಯಿತು.
ಪುರಸಭೆ ಸದಸ್ಯ ಸುದೇಶ್ ಬಾಬು, , ವೈದ್ಯ ಜಿ.ವೆಂಕಟರಾಮಯ್ಯ, ಇತಿಹಾಸ ಲೇಖಕ ಚೆಲುವರಾಜನ್, ಅನಂತರಾಮ ಭಟ್, ವಕೀಲ ಯಜ್ಞನಾರಾಯಣ ಶರ್ಮ, ಆನಂದರಾವ್, ಶ್ರೀ ಸುಬ್ಬುನರಸಿಂಹ, ಲೋಕೇಶ್ ದೇವರಾಜ್, ರಾಮನಾಥ ಶೆಟ್ಟಿ, ರಾಮಮೂರ್ತಿ, ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು

ನಗರದ ಸಲಾಂ ಕೋವಿಡ್ ಕೇರ್ ಸೆಂಟರ್ ಗೆ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ

Publicstory


ತುಮಕೂರು: ನಗರದ ರಿಂಗ್ ರಸ್ತೆಯ ಸಲಾಂ ಕೋವಿಡ್ ಕೇರ್ ಸೆಂಟರ್ ಗೆ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು.

ಅವರು ನಗರದ ಹಿರಿಯ ಕಾಂಗ್ರೆಸ್ ಮಖಂಡ ಹಾಗು ಮಾಜಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಇಕ್ಬಾಲ್ ಅಹಮದ್ ರವರು ನಡೆಸುತ್ತಿರುವ ಉಚಿತ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಬಳಿ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದು ಇಕ್ಬಾಲ್ ಅಹಮದ್ ರವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.

ಇದೇ ವೇಳೆ ಅವರು ಸುದ್ಧಿಗಾರರೊಂದಿಗೆ ಮಾತನಾಡಿ ಕೊರೋನಾ ಮಹಾಮಾರಿಯಿಂದ ಇಡೀ ಪ್ರಪಂಚ ತಲ್ಲಣಿಸಿ ಹೋಗಿದೆ. ಬಂಧು ಬಳಗ ಆಪ್ತರು ಹೀಗೆ ಎಲ್ಲರನ್ನು ಕಳೆದುಕೊಂಡು ಜನರ ಜೀವನ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದೆ. ಇಂಥಹ ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಇಕ್ಬಾಲ್ ಅಹಮದ್ ರವರು ಉಚಿತವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ ಬಡವರು ಅಶಕ್ತರಿಗೆ ಸಂಪೂರ್ಣ ಉಚಿತವಾಗಿ ಆರೋಗಯ ಸೇವೆ ನೀಡುತ್ತಾ ಅವರ ಜೀವ ಉಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹವಾದುದ್ದು ಎಂದರು.

ಸಮಾಜದಲ್ಲಿ ಸಹಾಯ ಮಾಡುವ ಶಕ್ತಿಯುಳ್ಳವರು ಬಹಳ ವಿರಳವಾಗಿರುವ ಈ ಸಂದರ್ಭದಲ್ಲಿ ಇಕ್ಬಾಲ್ ಅಹಮದ್ ರವರ ಸಾಮಾಜಿಕ ಕಾರ್ಯ ಶ್ಲಾಘನೀಯವಾದುದ್ದು. ಒಂದು ವರ್ಷಗಳಿಂದ ಫೀವರ್ ಕ್ಲಿನಿಕ್ ನಡೆಸಿಕೊಂಡು ಬಂದಿರುವುದು, ಬಡ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿರುವುದು, ಸಂಕಷ್ಟದಲ್ಲಿದ್ದ ಕಲಾವಿದರಿಗೆ ಆಹಾರ ಪದಾರ್ಥಗಳ ವಿತರಣೆ ಖಾಸಗೀ ಶಾಲಾ ಶಿಕ್ಷಕರಿಗೆ ಫೇಸ್ ಶೀಲ್ಡ್ ಮಾಸ್ಕ ವಿತರಣೆ, ಉಚಿತ ಆಂಬ್ಯುಲೆನ್ಸ್ ಸೇವೆ, ಅನಾಥ ಶವಗಳ ಅಂತ್ಯಸಂಸ್ಕಾರ ಹೀಗೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ಇಕ್ಬಾಲ್ ಅಹಮದ್ ರವರು ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಸಾಮಾಜಿಕ ಕಾಳಜಿಗೆ ಹಿಡಿದಿರುವ ಕನ್ನಡಿಯಾಗಿದೆ. ಹೀಗೆ ಅವರ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಸಾಗಲಿ ಸಮಾಜದ ಎಲ್ಲ ವರ್ಗದ ಜನರಿಗೂ ಅವರ ಸೇವೆ ದೊರೆಯುವಂತಾಗಲಿ ಎಂದು ಆಶಿಸಿದರು.

ಇದೇ ವೇಳೆ ಸಲೀಂ ಅಹಮದ್ ರವರನ್ನು ಸಲಾಂ ಹೆಲ್ತ್ ಸರ್ವೀಸಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ರಾಮಕೃಷ್ಣ, ಹಿರಿಯ ಕಾಂಗ್ರೆಸ್ ಮುಖಂಡ ಮುರುಳೀಧರ ಹಾಲಪ್ಪ, ಮುಂತಾದವರು ಉಪಸ್ಥಿತರಿದ್ದರು.

ಎಸ್. ರಮೇಶ್ ಗೆ ಕಾನೂನು ವಿಭಾಗದಲ್ಲಿ ಡಾಕ್ಟರೇಟ್ ಪದವಿ

Publicstory


ತುಮಕೂರು: ನಗರದ ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ( Ph.d) ಪದವಿ ನೀಡಿದೆ.

ಎ ಸ್ಟಡಿ ಆನ್ ಜ್ಯುಡಿಷಿಯಲ್ ಆಕ್ಟಿವಿಸಮ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾಂಟ್ರಿಬ್ಯೂಷನ್ ಆಫ್ ಜಸ್ಟೀಸ್ ಕೃಷ್ಣ ಅಯ್ಯರ್ ಕುರಿತು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದ ಸಂಶೋಧನಾ ಗ್ರಂಥಕ್ಕೆ ವಿ.ವಿಯು ಡಾಕ್ಟರೇಟ್ ಪದವಿ ನೀಡಿದೆ.

ಪ್ರೊ. ರೆಡ್ಡಿ

ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ( ಆಡಳಿತ), ಸದ್ಯ, ಬೆಂಗಳೂರಿನ ಅಲೆಯನ್ಸ್ ವಿ.ವಿ.ಯ ಕಾನೂನು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಎಸ್. ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.

ಭಾನುವಾರದ ಕವಿತೆ :ಬಿಡುಗಡೆ


ದಿನಾ ದಿನಾ ಕೂಡಿಟ್ಟಿದ್ದ
ದುಃಖ ,ದುಮ್ಮಾನಗಳಿಗೆ
ಬೇಸರಕ್ಕೆ ….

ಆಡದೇ ಉಳಿದ ಮಾತುಗಳಿಗೆ
ಕಳುಹಿಸಿದ್ದ ಮೇಸೇಜುಗಳಿಗೆ
ಬಾಯಿ ಬಂದು…

ಕಾಫಿ ಡೇಯ ಟೇಬಲ್ ಗೆ
ಬಂದ ಕಾಫಿಯ ಒಳಗಿರುವ …
ಹೃದಯಕ್ಕೆ ಬಾಣ ಬಿಡಲು

ಬ್ರಿಗೇಡ್ ರಸ್ತೆಯಲ್ಲಿ
ವಿಂಡೋ ಶಾಪಿಂಗ್…
ನೆಪದಲ್ಲಿ ಅಲೆಯುವುದಕ್ಕೆ

ಮಾಲ್ ಗಳಲ್ಲಿ ಸುತ್ತಿ
ವೆಜ್ಜೀರೋಲ್ ತಿಂದು …
ವಾಯಿಲೆಟ್ ನೇಲ್ ಪಾಲಿಷ್ ಕೊಂಡು

ಎದುರಾ ಬದರು ಕೂತು
ಚಿಕನ್ ಕಬಾಬ್ ತಿಂದು …
ಈರುಳ್ಳಿ ಕಡಿಯಲು

ಗಮ್ಯ ಗುರಿಗಳ
ಚರ್ಚಿಸಿ…
ಮನ ಬಿಚ್ಚಿ ಮಾತನಾಡುವದಕ್ಕೆ

ಮರೆತೇ ಹೋಗಿದೆ
ಕೈ ಹಿಡಿಯುವುದಕ್ಕೆ…
ನಡು ಬಳಸಿ ಬಾಚಿಕೊಳ್ಳುವುದಕ್ಕೆ

ಮೌನದ ಮತ್ತು…
ಕಣ್ಣೇ ಮಾತಾಗಿದೆ ..ಬರೇ ನಗು
ಗಾಳಿ ಸವರಿ ಮುಂಗುರುಳು

ಪೂರ್ತಿ ದಿನದ ಗಳಿಕೆ…
ಎಣಿಸಿ …ಗುಣಾಕಾರ ಭಾಗಾಕಾರ
ಉಳಿದ ಲಾಭ

ಮಾರ್ಷಲ್ ಗಳ ಕಂಡು
ಮಾಸ್ಕ್ ಎಳೆದು
ಮೂಗಿನ ಮೇಲೆ…

ಬದಲಾಗಿಲ್ಲ ಭಾವನೆ
ಚರ್ಮದ ಒರಟು
ತುಟಿಯ ತೇವ …

ಮಧ್ಯದಲ್ಲೇ ಸುಳಿದಾಡುವ
ರಾಕ್ಷಸ… ಮಾಸ್ಕ್ ಜಾರಿಸಿ
ಮುತ್ತು ಕದ್ದು

ನೆನೆದು ಕೊರೋನಾ
ತೀರಿಸಿ ಹರಕೆ…
ತಪ್ಪು ಕಾಣಿಕೆ ಹುಂಡಿಗೆ ಕಾಸು

ಪ್ರೀತಿಯ ನಲ್ಲ
ಗುಡಿಯಲ್ಲಿ ನಿಂತು ಸೊರಗಿದ್ದಾನೋ
ಎಂದು ನೋಡುವುದಕ್ಕೆ…

ಡಾII ರಜನಿ

ಕೊರೋನಾ ಪೂರ್ತಿ ಬಿಡುಗಡೆ ಕೊಟ್ಟಿಲ್ಲಾ.
ಭಾವನೆಗಳು ಬದಲಾಗುವುದಿಲ್ಲ. ಪ್ರೀತಿಯ ಸ್ಪರ್ಶ ಬದಲಾಗಲ್ಲ.
ಗುಡಿಯ ದೇವರು ಕಲ್ಲು. ನಮ್ಮ ಹರಕೆಗಳು, ಬೇಡಿಕೆಗಳು, ನಿಂತ ದೇವರೇ ಉತ್ತರಿಸಬೇಕು. ಕೊರನಾದಂತ ಕಷ್ಟಕಾಲದಲ್ಲಿ , ಮಾನವ ದೇವರಾಗಬೇಕು. ದೇವರು ಮಾನವನಾಗಬೇಕು. ಎಂಬ ಆಶಯ ಇಲ್ಲಿ ವ್ಯಕ್ತವಾಗಿದೆ

ಭಾನುವಾರದ ಕವಿತೆ: ಬಿಡುಗಡೆ

ಕೊರೋನಾ ಪೂರ್ತಿ ಬಿಡುಗಡೆ ಕೊಟ್ಟಿಲ್ಲ.
ಭಾವನೆ ಬದಲಾಗುವುದಿಲ್ಲ. ಪ್ರೀತಿ ಸ್ಪರ್ಶ ಬದಲಾಗಲ್ಲ.
ಗುಡಿಯ ದೇವರು ಕಲ್ಲು. ನಮ್ಮ ಹರಕೆಗಳು, ಬೇಡಿಕೆಗಳು, ನಿಂತ ದೇವರೇ ಉತ್ತರಿಸಬೇಕು. ಕೊರನಾದಂತ ಕಷ್ಟಕಾಲದಲ್ಲಿ , ಮಾನವ ದೇವರಾಗಬೇಕು. ದೇವರು ಮಾನವನಾಗಬೇಕು ಎಂಬುದು ಕವಿತೆಯ ಸಾರವಾಗಿದೆ.


ಡಾII ರಜನಿ


ದಿನಾ ದಿನಾ ಕೂಡಿಟ್ಟಿದ್ದ
ದುಃಖ ,ದುಮ್ಮಾನಗಳಿಗೆ
ಬೇಸರಕ್ಕೆ ….

ಆಡದೇ ಉಳಿದ ಮಾತುಗಳಿಗೆ
ಕಳುಹಿಸಿದ್ದ ಮೇಸೇಜುಗಳಿಗೆ
ಬಾಯಿ ಬಂದು…

ಕಾಫಿ ಡೇಯ ಟೇಬಲ್ ಗೆ
ಬಂದ ಕಾಫಿಯ ಒಳಗಿರುವ …
ಹೃದಯಕ್ಕೆ ಬಾಣ ಬಿಡಲು

ಬ್ರಿಗೇಡ್ ರಸ್ತೆಯಲ್ಲಿ
ವಿಂಡೋ ಶಾಪಿಂಗ್…
ನೆಪದಲ್ಲಿ ಅಲೆಯುವುದಕ್ಕೆ

ಮಾಲ್ ಗಳಲ್ಲಿ ಸುತ್ತಿ
ವೆಜ್ಜೀರೋಲ್ ತಿಂದು …
ವಾಯಿಲೆಟ್ ನೇಲ್ ಪಾಲಿಷ್ ಕೊಂಡು

ಎದುರಾ ಬದರು ಕೂತು
ಚಿಕನ್ ಕಬಾಬ್ ತಿಂದು …
ಈರುಳ್ಳಿ ಕಡಿಯಲು

ಗಮ್ಯ ಗುರಿಗಳ
ಚರ್ಚಿಸಿ…
ಮನ ಬಿಚ್ಚಿ ಮಾತನಾಡುವದಕ್ಕೆ

ಮರೆತೇ ಹೋಗಿದೆ
ಕೈ ಹಿಡಿಯುವುದಕ್ಕೆ…
ನಡು ಬಳಸಿ ಬಾಚಿಕೊಳ್ಳುವುದಕ್ಕೆ

ಮೌನದ ಮತ್ತು…
ಕಣ್ಣೇ ಮಾತಾಗಿದೆ ..ಬರೇ ನಗು
ಗಾಳಿ ಸವರಿ ಮುಂಗುರುಳು

ಪೂರ್ತಿ ದಿನದ ಗಳಿಕೆ…
ಎಣಿಸಿ …ಗುಣಾಕಾರ ಭಾಗಾಕಾರ
ಉಳಿದ ಲಾಭ

ಮಾರ್ಷಲ್ ಗಳ ಕಂಡು
ಮಾಸ್ಕ್ ಎಳೆದು
ಮೂಗಿನ ಮೇಲೆ…

ಬದಲಾಗಿಲ್ಲ ಭಾವನೆ
ಚರ್ಮದ ಒರಟು
ತುಟಿಯ ತೇವ …

ಮಧ್ಯದಲ್ಲೇ ಸುಳಿದಾಡುವ
ರಾಕ್ಷಸ… ಮಾಸ್ಕ್ ಜಾರಿಸಿ
ಮುತ್ತು ಕದ್ದು

ನೆನೆದು ಕೊರೋನಾ
ತೀರಿಸಿ ಹರಕೆ…
ತಪ್ಪು ಕಾಣಿಕೆ ಹುಂಡಿಗೆ ಕಾಸು

ಪ್ರೀತಿಯ ನಲ್ಲ
ಗುಡಿಯಲ್ಲಿ ನಿಂತು ಸೊರಗಿದ್ದಾನೋ
ಎಂದು ನೋಡುವುದಕ್ಕೆ…

ತುಮಕೂರು ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟ

ತುಮಕೂರು : ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಇಂತಿದೆ
1)ಸಿದ್ದಗಂಗಾ ಮಠ (ಬೆಳಗುಂಬ) – ಸಾಮಾನ್ಯ ಮಹಿಳೆ 2)ಗೂಳೂರು ಸಾಮಾನ್ಯ ಮಹಿಳೆ 3)ಹೆಬ್ಬೂರು ಸಾಮಾನ್ಯ ಮಹಿಳೆ
4)ಸಿಟಿ ಕೆರೆ ಅನುಸೂಚಿತ ಜಾತಿ ಮಹಿಳೆ 5) ಹೊನ್ನುಡಿಕೆ ಸಾಮಾನ್ಯ ಮಹಿಳೆ 6)ಊರುಕೆರೆ ಸಾಮಾನ್ಯ 7) ಊರ್ಡಿಗೆರೆ
ಹಿಂದುಳಿದ ವರ್ಗ ಅ ಮಹಿಳೆ 8)ಹೆಗ್ಗೆರೆ ಅನುಸೂಚಿತ ಪಂಗಡ 9)ನಾಗವಲ್ಲಿ ಅನುಸೂಚಿತ ಜಾತಿ
10)ಕಲ್ಲೂರು (ಚಂದ್ರಶೇಖರಪುರ) ಹಿಂದುಳಿದ ವರ್ಗ ಬ 11)ಚೇಳೂರು ಹಿಂದುಳಿದ ವರ್ಗ ಅ
12)ಅಮ್ಮನಘಟ್ಟ ಹಿಂದುಳಿದ ವರ್ಗದ ಬ ಮಹಿಳೆ 13)ಹಾಗಲವಾಡಿ ಅನುಸೂಚಿತ ಜಾತಿ ಮಹಿಳೆ
14)ಕುನ್ನಾಲ (ಕಡಬ) ಸಾಮಾನ್ಯ ಮಹಿಳೆ 15)ನಿಟ್ಟೂರು ಹಿಂದುಳಿದ ವರ್ಗ ಅ 16)ಅಳಿಲುಘಟ್ಟ ಅನುಸೂಚಿತ ಪಂಗಡ
17)ಕೊತ್ತಗೆರೆ ಸಾಮಾನ್ಯ 18)ಕಿತ್ನಾಮಂಗಲ ಅನುಸೂಚಿತ ಜಾತಿ ಮಹಿಳೆ 19)ಇಪ್ಪಾಡಿ (ಹುತ್ರಿದುರ್ಗ) ಸಾಮಾನ್ಯ
20)ಹುಲಿಯೂರುದುರ್ಗ ಸಾಮಾನ್ಯ ಮಹಿಳೆ 21)ಅಮೃತೂರು ಸಾಮಾನ್ಯ 22)ಬೀರಗಾನಗಳ್ಳಿ (ಯಡಿಯೂರು) ಸಾಮಾನ್ಯ 23)ಹೂನ್ನಹಳ್ಳಿ ಸಾಮಾನ್ಯ ಮಹಿಳೆ
24)ಹಾಲು ಕುರಿಕೆ ಸಾಮಾನ್ಯ 25)ಕಿಬ್ಬನಹಳ್ಳಿ ಹಿಂದುಳಿದ ವರ್ಗ ಅ ಮಹಿಳೆ 26)ಈಚನೂರು ಹಿಂದುಳಿದ ವರ್ಗದ ಬ
27)ನೊಣವಿನಕೆರೆ ಅನುಸೂಚಿತ ಜಾತಿ 28)ಬಾಣಸಂದ್ರ ಸಾಮಾನ್ಯ 29)ಬೆನಕನ ಕೆರೆ ಹಿಂದುಳಿದ ವರ್ಗ ಅ
30)ಆದಿತ್ಯಪಟ್ಟಣ (ದಂಡಿನಶಿವg) ಹಿಂದುಳಿದ ವರ್ಗ ಅ ಮಹಿಳೆ 31)ಮಾಯಸಂದ್ರ ಸಾಮಾನ್ಯ
32)ಮುನಿಯೂರು ಅನುಸೂಚಿತ ಜಾತಿ 33)ತಮ್ಮಡಿಹಳ್ಳಿ ಅನುಸೂಚಿತ ಜಾತಿ ಮಹಿಳೆ 34)ಕೆಂಕೆರೆ (ಹೊಯ್ಸಳಕಟ್ಟೆ) ಸಾಮಾನ್ಯ ಮಹಿಳೆ
35)ತಿಮ್ಮನಹಳ್ಳಿ (ಕಂದಿಕೆರೆ) ಸಾಮಾನ್ಯ 36)ಹಂದನಕೆರೆ ಅನುಸೂಚಿತ ಪಂಗಡ 37)ಶೆಟ್ಟಿಕೆರೆ ಸಾಮಾನ್ಯ ಮಹಿಳೆ 38)ಚಿನಕವಜ್ರ ಸಾಮಾನ್ಯ ಮಹಿಳೆ
39)ಬಡವನಹಳ್ಳಿ (ದೊಡ್ಡೇರಿ) ಅನುಸೂಚಿತ ಜಾತಿ ಮಹಿಳೆ 40)ಹೊಸಕೆರೆ ಹಿಂದುಳಿದ ವರ್ಗ ಅ 41)ಗರಣಿ (ಮಿಡಿಗೇಶಿ) ಸಾಮಾನ್ಯ
42)ಇಟಕದಿಬ್ಬನಹಳ್ಳಿ ಅನುಸೂಚಿತ ಪಂಗಡ ಮಹಿಳೆ 43)ಕೊಡಿಗೇನಹಳ್ಳಿ ಸಾಮಾನ್ಯ 44)ಬ್ಯಾಲ್ಯ (ಪುರವರ )ಸಾಮಾನ್ಯ ಮಹಿಳೆ
45)ಬೊಮ್ಮಲದೇವಿಪುರ ಅನುಸೂಚಿತ ಜಾತಿ ಮಹಿಳೆ 46)ಹೊಳವನಹಳ್ಳಿ ಸಾಮಾನ್ಯ ಮಹಿಳೆ 47)ಹೂಲೀಕುಂಟೆ ಸಾಮಾನ್ಯ
48)ಕೋಳಾಲ ಸಾಮಾನ್ಯ ಮಹಿಳೆ 49)ತೋವಿನಕೆರೆ ಸಾಮಾನ್ಯ 50)ತಡಕಲೂರು (ಹುಲಿಕುಂಟೆ) ಹಿಂದುಳಿದ ವರ್ಗ ಅ ಮಹಿಳೆ
51)ನಾದೂನೂರು ಅನುಸೂಚಿತ ಜಾತಿ 52)ಬೇವಿನಹಳ್ಳಿ ಸಾಮಾನ್ಯ 53)ತಾವರೆಕೆರೆ ಸಾಮಾನ್ಯ 54)ಮದಲೂರು ಅನುಸೂಚಿತ ಜಾತಿ
55)ಚಿಕ್ಕನಹಳ್ಳಿ ಅನುಸೂಚಿತ ಪಂಗಡ ಮಹಿಳೆ 56)ಕಳ್ಳಂಬೆಳ್ಳ ಸಾಮಾನ್ಯ ಮಹಿಳೆ 57)ಬುಕ್ಕಾಪಟ್ಟಣ ಹಿಂದುಳಿದ ವರ್ಗ ಅ ಮಹಿಳೆ
58)ಬ್ಯಾಡನೂರು ಸಾಮಾನ್ಯ 59)ಕೋಟ ಗುಡ್ಡ ಅನುಸೂಚಿತ ಜಾತಿ ಮಹಿಳೆ 60)ಅರಸೀಕೆರೆ (ಮಂಗಳವಾಡ) ಸಾಮಾನ್ಯ ಮಹಿಳೆ
61)ಪಳವಳ್ಳಿ (ನಾಗಲಮಡಿಕೆ) ಹಿಂದುಳಿದ ವರ್ಗ ಅ ಮಹಿಳೆ 62)ವೆಂಕಟಾಪುರ ಸಾಮಾನ್ಯ 63)ವೈಎನ್ ಹೊಸಕೋಟೆ ಅನುಸೂಚಿತ ಜಾತಿ
64)ಕಾಮನದುರ್ಗ (ನೀಲಮ್ಮನ ಹಳ್ಳಿ ) ಅನುಸೂಚಿತ ಪಂಗಡ ಮಹಿಳೆ

ಕೋವಿಡ್ ಲಸಿಕೆಗಾಗಿ ಪಾವಗಡ ಜನರ ಆಗ್ರಹ

Publicstory


ಪಾವಗಡ: ಲಸಿಕೆ ಕೊರತೆ ನೀಗಿಸಿ ತಾಲ್ಲೂಕಿನ ಜನತೆಗೆ ಸಮರ್ಪಕವಾಗಿ ಲಸಿಕೆ ಹಾಕಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಕೆ.ಆರ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಆರಂಭದಲ್ಲಿ ಸಾವಿರಾರು ಲಸಿಕೆ ಹಾಕಲಾಯಿತು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದುಪಡಿಸುವುವಾಗಿ ಪ್ರಚಾರವಾಯಿತು. ಈ ಹಿನ್ನೆಲೆ ಜನತೆ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಮಾಹಿತಿ ಕೊತೆಯಿಂದ ಲಸಿಕೆ ಸಿಗದೆ ಮರಳುತ್ತಿದ್ದಾರೆ ಎಂದು ಆರೋಪಿಸಿದರು.

ಲಸಿಕೆ ಹಾಕುವ ಸ್ಥಳದ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ತಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ತಾಲ್ಲೂಕು ವೈದ್ಯಾಧಿಕಾರಿ, ಿತರೆ ಅಧಿಕಾರಿಗಳು ಯಾರೂ ಸಹ ಸಮರ್ಪಕ ಮಾಹಿತಿ ಕೊಡುತ್ತಿಲ್ಲ. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಸಿದ್ದರಿರುವ ಜನತೆಗೆ ಲಸಿಕೆ ಸಿಗದಂತಾಗಿದೆ.

ವಿವಿಧ ಇಲಾಖಾ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಲಸಿಕೆ ಸಿಗದೆ ಮನೆಗಳಿಗೆ ಹಿಂತಿರುಗಿರುವುದನ್ನು ಸ್ಮರಿಸಬಹುದು ಎಂದು ದೂರಿದರು.

ಇಲಾಖಾ ಅಧಿಕಾರಿಗಳು ವೈಯಕ್ತಿಕ ಪ್ರತಿಷ್ಠೆ ತೊರೆದು ಲಸಿಕೆ ಹಾಕುವ ಸ್ಥಳ, ದಿನಾಂಕ, ಸಮಯದ ಮಾಹಿತಿಯನ್ನು ಪ್ರಚಾರ ಮಾಡಬೇಕು. ಲಸಿಕಾ ಕೇಂದ್ರದಿಂದ ಜನತೆ ಲಸಿಕೆ ಪಡೆಯದೆ ಹಿಂದಿರುಗದಂತೆ ಎಚ್ಚರವಹಿಸಬೇಕು. ತಾಲ್ಲೂಕಿನ ಎಲ್ಲ ಜನತೆಗೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಾನಂ ಶಶಿಕಿರಣ್, ಬಿ.ಎಂ.ನಾಗರಾಜು, ರಾಕೇಶ್ ಉಪಸ್ಥಿತರಿದ್ದರು.

ಪಂಚಾಯತಿ ಚುನಾವಣೆ : ಅಂತಿಮ ಮತದಾರರ ಪಟ್ಟಿ ಪ್ರಕಟ

Publicstory


ತುಮಕೂರು:- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಕ್ಚೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಆಯಾ ತಾಲ್ಲೂಕು ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ಅರ್ಹ ಮತದಾರರು ತಮ್ಮ ವಿವರಗಳನ್ನು ಈ ಅಂತಿಮ ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.

ಅತ್ತೆಯನ್ನೇ ಪೆಟ್ರೋಲ್ ಸುರಿದು ಕೊಂದ ಸೊಸೆ

Public story


ಶಿರಾ: ಸೊಸೆಯೇ ಅತ್ತೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿರುವ ಘಟನೆ ಶಿರಾ ತಾಲ್ಲೂಕಿನ ಗೌಡನಗೆರೆ ಹೋಬಳಿ ಉಜ್ಜ‌ನಕುಂಟೆಯಲ್ಲಿ ಬೆಳಕಿಗೆ ಬಂದಿದೆ.

ಸೊಸೆ ಸುಧಾರಾಣೆ ಕೊಲೆ ಮಾಡಿದಾಕೆ. ಸರೋಜಮ್ಮ (65) ಕೊಲೆಯಾದವಳು.

ಸುಧಾರಾಣೆ ಅವರು ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ಅತ್ತೆಗೆ ಗೊತ್ತಾಗಿದೆ.

ಇದಾದ ನಂತರ ಪ್ರಿಯಕರ ರಂಗಪ್ಪನ ಜತೆ ಸೇರಿ ಅತ್ತೆಗೆ ಪೆಟ್ರೋಲ್ ಸುರಿದು ಕೊಂದಿದ್ದಾಳೆ.

ಮೊದಲಿಗೆ ಬೆಂಕಿ ತಗುಲಿ ಸರೋಜಮ್ಮ ಮೃತ ಪಟ್ಟಿದ್ದಾಗಿ ನಂಬಲಾಗಿತ್ತು. ಆದರೆ ವಿಚಾರಣೆ ನಡೆಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.

ಭಾನುವಾರದ ಕವಿತೆ: ಮಳೆ

ಮಳೆಯನ್ನು ರೂಪಕವಾಗಿಸಿಕೊಂಡು ಬದುಕಿನ ಭಾವ, ಸಂಕಷ್ಟಗಳ ಸಂಕೀರ್ಣತೆಯನ್ನು ಈ ಕವಿತೆ ಹೇಳುತ್ತದೆ. ಮಳೆಯ ಸೊಬಗು ಒಬ್ಬೊಬ್ಬರಿಗೆ ಒಂದೊಂದು ತೆರೆನಾದ ಸುಖ,‌ಕಷ್ಟಗಳನ್ನು ಕರುಣಿಸುತ್ತದೆ. ಒಬ್ಬರಿಗೆ ಸುಖವಾದದ್ದು, ಮತ್ತೊಬ್ಬರಿಗೆ ದುಂಖವೂ ಆಗಬಹುದು. ಮಳೆ ನಿಂತ ಮೇಲೆ ಸಿಗುವಂತ ನಿರಾಳತೆ ದುಂಖದ ಬಳಿಕವೂ ಸಿಗಲಿದೆ ಎಂಬುದನ್ನು ಕವನ ಹೇಳುತ್ತದೆ.



ಮಳೆ,🏝


ಇಳೆಯ ಕೊಳೆ ..
ತೊಳೆಯೊ ಮಳೆ

ಮೆಲ್ಲಗೆ ಜಿನುಗಿ ಇಂಗಿ ..
ಹೀರಿ ಒದ್ದೆ

ಪಟ್ಟು ಬಿಡದೆ ಸುರಿದು..
ಹರಿದು

ಭೂಮಿ ಸದ್ದಿಲ್ಲದೆ ಹೀರಿ..
ಕರೆಂಟ್ ವೈರುಗಳಿಗೆ ಮುತ್ತು

ತಾರಸಿಯಿಂದ ಇಳಿಯೇ..
ಸೋಮಾರಿ

ಕಾರಿನ ಅಚೆ ಕಾಣಿಸದ ರಸ್ತೆ..
ಒಳಗೆ ಮೋಡ ಹಬೆ

ಗಾಜಿನ ಮೇಲೆ ..
ಮುಟ್ಟಲಾಗದ ಹನಿ ಗೆರೆ ಚಿತ್ತಾರ

ಕರಿ ಮುಗಿಲು..
ಕಡಲನ್ನು ಕುಡಿದ ಕಣಜ

ಎಲ್ಲೋ ಕಣ್ಣೀರ ಹನಿ..
ಬಿಸಿ ಬಜ್ಜಿಗೆ ಸಾಲು

ಸರ್ರನೆ ಹರಿದ ಕಾರು..
ಹಾರಿಸಿ ಕೊಚ್ಚೆ

ಮನದಲ್ಲಿ ಮಿಡಿದ ಕವನ..
ಮಳೆ ನೀರನ್ನು ಒದರಿದ ಬೀದಿನಾಯಿ

ಒದ್ದೆ ಬಟ್ಟೆ..
ಓಡಿ ದಾಟಿದ ಹೊಸಿಲು

ಬಟ್ಟೆ ಬದಲಿಸಿ…
ಬೆಚ್ಚನೆ ಸೋಫಾ

ಮುಖಕ್ಕೆ ಟವಲ್ ಸುತ್ತಿ…
ಕರೆ ತಂದ ಮಗುವಿಗೆ ಜ್ವರ

ಗರಿಗಳ ಮೇಲಿನ…
ಟಪ್ ಟಪ್

ಬಿದ್ದ ಹನಿ ಹನಿಗೂ..
ಅಲ್ಲಾಡುವ ಎಲೆ

ಕಾದು ತಾನು ತೊಟ್ಟಿಕ್ಕಲು..
ನೆನೆದ ಮರ

ಬೆಳಗ್ಗೆ ಶುಭ್ರ ಮುಗಿಲು..
ತಣ್ಣಗಾದ ನೆಲ