Thursday, November 30, 2023
spot_img

ಭಾನುವಾರದ ಕವಿತೆ :ಬಿಡುಗಡೆ


ದಿನಾ ದಿನಾ ಕೂಡಿಟ್ಟಿದ್ದ
ದುಃಖ ,ದುಮ್ಮಾನಗಳಿಗೆ
ಬೇಸರಕ್ಕೆ ….

ಆಡದೇ ಉಳಿದ ಮಾತುಗಳಿಗೆ
ಕಳುಹಿಸಿದ್ದ ಮೇಸೇಜುಗಳಿಗೆ
ಬಾಯಿ ಬಂದು…

ಕಾಫಿ ಡೇಯ ಟೇಬಲ್ ಗೆ
ಬಂದ ಕಾಫಿಯ ಒಳಗಿರುವ …
ಹೃದಯಕ್ಕೆ ಬಾಣ ಬಿಡಲು

ಬ್ರಿಗೇಡ್ ರಸ್ತೆಯಲ್ಲಿ
ವಿಂಡೋ ಶಾಪಿಂಗ್…
ನೆಪದಲ್ಲಿ ಅಲೆಯುವುದಕ್ಕೆ

ಮಾಲ್ ಗಳಲ್ಲಿ ಸುತ್ತಿ
ವೆಜ್ಜೀರೋಲ್ ತಿಂದು …
ವಾಯಿಲೆಟ್ ನೇಲ್ ಪಾಲಿಷ್ ಕೊಂಡು

ಎದುರಾ ಬದರು ಕೂತು
ಚಿಕನ್ ಕಬಾಬ್ ತಿಂದು …
ಈರುಳ್ಳಿ ಕಡಿಯಲು

ಗಮ್ಯ ಗುರಿಗಳ
ಚರ್ಚಿಸಿ…
ಮನ ಬಿಚ್ಚಿ ಮಾತನಾಡುವದಕ್ಕೆ

ಮರೆತೇ ಹೋಗಿದೆ
ಕೈ ಹಿಡಿಯುವುದಕ್ಕೆ…
ನಡು ಬಳಸಿ ಬಾಚಿಕೊಳ್ಳುವುದಕ್ಕೆ

ಮೌನದ ಮತ್ತು…
ಕಣ್ಣೇ ಮಾತಾಗಿದೆ ..ಬರೇ ನಗು
ಗಾಳಿ ಸವರಿ ಮುಂಗುರುಳು

ಪೂರ್ತಿ ದಿನದ ಗಳಿಕೆ…
ಎಣಿಸಿ …ಗುಣಾಕಾರ ಭಾಗಾಕಾರ
ಉಳಿದ ಲಾಭ

ಮಾರ್ಷಲ್ ಗಳ ಕಂಡು
ಮಾಸ್ಕ್ ಎಳೆದು
ಮೂಗಿನ ಮೇಲೆ…

ಬದಲಾಗಿಲ್ಲ ಭಾವನೆ
ಚರ್ಮದ ಒರಟು
ತುಟಿಯ ತೇವ …

ಮಧ್ಯದಲ್ಲೇ ಸುಳಿದಾಡುವ
ರಾಕ್ಷಸ… ಮಾಸ್ಕ್ ಜಾರಿಸಿ
ಮುತ್ತು ಕದ್ದು

ನೆನೆದು ಕೊರೋನಾ
ತೀರಿಸಿ ಹರಕೆ…
ತಪ್ಪು ಕಾಣಿಕೆ ಹುಂಡಿಗೆ ಕಾಸು

ಪ್ರೀತಿಯ ನಲ್ಲ
ಗುಡಿಯಲ್ಲಿ ನಿಂತು ಸೊರಗಿದ್ದಾನೋ
ಎಂದು ನೋಡುವುದಕ್ಕೆ…

ಡಾII ರಜನಿ

ಕೊರೋನಾ ಪೂರ್ತಿ ಬಿಡುಗಡೆ ಕೊಟ್ಟಿಲ್ಲಾ.
ಭಾವನೆಗಳು ಬದಲಾಗುವುದಿಲ್ಲ. ಪ್ರೀತಿಯ ಸ್ಪರ್ಶ ಬದಲಾಗಲ್ಲ.
ಗುಡಿಯ ದೇವರು ಕಲ್ಲು. ನಮ್ಮ ಹರಕೆಗಳು, ಬೇಡಿಕೆಗಳು, ನಿಂತ ದೇವರೇ ಉತ್ತರಿಸಬೇಕು. ಕೊರನಾದಂತ ಕಷ್ಟಕಾಲದಲ್ಲಿ , ಮಾನವ ದೇವರಾಗಬೇಕು. ದೇವರು ಮಾನವನಾಗಬೇಕು. ಎಂಬ ಆಶಯ ಇಲ್ಲಿ ವ್ಯಕ್ತವಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು