Thursday, May 7, 2026
Google search engine
Home Blog Page 148

ತುಮಕೂರು; ಪ್ರತಿ ‌67 ಜನರಲ್ಲಿ ಒಬ್ಬರಿಗೆ ಕೊರೊನಾ

ತುಮಕೂರು; ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಪ್ರತಿ ‌67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹಿರೋಹಿಯಿಸಂ ತೋರುತ್ತಿರುವರಿಗೆ ಇದು ಗೊತ್ತಾಗಬೇಕಾಗಿದೆ.

ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದವರೆಲ್ಲರೂ ಸೋಂಕಿಗೆ ಒಳಗಾದವರು. ಇವರೆಲ್ಲರೂ ರೋಗ ಪತ್ತೆಯಾದವರು.

ಸೋಂಕಿನ ಲಕ್ಷಣ ಇಲ್ಲದವರು ಎಷ್ಟು ಜನರಿದ್ದಾರೋ ದೇವರೆ ಬಲ್ಲ.

ಜಿಲ್ಲೆಯಲ್ಲಿ ಈಗ ಒಟ್ಟು 39709 ಜನರಿಗೆ ಸೋಂಕು ತಗುಲಿದವರು. ಇದನ್ನು 2011 ಜನ ಸ‌ಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ವಿಶ್ಲೇಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ 2011 ರಲ್ಲಿ 2678980 ಜನ ಸಂಖ್ಯೆ ಇದೆ ಎಂದು ಜನಗಣತಿಯಲ್ಲಿ ಹೇಳಲಾಗಿದೆ. ಜಿಲ್ಲೆಯಲ್ಲಿ ಜನಸಂಖ್ಯಾ ದರ 3.5 ಇದನ್ನು ಲೆಕ್ಕ ಹಾಕಿದರೂ ಈಗಿ‌ನ ಜನ ಸಂಖ್ಯೆ 28 ಲಕ್ಷ ಮೀರುವುದಿಲ್ಲ.

ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ 67 ಜನರಲ್ಲಿ ಒಬ್ಬರು ಕೊರೊನಾ ಪೀಡಿತರಾಗಿದ್ದಾರೆ. ಇದು ಬೆಚ್ಚಿ ಬೀಳಿಸುವ ಅಂಕಿ ಅಂಶವೇ ಸರಿ.

ಒಟ್ಟು ಸಕ್ರಿಯ ಪ್ರಕರಣಗಳನ್ನು ತೆಗೆದುಕೊಂಡರೂ ಪ್ರತಿ 267 ಜನರಿಗೆ ಒಬ್ಬರು ರೋಗಿಗಳು ಇದ್ದಾರೆ.
ಪ್ರತಿ 300 ಜನರ ಗುಂಪಿನಲ್ಲಿ ಒಬ್ಬರು ಕೊರೊನಾ ಪೀಡಿತರು ಇದ್ದಾರೆ ಎಂಬುದನ್ನು ಮರೆಯುವ ಆಗಿಲ್ಲ‌.

ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಅಂಕಿ ಸಂಖ್ಯೆಗಳು ಹೇಳುವಂತೆ ಹಳ್ಳಿಗಳಲ್ಲೂ ಕೊರೊನಾ ಹೆಚ್ಚಿದೆ.
ಜಿಲ್ಲೆಯಲ್ಲಿ ಶೇ 77 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಹಳ್ಳಿ ಜನರ ಯೋಗಕ್ಷೇಮದತ್ತ ಜಿಲ್ಲಾಡಳಿತ ಹೆಚ್ಚು ನ ಹರಿಸವೇಕಾಗಿದೆ.

ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.

0

ತುಮಕೂರು; ಜಿಲ್ಲೆಯಲ್ಲಿ ಕೊರೊನಾ ಸೋಂಕು ಎಷ್ಟು ವ್ಯಾಪಕವಾಗಿ ಹರಡಿದೆಯೆಂದರೆ ಪ್ರತಿ ‌67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ಈ ಅಂಕಿ ಸಂಖ್ಯೆಗಳನ್ನು ನೋಡಿದರೆ ಎದೆ ಝೆಲ್ಲೆನ್ನುತ್ತದೆ.

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹಿರೋಹಿಯಿಸಂ ತೋರುತ್ತಿರುವರಿಗೆ ಇದು ಗೊತ್ತಾಗಬೇಕಾಗಿದೆ.

ಪ್ರತಿ 67 ಜನರಲ್ಲಿ ಒಬ್ಬರಿಗೆ ಸೋಂಕು ತಗುಲಿದವರೆಲ್ಲರೂ ಸೋಂಕಿಗೆ ಒಳಗಾದವರು. ಇವರೆಲ್ಲರೂ ರೋಗ ಪತ್ತೆಯಾದವರು.

ಸೋಂಕಿನ ಲಕ್ಷಣ ಇಲ್ಲದವರು ಎಷ್ಟು ಜನರಿದ್ದಾರೋ ದೇವರೆ ಬಲ್ಲ.

ಜಿಲ್ಲೆಯಲ್ಲಿ ಈಗ ಒಟ್ಟು 39709 ಜನರಿಗೆ ಸೋಂಕು ತಗುಲಿದವರು. ಇದನ್ನು 2011 ಜನ ಸ‌ಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ವಿಶ್ಲೇಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ 2011 ರಲ್ಲಿ 2678980 ಜನ ಸಂಖ್ಯೆ ಇದೆ ಎಂದು ಜನಗಣತಿಯಲ್ಲಿ ಹೇಳಲಾಗಿದೆ. ಜಿಲ್ಲೆಯಲ್ಲಿ ಜನಸಂಖ್ಯಾ ದರ 3.5 ಇದನ್ನು ಲೆಕ್ಕ ಹಾಕಿದರೂ ಈಗಿ‌ನ ಜನ ಸಂಖ್ಯೆ 28 ಲಕ್ಷ ಮೀರುವುದಿಲ್ಲ.

ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ 67 ಜನರಲ್ಲಿ ಒಬ್ಬರು ಕೊರೊನಾ ಪೀಡಿತರಾಗಿದ್ದಾರೆ. ಇದು ಬೆಚ್ಚಿ ಬೀಳಿಸುವ ಅಂಕಿ ಅಂಶವೇ ಸರಿ.

ಒಟ್ಟು ಸಕ್ರಿಯ ಪ್ರಕರಣಗಳನ್ನು ತೆಗೆದುಕೊಂಡರೂ ಪ್ರತಿ 267 ಜನರಿಗೆ ಒಬ್ಬರು ರೋಗಿಗಳು ಇದ್ದಾರೆ.
ಪ್ರತಿ 300 ಜನರ ಗುಂಪಿನಲ್ಲಿ ಒಬ್ಬರು ಕೊರೊನಾ ಪೀಡಿತರು ಇದ್ದಾರೆ ಎಂಬುದನ್ನು ಮರೆಯುವ ಆಗಿಲ್ಲ‌.

ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಅಂಕಿ ಸಂಖ್ಯೆಗಳು ಹೇಳುವಂತೆ ಹಳ್ಳಿಗಳಲ್ಲೂ ಕೊರೊನಾ ಹೆಚ್ಚಿದೆ.
ಜಿಲ್ಲೆಯಲ್ಲಿ ಶೇ 77 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಹಳ್ಳಿ ಜನರ ಯೋಗಕ್ಷೇಮದತ್ತ ಜಿಲ್ಲಾಡಳಿತ ಹೆಚ್ಚು ನ ಹರಿಸವೇಕಾಗಿದೆ.

ಮಾತಾಡಿ ಪ್ಲೀಸ್…

  • ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಸಮಯ ಕಳೆಯುತ್ತಾ ಯಾಂತ್ರಿಕ ಜೀವನ ನಡೆಸುತ್ತಿರುವ ಈ ವಾಸ್ತವ ಬದುಕಿನಲ್ಲಿ ತಮ್ಮ ಮನಸ್ಸುಗಳೊಮ್ಮೆ ಅವಲೋಕಿಸಬೇಕಿದೆ. ಈ ಪುಸ್ತಕವನೊಮ್ಮೆ ತಿರುವಿಹಾಕಿ ಅವಲೋಕನವಾಗುತ್ತದೆ. ಈ ಕಾರಣದಿಂದ ಈ ಪುಸ್ತಕ ಇಂದಿಗೂ ಪ್ರಸ್ತುವವೆನಿಸುತ್ತದೆ ಎನ್ನುತ್ತಾರೆ ಮಾತಾಡಿ ಪ್ಲೀಸ್ ಪುಸ್ತಕ ಪರಿಚಯ ಮಾಡಿಕೊಟ್ಟಿರುವ ಡಾ.ಶ್ವೇತಾರಾಣಿ ಎಚ್


ಡಾ. ವಿರೂಪಾಕ್ಷ ದೇವರಮನೆ ಅವರ ಕೊಂಡಿಕಳಚುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್ ಎನ್ನುವ ಪುಸ್ತಕವನ್ನು ಹತ್ತು ವರ್ಷಗಳ ಹಿಂದೆ ನನ್ನ ಇನಿಯ ತಂದು ಕೊಟ್ಟು ಓದಿ ಎಂದಿದ್ದರು. ಆಗ ಕುತೂಹಲಕ್ಕೆ ಒಂದು ಲೇಖನ ಓದಿ ಸಮಯವಾದಾಗ ಓದೋಣವೆಂದು ಕಪಾಟು ಸೇರಿಸಿದ್ದೆ.

ಹಲವಾರು ಪುಸ್ತಕಗಳು ಬಂದವು ಹೋದವು ಇದು ಮಾತ್ರ ವಿಲೇವಾರಿಯಾಗದೆ ಕಪಾಟಿನಲ್ಲಿ ಭದ್ರವಾಗಿತ್ತು.


  • ಬಹುತೇಕ ಪೋಷಕರು ತಮ್ಮ ಕನಸ್ಸುಗಳನ್ನು ಪೂರೈಸುವಂತೆ ಮಕ್ಕಳನ್ನು ಮಾನಸಿಕವಾಗಿ ಅಣಿಗೊಳಿಸದೆ. ಅವರನ್ನು ಆರೋಪಿಸುವುದು, ದೂರುವುದು ಮಾಡುತ್ತಾರೆ ಅದರಿಂದ ಅವರ ಕನಸು ಈಡೇರುವುದಿಲ್ಲ. ಮಕ್ಕಳು ನಲುಗುತ್ತಾರೆ. ದೊಡ್ಡವರು ಎಂದಾಕ್ಷಣ ಅವರ ಚಿಂತನೆ ಕೂಡ ದೊಡ್ಡದಾಗಿರಬೇಕು. ಕಿರಿಯರ ಭಾವನೆಗಳಿಗೆ ಸ್ಪಂದಿಸಬೇಕು ಆಗಷ್ಟೇ ಬದುಕು ಸೊಗಸಾಗುವುದು. ಮಕ್ಕಳ ಸಾಮರ್ಥ್ಯವನ್ನು ಅರಿಯದೇ ದೂಷಿಸುವುದು ಸರಿಯಲ್ಲ, ಅವರಿಗೆ ಸ್ಪೂರ್ತಿ ತುಂಬದೇ ಬೈಯುವುದರಿಂದ ಯಾವ ಪ್ರಯೋಜನವೂ ಇಲ್ಲ..

ವೃತ್ತಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆಯವರ ಈ ಕೃತಿಯನ್ನು ದುಡಿಮೆಯ ಹಿಂದೆ ಬಿದ್ದು ತಾನಾಗಿ ಬದುಕಲು ಸಾಧ್ಯವಾಗದ ” workoaloic” ಗಳೆಲ್ಲಾ ಕಡ್ಡಾಯವಾಗಿ ಓದಬೇಕಾಗಿದೆ. ಮನುಷ್ಯ ಸಂಬಂಧದ ಬಿರುಕುಗಳಿಗೆ ಕಾರಣವಾಗುವ ಆಡದೇ ಸ್ವಗತವಾಗಿ ಉಳಿದ ಮಾತುಗಳು, ಇಲ್ಲವೇ ಸಮಯ ಮೀರಿ ತಡವಾಗಿ ಹೇಳಿದ ಮಾತುಗಳು ಆಥವಾ ಅಸಹನೆಯ ಕ್ಷಣಗಳಲ್ಲಿ ಆಡಿದ ಮಾತುಗಳೇ ಕಾರಣವಾಗುತ್ತವೆ.

  • ಮೂವತ್ತು ಲೇಖನಗಳು ಈ ಕೃತಿಯಲ್ಲಿವೆ. ಸಮೂಹ ಜೀವಿಯಾದ ಮುನುಷ್ಯ ಹಣ – ಹೆಸರು ಗಳಿಸಲು ಮನೆಕಟ್ಟಲು ತನ್ನವರನ್ನು ಸುಖವಾಗಿಡಲು ಹೀಗೆ ಹಲವು ಹತ್ತು ಬೇರೆ ಬೇರೆಕಾರಣಗಳಿಗಾಗಿ ದುಡಿತದ ಗೀಳಿಗೆ ಸಿಲುಕಿ ತನ್ನ ಜೀವನದ ಇತರ ವಿಷಯಗಳಾದ ಕುಟುಂಬ, ಆರೋಗ್ಯ, ಸಂಬಂಧ, ಬಾಂಧವ್ಯ ಗಳನ್ನು‌ ನಿರ್ಲಕ್ಷಿಸುತ್ತಾನೆ. ಎಲ್ಲಾ ಸಂಬಂಧಗಳನ್ನು ಜೊಡಿಸುವ ಕೊಂಡಿಯಾದ ‘ ಮಾತನ್ನು’ ಕಡಿಮೆಯಾಗಿಸಿಕೊಂಡು ಸಂಬಂಧಗಳಲ್ಲಿ ಬಿರುಕು ಮೂಡಿಸಿಕೊಳ್ಳುವರು ಎಂಬುದನ್ನು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.
  • ಮುನ್ನುಡಿಯಲ್ಲಿ ಡಾ.ಪಿ.ವಿ. ಭಂಡಾರಿಯವರ ಮಾತಿನಂತೆ ” ಈ ಜಗತ್ತಿನಲ್ಲಿ ಅನಾಹುತಗಳೇನಾದರೂ ನಡೆದಿದ್ದರೆ ಅವು ಬಂದೂಕಿನಿಂದಲ್ಲ, ಅಣುಬಾಂಬಿನಿಂದಲ್ಲ, ಅವೇನಿದ್ದರೂ ಮಾತುಗಳಿಂದ” ಹೌದು ಹಿರಿಯರು ಹೇಳುತ್ತಾರೆ “ಮಾತೇ ಮುತ್ತು ಮಾತೇ ಮೃತ್ಯು” ಎಂದು ಈ ಜಗತ್ತಿನಲ್ಲಿ ಎಲ್ಲಾ ಮಾನವನ ಕ್ರಿಯೆಗಳಿಗೂ ಈ ಮಾತೇ ಮೂಲವಾಗಿದೆ. ಅಂತಹ ಶಕ್ತಿ ಇರುವ ಈ ಮಾತಿನ ಅಸ್ತ್ರ ಪ್ರತಿಯೊಬ್ಬರ ಬಳಿಯಲ್ಲಿಯೂ ಇದೆ. ಅದನ್ನು ನಾವೆಲ್ಲರೂ ಎಷ್ಟರ ಮಟ್ಟಿಗೆ ದುಡಿಸಿಕೊಳ್ಳತ್ತಿದ್ದೇವೆ ?

  • ಮಾತುಗಳು ಹೃದಯದಿಂದ ಬಂದಾಗ ಭಾವನೆಗಳೆನಿಸುತ್ತವೆ. ನೀವು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಬೆಳೆಯುತ್ತವೆ. ನಿರ್ಲಕ್ಷಿಸಿದರೆ ಸಾಯುತ್ತವೆ. ಹಾಗಉಳಿಸಿದರೆ ಸದಾ ನಮ್ಮೊಂದಿಗೆ ಇರುತ್ತವೆ. ಎನ್ನುವ ಲೇಖಕರ ಮಾತಿನಂತೆ. ಮನಸ್ಸುಗಳೊಂದಿಗೆ ಮಾತನಾಡೊಣ. ಸ್ವಲ್ಪ ಮಾಡತಾಡಿ ಪ್ಲೀಸ್

ಅಗತ್ಯವಿರುವ ಮಾತಿಗೂ ಬರ ಬಂದು ಎಷ್ಟೋ ಬಂಧಗಳ ಜೀವನದಿ ಸೊರಗುತ್ತಿವೆ. ಜೀವಕ್ಕೆ ಚೇತನ್ಯಸೆಲೆಯಾದ ಪ್ರೀತಿ ಹೊಂದಾಣಿಕೆ ಎಂಬ ಜೀವಜಲಗಳು ಬತ್ತಿದರೆ ಭರವಸೆಯೆಂಬ ಉಸಿರು ನಿಲ್ಲುತ್ತದೆ.

  • ಈ ಜಗತ್ತಿನಲ್ಲಿ ಅನ್ನಕ್ಕೆ ಹಸಿದವರಿಗಿಂತ ಮುಷ್ಠಿ ಪ್ರೀತಿಗೆ ಹಸಿದವರು ಹೆಚ್ಚು ಎಂಬುದನ್ನು ಸರ್ವೆಗಳು ತಿಳಿಸುತ್ತವೆ.

ಮಾತಿಲ್ಲದೆ ಸೊರಗಿದ ಪ್ರೀತಿಗೆ ಹಣ, ಆಸ್ತಿ, ಊಟಕ್ಕಿಲ್ಲದ ಉಪ್ಪಿನಕಾಯಿಯಾಗುತ್ತೆ. ನಮ್ಮದೇ ಬೇಜವಾಬ್ದಾರಿತನದಿಂದ ಸಂಬಂಧಗಳಯ ಕೆಡುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್ ಎನ್ನುತ್ತದೆ ಈ ಕೃತಿ.. ನಿಮಗೆ ಬಾಂಧವ್ಯ ಹಂಚುವವರೊಂದಿಗೆ, ನಿಮ್ಮ ಪ್ರೀತಿಯ ಮಾತುಗಳಿಗಾಗಿ ಹಸಿದವರೊಂದಿಗೆ ಮಾತನಾಡಿ ಪ್ಲೀಸ್.

ಒಂದಡಿ ಮೀರುವುದು ಯಾರು ?


  • ಬೇರೆ ಎಲ್ಲಾ ಕಡೆ ಹೊಂದಿಕೊಂಡು ಹೋಗುವ ಮನುಷ್ಯರು ತಮ್ಮದೇ ಬಾಳ ಸಂಗಾತಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದು ಯಾಕೆ ?ಮೊದಲು ಇಷ್ಟ ಪಟ್ಟ ಸಂಬಂಧ ಕಹಿಯಾಗುವುದು ಯಾಕೆ ? ಒಂದು ಸಂಬಂಧವನ್ನು ಹಲವು ವರ್ಷಕಾಪಾಡಿಕೊಂಡು ಬರುವುದು ಅಷ್ಟು ಕಷ್ಟದ ಕೆಲಸವಾ ?ಪರಸ್ವರ ಪ್ರೀತಿ ಹಂಚಿದವರು. ವಿಲನ್ ಗಳಾಗಿ ಬಿಡುವುದು ಹೇಗೆ ?ಬದುಕು ಕೊಳಲಿದ್ದಹಾಗೆ ಅದರಲ್ಲಿ ರಂದ್ರಗಳಿದ್ದ ಹಾಗೆ ಬದುಕಿನಲ್ಲಿ ಖಾಲಿತನಗಳಿರುತ್ತವೆ ಅದನ್ನು ನುಡಿಸುವ ಕಲೆ ಗೊತ್ತಿದ್ದರೆ ಸಂಗೀತ ಹೊರಹೊಮ್ಮುತ್ತದೆ.

ಮನಸ್ಸು ಮುನಿಸಿಕೊಂಡು ಮೌನದ‌ ಹಂತ ತಲುಪದವರೆಗೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಬ್ಬರದೂ ಆಗಿರುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಗುರುತಿಸಿ ಪರಿಹರಿಸಿಕೊಂಡರೆ ಯಾವ ಸಮಸ್ಯೆಯೂ ಹೆಮ್ಮರವಾಗುವುದಿಲ್ಲ.

  • ನಮಗೆ ಸಂತೋಷ ಕೊಡುವ ಮಕ್ಕಳೊಂದಿಗೆ, ನಾವು ಏಕೆ ನಿರೀಕ್ಷೆ ಮತ್ತು ಕೋಪವನ್ನು ತೋರುತ್ತೇವೆ. ಅವರು ಕೊಟ್ಟ ಪ್ರೀತಿ ಏಕೆ ಮರೆಯುತ್ತೇವೆ. ಗಂಡ- ಹೆಂಡತಿ, ಅತ್ತೆ- ಮಾವ, ಮಕ್ಕಳೊಂದಿಗೆ ಮನುಷ್ಯ ಸಂಬಂಧಗಳನ್ನು ಬಿರುಕು ಮೂಡದಂತೆ ನಡೆಸಿಕೊಂಡು ಹೋಗುವ ಮಾರ್ಗಸೂಚಿಇದಾಗಿದೆ.

ಹೆಚ್ಚಿನವರು ಮಾಡುವ ತಪ್ಪು ಏನೆಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ ಅರ್ಥಮಾಡಿಕೊಳ್ಳುವುದು ಕಾಲುಭಾಗ ಇನ್ನೂ ಯೋಚಿಸುವುದು ಶೂನ್ಯ… ಆದರೆ ಪ್ರತಿಕ್ರಿಯೆ ಮಾತ್ರ ಎರಡುಪಟ್ಟು. ಈ ಪುಸ್ತಕ ಓದಿದ ನಂತರ ಮನಸ್ಸಿನಿಂದಲೂ ವಿಲೇವಾರಿಯಾಗದೇ ಉಳಿದಿದೆ.

ಕೊರೊನಾ: ಬಡವರ ಚಿಕಿತ್ಸಾ ವೆಚ್ಚ, ಸ್ವಂತ ಹಣದಲ್ಲಿ ಆಕ್ಸಿಜನ್ ಖರೀದಿಗೆ ಮುಂದಾದ ತುರುವೇಕೆರೆ ಶಾಸಕರು

Publicstory


ತುರುವೇಕೆರೆ: ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಸಂಕಷ್ಟದಲ್ಲಿರುವ ಕಡು ಬಡವರ ಚಿಕಿತ್ಸಾ ವೆಚ್ಚದ ಸಹಾಯವನ್ನೂ ಮಾಡಲು ಸಿದ್ದನಿದ್ದೇನೆಂದು ಶಾಸಕ ಮಸಾಲಜಯರಾಂ ಹೇಳಿದರು.

ಪಟ್ಟಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗು ವಾಕ್ಸಿನ್ ತೆಗೆದುಕೊಳ್ಳಲು ಸ್ವ-ಇಚ್ಛೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರು ಮುಖ ಕಾಣುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಈಗಾಗಲೇ ಅತಿ ಅಗತ್ಯವಾದ ಅಂಗಡಿಗಳನ್ನು ಹೊರತು ಪಡಿಸಿ ಇನ್ನುಳಿದ ಅಂಗಡಿ ಮುಂಗಟ್ಟುಗಳನ್ನು ಮೇ.4 ವರೆಗೆ ಬಂದ್ ಮಾಡಲಾಗಿದೆ.

ಸರ್ಕಾರ ವಾರಾಂತ್ಯದ ಕರ್ಪ್ಯೂ ವಿದಿಸಿದ್ದು ಅದಕ್ಕೆ ಕ್ಷೇತ್ರದ ಜನರು ಮನೆಯಲ್ಲಿಯೇ ಇರುವ ಮೂಲಕ ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಹಾಸಿಗೆಗಳು ಭರ್ತಿಯಾಗಿದ್ದು ಮುಂಜಾಗ್ರತೆಯಾಗಿ ಗುಡ್ಡೇನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ನೂರಕ್ಕೂ ಹೆಚ್ಚಿನ ಆಸನದ ವ್ಯವಸ್ಥೆಯುಳ್ಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅದೂ ಸಾಲದಿದ್ದರೆ ಪಟ್ಟಣದಲ್ಲಿನ ಮತ್ತೊಂದು ಹಾಸ್ಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಇಲ್ಲಿನ ರೋಗಿಗಳಿಗೆ ಔಷಧಿಗಳು ಮತ್ತು ಆಕ್ಸಿಜನ್ ಪೂರೈಸಲು ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಒಂದು ವೇಳೆ ರೋಗಿಗಳಿಗೆ ಆಮ್ಲಜನಕದ ಸಮಸ್ಯೆ ತಲೆದೋರಿದರೆ ಅದಕ್ಕೆ ಪೂರ್ವಭಾವಿಯಾಗಿ ಖಾಸಗಿ ಆಕ್ಸಿಜನ್ ಕಂಪನಿಯೊಂದದಿಗೆ ಮಾತುಕತೆ ನಡೆಸಿದ್ದು ಅಗತ್ಯ ಬಿದ್ದರೆ ಸ್ವಂತ ಖರ್ಚಿನಿಂದ ಆಮ್ಲಜನಕ ಖರೀದಿಸುವೆ. ಜನರು ಹೆದರಬಾರದು ಎಂದು ಹೇಳಿದರು.

ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದು, ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವಿ.ಬಿ.ಸುರೇಶ್, ದಿನೇಶ್, ಸುರೇಶ್, ಮಂಜಣ್ಣ ಇದ್ದರು.

ಕೊರೊನಾ ಸಾವು: ಶವ ಸಂಸ್ಕಾರಕ್ಕೆ ತುರುವೇಕೆರೆಯಲ್ಲಿ ಮುಸ್ಲಿಂ ಯುವಕರ ತಂಡ ಸಜ್ಜು

ತುರುವೇಕೆರೆ: ಕೊರೊನಾ ಸೋಂಕಿನಿಂದ ಸತ್ತವರ ಶವ ಕಂಡರೆ ದೂರ ಓಡುವ ಕಾಲ ಇದು. ಆದರೆ, ತುರುವೇಕೆರೆಯ ಮುಸ್ಲಿಂ ಯುವಕರು ಕೊರೊನಾದಿಂದ ಸತ್ತವರ ಶವ ಸಂಸ್ಕಾರಕ್ಕೆ ತಂಡ ಮಾಡಿಕೊಂಡಿರುವುದು ತಾಲ್ಲೂಕಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಯಾವುದೇ ಜಾತಿ, ಧರ್ಮದ ಜನರು ಸಾವಿಗೀಡಾದರೂ ಅವರವರ ಮನೆಯವರ ರೀತಿ ರಿವಾಜಿನಂತೆ ಶವ ಸಂಸ್ಕಾರ ನಡೆಸಿಕೊಡಲು ಮುಂದೆ ಬಂದಿದೆ.

ಪಟ್ಟಣದ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಮುಂದಾಗಿರುವುದು ತಾಲ್ಲೂಕಿನ ಸಾರ್ವಜನಿಕ ವಲಯ ಹಾಗು ಸಾಮಾಜಿಕ ಜಾಲ ತಾಣದಲ್ಲಿ ಪ್ರಶಂಸೆ ಪಡೆದಿದೆ.

ಪಟ್ಟಣದ ಹಾಜಿಆರಿಫ್ಫಾಷಾ, ಅಸ್ಲಾಂ, ನಯಾಜ್, ಜಫ್ರಲ್ಲಾ ಸೇರಿದಂತೆ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಸ್ವ-ಇಚ್ಛೆಯಿಂದ ಕೊರೊನಾದಿಂದ ಸತ್ತವರ ಸಂಪ್ರದಾಯಕ್ಕೆ ಅನುಗುಣವಾಗಿ ಶವ ಸಂಸ್ಕಾರ ಮಾಡುವುದಾಗಿ ತಹಶೀಲ್ದಾರ್ ಆರ್.ನಯೀಂಉನ್ನಿಸಾ ಮತ್ತು ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದು ಇದಕ್ಕೆ ತಾಲ್ಲೂಕು ಆಡಳಿತ ಕೂಡ ಶುಕ್ರವಾರ ಒಪ್ಪಿಗೆ ಸೂಚಿಸಿದೆ ಎನ್ನುತ್ತಾರೆ ಹಾಜಿಆರಿಫ್ಪಾಷಾ.

ಕೊರೊನಾ ಸೋಂಕಿಗೆ ಎಲ್ಲರೂ ಭಯಪಡುತ್ತಾರೆ. ಅದರಿಂದ ಸಾವಾದರೆ ಮುಟ್ಟಲು ಎಂತಹವರೂ ಅಳುಕುತ್ತಾರೆ. ಆದರೆ ನಮ್ಮ ಸ್ನೇಹಿತರು ಸತ್ತವರಿಗೆ ಒಂದು ಸಂಸ್ಕಾರ, ಸದ್ಗತಿ ನೀಡಿ ಆಮೂಲಕ ನೊಂದವರ ಕುಟುಂಬದವರಿಗೆ ಒಂದು ಸಾಂತ್ವಾನ ಹೇಳಿದಂತೆ ಆಗಲೆಂದು. ಆಮೂಲಕ ಸಮಾಜ ಸೇವೆಯ ಮನೋಭಾವನೆ ನಮ್ಮ ಯುವ ಸಮುದಾಯಲ್ಲಿ ಬೆಳೆಯಲು ಎಂಬ ಉದ್ದೇಶದಿಂದ ಇಂತಹ ಕೆಲಸ ಮಾಡಲು ಒಲವು ತೋರಿದೆವು.

ಈ ಕೆಲಸವನ್ನು ಕೊರೊನಾ ಬಂದ ಕಳೆದ ಬಾರಿಯೇ ಮಾಡಬೇಕೆಂದುಕೊಂಡಿದ್ದೆವು. ಅದು ಈಗ ಕೈಗೂಡಿದೆ. ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯು ನೀಡುವ ಸೋಂಕಿನ ಎಚ್ಚರ ಹಾಗು ಸೂಚನೆಯನ್ನು ಪಾಲಿಸುತ್ತಾ ಕೊರೊನಾದಿಂದ ಸತ್ತವರ ಶವವನ್ನು ಆರೋಗ್ಯ ಇಲಾಖೆ ಎಲ್ಲಿಗೆ ಕಳುಹಿಸುತ್ತದೆ ಆ ಊರಿಗೆ ತಮ್ಮ ಖರ್ಚು ವೆಚ್ಚಗಳಲ್ಲಿಯೇ ಹೋಗಿ ಅಲ್ಲಿ ಅಚ್ಚುಕಟ್ಟಾಗಿ ಶವ ಸಂಸ್ಕಾರ ಮಾಡಿ ಬರುವೆವು ಎನ್ನುತ್ತಾರೆ ಆರಿಫ್ಪಾಷಾ.

ಕರ್ಪ್ಯೂ ಉಲ್ಲಂಘನೆ: ತುಮಕೂರಿನಲ್ಲಿ 112 ವಾಹನ ಜಫ್ತಿ

Publicstory


ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿ ಕರೋನಾ ತಡೆಗಾಗಿ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಕೂಡ ಕೆಲವರು ಮುನ್ನೆಚ್ಚರಿಕೆ ಕಡೆಗಣಿಸಿ ವಾಹನಗಳಲ್ಲಿ ಸೂಕ್ತ ಕಾರಣ ಇಲ್ಲದೆ ತಿರುಗಾಡುತ್ತಿದ್ದವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ತುಮಕೂರು ನಗರ ಉಪ ವಿಬಾಗ- 52, ಕುಣಿಗಲ್ ಉಪ ವಿಬಾಗ- 47, ಮಧುಗಿರಿ ಉಪ ವಿಬಾಗ- 05, ತಿಪಟೂರು ಉಪ ವಿಭಾಗ- 13, ಶಿರಾ ಉಪ ವಿಭಾಗ – 02 ಒಟ್ಟು-112 ವಾಹನಗಳು* ಸೀಜ್ ಮಾಡಿ ಮುಂದಿನ ಕಾನೂನು ಕ್ರಮ ಕೈಗೂಂಡಿರುತ್ತೆ.

*ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ವಾಹನವಶಪಡಿಸಿ ಕೊಳ್ಳಲಾಗುವುದು, ಜಿಲ್ಲೆಯಾದ್ಯಂತ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಕೆಲವು ಕಡೆ ಚೆಕ್ ಪೋಸ್ಟ್ ತೆರೆದು ವಾಹನಗಳ ತಪಾಸಣೆ ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದಂದೆ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿಯಾದ ಡಾ,ಕೆ ವಂಸಿ ಕೃಷ್ಣ ಮನವಿ ಮಾಡಿದ್ದಾರೆ.

ಇಷ್ಟುಬೇಗ ಈ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ…

0

ರಂಗನಕೆರೆ ಮಹೇಶ್


ಕಳೆದ ನಾಲ್ಕೈದು ವರ್ಷಳಿಂದ ಶಾಲೆಗಳ ಇಕೋಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಪರಿಸರದ ಮಹತ್ವ ತಿಳಿಸಲು ಶಾಲಾ ಶಿಕ್ಷಕರು ಆಹ್ವಾನ ನೀಡುತ್ತಿದ್ದರು.

ಪ್ರತಿ ವರ್ಷವೂ ಸುಮಾರು ಆರೇಳು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪರಿಸರ, ನೀರು, ಗಾಳಿ ಬಗ್ಗೆ ತಿಳಿಸಿ ಹೇಳುತ್ತಿದ್ದೆ. ಪ್ರಕೃತಿಯಲ್ಲಿ ಲಭ್ಯವಾಗುವ ನೀರು, ಗಾಳಿಯನ್ನು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪಡೆಯಬಹುದು.

ನೀರು ಮತ್ತು ಗಾಳಿ(ಆಮ್ಲಜನಕ) ಪ್ರಾಣವಾಯು ನಮ್ಮ ಪೂರ್ವಿಕರ ಕಾಲದಲ್ಲಿ ಹೇರಳವಾಗಿ ಸಿಗುತ್ತಿತ್ತು. ನಮ್ಮ ಗುರುಗಳು ನೀರು ಮತ್ತು ಗಾಳಿಯನ್ನು ಅಪರಿಮಿತ ಗಣಕ್ಕೆ ಉದಾಹರಣೆ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಮಾನವನ ಕೆಂಗಣ್ಣಿಗೆ ಪರಿಸರ ಗುರಿಯಾಗಿ ನಾಶವಾಗುತ್ತಿದೆ.

ಈಗಾಗಲೇ ವಿಶ್ಚಸಂಸ್ಥೆ ಕೂಡ 2050ರ ವೇಳೆಗೆ ಈ ಭೂಮಿಯಲ್ಲಿ ಕುಡಿಯುವ ನೀರು ಅಲಭ್ಯ ಎಂದು ಸರ್ವೇ ಮುಖಾಂತರ ತಿಳಿಸಿದೆ.

ಆದರೂ ನಾವು ಎಚ್ಚೆತ್ತು ಕೊಳ್ಳುತ್ತಿಲ್ಲ. ಮಕ್ಕಳಿಗೆ ಹಣ, ಆಸ್ತಿ ಮಾಡುವ ಆತುರದಲ್ಲಿ ಮುಂದೆ ನಮ್ಮ ಮಕ್ಕಳಿಗೆ ಬೇಕಾಗಿರುವ ನೀರು ಮತ್ತು ಉತ್ತಮ ಗಾಳಿಯನ್ನು ಉಳಿಸಲು ಮುಂದಾಗುತ್ತಿಲ್ಲ.

ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಆಸ್ತಿ ಇದ್ದರೂ ನೀರು ಮತ್ತು ಗಾಳಿ ಇಲ್ಲದ ಮೇಲೆ ಅವರು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ ಎಂದು ವಿವರಣೆಯನ್ನು ನೀಡಿದೆ. ಕೊನೆಗೆ ಪರಿಸರದ ಮಹತ್ವವನ್ನು ಕುರಿತು ಹೇಳುವಾಗ…

ಗಾಳಿ,ನೀರು ಅತ್ಯವಶ್ಯಕ. ಈಗಾಗಲೇ ಜೀವದಾನ ನೀಡುವ ನೀರು ಮಾರಾಟದ ಸರಕಾಗಿದೆ. ಇನ್ನೂ ಗಾಳಿ(ಆಮ್ಲಜನಕ)ಕೂಡ ಭವಿಷ್ಯದಲ್ಲಿ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಫಿಲ್ ಮಾಡಿಸಿದಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸಲು ಕ್ಯೂನಲ್ಲಿ ನಿಲ್ಲಬೇಕಾಗುವ ಸ್ಥಿತಿ ನಿರ್ಮಾಣವಾಗಬಹುದು.

ಮುಂದಿನ ದಿನಗಳಲ್ಲಿ ಶುದ್ಧೀಕರಣ ಗೊಳಿಸಿದ ಗಾಳಿಯೂ ಮಾರಾಟದ ಸರಕಾಗಬಹುದು ಎಂದು ಅವರಿಗೆ ಹೇಳಿ ಗಿಡ ನೆಡಲು ಪ್ರೇರೇಪಿಸುತ್ತಿದ್ದೆ. ಈ ರೀತಿ ಕಳೆದ ಒಂದು ತಿಂಗಳ ಹಿಂದಷ್ಟೇ ಹೇಳಿದೆ.

ಆದರೆ ಕೇಲವೇ ದಿನಗಳಲ್ಲಿ ಆಕ್ಸಿಜನ್ ಕೂಡ ಮಾರಾಟದ ಸರಕಾಗಿದೆ. ಈಗಾಗಲೇ ಎಲ್ಲಿಯೂ ಆಮ್ಲಜನಕ ದೊರೆಯದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಂದಿರುವುದಕ್ಕೆ ಮಾನವರೇ ಕಾರಣವಲ್ಲವೇ…!!
ಅದಕ್ಕೆ ಹೇಳೋದುಮಾಡಿದ್ದುಣೋ_ಮಾರಾಯಾ ಅಂಥ….

ಭಾನುವಾರದ ಕವಿತೆ: ಕೊರೊನಾ ಪೀಡಿತರು ಓದಲೇಬೇಕಾದ- ನದಿ

1

ಡಾ. ರಜನಿ


ಬೆಟ್ಟ ಕೊರಕಲು
ಗುಡ್ಡ ಹತ್ತಿ ಇಳಿದು

ಊರು ಕಾಡು
ಮೇಡು ಅಲೆದು

ಕಲ್ಲು ಹುಲ್ಲು..ಹೂವು ಹೊಲಸು ತೊಳೆದು
ಹೆಣ ಹಣ ಎಲ್ಲ ನುಂಗಿ ನೀರಾಗಿ

ತಿರುಗಿ ನೋಡಲಾರೆ
ಬಂದ ದಾರಿ

ನಾನೇ ? ಬಂದಿದ್ದು ಆ ಬೆಟ್ಟದಿಂದ?
ಯಾರು ಯಾರು ನನ್ನ ಸೇರಿದರು?

ಬಿಟ್ಟು ದೂರಾದರು?
ಊಹೂ…
ನೆನಪಿಲ್ಲ

ದಡದಲ್ಲಿ ಕೈಕೈ ಹಿಡಿದ ಪ್ರೀತಿ ಹುಡುಗರು
ಬಕರೆ ಬಿಸಾಕಿದ ಚಡ್ಡಿ ಹೈಕಳು

ಜೊತೆಯಾಗಿ ನೆಗೆದ ಪ್ರಣಯ ಪಕ್ಷಿಗಳು

ಆದರೂ ಅಗಾಧ
ಕಡಲನ್ನು ಹೇಗೆ ಸೇರಲೀ ? ಏಕೆ ಭಯ

ಮತ್ತೆ ತಿಟ್ಟು ಹತ್ತಿ ತಿರುಗಿ ಹೋಗಲೇ?
ಆಗದು…

ಬಿಡು ಭಯ
ನೆಗೆ ಸಮುದ್ರಕ್ಕೆ

ಅದೇ ರೀತಿ ..ಆ ಜೋಡಿ ಬಿಡದೆ ಜೊತೆಗೆ ನೆಗೆದ ರೀತಿ
ನೆಗೆದು…. ಬೇರೆ ಹರಿಯಬೇಡ
ಒಂದಾಗು

ಆಗ ನೋಡು
ಕಡಲೇ ನೀನು

ನೀನು ಯಾವಾಗ
ನದಿಯಾಗಿದ್ದೆ?


ಇದು ಖಲೀಲ್ ಗಿಬ್ರಾನ್ ಅವರ fear ಕವನ ಪ್ರೇರಿತವಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ರಜನಿ ಅವರ ಈ ಕವನ ಕೊರೊನಾ ಪೀಡಿತರಷ್ಟೇ ಅಲ್ಲ ಬದುಕಿನಲ್ಲಿ ಸೋತು ವಿಶ್ವಾಸವನ್ನೇ ಕೈ ಚೆಲ್ಲಿ ಕೂತಿರುವ ಎಲ್ಲರಿಗೂ ಉತ್ಸಾಹ ತುಂಬಲಿದೆ.

ಅವರ ಮಾತುಗಳಲ್ಲಿ ಹೇಳಬೇಕೆಂದರೆ, ಕೋರೋನಾ.. ನನಗೇ ಏಕೆ ?ಎಂಬ ಪ್ರಶ್ನೆ ಕೇಳ ಬೇಡಿ… ಎದುರಿಸಿ.. ಮುಂಜಾಗ್ರತೆ ಅವಶ್ಯಕ. ಆದರೆ ನನಗೆ ಕೋರನಾ ಬರಲ್ಲ ಎಂಬ ವಿಚಿತ್ರ ಭಾವನೆ ಬಿಡಿ. ಪ್ರಪಂಚದಲ್ಲಿ ನಾವು ಒಂದು ಬಿಂದು. ಬಂದರೆ ಎದುರಿಸಿ )

ಬಡವರಲ್ಲಿ ಮನೆಯ ಕನಸು ತುಂಬಿದ ಗೋಪಾಲಯ್ಯ ಮೇಷ್ಟ್ರು ಇನ್ನಿಲ್ಲ…

ತುಮಕೂರು: ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಜನರಿಗೆ ಗೋಪಾಲಯ್ಯ ಮೇಷ್ಟ್ರು ಎಂದರೆ ತಕ್ಷಣ ನೆನಪಿಗೆ ಬರುವುದು ಮನೆಯ ಕನಸು.

ಗೋಪಾಲಯ್ಯ ಮೇಷ್ಟ್ರು (85) ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ದಿನಾಂಕ 24/4/2021) ಇನ್ನಿಲ್ಲವಾದರು. ಭಾನುವಾರ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರನ್ನು ನೆನಪಿಸಕೊಂಡರೆ ಸಾಕು ಅವರ ಮನೆಯ ಮುಂದೆ ನಿಲ್ಲುತ್ತಿದ್ದ ಶೂದ್ರ, ಬಡ ಜನರ ಮುಖಗಳೇ ನೆನಪಾಗುತ್ತವೆ.

ಮಧುಗಿರಿಯ ಹನುಮನಹಳ್ಳಿಯವರಾದ ಗೋಪಾಲಯ್ಯ ಅವರು ವೃತ್ತಿಯಲ್ಲಿ ಶಿಕ್ಷಕರು. ಪಾವಗಡ-ಆಂಧ್ರ ಗಡಿಗೆ ಅಂಟಿಕೊಂಡಿದ್ದ ಕುಗ್ರಾಮವೊಂದರಿಂದ ವೃತ್ತಿ ಆರಂಭಿಸಿದ ಅವರು ಜ್ಯೋತಿಷ ಕಲಿತು ಅದರಲ್ಲಿ ಸಾಧಿಸಿದ ಪ್ರವೀಣತೆ ಅಗಾಧ. ಅವರ ಮಗನ ಸಾವಿನ ದಿನವನ್ನು ಅವರೇ ಬರೆದಿದ್ದರು. ಅದೇ ರೀತಿ ಘಟಿಸಿದಾಗ ಹೆಂಡತಿಗೆ ಮಾತು ಕೊಟ್ಟು ಜಾತಕ ಬರೆಯುವುದನ್ನು ಬಿಟ್ಟರು. ಆದರೆ ಬಡವರ ಮನೆಯ ಕನಸುಗಳ ಜತೆ ಕೈ ಜೋಡಿಸಿದರು.

ಮಧುಗಿರಿಯಲ್ಲಿ ಹರಿಯುತ್ತಿದ್ದ ನದಿ ಹಾಗೂ ಹುಲಿಯೊಂದರ ಭೇಟಿಯ ಬಗ್ಗೆ ಮಾಹಿತಿ ಖಚಿತಪಡಿಸಿದ್ದು ಅವರೇ. ಪ್ರಜಾವಾಣಿಯಲ್ಲಿ ನಮ್ಮೂರು ನಮ್ಮ ಹೆಮ್ಮೆಯಲ್ಲಿ ಬರೆದಿದ್ದ ಮಧುಗಿರಿಯಲ್ಲಿ ಹುಲಿಯ ಜಾಡು ಲೇಖನ ಓದಿ ಕರೆ ಮಾಡಿದವರು. ಅವರು ಏಳನೇ ತರಗತಿಯಲ್ಲಿದ್ದಾಗ ಗ್ರಾಮದ ಪಟೀಲರು ಹುಲಿಯನ್ನು ಭೇಟಿಯಾಡಿ ಅದನ್ನು ಊರೂರಲ್ಲಿ ಮೆರವಣಿಗೆ ಮಾಡಿದ ಬಗ್ಗೆ ತಮ್ಮಲ್ಲಿದ್ದ ನೆನಪುಗಳನ್ನುಹಂಚಿಕೊಂಡಿದ್ದರು. ಅವರ ಬಗ್ಗೆ ಬರೆಯಲು ಇದಲ್ಲ ಕಾರಣ, ಬೇರೇಯದೆ ಇದೆ.

ಮೇಷ್ಟ್ರಾಗಿದ್ದ ಅವರು ಗ್ರಾಮಕ್ಕೆ ನಡೆದು ಹೋಗುವಾಗ ಬ್ರಾಹ್ಮಣರ ಮನೆಯ ಮುಂದೆ ದೂರದಲ್ಲಿ ಪ್ರಾಣಿಗಳಂತೆ ನಿಲ್ಲುತ್ತಿದ್ದ ಬಡ ಜನರ ಸಾಲು, ಬಿರುಬಿಸಿಲಿನಲ್ಲೂ ಕಾದು-ಕಾದು ಹೋಗುವುದನ್ನು ಪ್ರತಿ ದಿನ ಬೆಳಿಗ್ಗೆ ಸಂಜೆ ನೋಡುತ್ತಿದ್ದರು. ಒಮ್ಮೆ ಅಲ್ಲಿದ್ದವರೊಬ್ಬರನ್ನು ಕೇಳಿದರು.

ಮನೆ ಕಟ್ಟಲು ಆಯ ಮಾಡಿಸಬೇಕು. ಹೆಸರು ಬಲ ಕೇಳಬೇಕು. ಆದರೆ ಸ್ವಾಮ್ಯೋರು ಹೇಳೋದೆ ಇಲ್ಲ. ಒಂದು ತಿಂಗಳಿನಿಂದ ತಿರುಗುತ್ತಿದ್ದೇನೆ ಎಂದು ಹೇಳಿದ ಮಾತು ಕೇಳಿ ನೊಂದರು. ಅವೊತ್ತೇ ನಿರ್ಧಾರ ಮಾಡಿದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಆಂಧ್ರಕ್ಕೆ ಹೋಗಿ ಅಲ್ಲಿ ಜ್ಯೋತಿಷ ಕಲಿತರು. ಆಯ ಮಾಡುವುದನ್ನು, ಜತೆಗೆ ಮನೆಗೆ ಪ್ಲಾನ್ ಹಾಕುವುದನ್ನು ಕಲಿತರು. ಆನಂತರದು ಇತಿಹಾಸ.

ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟು 35 ಸಾವಿರಕ್ಕೂ ಹೆಚ್ಚು ಜನರಿಗೆ ಆಯ, ಮನೆಯ ಪ್ಲಾನ್ ಮಾಡಿಕೊಟ್ಟರು. ಜ್ಯೋತಿಷ ಹೇಳಿದರು. ಆದರೆ ನಯಾ ಪೈಸೆ ಯಾರಿಂದಲೂ ಪಡೆಯಲಿಲ್ಲ. ಜನರು ಸಹ ಏನೇ ಕಷ್ಟ ಬಂದರೂ ಅವರ ಬಳಿಗೆ ಬರುತ್ತಿದ್ದರು. ಮನೆ ಕಟ್ಟುವ ಕನಸುಗಳ ಕಂಗಳಲ್ಲಿ ಸಂತಸ ತುಂಬುತ್ತಿದ್ದರು.

ತುಮಕೂರಿನಲ್ಲಿ ಮಗನ ಮನೆಯಲ್ಲಿದ್ದ ಅವರು ಇತ್ತೀಚಿನವರೆಗೂ ಮನೆಗೆ ಆಯ ನೋಡಿಕೊಟ್ಟರು. ಪ್ಲಾನ್ ಮಾಡಿಕೊಟ್ಟರು. ಒಬ್ಬರ ಬಳಿಯೂ ನಯಾ ಪೈಸೆ ಪಡೆಯಲಿಲ್ಲ. ಇವರೆಲ್ಲ ಬಡವರು, ದಲಿತರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇವರ ಖ್ಯಾತಿ ಕಂಡು ಕೊನೆಕೊನೆಗೆ ಶ್ರೀಮಂತರು ಬರುತ್ತಿದ್ದರು. ಆದರೆ ಎಲ್ಲರಿಗೂ ಒಂದೇ ಬಗೆಯ ಆತಿಥ್ಯ. ಯಾರಿಂದಲೂ ನಯಾ ಪೈಸೆ ಮುಟ್ಟಲಿಲ್ಲ. ಹಲವು ದೇವಸ್ಥಾನಗಳಿಗೂ ಆಯ ಮಾಡಿಕೊಟ್ಟರು.

ಮುಖ್ಯ ಶಿಕ್ಷಕರಾಗಿ ಅವರು ಮೇಷ್ಟ್ರು ಗಿರಿಯಲ್ಲೂ ಹೆಸರು ಮಾಡಿದರು. ಶಿಷ್ಯರ ಪ್ರೀತಿಯ ಮೇಷ್ಟ್ರು ಸಹ ಆದರು.

ಇಡೀ ಬದುಕನ್ನು ಬೇರೆಯವರ ಕನಸುಗಳಾಗಿಯೇ ಬದುಕಿದ ಮೇಷ್ಟ್ರು ಇನ್ನಿಲ್ಲ. ಆದರೆ 35 ಸಾವಿರ ಮನೆಗಳಾಗಿ ಅವರು ಹರಡಿ ಹೋಗಿದ್ದಾರೆ ಎಂದರೆ ತಪ್ಪಿಲ್ಲ.

ಕೋವಿಡ್:Bed allotment ಎಂಬ ಪ್ರಕ್ರಿಯೆ: ಇಲ್ಲಿದೆ ನೋಡಿ ದೋಷ…

0

ಸತೀಶ್


ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ 50% ಹಾಸಿಗೆ ನೀಡುತ್ತಿವೆಯೇ?
ಕೊಟ್ಟರೂ ತನ್ನ ಖಾಸಗಿ ರೋಗಿಗಳಿಗೆ ಕೊಡುತ್ತಿರುವ ಹಾಸಿಗೆಗಳೇ? ಅಥವಾ ಯಾವುದೋ ವಾರ್ಡ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಂತೆ ಮಾಡುತ್ತಿವೆ. ಸರಿಯಾದ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜಿಸುವುದಿಲ್ಲ ಎನ್ನಲಾಗುತ್ತಿದೆ.

High Dependancy Unit ಎಂದು BBMP allott
ಮಾಡಿದ Bed ಗಳಿಗೆ monitors ಇಲ್ಲ ಎಂದು ರೋಗಿಗಳು ದೂರುತ್ತಿದ್ದಾರೆ.

Fortis ಆಸ್ಪತ್ರೆ ವಿರುದ್ಧ FIR ಹಾಕಿರುವುದು ಒಳ್ಳೆಯದು. ಆದರೆ ಅವರ ಹೇಳಿಕೆ ನೋಡಿದರೆ BBMP Non
ICU Bed allott ಮಾಡಿತ್ತು. ಆದರೆ ರೋಗಿಗೆ ICU Bedಬೇಕಿತ್ತು ಎಂದು ಹೇಳಿಕೆ ನೀಡಿದೆ. BBMP BED upgrade ಮಾಡಬೇಕೋ? ರೋಗಿಯ ಸ್ಥಿತಿ ನೋಡಿ BED ನಿರ್ಧರಿಸಬೇಕೋ? ಈ ಬಗ್ಗೆ ಇರುವ ಗೊಂದಲ ಕೂಡಲೇ ಬಗೆಹರಿಸುವ ಅಗತ್ಯವಿದೆ.

ಸರಕಾರಕ್ಕೆ ನೀಡಿರುವ BED ಗಳ ಗುಣಮಟ್ಟ ಸೇವೆಗಳನ್ನೂ ಖಾತ್ರಿಗೊಳಿಸಬೇಕಾದ ಅವಶ್ಯಕತೆ SAST ಮತ್ತು ಆರೋಗ್ಯ ಇಲಾಖೆ ಮುಂದಿದೆ. ಇದು ಹಿರಿಯ ಅಧಿಕಾರಿಗಳಿಗೆ, ಸಚಿವರಿಗೆ ತಿಳಿಯುತ್ತಿಲ್ಲವೇ ಎಂಬುದು ಸೋಜಿಗವಾಗಿದೆ.