Saturday, May 9, 2026
Google search engine
Home Blog Page 147

ನೊಣವಿನಕೆರೆ, ಸಿ.ಎಸ್.ಪುರ ಸೇರಿ 67 ಗ್ರಾ.ಪಂ‌.ಗಳು ಕೊರೊನಾ ಹಾಟ್ಸ್ಪಾಟ್

Publicstory


ತುಮಕೂರು:
ನಗರದಲ್ಲಿ ಹಾಟ್ ಸ್ಪಾಟ್ ಪ್ರದೇಶಗಳನ್ನು ಗುರುತಿಸಿರುವ ಮಾದರಿಯಲ್ಲಿಯೇ ಹೆಚ್ಚು ಕೊರೋನಾ ಪ್ರಕರಣಗಳಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯನ್ನು ಹಾಟ್ ಸ್ಪಾಟ್ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿಯೂ ಕೊರೋನಾ ನಿಯಂತ್ರಣ ಸಂಬಂಧ ಹೆಚ್ಚಿನ ಕ್ರಮ ಕೈಗೊಳ್ಳಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಕುಣಿಗಲ್ ತಾಲೂಕಿನ ಜಿನ್ನಾಗರ; ಕೊರಟಗೆರೆಯ ಹುಲಿಕುಂಟೆ ಹಾಗೂ ಮಾವತ್ತೂರು; ಚಿಕ್ಕನಾಯಕನಹಳ್ಳಿಯ ಕಂದೀಕೆರೆ, ಶೆಟ್ಟಿಕೆರೆ, ಜೆ.ಸಿ.ಪುರ; ತುರುವೇಕೆರೆಯ ಮುನಿಯೂರು, ಕಣತ್ತೂರು, ಗೋಣಿ ತುಮಕೂರು, ಲೋಕಮ್ಮನಹಳ್ಳಿ;

ತಿಪಟೂರಿನ ಹುಚ್ಚಗೌಡನಹಳ್ಳಿ, ಬಿಳಿಗೆರೆ, ನೊಣವಿನಕೆರೆ; ಗುಬ್ಬಿಯ ಹಾಗಲವಾಡಿ, ಅಂಕಸಂದ್ರ, ಚೇಳೂರು, ತ್ಯಾಗಟೂರು, ನಿಟ್ಟೂರು, ಕಡಬ, ಸಿ.ಎಸ್. ಪುರ;

ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರು, ತಿಮ್ಮರಾಜನಹಳ್ಳಿ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಹಿರೇಹಳ್ಳಿ, ಮೈದಾಳ, ಗೂಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಗಂಗೋನಹಳ್ಳಿ, ಬಳ್ಳಗೆರೆ,

ನಾಗವಲ್ಲಿ, ಹೆಬ್ಬೂರು; ಶಿರಾ ತಾಲೂಕಿನ ಬರಗೂರು, ಹಂದಿಕುಂಟೆ,‌ ನಾದೂರು, ತಾವರೆಕೆರೆ, ಭುವನಹಳ್ಳಿ,‌ ಲಕ್ಷ್ಮಿಸಾಗರ, ಮೇಲುಕುಂಟೆ,‌ ಕೊಟ್ಟ, ಮದಲೂರು, ಭೂಪಸಂದ್ರ, ತರೂರು,

ಚನ್ನೇನಹಳ್ಳಿ,‌ ಕಳ್ಳಂಬೆಳ್ಳ,‌ ಗೋಪಾಲದೇವರಹಳ್ಳಿ, ಸೀಬಿ ಅಗ್ರಹಾರ, ದೊಡ್ಡ ಅಗ್ರಹಾರ, ನೇರಳೇಗುಡ್ಡ, ಬುಕ್ಕಾಪಟ್ಟಣ; ಮಧುಗಿರಿಯ ಮಿಡಿಗೇಶಿ,ಬ್ಯಾಲ್ಯ, ದೊಡ್ಡೇರಿ, ಚಂದ್ರಗಿರಿ; ಪಾವಗಡದ ವೆಂಕಟಪುರ, ರಾಜವಂತಿ, ಕನ್ನಮೇಡಿ, ಅಚಮ್ಮನಹಳ್ಳಿ, ಕೆ.ಟಿ.ಹಳ್ಳಿ, ಕೋಟಗುಡ್ಡ, ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಈ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಪ್ರದೇಶಗಳಲ್ಲಿ ಜನರು ಹೊರಗಡೆ ತಿರುಗಾಡಬಾರದು. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣವೇ ಕೋವಿಡ್ ಪರೀಕ್ಷೆಗೊಳಪಡಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ: ಇಂಥ ಸೌಭಾಗ್ಯ ನಮ್ಗೂ ಕೊಡಿ ಡಾಕ್ಟರ್ ಸಚಿವರೇ

Publicstory


ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ ಹೊರಡಿಸಿರುವ ಆದೇಶವನ್ನು ಇತರೆ ಸೆಟಲೈಟ್ ಸಿಟಿಗಳಿಗೂ ವಿಸ್ತರಿಸುವ ಕೆಲಸವನ್ನು ಆರೋಗ್ಯ ಸಚಿವ (ಡಾಕ್ಟರ್ ಸಚಿವ) ಡಾ. ಸುಧಾಕರ್ ಮಾಡುವ ಧೈರ್ಯ ತೋರಬೇಕಾಗಿದೆ.

ಬೆಂಗಳೂರಿನ ಕೊಲಂಬಿಯಾ ಏಷ್ಯಾ, ಸಿಎಂಐ, ಬ್ಯಾಪಿಸ್ಟ್ ಆಸ್ಪತ್ರೆಗಳ ಶೇ 15 ರಷ್ಟು ಹಾಸಿಗೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಮೀಸಲಿಟ್ಟುಕೊಂಡಿರಬೇಕು ಎಂದು ಆರೋಗ್ಯ ಸಚಿವರ ಮೌಖಿಕ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿರುವ ಈ ಸೌಲಭ್ಯವನ್ನು ಬೆಂಗಳೂರು ಸುತ್ತಮುತ್ತಲಿನ ಎಲ್ಲ ಸೆಟಲೈಟ್ ಸಿಟಿಗಳಿಗೂ ವಿಸ್ತರಿಸಿ ಸಚಿವರು ಪುಣ್ಯ ಕಟ್ಟಿ ಕೊಳ್ಳಬೇಕಾಗಿದೆ‌.

ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿಕೊಂಡರೆ ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಶೇ 17 ರಷ್ಟು ಇಲ್ಲಿ ಹೆಚ್ಚಾಗುತ್ತಿದೆ.

ತುಮಕೂರು ರಾಜ್ಯದ 21 ಜಿಲ್ಲೆಗಳ ಹೆಬ್ಬಾಗಿಲು. ಬೆಂಗಳೂರಿನ ಜತೆ ನಿಕಟ ಸಂಪರ್ಕ ಹೊಂದಿರುವ ಬೆಂಗಳೂರಿ‌ನ ಸೆಟಲೈಟ್ ಸಿಟಿ. ಇಲ್ಲೂ ಸೌಲಭ್ಯಗಳಿಲ್ಲದೇ ಜನರು ಒದ್ದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿದೆ.

ತುಮಕೂರಿನಿಂದ ಬೆಂಗಳೂರಿಗೆ ಹೋಗುವಾಗ ಮಾರ್ಗಮಧ್ಯೆ ಸಿಗುವ ಎಂ.ಎಸ್.ರಾಮಯ್ಯ-ಹರ್ಷ ಆಸ್ಪತ್ರೆ, ಪೀಪಲ್ ಟ್ರೀ, ಪ್ರೊಕ್ರಿಯಾ, ಸ್ಪರ್ಷ ಆಸ್ಪತ್ರೆಗಳಲ್ಲಿ ತುಮಕೂರಿನ ರೋಗಿಗಳಿಗಾಗಿ ಶೇ 15 ರಷ್ಟು ಹಾಸಿಗೆ ಮೀಸಲಿಡುವಂತೆ ಸಚಿವರು ಆದೇಶ ಹೊರಡಿಸಲಿ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಲೇ ಗಮನ ಹರಿಸಬೇಕಾಗಿದೆ.

ಇನ್ನೂ, ಬೆಂಗಳೂರಿಗೆ ಹತ್ತಿರದಲ್ಲಿರುವ ಕೆಂಗೇರಿ, ರಾಮನಗರ, ಗೌರಿಬಿದನೂರು, ದೊಡ್ಡಬಳ್ಳಾಪುರ, ದಾಬಸಪೇಟೆ, ನೆಲಮಂಗಲದ ರೋಗಿಗಳಿಗೂ ಅನುಕೂಲವಾಗುವಂತೆ ಆಯಾ ಪಟ್ಟಣಗಳಿಂದ ಬೆಂಗಳೂರಿಗೆ ಬರುವಾಗ ಸಿಗುವ ಎಲ್ಲ ಆಸ್ಪತ್ರಗಳಲ್ಲು ಶೇ 15 ರಷ್ಟು ಹಾಸಿಗೆ ಮೀಸಲಿಡುವ ಆದೇಶಕ್ಕೆ ಸಚಿವರು ಮುಂದಾಗಬೇಕಾಗಿದೆ.

ಚಿಕ್ಕಬಳ್ಳಾಪುರದ ಜನರಷ್ಟೇ ಅಲ್ಲ ಈ ಎಲ್ಲ ನಗರಗಳ ಜ‌ನರ ಜೀವ ಉಳಿಸಿದ ಪುಣ್ಯ ಸಚಿವರಿಗೆ ಸಿಗಲಿದೆ. ಆದರೆ ಅವರು ಈ ಪುಣ್ಯಕ್ಕೆ ಬೇಕಾಗುವಷ್ಟು ಧೈರ್ಯ ತೋರಿಸುವವರೇ ಎಂಬುದನ್ನು ಕಾದುನೋಡಬೇಕಾಗಿದೆ.

“ಅಂಬ್ಯುಲೆನ್ಸ್ ನಿರ್ವಹಣೆಯಲ್ಲಿ ಸರ್ಕಾರವನ್ನೇ ನಾಚಿಸಿದ ಶಾಸಕ ಡಿ.ಸಿ ಗೌರಿಶಂಕರ್”

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು; ಅಂಬ್ಯುಲೆನ್ಸ್ ನಿರ್ವಹಣೆಯಲ್ಲಿ ಸರ್ಕಾರಗಳೇ ವಿಫಲವಾಗಿರುವ ಅನೇಕ ಉದಾಹರಣೆಗಳಿರುವಾಗ ಅಂತಹ ಹತ್ತು ಹಲವಾರು ಸವಾಲುಗಳನ್ನು ಸ್ವ-ಇಚ್ಛೆ ಯಿಂದ ಸ್ವೀಕರಿಸಿ ಅಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್.

ಸರ್ಕಾರ ನಿರ್ವಹಣೆ ಮಾಡುವ ಅಂಬ್ಯುಲೆನ್ಸ್ ನಲ್ಲಿ ಕಡ್ಡಾಯವಾಗಿ, ಆಕ್ಸಿಜನ್, ಡ್ರೈವರ್ ಗಳು, ಅರೆ ಸಿಬ್ಬಂದಿಗಳು, ಇಂಧನ, ಅಂಬ್ಯುಲೆನ್ಸ್ ನ ನೈರ್ಮಲ್ಯ ಕಾಪಾಡಲು ನಿರಂತರ ಸ್ಯಾನಿಟೈಸೇಷನ್ ಅವಶ್ಯಕವಾಗಿದೆ. ಆದಾಗ್ಯೂ ಇಷ್ಟೆಲ್ಲಾ ನಿಭಾಯಿಸಲು ಸರ್ಕಾರವೇ ಸಾಮಾನ್ಯ ಕಾಲದಲ್ಲೂ ವಿಫಲವಾಗಿ ಕೈಕಟ್ಟಿ ಕುಳಿತ ಎಷ್ಟೊ ಘಟನೆ ಕಣ್ಣ ಮುಂದಿವೆ. ಅದರಲ್ಲೂ ಇಂತಹ ಕೊರೋನಾ ಸಂಧರ್ಭದಲ್ಲಿ ಸರ್ಕಾರಕ್ಕೆ ಅಂಬ್ಯುಲೆನ್ಸ್ ನಿರ್ವಹಣೆ ಸವಾಲೇ ಸರಿ & ಅಂತಹ ಸವಾಲನ್ನು ನಿರ್ವವಹಿಸುವಲ್ಲಿ ಇಂದಿಗೂ ಸರ್ಕಾರದಲ್ಲಿ ಹತ್ತು ಹಲವಾರು ಲೋಪಗಳಿವೆ.

ಇಂತಹ ಹತ್ತು ಹಲವು ಸಮಸ್ಯೆಗಳ ಆಗರವೇ ಆದ ಅಂಬ್ಯುಲೆನ್ಸ್ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತುಕೊಂಡು ನಿರ್ವಹಿಸುತ್ತಿರುವುದು ಮತ್ಯಾರೂ ಅಲ್ಲಾ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ. ಸಿ ಗೌರಿಶಂಕರ್ ರವರು.

ಕೊರೋನಾ ಸಂಧರ್ಭದಂತಹ ಗಂಭೀರ ವಿಷಮ ಸ್ಥಿತಿಯಲ್ಲಿ ಅಂಬ್ಯುಲೆನ್ಸ್ ನಿರ್ವಹಣೆಗೆ ಶಾಸಕರು ಸರಳವಾದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಅದ್ಯಾವ್ದು ಅಂತಾ ಕೇಳ್ತೀರಾ..? ಇಲ್ಲಿದೆ ನೋಡಿ ಆ ಮಾರ್ಗಗಳು..

> ಪ್ರತಿ ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ನಿರ್ವಹಣೆಗಾಗಿ ಗ್ಯಾಸ್ ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

> ಪ್ರತಿ ಅಂಬ್ಯುಲೆನ್ಸ್ ದಿನದ 24 ಗಂಟೆ ಸಾರ್ವಜನಿಕ ಸೇವೆಗಾಗಿ ಇಬ್ಬರು ಚಾಲಕರನ್ನು ನೇಮಿಸಿದ್ದಾರೆ.

> ಚಾಲಕರ ಜೊತೆ ರೋಗಿಯ ಸಹಾಯಕ್ಕಾಗಿ ಕ್ಷೇತ್ರದಲ್ಲಿ ಪ್ರತಿ ಜಿಲ್ಲಾ ಪಂಚಾಯ್ತಿಗೆ ತಲಾ ಐದು ಜನರಂತೆ ಕ್ಷೇತ್ರದಲ್ಲಿ 40 ಜನರ ಸ್ವಯಂ-ಸೇವಕರ ಕೊರೋನಾ ವಾರಿಯರ್ಸ್ ತಂಡವನ್ನೇ ಕಟ್ಟಿದ್ದಾರೆ.

> ಚಾಲಕರು & ಕೊರೋನಾ ವಾರಿಯರ್ಸ್ ಗಳಿಗೆ ಯಾವುದೇ ಸೋಂಕು ಹರಡದಂತೆ ಒಂದು ರೋಗಿ ಅಂಬ್ಯುಲೆನ್ಸ್ ನಲ್ಲಿ ಪ್ರಯಾಣ ಬೆಳೆಸಿದರೇ ಸಂಪೂರ್ಣ ಸ್ಯಾನಿಟೈಸ್ ಮಾಡೋ ವ್ಯವಸ್ಥೆ ಮಾಡಿದ್ದಾರೆ.

> ಚಾಲಕರು & ಕೊರೋನಾ ವಾರಿಯರ್ಸ್ ಗಳಿಗೆ PPE ಕಿಟ್, ಮಾಸ್ಕ್, ಗ್ಲೌಸ್ ಗಳ ಜೊತೆ ನಿರಂತರವಾದ ನೈರ್ಮಲ್ಯ ಕಾಪಾಡಲು ಸ್ಯಾನಿಟೈಸರ್ ನೀಡಲಾಗುತ್ತಿದೆ.

> ಅಂಬ್ಯುಲೆನ್ಸ್ ನಲ್ಲಿ ಇಂಧನ ನಿರ್ವಹಣೆಗೆ ಪೆಟ್ರೊಲ್ ಬಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಂಬುಲೆನ್ಸ್, ರೋಗಿಗಳಿಗೆ ಆಕ್ಸಿಜನ್ ಒದಗಿಸುವ ಶಾಸಕರ ಯೋಜನೆ ಕಂಡು ಕ್ಷಣ ಅವಕ್ಕಾದೆ. ಮೂರಾರ್ಜಿ ಶಾಲೆಯನ್ನೇ ತಮ್ಮ ಸ್ಚಂತ ಹಣದಲ್ಲಿ ಕೋವಿಡ್ ಆಸ್ಪತ್ರೆಯಾಗಿಸಲು ಹೊರಟಿದ್ದಾರೆ. ಇದು ಶ್ಲಾಘನೀಯ ಕೆಲಸ.

ಮಹಾನ್ ನಾಯಕ ಧಾರವಾಹಿ ಕೋ ಆರ್ಡಿನೇಟರ್ ಹುಣಸೂರು ರಾಜನ್


ಇಷ್ಟೆಲ್ಲ ನಿರ್ವಹಣೆಗೆ ಪ್ರತಿ ತಿಂಗಳು 70,000-75,000 ರೂಪಾಯಿಗಳ ಖರ್ಚು ತಗುಲಲಿದ್ದು. ಆ ಎಲ್ಲಾ ವೆಚ್ಚವನ್ನು ವೈಯಕ್ತಿಕವಾಗಿ ಶಾಸಕರು, ಪಕ್ಷದ ಮುಖಂಡರು & ಕಾರ್ಯಕರ್ತರೇ ನಿರ್ವಹಿಸುತ್ತಿರುವುದು ಸರ್ಕಾರವೇ ನಾಚಿಸುವ ಮಟ್ಟಿಗಿದೆ ಎಂದರೇ ಹೆಮ್ಮೆಯ ವಿಷಯವೆ ಹೌದು. ಒಬ್ಬ ಶಾಸಕ ಈ ಪರಿಯ ಕೆಲಸ ಮಾಡಿ ಒಂದು ಕ್ಷೇತ್ರವನ್ನು ನಿರ್ವಹಿಸುವುದಾದರೇ ಉಳಿದ ಶಾಸಕರ ಜಾಣಮೌನ ತನವನ್ನು ಜನಸಾಮಾನ್ಯರು ಪ್ರಶ್ನಿಸುವ ಕಾಲ ಸನ್ನಿಹಿತವಾಗುತ್ತಿದೆ.

ಶಾಸಕರಾದ ಡಿ.ಸಿ ಗೌರಿಶಂಕರ್ ರವರ ಕಾರ್ಯ ಇತರ ಶಾಸಕರಿಗೆ ಸ್ಪೂರ್ತಿಯಾದರೇ ಜಿಲ್ಲೆಯಲ್ಲಿ ಕೊರೊನಾ ಸಾವುಗಳು ಕಡಿಮೆಯಾಗಲಿವೆ. ಸೋಂಕಿತರಿಗೆ ಹೊಸ ವಿಶ್ವಾಸ, ನೆರವು ಸಿಕ್ಕಂತಾಗುತ್ತದೆ.

‘ಕೊರೊನಾ’ ಅಂಬುಲೆನ್ಸ್ ಕೊಡುವಾಗಲೇ ನಿಯಮ ಪಾಲಿಸದ ಶಾಸಕರು!

ಸತೀಶ್


ಬೆಂಗಳೂರು: ಅಂಬುಲೆನ್ಸ್ ಕೊಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸುತ್ತಿರುವುದಾಗಿ ಹೇಳಿರುವ ತುಮಕೂರು ಜಿಲ್ಲೆಯ ತಿಪಟೂರು ಶಾಸಕರಾದ ಬಿ.ಸಿ.ನಾಗೇಶ್, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರೀಗ ಟ್ರೋಲ್ ಆಗಿದ್ದಾರೆ.

ಗುಂಪುಗೂಡದಂತೆ ನೋಡಿಕೊಳ್ಳುವುದು ಈಗ ಬಹುಮುಖ್ಯ. ಇದಕ್ಕಾಗಿಯೇ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ ಬಿ.ಸಿ.ನಾಗೇಶ್ ಅವರು ಅಂಬುಲೆನ್ಸ್ ಕೊಡುವಾಗ ತಮ್ಮ ಹಿಂಬಾಲಕರ ಪಡೆಯನ್ನೇ ಜತೆಯಲ್ಲಿ ಇಟ್ಟುಕೊಂಡಿದ್ದಾರೆ.

ಇಲ್ಲಿ ಸಾಮಾಜಿಕ ಅಂತರವನ್ನೇ ಕಾಪಾಡಿಲ್ಲ. ಅಕ್ಕಪಕ್ಕದಲ್ಲೇ ನಿಂತುಕೊಂಡಿದ್ದಾರೆ. ಇದರಲ್ಲಿ ಕೆಲವರು ಮಾಸ್ಕ್ಅನ್ನು ಸರಿಯಾಗಿ ಹಾಕಿಕೊಂಡಿಲ್ಲ. ಬುದ್ದಿವಂತ ಶಾಸಕರೇ ಹೀಗಾದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ.ಸಿ.ಗೌರಿಶಂಕರ್ ಸಹ ಅಂಬುಲೆನ್ಸ್ ಕೊಡುಗೆ ನೀಡುವಾಗ ಮಾಸ್ಕ್ ಕೆಳಗೆ ಜಾರಿಸಿದ್ದಾರೆ.

ಅಂಬುಲೆನ್ಸ್ ಕೊಡುಗೆ ಪ್ರಯೋಜನವೇನು?


ಅಂಬುಲೆನ್ಸ್ ಕೊಡುಗೆ ನೀಡುವುದರಿಂದ ಯಾವುದೇ ಪ್ರಯೋಜನ ಆಗದು. ಪೂರ್ಣ ಪ್ರಯೋಜನ ಆಗಬೇಕಾದರೆ ಶಾಸಕರು ಏನ್ ಮಾಡಬೇಕು ಗೊತ್ತಾ?

ದಿನಪೂರಾ ಕೆಲಸ ಮಾಡಲು ಮೂವರು ಚಾಲಕರು, ಅಂಬುಲೆನ್ಸ್ ಗೆ ಬೇಕಾದ ಪೆಟ್ರೋಲ್, ಅರೆ ವೈದ್ಯಕೀಯ ಸಿಬ್ಬಂದಿ, ಡಿಪೋಸಬಲ್ ವಸ್ತುಗಳು, ಆಕ್ಸಿಜನ್ ಇವು ಪ್ರತಿ ಅಂಬುಲೆನ್ಸ್ ನಲ್ಲೂ ಇರಬೇಕಾಗುತ್ತದೆ. ಇದನ್ನು ಕೊಡುವವರು ಯಾರು ಎಂದು ಶಾಸಕರು ಖಾತರಿಪಡಿಸಬೇಕಾಗಿದೆ.

ಆಸ್ಪತ್ರೆಗಳಿಗೆ ಅಂಬುಲೆನ್ಸ್ ಕೊಟ್ಟುಬಿಟ್ಟರೆ ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ಚಾಲಕರ ಹುದ್ದೆಯನ್ನು, ಪ್ರತಿದಿನ ಬೇಕಾಗುವ ಪೆಟ್ರೋಲ್ ಬಜೆಟ್, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರದಿಂದ ನೇಮಕ ಮಾಡಿಸಿಕೊಂಡು ಬರಬೇಕು. ಕೂಡಲೇ ಶಾಸಕರ ನೆರವಿನ ಹಸ್ತಕ್ಕೆ ಸರ್ಕಾರವೂ ಕೈ ಜೋಡಿಸಬೇಕಾಗಿದೆ.

ಇದಕ್ಕೆ ತಗುಲಬಹುದಾದ ವೆಚ್ಚವನ್ನು ಶಾಸಕರ ಸ್ವಂತ ಹಣದಿಂದ ಭರಿಸುವವರೇ? ಶಾಸಕರ ಅನುದಾನದಿಂದ ನೀಡುವವರೇ? ಸರ್ಕಾರದಿಂದ ಮಂಜೂರು ಆಗಿದೆಯೇ ಅಥವಾ ಜಿಲ್ಲಾಧಿಕಾರಿ ಅವರ ಅಡಿ ಬರುವ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆಯೂ ಜನರಿಗೆ ತಿಳಿಸಬೇಕಾಗಿದೆ. ಇದಕ್ಕಾಗಿ ಅನುದಾನ ಬಳಸುವತ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.

ಬಜೆಟ್ ಮಂಜೂರಾಗದ ಹೊರತು ಅಂಬುಲೆನ್ಸ್ ಬಳಸಲು ಆಸ್ಪತ್ರೆ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ವಾಹನದ ನಿರಂತರ ಬಳಕೆ ಆಗಬೇಕಾದರೆ ಈ ಮೇಲಿನವು ಮುಖ್ಯವಾಗುತ್ತವೆ.

ಇಂತ ಸಂದರ್ಭದಲ್ಲಿ ಅಂಬುಲೆನ್ಸ್, ನಾಲ್ಕಾರು ಆಕ್ಸಿಜನ್ ನೀಡಲು ಸಾಕಷ್ಟು ಮುಂದೆ ಬರುತ್ತಾರೆ. ಆದರೆ ಇವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲು ಬೇಕಾದ ಖರ್ಚು-ವೆಚ್ಚ, ಅಗತ್ಯ ಸಿಬ್ಬಂದಿ ಯಾರು ಕೊಡುತ್ತಾರೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಎಲ್ಲ ಶಾಸಕರು ಒಂದುಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚುವರಿ ಹುದ್ದೆ, ಬಜೆಟ್ ಮಂಜೂರು ಮಾಡಿಸಬೇಕು‌. ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿರುವ ಈ ಇಬ್ಬರು ಶಾಸಕರ ಜತೆ ಉಳಿದ ಶಾಸಕರು ಕೈ ಜೋಡಿಸಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಲವು ಅಧಿಕಾರಿಗಳು.

ಆಕ್ಸಿಜನ್ ಯುಕ್ತ ಹಾಸಿಗೆಯುಳ್ಳ ಹಾಲ್, ತಕ್ಷಣಕ್ಕೆ ಹೆಚ್ಚು ಸಂಬಳ ನೀಡಿ ಅರೆ ವೈದ್ಯಕೀಯ ಸಿಬ್ಬಂದಿ ನೇಮಕದ ಬಗ್ಗೆ ತುರ್ತು ಗಮನ ಹರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ರಾಜ್ಯದ ಆರೋಗ್ಯದ ಇಲಾಖೆಯ ಉನ್ನತ ಅಧಿಕಾರಿಗಳು.

ಲಸಿಕೆ ರೂಪಾಂತರ!

ತುರುವೇಕೆರೆ ಪ್ರಸಾದ್


*ಮೊದಲನೇ ಡೋಸ್*
‘ ಅಯ್ಯೋ..ಅಮ್ಮಾ..’
‘ತುಂಬಾ ನೋವಾಯ್ತಾ ಸರ್?’
‘ ಹೂ ಸಿಸ್ಟರ್, ಸ್ವಲ್ಪ ನೋವಾಯ್ತು’
‘ ಸರಿ ಹೋಗುತ್ತೆ ಸರ್, ಆರಾಮಾಗಿ ಉಸಿರಾಡಿ, ಆಚೆ ಲಾಂಜಲ್ಲಿ ಫ್ಯಾನ್ ಕೆಳಗೆ ಅರ್ಧ ಗಂಟೆ ರೆಸ್ಟ್ ಮಾಡಿ. ಏನಾದ್ರೂ ಸಮಸ್ಯೆ ಇದ್ರೆ ನನ್ನನ್ನ ಕರೀರಿ’
‘ಆಗಲಿ ಸಿಸ್ಟರ್, ಜ್ವರ ಬರುತ್ತಾ?’
‘ಸ್ವಲ್ಪ ಬರಬಹುದು, ಅಕಸ್ಮಾತ್ ಜ್ವರ ಬಂದ್ರೆ ಈ ಮಾತ್ರೆ ತಗೊಳಿ.ಹುಶಾರಾಗಿರಿ, ಟೇಕ್ ಕೇರ್, ಮತ್ತೆ 42 ದಿನ ಬಿಟ್ಟು ಬನ್ನಿ’
‘ಥ್ಯಾಂಕ್ಯೂ ಸಿಸ್ಟರ್’
*ಎರಡನೇ ಡೋಸ್*
‘ಅಯ್ಯೋ..ಅಮ್ಮಾ..’
‘ಯಾಕ್ರೀ ಹಾಗ್ ಬಡ್ಕೊತೀರಿ? ನಾನೇನ್ ನಿಮಗೆ ಕತ್ತಿ ತಗೊಂಡು ಚುಚ್ಚಿದೀನಾ?ಹೀಗ್ ಬಡ್ಕೊಂಡ್ರೆ ನೋಡಿದೋರು ಏನ್ ಅಂದ್ಕೊಳಲ್ಲ?’
‘ಸಾರಿ ಸಿಸ್ಟರ್, ಜ್ವರ ಏನಾದ್ರೂ ಬರುತ್ತಾ?’
‘ಭೂಮಿನೇ ಜ್ವರ ಬಂದು ಕಾದು ಹೋಗಿದೆ. ನಿಮಗೆ ಒಂದ್ ಅರ್ಧ ಡಿಗ್ರಿ ಜ್ವರ ಬಂದ್ರೆ ಪ್ರಪಂಚ ಏನ್ ಮುಳುಗಿ ಹೋಗಲ್ಲ, ಹೋಗ್ರೀ..’
‘ ಮಾತ್ರೆ ಏನಾದ್ರೂ ಕೊಡ್ತೀರಾ ಸಿಸ್ಟರ್?’
‘ಔಟ್ ಆಫ್ ಸ್ಟಾಕ್, ಮನೇಲಿ ಯಾವ್ದಾದ್ರೂ ಹಳೇ ಮಾತ್ರೆ ಇದ್ರೆ ನುಂಗ್‍ಕೊಳಿ. ಇಲ್ಲ ಅಂದ್ರೆ ಯಾವ್ದಾರಾ ಕಷಾಯ ಮಾಡ್ಕೊಂಡು ಗೊಟಾಯ್ಸಿ’
‘ ಸರಿ ಸಿಸ್ಟರ್, ಈಗ ಎಲ್ ಕೂತ್ಕೊಳ್ಳಿ?’
‘ ನನ್ ತಲೆ ಮೇಲೇ ಕೂತ್ಕೊಳಿ. ಅಲ್ರೀ, ನೀವೇ ನೋಡ್ತಿದೀರಿ, ನಿಂತ್ಕೊಳಕ್ಕೇ ಜಾಗ ಇಲ್ಲ, ನಿಮ್ಗೆ ಸಿಂಹಾಸನ ಹಾಕ್ ಕೂರ್ಸಿ ಉಪಚರಿಸ್ಬೇಕಾ?’
‘ ಹೋಗ್ಲಿ ಬಿಡಿ, ಎಲ್ಲೋ ಅಡ್ಜೆಸ್ಟ್ ಮಾಡ್ಕೊಂಡು ಸಂದೀಲಿ ಕೂತ್ಕೊತೀನಿ. ಏನಾದ್ರೂ ಸಮಸ್ಯೆ ಇದ್ರೆ ಕರೀಲಾ ಸಿಸ್ಟರ್?’
‘ ಇಲ್ಲಿ ಎರಡು ಕೈಲಿ ದಳುದ್ರೂ (ಚುಚ್ಚುದ್ರೂ) ಮುಗೀತೀಲ್ಲ, ಇನ್ನು ನೀವು ಕರೆದ ತಕ್ಷಣ ಓಡ್ ಬರೋಕೆ ನಾನೇನ್ ಕಡ್ಲೆಕಾಯ್ ಬೀಜ ತಿಂತಾ ಕೂತಿದೀನಾ? ಕರೀಬೇಕು ಅನ್ಸುದ್ರೆ ನಿಮ್ ಹೆಂಡ್ತಿನೇ ಕರ್ಕೊಳಿ’
‘ಅಯ್ಯಯ್ಯೋ ಬೇಡ ಬಿಡಿ, ಈಗಿರೋ ವ್ಯಾಕ್ಸಿನೇಶನ್ ನೋವೇ ಸಾಕು. ಮತ್ತೆ ಎಲ್ಲಾ ಸೈಡ್ ಎಫೆಕ್ಟ್ಸ್ ಒಟ್ಟಿಗೆ ಬರೋದು ಬೇಡ.

“ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರ ಡಿ. ಸಿ ಗೌರಿಶಂಕರ್”

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ಭಾರತ ದೇಶದಲ್ಲಿ ಕೊರೋನಾ ಮೊದಲನೇ ಅಲೆಯಲ್ಲಿ ಪ್ರಪಂಚವೇ ತತ್ತರಿಸಿದರು, ನೆಮ್ಮದಿಯಾಗಿ ಇದ್ದ ಕೆಲವೇ ಕೆಲವು ಕ್ಷೇತ್ರಗಳ ಪೈಕಿ ತುಮಕೂರು ಗ್ರಾಮಾಂತರ ಕ್ಷೇತ್ರ ಮೊದಲನೆಯದು ಎಂದೇಳಲು ಅತಿಶಯೋತಕ್ತಿಯಲ್ಲ. ಜನಸಾಮಾನ್ಯರೇ ಹೇಳುವಂತಹ ಕೆಲಸ ಮಾಡಿ ಜನಗಳ ಮನಸ್ಸಿನಲ್ಲಿಳಿದವರು ಇದೇ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ, ಸರಳತೆಯ ಸಾಹುಕಾರ ಡಿ. ಸಿ ಗೌರಿಶಂಕರ್.

> ಕ್ಷೇತ್ರದ ಮನೆಮನೆಗೂ 2 ಬಾರಿ ಆಹಾರದ ಕಿಟ್
> ಔಷದಿ ಅಗತ್ಯವಿರುವ ಮನೆಗೆ ಉಚಿತ ಔಷದಿ
> ತರಕಾರಿ ಹಣ್ಣುಗಳ ವಿತರಣೆ
> ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಹಣ ಸಹಾಯ


ನಾನಾ ಕಾರಣಗಳಿಂದ ಬಳಲಿದ ಜನಗಳಿಗೆ ಸಾಂತ್ವನ ಹೇಳಿದ ಸರಳತೆಯ ಸಾಹುಕಾರ ಡಿ. ಸಿ ಗೌರಿಶಂಕರ್ ರವರು ಕೊರೋನಾ ಮಹಾಮಾರಿಯ ಎರಡನೇ ಅಲೆಯ ಅಬ್ಬರವನ್ನು ನಿಯಂತ್ರಿಸಲು ಈ ಬಾರಿ ರೂಪಿಸಿದ ಯೋಜನೆಯೇ ಅದ್ಬುತವಾದದ್ದು.


ನಿರ್ಲಕ್ಷ್ಯತನ & ಅವೈಜ್ಞಾನಿಕತೆಯಿಂದ ಕೊರೋನಾ ಎದುರಿಸಲಾಗದೇ ಕೈಕಟ್ಟಿ ಕುಳಿತರೂ ತನ್ನ ಕ್ಷೇತ್ರದ ಜನ ಯಾವ ಕಾರಣಕ್ಕೂ ಯಾವುದೇ ವಿಷಯದಲ್ಲಿ ಅಂಜಬಾರದೆಂದು ಶಾಸಕರು ಮಾಡಿದ್ದು ಈ ಕೆಳಕಂಡ ಕಾರ್ಯಕ್ರಮಗಳನ್ನು.

> ಸರ್ಕಾರವೇ ಕೊರೋನಾಗೆ ಎದರಿದ ಸಂಧರ್ಭದಲ್ಲಿ. ರಾಜ್ಯ & ಕೇಂದ್ರ ಸರ್ಕಾರಕ್ಕೆ ಕನಿಷ್ಟ ಕೊರೋನಾ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಗ, ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ಯಾವ ನಾಯಕಕು ಮಾಡದಂತಹ ಕೆಲಸವಾದ 4 ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ್ದಾರೆ.


> ಅಧಿಕಾರಿಗಳ ಜೊತೆ ಜನಗಳ ಸೇವೆ ಮಾಡಲು ತಮ್ಮ ಪಕ್ಷದ 35 ಜನರ ಕೊರೋನಾ ವಾರಿಯರ್ಸ್ ತಂಡ ಕಟ್ಟಿ ಯುವಸೈನ್ಯವನ್ನೆ ಕೊರೋನಾ ನಿಯಂತ್ರಿಸಲು ಸೃಷ್ಟಿಸಿದ್ದಾರೆ. ಕೊರೋನಾದಿಂದ ಮೃತ ಹೊಂದಿದ ದೇಹವನ್ನು ಕೂಡಾ ಅಂತ್ಯ ಸಂಸ್ಕಾರ ಮಾಡಲು ಉಚಿತ JCB ಗಳ ವ್ಯವಸ್ಥೆಯನ್ನು ಮಾಡಿದ್ದಾರೆ.


> ಸರ್ಕಾರದ ಆರೋಗ್ಯಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ಉಚಿತ PPE ಕಿಟ್, ಮಾಸ್ಕ್ & ಗ್ಲೌಸ್ ಗಳನ್ನು ನೀಡಿದ್ದಾರೆ.

> ಕಳೆದ ಬಾರಿಯಂತೆ ಈ ಬಾರೀಯೂ ಜನಜೀವನಕ್ಕೆ ತೊಂದರೆಯಾದರೇ ಸಹಾಯವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳಿಗೆ ಪಡಿತರ, ಮೆಡಿಸಿನ್ ಸೌಲಭ್ಯವನ್ನು ಮನೆ ಬಾಗಿಲಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ..

> ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನು oxygen & ICU ಸೌಲಭ್ಯಗಳನ್ನೊಳಗೊಂಡಂತೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಾಡುವಂತೆ ಜಿಲ್ಲಾಧಿಕಾರಿ & ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

> ಈ ಸರ್ಕಾರ ಕೂಡಲೇ ರೈತರಿಂದ ಖರೀದಿಸಿದ ರಾಗಿಯ ಬಾಕಿ ಬಾಬ್ತನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

> KSRTC ನೌಕರರ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡುವಂತೆ ಕೂಡಾ ಮನವಿ ಮಾಡಿದ್ದಾರೆ.

ಸಾಕಲ್ಲವೇ ಇಷ್ಟು, ಒಂದು ಸರ್ಕಾರ ಜನಗಳಿಗಾಗಿ ಮಾಡಲಾಗದ ಕೆಲಸವನ್ನು ಕಷ್ಟಕಾಲದಲ್ಲಿ ಒಬ್ಬ ಶಾಸಕ ಮಾಡುತ್ತಿದ್ದಾರೆಂದರೇ ಇವರನ್ನು ನಾಯಕರೆಂದೇಳಲು, ಮನೆಮಗನೆಂದೇಳಲು ಕ್ಷೇತ್ರದ ಜನ ಎದೆಯುಬ್ಬಿಸಿ ಪ್ರಶಂಸನೀಯ ನುಡಿ ಹೇಳುತ್ತಿದ್ದಾರೆ.

ಇಂಥ ಜಿಲ್ಲಾಧಿಕಾರಿಗಳು ಏಕೆ ಎಲ್ಲೆಡೆ ಸಿಗುತ್ತಿಲ್ಲ….

0

ಒಬ್ಬ ಜಿಲ್ಲಾಧಿಕಾರಿಗೆ ಸಾಧ್ಯವಾಗಿದ್ದು…….!

ನಿನ್ನೆ ನನ್ನ ಅಧಿಕಾರಿ ಮಿತ್ರರಾದ ಡಾ. ರಾಜೇಂದ್ರ ಪ್ರಸಾದ್ ಅವರು, ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರು ಕೋವಿಡ್ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿಯ ಕುರಿತಂತೆ ಮಾಹಿತಿಯನ್ನು ಕಳುಹಿಸಿದ್ದರು.‌

ಅದರ ಜಾಡು ಹಿಡಿದು ಹುಡುಕುತ್ತಾ ಹೋದಂತೆ ಹಲವು ಮಾಹಿತಿಗಳು ಸಿಕ್ಕವು.
ಈ ಗೆಳೆಯ ರಾಜೇಂದ್ರ ಪ್ರಸಾದ್ ಬ್ಯೂರಾಕ್ರಸಿಗೆ ಬರದಿದ್ದರೆ ಕರ್ನಾಟಕದ ಅತ್ಯುತ್ತಮ ತಳಿವಿಜ್ಞಾನಿಗಳಲ್ಲಿ ಒಬ್ಬರಾಗಿರುತ್ತಿದ್ದರು.

ಅವರು ಕಳಿಸಿದ ಮಾಹಿತಿ ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯ ಜಿಲ್ಲಾಧಿಕಾರಿಯ ಕೆಲಸಕ್ಕೆ ಸಂಬಂಧಿಸಿದ್ದು.
ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ನಂದೂರ್ ಬಾರ್ ಎಂಬುದೂ ಒಂದು.

ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಗಡಿಗಳನ್ನು ಹಂಚಿಕೊಂಡು ಬದುಕುತ್ತಿರುವ ಈ ಜಿಲ್ಲೆಯಲ್ಲಿ ಶೇ 75 ಕ್ಕೂ ಹೆಚ್ಚು ಬುಡಕಟ್ಟು ಜನರಿದ್ದಾರೆ. ಬುಡಕಟ್ಟುಗಳಲ್ಲಿ ಭಿಲ್ಲರು,ಪವಾರರು, ಕೊಕಣಿ, ಮಾವ್ ಚಿ, ಗಾವಿತ್,ಧಂಕಾ ಮುಂತಾದವರಿದ್ದಾರೆ. ಮಾನುಭಾವ ಪಂಥದ ಆರಾಧಕರೂ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆ ಇದು.

ಈ ಜಿಲ್ಲೆಯಲ್ಲಿ ಶೇ.45.5 ರಷ್ಟು ಜನ ಭಿಲ್ ಭಾಷೆಯನ್ನು ಮಾತನಾಡುತ್ತಾರೆ. ಶೇ.16.6 ರಷ್ಟು ಜನ ಮಾತ್ರ ಮರಾಠಿ ಮಾತನಾಡುತ್ತಾರೆ.
ಜಿಲ್ಲೆಯಲ್ಲಿನ ಸಾಕ್ಷರರ ಪ್ರಮಾಣ ಕೇವಲ 46%. ಸಾಕ್ಷರ ಮಹಿಳೆಯರ ಪ್ರಮಾಣ 38% ಮಾತ್ರ.
ನಗರ ವಾಸಿಗಳ ಪ್ರಮಾಣ 15.45%. ಅಷ್ಟೆ.

ಶಂಬಾ ಜೋಶಿಯವರು ಖಾನ್ ದೇಶ/ ಕನ್ಹ ದೇಶ/ ಕೃಷ್ಣ ದೇಶ ಎಂದು ಕರೆಯುವ ಪ್ರಾಂತ್ಯದಲ್ಲಿರುವ ಈ ಜಿಲ್ಲೆಯ ಉತ್ತರದ ಭಾಗವನ್ನು ನರ್ಮದಾ ನದಿ ನೇವರಿಸಿಕೊಂಡು ಹರಿಯುತ್ತಾಳೆ. ಈ ಪ್ರದೇಶಕ್ಕೆ ರಸಿಕ, ನಂದನಗಿರಿ ಎಂಬ‌ ಪುರಾತನ ಹೆಸರುಗಳೂ ಇವೆ. ಚರಿತ್ರೆ ,ಪುರಾಣಗಳ ಪುಟಗಳಲ್ಲಿ ಅತ್ಯಂತ ಆಳವಾದ ಹೆಜ್ಜೆ ಗುರುತುಗಳಿರುವ ಈ ನೆಲದ ಎಡಭಾಗದಲ್ಲಿ ಸೂರತ್ ನ ನೆಲ ಶುರುವಾಗುತ್ತದೆ. ಅಲ್ಲಿಂದಾಚೆಗೆ ತುಸು ದೂರದಲ್ಲಿ ಭರುಕಚ್ಛವಿದೆ. ಬಹುಶಃ ಕೃಷ್ಣ, ದ್ರೌಪದಿ, ರುಕ್ಮಿಣಿ, ಕುಂತಿ ಬಲರಾಮರು ಇಲ್ಲಿ ಓಡಾಡಿರಬಹುದು. ನಮ್ಮ ಪಶುಪಾಲಕರ ಪ್ರಧಾನ ಗೂಡು ಇದು.

ಇಂಥದೊಂದು ಜಿಲ್ಲೆಗೆ ಈಗ ಡಾ. ರಾಜೇಂದ್ರ ಭರೂಡ್ ಎಂಬ ವೈದ್ಯಕೀಯ ಹಿನ್ನೆಲೆಯ, ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ದೊಡ್ಡ ದೊಡ್ಡ ಜನರೆಲ್ಲ ಡಿಸೆಂಬರ್‌ ಹೊತ್ತಿಗೆ ಕೋವಿಡ್ ಮುಗಿಯಿತು ಎಂದು ಸಂಭ್ರಮ ಪಡುತ್ತಿರುವಾಗ ಈ ವ್ಯಕ್ತಿ ಮಳೆಯ ಸೂಚನೆ ಅರಿತ ಇರುವೆಯ ಹಾಗೆ ಆಕ್ಸಿಜನ್ ಘಟಕಗಳನ್ನು, ಆಂಬ್ಯುಲೆನ್ಸ್ ಗಳನ್ನು, ಹಾಸಿಗೆಗಳನ್ನು ಹೊಂದಿಸಲು ನಿರಂತರವಾಗಿ ಶ್ರಮಿಸಿದ್ದಾರೆ.

16 ಲಕ್ಷ ಜನಸಂಖ್ಯೆಯ ಈ ಬುಡಕಟ್ಟು ಜನರ ಜಿಲ್ಲೆಗೆ ಕೊರೋನಾದ ಎರಡನೇ ಅಲೆ ದಾಳಿ ಮಾಡಿದರೆ ಯಾವ ರೀತಿಯಿಂದಲೂ ಕಾಪಾಡಲಾಗದೆಂದು ಭಾವಿಸಿದ ಜಿಲ್ಲಾಧಿಕಾರಿ ತನ್ನ ಆಡಳಿತದ ತಿಜೋರಿಯಲ್ಲಿ ಮೂಲೆ ಮುಡುಕುಗಳಲ್ಲಿ ಎಷ್ಟು ದುಡ್ಡಿದೆ ಎಂದು‌ ಹುಡುಕಿದ್ದಾರೆ.
ಪ್ರಕೃತಿ ವಿಕೋಪ ನಿಧಿ, ತುಸುವೇ ಇರುವ ಅಭಿವೃದ್ಧಿ ನಿಧಿಗಳನ್ನು ಬಳಸಿ ಏನು ಮಾಡಬಹುದೆಂದು ನೋಡಿದ್ದಾರೆ. ಸಾಕಾಗದಿದ್ದಾಗ ಸಿಎಸ್ಆರ್‌( ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಉಳ್ಳವರ ಮನವೊಲಿಸಿ ನವೆಂಬರ್ ,ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ದಿನಕ್ಕೆ 48 ಲಕ್ಷ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಪ್ರಾರಂಭಿಸಿದ್ದಾರೆ. ಒಂದು ಘಟಕದ ಬೆಲೆ ಸುಮಾರು 85 ಲಕ್ಷ ರೂಪಾಯಿಗಳು. ಇವತ್ತು ನಾವು ಬೊಗಸೆ ಆಕ್ಸಿಜನ್ನಿಗಾಗಿ ಒದ್ದಾಡುತ್ತಿರುವಾಗ ಈ ಅಧಿಕಾರಿ ಮೈಮರೆಯದೆ ಆಕ್ಸಿಜನ್ ವ್ಯವಸ್ಥೆ ಇರುವ 1300 ಆಕ್ಸಿಜನ್ ವ್ಯವಸ್ಥೆ ಇರುವ ವೆಂಟಿಲೇಟರ್ ಗಳುಳ್ಳ ಐ ಸಿ ಯು ಬೆಡ್ ಗಳನ್ನು ಪ್ರಾರಂಭಿಸಿದ್ದಾರೆ. 27 ಆಂಬ್ಯುಲೆನ್ಸ್ ಗಳನ್ನು ಖರೀದಿಸಿದ್ದಾರೆ. ಅವುಗಳಲ್ಲಿ ಎರಡನ್ನು ಶವಸಂಸ್ಕಾರಕ್ಕೆ ಮೀಸಲಿರಿಸಿದ್ದಾರೆ. 50 ಲಕ್ಷ ರೂಪಾಯಿ ಮೌಲ್ಯದ ರೆಮ್ ಡಿ ಸಿವಿರ್ ಔಷಧಿ ಖರೀದಿಸಿಕೊಂಡಿದ್ದಾರೆ. 24 ಗಂಟೆಗಳೂ ಸ್ಪಂದಿಸುವ ಸಹಾಯ ಕೇಂದ್ರಗಳನ್ನು ತೆರೆದಿದ್ದಾರೆ. ಹಳ್ಳಿಗಳಿಗೆ ಹೋಗಿ ರೋಗಿಗಳ ಟೆಸ್ಟ್ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಿ ಮಾಹಿತಿ ಮುಟ್ಟಿಸುವ, ಕೊರೋನ ಬಂದವರಿಗೆ ಧೈರ್ಯ ತುಂಬುವ ತಂಡಗಳನ್ನು ರಚಿಸಿದ್ದಾರೆ. 7000 ಐಸೋಲೆಷನ್ ಬೆಡ್ ಗಳು ಸೇರಿ ಸುಮಾರು 11000 ಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ರೈಲು ಬೋಗಿಗಳನ್ನೂ ಐಸೋಲೇಷನ್ ಬೆಡ್ ಮಾಡಿದ್ದಾರಂತೆ.

ಕೊರೋನ ಸೋಂಕಿತರ ಆಕ್ಸಿಜನ್ ಮಟ್ಟ 85 ಕ್ಕಿಂತ ಕೆಳಗೆ ಇಳಿಯುತ್ತಾ ಹೋದರೆ ಶೇ.90 ರಷ್ಟು ಆಕ್ಸಿಜನ್ ಅನ್ನು ರೋಗಿಗೆ ಕೃತಕವಾಗಿ ನೀಡಬೇಕಾಗುತ್ತದೆ. ಪರಿಸ್ಥಿತಿ ಅಷ್ಟು ಕಠಿಣವಾಗದಂತೆ ನೋಡಿಕೊಂಡರೆ ಶೇ.30 ರಷ್ಟು ಮಾತ್ರ ಆಕ್ಸಿಜನ್ ಕೊಟ್ಟು ರೋಗಿಯ ಆರೋಗ್ಯವನ್ನು ಸುಧಾರಿಸಬಹುದು ಎನ್ನುವ ತಿಳುವಳಿಕೆ ಅವರದು. ಆಕ್ಸಿಜನ್ ಅನ್ನು ಪೈಪ್ ಮೂಲಕವೆ ಸರಬರಾಜು ಮಾಡುತ್ತಾರಂತೆ. ಒಬ್ಬಿಬ್ಬರು ವೈದ್ಯರು. ನಾಲ್ಕೈದು ದಾದಿಯರು ಸುಮಾರು 200 ಜನ ರೋಗಿಗಳ ಆರೈಕೆ ಮಾಡಬಹುದು ಎನ್ನುತ್ತಾರೆ.

ಕೋವಿಡ್ ಮೊದಲ ಅಲೆಯಲ್ಲಿ ಈ ಜಿಲ್ಲೆಯಲ್ಲಿ ದಿನವೊಂದಕ್ಕೆ ದಾಖಲಾದ ಗರಿಷ್ಠ ಸಂಖ್ಯೆ 190. ಎರಡನೆ ಅಲೆಯಲ್ಲಿ ಇಷ್ಟೆಲ್ಲ ಮುನ್ನೆಚ್ಚರಿಕೆ ನಡುವೆಯೂ ಸೋಂಕಿತರ ಸಂಖ್ಯೆ ದಿನವೊಂದಕ್ಕೆ 1200 ರ ವರೆಗೆ ತಲುಪಿದೆ. ಈಗ ಆ ಸಂಖ್ಯೆ 300 ಕ್ಕೆ ಇಳಿದಿದೆ ಎನ್ನುತ್ತಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸುನಾಮಿಯ ಎರಡನೆಯ ಅಲೆ ಅಪ್ಪಳಿಸಿ ಥರಗುಟ್ಟಿಸುತ್ತಿದ್ದಾಗ ಈ ಜಿಲ್ಲಾಧಿಕಾರಿ ತಮ್ಮ ಮುಂದಾಲೋಚನೆಯಿಂದ, ಸೈಂಟಿಫಿಕ್ ಟೆಂಪರ್ಮೆಂಟಿನಿಂದ‌ ತಣ್ಣಗೆ ತನ್ನ ಜಿಲ್ಲೆಯನ್ನು ಕಾಪಾಡಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜುಗಳಿಲ್ಲದ, ದೊಡ್ಡ ಆಸ್ಪತ್ರೆಗಳೂ ಇಲ್ಲದ ಬುಡಕಟ್ಟು ಜನರೇ ತುಂಬಿರುವ ಜಿಲ್ಲೆಯ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಾದರೆ ಸೂರತ್ ಗೋ ಇಲ್ಲ ಭೋಪಾಲ್ ಗೋ, ದೂರದ ಮುಂಬೈಗೋ ಹೋಗಬೇಕಿತ್ತು. ಆದರೆ ಈಗ ನಂದೂರ್ ಬಾರ್ ನ ಸಣ್ಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇ.20 ಕ್ಕೂ ಹೆಚ್ಚಿನ ರೋಗಿಗಳು ಗುಜರಾತು, ಮಧ್ಯಪ್ರದೇಶ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗೆ ಸೇರಿದವರಂತೆ.

ಈ ಜಿಲ್ಲಾಧಿಕಾರಿ ನವೆಂಬರ್ ನಿಂದ ಮಾರ್ಚ್ ವರೆಗೆ ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳನ್ನು ನೋಡಿ ಸಹೋದ್ಯೋಗಿಗಳು ಗೇಲಿ ಮಾಡುತ್ತಿದ್ದರಂತೆ. ಕೆಲ ದೊಡ್ಡ ದೊಡ್ಡ ಜನರೂ ಟೀಕೆ ಮಾಡಿದ್ದರಂತೆ. ಈಗ ಕಾಲವೇ ಅವರಿಗೆ ಉತ್ತರ ನೀಡಿದೆ ಎನ್ನುತ್ತಾರೆ.

ಚರಿತ್ರೆ, ವಿಜ್ಞಾನ ಗೊತ್ತಿರುವ ಎಂಥವರಿಗೂ ಅರ್ಥವಾಗುವ ಸಂಗತಿ ಇದು; ಡಾರ್ವಿನ್ ಥಿಯರಿ ಪ್ರಕಾರ ವೈರಸ್ಸು ತನ್ನ ಉಳಿವಿಗಾಗಿ ಸಂಘರ್ಷಕ್ಕೆ ಇಳಿಯುತ್ತದೆ. ಅದಕ್ಕಾಗಿ ಅದು ಮ್ಯುಟೇಷನ್ ಹೊಂದುತ್ತಲೇ ಇರುತ್ತದೆ. ಅದರ ಉಗ್ರತೆ ಎರಡು ವರ್ಷ ಇರಬಹುದು ಅಥವಾ ನಾಲ್ಕು ವರ್ಷ ಇರಬಹುದು. ಚರಿತ್ರೆಯಲ್ಲಿ ಅನೇಕ ವೈರಸ್ಸು ಗಳು ಮಾಡಿದ ದಾಳಿಗಳಿಂದ ನಾವು ಪಾಠ ಕಲಿಯಬೇಕು ಎನ್ನುವ ಕಾಮನ್ ಸೆನ್ಸಿನ ಮಾತುಗಳನ್ನು ಈ ಅಧಿಕಾರಿ ಆಡುತ್ತಾರೆ. ಇಂಥ ಇವರ ಕಾಮನ್ ಸೆನ್ಸು ಜಿಲ್ಲೆಯೊಂದನ್ನು ರಕ್ಷಿಸಿದೆ.

ಇವರ ಬಗ್ಗೆ ಬರೆಯಲು ಇನ್ನೊಂದು ಕಾರಣವಿದೆ. ಈತ ತಾಯಿಯ ಹೊಟ್ಟೆಯಲ್ಲಿ ಭ್ರೂಣರೂಪದಲ್ಲಿದ್ದಾಗಲೇ ಇವರ ತಂದೆ ಮಲೇರಿಯಾಗೆ ತುತ್ತಾಗಿ ಮರಣ ಹೊಂದುತ್ತಾರೆ. ಕಬ್ಬಿನ ಸೋಗೆಯ ಗುಡಿಸಲಲ್ಲಿ ಈ ಮಗು ಬೆಳೆಯುತ್ತದೆ. ಇವರ ವಿಧವೆ ತಾಯಿ ತಮ್ಮ ಮತ್ತು ಪಕ್ಕದ ಊರುಗಳ ಹೊಲ, ಗದ್ದೆಗಳಲ್ಲಿ ಕೂಲಿ ಮಾಡಿ ಮಗುವನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಾರೆ. ಮಗು ಓದುತ್ತದೆ. ಮುಂಬೈನ ಮೆಡಿಕಲ್ ಕಾಲೇಜಿನಲ್ಲೂ ಸೀಟು‌ ಪಡೆದು ವೈದ್ಯನಾಗುತ್ತದೆ. ಮುಂದೆ 2013 ರಲ್ಲಿ ಐ ಎ ಎಸ್ ಅಧಿಕಾರಿಯಾಗಿ ತನ್ನ ರಾಜ್ಯದ ಕೇಡರ್ಗೇ ಆಯ್ಕೆಯಾಗುತ್ತಾರೆ. ಕೋವಿಡ್ ನಿಂದ ತನ್ನ ಜನರನ್ನು ರಕ್ಷಿಸುವುದಕ್ಕೊ ಎಂಬಂತೆ ತಾನು ಹುಟ್ಟಿದ ಜಿಲ್ಲೆಗೇ ಈಗ ನಿಯೋಜನೆಗೊಂಡಿದ್ದಾರೆ.

ಈ ನಂದೂರ್ ಬಾರ್ ಬಾಬಾಸಾಹೇಬರು ಹುಟ್ಟಿದ ರತ್ನಗಿರಿ ಜಿಲ್ಲೆಗೆ 753 ಕಿ.ಮೀ ದೂರದಲ್ಲಿದೆ. ಅವರ ಸಮಾಧಿ ಸ್ಥಳವಾದ ಚೈತ್ಯಭೂಮಿಗೆ 443 ಕಿ.ಮೀ ದೂರದಲ್ಲಿದೆ.ಬಡ ಬುಡಕಟ್ಟಿಗೆ ಸೇರಿದ, ತಂದೆಯ ಮುಖವನ್ನೆ ಕಾಣದ, ಗುಡಿಸಲಲ್ಲಿ ಬೆಳೆದ, ತಾಯಿಯ ಮಣ್ಣ ವಾಸನೆಯ ಸೆರಗಿನಲ್ಲಿ ಆಡಿದ, ಸರ್ಕಾರಿ ಶಾಲೆಯ ಈ ಹುಡುಗನ ಬಗ್ಗೆ ದೇಶವೇ ಇಂದು ಮಾತನಾಡುತ್ತಿದೆ. ತನ್ನ ಸಂವಿಧಾನ ಹೀಗೆಲ್ಲ ಉಸಿರಾಡುತ್ತಿದೆ ಎಂದು ಬಾಬಾ ಸಾಹೇಬರು ಒಂದಿಷ್ಟು ಖುಷಿ ಪಡುತ್ತಿರಬೇಕು!


ಈ ಲೇಖನವನ್ನು ಡಾ.ವೆಂಕಟೇಶ್ ನೆಲ್ಲುಕುಂಟೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾಗಿದೆ

ಅಂಕೆಗೆ ಸಿಗದ ಸೋಂಕು: ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್

ತುಮಕೂರು: ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿ ಓಡುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್ ಇಂದಿನಿಂದ ಜಾರಿಗೆ ಬಂದಿದೆ.

ಇಂದಿನಿಂದ ಎಲ್ಲೆಂದರಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ರಾಂಡಮ್ ಪರೀಕ್ಷೆ ನಡೆಸಿದಿರುವಂತೆ ರಾಜ್ಯ ಸರ್ಕಾರ ಆದೇಶಿಸಿ ಸುತ್ತೋಲೆ ಹೊರಡಿಸಿದೆ.

ಸೋಂಕು ಪತ್ತೆ ಹಚ್ಚಲು ಬಸ್ ನಿಲ್ದಾಣಗಳು, ಮನೆಗಳಿಗೆ ತೆರಳಿ ಜನರು ಕೇಳಲಿ, ಬಿಡಲಿ ಅವರನ್ನು ಪರೀಕ್ಷೆಗೆ ಒಳಪಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು.

ಇದೇ ಕಾರಣದಿಂದ ಪರೀಕ್ಷೆಯ ವರದಿ ವಿಳಂಬವಾಗುತ್ತಿತ್ತು. ಇದು ರೋಗಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ರೋಗ ವಾಸಿಯಾದರೂ ಪರೀಕ್ಷಾ ವರದಿ ಬರುವುದಿಲ್ಲ ಎಂಬಂತಾಗಿತ್ತು.

ಇದರಿಂದ ಹೆಚ್ಚೆತ್ತುಕೊಂಡಿರುವ ಸರ್ಕಾರ, ತಜ್ಞರ ವರದಿಯಂತೆ ಇನ್ನು ಮುಂದೆ ರೋಗ ಲಕ್ಷಣಗಳಿರುವವರು, ಸೋಂಕಿತ ವ್ಯಕ್ತಿಗಳ ಮನೆಯ ಸದಸ್ಯರು, ಅವರ ನೇರ ಸಂಪರ್ಕಕ್ಕೆ ಬಂದವರನ್ನು ಮಾತ್ರವೇ ಪರೀಕ್ಷೆ ನಡೆಸಬೇಕೆಂದು ಸೂಚಿಸಿದೆ.

ಇದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಕಮ್ಮಿಯಾಗಲಿದ್ದು, ಒಂದೇ ದಿ‌ನದಲ್ಲಿ ವರದಿ ನೀಡಬಹುದಾಗಿದೆ. ಇದು ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಹಳ್ಳಿ, ಹಳ್ಳಿ ತಿರುಗುತ್ತಿದ್ದಾರೆ ಶಾಸಕ ಬಿ.ಸಿ.ನಾಗೇಶ್? ಯಾಕೆ ಗೊತ್ತಾ!

ಉಜ್ಜಜ್ಜಿ ರಾಜಣ್ಣ


ತಿಪಟೂರು: ಈಗ ಯಾವುದೇ ಚುನಾವಣೆಯೂ ಇಲ್ಲ.‌ಕೊರೊನಾ ಕಾರಣ ಬಹುತೇಕರು ಮನೆ ಸೇರಿರುವಾಗ, ತಿಪಟೂರಿನ ಶಾಸಕರು ಮಾತ್ರ ಊರೂರು ತಿರುಗುತ್ತಿದ್ದಾರೆ.

ಕೊರೊನಾದಲ್ಲಿ ಹೆಚ್ಚಿನವರು ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲೇ ಯತ್ನಿಸುತ್ತಿದ್ದಾರೆ. ಇವರು ಮಾತ್ರ ಹಳ್ಳಿ, ಹಳ್ಳಿ ತಿರುಗಿ ಜನರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಸದ್ದಿಲ್ಲದೇ ಮಾಡುತ್ತಿದ್ದಾರೆ.

ಅರಿವುಳ್ಳವರಿಗೆ ಜನಪ್ರತಿನಿಧಿಯ ಜವಾಬ್ದಾರಿ ಅಷ್ಟು ಸುಲಭನಾದುದಲ್ಲ ಎಂಬ ತಿಳುವಳಿಕೆ ಇದ್ದೇ ಇರುತ್ತದೆ. ಜನರು ಆಳಿಗೊಂದೊಂದ ಪ್ರಶ್ನೆ ಕೇಳುವರು. ತಲೆಗೊಂದೊಂದು ಮಾತನಾಡವರು.‌

ಕೊರೋನದಂತಹ ದುರಿತ ಕಾಲದಲ್ಲಿ ‌ಇನ್ನೆಂದೆಂದಿಗಿಂತಲೂ ಜನರು ಆಲೋಚಸುವುದು, ಗಾಬರಿ ಪಡುವುದು, ಸಾಂತ್ವನಕ್ಕೆ ಆಲಾಪಿಸುವುದು ಜನಪ್ರತಿನಿಧಿಗಳನ್ನು ಅಂಗಲಾಪಿಸಿಜೊಳ್ಳುವುದು ಸಹಕಾರ ಕೋರುವುದು ಇನ್ನೂ ಹೆಚ್ಚಾಗಿರುತ್ತದೆ ಸ್ವಾಭಾವಿಕವಾಗಿರುತ್ತದೆ ಅನಿವಾರ್ಯವಾ ಪರಿಸ್ಥಿತಿಯೂ ಹೌದು. ಸಾಯೋರಿಗೆ ಒಂದು ಹುಲ್ಲು ಗರಿ ಆಸರೆಯಾಗಿ ಬಂದರೂ ಸಾಕು ಎಂಬಂಥ ಪರಿಸ್ಥಿತಿ ಇದೆ.

ಹಾಗೆ ಜನರು ಅಸಹಾಯಕರಾದವರಂತೆ ಚಡಪಡಿಸುವಂತೆ ಮಾಡಿದೆ ಕೊರೋನ. ಇಂತಹ ದುರಿತಕಾಲವನ್ನು ಅಕ್ಷರಶಃ ಅರ್ಥ ಮಾಡಿಕೊಂಡವರಾಗಿ ತಿಪಟೂರು ವಿಧಾನ ಸಭಾ ಕ್ಷೇತ್ರದ ಶಾಸಕರು ಬಿ ಸಿ ನಾಗೇಶ್ ಕ್ಷೇತ್ರದಲ್ಲಿ ಅನುದಿನವೂ ಚಾಲನಾಶೀಲವಾಗಿರುವುದು ಅತ್ಯಂತ ಮಹತ್ವದ್ದಾಗಿದೆ.

ಜನಪ್ರಿಯತೆಯಿಂದ ಅನತಿ ದೂರವೇ ಉಳಿದುರುವ ಶಾಸಕರು ಅಬ್ಬರದ ಪ್ರಚಾರಕ್ಕಿಂತಲೂ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕೃತವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಮೂಲಕ ಕೋವಿದ್ ಅಬ್ಬರದ ಅಲೆಯನ್ನು ನಿಯಂತ್ರಣ ಸಾಧಿಸಲು ಕ್ಷೇತ್ರದಲ್ಲಿ ಕಾರ್ಯ ನಿರತರಾಗಿದ್ದಾರೆ.

ಕರೋನ ಭೀಕರತೆಯನ್ನು ಎದುರಿಸಲು ಜನತೆಗೆ ದೈನಂದಿನ ಜೀವನದಲ್ಲಿ ಧೈರ್ಯ ತುಂಬಲು ಕಳೆದ ಬಾರಿಯಿಂದಲೂ ತಿಪಟೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರು ಬಿ. ಸಿ. ನಾಗೇಶ್ ನಿಗಾ ವಹಿಸಿ ತಿರುಗಾಡುತ್ತಿದ್ದಾರೆ.

ಅದು ಉರುಪು ಉತ್ಸಾಹ ಎನ್ನುವುದಕ್ಕಿಂತಲೂ ಜನರ ಜೀವನ್ಮರದ ಪ್ರಶ್ನೆ ಎಂಬುದನ್ನು ಶಾಸಕರು ಮೊದಲಿನಿಂದಲೂ ತಿಳಿದವರಾಗಿ ಆಡಳಿತ ವ್ಯವಸ್ಥೆ ಮತ್ತು ನಾಗರಿಕರ ನಡುವೆ ಶಾಸಕರೂ ಓರ್ವ Covid warrior’s ಆಗಿ ಕ್ಷೇತ್ರದಾದ್ಯಂತ ಕಾರ್ಯೋನ್ಮುಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮುತುವರ್ಜಿಯಿಂದ ಸಾವುನೋವುಗಳು ಸಂಭವಿಸುವುದು ತೀರಾ ತೀರಾ ವಿರಳವಾಗಿದೆ.

ಗ್ರಾಮಾಂತರ ಹಾಗು ನಗರಪ್ರದೇಶದ ಆಸ್ಪತ್ರೆಯ ಮೇಲೆ ತೀವ್ರವಾದ ನಿಗಾವಣೆ ಮಾಡಿರುವರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವಿಶೇಷವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ಒಂದೊಂದು ಜೀವವೂ ಅತಿ ಹೆಚ್ಚು ಮುಖ್ಯ. ಒಂದು ಜೀವವನ್ನೂ ಕಳೆದುಕೊಳ್ಳ ಬಾರದೆಂಬಂತೆ ಸದಾ ಮನೆಯ ಹೊರಗಿದ್ದು ಜನರ ನಡುವೆ ಆರೋಗ್ಯ ಕ್ಷೇಮ ಸಮಾಚಾರದಲ್ಲಿ ಬಾಗಿಯಾಗುತಿದ್ದಾರೆ.

ಹೆಚ್ಚುವರಿಯಾಗಿ ಆಸ್ಪತ್ರೆಯಲ್ಲಿ ಬೆಡ್ ಗಳಿರುವಂತೆಯೂ, ಆಕ್ಸಿಜನ್ ಕೊರತೆ ಆಗದಂದೆಯೂ ಎಚ್ಚರಿಕೆಯ ವಹಿಸಿದ್ದಾರೆ. ಮೇಲಿಂದಮೇಲೆ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯುತ್ತವೆ. ಆ ಕೂಡಲೇ ನಗರ ಮತ್ತು ಗ್ರಾಮಾಂತರದಲ್ಲಿ ಸಭೆಯ ತೀರ್ಮಾನಗಳು ಅನುಷ್ಟಾನ ಮಾಡುವವರಾಗಿದ್ದಾರೆ ತಾಲ್ಲೂಕಿನ ಅಧಿಕಾರಿಗಳು.

ಆಕ್ಷೇಪಣೆ ಉಪೇಕ್ಷೆ ಮಾಡುವ ಜನರ ಮಾತುಗಳನ್ನೂ ತತ್ಸಾರ ಮಾಡದ ಹಾಗೆ ಕೋವಿಡ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸುತ್ತಿರುವ ಶಾಸಕರು ಮತ್ತು ಅಧಿಕಾರಿಗಳು ತಾಲ್ಲೂಕಿನಲ್ಲಿ ಪೂರ್ಣಾವಧಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ದುರಿತ ಕಾಲವನ್ನು ಅರ್ಥ ಮಾಡಿಕೊಂಡವರಾಗಿದ್ದಾರೆ.

ಮುಂಗಾರು ಬಿತ್ತನೆಯ ಕಾಲದಲ್ಲಿ ಏರುತ್ತಿರುವ ಕೊರೋನ ಎಲ್ಲಿ ಹಳಿಗಳ ರೈತರನ್ನು ಕಂಗಾಲು ಮಾಡಬಲ್ಲದೋ ಅರ್ಥವಾಗುದು. ರೂಪಾಂತರ ವೈರಾಣುವಿನ ಅಪರಾವತಾರಗಳು ವೈದ್ಯಕೀಯ ಲೋಕಕ್ಕೂ ಪೂರ್ಣವಾಗಿ ಅರಿವಿಗೆ ಬಾರದ ಸಂಗತಿ ಮತ್ತು ಸವಾಲು. ಮುಂದಾಲೋಚನೆಯಲ್ಲಿ ತೊಡಗಿರುವ ಶಾಸಕರು ಮೊನ್ನಮೊನ್ನೆ ಬಿತ್ತನೆಯ ಬೀಜ ಮತ್ತು ಗೊಬ್ಬರದ ಕೊರತೆಯಾಗದ ಹಾಗೆ ಮತ್ತೆಮತ್ತೆ ಅಧಿಕಾರಿಗಳ ಸಭೆಗಳನ್ನು ನಡೆಸುವ ಮೂಲಕ ಸಂಭವನೀಯ ಪರಿಣಾಮಗಳು ಉಂಟಾಗದ ಹಾಗೆ ಅಧಿಕಾರಿಗಳನ್ನು ಜಾಗೃತ ಗೊಳಿಸಿರುವರು.

ಕೊರೋನ ಉಲ್ಬಣಗೊಂಡರೆ ಆಕ್ಸಿಜನ್ ಮತ್ತು ಬೆಡ್ ಕೊರತೆಯನ್ನು ಕ್ಷೇತ್ರದ ಆಸ್ಪತ್ರೆಯಲ್ಲಿ ಕಾಣಬಾರದು ಎಂಬುದು ಅವರ ಕಾಳಜಿಯನ್ನು ತೋರ್ಪಡಿಸುತ್ತದೆ.

ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗಾಗಿ ರೈತರು ಈ ದುರಿತ ಕಾಲದಲ್ಲಿ ಪರದಾಡಬಾರದು ಎಂದು ಶಾಸಕರು ಅಧಿಕಾರಿಗಳೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರುವುದು ಸ್ವಾಗರ್ಹ ಮತ್ತು ಸುಧಾರಿತ ಕ್ರಮವಾಗಿ ಕಂಡಿತು.

ಊಟ ಬೇಕಾಗಿತ್ತು ಹೋಟೆಲಿಗೆ ಹೋಗಿದ್ದೆ. ಸಿದ್ದಪ್ಪನ ಹೋಟೆಲ್ ನಲ್ಲಿ ಕಾಕಾ ಹೋಟೆಲ್ ಟೀ ಗ್ಲಾಸ್ ಒಂದರಲ್ಲಿ ಟೀ ಕುಡಿಯುತ್ತಾ ಶಾಸಕರು ಅದೆಲ್ಲಿಂದಲೋ ಬಂದು ಮೂಲೆಯೊಂದರ ಕುರ್ಚಿಯಲ್ಲಿ ಕಿಟಕಿ ಆಚೆಯ ಬೆಳಕು ದಿಟ್ಟಿಸುತ್ತಾ ಮುಂದೇನು ಎಂಬುದನ್ನು ಹತ್ತಿರದಲ್ಲೇ ಕುಳಿತಿದ್ದವರ ಜೊತೆಯಲ್ಲಿ ಮಾತನಾಡುತಿದ್ದರು.

ಹೊತ್ತು ಊಟದ ಸಮಯದ ಕಡೆ ತಿರುಗುತ್ತಿತ್ತು ಆಗಲೇ. ಅವರದಿನ್ನೂ ತಿಂಡಿಯಾಗಿರಲಿಲ್ಲ. ಆಕಸ್ಮಿಕವಾಗಿ ಅವರನ್ನು ಎದುರುಬದುರಾಗಿ ನೀವೇಕೆ ಇಲ್ಲಿ ಎಂದರೆ, ಆಗಲೇ ಅವರು ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿ, ಅಲೆಮಾರಿಗಳು ಅರೆ ಅಲೆಮಾರಿಗಳು ನೆಲೆಗೊಂಡಿರುವ ಹಳ್ಳಿಗಳಲ್ಲಿ ತಿರುಗಾಡಿ ಮನೆ ಮುಂಜುರಾತಿ ಪತ್ರಗಳನ್ನು ವಿತರಣೆ ಮಾಡಿ ಬಂದಿದ್ದರು.

ಇಂತಹ ಸಂದರ್ಭಗಳಲ್ಲಿ ಅಲೆಮಾರಿಗಳು ಅರೆ ಅಲೆಮಾರಿಗಳ ಯೋಗಕ್ಷೇಮವನ್ನು ಅರಿತುಕೊಂಡ ಹಾಗೆ ಶಾಸಕರು ಇಂತಹ ಕಾರ್ಯಕ್ರಮ ಹಾಕಿಕೊಂಡು ಕ್ಷೇತ್ರದಲ್ಲಿ ಸಂಚರಿಸುವುದೂ ಹೆಮ್ಮೆಯ ಸಂಗತಿ. ಅವರದಿನ್ನೂ ತಿಂಡಿಯಾಗದೆ ಟೀಯಲ್ಲಿಯೇ ಊಟವನ್ನೂ ಮುಗಿಸುವವರಂತೆ ಕಂಡರು.

ಎಲ್ಲರೂ ಆರೋಗ್ಯವನ್ನು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು. ನಾವೆಲ್ಲರೂ ಗಂಭೀರವಾದ ಆರೋಗ್ಯ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಹೇಳುತ್ತಿದ್ದ ಅವರು ಸಾರ್ವಜನಿಕರ ನಡುವೆ ಇರಲೇಬೇಕಾದ ಅನಿವಾರ್ಯ ಕಾಲ ಸ್ಥಿತಿಯನ್ನು ಕಂಡ ನನಗೆ ಅವರು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದೂ ಅತಿಮುಖ್ಯ ಎನಿಸಿತು. ಬೈಗೂ ಬೆಳಗೂ ಅವರು ಜನರು ಅಧಿಕಾರಿಗಳು ವ್ಯವಸ್ಥೆಯ ನಡುವಿನ ಸಂಬಂಧವನ್ನು ಬಿಟ್ಟಿರಲಾರದ ಪರಿಸ್ಥಿತಿ.

ಮಳೆ ಚನ್ನಾಗಿ ಆಗಿದೆ ರಾಜಣ್ಣ, ರೈತರು ಭೂಮಿ ಸಿದ್ದತೆ ಮಾಡಿಕೊಳ್ಳಲು ಅನುಕೂಲವಾಗುತ್ತಿದೆ. ಮುಂದೆ ಬರುವ ಮಳೆಗೆ ಮುಂಗಾರು ಬಿತ್ತನೆ ಆಗುತ್ತದೆ. ಜನರು ಹುಷಾರಾಗಿ ಇರಲೇ ಬೇಕು. ಯಾರೂ ಆರೋಗ್ಯದ ಬಗ್ಗೆ ತಾತ್ಸಾರ ಮಾಡಬಾರದು.

ನೀವೂ ಅಷ್ಟೇ ಉಷಾರಗಿರಿ ಎಂದು ಎಚ್ಚರಿಸಿದರು. ಅದರಿಂದಿನ ದಿನಗಳಲ್ಲಿ ಶಾಸಕರು Covid patients ಗಳ ಜೊತೆಯಲ್ಲಿ ದೂರವಾಣಿ ಕರೆಯ ಮೂಲಕ ಸೇರಿಕೊಂಡು ಅವರಿಗೆ ಸಮಾಧಾನಕರ ಮಾಹಿತಿಯನ್ನು ನೀಡುವ ಮೂಲಕವೂ ಅವರು ಕ್ರಿಯಾಶೀಲವಾಗಿರುವುದನ್ನು ತಿಳಿದಿರುವ ಸಂಗತಿಯನ್ನು ಅವರಿಗೆ ನಾನು ನೆನಪು ಮಾಡಿ,‌ ನೀವು Covid patients ಗಳ ಜೊತೆಯಲ್ಲಿ ಮಾತನಾಡಿ ಬಹಳ ಒಳ್ಳೆಯ ಕೆಲಸವಾಯಿತು ಎಂದೆ. ಔಷಧಕ್ಕಿಂತಲೂ ಇಂತಹ ಸಂದರ್ಭದಲ್ಲಿ ಗಂಭೀರವಾದ ಇರುಸ್ಥತಿಯಲ್ಲಿ patients ಗಳಿಗೆ ಕರೆ ಮಾಡುವುದು ಸಾಂತ್ವನ ಹೇಳವುದೂ ಸಿದ್ದ ಔಷಧವಿದ್ದ ಹಾಗೆಂದುಕೊಂಡೆ.

ಮುಂಗಾರು ಬಿತ್ತನೆ ಹಿಂದೆ ಬೀಳಬಾರದು. Covid patients ಗಳಿಗೆ Oxygen and hospitals beds ಗಳು ಕೊರತೆ ಆಗದ ಹಾಗೆ ಸದಾ ಹೆಚ್ಚುವರಿಯಾಗಿರಬೇಕು. Fertilizers and seeds ಸಕಾಲದಲ್ಲಿ ಸಮರ್ಪಕವಾಗಿ ರೈತರಿಗೆ ದೊರೆಯುವಂತೆ ಮಾಡುವುದು ಬಹಳ ಮುಖ್ಯವಾದ ತುರ್ತು ಕೆಲಸ ಎಂಬುದು ಅವರ ಮಾತಿನ ಇಂಗಿತವಾಗಿತ್ತು.

ಸಾರ್ವಜನಿಕ ಆರೋಗ್ಯ ರಕ್ಷಣಾ ಕೆಲಸ ನಿಮಿತ್ತವಾಗಿ ಟೀ ಕುಡಿದು ಅವಸರವಸರವಾಗಿ ಶಾಸಕರು ನಿರ್ಗಮಿಸಿದರು.

ಕೋವಿಡ್ ನಿಂದ ತಾಯಿ ಸಾವು ಕೇಳಿದ ಮಗಳು ಹೃದಯಾಘಾತಕ್ಕೆ ಬಲಿ

ತುಮಕೂರು: ಕೋವಿಡ್ ನಿಂದ ತಾಯಿ ಸಾವಿಗೀಡಾದ ಸುದ್ದಿ ಕೇಳಿದ ತಕ್ಷಣ ಎದೆ ಒಡೆದು ಮಗಳು ಸಾವಿಗೀಡಾದ ಘಟನೆ ತುಮಕೂರು ನಗರದಲ್ಲಿ ಇಂದು ನಡೆದಿದೆ.

ಮಲ್ಲಿಕಾ _(45) ಕೊರನಾದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮಧ್ಯ ರಾತ್ರಿ ಸಾವಿಗೀಡಾಗಿದ್ದರು.

ಮಗಳಿಗೆ ಕೊರನಾ ಇರಲಿಲ್ಲ. ಮನೆಯಲ್ಲಿಯೇ ಇದ್ದಳು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಯಿ ಸಾವಿ‌ನ ಸುದ್ದಿ ಮನೆಗೆ ಮುಟ್ಟಿದೆ. ಮಧ್ಯಾಹ್ನ 1 ಗಂಟೆ ಸುಮಾರಿ ಏಕಾಏಕಿ ತೀವ್ರ ಎದೆ ನೋವಿನಿಂದ ಕಿರುಚುತ್ತಿದ್ದ ಮಗಳನ್ನು ಆಸ್ಪತ್ರೆ ಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಸಾವಿಗೀಡಾದರು.

ಮಗಳನ್ನು ಜಾಗೃತಿ (19) ಎಂದು ಗುರುತಿಸಲಾಗಿದೆ.

ಅಮ್ಮನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆಸ್ಪತ್ರೆಗೆ ಸೇರಿಸಿದ್ದವು. ಅಕ್ಕನಿಗೆ ಕೊರೊನಾ ಇರಲಿಲ್ಲ. ಮನೆಯಲ್ಲಿಯೇ ಇದ್ದಳು.

ಆಕೆ ವಿಶೇಷ ಚೇತನಳಾಗಿದ್ದು, ಅಮ್ಮಾನೊಂದಿಗೆ ಅವಿನಾಭಾವ ಸಂಬಂಧ ಇತ್ತು. ಅಮ್ಮ ಎಂದರೆ ಆಕೆಗೆ ವಿಶೇಷ ಪ್ರೀತಿ. ನಿನ್ನೆಯಷ್ಟೇ ಅಕ್ಕನೊಂದಿಗೆ ಆಡಿಕೊಂಡು ಟಿವಿ ನೋಡಿದ್ದೆ ಎಂದು ಮೃತಳ ಸಹೋದರ ಪಬ್ಲಿಕ್ ಸ್ಟೋರಿ ಜತೆ ಮಾತನಾಡಿ ನೋವು ತೋಡಿಕೊಂಡರು.