ತುರುವೇಕೆರೆ:
ಬಸವ ವಸತಿ ಹಾಗು ಅಂಬೇಡ್ಕರ್ ವಸತಿ ಯೋಜನೆಯಡಿ ತಾಲ್ಲೂಕಿಗೆ ಮಂಜೂರಾಗಿದ್ದ 3375 ಮನೆಗಳು ಕುಣಿಗಲ್ ಕ್ಷೇತ್ರಕ್ಕೆ ವರ್ಗ ವಣೆಯಾಗಿರುವುದನ್ನು ಪ್ರಶ್ನೆ ಹೈಕೋರ್ಟ್ ಗೆ ಅರ್ಜಿ ಹಾಕಿದ್ದು; ಇದೀಗ ಕೋರ್ಟ್ ತಡೆಯಾಜ್ಞೆಯ ಆದೇಶ ಹೊರಡಿಸಿದ್ದು ನನ್ನ ಹೋರಾಟದ ಫಲವಾಗಿ ತಾಲ್ಲೂಕಿಗೆ 3375 ಮನೆಗಳೂ ಬರಲಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಇಲ್ಲಿಗೆ ಮಂಜೂರಾಗಿದ್ದ ಮನೆಗಳನ್ನು ಕುಣಿಗಲ್ ಶಾಸಕರು ತಮ್ಮದೇ ಸರ್ಕಾರದ ಪ್ರಭಾವ ಬಳಸಿ 3375 ಮನೆಗಳನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದರು. ನಾನು ಈ ಬಗ್ಗೆ ವಸತಿ ಸಚಿವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದೆ ಅದರ ಫಲವಾಗಿ ಜುಲೈ 7ರಂದು ಸಕರ್ಾರ ಹೊಸ ಆದೇಶ ಮಾಡಿ 1505 ಮನೆಗಳನ್ನು ತುರುವೇಕೆರೆ ಕ್ಷೇತ್ರಕ್ಕೆ ನೀಡಿತು.
ಇದೇ ವೇಳೆ ಕ್ಷೇತ್ರದಲ್ಲಿ ವಸತಿಗಳ ಸಮಸ್ಯೆ ತೀವ್ರವಾಗಿದ್ದು ಈಗಾಗಲೇ ನಿಗಧಿಯಾಗಿರುವ ಎಲ್ಲ ಮನೆಗಳು ತುರುವೇಕೆರೆಗೆ ನೀಡಬೇಕೆಂದು ಹೈಕೋಟರ್್ಗೆ ರಿಟ್ ಹಾಕಿದ್ದು ಈಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 3375 ಮನೆಗಳ ಪೈಕಿ 1870 ಮನೆಗಳು ನಮಗೆ ಸಿಗಲಿವೆ. ಹಾಗಾಗಿ ಕ್ಷೇತ್ರದ ಜನತೆ ಯಾರೂ ಆತಂಕಕ್ಕೆ ಒಳಾಗಬೇಡಿ ಎಲ್ಲರಿಗೂ ಹಂತ ಹಂತವಾಗಿ ಮನೆ ನೀಡುವುದಾಗಿ ಭರವಸೆ ನೀಡಿದರು.
ದೇವೇಗೌಡರು ಮತ್ತು ಅವರ ಪಕ್ಷ ತುಮಕೂರಿಗೆ ಹೇಮಾವತಿ ನಾಲಾ ನೀರು ಬಿಡುವುದಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದರು ಅದರ ವಿರುದ್ದ ನಾವು ಐಸಿಸಿ ಸಭೆಯಲ್ಲಿ ಗಲಾಟೆ ಮಾಡಿ ನೀರು ಬಿಡಬೇಕುಂದು ಒತ್ತಾಯಿಸಿದ್ದೇವೆ ಈಗ ನೀರು ಬಿಡಲಾಗಿದ್ದು ರೈತರು ಯಾವುದೇ ಗಲಾಟೆ, ಗದ್ದಲ ಮಾಡಿಕೊಳ್ಳದೆ ನೀರನ್ನು ಪೋಲು ಮಾಡದೆ ಕೆರೆಕಟ್ಟೆಗಳಿಗೆ ತುಂಬಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ದೆಹಲಿಯಲ್ಲಿರುವ ನೀರು ನಿರ್ವಹಣಾ ಸಮಿತಿಯು ಅವೈಜ್ಞಾನಿಕವಾಗಿ ಇಲ್ಲಿನ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ಕೊಟ್ಟಿದೆ. ವಾಸ್ತವವಾಗಿ ಆ ಅಧಿಕಾರಿಗಳು ಡ್ಯಾಮ್ಗಳಿಗೆ ಬಂದು, ರೈತರ ವಸ್ತು ಸ್ಥಿತಿ ಅರಿತು ತೀರ್ಮಾನ ನೀಡದೆ ಏಸಿ ಕೊಠಡಿಯೊಳಗೆ ಕುಳಿತು ತೀರ್ಮಾನ ಕೊಡುವುದು ಇಲ್ಲಿನ ರೈತರು ಹಾಗು ಕರ್ನಾಟಕಕ್ಕೆ ಮಾಡಿದ ದ್ರೋಹ. ಅದನ್ನು ನಾನು ಖಂಡಿಸುತ್ತೇನೆ. ನಾನು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡುವುದೇನೆಂದರೆ ನೀರು ನಿರ್ವಹಣಾ ಸಮಿತಿಯ ಆದೇಶಕ್ಕೆ ಸೊಪ್ಪು ಹಾಕದೆ ರೈತರ ಹಿತ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.
ಅಲ್ಲದೆ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ಜನರಿಗೆ ರಕ್ಷಣೆ ಕೊಡದೆ ಅವರನ್ನು ಸುಲಿಗೆ ಮಾಡುತ್ತಿದ್ದು ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರಬರೆಯುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ವಕ್ತಾರ ವೆಂಕಟಾಪರ ಯೋಗೀಶ್, ಮಂಗಿಕುಪ್ಪೆ ಬಸವರಾಜು ಇನ್ನಿತರರು ಇದ್ದರು.