Monday, May 11, 2026
Google search engine
Home Blog Page 158

ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಜಾತ್ರೆ ರದ್ದು

ಕೊರಟಗೆರೆ (ತುಮಕೂರು):

ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ರದ್ದುಗೊಳಿಸಿ ಮುಜುರಾಯಿ ಇಲಾಖೆ ಶನಿವಾರ ಆದೇಶ ನೀಡಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕಮನೀಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಆಂಜನೇಯ ಬ್ರಹ್ಮ ರಥೋತ್ಸವಕ್ಕೆ ಕೊರೊನಾ ಅಡ್ಡಿಯಾಗಿದೆ.

ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸುತ್ತೋಲೆಯಂತೆ ಕ್ಯಾಮೇನಹಳ್ಳಿ ಬ್ರಹ್ಮ ರಥೋತ್ಸವ ಸ್ಥಗಿತಗೊಳಿಸಿ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಆದೇಶ ಮಾಡಿದ್ದಾರೆ.

ಪ್ರತಿ ವರ್ಷದಂತೆ ಜಾತ್ರೆಗೆ ಬಂದ ದನಗಳು

ಸಂಕ್ರಾಂತಿ ಹಬ್ಬದ ಮಾರನೇಯ ದಿನದಿಂದ ಪ್ರಾರಂಭ ಆಗುವ ಕ್ಯಾಮೇನಹಳ್ಳಿ ಧನಗಳ ಜಾತ್ರೆಗೆ ಈಗಾಗಲೇ ನೂರಾರು ಜೋಡಿ ರಾಸುಗಳ ಆಗಮನವಾಗಿ ಅರ್ಧದಷ್ಟು ಜಾತ್ರೆಯು ಕೂಡಿದೆ. ಮುಜರಾಯಿ ಇಲಾಖೆಯ ದಿಢೀರ್ ಆದೇಶದಿಂದ ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸಿರುವ ರೈತರಿಗೆ ಈಗ ಸಮಸ್ಯೆ ಎದುರಾಗಿದೆ.

ಕ್ಯಾಮೇನಹಳ್ಳಿ ಕ್ಷೇತ್ರದಲ್ಲಿ ಫೆ.17ರಿಂದ ಫೆ.28ರವರೇಗೆ ನಡೆಯಬೇಕಿದ್ದ ಶ್ರೀಆಂಜನೇಯ ದೇವರ ದನಗಳ ಜಾತ್ರೆ, ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ, ದಾಸೋಹ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.

ಕೋವಿಡ್ ನಿಯಮಾವಳಿ ಅನುಸರಿಸಿ ಪೂಜೆಯಲ್ಲಿ ಸೇವಾಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನ, ಪೂಜಾ ಕಾರ್ಯಕ್ರಮ, ಕಂದಾಯ ಇಲಾಖೆ ಸಿಬ್ಬಂದಿ ಒಳಗೊಂಡು 25ಜನ ಮೀರದಂತೆ ಉತ್ಸವ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಪ್ರಕೃತಿ, ವಿಜ್ಞಾನಕ್ಕೆ ಸವಾಲಾದ ಮೇಕೆ ಮರಿ

ಕೊರಟಗೆರೆ(ತುಮಕೂರು ಜಿಲ್ಲೆ)

ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯೊಂದು ಜನಿಸಿದ ಅಚ್ಚರಿಯ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಗಳಮ್ಮನ ಹಳ್ಳಿಯ ರೈತ ಕುಮಾರ್ ಎಂಬುವರ ಮನೆಯಲ್ಲಿ ಈ ವಿಚಿತ್ರವಾದ ಮೇಕೆ ಮರಿ ಜನಿಸಿದೆ.

ಗ್ರಾಮೀಣ ಪ್ರದೇಶವಾಗಿರುವ ಕಾರಣದಿಂದಾಗಿ ಮನೆಯವರು ಸೇರಿದಂತೆ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದ ಜನ ಆತಂಕಕ್ಕೆ ಈಡಾಗಿದ್ದಾರೆ. ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯನ್ನು ನೋಡಲು ಗ್ರಾಮದ ಜನರು ಕುಮಾರ್ ಮನೆಗೆ ಕಿಕ್ಕಿರಿದು ಬಂದು ನೋಡುತ್ತಿರುವುದು ಸಾಮಾನ್ಯವಾಗಿದೆ.

ಮರಿಯನಾಲ್ಕು ಕಾಲುಗಳು ಮತ್ತು ಎರಡು ಕಿವಿಗಳು ಮೇಕೆಯನ್ನೇ ಹೋಲುತ್ತಿದ್ದು, ಮನುಷ್ಯ ರೂಪದ ತಲೆ ಮತ್ತು ಗೂಬೆಯನ್ನು ಹೋಲುವ ಕಣ್ಣು ಮಾತ್ರ ವಿಚಿತ್ರವಾಗಿ ಕಾಣಿಸಿದೆ. ಇನ್ನುಳಿದಂತೆ ಮೇಕೆ ಮರಿಯ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ. ಗೂಬೆ ಕಣ್ಣಿನಂತೆ ಕಾಣುತ್ತಿರುವ ಮಿಂಚಿನ ನೋಟದ ಅದರ ಕಣ್ಣು ರೈತಾಪಿ ಜನಕ್ಕೆ ವಿಚಿತ್ರವಾಗಿ ಕಂಡು ಬಂದಿದ್ದು, ನೋಡುಗರ ಗಮನ ಸೆಳೆದಿದೆ.

ರೈತ ಕುಮಾರ್ ಅವರು ಕಳೆದ ಕೆಲವಾರಗಳ ಹಿಂದೆ 14ಸಾವಿರ ವೆಚ್ಚದ ಮೇಕೆಯನ್ನು ಖರೀದಿ ಮಾಡಿದ್ದರು. ಗರ್ಭಿಣಿಯಾಗಿದ್ದ ಮೇಕೆ ಶುಕ್ರವಾರ ಮಧ್ಯಾಹ್ನ ವಿಚಿತ್ರ ರೂಪದ ಮರಿಗೆ ಜನನ ನೀಡಿರೋದು ಈ ಭಾಗದ ಜನರಲ್ಲಿ ಅಚ್ಚರಿ ಮೂಡಿಸಿದೆ.

0

ಕೊರಟಗೆರೆ: 

ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯೊಂದು ಜನಿಸಿದ ಅಚ್ಚರಿಯ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಗಳಮ್ಮನ ಹಳ್ಳಿಯ ರೈತ ಕುಮಾರ್ ಎಂಬುವರ ಮನೆಯಲ್ಲಿ ಈ ವಿಚಿತ್ರವಾದ ಮೇಕೆ ಮರಿ ಜನಿಸಿದ್ದು, ಹಳ್ಳಿ ಪ್ರದೇಶ ಆಗಿರೋದ್ರಿಂದ ಮನೆಯವರು ಆತಂಕಕ್ಕೆ ಈಡಾಗಿದ್ದಾರೆ. ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯನ್ನು ನೋಡಲು ಊರವರು ಕುಮಾರ್ ಮನೆಗೆ ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಮೇಕೆ ಮರಿಯ ನಾಲ್ಕು ಕಾಲುಗಳು ಮತ್ತು ಎರಡು ಕಿವಿಗಳು ಮೇಕೆಯನ್ನೇ ಹೋಲುತ್ತಿದ್ದು, ಮನುಷ್ಯ ರೂಪದ ತಲೆ ಮತ್ತು ಗೂಬೆಯನ್ನು ಹೋಲುವ ಕಣ್ಣು ಮಾತ್ರ ವಿಚಿತ್ರವಾಗಿ ಕಾಣಿಸಿದೆ. ಇನ್ನುಳಿದಂತೆ ಮೇಕೆ ಮರಿಯ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ. ಗೂಬೆ ಕಣ್ಣಿನಂತೆ ಕಾಣುತ್ತಿರುವ ಮಿಂಚಿನ ನೋಟದ ಮೇಕೆಯ ಕಣ್ಣು ರೈತಾಪಿವರ್ಗಕ್ಕೆ ಮತ್ತು ಪ್ರಕೃತಿಗೆ ಸವಲಾಗಿರುವ ಪರಿಣಾಮ ನೋಡುಗರ ಗಮನ ಸೆಳೆದಿದೆ.

ಮಗ್ಗದಲ್ಲಿ ಖೋಟಾ ನೋಟು ಪ್ರಿಂಟ್

ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಮನೆಯೊಂದರಲ್ಲಿ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗ್ಗದ ಕೆಲಸ ಮಾಡುತ್ತಿದ್ದ ಇದೇ ಗ್ರಾಮದ ಶಿವಕುಮಾರ್(32) ಎಂಬುವರ ಮನೆಯ ಮೊದಲನೆ ಮಹಡಿಯಲ್ಲಿ ಪ್ರಿಂಟರ್ ಇತ್ಯಾದಿ ಪರಿಕರಗಳನ್ನು ಉಪಯೋಗಿಸಿಕೊಂಡು ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

100, 200, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ತಾಲ್ಲೂಕು ಆಂಧ್ರದ ವಿವಿದ ಪ್ರದೇಶಗಳಲ್ಲಿ ಚಲಾವಣೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ‘ಪಬ್ಲಿಕ್ ಸ್ಟೋರಿ’ ಗೆ ಲಭಿಸಿದೆ.

ಶಿವಕೂಮಾರ್  ಜೊತೆ ಬಟ್ಟೆ ಹೂವು ತಯಾರಿ ಕೆಲಸದಲ್ಲಿ ನಿರತನಾಗಿದ್ದ  ಶ್ರೀನಿವಾಸ್(50) ಕೃತ್ಯದಲ್ಲಿ ತೊಡಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಧಾಳಿ ನಡೆಸಿದ ಪೊಲೀಸರಿಗೆ ಸುಮಾರು 1.20 ಲಕ್ಷ ರೂ ಖೋಟಾ ನೋಟುಗಳು ಸಿಕ್ಕಿವೆ. ವೈ.ಎನ್.ಹೊಸಕೋಟೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಖೋಟಾ ನೋಟು ಚಲಾವಣೆ ಹೆಚ್ಚಿದೆ ಎಂಬ ಆರೋಪಗಳು ಕಳೆದ ಸಾಕಷ್ಟು ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಈ ಪ್ರಕಣದಿಂದ ತಾಲ್ಲೂಕಿನ ಜನತೆ ತಲ್ಲಣಗೊಂಡಿದ್ದಾರೆ.

 

 

ಮೀಸಲಾತಿ ನಿಗದಿ; ಪ್ರವಾಸಕ್ಕೆ ತಯಾರಿ

ಪಾವಗಡ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಮೀಸಲಾತಿ ನಿಗದಿಪಡಿಸಲಾಯಿತು.

ಸದಸ್ಯರು ಕುತೂಹಲದಿಂದ ಮೀಸಲಾತಿ ನಿಗದಿ ಸಭೆಯಲ್ಲಿ ಭಾಗವಹಿಸಿದ್ದರು.

ಮೀಸಲಾತಿ ನಿಗದಿಯಾದ ನಂತರ ಆಕಾಂಕ್ಷಿಗಳು ಅಧಿಕಾರ ಪಡೆಯಲು ನಿಗದಿತ ಸಂಖ್ಯೆಯ ಸದಸ್ಯರಿಗೆ ಗಾಳ ಹಾಕುತ್ತಿದ್ದಾರೆ.

ಚುನಾವಣೆವರೆಗೆ ತಮ್ಮ ಪಕ್ಷಗಳ ಬೆಂಬಲಿಗರನ್ನು ಬೇರೆ ಪಕ್ಷಗಳ ಬೆಂಬಲಿಗರ ಜೊತೆ ಹೋಗದಂತೆ ತಡೆಯಲು ವಿವಿಧ ರಾಜ್ಯಗಳಿಗೆ ಪ್ರವಾಸ ಕೊಂಡೊಯ್ಯಲಾಗುತ್ತಿದೆ.

ಜಮೀನು, ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದವರಿಗೆ ಇದೀಗ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಂತರರಾಜ್ಯ ಪ್ರೇಕ್ಷಣೀಯ ಸ್ಥಳಗಳು, ಗುಡಿ, ಗೋಪುರಗಳನ್ನು ನೋಡುವ ಅವಕಾಶ ಸಿಕ್ಕಿದೆ ಎಂದು ಹಳ್ಳಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

500 ರಿಂದ 1000 ರೂ ಗೆ ಮತ ಕೊಂಡು ಗೆಲುವು ಸಾಧಿಸಿದವರು,  ಇಂದು ಲಕ್ಷಾಂತರ ರೂಪಾಯಿ ವೆಚ್ಚದ ಪ್ರವಾಸ ಮಸ್ತಿ, ಮೋಜು ಮಾಡುತ್ತಿರುವುದು ಸಾಮಾನ್ಯ ಜನರ ಕೆಂಗಣ್ಣಿಗೆ  ಗುರಿಯಾಗಿದ್ದಾರೆ.

ಬೆಂಗಳೂರಿನ ಯೋಧರ ಸಭೆಯಲ್ಲಿ ಭಾಗವಹಿಸಿದ ರಾಜನಾಥಸಿಂಗ್

Publicstory


Bengaluru: ಭಾರತೀಯ ಸಶಸ್ತ್ರ ಪಡೆಗಳು ಇಂದು ಹಿರಿಯ ಯೋಧರ ದಿನ ಆಚರಿಸಿದವು . 1953 ರ ಈ ದಿನದಂದು ನಿವೃತ್ತರಾದ ಭಾರತೀಯ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಸೇವೆಗಳನ್ನು ಗುರುತಿಸಿ ಈ ದಿನವನ್ನು ಹಿರಿಯ ಯೋಧರ ದಿನವಾಗಿ ಆಚರಿಸಲಾಗುತ್ತಿದೆ.

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಇಂದು ಬೆಂಗಳೂರಿನ ವಾಯುಪಡೆಯ ಕೇಂದ್ರದಲ್ಲಿ ನಡೆದ ಹಿರಿಯ ಯೋಧರ ಸಭೆಯಲ್ಲಿ ಭಾಗವಹಿಸಿದರು.
ದಿಟ್ಟ ಸೈನಿಕರ ಕುಟುಂಬಗಳಿಗೆ ನಮ್ಮ ಬೆಂಬಲವನ್ನು ತೋರಿಸಲು ‘ಪುಷ್ಪಮಾಲೆ ಇರಿಸುವ ಸಮಾರಂಭ ಮತ್ತು ಹಿರಿಯ ಸೈನಿಕರ ಸಭೆ ನಡೆಯಿತು .

ಯೋಧರ ಕುಟುಂಬಗಳು, ಹಿರಿಯ ಯೋಧರು ಮತ್ತು ವಿವಿಧ ಮಾಜಿ ಸೈನಿಕರ ಪ್ರತಿನಿಧಿಗಳು ಈ ಸಭೆಯಲ್ಲಿ ಹಾಜರಿದ್ದರು.

ಕಬ್ಬಳ್ಳಿ ಬಸವೇಶ್ವರ ಸ್ವಾಮಿಗೆ ಮಾಲಾಧಾರಿಗಳಿಂದ ಪಾದಯಾತ್ರೆ

Publicstory


ತುರುವೇಕೆರೆ: ಕಬ್ಬಳ್ಳಿ ಬಸವೇಶ್ವರ ಸ್ವಾಮಿಯ ಮಾಲಾಧಾರಿಗಳ ಸಮಿತಿಯ ವತಿಯಿಂದ ಕಬ್ಬಳ್ಳಿ ಬಸವೇಶ್ವರ ಸ್ವಾಮಿ ಸನ್ನಿಧಿಗೆ ತಾಲ್ಲೂಕಿನ ಸಂಗ್ಲಾಪುರ ಗೇಟ್ ನಿಂದ ನೂರಾರು ಭಕ್ತರು ಪಾದಯಾತ್ರೆಯನ್ನು ಕೈಗೊಂಡರು.

ತಾಲ್ಲೂಕಿನ ಆಸುಪಾಸಿನ ಭಕ್ತರು ಕಳೆದ 25 ವರ್ಷಗಳಿಂದ ಕಬ್ಬಳ್ಳಿ ಬಸವೇಶ್ವರನಿಗೆ ಚಿಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಾಲೆ ಧರಿಸುತ್ತಾ ಬಂದಿದ್ದಾರೆ.

ಬುಧವಾರ ಬೆಳಗ್ಗೆ ಮಾಲೆಧಾರಿಗಳಿಂದ ಹುಣ್ಣೆಬಸವೇಶ್ವರ ಸ್ವಾಮಿಗೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ತದನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೀರಗಾಸೆ ಕುಣಿತ ಮತ್ತು ಡೋಲು ಬಡಿತದೊಂದಿಗೆ ಮೆರವಣಿಗೆ ಮಾಡಲಾಯಿತು.

ಇದೇ ವೇಳೆ ಹುಲಿಕೆರೆ ಪ್ರಕಾಶ್ ಅವರಿಂದ ಆಕರ್ಷಕವಾದ ಎತ್ತುಗಳ ಮೆರವಣಿಗೆಯನ್ನು ಮಾಡಲಾಯಿತು. ನಂತರ ಮಧ್ಯಾಹ್ನ ಪೂಜೆಗೆ ಬಂದಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀಸಾಯಿ ಎಲೆಕ್ಟ್ರಿಕಲ್ ಮಾಲೀಕ ತೇಜು, ತುಮಕೂರಿನ ಬಿಜೆಪಿ ಮುಖಂಡ ರವಿ ಗೌಡ, ಮಾಲಾಧಾರಿ ಸಮಿತಿಯ ಪದಾಧಿಕಾರಿಗಳಾದ ಸಂಗಲಾಪುರ ಶಂಕರಯ್ಯ, ಶಿವಣ್ಣ, ಬಸವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೀಸಲಾತಿ ಹೋರಾಟಕ್ಕೆ ಶಿರಾ ಕುರುಬರ‌ ಸಾಥ್…

Publicstory


ಸಿರಾ: ಕುರುಬ ಸಮುದಾಯಕ್ಕೆ ಎಸ್‌ ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ಜನವರಿ15ರಿಂದ ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲ್ಲೂಕಿನ ಕುರುಬರು ಒಗ್ಗಟ್ಟು ಪ್ರದರ್ಶಿಸಿ, ಸಂವಿಧಾನಾತ್ಮಕ ಹಕ್ಕು ಮತ್ತು ಸಮಾನತೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಕರೆನೀಡಿದರು.

ಸಿರಾ ನಗರದ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ʼಕುರುಬ ಸಮುದಾಯಕ್ಕೆ ಎಸ್‌ ಟಿ ಮೀಸಲಾತಿ ಹೋರಾಟದ ಪಾದಯಾತ್ರೆʼ ಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಗದ್ಗುರುಗಳ ನೇತೃತ್ವದಲ್ಲಿ 4 ವಿಭಾಗಗಳ ಶ್ರೀಗಳೊಂದಿಗೆ ಜನವರಿ 15ರಂದು ಕಾಗಿನೆಲೆಯಿಂದ ಹೊರಡುವ ಪಾದಯಾತ್ರೆಯು ಜನವರಿ 28ರಂದು ತಾಲ್ಲೂಕಿಗೆ ಆಗಮಿಸಲಿದ್ದು, ಅಂದು ಕುರುಬ ಸಮುದಾಯದ ಎಲ್ಲಾ ಜನರು ಬೆಳಿಗ್ಗೆ 6 ಗಂಟೆಗೆ ಸೇರಿ, ಇಡೀ ದಿನ ಪಾದಯಾತ್ರೆಯ ಜತೆಗಿದ್ದು, ರಾತ್ರಿ ಸಿರಾ ನಗರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾಸ್ತವ್ಯಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸಮಾಜದ ಮುಖಂಡ ಎಸ್‌ ಎಲ್‌ ರಂಗನಾಥ್‌ ಮಾತನಾಡಿ, ರಾಜ್ಯದ ಕುರುಬ ಸಮುದಾಯದ ನಾಯಕರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಎಸ್‌ ಟಿ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಿದ್ದಾರೆ. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ ಆದ್ದರಿಂದ ಸಮುದಾಯದ ಜನ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡದೆ, ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಹಿರಿಯ ಮುಖಂಡ ಬಿ.ಜಿ.ಕರಿಯಪ್ಪ ಮಾತನಾಡಿ, ಈ ಹಿಂದೆ ಕುರುಬ ಸಮುದಾಯವನ್ನು‌ ಎಸ್‌ ಟಿ ಸಮುದಾಯಕ್ಕೆ ಸೇರಿಸಲಾಗಿತ್ತು. ಆದರೆ ಅಂದಿನ ರಾಜಕೀಯ ಇಚ್ಚಾಶಕ್ತಿ ಇಲ್ಲದೇ ಮತ್ತು ರಾಜಕೀಯ ನಾಯಕರ ಕೈವಾಡದಿಂದ ಎಸ್‌ ಟಿ ಹೋರಾಟದಿಂದ ಕೈಬಿಡಲಾಗಿದೆ.

ಆದರೆ ಈಗ ನಮ್ಮ ಹಕ್ಕು ಪಡೆಯಲು ಹೋರಾಡಲೇ ಬೇಕಾದ ಅನಿವಾರ್ಯತೆ ಇದೆ ಎಂದರು.
ರೇವಣಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್‌ ಮಾತನಾಡಿ, ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಯಾರನ್ನೂ ಕರೆಯಬೇಕಾದ ಅವಶ್ಯಕತೆ ಇಲ್ಲ. ಎಲ್ಲರೂ ಸಹ ನಮ್ಮ ಮನೆ ಕೆಲಸ ಎಂದು ಭಾವಿಸಿ, ಐತಿಹಾಸಿಕ ಈ ಹೋರಾಟಕ್ಕೆ ಧುಮುಕಿ, ನಮಗೆ ಸಿಗಬೇಕಾದ ಸಂವಿಧಾನಾತ್ಮಕ ಹಕ್ಕು ಪಡೆಯಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಮಂಜುನಾಥ್‌, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಮಂಜುನಾಥ್‌, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಮಂಜುನಾಥ್‌, ಮುಖಂಡ ಬರಗೂರು ನಟರಾಜು, ಬರಗೂರು ಶ್ರೀನಿವಾಸ್‌, ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಬಸ್‌ ಶಿವಶಂಕರ್‌, ಎಲ್.ಭಾನುಪ್ರಕಾಶ್‌, ಪುರುಷೋತ್ತಮ್‌, ಸಿದ್ಧರಾಜು, ಕೆಂಚಧ್ಯಾಮಣ್ಣ, ಪಾಂಡುರಂಗಯ್ಯ, ಕನಕ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ ಸಾವಂತಿಗೆ, ವಿ.ಜಿ.ಧೃವಕುಮಾರ್‌, ಶಿವಕುಮಾರ್‌ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಕುರುಬ ಸಮಾಜದ ಮುಖಂಡರು ಹಾಜರಿದ್ದರು.

ಕಲಾವಿದರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ: ಉಪಾಸನಾ ಮೋಹನ್‌

ಕಲಾವಿದನಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯ. ಸಮಾಜದ ಮೇಲೆ ದುಷ್ಪರಿಣಾಮವಾಗಬಾರದು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡೇ ನಾನು ಸಂಗೀತ ಸಂಯೋಜನೆ ಮಾಡಿದ್ದೇನೆ ಎಂದು ಗಾಯಕ ಹಾಗೂ ಸಂಗೀತ ನಿರ್ದೇಶಕ ಉಪಾಸನಾ ಮೋಹನ್‌ ತಿಳಿಸಿದರು.’ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ವಿಶೇಷ ಸಂಗೀತ ಆಧಾರಿತ ‘ಗಾನ ವಿಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಸಂಗೀತ ಸಂಯೋಜಿಸಿದ 500ಕ್ಕೂ ಹೆಚ್ಚು ಭಾವಗೀತೆಗಳು ಇಂತಹ ಜವಾಬ್ದಾರಿಯನ್ನು ಹೊಂದಿವೆ ಎಂದರು.ಕೊರೊನಾ ಸಂದರ್ಭದಲ್ಲಿ ಕಲಾವಿದರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು ಎಂದು ನೊಂದು ನುಡಿದ ಅವರು ಕಲೆಯನ್ನೇ ಆಧರಿಸಿ ಬದುಕುತ್ತಿದ್ದ ಕಲಾವಿದ ಕುಟುಂಬಗಳು ತೊಂದರೆಯನ್ನು ಅನುಭವಿಸುವಂತಾಯಿತು. ಇಂತಹ ಪರಿಸ್ಥಿಯನ್ನು ಯಾರೂ ಊಹಿಸಿರಲಿಲ್ಲ ಎಂದರು.ತಮ್ಮ ‘ಮನೆಯಂಗಳದಲ್ಲಿ ಕವಿತಾ ಗಾಯನ’ದ ವಿಶಿಷ್ಟತೆಯ ಬಗ್ಗೆ ಮಾತನಾಡಿದ ಅವರು ಮನೆಯಂಗಳದಲ್ಲಿ ಕಲಾವಿದ ಕಾಣಿಸಿಕೊಂಡಾಗ ಇನ್ನಷ್ಟು ಆಪ್ತನಾಗಲು ಸಾಧ್ಯ. ಶಿವಮೊಗ್ಗ ಸುಬ್ಬಣ್ಣ ಅವರ ಮನೆಯಿಂದ ಆರಂಭವಾದ ಈ ಕಾರ್ಯಕ್ರಮ 150 ಮನೆಗಳನ್ನು ತುಂಬಿತು ಎಂದು ಸಂತಸ ವ್ಯಕ್ತಪಡಿಸಿದರು.ಹಾಡುಗಾರರ ರೇಂಜ್ ಏನು ಎನ್ನುವುದು ಸಂಯೋಜಕನಿಗೆ ಗೊತ್ತಿದ್ದರೆ ಮಾತ್ರ ಒಂದು ಅದ್ಭುತ ಹಾಡು ಸೃಷ್ಟಿಯಾಗುವುದು. ಸಂಗೀತ ಸಂಯೋಜಕನಿಗೆ ಅನುಭವದಿಂದ ಇದು ಗೊತ್ತಾಗುತ್ತದೆ. ಪ್ರತಿ ಗಾಯಕರಿಗೂ ಅವರದ್ದೇ ಆದ ಮಿತಿಗಳಿರುತ್ತವೆ. ಅದನ್ನು ಸಂಯೋಜಕ ತಿಳಿದುಕೊಂಡಾಗಲೇ ಹಾಡು ಅದ್ಭುತವಾಗಿ ಮೂಡಿ ಬರುತ್ತದೆ ಎಂದರು.ಗಾಯಕಿ ಚಿನ್ಮಯಿ ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

ಪತ್ರಿಕಾ ವಿತರಕರ ಶಿಕ್ಷಣಕ್ಕೆ ಸಹಾಯ

ಪಾವಗಡ: ಆರ್ಥಿಕವಾಗಿ ಹಿಂದುಳಿದಿರುವ ಪತ್ರಿಕಾ ವಿತರಕರ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.

ಪಟ್ಟಣದ ರಾಮಕೃಷ್ಣಾ ಸೇವಾಶ್ರಮದಲ್ಲಿ ಭಾನುವಾರ ನಡೆದ ಹೊದಿಕೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಧುಗಿರಿ ತಾಲ್ಲೂಕಿನ ವಿತರಕರಿಗೂ ಹೊದಿಕೆ ವಿತರಿಸುವ ಯೋಜನೆ ಇದೆ. ಸೋಮವಾರ ರಾತ್ರಿ ವಿತರಕರಿಗೆ ಹೊದಿಕೆ ವಿತರಿಸಲಾಗುವುದು ಎಂದರು.

ಆಶ್ರಮದ ಕಾರ್ಯಗಳನ್ನು ಅವಲೋಕಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರವನ್ನು ಬರೆದಿರುವುದು ಸಂತಸ ತಂದಿದೆ. ಶ್ರೀರಕ್ಷಾ ಯೋಜನೆಯಡಿ ಸುಮಾರು 5ಸಾವಿರಕ್ಕೂ ಹೆಚ್ಚಿನ ನಿರ್ಗತಿಕರಿಗೆ ಹೊದಿಕೆ ವಿತರಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಹೊದಿಕೆ ವಿತರಿಸುವ ಯೋಜನೆ ಇದೆ ಎಂದರು.