Monday, July 15, 2024
Google search engine
HomeUncategorizedಕನ್ನಡದ ಅಸ್ಮಿತೆ ಪ್ರಶ್ನೆ: ಶಾಸಕ ಕೃಷ್ಣಪ್ಪ

ಕನ್ನಡದ ಅಸ್ಮಿತೆ ಪ್ರಶ್ನೆ: ಶಾಸಕ ಕೃಷ್ಣಪ್ಪ

ತುರುವೇಕೆರೆ:
ಡಿ.ದೇವರಾಜು ಅರಸುರವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.


ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲ್ಲೂಕು ಆಡಳಿತ ಹಾಗು ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವದ ದ್ವಾಜಾರೋಹಣ ನೆರವೇರಿಸಿ ಮಾತಾಡಿದರು.


ಡಿ.ದೇವರಾಜುರವರು ಶ್ರೇಷ್ಠ ರಾಜಕಾರಣಿಯಾಗಿ ಕನ್ನಡದ ಶ್ರೇಯೋಭಿವೃದ್ದಿಗೆ ಶ್ರಮಿಸಿದವರು. ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಕವಿಪುಂಗವರು, ಹೋರಾಟಗಾರರು, ರಾಜಮಹಾರಾಜರುಗಳು ಸಾರಿ ಹೇಳಿದ್ದಾರೆ.


ಕನ್ನಡ ಭಾಷೆ, ಕರ್ನಾಟಕದ ಚಾರಿತ್ರಿಕ ವೈಶಿಷ್ಟ್ಯತೆ, ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಪ್ರಾಕೃತಿಕ ಸಂಪತ್ತಿನ ಗಣಿ ಹಾಗು ಕನ್ನಡದ ಸಾಂಸ್ಕೃತಿಕ ಮಹತ್ವವನ್ನು ಈ ತಲೆ ಮಾರಿನ ಮಕ್ಕಳಿಗೆ ತಿಳಿಸಿಕೊಡಬೇಕಿದೆ.


ಕನ್ನಡವೇ ಆಡಳಿತ ಭಾಷೆಯಾದರೆ ಸಕರ್ಾರಗಳು ತರುವ ಯೋಜನೆಗಳ ಸ್ವಷ್ಟ ತಿಳವಳಿಕೆ ಕನ್ನಡಿಗರಲ್ಲಿ ಇರುತ್ತದೆ. ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಕರೇ ಅಧಿಕ ಸಂಖ್ಯೆಯಲ್ಲಿರುವುದು ಎಲ್ಲೊ ಒಂದು ಕಡೆ ಕನ್ನಡ ಅಸ್ಮಿತೆಯ ಪ್ರಶ್ನೆ ಎದುರಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕ ಏಕೀಕರಣಕ್ಕೆ ಹಾಗು ಭಾಷೆಯ ಏಳಿಗೆಗೆ ದುಡಿದ ಮಹನೀಯರುಗಳನ್ನು ವಿವರವಾಗಿ ತಿಳಿಸಿಕೊಟ್ಟರು.


ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಒಳಗೊಂಡಿದ್ದು, ಕನ್ನಡದ ಸಾಹಿತ್ಯ ಅತ್ಯಂತ ಶ್ರೀಮಂತಭರಿತವಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಕಾರ್ಮಿಕ ಸಂಘನೆಯ ಹೋರಾಟಗಾರ ಸತೀಶ್ ಡಿ.ಎಚ್, ಸಮಾಜ ಸೇವಕ ಸುನಿಲ್ ಬಾಬು, ಕ್ರೀಡಾಪಟು ಚಿಮ್ಮಯಿ, ಮಂಜೇಶ್ ಗುಪ್ತಾ ಸಾಹಿತ್ಯ, ರಂಭೂಮಿ ಡಿ.ತಿಪ್ಪಣ್ಣ, ಪ್ರಗತಿ ಪರ ರೈತ ರೂಪೇಶ್ ಕುಮಾರ್ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ಸುರೇಶ್, ಶಿರಸ್ಥೆದಾರ್ ಸುನಿಲ್ ಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮುನಿಯೂರು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಅಕ್ಷರದಾಸೋಹದ ನಿರ್ದೇಶಕ ರವಿಕುಮಾರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?