Monday, December 8, 2025
Google search engine
Home Blog Page 30

ಸೇವೆಯೆಂಬ ಮಂತ್ರ : ಡಾ. ವೂಡೇ ಪಿ ಕೃಷ್ಣ.

ಕಳೆದಸಂಚಿಕೆಯಿಂದ……….

‘ಸಮಾಜ ಸೇವೆ ಎಂಬುದು ನನಗೆ ಅತ್ಯಂತ ಪ್ರಿಯವಾದ ಕ್ಷೇತ್ರ’. ಇದು ಕೃಷ್ಣ ಅವರ ಮನದಾಳದ ಮಾತು. ಹೀಗಾಗಿ ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ತಮ್ಮ ಕನಸಿನ ಯೋಜನೆಗಳನ್ನು ನನಸು ಮಾಡುತ್ತಿದ್ದಾರೆ. ಹಾದಿಯಲ್ಲಿ ತಮಗೆ ಎದುರಾದ ನಿಂದನೆ, ಸೋಲು ಮೊದಲಾದ ನಕಾರಾತ್ಮಕ ಅಭಿಪ್ರಾಯಗಳಿಗೆ ಅಂಜದೆ, ಸಕಾರಾತ್ಮಕ ಚಿಂತನೆಗಳಿಂದ ಹಿಡಿದು ಜನಪರ ಕೆಲಸ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ರೆಡ್‌ ಕ್ರಾಸ್ ಸಂಸ್ಥೆ ಸೇರಲು ಪ್ರೋತ್ಸಾಹಿಸಿದ ಮಾಜಿ ಮೇಯರ್ ಕೆ. ಎಂ. ನಂಜಪ್ಪ ಹಾಗೂ ಹಿರಿಯ ಸಹೋದರ ಡಬ್ಲ್ಯೂ, ಪಿ. ಶಿವಕುಮಾರ್ ಅವರನ್ನು ಕೃಷ್ಣ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಡಾ. ಕೃಷ್ಣರವರು ಸಮಾಜ ಸೇವೆ ಮಾಡಬೇಕೆಂಬ ಸದುದ್ದೇಶದಿಂದಲೇ ಮೊದಲಿಗೆ 1984ರಲ್ಲಿ ರೆಡ್‌ ಕ್ರಾಸ್ ಸಂಸ್ಥೆಗೆ ಸದಸ್ಯರಾಗಿ ನೋಂದಣಿ ಮಾಡಿಸಿದರು. ಮುಂದೆ 2001ರಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ರಾಜ್ಯ ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಆಯ್ಕೆಯಾದರು. ಕೆಲವೇ ದಿನಗಳಲ್ಲಿ ಅವರ ಕಾರ್ಯತತ್ಪರತೆ ಹಾಗೂ ದಕ್ಷ ಆಡಳಿತದ ಹಿನ್ನೆಲೆಯಲ್ಲಿ ಇದೇ ಸಂಸ್ಥೆಗೆ ಕೋಶಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 2006ರಲ್ಲಿ ರೆಡ್‌ ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಯ್ಕೆಯಾಗುವಷ್ಟರ ಮಟ್ಟಿಗೆ ಇವರ ಸೇವೆ ವಿಸ್ತಾರವಾಗುತ್ತದೆ. 2007ರಲ್ಲಿ ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಹೀಗೆ ಹಂತಹಂತವಾಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಹೊಂದುತ್ತಲೇ ಅನನ್ಯ ಸೇವೆಯನ್ನು ಸಲ್ಲಿಸಿದರು. ಇವರ ಆಡಳಿತಾತ್ಮಕವಾದ ನಿಪುಣತೆ, ಸಾವಿರಾರು ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಪಲ್ಸ್ ಪೋಲಿಯೋ ಹಾಗೂ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮಗಳು ಹೀಗೆ ಸಂಸ್ಥೆಯ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿದ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ಗುರುತಿಸಿ 2012ರಲ್ಲಿ ಮಾನವೀಯ ಸೇವೆಗಾಗಿ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾದ ‘ರಾಷ್ಟ್ರಪತಿಗಳ ಚಿನ್ನದ ಪದಕ’ ನೀಡಿ ಗೌರವಿಸಲಾಗಿದೆ.

ಮುಂದುವರೆಯುವುದು,………….

ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ- ಪಿ ಸಾಯಿನಾಥ್

ಬಹುರೂಪಿ ಪ್ರಕಾಶನದ ‘ಕೊನೆಯ ಹೀರೋಗಳು’ ಬಿಡುಗಡೆ

ಕೃತಿ: ಕೊನೆಯ ಹೀರೋಗಳು
ಲೇ: ಪಿ ಸಾಯಿನಾಥ್
ಅನು: ಜಿ ಎನ್ ಮೋಹನ್
ಪ್ರ: ಬಹುರೂಪಿ, ಬೆಂಗಳೂರು
ಸಂಪರ್ಕ: 70191 82729

‘ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಖ್ಯಾತ ಪತ್ರಕರ್ತ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಪಿ ಸಾಯಿನಾಥ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಇಂದು ‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಪಿ ಸಾಯಿನಾಥ್ ಅವರ, ಜಿ ಎನ್ ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದ ತುರ್ತು ಅಗತ್ಯವಾಗಿದೆ. ಕೇಂದ್ರ ಸರಕಾರವು ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿಯಾಗಿದೆ. ಸಮಾಜವನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ರೈತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ರೈತರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಾಗಿರಲಿಲ್ಲ, ಅದು ಪರೋಕ್ಷವಾಗಿ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಳವಳಿಯಾಗಿತ್ತು.

ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಬಿಡುಗಡೆ ಸಿಕ್ಕಿಲ್ಲ ಎನ್ನುವುದು ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಅಳಲು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕೊನೆಗೊಂಡಾಗ, ಜಾತಿ ತಾರತಮ್ಯಗಳಿಲ್ಲದೆ ಎಲ್ಲರಿಗೂ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾದಾಗ ಸಂಪೂರ್ಣ ಬಿಡುಗಡೆ ಸಿಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಆದರೆ, ಬಿಡುಗಡೆ ಎಂಬುದರ ವ್ಯಾಪ್ತಿ ತುಂಬಾ ಹಿರಿದಾಗಿದೆ. ಇದನ್ನು ಪಡೆದುಕೊಳ್ಳಲು ನಾವೆಲ್ಲರೂ ಒಂದಾಗಬೇಕಿದೆ. ಈ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಹಲ್ಲೆಗಳನ್ನು ತಡೆಗಟ್ಟಬೇಕಾಗಿದೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ವಾಸ್ತವವಾಗಿ ಅವರೇ ಸ್ವಾತಂತ್ರ್ಯದ ನಿಜ ಹೋರಾಟಗಾರ್ತಿಯರಾದರೂ, ಯಾವುದೇ ಪಟ್ಟಿಗೂ ಸೇರ್ಪಡೆಗೊಳಿಸದೆ, ಅವರೆಲ್ಲರನ್ನೂ ಕಡೆಗಣಿಸಲಾಗಿದೆ. ಮನೆಗಳಲ್ಲಿ ಅಡುಗೆ ಮಾಡಿಕೊಂಡು, ಕುಟುಂಬವನ್ನು ನಿರ್ವಹಿಸುವ ಜತೆಗೆ ಕೃಷಿ ಕಾರ್ಯವನ್ನೂ ಮಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷವಾಗಿ ಮಹಿಳೆಯರು ಸಹಕರಿಸಿದ್ದಾರೆ. ಕೆಲವೊಮ್ಮೆ ಬಂದೂಕು ಹಿಡಿದುಕೊಂಡು, ಇಲ್ಲವೇ ಶಸ್ತ್ರಾಸ್ತ್ರಗಳ ಸಾಗಾಟದಂತ ಕಾರ್ಯಗಳಲ್ಲೂ ನೆರವಾಗಿದ್ದಾರೆ. ಆದರೆ, ಇವರು ಯಾರೂ ಗುಂಡು ಹಾರಿಸಿಲ್ಲ, ಜೈಲಿಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ಅಧಿಕಾರಶಾಹಿಯ ಕೆಂಪುಪಟ್ಟಿ ನಿಲುವು ಅವರು ಯಾರಿಗೂ ಸ್ವಾತಂತ್ರ್ಯ ಯೋಧರು ಎಂಬ ಸ್ಥಾನಮಾನ ಸಿಗದಂತೆ ಮಾಡಿತು ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ವಿದ್ವಾಂಸರಾದ ಪ್ರೊ ಪುರುಷೋತ್ತಮ ಬಿಳಿಮಲೆ ಅವರು 1990ರ ದಶಕದಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಮುಕ್ತ ನೀತಿ ಜಾರಿಗೊಳಿಸಿದರು. ಇದರ ಜತೆಗೆ ಲಾಲ್ ಕೃಷ್ಣ ಅಡ್ವಾಣಿಯವರು ನಡೆಸಿದ ರಥಯಾತ್ರೆ ನಡೆಸಿದರು. ಈ ಎರಡು ಘಟನೆಗಳು ಇಡೀ ದೇಶವನ್ನು ಆಳವಾಗಿ ಘಾಸಿಗೊಳಿಸಿವೆ. ಈ ಗಾಯಗಳು ಮಾಗಲು ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದರು.

1992ರಿಂದ 2017ರ ನಡುವೆ ರಾಷ್ಟ್ರದಾದ್ಯಂತ 17 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಗೆ ಬಡತನ ಹೆಚ್ಚಾಗುತ್ತಲೇ ಹೋಗುತ್ತಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಚಕಾರವೆತ್ತದೆ, ಈ ಯಾವುದೇ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಬಂಡವಾಳಶಾಹಿಗಳ ಪರವಾದ ನಿಲುವು ಪ್ರಕಟಪಡಿಸುತ್ತಾ, ತಮ್ಮ ಜವಾಬ್ದಾರಿ ಮರೆಯುತ್ತಿವೆ. ಇದು ಜಾಗತೀಕರಣ ಕರಾಳತೆಗೆ ಹಿಡಿದ ಕೈಗನ್ನಡಿ ಎಂದರು.

1992ರ ನಂತರದಲ್ಲಿ ರಾಷ್ಟ್ರದಲ್ಲಿ ಬೌದ್ಧಿಕ ಸ್ಥಿತ್ಯಂತರಗಳು ಉಂಟಾಗಿವೆ. ಅದುವರೆಗೂ ಸಮಾಜವಾದ, ಸಮಾನತೆ ಎಂದು ಸಂವಿಧಾನಿಕ ಪರಿಭಾಷೆಯಲ್ಲಿ ಮಾತನಾಡುತ್ತಿದ್ದವರು ಮತೀಯ ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಆದರೆ ಪಿ. ಸಾಯಿನಾಥ್ ಅವರ ಕೊನೆಯ ಹೀರೋಗಳು ಕೃತಿಯಲ್ಲಿರುವ 16 ಮಂದಿ ಸ್ವಾತಂತ್ರ್ಯ ಯೋಧರು ಎಂದಿಗೂ ಇಂಥ ಸ್ಥಿತ್ಯಂತರಕ್ಕೆ ಒಳಗಾಗಲಿಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ನಿಲುಗಳು, ತಾವು ರೂಢಿಸಿಕೊಂಡಿದ್ದ ಗಾಂಧಿವಾದದ ಅಂಶಗಳನ್ನು ಆಧರಿಸಿ ಜೀವನ ಸಾಗಿಸಿದರು ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಎಚ್ ಎನ್ ನಾಗಮೋಹನ ದಾಸ್ ಅವರು ಮಾತನಾಡಿ ದಾಖಲೆಗಳಲ್ಲಿ ಇಲ್ಲದಿರುವ ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ದನಿಯಾದದ್ದು ಸಾಯಿನಾಥ್ ಅವರ ವಿಶೇಷ. ಸ್ವಾತಂತ್ರ್ಯ ಹೋರಾಟದ ಈ ಕಾಲಾಳು ಯೋಧರಿಂದ ಸ್ಫೂರ್ತಿ ಪಡೆಯೋಣ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಅನುವಾದಕ ಜಿ ಎನ್ ಮೋಹನ್, ಸ್ವಾತಂತ್ರ್ಯ ಹೋರಾಟಗಾರ ಕುಟುಂಬದ ಸದಸ್ಯರು, ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷರಾದ ಎನ್ ಆರ್ ವಿಶುಕುಮಾರ್, ಸಂಸ್ಕೃತಿ ಚಿಂತಕರಾದ ಡಾ ವಿಜಯಮ್ಮ, ಬಹುರೂಪಿಯ ಸಂಸ್ಥಾಪಕರಾದ ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಿ ಸಾಯಿನಾಥ್ ಅವರ ‘ಕೊನೆಯ ಹೀರೋಗಳು’ ಕೃತಿಯನ್ನು ಹಿರಿಯ ವಿದ್ವಾಂಸರಾದ ಪ್ರೊ ಪುರುಷೋತ್ತಮ ಬಿಳಿಮಲೆ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀಜಾ ವಿ ಎನ್, ಡಾ ವಿಜಯಮ್ಮ, ಸ್ವಾತಂತ್ರ್ಯ ಹೋರಾಟದ ಕುಟುಂಬಸ್ಥರು, ಎಚ್ ಎನ್ ನಾಗಮೋಹನ ದಾಸ್, ಎನ್ ಆರ್ ವಿಶುಕುಮಾರ್, ಜಿ ಎನ್ ಮೋಹನ್ ಉಪಸ್ಥಿತರಿದ್ದರು.

ಶಿಕ್ಷಣದ ಅಂತಾರಾಷ್ಟ್ರೀಕರಣ

ಕಳೆದ ಸಂಚಿಕೆಯಿಂದ…….


2011 ರಲ್ಲಿ ಸ್ಥಾಪಿಸಲಾದ ಶೇಷಾದ್ರಿಪುರಂ ಅಕಾಡೆಮಿ ಫಾರ್ ಗ್ಲೋಬಲ್ ಎಕ್ಸಲೆನ್ಸ್ ಸಂಸ್ಥೆ -ಉತ್ಸಾಹಭರಿತ ವಿದ್ಯಾರ್ಥಿಗಳ ಸುಧಾರಿತ ಕಲಿಕೆಯನ್ನು ಉತ್ತೇಜಿಸುವ ಮೂಲಕ ಅಮೆರಿಕಾದ ಉತ್ತರ ಈಶಾನ್ಯ ರಾಜ್ಯ ವಿಶ್ವವಿದ್ಯಾಲಯ ಒಕ್ಲಹೋಮ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಆಫ್ ವಿಸ್ಕಾನ್ಸಿಸ್ ರಿವರ್ ಫಾಲ್ಸ್, ಇಂಗ್ಲಂಡಿನ ಯೂನಿವರ್ಸಿಟಿ ಆಫ್ ಚೆಸ್ಟರ್ ದಂತಹ ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕವನ್ನು ಏರ್ಪಡಿಸಿದೆ. ಉನ್ನತ ವ್ಯಾಸಂಗ ಪಡೆಯಲು ಅಮೆರಿಕ ಮತ್ತು ಯು ಕೆ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿರುವುದು ಕೃಷ್ಣರವರ ಶಿಕ್ಷಣ ಕ್ಷೇತ್ರದ ಆಸಕ್ತಿಗೆ, ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಕೃಷ್ಣ ಅವರ ಶ್ರಮ ಶ್ಲಾಘನೀಯವಾದದು.

150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ರಾಷ್ಟ್ರಗಳಿಂದ ಬಂದು ಶೇಷಾದ್ರಿಪುರಂ ಕಾಲೇಜುಗಳಲ್ಲಿ ಪದವಿಗಳನ್ನು ಪಡೆದಿರುವುದು ಮತ್ತು ಪದವಿಗಳನ್ನು ಪಡೆಯಲು ಪ್ರವೇಶ ಪಡೆದಿರುವುದನ್ನು ಗಮನಿಸಿದರೆ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಿಜಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಕೃಷ್ಣರವರ ಪಾತ್ರ ಬಹಳ ಮುಖ್ಯವಾದದ್ದು ಅನಿಸುತ್ತದೆ.

ಶಿಕ್ಷಣ ಕ್ಷೇತ್ರ ಇವರಿಗೆ ಬಹಳ ಅಪ್ಯಾಯಮಾನವಾದ ಒಂದು ಪವಿತ್ರ ಕ್ಷೇತ್ರ. ಪ್ರತಿಯೊಬ್ಬರಿಗೂ ವಿದ್ಯೆಯನ್ನು ಪಡೆಯುವ ಹಕ್ಕಿದೆ ಎಂದು ಪ್ರತಿಪಾದಿಸುವ ಇವರು ಇದನ್ನು ತಮ್ಮ ಜೀವನದ ಧ್ಯೇಯವಾಗಿರಿಸಿಕೊಂಡು ಶಾಲಾ-ಕಾಲೇಜುಗಳ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಅಮೂಲ್ಯ ಹಾಗೂ ಅನುಪಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿರುವ ಕಾರಣ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಖಾಸಗೀ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ ಒಂದು ಅಸ್ತಿತ್ವದಲ್ಲಿದೆ. ಅದಕ್ಕೆ ಡಾ.ಕೃಷ್ಣ ಅವರು ಕಾರ್ಯದರ್ಶಿಗಳು. ಎನ್. ಎಸ್. ಎಸ್. ಸೇವೆಗಾಗಿ ದೊರೆತ ರಾಷ್ಟ್ರ ಪ್ರಶಸ್ತಿಗಳ ಸಾಲಿನಲ್ಲಿ ಡಾ. ಕೃಷ್ಣರವರ ನೇತೃತ್ವದ ಶೇಷಾದ್ರಿಪುರಂ ಕಾಲೇಜಿಗೆ ಇಂದಿರಾಗಾಂಧಿ ರಾಷ್ಟ್ರ ಪ್ರಶಸ್ತಿ ದೊರೆತಿದೆ, ಶ್ರೇಷ್ಠ ಘಟಕ ರಾಜ್ಯಪ್ರಶಸ್ತಿಗೂ ಆಯ್ಕೆಯಾಗಿದೆ.

ಮುಂದುವರೆಯುವುದು………

ಹಾ.ಮ.ನಾಯಕ ಪ್ರಶಸ್ತಿಗೆ ನಿತ್ಯಾನಂದ ಶೆಟ್ಟಿ ಭಾಜನ

0

ಮಂಡ್ಯ: ಕನ್ನಡದ ಶ್ರೇಷ್ಠ ಗದ್ಯ ಲೇಖಕರು, ಪ್ರಖ್ಯಾತ ಭಾಷಾವಿಜ್ಞಾನಿಗಳು, ಜನಪ್ರಿಯ ಅಂಕಣಕಾರರು, ಜಾನಪದ ವಿದ್ವಾಂಸರು, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಎರಡನೇ ಕುಲಪತಿಗಳಾಗಿಯೂ ಕೆಲಸ ಮಾಡಿದವರು ಡಾ. ಹಾ ಮಾ ನಾಯಕರು.

ಶ್ರೀಯುತರ ಹೆಸರಿನಲ್ಲಿ ಕರ್ನಾಟಕ ಸಂಘ, ಮಂಡ್ಯದಲ್ಲಿ ಸ್ಥಾಪಿಸಲಾದ ಹಾಮಾನಾ ಪ್ರಶಸ್ತಿಯನ್ನು ಪ್ರತಿವರ್ಷ ಇಬ್ಬರು ವಿದ್ವಾಂಸರಿಗೆ ಕೊಡಲಾಗುತ್ತದೆ.

ಈ ಬಾರಿ ಈ ಪ್ರಶಸ್ತಿಯನ್ನು ಕನ್ನಡದ ಪ್ರಮುಖ ಜಾನಪದ ವಿದ್ವಾಂಸರು ಹಿರಿಯ ಲೇಖಕಿಯವರು ಮತ್ತು ಅನುವಾದಕರು ಆಗಿರುವ ಡಾ. ಕೆ ಆರ್ ಸಂಧ್ಯಾರೆಡ್ಡಿಯವರಿಗೆ ಮತ್ತು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಲೇಖಕರು ಮತ್ತು ಅಂಕಣ ಬರಹಗಾರರಾಗಿರುವ ಪ್ರೊ.‌ನಿತ್ಯಾನಂದ ಬಿ ಶೆಟ್ಟಿಯವರಿಗೆ ನೀಡಲಾಗುವುದು.

ಕರ್ನಾಟಕ ಸರ್ಕಾರದ ಮಾಜಿ ಶಿಕ್ಷಣ ಸಚಿವರು ಮತ್ತು ಐಐಎಮ್, ಬೆಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.‌ ಬಿ ಕೆ ಚಂದ್ರಶೇಖರ್ ಅವರು, ಕರಾಮುವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ. ರಾಮೇಗೌಡರವರು, ಉದ್ಯಮಿಗಳಾದ ವಿವೇಕ ಹೆಗ್ಗಡೆ, ಮತ್ತು ರಾಜಶೇಖರ ಪತಂಗೆ ಅವರ ಉಪಸ್ಥಿತಿಯಲ್ಲಿ ದಿನಾಂಕ 28/09/2023 ರಂದು ಮಂಡ್ಯದ ಕೆ ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಳಿಗ್ಗೆ 11.00 ಗಂಟೆಗೆ
ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು.

IAS ಅಧಿಕಾರಿ: ಶಾಸಕ ಕೃಷ್ಣಪ್ಪ ಕನಸು

ತುರುವೇಕೆರೆ:
ರೈತರ, ಬಡವರ, ದುರ್ಬಲರ ಮಕ್ಕಳು ಹೆಚ್ಚು ಶಿಕ್ಷಣವಂತರಾಗಿ; ಐಎಸ್ಎಸ್. ಕೆಎಎಸ್ ಅಧಿಕಾರಿಗಳಾಗಬೇಕೆಂಬ ಆಸೆ ನನ್ನದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.


ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಾಣಸಂದ್ರ ಗ್ರಾಮದ ವಿ.ಎಸ್.ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ, ಸಾಂಸ್ಕೃತಿಕ, ವಿಜ್ಞಾನ, ಭಾಷಾ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಉತ್ತಮ ಗುಣಮಟ್ಟದ ಶಿಕ್ಷಕರುಗಳಿದ್ದರೆ ಒಳ್ಳೆಯ ಶಿಕ್ಷಣ ಸಿಗುತ್ತದೆ. ಜೊತೆಗೆ ಶಾಲೆ ಮತ್ತು ಪೋಷಕರಿಗೂ ಗೌರವ ಬರುತ್ತದೆ. ಕ್ಷೇತ್ರದ ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರ ಕೊರತೆ ಕೇಳಿ ಬರುತ್ತಿದ್ದು ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕೆಗೆ ಹಿನ್ನೆಡೆಯಾಗುತ್ತಿದೆ ಇದು ನನ್ನ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾದದಲ್ಲ ಇಡೀ ರಾಜ್ಯದ ಸಮಸ್ಯೆಯಾಗಿದ್ದು ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು.


ಗ್ರಾಮೀಣ ಪ್ರದೇಶಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕು ಕಟ್ಟಿ ಓದಲು ಸಾದ್ಯವಿಲ್ಲ ಹಾಗಾಗಿ ತಾಲ್ಲೂಕಿನಲ್ಲಿ ಸು.8 ಸರ್ಕಾರಿ ಪ್ರೌಢ ಶಾಲೆಗಳನ್ನು ತಂದಿದ್ದೇನೆ. ಜೊತೆಗೆ ಕ್ಷೇತ್ರದ ಕೆಲ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪೀಜ್ ಕಟ್ಟಲು ಸಾದ್ಯವಾಗದಿದ್ದಾಗ ಅಂತಹ ಮಕ್ಕಳು ಶುಲ್ಕವನ್ನು ನಾನೇ ಕಟ್ಟಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದೆಂತೆ ನೋಡಿಕೊಂಡಿದೇನೆ.


ಬಿಕಾಂ, ಬಿ.ಎ, ಡಿಪ್ಲೋಮಾ ಇಂತಹ ವೃತ್ತಿಪರ ಕೋರ್ಸ್ ಗಳನ್ನು ಓದಲು ಹಳ್ಳಿಯ ಬಡ ಮಕ್ಕಳು ದೂರದ ತುಮಕೂಕೂರು ಹೋಗಲು ಕಷ್ಟಪಡುತ್ತಿದ್ದರು. ಅಂತಹ ಸಮಸ್ಯೆ ಕೂಡ ನಿವಾರಣೆ ಮಾಡಿದ್ದೇನೆ ಎಂದರು.


ಇದೇ ವೇಳೆ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಇದೇ ಶಾಲೆಯಲ್ಲಿ ಓದಿ ಡಾಕ್ಟರೇಟ್ ಪದವಿ ಪಡೆದ ಡಾ.ಕೆ.ಎಸ್. ವಿಶ್ವನಾಥ್, ಡಾ.ಅರುಣ್ ಕುಮಾರ್, ಡಾ.ಪಾಂಡುರಂಗಯ್ಯ ಎಚ್.ವಿ ಹಾಗು ಸ್ವರ್ಣ ಪದಕ ಪಡೆದ ವಿದ್ಯಾರ್ಥಿ ವಿನುತ.ಪಿ ಅವರುಗಳನ್ನು ಮೈಸೂರು ಪೇಟತೊಡಿಸಿ ಸನ್ಮಾನಿಸಲಾಯಿತು.


ಸಮಾರಂಭದಲ್ಲಿ ಬಿಇಒ ಸೋಮಶೇಖರ್, ಇಸಿಒ ಸಿದ್ದಪ್ಪ, ಅಕ್ಷರದಾಸೋಹ ನಿರ್ದೇಶಕ ಜೆ.ಆರ್.ರವಿಕುಮಾರ್, ಸಂಘದ ಅಧ್ಯಕ್ಷರಾದ ರಾಗಿರಂಗೇಗೌಡ, ಕಾರ್ಯಪಾಲ ನಿದರ್ೇಶಕ ಸತ್ಯನಾರಾಯಣ್, ಉಪಾಧ್ಯಕ್ಷ ಬಿ.ಆರ್.ರಂಗೇಗೌಡ, ನಿರ್ದೇಶಕ ಎಚ್.ಪಾಂಡುರಂಗೇಗೌಡ, ಪ್ರಾಂಶುಪಾಲರಾದ ಎಚ್.ಎನ್.ಸುರೇಶ್, ಮುಖ್ಯ ಶಿಕ್ಷಕಿ ತಿಮ್ಮವ್ವ, ಶಿಕ್ಷಕರುಗಳಾದ ಎಚ್.ಆರ್.ಚಂದ್ರಶೇಖ್, ಬಿ.ಎಚ್.ಶ್ರೀರಂಗನಾಥ್, ರವಿಗುಳೇದ್, ಉಪನ್ಯಾಸಕರಾದ ಭರತ್.ಟಿ.ಎ, ಕೆ.ಸಿ.ಸರ್ವೇಶ್ ಇದ್ದರು.

ದಕ್ಷ ಆಡಳಿತಗಾರ: ಡಾ ವೂಡೇ ಪಿ ಕೃಷ್ಣ.

ಕಳೆದ ಸಂಚಿಕೆಯಿಂದ…


ಡಾ ಕೃಷ್ಣ ಅವರದು ಆಕರ್ಷಕ ವ್ಯಕ್ತಿತ್ವ, ಮಟ್ಟಸವಾದ ನಿಲುವು, ತಕ್ಷಣ ಗಮನ ಸೆಳೆಯುವ ಬಟ್ಟಲು ಕಣ್ಣುಗಳು, ಗಂಭೀರ ಮುಖ, ಮಂದಸ್ಮಿತವಾದ ಮೃದು ಮಾತು ಸೌಜನ್ಯವೇ ರೂಪ ಪಡೆದಂತೆ, ಪ್ರದರ್ಶನ ಪ್ರವೃತ್ತಿಗೆ ವಿರುದ್ಧವಾದ ವ್ಯಕ್ತಿತ್ವ. ಮಾತನಾಡಿದಂತೆ ನಡೆದುಕೊಳ್ಳುವುದು ಇವರ ಮೊದಲ ಬದ್ಧತೆ.

ಒಬ್ಬ ಆಡಳಿತಗಾರನಾಗಿ ಕೃಷ್ಣ ಅವರ ಯಶಸ್ಸು ಅಡಗಿರುವುದು ಅವರು ತಳೆಯುವ ಖಚಿತ ನಿರ್ಧಾರಗಳಲ್ಲಿ. ಅವರು ಕಾರ್ಯನಿರ್ವಹಿಸುವ ಶೈಲಿಯನ್ನು ಗಮನಿಸಿದರೆ ಇದು ವೇದ್ಯ. ಯಾವುದೇ ವಿಷಯಕ್ಕಾಗಲಿ ಇವರು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ತಕ್ಷಣವೇ ನಿರ್ಧಾರ ಪ್ರಕಟಿಸುತ್ತಾರೆ. ತಮ್ಮ ಸರಳ ಹಾಗೂ ನಿಖರ ಮಾತುಗಳಿಂದ ಕೆಲಸ ಮುಗಿಸಿ ಮತ್ತೊಂದು ಕೆಲಸಕ್ಕೆ ಹಾಜರಾಗುತ್ತಾರೆ. ಹಲವಾರು ಬಾರಿ ಒಂದೇ ತಾಸಿನಲ್ಲಿ ತಮ್ಮ ಕಚೇರಿಗೆ ಬರುವ 20- 25 ಜನರನ್ನು ಭೇಟಿ ಮಾಡಿ, ಎಲ್ಲರ ಕೆಲಸವನ್ನು ಮುಗಿಸುತ್ತಾರೆ. ಕೃಷ್ಣ ರವರು ಒಳ್ಳೆಯ ಆಡಳಿತಗಾರರು ಮುತ್ಸದ್ಧಿ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯನ್ನು ಇವರು ಕಟ್ಟುತ್ತಿರುವ ರೀತಿ ಇದಕ್ಕೆ ಉತ್ತಮ ನಿದರ್ಶನ.

ಸಂಶಯದ ಸಂದರ್ಭದಲ್ಲಿ ಅದನ್ನು ನಿವಾರಿಸುವ, ವಿವಾದದ ಸಂದರ್ಭದಲ್ಲಿ ವಿವೇಕದಿಂದ ವರ್ತಿಸುವ ,ಉದ್ವೇಗದ ಸಂದರ್ಭದಲ್ಲಿ ಸಂಯಮ ವಹಿಸುವ ಲೋಕಪ್ರಜ್ಞೆ,‌ಆಡಳಿತ ನಡೆಸುವವರಿಗೆ ಒಂದು ಆದರ್ಶ ಗುಣ. ವ್ಯಕ್ತಿ ದೊಡ್ಡವರಿರಲಿ, ಚಿಕ್ಕವರಿರಲಿ ಭೇಟಿ ಸಮಯವನ್ನು ನೀಡಿದರೆ ಸಮಯ ಪಾಲನೆಗೆ ಹೆಚ್ಚು ಗಮನ ಕೊಡುತ್ತಾರೆ ಒಂದು ವೇಳೆ ಭೇಟಿ ಸಾಧ್ಯವಿಲ್ಲದಿದ್ದರೆ ಮುಂಚಿತವಾಗಿ ದೂರವಾಣಿ ಕರೆ ಮಾಡಿ ಅವರಿಗೆ ತಿಳಿಸುತ್ತಾರೆ. ಇಂದು ಹೆಚ್ಚು ಜನನಾಯಕರಲ್ಲಿ ಈ ಲೋಕ ಪ್ರಜ್ಞೆ ಕಾಣಿಸುವುದಿಲ್ಲ. ಒಬ್ಬ ಗಾಂಧಿವಾದಿಗೆ ಮಾತ್ರ ಈ ರೀತಿಯ ಕಾರ್ಯವೈಖರಿ ಸಾಧ್ಯ. ಇತರರಿಗೂ ಇದು ಅನುಕರಣೀಯ.

ಪ್ರಭಾವ ಬೀರಿ ಕೆಲಸ ಕೇಳಲು ಬರುವವರನ್ನು ಮುಲಾಜಿಲ್ಲದೆ ಸಾಗ ಹಾಕುವ ಸ್ವಭಾವ ಇವರದು. ಬೇರೆಯವರನ್ನು ಮಾತನಾಡಿಸುವಾಗ ಅವರನ್ನು ನೋಯಿಸುವುದಿಲ್ಲ ಅಧಿಕಾರದಲ್ಲಿದ್ದೇನೆ ಎಂಬ ದರ್ಪ ಎಂದು ಅವರನ್ನು ಆವರಿಸಿಲ್ಲ. ಸಮಸ್ಯೆಯನ್ನು ಹೊತ್ತು ಬಂದವರಿಗೆ ಇವರೆಂದು ಬಗೆಹರಿಸದೆ ಸಲಹೆಯನ್ನು ಕೊಡದೆ ಕಳುಹಿಸಿಲ್ಲ. ಸರಳತೆಯ ಶುಭ್ರವಾದ ಖಾದಿ ವಸ್ತ್ರವನ್ನು ಧರಿಸುವ ಕೃಷ್ಣ ರವರ ಮನಸ್ಸು ಸದಾ ಸ್ವಚ್ಚ ತಿಳಿಗೊಳದಂತೆ ಇರುತ್ತದೆ. ಅದರಂತೆ ನಡೆದುಕೊಳ್ಳುತ್ತಾರೆ ಕೂಡಾ.

ಹಲವಾರು ಬಾರಿ ಚರ್ಚೆಯ ಬಿಸಿಯನ್ನು ಕಡಿಮೆಯಾಗಿಸಿ, ಅದಕ್ಕೆ ಸಾತ್ವಿಕ ರೂಪ ನೀಡಿ ಮುಂದುವರಿಸಿ, ಪರಿಹಾರವೆಂಬಂತೆ ಬೇರೊಂದು ಸೂತ್ರವನ್ನು ಮಂಡಿಸುತ್ತಾ, ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಇದನ್ನು ಪರಿಹರಿಸುತ್ತಾರೆ. ಇದು ಇವರ ನಾಯಕತ್ವದ ಅಪರೂಪ ವ್ಯಕ್ತಿ ವಿಶೇಷ ಗುಣ.

ಆಡಳಿತ ಸಂದರ್ಭದಲ್ಲಿ ಸದಾ ಶುಭ್ರವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಗಾಂಧೀಜಿಯವರ ಆದರ್ಶಗಳು, ತಂದೆಯವರ ಗುರುತನದ ಮಾತುಗಳಲ್ಲಿ ನೈತಿಕ ಶಿಸ್ತು, ಸಾರ್ವಜನಿಕ ಕೆಲಸಗಳಲ್ಲಿ ವಹಿಸುವ ಆಸ್ಥೆ, ರಾಮಕೃಷ್ಣ ಆಶ್ರಮದ ಮುನಿವರ್ಯರ ಸಾತ್ವಿಕ ಗುಣ ಅವರಲ್ಲಿ ಮೇಳವಿಸಿವೆ.

ಮುಂದುವರೆಯುವುದು……

ಎಲ್ಲರೊಳಗೊಂದಾಗುವ ಸರಳ ಸಜ್ಜನಿಕೆಯ ವ್ಯಕ್ತಿ ಕೃಷ್ಣಾ

ಕಳೆದ ಸಂಚಿಕೆಯಿಂದ…….

ಇವರ ದೂರದರ್ಶಿತ್ವ ,ಸ್ನೇಹಶೀಲ ವ್ಯವಹಾರ, ಮಂದಹಾಸ ಸರಳತೆ , ಸಜ್ಜನಿಕೆ, ಎಲ್ಲರೊಳಗೊಂದಾಗಿ ಬೆರೆಯುವ ವ್ಯಕ್ತಿತ್ವದ ಕೃಷ್ಣ ಅವರ ಶೈಕ್ಷಣಿಕ ಸೇವೆ ಅನನ್ಯವಾದದ್ದು. ಕೃಷ್ಣರವರು ಇಂಜಿನಿಯರಿಂಗ್, ಕಾನೂನು ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದಿರುವುದು ಇವರ ಶಿಕ್ಷಣ ಕ್ಷೇತ್ರದ ಸೇವೆಗೆ ಪೂರಕವಾಗಿದೆ.

ಈ ಸಂಸ್ಥೆ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣದ ವಲಯಗಳಿಗೆ ವಿಸ್ತರಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟವನ್ನು ತಲುಪಿದ್ದಾರೆ ಅದಕ್ಕೆ ಕಾರಣ ಡಾ. ಕೃಷ್ಣರವರು.

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ “ಭಾರತೀಯ ವಿಶ್ವ ಶಾಂತಿ ಶಿಕ್ಷಣ ಪ್ರತಿಷ್ಠಾನ”ದ ಅಧ್ಯಕ್ಷರಾಗಿ, ಸದಾಶಿವನಗರದ ಶಿಕ್ಷಣ ಸಂಸ್ಥೆಗಳ ಆಡಳಿತ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಖಾಸಗಿ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳ ಸಂಘದ ಕಾರ್ಯದರ್ಶಿಯಾಗಿ, ಆಚಾರ್ಯ ವಿನೋಬಾ ಭಾವೆಯವರಿಂದ ಸ್ಥಾಪಿಸಲಾದ ವಿಶ್ವ ನೀಡಂ ದತ್ತಿಯ ಟ್ರಸ್ಟಿಯಾಗಿ ಅಪ್ಪಾವು ಪಿಳ್ಳೈ ಶಿಕ್ಷಣ ಸಂಸ್ಥೆಗಳ ದತ್ತಿ ಸದಸ್ಯರಾಗಿ, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪಠ್ಯ ಪ್ರವಚನ ಹಾಗೂ ಪ್ರಗತಿ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ವಿಜ್ಞಾನ ಮತ್ತು ತಾಂತ್ರಿಕ ಕೇಂದ್ರದಲ್ಲಿ ಆಡಳಿತ ಸದಸ್ಯರಾಗಿ ಗುರುತರವಾದ ಜವಾಬ್ದಾರಿಗಳನ್ನು ನಿಭಾಯಿಸಿ ಸಂಸ್ಥೆಗಳನ್ನು ಬೆಳೆಸಿದ್ದಾರೆ.

ಯೂತ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾಗಿ ಇವರು ಯುವಕರಲ್ಲಿ ಸಾಹಸೀ ಮನೋಭಾವದ ಚೈತನ್ಯವನ್ನು ತುಂಬುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಸಮಾವೇಶಗಳನ್ನು ಆಯೋಜಿಸಿ ಯುವಕರಲ್ಲಿ ಜ್ಞಾನ – ವಿಜ್ಞಾನಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆ ಕಳೆದುಕೊಂಡಿದ್ದೇವೆ: ಕೆ ರಾಮಯ್ಯ ವಿಷಾದ

‘ಬಹುರೂಪಿ’ಯ 10 ಮಕ್ಕಳ ಕೃತಿಗಳ ಬಿಡುಗಡೆ

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅನ್ಯಾಯ ಮತ್ತು ತಾರತಮ್ಯಗಳು ಅಡಕವಾಗಿವೆ. ಮಕ್ಕಳಿಗೆ ಶಿಕ್ಷಣ ನೀಡುವ ನೈತಿಕತೆಯೇ ನಮಗೆ ಇಲ್ಲವಾಗಿದೆ. ಹೀಗಿರುವಾಗ ಮಕ್ಕಳಿಗೆ ಯಾವ ರೀತಿಯ ನೀತಿ ಶಿಕ್ಷಣ ನೀಡಲು ಸಾಧ್ಯವಿದೆ. ವಾಸ್ತವದಲ್ಲಿ ಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆಯನ್ನೇ ನಾವು ಕಳೆದುಕೊಂಡಿದ್ದೇವೆ ಎಂದು ಹಿರಿಯ ಲೇಖಕ, ‘ಆದಿಮ’ದ ಸಂಸ್ಥಾಪಕರಾದ ಕೋಟಗಾನಹಳ್ಳಿ ರಾಮಯ್ಯ ವಿಷಾದಿಸಿದರು.

‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಇಂದು ಪರಾಗ್, ಪರಿ, ಕರಡಿ ಟೇಲ್ಸ್, ಕಲ್ಪವೃಕ್ಷ, ಏಕತಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10 ಮಕ್ಕಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ ಪಠ್ಯ ಪುಸ್ತಕಗಳು, ಕಥೆ ಪುಸ್ತಕಗಳ ಮೂಲಕ ಬಹು ಹಿಂದಿನಿಂದಲೂ ಮೈಕ್ರೋ ಫ್ಯಾಸಿಸಂ ಅನ್ನು ಬಿತ್ತಲಾಗುತ್ತಿದೆ. ಆದನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ

ಮಕ್ಕಳು ಏನು ಓದಬೇಕು, ಏನನ್ನು ಓದಬಾರದು ಎಂಬುದನ್ನು ತೀರ್ಮಾನಿಸುವವರು ಯಾರು? ಇಂಥ ತೀರ್ಮಾನ ಕೈಗೊಳ್ಳಲು ನಮಗೆ ಅರ್ಹತೆ ಇದೆಯೇ? ಈ ಬಗ್ಗೆ ಮಕ್ಕಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದೆಯೇ ಎಂಬ ಸಂಕೀರ್ಣ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಅವರು ಮಾತನಾಡಿ ಮಕ್ಕಳ ಎಳೆ ಮನಸ್ಸಿನಲ್ಲಿ ಜಾತಿ, ಬಡವ, ಶ್ರೀಮಂತ ಇತ್ಯಾದಿ ಭೇದಭಾವಗಳು ಯಾವುದೂ ಇರುವುದಿಲ್ಲ. ಆದರೆ, ಮಕ್ಕಳನ್ನು ಬೆಳೆಸುವ ಹಾದಿಯಲ್ಲಿ ಈ ರೀತಿಯ ತಾರತಮ್ಯ ಮೂಡಿಸುತ್ತಿದ್ದೇವೆ. ಅವರ ಮನಸ್ಸನ್ನು ಸಂಕೀರ್ಣಗೊಳಿಸುವ ಬದಲು ಹಿಗ್ಗಿಸಲು ಪ್ರಯತ್ನಿಸಿದಾಗ ಉತ್ತಮ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯಲ್ಲಿ ಮಕ್ಕಳ ಪುಸ್ತಕಗಳು ತುಂಬಾ ಕಡಿಮೆ ಇವೆ. ಈ ವಿಷಯದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಹಾಗಾಗಿ, ಬರವಣಿಗೆ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುವ ಆಸೆ ಇರುವುದಾಗಿ ಹೇಳಿದರು.

ಮಕ್ಕಳ ಪುಸ್ತಕಗಳನ್ನು ಹೇಗೋ ರೂಪಿಸಬಹುದು. ಆದರೆ, ಅವುಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಅಡೆತಡೆಗಳು ಸೃಷ್ಟಿಯಾಗಿವೆ. ಒಂದೆಡೆ ಶಾಲೆಗಳೇ ಕಣ್ಮರೆಯಾಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಮಕ್ಕಳೇ ಕಣ್ಮರೆಯಾಗುತ್ತಿದ್ದಾರೆ ಎಂದು ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ ಅವರು ಅಭಿಪ್ರಾಯಪಟ್ಟರು.

ಮಕ್ಕಳ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರ ಸೇರಿದಂತೆ ಸರ್ಕಾರದ ಸಂಸ್ಥೆಗಳು ಕೆಲಸ ಮಾಡಬೇಕಿತ್ತು. ಆದರೆ, ಈ ವಿಷಯದಲ್ಲಿ ಅವೆಲ್ಲವೂ ವಿಫಲವಾಗಿವೆ ಎಂದರು

ಬಹುರೂಪಿ ಸಂಸ್ಥೆಯು ಹೊರತಂದಿರುವ 10 ಪುಸ್ತಕಗಳು ಮಕ್ಕಳಿಗೆ ವಾಸ್ತವತೆಯ ಕಥೆಯನ್ನು ಹೇಳುತ್ತಲೇ ಅವರಿಗೆ ಹೊಸ ಜಗತ್ತಿಗೆ ಪ್ರವೇಶ ಕಲ್ಪಿಸುತ್ತದೆ. ಸಾಮಾಜಿಕ ವರದಿಗಳಿಗೆ ಕಲ್ಪನೆ ಬೆರೆಸಿ ಕಥೆಗಳ ರೂಪವನ್ನು ನೀಡಲಾಗಿದೆ. ಇದೊಂದು ಮಹತ್ವದ ಕೆಲಸ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಾಹಿತ್ಯಕ್ಕೆ ಸಮಕಾಲೀನ ಸ್ಪರ್ಶ: ಅನುವಾದದ ಮಹತ್ವ ಕುರಿತು ಸಂವಾದ ಜರುಗಿತು. ಮಕ್ಕಳ ಹಕ್ಕುಗಳ ಟ್ರಸ್ಟ್ ನ ವಾಸುದೇವ ಶರ್ಮಾ, ನಾಗೇಶ್ ಹೆಗಡೆ, ಕಲಾವಿದ ಗುಜ್ಜಾರ್, ಶಿಕ್ಷಣ ತಜ್ಞರಾದ ವೀಣಾ ಮೋಹನ್, ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ‘ಪರಿ’ಯ ಪ್ರೀತಿ ಡೇವಿಡ್ ಅವರು ಸಂವಾದದಲ್ಲಿದ್ದರು

ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಪರಾಗ್ ನ ಲಕ್ಷ್ಮಿ ಕರುಣಾಕರನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಹುರೂಪಿ ಪ್ರಕಾಶನ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ 10 ಕೃತಿಗಳನ್ನು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರು ಬಿಡುಗಡೆ ಮಾಡಿದರು. ಹಿರಿಯ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಗಾಯಕಿ ಎಂ ಡಿ ಪಲ್ಲವಿ, ಸಾಹಿತಿ ವಿ ಗಾಯತ್ರಿ, ಪರಾಗ್ ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

ಬಿಡುಗಡೆಯಾದ ಕೃತಿಗಳು:

ಈ ಪಿಕ್ ಯಾರ ಕ್ಲಿಕ್ ಬೆಲೆ: ರೂ 160
ಸೀರೆ ಉಡುವ ರಾಕ್ ಸ್ಟಾರ್ ಬೆಲೆ: ರೂ 160
ಲೇಡಿ ಟಾರ್ಜಾನ್ ಬೆಲೆ: ರೂ 120
ಮರ ಏರಲಾಗದ ಗುಮ್ಮ ಬೆಲೆ: ರೂ 160
ಸುಂದರಬಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ ಬೆಲೆ: ರೂ 140
ಮರಳಿ ಮನೆಗೆ ಬೆಲೆ: ರೂ 125
ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ ಬೆಲೆ: ರೂ 125
ಸ್ನೇಹಗ್ರಾಮದ ಸಂಸತ್ತು ಬೆಲೆ: ರೂ 150
ನಂದಿನಿ ಎಂಬ ಜಾಣೆ ಬೆಲೆ: ರೂ 150
ಗೆದ್ದೇ ಬಿಟ್ಟೆ! ಬೆಲೆ: ರೂ 125

ಸಂಪರ್ಕ: 70191 82729

.

ಪರಿಶಿಷ್ಟ ಪಂಗಡಕ್ಕೆ ಗೊಲ್ಲರು: ನಟ ಚೇತನ್ ಅಹಿಂಸಾ ಆಗ್ರಹ

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೊಡಬೇಕು ಎಂದು ನಟ ಚೇತನ್ ಒತ್ತಾಯಿಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರು ಸೇರಿದಂತೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಳೆದ ಏಳು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈ ಸಮುದಾಯಗಳು ಅಸ್ಪೃಶ್ಯರಾಗಿಲ್ಲದೇ ಇದ್ದರೂ ಯಾರ ಕಣ್ಣಿಗೆ ಬೀಳದಂತೆ ಜೀವನ ನಡೆಸುತ್ತಿದ್ದಾರೆ ಎಂದರು.

ಬುಡ್ಗ ಜಂಗಮ, ಸುಡುಗಾಡು ಸಿದ್ದರು, ಕೊರಮ, ಕೊರಚ, ಹಕ್ಕಿಪಿಕ್ಕಿ ಹಾಗೂ ಕಾಡುಗೊಲ್ಲ ಸಮುದಾಯಗಳು ವಿಶಿಷ್ಟ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯಗಳಿಗೆ ವಿಶೇಷ ಪರಂಪರೆ ಇದೆ. ವಿಶೇಷ ಭಾಷೆ ಇದೆ. ವಿಶೇಷ ಸಂಸ್ಕೃತಿ ಇದೆ. ಇಂತಹ ಸಮುದಾಯಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.

ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಕುಣಿಗಲ್ಲು ಮತ್ತು ಪಾವಗಡ ಸೇರಿದಂತೆ ಬೇರೆಬೇರೆ ಕಡೆಗಳಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯಗಳ ಪರ ಹೋರಾಟ ಮಾಡಿ ಪ್ರತ್ಯೇಕ ಅಸ್ಮಿತೆಯನ್ನು ತಂದುಕೊಟ್ಟಿದ್ದೇವೆ ಎಂದು ತಿಳಿಸಿದರು.

ಕಾಡುಗೊಲ್ಲ ಸಮುದಾಯ ಒಂದು ಬುಡಕಟ್ಟು ಸಮುದಾಯ, ಬುಡಕಟ್ಟು ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಇವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಮುಖಂಡ ಕೆ.ಜಿ.ನಾಗಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯ ಸಾಮಾಜಿಕ ಪ್ರತ್ಯೇಕತೆಯನ್ನು ಬಯಸಿ ನಾಗರಿಕ ಪ್ರಪಂಚದಿಂದ ದೂರ ಇದೆ. ಹೀಗಾಗಿ ಕಾಡುಗೊಲ್ಲರನ್ನು ಅಲೆಮಾರಿ ಪಟ್ಟಿಗೆ ಸೇರಿಸಬೇಕು. ಒಬಿಸಿ ಅಲೆಮಾರಿ ಪಟ್ಟಿಯಲ್ಲಿ 46 ಜಾತಿಗಳಿವೆ. 47ನೇ ಜಾತಿಯಾಗಿ ಕಾಡುಗೊಲ್ಲ ಸಮುದಾಯವನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯದಿಂದ ಪ್ರಸ್ತಾವನೆ ಕಳಿಸಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಕಾಡುಗೊಲ್ಲ ಸಮುದಾಯ ನೂರಕ್ಕೆ ನೂರರಷ್ಟು ಬುಡಕಟ್ಟು ಸಮುದಾಯಗಳ ಲಕ್ಷಣಗಳನ್ನು ಹೊಂದಿದ್ದರೂ ಎಸ್.ಟಿ. ಪಟ್ಟಿಗೆ ಸೇರಬೇಕು. ಈಗ ಕಾಡುಗೊಲ್ಲರಲ್ಲಿ ನಡೆಯುತ್ತಿರುವ ಆಚರಣೆಗಳನ್ನು ಹಂತಹಂತವಾಗಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಒಡೆದ ಮನೆ: ದಲಿತ ಸಂಘಟನೆಗಳು ಒಂದಾಗಲಿ

ತುರುವೇಕೆರೆ:

ಕೆಲ ವೈಯಕ್ತಿ ಹಿತಾಸಕ್ತಿಗೆ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಒಡೆದ ಮನೆಯಂತಾಗಿದ್ದು ದಲಿತ ಸಮುದಾಯದ ಸಮಗ್ರ ಏಳಿಗೆಗಾಗಿ ವಿಭಿಜಿತ ದಸಂಸಗಳು ಸೈದ್ಧಾಂತಿಕ ಮತ್ತು ತಾತ್ವಿಕವಾಗಿ ಒಗ್ಗೂಡುವ ಅನಿವಾರ್ಯತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧಕ್ಷ ವಿ.ಟಿ.ವೆಂಕಟರಾಮ್ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ದಸಂಸ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭ ಹಾಗು ದಸಂಸ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ತುರುವೇಕೆರೆ ದಸಂಸ ಹೆಚ್ಚು ಕ್ರಿಯಾಶೀಲ ಹೋರಾಟಗಳನ್ನು ಹಮ್ಮಿಕೊಂಡು ದಲಿತ ಸಮುದಾಯದ ರಕ್ಷಣೆಗೆ ಮುಂದಾಗಿದೆ. ನಮ್ಮ ಕಾರ್ಯಕ್ರಮಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ ದಲಿತ ಸಮುದಾಯವನ್ನು ಆಥರ್ಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹೇಗೆ ಮುಂದೆ ತರಬೇಕು ಎಂಬುದರ ಬಗ್ಗೆ ವಾಸ್ತವೀಕ ನೆಲೆಯಲ್ಲಿ ಚಚರ್ೆ, ಸಂವಾದಗಳನ್ನು ನಡೆಸಬೇಕಿದೆ ಅದಕ್ಕಾಗಿ ಹೆಚ್ಚು ಹೊಸ ತಲೆಮಾರಿನ ದಲಿತ ಯುವಕರನ್ನು ಸಂಘಟನೆಗೆ ತಾತ್ವಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

ದಲಿತರು ಸಾಮಾಜಿಕ ಮತ್ತು ರಾಜಕೀಯ ಸ್ಥಾನ ಮಾನಗಳನ್ನು ಗಟ್ಟಿಗೊಳಿಸಿಕೊಳ್ಳಲು ಆಥರ್ಿಕ ಸಂಪನ್ಮೂಲ ವಧರ್ಿಸಿಕೊಳ್ಳುವ ಅಗತ್ಯವಿದ್ದು ಅದಕ್ಕಾಗಿ ಭೂರಹಿತ ದಲಿತರಿಗೆ ಸಕರ್ಾರ ಭೂಮಿ ನೀಡುವ ಕುರಿತ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತರು ಹೆಚ್ಚು ಹೆಚ್ಚು ಶಿಕ್ಷಣ ವಂತರಾಗಬೇಕು. ಆಮೂಲಕ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿ ಸಮುದಾಯದ ಯುವಕರಿಗೆ ದಾರಿ ದೀಪವಾಗ ಬೇಕು ಎಂದರು.

ಬೆನೆಕಿನಕೆರೆ ನಿವೃತ್ತ ಶಿಕ್ಷಕರಾದ ಬೋರಪ್ಪ, ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ನರಸಿಂರಾಜು ಹಾಗು ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯ ಎಚ್.ವಿ ಅವರುಗಳನ್ನು ದಸಂಸ ವತಿಯಿಂದ ಮೈಸೂರು ಪೇಟ ತೊಡಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡಾ.ಚಂದ್ರಯ್ಯ, ರಾಮಚಂದಯ್ಯ್ರ, ಶಿವರಾಜ್, ಗುರುದತ್, ಮಲ್ಲೂರ್ ತಿಮ್ಮೇಶ್, ಗಾಂಧಿಗ್ರಾಮ ಮೂರ್ತಿ, ಧನಂಜಯ ಹುಳಿಸಂದ್ರ, ಪುಟ್ಟರಾಜು, ತಮ್ಮಯ್ಯ, ರಾಘು, ದಯಾನಂದ್, ಗೋವಿಂದರಾಜು, ಮಧು, ಮಂಜು, ಕೃಷ್ಣಪ್ಪ, ಮೇಲನಹಳ್ಳಿ ಮಂಜು, ಗಂಗಣ್ಣ, ರಾಮು, ಲಕ್ಷ್ಮೀಷ, ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.