ಬೆಂಗಳೂರು.
ಬೆಂಗಳೂರಿನ ಗಾಂಧೀ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಗಾಂಧೀ ಸ್ಮಾರಕ ನಿಧಿ ಹಾಗೂ ಎನ್ ಎಸ್ ಎಸ್ ರಾಜ್ಯಕೋಶ, ಗಾಂಧೀ ಸಂಶೋಧನಾ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಟಿ ದಾಸರಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಗಾಂಧೀ ಸಂಸ್ಕಾರ ಪರೀಕ್ಷೆಯ ೬ನೆಯ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. “ಗಾಂಧೀಜಿ ಸತ್ಯ ಮತ್ತು ಅಹಿಂಸೆ ಇರುವ ವರೆಗೂ ಇರುತ್ತಾರೆ. ಮಕ್ಕಳೇ ಗಾಂಧೀಯನ್ನು ಓದಿ, ಪ್ರಶ್ನಿಸಿ. ನನ್ನ ಜೀವನವೇ ಸಂದೇಶ ವೆಂದ ಗಾಂಧೀಯವರು ಸತ್ಯಾನ್ವೇಷಣೆಯಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಂಡವರು. ಆಗಿನ ಕಾಲದಲ್ಲಿ ಬಡತನದ ಜೊತೆಗೆ ಕಿತ್ತುತಿನ್ನುತ್ತಿದ್ದ ಸಮಸ್ಯೆ ಕುಡಿತ ಅದರೊಂದಿಗೆ ಅಂದೆ ಹೋರಾಟ ಸಾರಿದವರು. ಸಾಮುದಾಯಿಕ ಸಮಾಜದ ಕಲ್ಪನೆಯನ್ನು ಕಟ್ಟಿಕೊಟ್ಟವರು ಗಾಂಧೀ, ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಇರಬೇಕು ಸರ್ಕಾರ ನಿರ್ಮಿಸುವಲ್ಲಿ ಅವನ ಕೊಡುಗೆ ಇರಬೇಕು. ಎಂದವರು ಮಹಾತ್ಮಗಾಂಧಿ ಸರ್ವಧರ್ಮದ ಸಮಾನತೆಯ ದೇಶವನ್ನಾಗಿಸುವಲ್ಲಿ ಗಾಂಧೀಜಿಯವರ ಕೊಡುಗೆ ಅಪಾರವಾಗಿದೆ. ಎಲ್ಲರನ್ನು ಒಳಗೊಂಡ ಸಮಾಜ ವನ್ನು ಕಟ್ಟಿದವರು” ಗಾಂಧೀ ಬರೀ ದೇಶದ ನಾಯಕರಲ್ಲ ಪ್ರಪಂಚದ ನಾಯಕರು ಎಂದು ಬರಾಕ್ ಒಬಾಮಾ ಅಭಿಪ್ರಾಯ ಪಟ್ಟಿದ್ದಾರೆ. ಗಾಂಧೀ ಎಲ್ಲರಿಗೂ ಅನ್ವಯಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಹೆಚ್ ಬಿ ದೀನೇಶ್ ಅವರು ಖಜಾಂಚಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಇವರು ಮಾತನಾಡಿದರು. “ಮಹಾತ್ಮ ಗಾಂಧಿ ಅವರು ಸಂವಿಧಾನದ ವ್ಯಾಪ್ತಿಯಲ್ಲಿ ಬದುಕಬೇಕು ಎನ್ನುತ್ತಾರೆ. ನಾವು ಪ್ರತಿದಿನ ಹೇಗೆ ಬದುಕಬೇಕು ಎನ್ನುವುದನ್ನು ನಮ್ಮ ಸಂವಿಧಾನವೇ ಹೇಳುತ್ತದೆ. ಸರ್ವಧರ್ಮದ ಶಾಂತಿಯ ತೋಟ ನಮ್ಮ ಭಾರತ. ಸಂವಿಧಾನವೇ ನಮ್ಮ ಶಕ್ತಿ ಎಂದರು. ಡಾ ನಾಡೋಜ ವೂಡೇ ಪಿ ಕೃಷ್ಣ ಅವರು ಅವಕಾಶ ಸಿಕ್ಕಾಗ ಮಕ್ಕಳಲ್ಲಿ ಗಾಂಧೀ ತತ್ವ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಗಾಂಧೀ ಸಂಸ್ಕಾರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿವಿಧ ಶಾಲಾ ಕಾಲೇಜಿನ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಡಾ. ಪ್ರತಾಪ್ ಲಿಂಗಯ್ಯ ಕರ್ನಾಟಕ ಸರ್ಕಾರದ ಎನ್ ಎಸ್ ಎಸ್ ರಾಜ್ಯಕೋಶ ಅಧಿಕಾರಿಗಳು ಇವರು ಉದ್ಘಾಟಿಸಿದರು, ಶ್ರೀ ಗೀರಿಶ್ ಕುಲಕರ್ಣಿ ಪರೀಕ್ಷಾ ನಿಯಂತ್ರಕರು ಗಾಂಧೀ ಸಂಶೋಧನಾ ಫೌಂಡೇಶನ್ ಜಲಂಗಾವ್ ಮಹಾರಾಷ್ಟ್ರ ಹಾಗೂ ಅಭಿದಾ ಬೇಗಂ ಸಂಚಾಲಕರು ಗಾಂಧೀಸಂಸ್ಕಾರ ಪರೀಕ್ಷೆ ಇವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
