Sunday, December 7, 2025
Google search engine
Home Blog Page 23

ತುಮುಲ್ ವಿರುದ್ಧ ರೈತರ ಆಕ್ರೋಶ

0

ಮಲ್ಲಸಂದ್ರ: ಹಾಲಿನ ದರ ಕಡಿತ ಮಾಡಿರುವ ತುಮುಲ್ ಕ್ರಮವನ್ನು ಖಂಡಿಸಿ ಮಲ್ಲಸದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬೇಸಿಗೆಯಲ್ಲಿ ಹಾಲಿನ ಅವಕ ಹೆಚ್ಚಾಗಿದೆ ಎಂಬ ನೆಪವೊಡ್ಡಿ ಹಾಲಿನ ದರವನ್ನು 2 ರೂ ಕಡಿತಗೊಳಿಸಿದೆ. ಪಶು ಆಹಾರದ ದರವನ್ನು ಕೆ.ಜಿ.ಗೆ ಎರಡು ರೂ ಹೆಚ್ಚಳ ಮಾಡಿದೆ. ಇದರಿಂದ ರೈತರಿಗೆ ಒಂದು ಲೀಟರ್‌ಗೆ 4 ರೂ ನಷ್ಟವಾಗಿದೆ.ಇದನ್ನು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಡಿಸೆಂಬರ್ 4 ರವರೆಗೆ ಕಾಲಾವಕಾಶ ನೀಡಿದ್ದು, ಕಡಿತ ಮಾಡಿರುವ ಹಾಲಿನ ದರ ಮರುಸ್ಥಾಪನೆ ಮತ್ತು ಪಶು ಆಹಾರದ ದರ ಕಡಿತ ಮಾಡದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ ಮಾತನಾಡಿ, ರೈತ ಸಂಘ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಮತ್ತು ಕೆ.ಎಂ.ಎಫ್‌ಗೆ ಪತ್ರ ಬರೆದು, ಅಲ್ಲಿಂದ ಬರುವ ಸೂಚನೆಗಳ ಅನ್ವಯ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ರೈತರಿಗೆ ಅನುಕೂಲವಾಗುವ ರೀತಿ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಹಾಲಿನ ಪ್ರೋತ್ಸಾಹಧನವನ್ನು ಆಗಸ್ಟ್ ತಿಂಗಳವರೆಗೆ ನೀಡಲಾಗಿದೆ. ಅದು ನೇರವಾಗಿಯೇ ರೈತರ ಖಾತೆಗಳಿಗೆ ಹೋಗುವುದರಿಂದ ತೊಂದರೆಯಿಲ್ಲ. ನಂತರದ ಬಾಕಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನೀರಿಕ್ಷೆ ಇದೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯ ಆರಾಧ್ಯ, ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ತಾಲೂಕು ಅಧ್ಯಕ್ಷ ನಾಗೇಂದ್ರ, ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು ಸೇರಿ ಹಲವರು ಇದ್ದರು.

ಕಂಬಳಾಪುರ: ಆಯ್ಕೆ

0

ತುಮಕೂರು ತಾಲ್ಲೂಕಿನ ಕಂಬಳಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರಂಗದಾಮಯ್ಯ, ಉಪಾಧ್ಯಕ್ಷ ರಾಗಿ ವೆಂಕಟರಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಐದು ವರ್ಷಗಳ ಕಾಲ ಇವರ ಅಧಿಕಾರ ಅವಧಿ ಇರಲಿದೆ. ಈ ವೇಳೆ ಸಂಘದ ನಿರ್ದೇಶಕ ರು ಹಾಜರಿದ್ದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡ ಶಿವಕುಮಾರ್ ಅಭಿನಂದಿಸಿದ್ದಾರೆ.

ಇವರ ಕಂಡರೆ ದೇವರಾಜ್ ಅರಸ್ ಭಯ ಬೀಳುತ್ತಿದ್ದರು

ತುಮಕೂರು: ಬಿ.ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ದೇವರಾಜ ಅರಸು ಅವರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ಸ್ವತಹಃ ದೇವರಾಜ ಅರಸರಲ್ಲಿತ್ತು, ದೇವರಾಜ ಅರಸು ಉತ್ತಮ ಆಡಳಿತ ನೀಡುತ್ತಿದ್ದರು ಸಹ,ಸಮಾಜ ಸುಧಾರಣೆಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕೆಂದು ಬಸವಲಿಂಗಪ್ಪ ಒತ್ತಾಯ ಮಾಡುತ್ತಿದ್ದರು ಎಂದು ಚಿಂತಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ಎಸ್‍ಸಿ,ಎಸ್‍ಟಿ ನೌಕರರ ಸಮನ್ವಯ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ಬಿ.ಬಸವಲಿಂಗಪ್ಪ ಸ್ಮರಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಂಬೇಡ್ಕರ್ ಅವರ ಉತ್ತರಾಧಿಕಾರಿ ಎಂದರೆ ಅದು ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ನಾಗವಾರ ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಎಸಿ,ಎಸ್ಟಿ,ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು,ಚಿಂತಕ ದೊರೈರಾಜು,ಕಲಾಶ್ರೀಡಾ.ಲಕ್ಷ್ಮಣ್‍ದಾಸ್,ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ,ಕಲಾವಿದ ಹನುಮಂತೇಗೌಡ,ಡಾ.ಬಸವರಾಜು,ನರಸೀಯಪ್ಪ, ಸಿಎಒ ನರಸಿಂಹಮೂರ್ತಿ,ಚಂದ್ರಪ್ಪ,ಡಾ.ಓ.ನಾಗರಾಜು,ವಕೀಲ ಮಂಜುನಾಥ್ ಹೆಚ್.ವಿ. ನಾಗಭೂಷಣ್ ಬಗ್ಗನಡು ಸೇರಿದಂತೆ ಇತರರಿದ್ದರು.

ಆರ್ಥಿಕ ಪ್ರಜಾಪ್ರಭುತ್ವ ಬೇಕು: ಅಮಿನ್ ಮಟ್ಟು

ತುಮಕೂರು: ಸಂವಿಧಾನದ ಆಶಯದ ವಿರುದ್ಧ ನಡೆದರೆ ಕಾನೂನು ಪ್ರಕಾರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ತುಮಕೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಒಂದು ಮತ, ಒಂದು ಮೌಲ್ಯಗಳ ವೈರುಧ್ಯವನ್ನು ನಿವಾರಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ70ರಷ್ಟು ಬಡವರಿದ್ದ ನಮ್ಮ ದೇಶ ಈಗ ಶೇ.27ಕ್ಕೆ ಇಳಿದಿದೆ.ಎಲ್ಲವೂ ಸಾಧ್ಯವಾಗಿರುವುದು ಸಂವಿಧಾನದಿಂದ. ರಾಜಕೀಯ ಪ್ರೇರಿತ, ಉದ್ದೇಶಿತ ಸಂವಿಧಾನ ಸಡಿಲಿಕೆ ಸಲ್ಲ ಎಂದರು.

ಹಿಮಾಚಲ ಪ್ರದೇಶ ಹೈಕೋರ್ಟ್ ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮಾತನಾಡಿ, ಅಸಮಾನರು ಅಸಾಮಾನ್ಯ ಸ್ಥಾನಕ್ಕೆ ಏರಿರುವುದು ಸಂವಿಧಾನದಿಂದ. ಭಾರತ ದೇಶದ ಧರ್ಮ ಸಂವಿಧಾನವಾಗಿದೆ. ಸಮಾನತೆಯ ಕಾನೂನಿನ ಅಳವಡಿಕೆ ಸಂವಿಧಾನದಿಂದ ನಮಗೆಲ್ಲರಿಗೂ ಒದಗಿರುವ ಭಾಗ್ಯ. ಸಂವಿಧಾನ ದಿನವನ್ನು ಪ್ರತಿ ಮನೆಯಲ್ಲೂ ಆಚರಿಸಬೇಕು ಎಂದು ಕರೆ ನೀಡಿದರು.

ಡಾ. ಬಿ. ಆರ್.ಅಂಬೇಡ್ಕರ್‌ ಅನಾರೋಗ್ಯವನ್ನು ಲೆಕ್ಕಿಸದೆ 161 ದಿನಗಳಲ್ಲಿ ಸಂವಿಧಾನವನ್ನು ರಚಿಸಿದರು. ಅಸಮಾನತೆ, ಅರ್ಸ್ಪೃಶ್ಯತೆ, ಜಾತೀಯತೆ ಹೋಗಲಾಡಿಸಿ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ, ಭಾರತದ ಪ್ರಜೆಗಳನ್ನು ಸ್ವತಂತ್ರರನ್ನಾಗಿಸುವ ಮಹತ್ವದ ಆಶಯ ಸಂವಿಧಾನಕ್ಕಿದೆ ಎಂದರು.

ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಸಂವಿಧಾನದ ಬಲವನ್ನು ವಿದ್ಯಾರ್ಥಿಗಳು ಪ್ರತಿಪಾದಿಸಬೇಕು, ಅನುಸರಿಸಿ ಮುಂದಿನ ಪೀಳಿಗೆಯವರಿಗೆ ಪಸರಿಸಬೇಕು. ಸಂವಿಧಾನದ ಸಕಾರಾತ್ಮಕ ಬಳಕೆ, ರಕ್ಷಣೆ ಪ್ರಜೆಗಳಿಂದ ಮಾತ್ರ ಸಾಧ್ಯ. ಸಂವಿಧಾನ ಉನ್ನತ ಸ್ಥಾನ, ಗೌರವ, ಮಾತನಾಡುವ, ಹೋರಾಡುವ ಹಕ್ಕನ್ನು ಕೊಟ್ಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅಸಮಾನತೆಯ ಕರಾಳ ದಿನಗಳು ಈಗ ಕಣ್ಮರೆಯಾಗಿವೆ ಎಂದು ಹೇಳಿದರು.

ವಿ.ವಿಯ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ.ರಮೇಶ್ ಬಿ, ಅಂಬೇಡ್ಕರ್ ಕೇಂದ್ರದ ಡಾ. ಚಿಕ್ಕಣ್ಣ, ಲಕ್ಷ್ಮೀ ರಂಗಯ್ಯ ಇತರರು ಇದ್ದರು.

ಸಂವಿಧಾನದ ಐಡಿಯಾಲಜಿಯೇ ಶ್ರೇಷ್ಠ: ಡಾ.ಎಸ್. ರಮೇಶ್

ತುಮಕೂರು:

ಎಡಪಂಥೀಯ, ಬಲ ಪಂಥೀಯ, ದಲಿತ ಪಂಥೀಯದಂತೆ ಸಂವಿಧಾನ ಐಡಿಯಾಲಜಿಯೂ ಒಂದು ಸಂವಿಧಾನ ಐಡಿಯಾಲಜಿಯೇ ಕೆಳಗೆ ಎಲ್ಲರೂ ಬಾಳ್ವೆ ಮಾಡಬೇಕು. ಸಂವಿಧಾನದ ಐಡಿಯಾಲಜಿಯೇ ಪರಮೋಚ್ಛವಾಗಿದೆ ಎಂದು ಸುಪಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ರಮೇಶ್ ಹೇಳಿದರು.

ತುಮಕೂರು ವಿ.ವಿ.ಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಭಾರತ ಸಂವಿಧಾನದ ನೈಜ್ಯ ಅನುಷ್ಠಾನದ ಅಗತ್ಯತೆಯ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಚೋಮನ ದುಡಿಯಲ್ಲಿ ಕಾಣುವ ಸಾಮಾಜಿಕ ಸ್ಥಾನಮಾನ, ನನ್ನನ್ನೂ ಬೇರೆಯವರು ಗುರುತಿಸಬೇಕೆಂಬ ಹಂಬಲ . ಬಸವಣ್ಣ, ಬುದ್ಧನ ಸಾಮಾಜಿಕ ಕಲ್ಪನೆಗಳು ಏನಾಗಿದ್ದವು? ಶೋಷಣೆ ಮುಕ್ತ, ಘನತೆಯ ಸಮ ಸಮಾಜ ಸೃಷ್ಡಿಯ ಉದ್ದೇಶ ಸಂವಿಧಾನದ ಉದ್ದೇಶವಾಗಿದೆ. ಇದಕ್ಕೆ ಕಾರಣವಾದವರು ಡಾ.ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು.

ಪ್ರಜಾಸತ್ತಾತ್ಮಕ ನಿಲುವು, ಜಾತ್ಯತೀತ, ಧರ್ಮಾತೀತ ದೇಶ ನಮ್ಮದಾಗಿದೆ. ಇಲ್ಲಿ ರೂಲ್ ಮಾಡುವವರು ಜನರೇ ಆಗಿದ್ದಾರೆ. ಇದೊಂದು ಒಕ್ಕೂಟ ದೇಶವಾಗಿದೆ ಎಂದರು.

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕೆಂಬುದು ಸಂವಿಧಾನದ ಆಶಯವಾಗಿದೆ. ಆದರೆ ಈ ಆಶಯಗಳು ಈಡೇರಿದ್ದಾವೆಯೇ ಎಂದು ಪ್ರಶ್ನಿಸಿದರು.

ಸಾಂವಿಧಾನದ ತತ್ವಗಳ ಗುರಿಯನ್ನು ನಾವು ಮುಟ್ಟಿದೇವೆಯೇ ಎಂದರೆ ಇಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ ಮನ್ನಣೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದರು.

ಈಗಲೂ ಗ್ರಾಮಗಳಲ್ಲಿ ಗುಡಿಸಲುಗಳಿವೆ. ಎಲ್ಲ ಮನೆಗಳಿಗೆ ವಿದ್ಯುತ್ ಇಲ್ಲ. ಬಯಲು ಬಹಿರ್ದೆಸೆಯ ಭಾರತವನ್ನು ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧೀಜಿ, ಅಂಬೇಡ್ಕರ್ ಅವರ ಕಾರಣದಿಂದಾಗಿ ನಾವು ಇಲ್ಲಿ ಉಸಿರಾಡುತ್ತಿದ್ದೇವೆ ಎಂದರು.

ವಕೀಲ, ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಸಂವಿಧಾನದ ಉಳಿವಿನಲ್ಲೇ ಭಾರತದ ಭವಿಷ್ಯ ಅಡಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ರಿಗೆ ಸಂವಿಧಾನದ ರಕ್ಷಣೆ ಸಿಗಲಿದೆ ಎಂದರು.

ಅಂಬೇಡ್ಕರ್ ಕೇಂದ್ರದ ಸಂಯೋಜಕ ಡಾ. ಚಿಕ್ಕಣ್ಣ, ಪತ್ರಕರ್ತ ಭಾನು ಪ್ರಕಾಶ್, ಲಕ್ಷ್ಮೀ ರಂಗಯ್ಯ ಇತರರು ಇದ್ದರು.

ಉದ್ಘಾಟನೆ; ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಪತ್ರಕರ್ತ ದಿನೇಶ್ ಅಮೀನಮಟ್ಟು, ವಿ.ವಿಯ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ.ರಮೇಶ್ ಬಿ ಇದ್ದರು.

ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆಯ ೬ನೆಯ ಘಟಿಕೋತ್ಸವ

ಬೆಂಗಳೂರು.

ಬೆಂಗಳೂರಿನ ಗಾಂಧೀ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಗಾಂಧೀ ಸ್ಮಾರಕ ನಿಧಿ ಹಾಗೂ ಎನ್ ಎಸ್ ಎಸ್ ರಾಜ್ಯಕೋಶ, ಗಾಂಧೀ ಸಂಶೋಧನಾ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಟಿ ದಾಸರಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಗಾಂಧೀ ಸಂಸ್ಕಾರ ಪರೀಕ್ಷೆಯ ೬ನೆಯ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. “ಗಾಂಧೀಜಿ ಸತ್ಯ ಮತ್ತು ಅಹಿಂಸೆ ಇರುವ ವರೆಗೂ ಇರುತ್ತಾರೆ. ಮಕ್ಕಳೇ ಗಾಂಧೀಯನ್ನು ಓದಿ, ಪ್ರಶ್ನಿಸಿ. ನನ್ನ ಜೀವನವೇ ಸಂದೇಶ ವೆಂದ ಗಾಂಧೀಯವರು ಸತ್ಯಾನ್ವೇಷಣೆಯಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಂಡವರು. ಆಗಿನ ಕಾಲದಲ್ಲಿ ಬಡತನದ ಜೊತೆಗೆ ಕಿತ್ತುತಿನ್ನುತ್ತಿದ್ದ ಸಮಸ್ಯೆ ಕುಡಿತ ಅದರೊಂದಿಗೆ ಅಂದೆ ಹೋರಾಟ ಸಾರಿದವರು. ಸಾಮುದಾಯಿಕ ಸಮಾಜದ ಕಲ್ಪನೆಯನ್ನು ಕಟ್ಟಿಕೊಟ್ಟವರು ಗಾಂಧೀ, ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಇರಬೇಕು ಸರ್ಕಾರ ನಿರ್ಮಿಸುವಲ್ಲಿ ಅವನ ಕೊಡುಗೆ ಇರಬೇಕು. ಎಂದವರು ಮಹಾತ್ಮಗಾಂಧಿ ಸರ್ವಧರ್ಮದ ಸಮಾನತೆಯ ದೇಶವನ್ನಾಗಿಸುವಲ್ಲಿ ಗಾಂಧೀಜಿಯವರ ಕೊಡುಗೆ ಅಪಾರವಾಗಿದೆ. ಎಲ್ಲರನ್ನು ಒಳಗೊಂಡ ಸಮಾಜ ವನ್ನು ಕಟ್ಟಿದವರು” ಗಾಂಧೀ ಬರೀ ದೇಶದ ನಾಯಕರಲ್ಲ ಪ್ರಪಂಚದ ನಾಯಕರು ಎಂದು ಬರಾಕ್ ಒಬಾಮಾ ಅಭಿಪ್ರಾಯ ಪಟ್ಟಿದ್ದಾರೆ. ಗಾಂಧೀ ಎಲ್ಲರಿಗೂ ಅನ್ವಯಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ ಬಿ  ದೀನೇಶ್ ಅವರು ಖಜಾಂಚಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಇವರು ಮಾತನಾಡಿದರು. “ಮಹಾತ್ಮ ಗಾಂಧಿ ಅವರು ಸಂವಿಧಾನದ ವ್ಯಾಪ್ತಿಯಲ್ಲಿ ಬದುಕಬೇಕು ಎನ್ನುತ್ತಾರೆ. ನಾವು ಪ್ರತಿದಿನ ಹೇಗೆ ಬದುಕಬೇಕು ಎನ್ನುವುದನ್ನು ನಮ್ಮ ಸಂವಿಧಾನವೇ ಹೇಳುತ್ತದೆ. ಸರ್ವಧರ್ಮದ ಶಾಂತಿಯ ತೋಟ ನಮ್ಮ ಭಾರತ. ಸಂವಿಧಾನವೇ ನಮ್ಮ ಶಕ್ತಿ ಎಂದರು. ಡಾ ನಾಡೋಜ ವೂಡೇ ಪಿ ಕೃಷ್ಣ ಅವರು ಅವಕಾಶ ಸಿಕ್ಕಾಗ ಮಕ್ಕಳಲ್ಲಿ ಗಾಂಧೀ ತತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಗಾಂಧೀ ಸಂಸ್ಕಾರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿವಿಧ ಶಾಲಾ ಕಾಲೇಜಿನ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಡಾ. ಪ್ರತಾಪ್ ಲಿಂಗಯ್ಯ ಕರ್ನಾಟಕ ಸರ್ಕಾರದ ಎನ್ ಎಸ್ ಎಸ್ ರಾಜ್ಯಕೋಶ ಅಧಿಕಾರಿಗಳು ಇವರು ಉದ್ಘಾಟಿಸಿದರು, ಶ್ರೀ ಗೀರಿಶ್ ಕುಲಕರ್ಣಿ ಪರೀಕ್ಷಾ ನಿಯಂತ್ರಕರು ಗಾಂಧೀ ಸಂಶೋಧನಾ ಫೌಂಡೇಶನ್ ಜಲಂಗಾವ್ ಮಹಾರಾಷ್ಟ್ರ ಹಾಗೂ ಅಭಿದಾ ಬೇಗಂ ಸಂಚಾಲಕರು ಗಾಂಧೀಸಂಸ್ಕಾರ ಪರೀಕ್ಷೆ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕೊನೆಗೂ ಸಿಕ್ಕ ಕಳ್ಳ

0

ತುರುವೇಕೆರೆ: ಪಟ್ಟಣದ ವಿವಿಧ ಭಾಗಗಳಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ನ ಮೂರು ಅಂಗಡಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿಗಳ ಮೌಲ್ಯದ ವಸ್ತು ಕಳವು ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಉದಯಗಿರಿ ತಾಲ್ಲೂಕಿನ ಸಯ್ಯದ್ ಅಜರುದ್ದಿನ್ (28) ಮತ್ತು ಹತಾವುಲ್ಲಾ(23) ಬಂಧಿತ ಆರೋಪಿಗಳಾಗಿದ್ದು ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ. ಬಂದಿತ ಆರೋಪಿಗಳು ಮಂಡ್ಯ, ಮೈಸೂರು ಸೇರಿದಂತೆ ವಿವಿಧ ತಾಲ್ಲೂಕು ಜಿಲ್ಲೆಗಳಲ್ಲಿನ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಆರೋಪಿಗಳು ಅಕ್ಟೋಬರ್ ತಿಂಗಳಲ್ಲಿ ಪಟ್ಟಣದ ಪೊಲೀಸ್ ಠಾಣೆ ಎದುರಿನ ಸಿ.ಟಿ ಎಲೆಕ್ಟ್ರಾನಿಕ್ಸ್ ಅಂಗಡಿ, ಬಾಣಸಂದ್ರ ರಸ್ತೆಯಲ್ಲಿನ ಶಾರದಾ ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ವೇರ್ ಮತ್ತು ಮುನಿಯೂರು ಗೇಟ್ ಬಳಿಯ ಗಂಗಾಧರೇಶ್ವರ ಹಾರ್ಡ್ ವೇರ್ ಅಂಗಡಿಯ ಬೀಗ ಮುರಿದ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಟಿ.ವಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೊಳವೆ ಬಾವಿಯ ಉಪಕರಣಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದರು.

ಪಟ್ಟಣದ ಈ ಸರಣಿ ಕಳ್ಳತನದಿಂದ ಅಂಗಡಿ ಮಾಲೀಕರು ಮತ್ತು ಪಟ್ಟಣಿಗರು ಆತಂಕಕ್ಕೆ ಒಳಗಾಗಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡ ತಾಲ್ಲೂಕಿನ ಸಿಪಿಐ ಲೋಹಿತ್ ಅವರು ಕಳವಾದ ಒಂದು ತಿಂಗಳೊಳಗಾಗಿ ಅಂದರೆ ನವೆಂಬರ್ 18ರಂದು ಆರೋಪಿಗಳನ್ನು ಸೆರೆಹಿಡಿದಿದ್ದು

ಇದರಿಂದ ಪಟ್ಟಣಿಗರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ರಾಷ್ಟ್ರಸೇವೆಗೆ ಮುಡಿಪು…

ಕಳೆದ ಸಂಚಿಕೆಯಿಂದ

ಮಹಾತ್ಮ ಗಾಂಧೀಜಿಯವರು ನನ್ನ ಪಾಲಿನ ಆದರ್ಶ ವ್ಯಕ್ತಿ ಎನ್ನುವ ಕೃಷ್ಣರವರಿಗೆ ಐ.ಎನ್.ಎ. ರಾಮ್‌ರಾವ್, ಪಾಟೀಲ್ ಪುಟ್ಟಪ್ಪ, ಹೆಚ್. ಎಸ್. ದೊರೆಸ್ವಾಮಿ, ಕೆ. ಎಸ್. ನಾರಾಯಣಸ್ವಾಮಿ, ಎಸ್. ವಿ. ಮಂಜುನಾಥ್, ಡಾ. ಹೊ. ಶ್ರೀನಿವಾಸಯ್ಯ, ಡಾ. ಎಂ. ಗುರುದಾಸ್, ದೊಡ್ಡಪ್ಪ ಡಬ್ಲ್ಯೂ, ಹೆಚ್. ಹನುಮಂತಪ್ಪ(ಜೂನಿಯರ್), ತಂದೆ ಡಬ್ಲ್ಯೂ.ಹೆಚ್. ಪುಟ್ಟಯ್ಯ, ಪ್ರೊ. ಹೆಚ್. ಆರ್. ದಾಸೇಗೌಡ, ಡಾ. ಜಿ. ಮಾದೇಗೌಡ ಮೊದಲಾದ ಸ್ವಾತಂತ್ರ್ಯ ಸೇನಾನಿಗಳಲ್ಲಿ, ಶಿಸ್ತುಬದ್ಧ ವ್ಯಕ್ತಿಗಳಲ್ಲಿ ಅತ್ಯಂತ ಅಪಾರ ಗೌರವ.

1923ರಲ್ಲಿ ಪ್ರಾರಂಭಗೊಂಡ ಸೇವಾ ಸಂಸ್ಥೆಯಾದ ‘ಹಿಂದೂಸ್ಥಾನಿಸೇವಾದಳ’ಕ್ಕೆ ಪಂಡಿತ್‌ ಜವಹರಲಾಲ್ ನೆಹರು ಅಧ್ಯಕ್ಷರಾಗಿಯೂ, ಡಾ. ಎನ್. ಎಸ್‌. ಹರ್ಡಿಕರ್ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೇ ಮುಂದೆ ಭಾರತ ಸೇವಾದಳವಾಯಿತು. ಇದೊಂದು ರಾಜಕೀಯೇತರ ರಾಷ್ಟ್ರೀಯ ಯುವಸೇವಾ ಸಂಸ್ಥೆಯಾಗಿದ್ದು ದೇಶದ ಏಕತೆ ಮತ್ತು ಭಾವೈಕ್ಯತೆಗಾಗಿ ಶ್ರಮಿಸುತ್ತಿದೆ. ಡಾ. ಕೃಷ್ಣ ಅವರು ಭಾರತ ಸೇವಾದಳ ಕೇಂದ್ರ ಸಮಿತಿಯ ಗೌರವ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ 14,000 ಶಾಲೆಗಳಲ್ಲಿ ಸೇವಾದಳದ ಘಟಕಗಳನ್ನು ಪ್ರಾರಂಭಿಸುವ, ಶಾಲಾ ಶಿಕ್ಷಕರಿ ಗಾಗಿ ಸಾವಿರಾರು ಸೇವಾದಳ ತರಬೇತಿ ಶಿಬಿರಗಳನ್ನು ಏರ್ಪಡಿಸುವ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲಾ ಮಕ್ಕಳಿಗಾಗಿ ರಾಷ್ಟ್ರೀಯ ಭಾವೈಕ್ಯತಾ

ಶಿಬಿರಗಳನ್ನು ಸಂಘಟಿಸುವ ಹಾಗೂ ಬೆಂಗಳೂರಿನಲ್ಲಿ ‘ಡಾ. ಎಂ. ಸಿ. ಮೋದಿ ಸೇವಾದಳ ತರಬೇತಿ ಕೇಂದ್ರ’ವನ್ನು ಪ್ರಾರಂಭಿಸುವ ಕಾರ್ಯಗಳಲ್ಲಿ ಇವರು ಅತ್ಯಂತ ಮಹತ್ವಪೂರ್ಣ ಪಾತ್ರವಹಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳಿಂದ ಪ್ರೇರಿತರಾಗಿರುವ ಇವರು ಅವುಗಳನ್ನು ಮುಖ್ಯವಾಗಿ ಇಂದಿನ ಯುವಜನಾಂಗಕ್ಕೆ ತಲುಪಿಸುವ ಸಲುವಾಗಿ ವೈವಿಧ್ಯಮಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಗಾಂಧೀಜಿಯವರಿಂದ ಸ್ಥಾಪಿತವಾದ ಸರ್ವಸೇವಾ ಸಂಘದ ಭಾಗವಾದ ಕರ್ನಾಟಕ ಸರ್ವೋದಯ ಮಂಡಲದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಪ್ರತಿಷ್ಠಿತ ಗಾಂಧಿ ಪ್ರಣೀತ ಸಂಸ್ಥೆಗಳಾದ ಕರ್ನಾಟಕ ಗಾಂಧೀ ಸ್ಮಾರಕನಿಧಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಬೆಂಗಳೂರು ಕೇಂದ್ರದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದದ್ದು ವಿಶೇಷ. ಕೇಂದ್ರ ಗಾಂಧಿ ಶಾಂತಿ ಪ್ರತಿಷ್ಠಾನವನ್ನು ಡಾ. ರಾಜೇಂದ್ರ ಪ್ರಸಾದ್ ಪ್ರಾರಂಭಿಸಿದರು. ಅವರು ಅದರ ಸ್ಥಾಪಕ ಅಧ್ಯಕ್ಷರು. ಇದು ಗಾಂಧಿ ತತ್ವ ಪ್ರಚಾರದ ವಿಂಗ್. ಹಿಂದೆ ಆರ್. ಆರ್. ದಿವಾಕರ್ ಇದರಲ್ಲಿದ್ದರು. ಇಲ್ಲಿನ ಖಾದಿ ಉಡುಪು ಒಂದು ಸಂಜ್ಞೆ ಸಂಕೇತ. ಈ ಉಡುಪನ್ನು ತಮ್ಮ ಶಾಲಾ ಕಾಲೇಜುಗಳಲ್ಲಿ ವಾರಕ್ಕೆ ಒಂದು ದಿನ ಅಳವಡಿಸುವ ಮೂಲಕ ಖಾದಿಯ ಬಗ್ಗೆ ಯುವಜನರಲ್ಲಿ ಪ್ರೀತಿಮೂಡಿಸುವ ಕಾರ್ಯಮಾಡಿದ್ದಾರೆ.

ಜನಸಾಮಾನ್ಯರಲ್ಲಿ ಜಾತಿಭೇದದ ಭಾವನೆಗಳನ್ನು ಹೋಗಲಾಡಿಸಿ ಜಾತ್ಯತೀತ ಸಮಾಜ ನಿರ್ಮಾಣದ ಗುರಿಹೊಂದಿರುವ ಡಾ. ಕೃಷ್ಣ, ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷರಾಗಿ ಶಾಲಾಮಕ್ಕಳು ಹಾಗೂ ಯುವಜನತೆಯಲ್ಲಿ ಅಂತರ್ಜಾತೀಯ ಸೌಹಾರ್ದತೆ ಮತ್ತು ಏಕತೆಯ ಭಾವವನ್ನು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಮುಂದುವರೆಯುವುದು…..

21ರಂದು ವಿದ್ಯುತ್ ವ್ಯತ್ಯಯ

0

ತುರುವೇಕೆರೆ:
220/110 ಕೆವಿ ಸ್ವೀಕರಣಾ ಕೇಂದ್ರ ಕೆ.ಬಿ.ಕ್ರಾಸ್ ನಲ್ಲಿ 3ನೇ ತ್ರೈ ಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನ.21ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದ್ದಾರೆ.
ಕೆ.ಬಿ.ಕ್ರಾಸ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ತುರುವೇಕೆರೆ, ಮಾಯಸಂದ್ರ, ಅಮ್ಮಸಂದ್ರ, ಕಡೇಹಳ್ಳಿ, ತಾಳಕೆರೆ ಮತ್ತು ತಂಡಗ ಉಪ ಸ್ಥಾವರಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಫೀಡರ್ ಗಳಿಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಐಪಿ ಪೂರಕಗಳ ಸಮಯದಲ್ಲಿ ಬದಲಾವಣೆ ಮಾಡಿ ಬೆಳಗಿನ ಪಾಳಿಯಲ್ಲಿ ವಿದ್ಯುತ್ ಸರಬರಾಜು ನೀಡಲಾಗುವುದು. ಆದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಕೋರಿದ್ದಾರೆ.

ಸರ್ಕಾರಕ್ಕೆ 15 ದಿನ ಎಚ್ಚರಿಕೆ ನೀಡಿದ ಖಾಸಗಿ ಶಾಲೆಗಳು

0

ತುಮಕೂರು:ಸರಕಾರ ಆರ್.ಟಿ.ಇ ಅಡಿಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳಿಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು,ಅನುದಾನವನ್ನು ಹೆಚ್ಚಿಸಬೇಕು, ಹಾಗೆಯೇ ಬಡ ಮಕ್ಕಳ ಹಿತದೃಷ್ಟಿಯಿಂದ ಆರ್.ಟಿ.ಇ ಯೋಜನೆಯನ್ನು ಜಾರಿಗೆ ತರಬೇಕೆಂದು ರೂಪ್ಸಾ ರಾಜ್ಯಾಧ್ಯಕ್ಷ ಡಾ.ಹಾಲನೂರು ಲೇಪಾಕ್ಷ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಆರ್.ಟಿ.ಇ ಅಡಿಯಲ್ಲಿ ಖಾಸಗಿ ಅನುಧಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ವರ್ಗದ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಶೇ30ರಷ್ಟು ಅನುದಾನ ಇದುವರೆಗೂ ಬಂದಿಲ್ಲ.ಜೊತೆಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿದ್ದರೂ ಸಹ ಸರಕಾರ ಅನುದಾನ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ 15 ದಿನಗಳಲ್ಲಿ ಬಾಕಿ ಹಣ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.