Wednesday, May 22, 2024
Google search engine

ಮಾತಾಡಿ ಪ್ಲೀಸ್…

  • ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಸಮಯ ಕಳೆಯುತ್ತಾ ಯಾಂತ್ರಿಕ ಜೀವನ ನಡೆಸುತ್ತಿರುವ ಈ ವಾಸ್ತವ ಬದುಕಿನಲ್ಲಿ ತಮ್ಮ ಮನಸ್ಸುಗಳೊಮ್ಮೆ ಅವಲೋಕಿಸಬೇಕಿದೆ. ಈ ಪುಸ್ತಕವನೊಮ್ಮೆ ತಿರುವಿಹಾಕಿ ಅವಲೋಕನವಾಗುತ್ತದೆ. ಈ ಕಾರಣದಿಂದ ಈ ಪುಸ್ತಕ ಇಂದಿಗೂ ಪ್ರಸ್ತುವವೆನಿಸುತ್ತದೆ ಎನ್ನುತ್ತಾರೆ ಮಾತಾಡಿ ಪ್ಲೀಸ್ ಪುಸ್ತಕ ಪರಿಚಯ ಮಾಡಿಕೊಟ್ಟಿರುವ ಡಾ.ಶ್ವೇತಾರಾಣಿ ಎಚ್


ಡಾ. ವಿರೂಪಾಕ್ಷ ದೇವರಮನೆ ಅವರ ಕೊಂಡಿಕಳಚುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್ ಎನ್ನುವ ಪುಸ್ತಕವನ್ನು ಹತ್ತು ವರ್ಷಗಳ ಹಿಂದೆ ನನ್ನ ಇನಿಯ ತಂದು ಕೊಟ್ಟು ಓದಿ ಎಂದಿದ್ದರು. ಆಗ ಕುತೂಹಲಕ್ಕೆ ಒಂದು ಲೇಖನ ಓದಿ ಸಮಯವಾದಾಗ ಓದೋಣವೆಂದು ಕಪಾಟು ಸೇರಿಸಿದ್ದೆ.

ಹಲವಾರು ಪುಸ್ತಕಗಳು ಬಂದವು ಹೋದವು ಇದು ಮಾತ್ರ ವಿಲೇವಾರಿಯಾಗದೆ ಕಪಾಟಿನಲ್ಲಿ ಭದ್ರವಾಗಿತ್ತು.


  • ಬಹುತೇಕ ಪೋಷಕರು ತಮ್ಮ ಕನಸ್ಸುಗಳನ್ನು ಪೂರೈಸುವಂತೆ ಮಕ್ಕಳನ್ನು ಮಾನಸಿಕವಾಗಿ ಅಣಿಗೊಳಿಸದೆ. ಅವರನ್ನು ಆರೋಪಿಸುವುದು, ದೂರುವುದು ಮಾಡುತ್ತಾರೆ ಅದರಿಂದ ಅವರ ಕನಸು ಈಡೇರುವುದಿಲ್ಲ. ಮಕ್ಕಳು ನಲುಗುತ್ತಾರೆ. ದೊಡ್ಡವರು ಎಂದಾಕ್ಷಣ ಅವರ ಚಿಂತನೆ ಕೂಡ ದೊಡ್ಡದಾಗಿರಬೇಕು. ಕಿರಿಯರ ಭಾವನೆಗಳಿಗೆ ಸ್ಪಂದಿಸಬೇಕು ಆಗಷ್ಟೇ ಬದುಕು ಸೊಗಸಾಗುವುದು. ಮಕ್ಕಳ ಸಾಮರ್ಥ್ಯವನ್ನು ಅರಿಯದೇ ದೂಷಿಸುವುದು ಸರಿಯಲ್ಲ, ಅವರಿಗೆ ಸ್ಪೂರ್ತಿ ತುಂಬದೇ ಬೈಯುವುದರಿಂದ ಯಾವ ಪ್ರಯೋಜನವೂ ಇಲ್ಲ..

ವೃತ್ತಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆಯವರ ಈ ಕೃತಿಯನ್ನು ದುಡಿಮೆಯ ಹಿಂದೆ ಬಿದ್ದು ತಾನಾಗಿ ಬದುಕಲು ಸಾಧ್ಯವಾಗದ ” workoaloic” ಗಳೆಲ್ಲಾ ಕಡ್ಡಾಯವಾಗಿ ಓದಬೇಕಾಗಿದೆ. ಮನುಷ್ಯ ಸಂಬಂಧದ ಬಿರುಕುಗಳಿಗೆ ಕಾರಣವಾಗುವ ಆಡದೇ ಸ್ವಗತವಾಗಿ ಉಳಿದ ಮಾತುಗಳು, ಇಲ್ಲವೇ ಸಮಯ ಮೀರಿ ತಡವಾಗಿ ಹೇಳಿದ ಮಾತುಗಳು ಆಥವಾ ಅಸಹನೆಯ ಕ್ಷಣಗಳಲ್ಲಿ ಆಡಿದ ಮಾತುಗಳೇ ಕಾರಣವಾಗುತ್ತವೆ.

  • ಮೂವತ್ತು ಲೇಖನಗಳು ಈ ಕೃತಿಯಲ್ಲಿವೆ. ಸಮೂಹ ಜೀವಿಯಾದ ಮುನುಷ್ಯ ಹಣ – ಹೆಸರು ಗಳಿಸಲು ಮನೆಕಟ್ಟಲು ತನ್ನವರನ್ನು ಸುಖವಾಗಿಡಲು ಹೀಗೆ ಹಲವು ಹತ್ತು ಬೇರೆ ಬೇರೆಕಾರಣಗಳಿಗಾಗಿ ದುಡಿತದ ಗೀಳಿಗೆ ಸಿಲುಕಿ ತನ್ನ ಜೀವನದ ಇತರ ವಿಷಯಗಳಾದ ಕುಟುಂಬ, ಆರೋಗ್ಯ, ಸಂಬಂಧ, ಬಾಂಧವ್ಯ ಗಳನ್ನು‌ ನಿರ್ಲಕ್ಷಿಸುತ್ತಾನೆ. ಎಲ್ಲಾ ಸಂಬಂಧಗಳನ್ನು ಜೊಡಿಸುವ ಕೊಂಡಿಯಾದ ‘ ಮಾತನ್ನು’ ಕಡಿಮೆಯಾಗಿಸಿಕೊಂಡು ಸಂಬಂಧಗಳಲ್ಲಿ ಬಿರುಕು ಮೂಡಿಸಿಕೊಳ್ಳುವರು ಎಂಬುದನ್ನು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.
  • ಮುನ್ನುಡಿಯಲ್ಲಿ ಡಾ.ಪಿ.ವಿ. ಭಂಡಾರಿಯವರ ಮಾತಿನಂತೆ ” ಈ ಜಗತ್ತಿನಲ್ಲಿ ಅನಾಹುತಗಳೇನಾದರೂ ನಡೆದಿದ್ದರೆ ಅವು ಬಂದೂಕಿನಿಂದಲ್ಲ, ಅಣುಬಾಂಬಿನಿಂದಲ್ಲ, ಅವೇನಿದ್ದರೂ ಮಾತುಗಳಿಂದ” ಹೌದು ಹಿರಿಯರು ಹೇಳುತ್ತಾರೆ “ಮಾತೇ ಮುತ್ತು ಮಾತೇ ಮೃತ್ಯು” ಎಂದು ಈ ಜಗತ್ತಿನಲ್ಲಿ ಎಲ್ಲಾ ಮಾನವನ ಕ್ರಿಯೆಗಳಿಗೂ ಈ ಮಾತೇ ಮೂಲವಾಗಿದೆ. ಅಂತಹ ಶಕ್ತಿ ಇರುವ ಈ ಮಾತಿನ ಅಸ್ತ್ರ ಪ್ರತಿಯೊಬ್ಬರ ಬಳಿಯಲ್ಲಿಯೂ ಇದೆ. ಅದನ್ನು ನಾವೆಲ್ಲರೂ ಎಷ್ಟರ ಮಟ್ಟಿಗೆ ದುಡಿಸಿಕೊಳ್ಳತ್ತಿದ್ದೇವೆ ?

  • ಮಾತುಗಳು ಹೃದಯದಿಂದ ಬಂದಾಗ ಭಾವನೆಗಳೆನಿಸುತ್ತವೆ. ನೀವು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಬೆಳೆಯುತ್ತವೆ. ನಿರ್ಲಕ್ಷಿಸಿದರೆ ಸಾಯುತ್ತವೆ. ಹಾಗಉಳಿಸಿದರೆ ಸದಾ ನಮ್ಮೊಂದಿಗೆ ಇರುತ್ತವೆ. ಎನ್ನುವ ಲೇಖಕರ ಮಾತಿನಂತೆ. ಮನಸ್ಸುಗಳೊಂದಿಗೆ ಮಾತನಾಡೊಣ. ಸ್ವಲ್ಪ ಮಾಡತಾಡಿ ಪ್ಲೀಸ್

ಅಗತ್ಯವಿರುವ ಮಾತಿಗೂ ಬರ ಬಂದು ಎಷ್ಟೋ ಬಂಧಗಳ ಜೀವನದಿ ಸೊರಗುತ್ತಿವೆ. ಜೀವಕ್ಕೆ ಚೇತನ್ಯಸೆಲೆಯಾದ ಪ್ರೀತಿ ಹೊಂದಾಣಿಕೆ ಎಂಬ ಜೀವಜಲಗಳು ಬತ್ತಿದರೆ ಭರವಸೆಯೆಂಬ ಉಸಿರು ನಿಲ್ಲುತ್ತದೆ.

  • ಈ ಜಗತ್ತಿನಲ್ಲಿ ಅನ್ನಕ್ಕೆ ಹಸಿದವರಿಗಿಂತ ಮುಷ್ಠಿ ಪ್ರೀತಿಗೆ ಹಸಿದವರು ಹೆಚ್ಚು ಎಂಬುದನ್ನು ಸರ್ವೆಗಳು ತಿಳಿಸುತ್ತವೆ.

ಮಾತಿಲ್ಲದೆ ಸೊರಗಿದ ಪ್ರೀತಿಗೆ ಹಣ, ಆಸ್ತಿ, ಊಟಕ್ಕಿಲ್ಲದ ಉಪ್ಪಿನಕಾಯಿಯಾಗುತ್ತೆ. ನಮ್ಮದೇ ಬೇಜವಾಬ್ದಾರಿತನದಿಂದ ಸಂಬಂಧಗಳಯ ಕೆಡುವ ಮುನ್ನ ಸ್ವಲ್ಪ ಮಾತಾಡಿ ಪ್ಲೀಸ್ ಎನ್ನುತ್ತದೆ ಈ ಕೃತಿ.. ನಿಮಗೆ ಬಾಂಧವ್ಯ ಹಂಚುವವರೊಂದಿಗೆ, ನಿಮ್ಮ ಪ್ರೀತಿಯ ಮಾತುಗಳಿಗಾಗಿ ಹಸಿದವರೊಂದಿಗೆ ಮಾತನಾಡಿ ಪ್ಲೀಸ್.

ಒಂದಡಿ ಮೀರುವುದು ಯಾರು ?


  • ಬೇರೆ ಎಲ್ಲಾ ಕಡೆ ಹೊಂದಿಕೊಂಡು ಹೋಗುವ ಮನುಷ್ಯರು ತಮ್ಮದೇ ಬಾಳ ಸಂಗಾತಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದು ಯಾಕೆ ?ಮೊದಲು ಇಷ್ಟ ಪಟ್ಟ ಸಂಬಂಧ ಕಹಿಯಾಗುವುದು ಯಾಕೆ ? ಒಂದು ಸಂಬಂಧವನ್ನು ಹಲವು ವರ್ಷಕಾಪಾಡಿಕೊಂಡು ಬರುವುದು ಅಷ್ಟು ಕಷ್ಟದ ಕೆಲಸವಾ ?ಪರಸ್ವರ ಪ್ರೀತಿ ಹಂಚಿದವರು. ವಿಲನ್ ಗಳಾಗಿ ಬಿಡುವುದು ಹೇಗೆ ?ಬದುಕು ಕೊಳಲಿದ್ದಹಾಗೆ ಅದರಲ್ಲಿ ರಂದ್ರಗಳಿದ್ದ ಹಾಗೆ ಬದುಕಿನಲ್ಲಿ ಖಾಲಿತನಗಳಿರುತ್ತವೆ ಅದನ್ನು ನುಡಿಸುವ ಕಲೆ ಗೊತ್ತಿದ್ದರೆ ಸಂಗೀತ ಹೊರಹೊಮ್ಮುತ್ತದೆ.

ಮನಸ್ಸು ಮುನಿಸಿಕೊಂಡು ಮೌನದ‌ ಹಂತ ತಲುಪದವರೆಗೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಬ್ಬರದೂ ಆಗಿರುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಗುರುತಿಸಿ ಪರಿಹರಿಸಿಕೊಂಡರೆ ಯಾವ ಸಮಸ್ಯೆಯೂ ಹೆಮ್ಮರವಾಗುವುದಿಲ್ಲ.

  • ನಮಗೆ ಸಂತೋಷ ಕೊಡುವ ಮಕ್ಕಳೊಂದಿಗೆ, ನಾವು ಏಕೆ ನಿರೀಕ್ಷೆ ಮತ್ತು ಕೋಪವನ್ನು ತೋರುತ್ತೇವೆ. ಅವರು ಕೊಟ್ಟ ಪ್ರೀತಿ ಏಕೆ ಮರೆಯುತ್ತೇವೆ. ಗಂಡ- ಹೆಂಡತಿ, ಅತ್ತೆ- ಮಾವ, ಮಕ್ಕಳೊಂದಿಗೆ ಮನುಷ್ಯ ಸಂಬಂಧಗಳನ್ನು ಬಿರುಕು ಮೂಡದಂತೆ ನಡೆಸಿಕೊಂಡು ಹೋಗುವ ಮಾರ್ಗಸೂಚಿಇದಾಗಿದೆ.

ಹೆಚ್ಚಿನವರು ಮಾಡುವ ತಪ್ಪು ಏನೆಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ ಅರ್ಥಮಾಡಿಕೊಳ್ಳುವುದು ಕಾಲುಭಾಗ ಇನ್ನೂ ಯೋಚಿಸುವುದು ಶೂನ್ಯ… ಆದರೆ ಪ್ರತಿಕ್ರಿಯೆ ಮಾತ್ರ ಎರಡುಪಟ್ಟು. ಈ ಪುಸ್ತಕ ಓದಿದ ನಂತರ ಮನಸ್ಸಿನಿಂದಲೂ ವಿಲೇವಾರಿಯಾಗದೇ ಉಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?