Monday, October 14, 2024
Google search engine
Homeಜಸ್ಟ್ ನ್ಯೂಸ್ಸಂವಿಧಾನದ ಐಡಿಯಾಲಜಿಯೇ ಶ್ರೇಷ್ಠ: ಡಾ.ಎಸ್. ರಮೇಶ್

ಸಂವಿಧಾನದ ಐಡಿಯಾಲಜಿಯೇ ಶ್ರೇಷ್ಠ: ಡಾ.ಎಸ್. ರಮೇಶ್

ತುಮಕೂರು:

ಎಡಪಂಥೀಯ, ಬಲ ಪಂಥೀಯ, ದಲಿತ ಪಂಥೀಯದಂತೆ ಸಂವಿಧಾನ ಐಡಿಯಾಲಜಿಯೂ ಒಂದು ಸಂವಿಧಾನ ಐಡಿಯಾಲಜಿಯೇ ಕೆಳಗೆ ಎಲ್ಲರೂ ಬಾಳ್ವೆ ಮಾಡಬೇಕು. ಸಂವಿಧಾನದ ಐಡಿಯಾಲಜಿಯೇ ಪರಮೋಚ್ಛವಾಗಿದೆ ಎಂದು ಸುಪಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ರಮೇಶ್ ಹೇಳಿದರು.

ತುಮಕೂರು ವಿ.ವಿ.ಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಭಾರತ ಸಂವಿಧಾನದ ನೈಜ್ಯ ಅನುಷ್ಠಾನದ ಅಗತ್ಯತೆಯ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಚೋಮನ ದುಡಿಯಲ್ಲಿ ಕಾಣುವ ಸಾಮಾಜಿಕ ಸ್ಥಾನಮಾನ, ನನ್ನನ್ನೂ ಬೇರೆಯವರು ಗುರುತಿಸಬೇಕೆಂಬ ಹಂಬಲ . ಬಸವಣ್ಣ, ಬುದ್ಧನ ಸಾಮಾಜಿಕ ಕಲ್ಪನೆಗಳು ಏನಾಗಿದ್ದವು? ಶೋಷಣೆ ಮುಕ್ತ, ಘನತೆಯ ಸಮ ಸಮಾಜ ಸೃಷ್ಡಿಯ ಉದ್ದೇಶ ಸಂವಿಧಾನದ ಉದ್ದೇಶವಾಗಿದೆ. ಇದಕ್ಕೆ ಕಾರಣವಾದವರು ಡಾ.ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು.

ಪ್ರಜಾಸತ್ತಾತ್ಮಕ ನಿಲುವು, ಜಾತ್ಯತೀತ, ಧರ್ಮಾತೀತ ದೇಶ ನಮ್ಮದಾಗಿದೆ. ಇಲ್ಲಿ ರೂಲ್ ಮಾಡುವವರು ಜನರೇ ಆಗಿದ್ದಾರೆ. ಇದೊಂದು ಒಕ್ಕೂಟ ದೇಶವಾಗಿದೆ ಎಂದರು.

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕೆಂಬುದು ಸಂವಿಧಾನದ ಆಶಯವಾಗಿದೆ. ಆದರೆ ಈ ಆಶಯಗಳು ಈಡೇರಿದ್ದಾವೆಯೇ ಎಂದು ಪ್ರಶ್ನಿಸಿದರು.

ಸಾಂವಿಧಾನದ ತತ್ವಗಳ ಗುರಿಯನ್ನು ನಾವು ಮುಟ್ಟಿದೇವೆಯೇ ಎಂದರೆ ಇಲ್ಲ. ಆರ್ಥಿಕ, ಸಾಮಾಜಿಕ, ರಾಜಕೀಯ ಮನ್ನಣೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದರು.

ಈಗಲೂ ಗ್ರಾಮಗಳಲ್ಲಿ ಗುಡಿಸಲುಗಳಿವೆ. ಎಲ್ಲ ಮನೆಗಳಿಗೆ ವಿದ್ಯುತ್ ಇಲ್ಲ. ಬಯಲು ಬಹಿರ್ದೆಸೆಯ ಭಾರತವನ್ನು ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧೀಜಿ, ಅಂಬೇಡ್ಕರ್ ಅವರ ಕಾರಣದಿಂದಾಗಿ ನಾವು ಇಲ್ಲಿ ಉಸಿರಾಡುತ್ತಿದ್ದೇವೆ ಎಂದರು.

ವಕೀಲ, ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಸಂವಿಧಾನದ ಉಳಿವಿನಲ್ಲೇ ಭಾರತದ ಭವಿಷ್ಯ ಅಡಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ರಿಗೆ ಸಂವಿಧಾನದ ರಕ್ಷಣೆ ಸಿಗಲಿದೆ ಎಂದರು.

ಅಂಬೇಡ್ಕರ್ ಕೇಂದ್ರದ ಸಂಯೋಜಕ ಡಾ. ಚಿಕ್ಕಣ್ಣ, ಪತ್ರಕರ್ತ ಭಾನು ಪ್ರಕಾಶ್, ಲಕ್ಷ್ಮೀ ರಂಗಯ್ಯ ಇತರರು ಇದ್ದರು.

ಉದ್ಘಾಟನೆ; ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಪತ್ರಕರ್ತ ದಿನೇಶ್ ಅಮೀನಮಟ್ಟು, ವಿ.ವಿಯ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ.ರಮೇಶ್ ಬಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?