Monday, October 14, 2024
Google search engine
Homeಜೀವನ ಚರಿತ್ರೆರಾಷ್ಟ್ರಸೇವೆಗೆ ಮುಡಿಪು...

ರಾಷ್ಟ್ರಸೇವೆಗೆ ಮುಡಿಪು…

ಕಳೆದ ಸಂಚಿಕೆಯಿಂದ

ಮಹಾತ್ಮ ಗಾಂಧೀಜಿಯವರು ನನ್ನ ಪಾಲಿನ ಆದರ್ಶ ವ್ಯಕ್ತಿ ಎನ್ನುವ ಕೃಷ್ಣರವರಿಗೆ ಐ.ಎನ್.ಎ. ರಾಮ್‌ರಾವ್, ಪಾಟೀಲ್ ಪುಟ್ಟಪ್ಪ, ಹೆಚ್. ಎಸ್. ದೊರೆಸ್ವಾಮಿ, ಕೆ. ಎಸ್. ನಾರಾಯಣಸ್ವಾಮಿ, ಎಸ್. ವಿ. ಮಂಜುನಾಥ್, ಡಾ. ಹೊ. ಶ್ರೀನಿವಾಸಯ್ಯ, ಡಾ. ಎಂ. ಗುರುದಾಸ್, ದೊಡ್ಡಪ್ಪ ಡಬ್ಲ್ಯೂ, ಹೆಚ್. ಹನುಮಂತಪ್ಪ(ಜೂನಿಯರ್), ತಂದೆ ಡಬ್ಲ್ಯೂ.ಹೆಚ್. ಪುಟ್ಟಯ್ಯ, ಪ್ರೊ. ಹೆಚ್. ಆರ್. ದಾಸೇಗೌಡ, ಡಾ. ಜಿ. ಮಾದೇಗೌಡ ಮೊದಲಾದ ಸ್ವಾತಂತ್ರ್ಯ ಸೇನಾನಿಗಳಲ್ಲಿ, ಶಿಸ್ತುಬದ್ಧ ವ್ಯಕ್ತಿಗಳಲ್ಲಿ ಅತ್ಯಂತ ಅಪಾರ ಗೌರವ.

1923ರಲ್ಲಿ ಪ್ರಾರಂಭಗೊಂಡ ಸೇವಾ ಸಂಸ್ಥೆಯಾದ ‘ಹಿಂದೂಸ್ಥಾನಿಸೇವಾದಳ’ಕ್ಕೆ ಪಂಡಿತ್‌ ಜವಹರಲಾಲ್ ನೆಹರು ಅಧ್ಯಕ್ಷರಾಗಿಯೂ, ಡಾ. ಎನ್. ಎಸ್‌. ಹರ್ಡಿಕರ್ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೇ ಮುಂದೆ ಭಾರತ ಸೇವಾದಳವಾಯಿತು. ಇದೊಂದು ರಾಜಕೀಯೇತರ ರಾಷ್ಟ್ರೀಯ ಯುವಸೇವಾ ಸಂಸ್ಥೆಯಾಗಿದ್ದು ದೇಶದ ಏಕತೆ ಮತ್ತು ಭಾವೈಕ್ಯತೆಗಾಗಿ ಶ್ರಮಿಸುತ್ತಿದೆ. ಡಾ. ಕೃಷ್ಣ ಅವರು ಭಾರತ ಸೇವಾದಳ ಕೇಂದ್ರ ಸಮಿತಿಯ ಗೌರವ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ 14,000 ಶಾಲೆಗಳಲ್ಲಿ ಸೇವಾದಳದ ಘಟಕಗಳನ್ನು ಪ್ರಾರಂಭಿಸುವ, ಶಾಲಾ ಶಿಕ್ಷಕರಿ ಗಾಗಿ ಸಾವಿರಾರು ಸೇವಾದಳ ತರಬೇತಿ ಶಿಬಿರಗಳನ್ನು ಏರ್ಪಡಿಸುವ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಶಾಲಾ ಮಕ್ಕಳಿಗಾಗಿ ರಾಷ್ಟ್ರೀಯ ಭಾವೈಕ್ಯತಾ

ಶಿಬಿರಗಳನ್ನು ಸಂಘಟಿಸುವ ಹಾಗೂ ಬೆಂಗಳೂರಿನಲ್ಲಿ ‘ಡಾ. ಎಂ. ಸಿ. ಮೋದಿ ಸೇವಾದಳ ತರಬೇತಿ ಕೇಂದ್ರ’ವನ್ನು ಪ್ರಾರಂಭಿಸುವ ಕಾರ್ಯಗಳಲ್ಲಿ ಇವರು ಅತ್ಯಂತ ಮಹತ್ವಪೂರ್ಣ ಪಾತ್ರವಹಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳಿಂದ ಪ್ರೇರಿತರಾಗಿರುವ ಇವರು ಅವುಗಳನ್ನು ಮುಖ್ಯವಾಗಿ ಇಂದಿನ ಯುವಜನಾಂಗಕ್ಕೆ ತಲುಪಿಸುವ ಸಲುವಾಗಿ ವೈವಿಧ್ಯಮಯ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಗಾಂಧೀಜಿಯವರಿಂದ ಸ್ಥಾಪಿತವಾದ ಸರ್ವಸೇವಾ ಸಂಘದ ಭಾಗವಾದ ಕರ್ನಾಟಕ ಸರ್ವೋದಯ ಮಂಡಲದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಪ್ರತಿಷ್ಠಿತ ಗಾಂಧಿ ಪ್ರಣೀತ ಸಂಸ್ಥೆಗಳಾದ ಕರ್ನಾಟಕ ಗಾಂಧೀ ಸ್ಮಾರಕನಿಧಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಬೆಂಗಳೂರು ಕೇಂದ್ರದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದದ್ದು ವಿಶೇಷ. ಕೇಂದ್ರ ಗಾಂಧಿ ಶಾಂತಿ ಪ್ರತಿಷ್ಠಾನವನ್ನು ಡಾ. ರಾಜೇಂದ್ರ ಪ್ರಸಾದ್ ಪ್ರಾರಂಭಿಸಿದರು. ಅವರು ಅದರ ಸ್ಥಾಪಕ ಅಧ್ಯಕ್ಷರು. ಇದು ಗಾಂಧಿ ತತ್ವ ಪ್ರಚಾರದ ವಿಂಗ್. ಹಿಂದೆ ಆರ್. ಆರ್. ದಿವಾಕರ್ ಇದರಲ್ಲಿದ್ದರು. ಇಲ್ಲಿನ ಖಾದಿ ಉಡುಪು ಒಂದು ಸಂಜ್ಞೆ ಸಂಕೇತ. ಈ ಉಡುಪನ್ನು ತಮ್ಮ ಶಾಲಾ ಕಾಲೇಜುಗಳಲ್ಲಿ ವಾರಕ್ಕೆ ಒಂದು ದಿನ ಅಳವಡಿಸುವ ಮೂಲಕ ಖಾದಿಯ ಬಗ್ಗೆ ಯುವಜನರಲ್ಲಿ ಪ್ರೀತಿಮೂಡಿಸುವ ಕಾರ್ಯಮಾಡಿದ್ದಾರೆ.

ಜನಸಾಮಾನ್ಯರಲ್ಲಿ ಜಾತಿಭೇದದ ಭಾವನೆಗಳನ್ನು ಹೋಗಲಾಡಿಸಿ ಜಾತ್ಯತೀತ ಸಮಾಜ ನಿರ್ಮಾಣದ ಗುರಿಹೊಂದಿರುವ ಡಾ. ಕೃಷ್ಣ, ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷರಾಗಿ ಶಾಲಾಮಕ್ಕಳು ಹಾಗೂ ಯುವಜನತೆಯಲ್ಲಿ ಅಂತರ್ಜಾತೀಯ ಸೌಹಾರ್ದತೆ ಮತ್ತು ಏಕತೆಯ ಭಾವವನ್ನು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಮುಂದುವರೆಯುವುದು…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?