Monday, May 11, 2026
Google search engine
Home Blog Page 157

ರಂಗಗೀತೆ ಹಾಡಿನೊಂದಿಗೆ ಗ್ರಾಮಸ್ಥರನ್ನು ರಂಜಿಸಿದ ಶಾಸಕ ಮಸಾಲಜಯರಾಂ

Publicstory


ತುರುವೇಕೆರೆ: ಶಾಸಕ ಮಸಾಲಜಯರಾಂ ಕುರುಕ್ಷೇತ್ರ ಪೌರಾಣಿಕ ನಾಟಕದ ರಂಗ ಗೀತೆಯೊಂದನ್ನು ಸುಶ್ರಾವ್ಯವಾಗಿ ತುಂಬಿದ ಸಭೆಯಲ್ಲಿ ಹಾಡುವ ಮೂಲಕ ಗ್ರಾಮಸ್ಥರು ಮತ್ತು ಕಾರ್ಯಕರ್ತರಿಂದ ಚಪ್ಪಾಳೆ, ಶಿಳ್ಳೆ ಹೊಡೆಸಿಕೊಂಡ ಪ್ರಸಂಗ
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದಲ್ಲಿ ನಡೆಯಿತು.

ಲೋಕೋಪಯೋಗಿ ಇಲಾಖೆಯ ಟಿಎಸ್ಪಿ, ಎಸ್.ಸಿ.ಪಿ ಯೋಜನೆಯಡಿಯ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಹಾಗು ಬಾಕ್ಸ್ ಚರಂಡಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ನಡೆಯಿತು.

ನಂತರ ಮಾತನಾಡಿದ ಶಾಸಕರು ತಾಲ್ಲೂಕು ವಿಧಾನಸಭಾ ಕ್ಷೇತ್ರದಾದ್ಯಂತ ಕೆರೆ ಕಟ್ಟೆಗಳಿಗೆ ಹೇಮಾವತಿ ನಾಲಾ ನೀರನ್ನು ಶೇ.90ರಷ್ಟು ತುಂಬಿಸಲಾಗಿದ್ದು ಆಮೂಲಕ ರೈತರಲ್ಲಿ ಸಂತಸ ಉಂಟು ಮಾಡಿದೆ.

ಹೇಮಾವತಿ ನಾಲಾ ನೀರು ಸರಾಗವಾಗಿ ಹರಿಯಲು ನಾಲೆಯ ಶಿಲ್ಟ್ ಅನ್ನು ತೆಗೆಯಲಾಗಿದ್ದು ಅದಕ್ಕಾಗಿ 2.80 ಕೋಟಿ ರೂಪಾಯಿಗಳ ಅನುದಾನದ ಹಣವನ್ನು ಬಳಸಲಾಗಿದೆ. ಇನ್ನುಳಿದ ಕಡೆ ನಾಲಾ ನೀರು ಹರಿಸುವ ಮುಂಚೆಯೇ ಕಸಕಟ್ಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿ.ಕಲ್ಕೆರೆ ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ 2 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ರಸ್ತೆಗಳನ್ನು ಮಣ್ಣುಮುಕ್ತ ಗ್ರಾಮವನ್ನಾಗಿ ಮಾಡುವ ಭರವಸೆ ವ್ಯಕ್ತಪಡಿಸಿದರು.

ಈ ಮಾರ್ಗದ ಬೋಚಿಹಳ್ಳಿಯಿಂದ ಮಾದಿಹಳ್ಳಿವರೆಗಿನ ಡಾಂಬರ್ ರಸ್ತೆ ನಿರ್ಮಾಣಕ್ಕಾಗಿ 8 ಕೋಟಿ ಅನುದಾನವನ್ನು ನೀಡಲಾಗಿದೆ. ಅದೇ ರೀತಿ ಮಾಯಸಂದ್ರ-ಟಿ.ಬಿ ಕ್ರಾಸ್ ರಸ್ತೆ ಯಿಂದ ಕಲ್ಲೂರ್ ಕ್ರಾಸ್ ವರೆಗಿನ ಡಾಂಬರ್ ರಸ್ತೆಗೆ 2 ಕೋಟಿ ಅನುದಾನ ವಿನಿಯೋಗಿಸಲಾಗಿದೆ ಎಂದರು.

ಇದೇ ವೇಳೆ ಬಾಲಗಂಗಾಧರನಾಥ ಸ್ವಾಮಿ ಹಾಗು ಶಿವಕುಮಾರ್ ಸ್ವಾಮಿಗಳ ಪುತ್ಥಳಿ ಅನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಂಗಭೂಮಿ ಗೀತೆಗಳ ಕಾರ್ಯಕ್ರಮದಲ್ಲಿ ಶಾಸಕರು ಕುರುಕ್ಷೇತ್ರ ಪೌರಾಣಿಕ ನಾಟಕದ ರಂಗಗೀತೆಯೊಂದನ್ನು ಹಾಡುವ ಮೂಲಕ ಗ್ರಾಮಸ್ಥರು ಮತ್ತು ಕಾರ್ಯಕರ್ತರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಂ, ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಂ, ವಿಎಸ್ಎಸ್ಎನ್ ಅಧ್ಯಕ್ಷ ಆಯರಹಳ್ಳಿ ಪಾಂಡು, ಮುಖಂಡರಾದ ಜಗದೀಶ್, ಪ್ರಕಾಶ್, ರಷೀದ್, ನಾಗಣ್ಣ, ದಾಸಣ್ಣ, ಶ್ರೀನಿವಾಸ್, ವಿರೂಪಾಕ್ಷ ಹಾಗು ದಿನೇಶ್, ಸುರೇಶ್ ಉಪಸ್ಥಿತರಿದ್ದರು.

ಗಾಂಧಿ ಹುತಾತ್ಮ ದಿನ ನಡೆಯಲಿದೆ ಹಿಂಸೆ-ಅಹಿಂಸೆಗಳ ಮುಖಾಮುಖಿ

ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ
ತುಮಕೂರು ಜಿಲ್ಲಾ ಘಟಕವು ಗಾಂಧೀಜಿಯವರು ಹುತಾತ್ಮರಾದ ದಿನವಾದ
ದಿನಾಂಕ: 30 ರಂದ ಸಂಜೆ 4.30ಕ್ಕೆ ಗಾಂಧಿ ಸ್ಮರಣೆ ನಡೆಯಲಿದೆ.

ಸಾಹಿತಿ ಎಚ್.ಎಲ್.ಪುಷ್ಪ‌ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ಕೆ.ಶರೀಫ ವಹಿಸುವರು.

ಮಮ್ತಾಜ್ ಬೇಗಂ, ಪಿ.ಆರ್.ವೆಂಕಟೇಶ್
ಮಮತಾ ಅರಸೀಕೆರೆ, ಬಿದಲೋಟಿ ರಂಗನಾಥ್
ಭೂಹಳ್ಳಿ ಪುಟ್ಟಸ್ವಾಮಿ, ಎಚ್.ಆರ್.ರಮೇಶ್
ಶ್ವೇತಾರಾಣಿ.ಎಚ್, ಬಿ.ಎನ್.ಮಲ್ಲೇಶ್
ಸುಜಾತ ಲಕ್ಷ್ಮೀಪುರ, ಲೋಲಾಕ್ಷಿ.ಎನ್.ಕೆ, ಕಲೀಂ ಪಾಶ, ಮಕಾನದರ, ರಂಗಮ್ಮ ಹೊದೇಕಲ್ ಹಾಗೂ
ಮಂಜು ಕೆ.ಬಿಜವರ ಭಾವವಹಿಸುವರು ಎಂದು ಜಿಲ್ಲಾ‌ ಸಂಚಾಲಕರಾದ ಡಾ.ಓ.ನಾಗರಾಜು,
ಡಾ.ನಾಗಭೂಷಣ ಬಗ್ಗನಡು

ದಯವಿಟ್ಟು ಭಾಗವಹಿಸಿ
ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು.
*ಈ ಕೆಳಗಿನ ಲಿಂಕ್ ಮೂಲಕ ವೆಬಿನಾರ್‌ಗೆ ನೊಂದಾಯಿಸಿಕೊಳ್ಳಬಹುದು.*

Meeting ID: 851 9930 6952
Passcode: Bandaya
One tap mobile
+12532158782,,85199306952#,,,,*1893169# US (Tacoma)
+13017158592,,85199306952#,,,,*1893169# US (Washington DC)

Dial by your location
+1 253 215 8782 US (Tacoma)
+1 301 715 8592 US (Washington DC)
+1 312 626 6799 US (Chicago)
+1 346 248 7799 US (Houston)
+1 669 900 6833 US (San Jose)

Meeting ID: 851 9930 6952
Passcode: 1893169

ಹುಳಿಯಾರು: 50 ವರ್ಷದ ಕನಸಿಗೆ ಸಿಗಲಿದೆ ಮಹಾ ತಿರುವು!

0

ಮಧುಗೌಡ


ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಹೋಬಳಿಯನ್ನು ತಾಲೂಕು ಕೇಂದ್ರ ಮಾಡುವಂತೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ.

#ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ ಅರ್ಹತೆಗಳೂ ಹುಳಿಯಾರಿಗಿದ್ದು, ತಾಲೂಕು ಕೇಂದ್ರವನ್ನಾಗಿ ಮಾಡಲೇಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

#ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಹುಳಿಯಾರು ಮತ್ತೆ ತಾಲೂಕು ಮಾನ್ಯತೆ ಪಡೆಯಬೇಕೆಂಬುದು ಸ್ಥಳೀಯರ ಮಹಾ ಕನಸು. ತಾಲೂಕು ಕೇಂದ್ರಕ್ಕೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇನ್ನು 15 ದಿನಗಳಲ್ಲಿ ಹೋರಾಟ ಮತ್ತಷ್ಟು ಬಿಗಿಗೊಳ್ಳಲಿದೆ.

#ಚಿಕ್ಕನಾಯಕನಹಳ್ಳಿ ತಾಲೂಕಿನ #ಹೋಬಳಿ ಕೇಂದ್ರವಾಗಿರುವ ಹುಳಿಯಾರು, ತಾಲೂಕು ಕೇಂದ್ರವಾಗಿ ಬಡ್ತಿ ಪಡೆಯುವ ಎಲ್ಲಾಅರ್ಹತೆ ಹೊಂದಿದೆ. ಆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಮೇಲ್ದರ್ಜೆಗೇರುವ ಭಾಗ್ಯ ಸಿಕ್ಕಿಲ್ಲ. ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಈ ಕನಸು ನನಸು ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಹುಳಿಯಾರಿಗರು.

ಹೋರಾಟಕ್ಕೆ ಸಿಗಲಿದೆ ತಿರುವು
ಹುಳಿಯಾರು ತಾಲೂಕಿಗಾಗಿ ಹೋರಾಟ ಹೊಸ ತಿರುವು ಪಡೆಯುವ ಸೂಚನೆ ಸಿಕ್ಕಿದೆ. ಈ ಬಗ್ಗೆ ತಾಲೂಕು ಹೋರಾಟ ಸಮಿತಿ ಸದಸ್ಯ ಹಾಗೂ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್‌, ’15-30 ದಿನಗಳಲ್ಲಿ ನಾಡಕಚೇರಿ ಎದುರು ಧರಣಿ ಆರಂಭಿಸುತ್ತಿದ್ದೇವೆ. ಹುಳಿಯಾರಿನ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ್ದೇವೆ. ಹುಳಿಯಾರು ತಾಲೂಕು ಕೇಂದ್ರ ಘೋಷಣೆಯಾಗುವ ತನಕ ಚಳುವಳಿ ಮುಂದುವರೆಸುತ್ತೇವೆ’ ಎಂದು ತಿಳಿಸಿದ್ದಾರೆ.

ಹಂದನಕೆರೆ, ಮತ್ತಿಘಟ್ಟ , ಹೊಯ್ಸಳಕಟ್ಟೆ ಮೊದಲಾದ ಕೆಲವು ಗ್ರಾಮಗಳಿಗೆ ಈಗಿನ ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ 25-30 ಕಿಮೀ ದೂರದಲ್ಲಿದೆ. ಬೊಮ್ಮನಹಳ್ಳಿ, ಎಣ್ಣೆಗೆರೆ, ಮೇಳನಹಳ್ಳಿ ಸುಮಾರು 40 ಕಿಮೀ, ಎಳನೂರು 35, ದಸೂಡಿ 50 ಕಿಮೀ ದೂರದಲ್ಲಿದೆ. ಆದರೆ ಹುಳಿಯಾರು ಈ ಎಲ್ಲಾ ಭಾಗಗಳಿಗೆ 10-20 ಕಿಮೀ ದೂರದಲ್ಲಿದ್ದು, ತಾಲೂಕು ಕೇಂದ್ರವಾದರೆ ಈ ಹತ್ತಾರು ಗ್ರಾಮಸ್ಥರಿಗೆ ವ್ಯವಹಾರ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಾರ್ಯಚಟುವಟಿಕೆಗಳಿಗೂ ಅನುಕೂಲವಾಗುತ್ತದೆ. ಅಲ್ಲದೆ ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ ಅರ್ಹತೆಗಳೂ ಹುಳಿಯಾರಿಗಿದ್ದು, ತಾಲೂಕು ಕೇಂದ್ರವನ್ನಾಗಿ ಮಾಡಲೇಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

#ಬ್ರಿಟಿಷರ_ಕಾಲದ_ತಾಲೂಕು
ಹುಳಿಯಾರು ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿತ್ತು. ಅಂದಿನ ತಾಲೂಕು ಕಚೇರಿ ಕಟ್ಟಡದಲ್ಲಿ ಇಂದು ಎಂಪಿಎಸ್‌ ಸರಕಾರಿ ಶಾಲೆಯಿದೆ.

ತಾಲೂಕು ಕೇಂದ್ರವಾಗಲು ಏನಿದೆ ಅರ್ಹತೆ?


ಹುಳಿಯಾರು ಅತೀ ದೊಡ್ಡ ಹೋಬಳಿ ಕೇಂದ್ರ
ಹೋಬಳಿ ವ್ಯಾಪ್ತಿಯಲ್ಲಿ 45,000 ಜನಸಂಖ್ಯೆಯಿದೆ
ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ 20 ಸಾವಿರ ಜನಸಂಖ್ಯೆಯಿದೆ
16 ಸಾವಿರ ಜನಸಂಖ್ಯೆಯಿದ್ದರೆ ತಾಲೂಕು ಕೇಂದ್ರ ಮಾಡಬಹುದು
ಜಿಲ್ಲೆಯ 2ನೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ
ಈಗಾಗಲೇ ಇಲ್ಲಿ 1 ಪ್ರಥಮ ದರ್ಜೆ ಕಾಲೇಜು, 3 ಪದವಿ ಪೂರ್ವ, 2 ಐಟಿಐ ಕಾಲೇಜು, 1 ಉರ್ದುಶಾಲೆ ಸೇರಿದಂತೆ 7 ಪ್ರೌಢಶಾಲೆಗಳು, 6 ಪ್ರಾಥಮಿಕ ಶಾಲೆಗಳು, ಪ್ರವಾಸಿ ಮಂದಿರ, ಕೆಇಬಿ ಕಚೇರಿ, ಪವರ್‌ ಸ್ಟೇಷನ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾದವುಗಳಿವೆ.
ಯಾವೆಲ್ಲಾ ಹೋಬಳಿಗಳು?
ಹುಳಿಯಾರು ತಾಲೂಕು ಮಾಡಿದರೆ ಈಗಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿ ಸೇರಿಸಿಕೊಳ್ಳಬಹುದು. ಮತ್ತಿಘಟ್ಟ, ಹೊಯ್ಸಳಕಟ್ಟೆ, ದಸೂಡಿಯನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡಬಹುದು.

ಸಿರಾ ತಾಲೂಕಿನ ಬುಕ್ಕಾಪಟ್ಟಣ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ಹುಳಿಯಾರು ತಾಲೂಕು ಆದರೆ 20 ಕಿಮೀ ವ್ಯಾಪ್ತಿಯ ಈ ಹೋಬಳಿಯನ್ನು ಕೂಡ ಸೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.

ಅಲ್ಲದೆ ಈ ಹಿಂದೆ ಹೋರಾಟ ನಡೆದ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮತ್ತೋಡ್‌ ಕೂಡ ಹುಳಿಯಾರಿಗೆ ಸೇರಿಸಬಹುದು ಎನ್ನಲಾಗಿತ್ತು. ಮತ್ತೋಡ್‌ ಹೊಸದುರ್ಗ ತಾಲೂಕು ಕೇಂದ್ರಕ್ಕೆ 30 ಕಿಮೀ ದೂರದಲ್ಲಿದ್ದು, ಹುಳಿಯಾರಿಗೆ 20 ಕಿಮೀ ಅಂತರದಲ್ಲಿದೆ. ಜತೆಗೆ ಹೊಸದುರ್ಗದ ಶ್ರೀರಾಂಪುರವನ್ನು ಕೂಡ ಸೇರಿಸಿಕೊಳ್ಳಬಹುದೆಂಬ ಚರ್ಚೆಯಿದೆ.

ಹುಳಿಯಾರು ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗಿಲ್ಲ. ಇನ್ನು 15 ದಿನದಿಂದ ಒಂದು ತಿಂಗಳೊಳಗೆ ಅನಿರ್ಧಿಷ್ಟಾವಧಿ ಧರಣಿ ಕೂರುತ್ತೇವೆ.

ತಾಲೂಕು ಕೇಂದ್ರ ಆಗುವವರೆಗೂ ಚಳುವಳಿ ಮುಂದುವರಿಸುತ್ತೇವೆ.ಎಂದು ತಾಲ್ಲೋಕು ಹೋರಾಟ ಸಮಿತಿ ತಿಳಿಸಿದೆ,

ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡಿ

Publicstory


Tumkuru: ಸಂವಿಧಾನಬದ್ಧವಾಗಿ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು, ಸಮಾನತೆಯ ಹಕ್ಕು ಇದ್ದಾಗಿಯೂ ಸಹ ಸಮಾಜದಲ್ಲಿ ಹೆಣ್ಣು-ಗಂಡೆಂಬ ಅಸಮಾನತೆ, ತಾರತಮ್ಯ, ಭೇದಭಾವವನ್ನು ಇಂದಿಗೂ ಕಾಣತ್ತಿದ್ದೇವೆ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡುವ ಮೂಲಕ ಗೌರವಯುತವಾಗಿ ಬದುಕಲು ಅವಕಾಶ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿಂದು ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ಮಹಿಮಾ ಮಾತನಾಡಿ ಭ್ರೂಣದಿಂದ ಗೋರಿಯವರೆಗೂ ಹೆಣ್ಣಿನ ತಾರತಮ್ಯ ನಡೆಯುತ್ತಲೇ ಇದೆ. ಹುಟ್ಟುವ ಮಗು ಹೆಣ್ಣೆಂದು ತಿಳಿದರೆ ಭ್ರೂಣ ಹತ್ಯೆ ಮಾಡಿಬಿಡುತ್ತಾರೆ. ಹೆಣ್ಣುಮಕ್ಕಳು ಜೀವನದಲ್ಲಿ ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಸಾಧನೆ ಮಾಡುವ ಮೂಲಕ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಬೇಕು. ಇದರಿಂದ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್ ನಟರಾಜ್ ಮಾತನಾಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ ಉದ್ಯೋಗಿನಿ,‌ ಸಮೃದ್ಧಿ, ಐಸಿಡಿಎಸ್, ಮತ್ತಿತರ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿದ್ದು, ಮಹಿಳೆಯರು ಇವುಗಳ ಪ್ರಯೋಜನ ಪಡೆಯಬೇಕೆಂದು ತಿಳಿಸಿದರಲ್ಲದೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಕೇಂದ್ರದ ಯೋಜನೆಯಂತೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೀಕ್ಷಕಿ ಜಾಹ್ನವಿ ಸ್ವಾಗತಿಸಿದರು. ಶಾಂತ ನಿರೂಪಿಸಿದರು. ದಿವ್ಯ ವಂದಿಸಿದರು.

ವ್ಯಾಕ್ಸಿನ್ ವೈರಲ್ ವಿಡಿಯೋವೆ ಏಕೆ? ಬೇರೆ ಏಕಿಲ್ಲ?

0

ತುಳಸಿತನಯ


ತುಮಕೂರು: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಫೋಸ್ ಕೊಟ್ಟು ವೈರಲ್ ಆಗಿರುವ ತುಮಕೂರು ಹಾಗೂ ಬೆಂಗಳೂರು ವೈದ್ಯರ ಸಿಬ್ಬಂದಿ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಜನ ಸಾಮಾನ್ಯರು, ವೈದ್ಯಕೀಯ ರಂಗದಲ್ಲಿ ಪ್ರಶ್ನೆ, ಚರ್ಚೆಗಳಿಗೆ ಕಾರಣವಾಗುತ್ತಿದೆ.

ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವುದನ್ನು ಸರ್ಕಾರ ಅವರವರ ಇಚ್ಛೆ ಗೆ ಬಿಟ್ಟಿದೆ. ಆದರೂ ಲಸಿಕೆ ಹಾಕಿಸಿಕೊಳ್ಳುವ ಪೋಸ್ ಕೊಡುತ್ತಿದ್ದೇವೆ ಎಂದು ಸ್ವತಃ   ವೈದ್ಯಾಧಿಕಾರಿಗಳು ಮತ್ತು ನರ್ಸ್ ಒಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ಕೊಟ್ಟಿರುವುದು ಹಾಸ್ಯಾಸ್ಪದ.

ವ್ಯಾಕ್ಸೀನ್ ಹಾಕಿಸಿಕೊಳ್ಳುವಂತೆ ಫೋಟೋ, ವಿಡಿಯೋ ಮಾಡಿಸಿ ಪ್ರಚಾರ ಮಾಡಲು ಸರ್ಕಾರ ತನ್ನ ಸಿಬ್ಬಂದಿಗೆ ಎಲ್ಲೂ ಹೇಳಿಲ್ಲ.ಬಹುಶಃ ತಾವು ವ್ಯಾಕ್ಸೀನ್ ಹಾಕಿಕೊಳ್ಳದೆ ತಮ್ಮ ಅಧೀನ ಸಿಬ್ಬಂದಿಗೆ vaccine ಹಾಕಿಕೊಳ್ಳಿ ಎಂದು ಹೇಳುವ ನೈತಿಕ ಧೈರ್ಯ ನೀಡಲು ಈ ರೀತಿ ಮಾಡುತ್ತಿದ್ದಾರೆ ಅನಿಸುತ್ತಿದೆ.

ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಸಿಬ್ಬಂದಿ ಲಸಿಕೆ ಪಡೆಯುವುದರಿಂದ ಅದು ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಹೀಗಾಗಿ ಅವರ ಆರೋಗ್ಯದ ಕಾರಣದಿಂದಲಾದರೂ ವೈದ್ಯರು, ನರ್ಸ್ ಗಳು ಲಸಿಕೆ ಪಡೆಯುವುದು ಒಳಿತು.

ಅದೇ ರೀತಿ ಮುಂದೆ ಸಾರ್ವಜನಿಕರಿಗೆ ಲಸಿಕೆ ಕೊಡಬೇಕಾದ ಅನಿವಾರ್ಯತೆ ಕೂ ಇವರಿಗಿದೆ. ಈ ಬಗ್ಗೆ ಸರಕಾರವು ಸರಿಯಾದ ಮಾರ್ಗಸೂಚಿಗಳನ್ನು ಹೊರಡಿಸಬೇಕು.

celebrity ಗಳನ್ನು ನೋಡಿ ಸಾರ್ವ ಜನಿಕರು ತಮ್ಮ ಮನೋಭಾವನೆ ಬದಲಾಯಿಸುತ್ತಾರೆ ಎಂಬುದು ಸತ್ಯ.ಅದೇ ಜಾಹೀರಾತುಗಳ ಮೂಲ ಮಂತ್ರ. ನಟ ಅಮಿತಾಬ್ ಅವರು ನವರತ್ನ ತೈಲ ಹಚ್ಚಿಕೊಳ್ಳುತ್ತಾರೆ,ಅಥವಾ ಲಕ್ಸ್ ಸೋಪ್ ಬಳಸುವ ಹೀರೋಯಿನ್ ಥರ. ಪೋಲಿಯೋ ವ್ಯಾಕ್ಸೀನ್ ಹಾಕುವಾಗ ಹನಿ ಮಗು ಬಾಯಿಗೆ ಬಿದ್ದಿತೆ ಎಂದು ಯಾರೂ ವಿಡಿಯೋ ತೋರಿಸುವುದಿಲ್ಲ.ಮಗೂಗೆ ಪೋಲಿಯೋ ಹನಿ ಹಾಕಿದ್ದಾರೆ ಎಂದೇ ಸಂದೇಶ ಹೋಗಬೇಕು.

ಕೋವಿ ಡ್ ಲಸಿಕೆ ಬಗ್ಗೆ ಜನರು ಗೊಂದಲದಲ್ಲಿ ಇರುವಾಗ ಡಿಜಿಟಲ್ ಮಾಧ್ಯಮ ಸೇರಿದಂತೆ ಎಲ್ಲ ರೀತಿಯ ಮಾಧ್ಯಮಗಳು ಸ್ವಲ್ಪ ಜವಾಬ್ದಾರಿ ತೋರಿಸಬೇಕಿದೆ. ಇಂತಹ ಸುದ್ದಿಗಳು ಬೀರಬಹುದಾದ ಪರಿಣಾಮಗಳನ್ನು ಅರಿಯಬೇಕಾಗಿದೆ. ಅಲ್ಲದೇ ಹೀಗೆ ಮಾಡುವಾಗ ಈ ಬಗ್ಗೆ ಇರುವ ತಪ್ಲು ಕಲ್ಪನೆಯನ್ನು ಹೋಗಲಾಡಿಸುವ ಕೆಲಸಕ್ಕೆ ಮೊದಲ ಆದ್ಯತೆ ಸಿಗಬೇಕಾಗಿದೆ. ಇಲ್ಲಿ ಡಿ ಹೆಚ್ ಓ ಅಥವ ಡಾಕ್ಟರ್ ರಜನಿ ಅಪ್ರಸ್ತುತ.

ಡಾ. ರಜನಿ ಅವರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರೆ ಧೈರ್ಯ ವಾಗಿ ಕೋವಿ ಡ್ ಲಸಿಕೆ ಹಾಕಿಸಿಕೊಳ್ಳುವ ಜನರು ಇರುತ್ತಾರೆ. ಅದನ್ನು ನಾವು ಮನಗಾಣಬೇಕು..ವಿಡಿಯೋ ಟ್ರೊಲ್ ಮಾಡಿರುವ ಮಂದಿ ಗೆ ಡಿ ಎಚ್.ಓ ಯಾರು ರಜನಿ ಯಾರು ಎಂಬುದು ಬೇಕಾಗಿಲ್ಲ. ವ್ಯಾಕ್ಸೀನ್ ಬಗ್ಗೆ ರಾಜಕೀಯ ಮಾತುಗಳನ್ನು ಬಳಸಿ ಟ್ರೊಲ್ ಮಾಡುತ್ತಾರೆ.

ತುಮಕೂರು ಆರೋಗ್ಯ ಇಲಾಖೆ ಕೋವಿಡ್ ಭಯದಲ್ಲಿ ಒಂದು ಗುರುತರ ಆರೋಪ ಹೊತ್ತುಕೊಂಡ ಸಂದಿಗ್ದ ಸಮಯದಲ್ಲಿ ಈಗಿನ ಡಿಎಚ್ ಒ ಅಧಿಕಾರ ವಹಿಸಿಕೊಂಡವರು. ಇನ್ನೂ ರಜನಿ ಅವರು ಕೋವಿಡ್ ರೋಗಿಗಳನ್ನು ಮುಟ್ಟಿ ನೋಡುವ ಮೂಲಕವೇ ಪ್ರಸಿದ್ಧಿ ಗೆ ಬಂದವರು. ತಮ್ಮ ದಿನ ನಿತ್ಯದ ಕರ್ತವ್ಯದ ಜೊತೆಗೆ ಜಿಲ್ಲಾಡಳಿತದೊಂದಿಗೆ  ಕೋವಿಡ್ ನಿಯಂತ್ರಣಕ್ಕಾಗಿ ತೊಡಗಿಸಿಕೊಂಡಿರುತ್ತಾರೆ. ಆ ದಿನವೂ ಕೂಡ ಲಸಿಕೆ ಹಾಕುವ ಮೊದಲನೆ ದಿನವಾದ್ದರಿಂದ ಸಂಪೂರ್ಣವಾಗಿ ಹಬ್ಬದ ವಾತಾವರಣ ಕಲ್ಪಿಸಿ ಇತರೆ ವೈದ್ಯರುಗಳಿಗೆ ಸ್ಪೂರ್ತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರೂ ಟ್ರಾಲ್ ಹಾಕಿದ್ದು ದುರಂತ.

ಆದರೆ ಇವೆಲ್ಲ ಇಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ಸ್ಟಿಲ್ ಫೋಟೋ ಮತ್ತು ಸುದ್ದಿ ಬೇಕಾಗಿರುವ ಕಡೆ ಡೆಮೊ ವಿಷನ್ ಎಡವಟ್ಟು ಆಯಿತು.

ಸರ್ಕಾರಿ ವ್ಯವಸ್ಥೆಯಲ್ಲಿ ಈ ಮೊಬೈಲ್ ಹಾವಳಿಯ ಕಡೆಗೂ ಗಮನ ಹರಿಸಬೇಕಾಗಿದೆ. ತಮಗಾಗದ ಅಧಿಕಾರಿಗಳು, ಸಿಬ್ಬಂದಿಯನ್ನು ಒತ್ತಡಕ್ಕೆ ತಳ್ಳುವ, ಅಪಪ್ರಚಾರಕ್ಕೆ ಈಡಾಗುವಂತ ಸನ್ನಿವೇಶಗಳಿಗಾಗಿ ಕಾದು ಪ್ರಚಾರ ಮಾಡುತ್ತಿರುವ ಮನಸ್ಥಿತಿಯವರೇ ಇಗೀಗ ಹೆಚ್ಚುತ್ತಿದ್ದಾರೆ. ಕಚೇರಿ ಸಮಯದಲ್ಲಿ ಮೊಬೈಲ್ ನಿಷೇಧಿಸುವುದು ಇನ್ನೂ ಒಳ್ಳೆಯದು.ಮಾತಾಡಿದ್ರೆ ರೆಕಾರ್ಡ್ ಮಾಡುವ ಕಾಲ ಇದಾಗುತ್ತಿದೆ.

ಇನ್ನೂ, ಖ್ಯಾತ ಪತ್ರಕರ್ತರಾದ ನಾಗೇಶ್ ಹೆಗ್ಡೆ ಅವರು ಹೇಳಿರುವಂತೆಯೇ, ಮಾಧ್ಯಮಗಳಲ್ಲಿ ಸಣ್ಣ ವಿಷಯ ದೊಡ್ಡದಾಗುತ್ತಿವೆ. ದೊಡ್ಡ ವಿಷಯಗಳು ಮೌನವಾಗುತ್ತಿವೆ. ಎಕರೆ ಗಟ್ಟಲೆ ಗಣಿ ಮಾಡಿ.. ಮೈಲು ಗಟ್ಟಲೆ ದಿನಾ ಶಬ್ದ ಬರುವ ಗಣಿಗಾರಿಕೆ ..ಅಣೆಕಟ್ಟುಗಳ ಭದ್ರತೆ ..ಜೀವಗಳ ಹಾನಿ ಗೆ ಧಕ್ಕೆ ಯಾಗುವ ಗಣಿ ಮಾಧ್ಯಮಗಳು ಇಲ್ಲಿಯವರ್ಗೆ ಮಾಧ್ಯಮಗಳು ಸರಿಯಾದ ರೀತಿಯಲ್ಕಿ ಜನರ ಮುಂದೆ ಇಟ್ಟಿಲ್ಲ..

ಜಿಲ್ಲಾ ಆಡಳಿತ ಕಣ್ಣು ಮುಚ್ಚಿದೆಯೆ.. ದ್ರೋಣ್ ಕ್ಯಾಮೆರಾ .. ಲೈಸೆನ್ಸ್.. ಜಿಯಾಲಜಿ ಇಲಾಖೆ ಮಾಲಿನ್ಯ ನಿಯಂತ್ರಣ . ಸ್ಥಳೀಯ ಗ್ರಾಮ ಪಂಚಾಯತಿ ..ಯಾರಿಗೋ ಈ ಗಣಿಗಾರಿಕೆ ಬಗ್ಗೆ ಒಂದು ಫೋಟೋ ವಿಡಿಯೋ ಕ್ಲಿಪ್ಪಿಂಗ್ ಮೊದಲೇ ಸಿಕ್ಕಿಲ್ಲವೆ.. ಅಕ್ರಮ ಸಕ್ರಮ ಇನ್ನೂ ಬೆಳಕಿಗೆ ಬರಬೇಕಿದೆ.

ಡಿ ಜಿ ಮಾಧ್ಯಮ ದೊಡ್ಡ ದೊಡ್ಡ ಹಗರಣ ಬೆಳಕಿಗೆ ತರಬೇಕಿದೆ.ಪ್ರಜ್ಞಾ ವಂತ ಓದುಗರು ಡಿ ಜಿ ಮಾಧ್ಯಮಕ್ಕೆ ಮಾಹಿತಿ ದಾರರು ಮತ್ತು ಓದುಗರೂ ಎರಡೂ ಆಗಬೇಕಾಗಿದೆ.

ಜಪಾನಿಯರಂತೆ ನಿಮ್ಮ ಮನೆಯಲ್ಲಿ ಶಾರ್ಕ್ ಮೀನಿದ್ದರೆ ಏನಾಗುತ್ತೆ ಗೊತ್ತಾ?

0

ಧನಂಜಯ ಕುಚ್ಚಂಗಿಪಾಳ್ಯ


ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಿಳಿಸಿದ ಸಂಗತಿ ಇದು. ಜಪಾನೀಯರಿಗೆ ತಾಜಾ ಮೀನೆಂದರೆ ಬಲು ಇಷ್ಟ. ಆದರೆ ಜಪಾನ್‌ ಕರಾವಳಿ ಪ್ರದೇಶದಲ್ಲಿ ಮೀನುಗಳು ಬಹಳ ಕಡಿಮೆ. ತುಂಬ ವರ್ಷಗಳಿಂದ ಅಲ್ಲಿ ಮೀನುಗಳನ್ನು ಹಿಡಿ­ಯು­­ತ್ತಿ­­ದ್ದರಿಂದ ಹೀಗಾಗಿರಬೇಕು.

ಆದ್ದರಿಂದ ಮೀನುಗಾರರು ಮೀನು ಹಿಡಿ­ಯಲು ಸಮುದ್ರದ ಆಳಕ್ಕೆ ಹೋಗಬೇಕಾಗುತ್ತದೆ. ಅಷ್ಟು ದೂರ ಹೋಗಿ ಸ್ವಲ್ಪವೇ ಮೀನು ತಂದರೆ ಅದು ಹೆಚ್ಚು ಆದಾಯವನ್ನು ತರುವುದಿಲ್ಲ. ಅದಕ್ಕೆಂದೇ ಅವರು ದೊಡ್ಡ, ಅತಿ ದೊಡ್ಡ ನಾವೆಗಳನ್ನು ಮಾಡಿಕೊಂಡಿದ್ದಾರೆ.

ಈ ನಾವೆಗ­ಳಲ್ಲಿ ಸಮುದ್ರದಲ್ಲಿ ಅತ್ಯಂತ ದೂರದವರೆಗೆ ಹೋಗಿ ರಾಶಿ ರಾಶಿ ಮೀನುಗಳನ್ನು ಹಿಡಿದು ತರುತ್ತಾರೆ. ಇವರು ದೂರ ಹೋದಷ್ಟು ಮರಳಿ ಬರುವುದರಲ್ಲಿ ತಡ­ವಾಗುತ್ತಿತ್ತು. ಗ್ರಾಹ­ಕರು ಮನೆ ಸೇರುವಷ್ಟರಲ್ಲಿ ಮೀನುಗಳು ತಾಜಾ ಆಗಿ ಉಳಿ­ಯುತ್ತಿರಲಿಲ್ಲ.

ಈ ಸಮಸ್ಯೆಯನ್ನು ಪರಿಹರಿಸಲು ಮೀನುಗಾರರು ತಮ್ಮ ನಾವೆ­ಗಳಲ್ಲಿ ದೊಡ್ಡ ದೊಡ್ಡ ಶೈತ್ಯಾಗಾರಗಳನ್ನು ನಿರ್ಮಿಸಿ ತಾವು ಹಿಡಿದ ಮೀನು­ಗಳನ್ನು ಅವುಗಳಲ್ಲಿ ಹಾಕಿಡು­ತ್ತಿದ್ದರು. ಹೀಗೆ ಮೀನುಗಳು ತಾಜಾ ಇರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಜಪಾನೀಯರಿಗೆ ತಾಜಾ ಮೀನಿನ ಹಾಗೂ ಶೈತ್ಯಾ­ಗಾರದ ಮೀನುಗಳ ವ್ಯತ್ಯಾಸ ಬೇಗನೇ ತಿಳಿಯುತ್ತಿತ್ತು. ಮರಗ­ಟ್ಟಿಸಿದ ಮೀನುಗಳ ರುಚಿ ಕಡಿಮೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆ­ಯಾಗುತ್ತಿತ್ತು.

ಇದಕ್ಕೂ ಒಂದು ಪರಿಹಾರವನ್ನು ಕಂಡುಕೊಳ್ಳಲು ಮೀನುಗಾ­ರರು ಪ್ರಯತ್ನಿಸಿ­ದರು. ಈ ಬಾರಿ ಅವರು ಶೈತ್ಯಾಗಾ­ರದ ಬದಲಾಗಿ ದೊಡ್ಡ ನೀರಿನ ಟ್ಯಾಂಕುಗ­ಳನ್ನು ಇರಿಸಿ­ಕೊಂಡು ಹಿಡಿದ ಮೀನು­ಗಳನ್ನು ಜೀವಂತವಾಗಿಯೇ ಟ್ಯಾಂಕಿನಲ್ಲಿ ಇಟ್ಟು ದಡಕ್ಕೆ ತರುತ್ತಿ­ದ್ದರು. ಆದರೆ ಈ ಮೀನುಗಳಿಗೂ ತಾಜಾ ಮೀನಿನ ದರವನ್ನು ಜನ ಕೊಡು­ತ್ತಿರ­ಲಿಲ್ಲ. ಯಾಕೆಂದರೆ ಟ್ಯಾಂಕುಗಳಲ್ಲಿದ್ದ ಸಾವಿರಾರು ಮೀನುಗಳು ವಿಶಾಲ­ವಾದ ಸಮುದ್ರದಿಂದ ಬಂದ­ವು­ಗಳು. ಈ ಇಕ್ಕಟ್ಟಿನ ಸ್ಥಾನದಲ್ಲಿ ಅವು­ಗಳಿಗೆ ಉಸಿರುಕ­ಟ್ಟಿದಂತಾಗುತ್ತಿತ್ತು. ಸ್ವಚ್ಛವಾಗಿ ಈಜಲಾರದೇ ಸ್ವಲ್ಪ ಹೊತ್ತಿಗೇ ಸುಸ್ತಾಗಿ ಬಿದ್ದು ಸತ್ತು ಹೋಗುತ್ತಿದ್ದವು. ಈ ಮೀನುಗಳ ರುಚಿಯೂ ಕಡಿಮೆಯೇ.

ಈ ಕಾರಣಗಳಿಂದಾಗಿ ತಮ್ಮ ಜನರಿಗೆ ತಾಜಾ ಮೀನುಗಳನ್ನು ನೀಡುವುದು ಹೇಗೆ ಎನ್ನುವುದೇ ಬಹುದೊಡ್ಡ ಸವಾಲಾಗಿತ್ತು. ಜಪಾನೀಯರು ಇದ­ಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಅದು ಹೇಗೆ ಗೊತ್ತೇ? ಹಡಗುಗಳಲ್ಲಿ ಈಗಲೂ ನೀರಿನ ಟ್ಯಾಂಕುಗಳಿವೆ.

ಹಿಡಿದ ಮೀನುಗಳನ್ನು ಅವುಗಳಲ್ಲಿಯೇ ಹಾಕು­ತ್ತಾರೆ. ಆದರೆ ಆ ಮೀನುಗಳ ಜೊತೆಯಲ್ಲಿ ಪ್ರತಿ ಟ್ಯಾಂಕಿನಲ್ಲೂ ಒಂದೆರಡು ಶಾರ್ಕ್‌ ಮೀನುಗಳನ್ನು ಹಾಕುತ್ತಾರೆ. ಈ ಶಾರ್ಕ್‌ಗಳು ಉಗ್ರವಾದ­ವುಗಳು, ಮೀನು­ಗಳನ್ನು ಬೆನ್ನಟ್ಟಿ ಕೊಂದು ತಿನ್ನುತ್ತವೆ. ತಮ್ಮ ಟ್ಯಾಂಕಿನಲ್ಲಿದ್ದ ಶಾರ್ಕ್‌ಗಳಿಂದ ತಪ್ಪಿಸಿಕೊಳ್ಳಲು ಉಳಿದ ಮೀನುಗಳು ಚುರುಕಾಗಿರ­ಬೇಕಾಗು­ತ್ತದೆ.

ಒಂದು ಕ್ಷಣ ಮೈಮರೆತರೂ ಪ್ರಾಣ ಹೋಗಿ ಬಿಡುತ್ತದೆ. ಸದಾ ಎಚ್ಚ­ರಿಕೆಯ ಈ ಜೀವನ ಅವು­ಗ­ಳನ್ನು ತಾಜಾ ಆಗಿಯೇ ಇಡುತ್ತದೆ, ಅಂದರೆ ಸವಾಲಿನ ಮುಖದಲ್ಲಿ ಮೀನು­ಗಳು ಸದಾ ಕಾಲ ಓಡಾಡುತ್ತ, ಚುರುಕಾಗಿದ್ದು ತಾಜಾ ಆಗಿ ಉಳಿದಿದ್ದವು. ನಾವೂ ನಮ್ಮ ನಮ್ಮ ಬದುಕಿನ ಟ್ಯಾಂಕ್‌ಗಳಲ್ಲಿ ಎಷ್ಟೋ ಬಾರಿ, ಸುಸ್ತಾಗಿ, ನಿರ್ವೀ­ರ್ಯರಾಗಿ, ಕೈ ಚೆಲ್ಲಿ ಕುಳಿತುಕೊಳ್ಳುತ್ತೇವೆ.

ಸಾಕಪ್ಪ, ಇನ್ನೇಕೆ ಒದ್ದಾಟ ಎಂದು­ಕೊಂಡು ಹಳತಾಗು­ತ್ತೇವೆ. ಹಾಗಾದರೆ ನಾವು ತಾಜಾ ಆಗಿಯೇ ಇರ­ಬೇಕಾದರೆ ಏನು ಮಾಡಬೇಕು? ಸವಾಲುಗಳನ್ನು ಎದುರಿಸಬೇಕು. ಸವಾಲು­ಗಳು ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಬೇಕು. ಅವು ಇದ್ದಾಗ ನಾವು ಚುರುಕಾ­ಗುತ್ತೇವೆ, ಹೊಸ­ತಾ­ಗು­ತ್ತೇವೆ, ಹಳಸುವುದಿಲ್ಲ, ಬದುಕು ರಸಹೀನವಾಗುವುದಿಲ್ಲ. ದಯ­ವಿಟ್ಟು ನಿಮ್ಮ ಜೀವನದ ಕೊಳದಲ್ಲಿ ಒಂದು ಶಾರ್ಕ್‌ ಬಿಟ್ಟುಕೊಳ್ಳಿ, ಸದಾ ತಾಜಾ ಆಗಿ ಇರಿ.

ನಾಗಲಮಡಿಕೆ: ರಥದ ಶೆಡ್ ಗೆ ಭಕ್ತರ ಪೂಜೆ

ಪಾವಗಡ ತಾಲ್ಲೂಕು ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಬ್ರಹ್ಮ ರಥೋತ್ಸವ ರದ್ದುಪಡಿಸಿದಾಗ್ಯೂ ಭಕ್ತಾದಿಗಳು ರಥದ ಶೆಡ್ ಗೆ ಪೂಜೆ ಸಲ್ಲಿಸಿ, ಮೂಲ ವಿಗ್ರಹದ ದರ್ಶನ ಪಡೆದರು.

ಸುಮಾತು 500 ವರ್ಷಗಳ ಇತಿಹಾಸವಿರುವ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲಕ್ಕೆ ತಮಿಳುನಾಡು, ಕೇರಳ, ರಾಜ್ಯದ ವಿವಿದೆಡೆ ಭಕ್ತಾದಿಗಳಿದ್ದಾರೆ. ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ಎಂದು ಜನಪ್ರಿಯತೆ ಪಡೆದಿರುವ ದೇಗುಲದಲ್ಲಿ ಹರಕೆ ಹೊತ್ತರೆ ಕಿವಿ, ಕಣ್ಣು ಚರ್ಮದ ಸಮಸ್ಯೆ ಬಗೆಹರಿಯುತ್ತವೆ ಎಂಬ ನಂಬಿಕೆ ಭಕ್ತ ವಲಯದಲ್ಲಿದೆ.

ವರ್ಷದ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳ ಷಷ್ಠಿಯಂದು ವಿಶೇಷ ಪೂಜೆ ನಡೆಯುತ್ತದೆ. ಜನವರಿ ಮಾಹೆಯ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.

ಷಷ್ಠಿಯಂದು ಅನ್ನದರಾಶಿಯ ಮೇಲೆ ಉತ್ಸವ ಮೂರ್ತಿಯನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ರಾಶಿ ಇಬ್ಬಾಗವಾಗುವುದು ಪವಾಡವೇ ಸರಿ. ಇದನ್ನು ಭಕ್ತಾದಿಗಳು ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳುತ್ತಾರೆ. ನಂತರ ಅನ್ನದ ರಾಶಿಯನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಈ ಬಾರಿ ಕೋವಿಡ್ ಹಿನ್ನೆಲೆ ಸರ್ಕಾರ ಸಾಕಷ್ಟು ನಿಯಮಾವಳಿ ರೂಪಿಸಿತ್ತು. ಆದರೂ ಪೂಜೆ, ನೈವೇದ್ಯ ಇತ್ಯಾದಿ ಸಾಂಪ್ರದಾಯಿಕ ವಿಧಿ ವಿಧಾನಗಳಿಗೆ ಅವಕಾಶ ನೀಡಲಾಗಿತ್ತು.  ಪ್ರಸಾದ ವಿತರಣೆ ಮಾಡದಂತೆ ಇಲಾಖೆ ಸೂಚನೆ ನೀಡಿದ ಕಾರಣ  ಪ್ರಸಾದ ವಿನಿಯೋಗ ನಡೆಯಲಿಲ್ಲ.

ಬ್ರಹ್ಮ ರಥೋತ್ಸವ ರದ್ದು ಹಿನ್ನೆಲೆ ರಥದ ಶೆಡ್ ಗೆ ಭಕ್ತರಿಂದ ಪೂಜೆ.

ರಥೋತ್ಸವ ನಡೆಯದಿದ್ದರೂ ರಥ ನಿಲ್ಲಿಸಿದ್ದ ಶೆಡ್ ನಲ್ಲಿಯೆ ಉತ್ಸವ ಮೂರ್ತಿ ಇರಿಸಿ ಅಲ್ಲಿಯೇ ಪೂಜೆ ಸಲ್ಲಿಸಲಾಯಿತು.  ತಹಶೀಲ್ದಾರ್ ಕೆ.ಆರ್. ನಾಗರಾಜು ಅವರೊಂದಿಗೆ ದೇಗುಲ ಪ್ರಾಂಗಣದಲ್ಲಿ ಪ್ರಾಕಾರೋತ್ಸವ ನಡೆಸಲಾಯಿತು.

ಪ್ರಧಾನ ಅರ್ಚಕ ಪಿ.ಬದರಿನಾಥ್ ಅವರ ಮುಂದಾಳತ್ವದಲ್ಲಿ ಬೆಳಗಿನ ಜಾವದಿಂದಲೆ ಮೂಲ ವಿಗ್ರಹಕ್ಕೆ ಕಳಶ ಪೂಜೆ, ಏಕಾದಶ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಿತು.

ಮೂಲ ಸೌಕರ್ಯಗಳ ಕೊರತೆ:  ಕೋವಿಡ್ 19 ನೆಪ ಒಡ್ಡಿ ನಾಗಲಮಡಿಕೆ ಹೋಬಳಿಯ ಪ್ರಭಾರಿ ಕಂದಾಯ ನಿರೀಕ್ಷಕ, ಪಾರುಪತ್ತೇದಾರ ಶೌಚಾಲಯಗಳಿಗೂ ಬೀಗ ಹಾಕಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದರು. ಇದರಿಂದ ಮಹಿಳೆಯರು, ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಯಿತು. ನೀರು ಸ್ಥಗಿತಗೊಳಿಸಿದ್ದಕ್ಕಾಗಿ ಮಹಿಳೆಯರು ಹಿಡಿ ಶಾಪ ಹಾಕಿದರು.

 

ಅಣ್ಣ ಅಂದ್ರೆ ನಮ್ಮಣ್ಣ…

0

ಡಿ ಎಂ ಘನಶ್ಯಾಮ.


ಪುಟ್ಟಿಗೆ ಸೈಕಲ್ ತುಳಿಸಬೇಕು, ಫ್ರೆಂಡ್ಸ್ ಟೂ ಬಿಟ್ಟಾಗ ರಾಜಿ ಮಾಡಿಸಬೇಕು, ಅವಳು ಏನು ಹೇಳ್ತಿದ್ದಾಳೆ ಅಂತ ಅಪ್ಪನಿಗೆ ಕನ್ನಡ ಟು ಕನ್ನಡ ಅನುವಾದಿಸಿ ಅರ್ಥ ಆಗೋಹಂಗೆ ಹೇಳಬೇಕು, ಮಿಸ್ ಕಳಿಸೊ ಪಾಠದ ವಿಡಿಯೊ ನೋಡಿ ಪುಟ್ಟಿ ಕೈಲಿ ಹೋಂವರ್ಕ್ ಮಾಡಿಸಬೇಕು. ಅವಳೇನಾದ್ರೂ ‘ಮಾಡಲ್ಲ ಹೋಗೋ’ ಅಂದ್ರೆ ‘ಜಾಣಿ ಬಂಗಾರಿ ಅಲ್ವಾ, ಮಾಡ್ಬೇಕು ಅಲ್ವಾ’ ಅಂತ ಮುದ್ದು ಮಾಡಿ ಬರೆಸಬೇಕು, ಆಟ ಆಡಿ ಮನೆಗೆ ಬರುವಾಗ ಅವಳೇನಾದ್ರೂ ಚಪ್ಪಲಿ ಮರೆತುಬಂದಿದ್ರೆ ಅಮ್ಮನಿಗೆ ಗೊತ್ತಾಗೋ ಮೊದಲೇ ಶ್ರೇಯಾ-ಸಾನ್ವಿ-ಅಮ್ದನ್ ಮನೆ ಬಾಗಿಲು ನೋಡಿ ಸದ್ದಿಲ್ಲದೆ ಚಪ್ಪಲಿ ತಂದಿಡಬೇಕು, ತಾತಾ ನ್ಯೂಸ್ ನೋಡ್ತಿದ್ದಾಗ ಪುಟ್ಟಿ ಕಾರ್ಟೂನ್ ಬೇಕಂತ ಗಲಾಟೆ ಮಾಡಿದ್ರೆ ಸದ್ದಿಲ್ಲದೆ ಚಾನೆಲ್ ಬದಲಿಸಿ ಯಾರಿಗೂ ಸಿಗದಂಗೆ ರಿಮೋಟ್ ಬಚ್ಚಿಡಬೇಕು, ಪುಟ್ಟಿ ಬರ್ತ್ ಡೇಗೆ ಏನು ಗಿಫ್ಟ್ ಕೊಡಬೇಕು ಅಂತ ಪ್ಲಾನ್ ಮೇಲೆ ಪ್ಲಾನ್ ಮಾಡಿ ಅಥ್ಲೆಟಿಕ್ಸ್ ಫ್ರೆಂಡ್ಸ್‌ ಜೊತೆಗೆ ಡಿಸ್ಕಸ್ ಮಾಡ್ಬೇಕು, ಹಾಲು ತಂದ ಚಿಲ್ಲರೆಯಲ್ಲಿ ಅಜ್ಜಿಗೆ ಒಂದು ರೂಪಾಯಿ ಕಡಿಮೆ ಕೊಟ್ಟು ಉಳಿದದ್ದು ಪುಟ್ಟಿ ಹುಂಡಿಗೆ ಹಾಕಬೇಕು, ಆಡೋಕೆ ಹೋಗಿದ್ದ ಪುಟ್ಟಿ ತೂಕಡಿಸಲು ಶುರು ಮಾಡಿದ್ರೆ ಎತ್ಕೊಂಡು ಬಂದು ಜೋಲಿ ತೂಗಬೇಕು…

‘ನಮ್ಮಣ್ಣನ ಹೆಸರು ಹೃಷೀಕೇಶ, ಅವನಿಗೆ ತಂಗಿ ಅಂದ್ರೆ ತುಂಬಾ ಇಷ್ಟ’ ಅಂತ ಯಾವಾಗಲಾದ್ರೂ ಮೂಡ್ ಚೆನ್ನಾಗಿದ್ದಾಗ ಪುಟ್ಟಿ ಮುದ್ದುಮುದ್ದು ಮಾಡಿದ್ರೆ ಹಿರಿಹಿರಿ ಹಿಗ್ಗಿ ಹೀರೇಕಾಯಿ ಆಗ್ಬೇಕು.

‘ಅಪ್ಪಾ ಪುಟ್ಟಿಗೆ ನಾನಂದ್ರೆ ತುಂಬಾ ಇಷ್ಟನಂತೆ’ ಅಂತ ಅಪ್ಪನಿಗೆ ವಿಡಿಯೊ ಕಾಲ್ ಮಾಡಿ ಹೇಳಬೇಕು. ( ಫೇಸ್ ಬುಕ್ ಪಿಕ್)

ಅರಿವಿನ ಪಯಣದಲ್ಲಿ ಇಂದಿರಾ ನೆನಪು…

Publicstory


Tumkuru: ವಿದ್ಯೆಗೂ ಜ್ಞಾನ ಕ್ಕೂ ಸಂಬಂಧವಿಲ್ಲ. ಸಾಹಿತಿ ಎಂ.ಕೆ.ಇಂದಿರಾ ಅವರ ತಾಯಿ ಸುಭದ್ರ ಕಲ್ಯಾಣ ಎಂಬ ಕೃತಿಯನ್ನು ರಚಿಸಿದ್ದರು ಎಂದು ಸಾಹಿತಿ ಎಂ ಸಿ ಲಲಿತಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖಾ ತುಮಕೂರು, ಕೇಂದ್ರ ಗ್ರಂಥಾಲಯ ತುಮಕೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾಸಿಕ ಕಾರ್ಯಕ್ರಮ ಅರಿವಿನ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಎಂ.ಕೆ.ಇಂದಿರಾ ಕುರಿತು ಮಾತನಾಡಿದರು.

ಎಂ ಕೆ ಇಂದಿರಾ ಅವರ ಕಾದಂಬರಿಗಳು ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಂದಿನ ಸಾಮಾಜಿಕ ಪರಿಧಿಯಲ್ಲಿ ಅವರಿಗೆ ಇದ್ದ ಸೀಮಿತ ಅವಕಾಶಗಳ ನಡುವೆ ಪ್ರತಿಭಟಿಸಿರುವುದು ನಿಜವಾದ ಪ್ರತಿಭಟನೆ ಇದೆ ಎಂದರು.

ದಾಕ್ಷಾಯಿಣಿ ಪಾತ್ರದ ಮೂಲಕ ಪ್ರತಿಭಟನೆಯನ್ನು ನೋಡಬಹುದು. ಅಂದಿಗೆ ಎಲ್ಲರ ವಿರೋಧದ ನಡುವೆ ಅನ್ಯಜಾತಿಯ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಪ್ರತಿಭಟಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ವೇಶ್ಯೆ ವೃತ್ತಿಯ ಮೇಲೆ ಇವರ ಗೆಜ್ಜೆಪೂಜೆ ಬೆಳಕು ಚೆಲ್ಲುತ್ತದೆ ಎಂದರು.

ಮಲ್ಲಿಕಾಬಸವರಾಜು ಅಧ್ಯಕ್ಷತೆಯನ್ನು ವಹಿಸಿದ್ದರು, ಸುಗುಣಾದೇವಿ, ಡಾ ಅರುಂಧತಿ, ಗ್ರಂಥಪಾಲಕಿ ಪುಷ್ಪ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಹೊಸ ತಲೆಮಾರಿಗೆ ಕುವೆಂಪು ವಿಚಾರಧಾರೆತಲುಪಿಸುವ ಹೊಣೆ ನಮ್ಮದು: ಡಾ. ಬೈರಮಂಗಲ ರಾಮೇಗೌಡ

ಕುವೆಂಪು ಅವರ ತತ್ವಾದರ್ಶ, ವಿಚಾರಧಾರೆ, ಚಿಂತನೆಗಳನ್ನು ಇಂದಿನ ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರು ಅಭಿಪ್ರಾಯಪಟ್ಟರು.

ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಆಧಾರಿತ ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ರಂಗ ಹಾಗೂ ಚಲನಚಿತ್ರ ನಿರ್ದೇಶಕ ರಂಗಸ್ವಾಮಿ ಎಸ್ ಅವರು ಈ ಕೃತಿಯನ್ನು ರಂಗ ರೂಪಕ್ಕೆ ತಂದಿದ್ದಾರೆ.

ಕನ್ನಡದ ಮೇಲಿನ ಅಭಿಮಾನ ಹಾಗೂ ಕನ್ನಡಕ್ಕೆ ಸಂಬಂಧಪಟ್ಟ ಕಳಕಳಿಯ ಬಗ್ಗೆ ಹೆಚ್ಚಿನ ಸಂಖ್ಯೆಯ ಕವಿತೆಗಳನ್ನು ಕುವೆಂಪು ಅವರು ಬರೆದಿದ್ದಾರೆ. ಸಂಗೀತದ ಆನಂದಮಯ ಅನುಭವವನ್ನು ಕುವೆಂಪು ಅವರು ಪಡೆದುಕೊಳ್ಳುತ್ತಿದ್ದರು. ಅನುಭವದಿಂದ ಅನುಭಾವಕ್ಕೆ ಜಾರಲು ಸಂಗೀತದಿಂದ ಸಾಧ್ಯ ಎನ್ನುವುದು ಅವರಿಗೆ ಗೊತ್ತಿತ್ತು. ಇದನ್ನು ರಂಗಸ್ವಾಮಿಯವರು ತಮ್ಮ ನಾಟಕ ಕೃತಿಯಲ್ಲಿ ಅಳವಡಿಸಿರುವುದು ವಿಶೇಷ ಎಂದರು.

ಅಧ್ಯಾಪಕಿ ಎಲ್ ಜಿ ಮೀರಾ ಮಾತನಾಡಿ ಒಂದು ರಂಗಕೃತಿಯ ನಿಜವಾದ ಯಶಸ್ಸು ರಂಗದ ಮೇಲೆ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಪ್ರಶಂಸೆ ಪಡೆದಾಗ ಮಾತ್ರ. ಈಗಾಗಲೇ ಈ ನಾಟಕ 12 ಬಾರಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿ ಉತ್ತಮ ವಿಮರ್ಶೆಗೆ ಒಳಪಟ್ಟು ನಾಟಕವಾಗಿ ತನ್ನ ಸಾರ್ಥಕತೆಯನ್ನು ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಂಗಕರ್ಮಿ ರಂಗಸ್ವಾಮಿ ಎಸ್ ಮಾತನಾಡಿ ಭಾಷೆಯ ಆತ್ಮಗೌರವವನ್ನು ಎತ್ತಿ ಹಿಡಿಯಬೇಕು. ಈ ಹಿನ್ನೆಲೆಯಲ್ಲಿ ಓದುಗರಿಗೆ ನೆಲದ ಭಾಷೆಯ ಸೊಗಡು ಗೊತ್ತಾಗಲೆಂದೇ ಈ ಕೃತಿಯಲ್ಲಿ ಪ್ರಜ್ಞಾಪೂರ್ವಕವಾಗಿ ಆಡುಭಾಷೆಯ ಬಳಕೆ ಮಾಡಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಹರ್ಷಿತಾ ಪಾಟೀಲ ನಿರ್ವಹಿಸಿದರು.