Thursday, January 22, 2026
Google search engine
Home Blog Page 27

DEATH: ಪೊಲೀಸರ ವಿರುದ್ಧ ತನಿಖೆಗೆ ಒತ್ತಾಯ

ತುರುವೇಕೆರೆ:
ತಾಲ್ಲೂಕಿನ ಕೆ.ಮಾವಿನಹಳ್ಳಿ ಕುಮಾರ್ ಆಚಾರ ಯುವಕನನ್ನು ಪೊಲೀಸರು ಇಸ್ಪೀಟ್ ನೆಪದಲ್ಲಿ ಬಂಧಿಸಿ ಅವರ ವಶದಲ್ಲಿ ಇರುವಾಗಲೇ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದು ಈ ಬಗ್ಗೆ ತೀವ್ರ ತನಿಖೆಯಾಗ ಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಒತ್ತಾಯಿಸಿದರು.

‘ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಅ.23 ರಂದು ನಡೆದ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ತಮ್ಮ ವಶಕ್ಕೆ ಪಡೆದು ಅವರ ಸ್ವಂತ ದ್ವಿಚಕ್ರ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆತರುವ ಮಾರ್ಗ ಮಧ್ಯೆ ಕುಮಾರ ಆಚಾರ್(47) ಎಂಬುವರು ಇದ್ದಕ್ಕಿದ್ದ ಹಾಗೆ ವಾಹನದಿಂದ ಕುಸಿದು ಕೆಳಗೆ ಬಿದ್ದಿದ್ದಾನೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಕುಮಾರ್ ಆಚಾರ್ನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ ಎಂದು ಪಟ್ಟಣದ ಪೊಲೀಸರು ಎಫ್ ಐಆರ್ ಮಾಡಿದ್ದಾರೆ.’

ಆದರೆ ಇದು ಸ್ವಾಭಾವಿಕ ಸಾವಲ್ಲ ಅನುಮಾನಾಸ್ಪದ ಸಾವು. ಮೃತಪಟ್ಟ ವ್ಯಕ್ತಿಯನ್ನು ಪೊಲೀಸರೇ ಎಡೆ ಮಟ್ಟೆಯಲ್ಲಿ ಒಡೆದು ಆತನನ್ನು ಆಸ್ಪತ್ರೆಗೆ ಕರೆತಂದಿರುವ ಸಾದ್ಯತೆಗಳಿವೆ ಎಂದು ಆರೋಪಿಸಿದ ಅವರು ಇಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿಸದೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಏಕೆ ತೆಗೆದುಕೊಂಡು ಹೋದರು.

18 ಗಂಟೆಗಳ ನಂತರ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ. ಇದು ಪೊಲೀಸರು ತಾವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಹಾಡಿರುವ ನಾಟಕ. ಯಾವುದೇ ಕಾರಣಕ್ಕೂ ಇದು ಸ್ವಾಭಾವಿಕ ಸಾವಲ್ಲ ಆತನನ್ನು ಪೊಲೀಸರೇ ಹೊಡೆದು ಸಾಯಿಸಿದ್ದಾರೆ. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು, ಇಲ್ಲವಾದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯ ಮುಂದೆ ವಿಶ್ವಕರ್ಮ ಜನಾಂಗದವರು ಹಾಗೂ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಂಸದರು, ಪದಾಧಿಕಾರಿಗಳು, ಸೇರಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು, ಎಚ್ಚರಿಕೆ ನೀಡಿದರು.

ಮೃತನ ಕುಟುಂಬವು ಸಹ ಇದು ಸಹಜ ಸಾವಲ್ಲ ಪೊಲೀಸರೇ ಒಡೆದು ಸಾಯಿಸಿದ್ದಾರೆ, ನಮಗೆ ನ್ಯಾಯ ಬೇಕು. ಸರಿಯಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಕುಮಾರ್ ಆಚಾರ್ ಗೆ ಒಬ್ಬರು ಮಡದಿ, ಒಬ್ಬ ಮಗ, ಹೆಣ್ಣು ಮಗು, ವಯಸ್ಸಾದ ತಂದೆ ,ಮತ್ತು ಅಕ್ಕ, ಇದ್ದಾರೆ ಇವರನ್ನು ಸಾಕುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ಸುದ್ದಿ ಗೋಷ್ಟಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಯು.ಬಿ.ಸುರೇಶ್, ಮೃತನ ಪತ್ನಿ ಮಂಜಮ್ಮ, ತಂಗಿ ಪುಷ್ಪ, ತಂದೆ ರಂಗಚಾರ್, ಭಾವ ಶಿವಲಿಂಗಚಾರ್ ಇತರರು ಇದ್ದರು.

ಕನ್ನಡದ ಅಸ್ಮಿತೆ ಪ್ರಶ್ನೆ: ಶಾಸಕ ಕೃಷ್ಣಪ್ಪ

0

ತುರುವೇಕೆರೆ:
ಡಿ.ದೇವರಾಜು ಅರಸುರವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.


ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲ್ಲೂಕು ಆಡಳಿತ ಹಾಗು ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವದ ದ್ವಾಜಾರೋಹಣ ನೆರವೇರಿಸಿ ಮಾತಾಡಿದರು.


ಡಿ.ದೇವರಾಜುರವರು ಶ್ರೇಷ್ಠ ರಾಜಕಾರಣಿಯಾಗಿ ಕನ್ನಡದ ಶ್ರೇಯೋಭಿವೃದ್ದಿಗೆ ಶ್ರಮಿಸಿದವರು. ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಕವಿಪುಂಗವರು, ಹೋರಾಟಗಾರರು, ರಾಜಮಹಾರಾಜರುಗಳು ಸಾರಿ ಹೇಳಿದ್ದಾರೆ.


ಕನ್ನಡ ಭಾಷೆ, ಕರ್ನಾಟಕದ ಚಾರಿತ್ರಿಕ ವೈಶಿಷ್ಟ್ಯತೆ, ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಪ್ರಾಕೃತಿಕ ಸಂಪತ್ತಿನ ಗಣಿ ಹಾಗು ಕನ್ನಡದ ಸಾಂಸ್ಕೃತಿಕ ಮಹತ್ವವನ್ನು ಈ ತಲೆ ಮಾರಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ.


ಕನ್ನಡವೇ ಆಡಳಿತ ಭಾಷೆಯಾದರೆ ಸಕರ್ಾರಗಳು ತರುವ ಯೋಜನೆಗಳ ಸ್ವಷ್ಟ ತಿಳವಳಿಕೆ ಕನ್ನಡಿಗರಲ್ಲಿ ಇರುತ್ತದೆ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಕರೇ ಅಧಿಕ ಸಂಖ್ಯೆಯಲ್ಲಿರುವುದು ಎಲ್ಲೊ ಒಂದು ಕಡೆ ಕನ್ನಡ ಅಸ್ಮಿತೆಯ ಪ್ರಶ್ನೆ ಎದುರಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕ ಏಕೀಕರಣಕ್ಕೆ ಹಾಗು ಭಾಷೆಯ ಏಳಿಗೆಗೆ ದುಡಿದ ಮಹನೀಯರುಗಳನ್ನು ವಿವರವಾಗಿ ತಿಳಿಸಿಕೊಟ್ಟರು.


ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಒಳಗೊಂಡಿದ್ದು, ಕನ್ನಡದ ಸಾಹಿತ್ಯ ಅತ್ಯಂತ ಶ್ರೀಮಂತಭರಿತವಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಕಾರ್ಮಿಕ ಸಂಘನೆಯ ಹೋರಾಟಗಾರ ಸತೀಶ್ ಡಿ.ಎಚ್, ಸಮಾಜ ಸೇವಕ ಸುನಿಲ್ ಬಾಬು, ಕ್ರೀಡಾಪಟು ಚಿಮ್ಮಯಿ, ಮಂಜೇಶ್ ಗುಪ್ತಾ ಸಾಹಿತ್ಯ, ರಂಭೂಮಿ ಡಿ.ತಿಪ್ಪಣ್ಣ, ಪ್ರಗತಿ ಪರ ರೈತ ರೂಪೇಶ್ ಕುಮಾರ್ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಸುರೇಶ್, ಶಿರಸ್ಥೆದಾರ್ ಸುನಿಲ್ ಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಅಕ್ಷರದಾಸೋಹದ ನಿರ್ದೇಶಕ ರವಿಕುಮಾರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು

ತುಮಕೂರಿಗೆ ಕ್ಯಾನ್ಸರ್ ಆಸ್ಪತ್ರೆ

ತುಮಕೂರು : ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 99ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳ್ಳುಳ್ಳ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ್ಳುಳ್ಳತಾಯಿ-ಮಕ್ಕಳ ಆಸ್ಪತ್ರೆ'' ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ 10 ಹಾಸಿಗೆಗಳ್ಳುಳ್ಳಪೌಷ್ಠಿಕ ಪುನಃಶ್ಚೇತನ” ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. 100 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನು 200 ಹಾಸಿಗೆಗಳುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಜಿ.ಪರಮೇಶ್ವರ್ ಅವರು ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿಂದು 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಭೌಗೋಳಿಕವಾಗಿ, ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನೇಕ ಮಹತ್ವಗಳನ್ನು ಒಳಗೊಂಡಿರುವ ವಿಶಾಲವಾದ ಜಿಲ್ಲೆಯಾಗಿದೆ. ಮಧುಗಿರಿಯ ಏಕಶಿಲಾ ಬೆಟ್ಟ, ಕೈದಾಳ, ಶಿರಾ, ಮುಂತಾದ ಪ್ರಾಂತ್ಯಗಳು ಜಿಲ್ಲೆಯ ಚಾರಿತ್ರಿಕ ಮಹತ್ವವನ್ನು ಸಾರುತ್ತಿವೆ ಎಂದರು.

ಒಟ್ಟು 292 ಕಾಮಗಾರಿಗಳು ಪೂರ್ಣಗೊಂಡಿದ್ದು, 865 ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ವರ್ಷದಲ್ಲಿ 2542 ಕಾಮಗಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್‍ಗೌಡ, ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗುಬ್ಬಿಯಲ್ಲಿ ಕನ್ನಡ ಡಿಮ್ ಡಿಮ

ಗುಬ್ಬಿ : ಕನ್ನಡ ನಾಡು ನುಡಿಗೆ ದಕ್ಕೆ ಬಾರದಂತೆ ನಾವೆಲ್ಲರೂ ಬದ್ಧರಾಗಿ ಕಾನೂನುಗಳನ್ನು ಪಾಲಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಹಶೀಲ್ದಾರ್ ಬಿ.ಆರತಿ ತಿಳಿಸಿದರು.


ಕನ್ನಡ ರಾಜ್ಯೋತ್ಸವ ಆಚರಣೆ ಸಮಿತಿ ತಾಲೂಕು ಪಂಚಾಯಿತಿ ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕನ್ನಡಕ್ಕಾಗಿ ದುಡಿಯುವವರನ್ನು ನೆನೆಯುವ ದಿನ ಕನ್ನಡ ರಾಜ್ಯೋತ್ಸವ ದಿನವಾಗಬೇಕು. ಕನ್ನಡದ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕನ್ನಡ ಭಾಷೆಯನ್ನು ಭಾಷಾ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾದಾಪುರ ಶಿವಪ್ಪ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ದಿನವಾಗಿ ಕನ್ನಡ ರಾಜೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಕ್ಕೆ ಮಹಾನ್‌ ವ್ಯಕ್ತಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ರಂಗಭೂಮಿಯಲ್ಲಿ ಎಂಎನ್ ನಾರಾಯಣಪ್ಪ, ಸಮಾಜಸೇವೆ ಹೆಚ್.ಡಿ.ಎಲ್ಲಪ್ಪ, ಕೃಷಿ ಕ್ಷೇತ್ರ ಟಿ.ನಳಿನ, ಶಿಕ್ಷಣ ಕ್ಷೇತ್ರ ಜಿ.ಪ್ರಕಾಶ್, ಜಾನಪದ ಕ್ಷೇತ್ರ ಜಿ.ಆರ್.ಮಧು, ಪರಿಸರ ಕ್ಷೇತ್ರ ಎಸ್.ರಘು, ಸಾಹಿತ್ಯ ಕ್ಷೇತ್ರ ಅರುಣ್ ಕುಮಾರ್ , ವೈದ್ಯಕೀಯ ಕ್ಷೇತ್ರ ಲೋಕೇಶ್ ಹನುಮಪ್ಪ ಹೊಸಮನಿ ಇವರನ್ನ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಬಿಇಒ ಮಧುಸೂದನ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಂಜುಳದೇವಿ, ಪ್ರಾಂಶುಪಾಲ ಡಾ. ಪ್ರಸನ್ನ ಕುಮಾರ್, ಆರಕ್ಷಕರು ವೃತ್ತ ನಿರೀಕ್ಷಕ ಗೋಪಿನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ ಎಚ್ ರಮೇಶ್, ಎಇಇ ನಟರಾಜು, ವೇಂಕಟೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್‌ಸಿ ಯತೀಶ್, ಹಾಗೂ ಪಟ್ಟಣ ಪಂಚಾಯಿತಿ ಎಲ್ಲಾ ಚುನಾಯಿತ ಸದಸ್ಯರು ತಾಲೂಕು ಆಡಳಿತ ಸಿಬ್ಬಂದಿಗಳು ಮತ್ತಿತರರು ಇದ್ದರು.

ಮನೆಗಳಿಗೆ ತಡೆಯಾಜ್ಞೆ ತಂದ ಶಾಸಕ ಕೃಷ್ಣಪ್ಪ

ತುರುವೇಕೆರೆ:

ಬಸವ ವಸತಿ ಹಾಗು ಅಂಬೇಡ್ಕರ್ ವಸತಿ ಯೋಜನೆಯಡಿ ತಾಲ್ಲೂಕಿಗೆ ಮಂಜೂರಾಗಿದ್ದ 3375 ಮನೆಗಳು ಕುಣಿಗಲ್ ಕ್ಷೇತ್ರಕ್ಕೆ ವರ್ಗ ವಣೆಯಾಗಿರುವುದನ್ನು ಪ್ರಶ್ನೆ ಹೈಕೋರ್ಟ್ ಗೆ ಅರ್ಜಿ ಹಾಕಿದ್ದು; ಇದೀಗ ಕೋರ್ಟ್ ತಡೆಯಾಜ್ಞೆಯ ಆದೇಶ ಹೊರಡಿಸಿದ್ದು ನನ್ನ ಹೋರಾಟದ ಫಲವಾಗಿ ತಾಲ್ಲೂಕಿಗೆ 3375 ಮನೆಗಳೂ ಬರಲಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಇಲ್ಲಿಗೆ ಮಂಜೂರಾಗಿದ್ದ ಮನೆಗಳನ್ನು ಕುಣಿಗಲ್ ಶಾಸಕರು ತಮ್ಮದೇ ಸರ್ಕಾರದ ಪ್ರಭಾವ ಬಳಸಿ 3375 ಮನೆಗಳನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದರು. ನಾನು ಈ ಬಗ್ಗೆ ವಸತಿ ಸಚಿವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದೆ ಅದರ ಫಲವಾಗಿ ಜುಲೈ 7ರಂದು ಸಕರ್ಾರ ಹೊಸ ಆದೇಶ ಮಾಡಿ 1505 ಮನೆಗಳನ್ನು ತುರುವೇಕೆರೆ ಕ್ಷೇತ್ರಕ್ಕೆ ನೀಡಿತು.

ಇದೇ ವೇಳೆ ಕ್ಷೇತ್ರದಲ್ಲಿ ವಸತಿಗಳ ಸಮಸ್ಯೆ ತೀವ್ರವಾಗಿದ್ದು ಈಗಾಗಲೇ ನಿಗಧಿಯಾಗಿರುವ ಎಲ್ಲ ಮನೆಗಳು ತುರುವೇಕೆರೆಗೆ ನೀಡಬೇಕೆಂದು ಹೈಕೋಟರ್್ಗೆ ರಿಟ್ ಹಾಕಿದ್ದು ಈಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 3375 ಮನೆಗಳ ಪೈಕಿ 1870 ಮನೆಗಳು ನಮಗೆ ಸಿಗಲಿವೆ. ಹಾಗಾಗಿ ಕ್ಷೇತ್ರದ ಜನತೆ ಯಾರೂ ಆತಂಕಕ್ಕೆ ಒಳಾಗಬೇಡಿ ಎಲ್ಲರಿಗೂ ಹಂತ ಹಂತವಾಗಿ ಮನೆ ನೀಡುವುದಾಗಿ ಭರವಸೆ ನೀಡಿದರು.

ದೇವೇಗೌಡರು ಮತ್ತು ಅವರ ಪಕ್ಷ ತುಮಕೂರಿಗೆ ಹೇಮಾವತಿ ನಾಲಾ ನೀರು ಬಿಡುವುದಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದರು ಅದರ ವಿರುದ್ದ ನಾವು ಐಸಿಸಿ ಸಭೆಯಲ್ಲಿ ಗಲಾಟೆ ಮಾಡಿ ನೀರು ಬಿಡಬೇಕುಂದು ಒತ್ತಾಯಿಸಿದ್ದೇವೆ ಈಗ ನೀರು ಬಿಡಲಾಗಿದ್ದು ರೈತರು ಯಾವುದೇ ಗಲಾಟೆ, ಗದ್ದಲ ಮಾಡಿಕೊಳ್ಳದೆ ನೀರನ್ನು ಪೋಲು ಮಾಡದೆ ಕೆರೆಕಟ್ಟೆಗಳಿಗೆ ತುಂಬಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ದೆಹಲಿಯಲ್ಲಿರುವ ನೀರು ನಿರ್ವಹಣಾ ಸಮಿತಿಯು ಅವೈಜ್ಞಾನಿಕವಾಗಿ ಇಲ್ಲಿನ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ಕೊಟ್ಟಿದೆ. ವಾಸ್ತವವಾಗಿ ಆ ಅಧಿಕಾರಿಗಳು ಡ್ಯಾಮ್ಗಳಿಗೆ ಬಂದು, ರೈತರ ವಸ್ತು ಸ್ಥಿತಿ ಅರಿತು ತೀರ್ಮಾನ ನೀಡದೆ ಏಸಿ ಕೊಠಡಿಯೊಳಗೆ ಕುಳಿತು ತೀರ್ಮಾನ ಕೊಡುವುದು ಇಲ್ಲಿನ ರೈತರು ಹಾಗು ಕರ್ನಾಟಕಕ್ಕೆ ಮಾಡಿದ ದ್ರೋಹ. ಅದನ್ನು ನಾನು ಖಂಡಿಸುತ್ತೇನೆ. ನಾನು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡುವುದೇನೆಂದರೆ ನೀರು ನಿರ್ವಹಣಾ ಸಮಿತಿಯ ಆದೇಶಕ್ಕೆ ಸೊಪ್ಪು ಹಾಕದೆ ರೈತರ ಹಿತ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಅಲ್ಲದೆ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ಜನರಿಗೆ ರಕ್ಷಣೆ ಕೊಡದೆ ಅವರನ್ನು ಸುಲಿಗೆ ಮಾಡುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರಬರೆಯುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ವೆಂಕಟಾಪರ ಯೋಗೀಶ್, ಮಂಗಿಕುಪ್ಪೆ ಬಸವರಾಜು ಇನ್ನಿತರರು ಇದ್ದರು.

ಶಿಕ್ಷಕರ-ಪದವೀಧರ ವಿಧಾನಪರಿಷತ್ ಕ್ಷೇತ್ರಗಳಿಗೆ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಎರಡು ಪದವೀಧರ ಮತ್ತು ಮೂರು ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.

ನೈರುತ್ಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಕೆ.ಕೆ.ಮಂಜುನಾಥ್, ಆಗ್ನೇಯ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಡಿ.ಟಿ.ಶ್ರೀನಿವಾಸ್, ಈಶಾನ್ಯ ಪದವೀಧರರ ವಿಧಾನ ಪರಿಷತ್ ಕ್ಷೇತ್ರಕ್ಕೆ ಡಾ.ಚಂದ್ರಶೇಖರ್ ಬಿ. ಪಾಟೀಲ್ ಅವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.

ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ರಾಮೋಜಿ ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಹುಲಿ ಉಗುರು: ಅಧಿಕಾರಿ ಬಂಧನ

ಹುಲಿ ಹುಲಿ ಉಗುರು ಹಾಕಿಕೊಂಡು ರವರ ಬೇಟೆಯನ್ನು ಅರಣ್ಯ ಇಲಾಖೆ ಮುಂದುವರಿಸಿದ್ದು, ಇದೀಗ ಅರಣ್ಯ ಇಲಾಖೆ ಉನ್ನತ ಅಧಿಕಾರಿಯೇ ಬಲೆಗೆ ಬಿದ್ದಿದ್ದಾರೆ.

ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ವಲಯ ಅರಣ್ಯ ಅಧಿಕಾರಿ ಎಂ ದರ್ಶನ್ ಕುಮಾರ್ ಅವರನ್ನು ಅರಣ್ಯ ಅಧಿಕಾರಿಗಳು ಬಂದಿಸಿದ್ದಾರೆ.

ದರ್ಶನ್ ಕುಮಾರ್ ಹುಲಿ ಉಗುರು ಧರಿಸಿದ್ದಾರೆ ಎಂದು ಇಬ್ಬರು ಸಾರ್ವಜನಿಕರ ದೂರ ನೀಡಿದ್ದರು.

ದೂರು ನೀಡಿದ ಬಳಿಕ ತಲೆತಪ್ಪಿಸಿಕೊಂಡಿರುವ ದರ್ಶನ್ ಕುಮಾರ್ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಬಂಧಿಸಿದ್ದಾರೆ.

ಬಂದಿತ ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಸಾಲಕ್ಕೆ ಹೆದರಿ ರೈತ ಸಾವು

Publicstory;

ಸಾಲಕ್ಕೆ ಭಯಗೊಂಡು, ಬಾರದ ಮಳೆಯಿಂದ ಕಂಗಾಲಾಗಿ, ಒಣಗುತ್ತಿರುವ ಮೆಣಸಿನಕಾಯಿ, ಈರುಳ್ಳಿ ಬೆಳೆಗೆ ಬೇಸರಗೊಂಡು ಯುವ ರೈತ ತನ್ನ ಜಮೀನದ ಮರವೊಂದಕ್ಕೆ ನೇಣಿಗೆ ಶರಣಾದ ಘಟನೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ನಡೆದಿದೆ.

ಹರ್ಲಾಪೂರ ಗ್ರಾಮದ ಯುವ ರೈತ ಪರಸಪ್ಪ ರಾಮಪ್ಪ ಉಮಚಗಿ(ವಯಸ್ಸು 26) ಶುಕ್ರವಾರ ಬೆಳಗಿನ ಜಾವಾ ನೆಣಿಗೆ ಶರಣಾದ ದುರ್ದೈವಿ ಎಂಬುದು ತಿಳಿದು ಬಂದಿದೆ. ತಂದೆ ಮಾಡಿದ ಬ್ಯಾಂಕ್ ಸಾಲ 1.20 ಸಾವಿರ ರೂ. ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿ ಸಾಲ ತೀರಿಸಿದ್ದಾನೆ.

ಮರಳಿ ಸಾಲ ಕೇಳಿದ್ದಾನೆ, ಸಾಲ ಸಿಕ್ಕಿಲ್ಲ. ಇತ್ತ 2 ಎಕರೆ ಜಮೀನದಲ್ಲಿ ಬಿತ್ತಿದ ಮೆಣಸಿನಕಾಯಿ, ಈರುಳ್ಳಿ ಬೆಳೆ ಮಳೆ ಇಲ್ಲದೆ ಒಣಗವೆ. ಗುಂಪುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಮಳೆ ಇಲ್ಲ, ಬೆಳೆ ಇಲ್ಲ, ಬ್ಯಾಂಕದಿಂದ ಸಾಲ ಸಿಕ್ಕಿಲ್ಲ, ತಂದೆಯೂ ತೀರಿಕೊಂಡಿದ್ದರಿಂದ ಗುಂಪು ಸಾಲ ಮರಳಿಸಲು ಸಾಧ್ಯವಾಗದೆ, ಯಾವುದೇ ದಿಕ್ಕು ತೋಚದೆ ಭಯಗೊಂಡು ರೈತ ಪರಸಪ್ಪ ಉಮಚಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಚರ್ಚೆಗಳು ನಡೆದಿವೆ.

ಮಾಜಿ ಶಾಸಕ ರಫೀಕ್ ಗೆ ಉನ್ನತ ಸ್ಥಾನ ಕೊಟ್ಟ ಕಾಂಗ್ರೆಸ್

Public story


ತುಮಕೂರು:ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ)ಯ ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಸಂಯೋಜಕರಾಗಿ ಮಾಜಿ ಶಾಸಕ ಹಾಗೂ ಹೆಚ್.ಎಂ.ಎಸ್.ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಎಸ್.ರಫೀಕ್ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.

ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಲ್ಲಿಸಿದ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರು, ಸಂಯೋಜಕರು ಹಾಗೂ ಸಹ ಸಂಯೋಜಕರು ಸೇರಿದಂತೆ ಪದಾಧಿಕಾರಿಗಳ ಪಟ್ಟಿಗೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ರಾಷ್ಟ್ರಿಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅನುಮೋಧನೆ ನೀಡಿದ್ದಾರೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಡಾ.ರಫೀಕ್ ಅಹಮದ್ 2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ,ಶಾಸಕರಾಗಿ ಕೆಲಸ ಮಾಡಿದ್ದರು.ಕಳೆದ 2023ರ ಚುನಾವಣೆಯಲ್ಲಿ ಪಕ್ಷದ ಟಿಕೇಟ್ ಕೈತಪ್ಪಿದ್ದರೂ ಪಕ್ಷ ತೊರೆಯದೆ ಪಕ್ಷ ನಿಷ್ಠೆ ತೋರಿದ್ದ ಇವರಿಗೆ ಎಐಸಿಸಿ ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ.


SSIT ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ

0

ತುಮಕೂರು: ಗೃಹ ಸಚಿವ ಡಾ.ಜಿ

ಪರಮೇಶ್ವರ್ ಒಡೆತನದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಟೆಲಿಕಾಂ ಇಂಜಿನಿಯರಿಂಗ್ ತೃತೀಯ ಸೆಮಿಸ್ಟರ್’ನಲ್ಲಿ ಓದುತ್ತಿದ್ದ ಬನಸಿರಿ(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಈಕೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ಶಿವಪುರ ಗ್ರಾಮದವಳು. ಗುರುವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಬಂದ ಈಕೆ ತಾನು ತಂಗಿದ್ದ 101ಬಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಖಿನ್ನತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.