ಮಂಡ್ಯ: ಕನ್ನಡದ ಶ್ರೇಷ್ಠ ಗದ್ಯ ಲೇಖಕರು, ಪ್ರಖ್ಯಾತ ಭಾಷಾವಿಜ್ಞಾನಿಗಳು, ಜನಪ್ರಿಯ ಅಂಕಣಕಾರರು, ಜಾನಪದ ವಿದ್ವಾಂಸರು, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಎರಡನೇ ಕುಲಪತಿಗಳಾಗಿಯೂ ಕೆಲಸ ಮಾಡಿದವರು ಡಾ. ಹಾ ಮಾ ನಾಯಕರು.
ಶ್ರೀಯುತರ ಹೆಸರಿನಲ್ಲಿ ಕರ್ನಾಟಕ ಸಂಘ, ಮಂಡ್ಯದಲ್ಲಿ ಸ್ಥಾಪಿಸಲಾದ ಹಾಮಾನಾ ಪ್ರಶಸ್ತಿಯನ್ನು ಪ್ರತಿವರ್ಷ ಇಬ್ಬರು ವಿದ್ವಾಂಸರಿಗೆ ಕೊಡಲಾಗುತ್ತದೆ.
ಈ ಬಾರಿ ಈ ಪ್ರಶಸ್ತಿಯನ್ನು ಕನ್ನಡದ ಪ್ರಮುಖ ಜಾನಪದ ವಿದ್ವಾಂಸರು ಹಿರಿಯ ಲೇಖಕಿಯವರು ಮತ್ತು ಅನುವಾದಕರು ಆಗಿರುವ ಡಾ. ಕೆ ಆರ್ ಸಂಧ್ಯಾರೆಡ್ಡಿಯವರಿಗೆ ಮತ್ತು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಲೇಖಕರು ಮತ್ತು ಅಂಕಣ ಬರಹಗಾರರಾಗಿರುವ ಪ್ರೊ.ನಿತ್ಯಾನಂದ ಬಿ ಶೆಟ್ಟಿಯವರಿಗೆ ನೀಡಲಾಗುವುದು.
ಕರ್ನಾಟಕ ಸರ್ಕಾರದ ಮಾಜಿ ಶಿಕ್ಷಣ ಸಚಿವರು ಮತ್ತು ಐಐಎಮ್, ಬೆಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಬಿ ಕೆ ಚಂದ್ರಶೇಖರ್ ಅವರು, ಕರಾಮುವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ. ರಾಮೇಗೌಡರವರು, ಉದ್ಯಮಿಗಳಾದ ವಿವೇಕ ಹೆಗ್ಗಡೆ, ಮತ್ತು ರಾಜಶೇಖರ ಪತಂಗೆ ಅವರ ಉಪಸ್ಥಿತಿಯಲ್ಲಿ ದಿನಾಂಕ 28/09/2023 ರಂದು ಮಂಡ್ಯದ ಕೆ ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಳಿಗ್ಗೆ 11.00 ಗಂಟೆಗೆ
ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು.