Monday, May 11, 2026
Google search engine
Home Blog Page 161

ಇಂದು ಶಶಿಕುಮಾರ್ ಗೆ ಕುಂಚ ಬ್ರಹ್ಮ ಪ್ರಶಸ್ತಿ ಪ್ರಧಾನ

ತುಮಕೂರು: ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್ ಶಶಿಕುಮಾರ್ ರವರಿಗೆ ಕುಂಚಬ್ರಹ್ಮ ಪಿ.ಆರ್ ತಿಪ್ಪೇಸ್ವಾಮಿ ರವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಶಿಕ್ಷಕ ರತ್ನ 2021 ರ ಪ್ರಶಸ್ತಿಗೆ ಭಾಜನರಾಗಿದ್ದಾರೆ .ಪ್ರೊ.ಶಶಿಕುಮಾರ್ ರವರು ಜನಪದ ಗಾಯಕರಾಗಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ 30 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಜನಪ್ರಿಯತೆಯನ್ನು ಪಡೆದಿದ್ದಾರೆ .ಇವರಿಗೆ ಜೆ.ಡಿ.ಸ್ಕೂಲ್ ಆಪ್ ಆರ್ಟ್‌ ತುಮಕೂರಿನ ಸಭಾಂಗಣದಲ್ಲಿ 31.12.2020 ರಂದು ಸಂಜೆ 5 ಗಂಟೆಗೆ ಕುಂಚಬ್ರಹ್ಮ ಪಿ.ಆರ್ ತಿಪ್ಪೇಸ್ವಾಮಿ ಕಲಾ ಸಂಘ .ಜೆ.ಡಿ.ಸ್ಕೂಲ್ ಆಪ್ ಆರ್ಟ್‌ .ಕರ್ನಾಟಕ ಜನಪದ ಯಕ್ಷಗಾನ ಮತ್ತು ಬಯಲಾಟ ಸಂಘದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕೊರಟಗೆರೆಯ ಈ ಅಭ್ಯರ್ಥಿಗೆ ಒಂದೂ ಮತವೂ ಬರಲಿಲ್ಲ!

Publicstory. in


ಕೊರಟಗೆರೆ: ತಾಲ್ಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿಯಲ್ಲಿ ಸ್ಪರ್ಧಿಸಿದ್ದ ಅಲ್ತಾಪ್ ಪಾಷಗೆ ಒಂದೂ ಮತವೂ ಬರಲಿಲ್ಲ. ಅವರ ಮತವನ್ನು ಅವರು ಹಾಕಿಕೊಂಡಿಲ್ಲ.

ಇವರ ಎದುರು ಸ್ಪರ್ಧಿಸಿದ್ದ ಇವರ ಸಹೋದರ ಅಂಜತ್ ಪಾಷ 114 ಮತ ಗಳಿಸಿ ಜಯಗಳಿಸಿದರು.

ಸಮ ಮತ ಪಡೆದ ಇಬ್ಬರು!

ಶಿರಾ ತಾಲ್ಲೂಕಿನ ಹೆಂದೊರೆ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿಯ ಗಿರಿಜಮ್ಮ ಅವರಿಗೆ ಲಾಟರಿಯಲ್ಲಿ ಗೆಲುವು ಸಾಧಿಸಿದರು. ಬಂತು.

ಗಿರಿಜಮ್ಮ ಮತ್ತು ಸುಧಾ ಇಬ್ಬರು ತಲಾ 283 ಮತ ಪಡೆದ ಕಾರಣ ಲಾಟರಿ ಎತ್ತಲಾಯಿತು.

ತುರುವೇಕೆರೆ ತಾಲ್ಲೂಕಿನ ಕಣತೂರು ಗ್ರಾಮ ಪಂಚಾಯಿತಿಯಲ್ಲಿ ಎ.ಬಿ.ತ್ಯಾಗರಾಜು ಹಾಗೂ ಮೋಹನ್ ಇಬ್ಬರೂ ತಲಾ 133 ಮತ ಪಡೆದಿದ್ದರು. ಲಾಟರಿಯಲ್ಲಿ ತ್ಯಾಗರಾಜು ಅರಿಗೆ ಗೆಲುವು ಒಲಿದು ಬಂತು.

ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿ‌ ಸಾವು

Publicstory. in


ಮೈಸೂರು: ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿ‌ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣದ ಪುಷ್ಪಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ನಡೆದಿದೆ.

ಬೋರೇ ಗೌಡ (52)ಮೃತ ಅಧಿಕಾರಿ. ಇವರು ಎನ್ ಶೆಟ್ಟಿ ಹಳ್ಳಿಯ ಗ್ರಾಪಂ ಅಧಿಕಾರಿಯಾಗಿ ನೇಮಕಗೊಂಡಿದ್ದರು.

ತುಮಕೂರು: 1, 2 ಮತಗಳ ಅಂತರದಿಂದ ಗೆದ್ದು ಬೀಗಿದರು…

ತುಮಕೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಧುಗಿರಿ ತಾಲ್ಲೂಕಿನ ಬಿದರಕೆರೆ ಕಾವಲ್ ಕ್ಷೇತ್ರದಿಂದ ಗೌರಮ್ಮ ಅವರು ಒಂದು ಮತದಿಂದ ಗೆಲುವು ಸಾಧಿಸಿದರು.

ಕುತೂಹಲಕ್ಕೆ ಎಡೆಮಾಡಿಕೊಟ್ಟ ಎಣಿಕೆಯು ಕೊನೆಯಲ್ಲಿ ಇಬ್ಬರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಆದರೆ ಗೌರಮ್ಮ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟರು.

ಇವರ ಪ್ರತಿಸ್ಪರ್ಧಿ ಮಂಜುಳ 114 ಮತ ಪಡೆದಿದರೆ, ಗೌರಮ್ಮ 115 ಮತ ಪಡೆದಿದ್ದಾರೆ

ಇನ್ನೂ ತುಮಕೂರು ತಾಲ್ಲೂಕಿನ ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಗಂಗಾ ಮತಗಟ್ಟೆಯಲ್ಲಿ ಕೃಷ್ಣಪ್ಪ ಅವರು ಕೇವಲ ಎರಡು ಮತಗಳಿಂದ ಗೆಲುವು ಸಾಧಿಸಿದ್ದಾರೆ.

ತಿಪಟೂರು ವಿಳಂಬ: ಇನ್ನೂ ತಿಪಟೂರಿನಲ್ಲಿ ಎಣಿಕೆ ಕೆಲಸ ವಿಳಂಬವಾಗಿದ್ದು, ಪೊಲೀಸರು ಮತ್ತು ಜನರ ನಡುವೆ ಮಾತಿನ ಜಕಮಕಿಯೂ ನಡೆದಿದೆ.

105 ಮತಗಳ ಅಂತರದಿಂದ ಗೆಲುವು ಸಾಧಿಸಿದ ಛಾಯಾ

ತುರುವೇಕೆರೆ; ತಾಲ್ಲೂಕಿನ ಕಸಬಾ ಹೋಬಳಿ ಲೋಕಮ್ಮನಹಳ್ಳಿ ಪಂಚಾಯತಿಯ ನೀರಗುಂದ ಗ್ರಾಮದ ಛಾಯ ಎನ್ನುವರು 258 ಮತ ಪಡೆದು ಆಯ್ಕೆಯಾಗಿದ್ದಾರೆ.

ಎದುರಾಳಿ ಅಭ್ಯರ್ಥಿ ಸುಧಾ 153 ಮತ ಪಡೆದರು. 105 ಮತಗಳ ಅಂತರದಿಂದ ಛಾಯಾ ಗೆಲುವು ಸಾಧಿಸಿ ಬೀಗಿದರು. ಎಲ್ಲಡೆ ಫಲಿತಾಂಶ ಬರುತ್ತಿದ್ದು, ಗೆದ್ದವರ ಸಂಭ್ರಮ ಮೇರೆ ಮೀರಿದೆ.

ಜಿಲ್ಲಾಧಿಕಾರಿ ಭೇಟಿ


ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಅವರು ತುಮಕೂರು ತಾಲ್ಲೂಕಿನ ಮತ ಎಣಿಕೆ ಕೇಂದ್ರ ವಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ತುಮಕೂರು ಉಪವಿಭಾಗಾಧಿಕಾರಿ ಅಜಯ್ ಹಾಜರಿದ್ದರು.

ಹೆಣ್ಣಿನ ಒಳತೋಟಿ,‌ಉದಾತ್ತತೆ ಚಿತ್ರಿಸಿದ ಕುವೆಂಪು

Publicstory. in


ತುರುವೇಕೆರೆ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನಿಂದ-ಕುವೆಂಪು ಸಾಹಿತ್ಯದ ಹೆಣ್ಣಿನ ಒಳತೋಟಿ, ಉದಾತ್ತತೆ ಚಿತ್ರಿಸಿದ ಕುವೆಂಪು ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಕೃತಿಯನ್ನು ತನ್ನೆಲ್ಲ ಸ್ಥರದ ಬರಹಗಳಲ್ಲಿ ಮೇಳೈಸಿ, ದೇವರಂತೆ ಕಂಡ ಮೇರು ವ್ಯಕ್ತಿ ಕುವೆಂಪು. ಅದಕ್ಕೆ ಅವರನ್ನು ಆಂಗ್ಲ ಕವಿ ವರ್ಡ್ಸ್ವರ್ತ್ ಗೆ ಹೋಲಿಸುವುದನ್ನು ವಾಙ್ಮಯ ವಿಮರ್ಶೆಯಲ್ಲಿ ಕಾಣಬಹುದಾಗಿದೆ. ಕನ್ನಡ ನಾಡಿನ ಎಲ್ಲ ರಂಗಗಳಲ್ಲಿಯೂ ಕನ್ನಡ ಭಾಷೆಯೇ ಆಡಳಿತ ಭಾಷೆಯಾಗಬೇಕೆಂದು ಹಂಬಲಿಸಿದವರು.

ವಿಚಾರ ಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ ಎಂಬ ವಿಚಾರ ಕ್ರಾಂತಿಗೆ ಯುವ ಪೀಳಿಗೆ ಹಾಗು ವಿದ್ಯಾರ್ಥಿಗಳಿಗೆ ಕರೆಕೊಟ್ಟು ಆಮೂಲಕ ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ಸಮಾಜವನ್ನು ವಿಶ್ವಮಾನವತೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು ಎಂದರು.

ಕನ್ನಡ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸಾಹಿತ್ಯ ಸೃಜಿಸಿ ಎಲ್ಲರಿಂದ ಸೈ ಎನಿಸಿಕೊಂಡ ಗಟ್ಟಿಕವಿ. ಸಂಸ್ಕೃತದ ರಾಮಾಯಣವನ್ನು ಕನ್ನಡ ಸಾಹಿತ್ಯದ ಹೊಸದೊಂದು ಆಲೋಚನಾ ಕ್ರಮದಲ್ಲಿ ಮರುಕಟ್ಟಿದರು.

ಮಂಥರೆ, ಉರ್ಮಿಳೆಯಂತಹ ಸಣ್ಣ ಸಣ್ಣ ಪಾತ್ರಗಳ ಮೂಖೇನ ಹೆಣ್ಣಿನ ಒಳತೋಟಿ ಹಾಗು ಉದ್ದಾತೆಯನ್ನು ಗಂಭೀರವಾಗಿ ಚಿತ್ರಿಸಿ ಆ ಆಪಾತ್ರಗಳಿಗೆ ಮೌಲ್ವಿಕತೆ ತಂದವರು ಎಂದು ವಿಶ್ಷೇಷಿಸಿದರು.

ಒಕ್ಕಲಿಗ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ನವೀನ್ ಮಾತನಾಡಿ, ಕುವೆಂಪು ಅವರ ತಾರ್ಕಿಕತೆ, ವೈಚಾರಿಕ ಚಿಂತನೆ, ಹಾಗು ವಿಶ್ವಮಾನತ್ವದ ಕಲ್ಪನೆಯೇ ತುಂಬಾ ವಿಭಿನ್ನ. ಜಾತಿ, ಧರ್ಮಗಳ ಸಂಘರ್ಷದಿಂದ ಇಂದು ವಿಷಮಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಾಜದ ನೈರ್ಮಲ್ಯೀಕರಣಕ್ಕೆ ಕುವೆಂಪು ಅವರ ಚಿಂತನೆಗಳು ಆಪ್ಯಾಯಮಾನವಾಗಿ ಕಾಣಿಸುತ್ತವೆ ಎಂದರು.

ಇದೇ ವೇಳೆ ಯುವ ಕವಯಿತ್ರಯರಿಂದ ಕುವೆಂಪು ಕುರಿತ ಕವಿತೆ ವಾಚನ ಮಾಡಿ ಎಲ್ಲರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ನಂರಾಜುಮುನಿಯೂರು, ವಕೀಲ ಪಿಎಚ್.ಧನಪಾಲ್, ತುರುವೇಕೆರೆ ಪ್ರಸಾದ್, ಎಂ.ಎಸ್.ಕುಮಾರ ಸ್ವಾಮಿ ಮತ್ತು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

ಶಾಲಾ- ಕಾಲೇಜು ಆರಂಭ: ಸಭೆ ನಡೆಸಿದ ಜಿಲ್ಲಾಧಿಕಾರಿ

Tumkuru: 10ನೇ ಮತ್ತು 12ನೇ ತರಗತಿಗಳನ್ನು ಜನವರಿ 1ರಿಂದ ಪ್ರಾರಂಭ ಮಾಡಬೇಕೆಂದು ಡಿಡಿಪಿಐ ಹಾಗೂ ಬಿಇಓಗಳಿಗೆ ಜಿಲ್ಲಾಧಿಕಾರಿ ಡಾ, ಕೆ.ರಾಕೇಶ್‌ಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಶಾಲಾ ತರಗತಿಗಳ ಪ್ರಾರಂಭಕ್ಕೆ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಶಾಲೆ ಪ್ರಾರಂಭಕ್ಕೆ ಮುನ್ನ ಪೋಷಕರ ಸಭೆ ನಡೆಸುವ ಮೂಲಕ ಕೋವಿಡ್-19ರ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಮತ್ತು ಸ್ಯಾನಿಟೈಸ್ ಮಾಡುವ ಬಗ್ಗೆ ಮತ್ತು ಆಗಿಂದಾಗ್ಗೆ ಲಿಕ್ಟಿಡ್ ಸೋಪಿನಲ್ಲಿ ಕೈತೊಳೆಯುವ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ, ಶೀತ, ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಮುಂಜಾಗ್ರತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು.

ಶಾಲೆಯಲ್ಲಿನ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಉಸ್ತುವಾರಿ ಶಿಕ್ಷಕರನ್ನಾಗಿ ನೇಮಿಸಬೇಕು. ಈ ಶಿಕ್ಷಕರು ಈ 10 ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಸಂಪೂರ್ಣ ನಿಗಾ ಇಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಯಾವುದೇ ವಿದ್ಯಾರ್ಥಿಯನ್ನು ಬಲವಂತವಾಗಿ ಶಾಲೆಗೆ ಬರುವಂತೆ ಒತ್ತಾಯಿಸಬಾರದು.

ವಿದ್ಯಾರ್ಥಿಗಳು ಶಾಲೆಗೆ ಬರುವ ಬಗ್ಗೆ ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕಿದೆ ಎಂದು ಅವರು ನಿರ್ದೇಶನ ನೀಡಿದರು.

ಶಿಕ್ಷಕರುಗಳು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೋವಿಡ್-19 ಪರೀಕ್ಷೆ ಮಾಡಿಸಬೇಕು ಈ ಬಗ್ಗೆ ಒತ್ತಡವಾಗದಂತೆ ಕ್ರಮಬದ್ಧವಾದ ಯೋಜನೆ ರೂಪಿಸಿ ಪರೀಕ್ಷೆ ಬಗ್ಗೆ ಕ್ರಮವಹಿಸುವಂತೆ ಉಪನಿರ್ದೇಶಕರಿಗೆ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದ ದಿನಗಳಲ್ಲಿ ಬೆಳಗಿನ ಅವಧಿಯಲ್ಲಿ ತರಗತಿಗಳು ನಡೆಯುತ್ತವೆ. 6ರಿಂದ 9ನೇ ತರಗತಿಯವರೆಗೆ ಪರ್ಯಾಯ ದಿನಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯಬೇಕು ಎಂದರಲ್ಲದೇ ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಮಾರ್ಗದರ್ಶನದಂತೆ 15 ರಿಂದ 20 ವಿದ್ಯಾರ್ಥಿಗಳಿರುವಂತ ತಂಡಗಳನ್ನು ರಚಿಸಿಕೊಳ್ಳಲು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಗುಂಪುಗೂಡಿಕೆ, ಆಟೋಟಗಳು, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಕ್ರಮವಹಿಸಲು ಉಪನಿರ್ದೇಶಕರಿಗೆ ಸೂಚಿಸಿದರು.

ತರಗತಿಗೆ ಬರಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಮುಂದುವರೆಸಲು ಸೂಚಿಸಿದರಲ್ಲದೇ ಶಾಲೆ ಪ್ರಾರಂಭದ ನಂತರ ತಾಲ್ಲೂಕು ಹಂತದ ವಿವಿಧ ಅಧಿಕಾರಿಗಳ ತಂಡ ರಚಿಸಿ ಸದರಿ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಕೋವಿಡ್-19ರ ಮುಂಜಾಗ್ರತ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ವರದಿ ತರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಿಗೆ ತಿಳಿಸಿದರು.

ನಗರ ಮತ್ತು ಗ್ರಾಮೀಣ ಭಾಗದ ಎಲ್ಲಾ ಶಾಲೆಗಳಲ್ಲಿ ಸ್ಯಾನಿಟೈಸ್ ಮಾಡುವ ಬಗ್ಗೆ ಸಭೆಯಲ್ಲಿದ್ದ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಗಳ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಬೇಕು. 1ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಮುಂದಿನ ಸೂಚನೆವರೆವಿಗೂ ಶಾಲೆಗಳಿಗೆ ಕರೆಸಬಾರದು.

ಖಾಸಗಿ ಶಾಲೆಯ ಬಸ್ಸುಗಳಲ್ಲಿ ಬಸ್ಸು ಸಾಮರ್ಥ್ಯದ ಶೇ.50ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಕರೆತರಬೇಕು. ಬಸ್ಸುಗಳನ್ನು ಸ್ಯಾನಿಟೈಸ್ ಮಾಡಬೇಕು. ಶಾಲೆಗಳಲ್ಲಿ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ಯಾನರ್ ಖರೀದಿಸಲು ಕ್ರಮವಹಿಸುವಂತೆ ಅವರು ಸೂಚಿಸಿದರು.

ಕೋವಿಡ್-19ರ ಹಿನ್ನಲೆಯಲ್ಲಿ ಇಲಾಖೆಯು ನೀಡಿರುವ ಎಸ್.ಓ.ಪಿ.ಯನ್ನು ಆಧರಿಸಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ, ನಾಗೇಂದ್ರಪ್ಪ, ಡಿಡಿಪಿಐಗಳಾದ ರೇವಣ್ಣ ಸಿದ್ಧಪ್ಪ, ಸಿ.ನಂಜಯ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರೇಮ್‌ನಾಥ್, ಡಿಡಿಪಿಯು ನರಸಿಂಹಮೂರ್ತಿ, ಎಲ್ಲಾ ತಾಲೂಕು ಬಿಇಒಗಳು ಸೇರಿದಂತೆ ಮತ್ತಿತರು

ಏತನೀರಾವರಿ ಪೈಪ್ ಲೈನ್ ಕಾಮಗಾರಿ ಸ್ಥಳಾಂತರಿಸುವಂತೆ ತಹಶೀಲ್ದಾರ್ ಗೆ ಮನವಿ

Publicstory. in


ತುರುವೇಕೆರೆ: ತಾಲ್ಲೂಕಿನ ಎ.ಹೊಸಹಳ್ಳಿ ಕಾಲೋನಿ ಮೂಲಕ ಹಾಯ್ದು ಹೋಗುವ ಏತನೀರಾವರಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಎ.ಹೊಸಹಳ್ಳಿ ಕಾಲೋನಿಯ ಗ್ರಾಮಸ್ಥರು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಗ್ರಾಮಸ್ಥ ಮೈಲಾರಯ್ಯ ಮಾತನಾಡಿ, ತಿಪಟೂರು ತಾಲ್ಲೂಕಿನ ಭದ್ರಾಪುರ ಏತನೀರಾವರಿ ಕುಡಿಯುವ ನೀರಿನ ಯೋಜನೆಯಡಿಯ 4 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ಮಾಡಲಾಗುತ್ತಿದೆ.

ತಾಲ್ಲೂಕಿನ ಎ.ಹೊಸಹಳ್ಳಿ ಸಮೀಪದ ಮುಖ್ಯ ಹೇಮಾವತಿ ನಾಲೆಯ ಬಳಿ ಪಂಪ್ಹೌಸ್ ನಿಂದ ಪೈಪ್ಗಳ ಮೂಲಕ ಎ.ಹೊಸಹಳ್ಳಿ ಕಾಲೋನಿ ಮುಖಾಂತರ ಭದ್ರಾಪುರ ಕೆರೆಗೆ ನೀರನ್ನು ಲಿಪ್ಟ್ ಮಾಡುವ ಕಾಮಗಾರಿಯು ಕಿಬ್ಬನಹಳ್ಳಿ ಹೇಮಾವತಿ ಶಾಖಾ ನಾಲಾ ವ್ಯಾಪ್ತಿಗೆ ಒಳಪಟ್ಟಿದೆ.

ಪೈಪ್ ಅಳವಡಿಸಲು ಊರಿನೊಳಗೆ ಜೆಸಿಬಿ ಮೂಲಕ ಭೂಮಿ ಅಗೆಯಲಾಗುತ್ತದೆ. ಆದರೆ ಈಗಾಗಲೇ ಊರಿನ ರಸ್ತೆಯು ಕಿರಿದಾಗಿದ್ದು ಮನೆಗಳ ಪಕ್ಕದಲ್ಲಿ ಚರಂಡಿ ಇದೆ.

ಅದರ ಪಕ್ಕದಲ್ಲಿ ಕುಡಿಯುವ ನೀರಿನ ಪೈಪ್ಗಳಿವೆ ಇವುಗಳೆಲ್ಲಾ ಹಾಳಾಗುವುದರ ಜೊತೆಗೆ ಇಲ್ಲಿ ದೊಡ್ಡ ಪೈಪ್ಗಳನ್ನು ಹಾಕುವುದಕ್ಕೆ ಜಾಗವೂ ಸಹ ಇಲ್ಲ ಜೊತೆಗೆ ಪೈಪ್ ನಿಂದ ನೀರು ನಿತ್ಯವೂ ಜಿನುಗಿ ವಾಸದ ಮನೆಗಳ ಗೋಡೆ ನೆನೆದು ಬಿದ್ದರೆ ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದರು.

ಈ ಯೋಜನೆಯಿಂದ ನಮ್ಮ ಗ್ರಾಮಕ್ಕೆ ನಯಾಪೈಸೆ ಉಪಯೋಗವಿಲ್ಲ. ಹೀಗಿರುವಾಗ ನಾವೇಕೆ ಊರಿಗೆ ತೊಂದರೆ ಮಾಡಿಕೊಳ್ಳಲಿ ಎಂದು ಅಸಮಧಾನ ವ್ಯಕ್ತಪಡಿಸದರು.

ಗ್ರಾಮದ ಮುಖಂಡ ಚಂದ್ರಯ್ಯ ಮಾತನಾಡಿ, ಊರಿನ ರಸ್ತೆ ಪಕ್ಕದಲ್ಲಿಯೇ ಕುಡಿಯುವ ನೀರಿನ ಹ್ಯಾಂಡ್ ಜಗ್ ಮತ್ತು ಸಿಸ್ಟಮ್ ಗಳಿವೆ ಪೈಪ್ ಲೈನ್ ನಿಂದ ತೊಂದರೆಯಾಗುವುದಿಲ್ಲವೆ. ಒಂದು ವೇಳೆ ಪೈಪ್ ಹೊಡೆದು ಮನೆಗಳಿಗೆ ನೀರು ನುಗ್ಗಿದರೆ ನಾವೆಲ್ಲಿಗೆ ಹೋಗ ಬೇಕು. ಗ್ರಾಮಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾಗು ಹೇಮಾವತಿ ಇಲಾಖಾ ಅಧಿಕಾರಿಗಳಿಗೆ ಪತ್ರಬರೆಯಲಾಗುತ್ತಿದ್ದು ನಾವು ಯಾವುದೇ ಕಾರಣಕ್ಕೂ ಇಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಗಿರಿಯಣ್ಣ, ರಮೇಶ್, ಲಕ್ಷ್ಮಮ್ಮ, ಭಾಗ್ಯಮ್ಮ, ಪ್ರಾರ್ಥನ, ಸೌಭಾಗ್ಯ, ಜಯಮ್ಮ, ಗಂಗಮ್ಮ, ಅಮ್ಮಯ್ಯ, ತಿಮ್ಮಕ್ಕ, ಉಗ್ರಣ್ಣ, ತಿಮ್ಮಯ್ಯ, ಉಪಸ್ಥಿತರಿದ್ದರು.

ಮಾಜಿ ಶಾಸಕ ಷಡಕ್ಷರಿಗೆ ಸೋಲು: ಕೃಷ್ಣಕುಮಾರ್ ಗೆ ಜಯ

Publicstory.in


Tumkuru: ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಯ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಕೃಷ್ಣಕುಮಾರ್ ಅವರು ಮಾಜಿ ಶಾಸಕ ಕೆ. ಷಡಾಕ್ಷರಿ ಅವರನ್ನು ಸೋಲಿಸಿ ರಾಜ್ಯ ಮಟ್ಟದ ನಿರ್ದೇಶಕ ರಾಗಿ ಅಯ್ಕೆಯಾಗಿದ್ದಾರೆ.

ಕೃಷ್ಣಕುಮಾರ್ ಅವರನ್ನು ತಿಪಟೂರು ತಾಲ್ಲೂಕಿನ ಪರವಾಗಿ ಅಭಿನಂದಿಸುವುದಾಗಿ ಹೆಚ್. ಎಸ್. ದೇವರಾಜ್ ಹಿಂಡಿಸ್ಕೆರೆ ತಿಳಿಸಿದ್ದಾರೆ.