Thursday, March 12, 2026
Google search engine
Home Blog Page 31

ಪರಿಶಿಷ್ಟ ಪಂಗಡಕ್ಕೆ ಗೊಲ್ಲರು: ನಟ ಚೇತನ್ ಅಹಿಂಸಾ ಆಗ್ರಹ

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಪಟ್ಟಿಗೆ ಸೇರಿಸಬೇಕು ಮತ್ತು ಅಲೆಮಾರಿ ಬುಡಕಟ್ಟುಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೊಡಬೇಕು ಎಂದು ನಟ ಚೇತನ್ ಒತ್ತಾಯಿಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರು ಸೇರಿದಂತೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಳೆದ ಏಳು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈ ಸಮುದಾಯಗಳು ಅಸ್ಪೃಶ್ಯರಾಗಿಲ್ಲದೇ ಇದ್ದರೂ ಯಾರ ಕಣ್ಣಿಗೆ ಬೀಳದಂತೆ ಜೀವನ ನಡೆಸುತ್ತಿದ್ದಾರೆ ಎಂದರು.

ಬುಡ್ಗ ಜಂಗಮ, ಸುಡುಗಾಡು ಸಿದ್ದರು, ಕೊರಮ, ಕೊರಚ, ಹಕ್ಕಿಪಿಕ್ಕಿ ಹಾಗೂ ಕಾಡುಗೊಲ್ಲ ಸಮುದಾಯಗಳು ವಿಶಿಷ್ಟ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯಗಳಿಗೆ ವಿಶೇಷ ಪರಂಪರೆ ಇದೆ. ವಿಶೇಷ ಭಾಷೆ ಇದೆ. ವಿಶೇಷ ಸಂಸ್ಕೃತಿ ಇದೆ. ಇಂತಹ ಸಮುದಾಯಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.

ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಕುಣಿಗಲ್ಲು ಮತ್ತು ಪಾವಗಡ ಸೇರಿದಂತೆ ಬೇರೆಬೇರೆ ಕಡೆಗಳಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯಗಳ ಪರ ಹೋರಾಟ ಮಾಡಿ ಪ್ರತ್ಯೇಕ ಅಸ್ಮಿತೆಯನ್ನು ತಂದುಕೊಟ್ಟಿದ್ದೇವೆ ಎಂದು ತಿಳಿಸಿದರು.

ಕಾಡುಗೊಲ್ಲ ಸಮುದಾಯ ಒಂದು ಬುಡಕಟ್ಟು ಸಮುದಾಯ, ಬುಡಕಟ್ಟು ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಇವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಮುಖಂಡ ಕೆ.ಜಿ.ನಾಗಣ್ಣ ಮಾತನಾಡಿ, ಕಾಡುಗೊಲ್ಲ ಸಮುದಾಯ ಸಾಮಾಜಿಕ ಪ್ರತ್ಯೇಕತೆಯನ್ನು ಬಯಸಿ ನಾಗರಿಕ ಪ್ರಪಂಚದಿಂದ ದೂರ ಇದೆ. ಹೀಗಾಗಿ ಕಾಡುಗೊಲ್ಲರನ್ನು ಅಲೆಮಾರಿ ಪಟ್ಟಿಗೆ ಸೇರಿಸಬೇಕು. ಒಬಿಸಿ ಅಲೆಮಾರಿ ಪಟ್ಟಿಯಲ್ಲಿ 46 ಜಾತಿಗಳಿವೆ. 47ನೇ ಜಾತಿಯಾಗಿ ಕಾಡುಗೊಲ್ಲ ಸಮುದಾಯವನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯದಿಂದ ಪ್ರಸ್ತಾವನೆ ಕಳಿಸಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಕಾಡುಗೊಲ್ಲ ಸಮುದಾಯ ನೂರಕ್ಕೆ ನೂರರಷ್ಟು ಬುಡಕಟ್ಟು ಸಮುದಾಯಗಳ ಲಕ್ಷಣಗಳನ್ನು ಹೊಂದಿದ್ದರೂ ಎಸ್.ಟಿ. ಪಟ್ಟಿಗೆ ಸೇರಬೇಕು. ಈಗ ಕಾಡುಗೊಲ್ಲರಲ್ಲಿ ನಡೆಯುತ್ತಿರುವ ಆಚರಣೆಗಳನ್ನು ಹಂತಹಂತವಾಗಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಒಡೆದ ಮನೆ: ದಲಿತ ಸಂಘಟನೆಗಳು ಒಂದಾಗಲಿ

ತುರುವೇಕೆರೆ:

ಕೆಲ ವೈಯಕ್ತಿ ಹಿತಾಸಕ್ತಿಗೆ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಒಡೆದ ಮನೆಯಂತಾಗಿದ್ದು ದಲಿತ ಸಮುದಾಯದ ಸಮಗ್ರ ಏಳಿಗೆಗಾಗಿ ವಿಭಿಜಿತ ದಸಂಸಗಳು ಸೈದ್ಧಾಂತಿಕ ಮತ್ತು ತಾತ್ವಿಕವಾಗಿ ಒಗ್ಗೂಡುವ ಅನಿವಾರ್ಯತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧಕ್ಷ ವಿ.ಟಿ.ವೆಂಕಟರಾಮ್ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ದಸಂಸ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭ ಹಾಗು ದಸಂಸ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲೇ ತುರುವೇಕೆರೆ ದಸಂಸ ಹೆಚ್ಚು ಕ್ರಿಯಾಶೀಲ ಹೋರಾಟಗಳನ್ನು ಹಮ್ಮಿಕೊಂಡು ದಲಿತ ಸಮುದಾಯದ ರಕ್ಷಣೆಗೆ ಮುಂದಾಗಿದೆ. ನಮ್ಮ ಕಾರ್ಯಕ್ರಮಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ ದಲಿತ ಸಮುದಾಯವನ್ನು ಆಥರ್ಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹೇಗೆ ಮುಂದೆ ತರಬೇಕು ಎಂಬುದರ ಬಗ್ಗೆ ವಾಸ್ತವೀಕ ನೆಲೆಯಲ್ಲಿ ಚಚರ್ೆ, ಸಂವಾದಗಳನ್ನು ನಡೆಸಬೇಕಿದೆ ಅದಕ್ಕಾಗಿ ಹೆಚ್ಚು ಹೊಸ ತಲೆಮಾರಿನ ದಲಿತ ಯುವಕರನ್ನು ಸಂಘಟನೆಗೆ ತಾತ್ವಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

ದಲಿತರು ಸಾಮಾಜಿಕ ಮತ್ತು ರಾಜಕೀಯ ಸ್ಥಾನ ಮಾನಗಳನ್ನು ಗಟ್ಟಿಗೊಳಿಸಿಕೊಳ್ಳಲು ಆಥರ್ಿಕ ಸಂಪನ್ಮೂಲ ವಧರ್ಿಸಿಕೊಳ್ಳುವ ಅಗತ್ಯವಿದ್ದು ಅದಕ್ಕಾಗಿ ಭೂರಹಿತ ದಲಿತರಿಗೆ ಸಕರ್ಾರ ಭೂಮಿ ನೀಡುವ ಕುರಿತ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತರು ಹೆಚ್ಚು ಹೆಚ್ಚು ಶಿಕ್ಷಣ ವಂತರಾಗಬೇಕು. ಆಮೂಲಕ ಆಡಳಿತಾತ್ಮಕ ಹುದ್ದೆಗಳನ್ನು ಹೊಂದಿ ಸಮುದಾಯದ ಯುವಕರಿಗೆ ದಾರಿ ದೀಪವಾಗ ಬೇಕು ಎಂದರು.

ಬೆನೆಕಿನಕೆರೆ ನಿವೃತ್ತ ಶಿಕ್ಷಕರಾದ ಬೋರಪ್ಪ, ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ನರಸಿಂರಾಜು ಹಾಗು ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯ ಎಚ್.ವಿ ಅವರುಗಳನ್ನು ದಸಂಸ ವತಿಯಿಂದ ಮೈಸೂರು ಪೇಟ ತೊಡಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಡಾ.ಚಂದ್ರಯ್ಯ, ರಾಮಚಂದಯ್ಯ್ರ, ಶಿವರಾಜ್, ಗುರುದತ್, ಮಲ್ಲೂರ್ ತಿಮ್ಮೇಶ್, ಗಾಂಧಿಗ್ರಾಮ ಮೂರ್ತಿ, ಧನಂಜಯ ಹುಳಿಸಂದ್ರ, ಪುಟ್ಟರಾಜು, ತಮ್ಮಯ್ಯ, ರಾಘು, ದಯಾನಂದ್, ಗೋವಿಂದರಾಜು, ಮಧು, ಮಂಜು, ಕೃಷ್ಣಪ್ಪ, ಮೇಲನಹಳ್ಳಿ ಮಂಜು, ಗಂಗಣ್ಣ, ರಾಮು, ಲಕ್ಷ್ಮೀಷ, ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.

ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ. ಡಾ. ವೂಡೇ ಪಿ ಕೃಷ್ಣ

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕೆಲವು ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ಸಂಚಿಕೆಯಿಂದ…..

ಎಷ್ಟೋ ಸಂಸ್ಥೆಗಳಲ್ಲಿ ಬೃಹತ್ತತೆ ಇರುತ್ತದೆ, ಗುಣಾತ್ಮಕತೆ ಇರುವುದಿಲ್ಲ. ಗುಣಾತ್ಮಕತೆ ಇದ್ದಲ್ಲಿ ಬೃಹತ್ತತೆ ಇರುವುದಿಲ್ಲ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಹೆಗ್ಗಳಿಕೆಯೇ ಬೇರೆ ಅದು ಇವೆರಡನ್ನು ಸಾಧಿಸಿದೆ. ಶಿಶು ವಿಹಾರದಿಂದ ಆರಂಭಿಸಿ ಪಿಎಚ್.ಡಿ ಪದವಿಯನ್ನೂ ಒಂದೇ ಸೂರಿನಡಿ ಗಳಿಸುವ ಅವಕಾಶವಿರುವಂತೆ ರೂಪಿಸಿದ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಇಟಿ (ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್‌) ಒಂದು. ಭಾರತದ 28ನೇ ಶ್ರೇಷ್ಠ ಕಾಲೇಜೆಂಬ ಅಧಿಕೃತ ಕೀರ್ತಿ ಶೇಷಾದ್ರಿಪುರಂ ವಿದ್ಯಾಸಂಸ್ಥೆಗೆ ಲಭಿಸಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ( ಸೂಡನ್, ಭೂತಾನ್,ಮಲೇಷ್ಯಾ,ಬಾಂಗ್ಲಾದೇಶ,ನೇಪಾಳ, ಕೋಸ್ಟರಿಕಾ ಮತ್ತು ಸೌದಿ ಅರೇಬಿಯದಂತಹ ದೇಶಗಳ) ವಿದ್ಯಾರ್ಥಿಗಳು ಶಿಕ್ಷಣ ಪಡೆದಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವ ಇವರಿಗೆ, ಉತ್ತಮ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವ ಇವರಿಗೆ, ಉತ್ತಮ ಶಿಕ್ಷಣ ಮಾತ್ರವೇ ಒಳ್ಳೆಯ ಬದುಕನ್ನು ಕಟ್ಟಿಕೊಡಬಲ್ಲದು ಎಂಬ ನಂಬಿಕೆ. ಇಂದಿನ ದುಬಾರಿ ಶಿಕ್ಷಣದಲ್ಲಿ ಎಟುಕುವ ಬೆಲೆಗೆ ಗುಣಮಟ್ಟದ ಶಿಕ್ಷಣಕೊಡುವುದೇ ಇವರ ಧ್ಯೇಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಮೌಲ್ಯ, ದೇಶಪ್ರೇಮವನ್ನು ಬಿತ್ತುವ ಕಾಯಕಕ್ಕೂ ಬದ್ಧರಾಗಿ, ನಾಡಿನ ಸುಧಾರಕರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಬೋಧನೆ ಕೊಡಿಸುತ್ತಿರುವುದು ಶ್ಲಾಘನೀಯ ಕೆಲಸ.

ಮುಂದುವರೆಯುವುದು..

ದಲಿತರ ಸ‌ಮಾಲೋಚನಾ ಸಭೆ, ಪಾಂಡುರಂಗಯ್ಯ ಅವರಿಗೆ ಅಭಿನಂದನಾ ಸಮಾರಂಭ

ತುರುವೇಕೆರೆ: ತಾಲ್ಲೂಕು ದಲಿತ ಸಂಘರ್ಷ ಮತ್ತು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಅಭಿನಂದನೆ ಹಾಗು ಬೀಳ್ಕೊಡುಗೆ ಸಮಾರಂಭ ಮತ್ತು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ, ಸಮಾಲೋಚನಾ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ.3ರಂದು ಹಮ್ಮಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅಂದು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ನೌಕರರಾದ ನರಸಿಂಹರಾಜು, ಬೆನಕಿನಕೆರೆ ಪ್ರೌಢ ಶಾಲೆಯ ತೋಟಗಾರಿಕಾ ಶಿಕ್ಷಕ ರಾಯಸಂದ್ರ ಬೋರಪ್ಪನವರಿಗೆ ಬೀಳ್ಕೊಡಿಗೆ ಹಾಗು ತುಮಕೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯನವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಸಮುದಾಯದ ಬಂಧುಗಳು, ಹಿತೈಷಿಗಳು, ಸ್ನೇಹಿತರು, ದಲಿತ ಸಂಘರ್ಷ ಸಮಿತಿ ಹಾಗು ಪ್ರಗತಿಪರ ಚಿಂತಕರ ಪದಾಧಿಕಾರುಗಳು, ಸಮುದಾಯದ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕೆಂದು ದಸಂಸ ಸಂಚಾಲಕ ದಂಡಿನಶಿವರ ಕುಮಾರ್ ವಿನಂತಿಸಿಕೊಂಡಿದ್ದಾರೆ.

ದಲಿತರ ಸ‌ಮಾಲೋಚನಾ ಸಭೆ, ಪಾಂಡುರಂಗಯ್ಯ ಅವರಿಗೆ ಅಭಿನಂದನಾ ಸಮಾರಂಭ

ತುರುವೇಕೆರೆ: ತಾಲ್ಲೂಕು ದಲಿತ ಸಂಘರ್ಷ ಮತ್ತು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಅಭಿನಂದನೆ ಹಾಗು ಬೀಳ್ಕೊಡುಗೆ ಸಮಾರಂಭ ಮತ್ತು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ, ಸಮಾಲೋಚನಾ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೆ.3ರಂದು ಹಮ್ಮಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅಂದು ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ನೌಕರರಾದ ನರಸಿಂಹರಾಜು, ಬೆನಕಿನಕೆರೆ ಪ್ರೌಢ ಶಾಲೆಯ ತೋಟಗಾರಿಕಾ ಶಿಕ್ಷಕ ರಾಯಸಂದ್ರ ಬೋರಪ್ಪನವರಿಗೆ ಬೀಳ್ಕೊಡಿಗೆ ಹಾಗು ತುಮಕೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುವ ಶ್ರೀ ಸೋಮೇಶ್ವರ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಡಾ.ಪಾಂಡುರಂಗಯ್ಯನವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಸಮುದಾಯದ ಬಂಧುಗಳು, ಹಿತೈಷಿಗಳು, ಸ್ನೇಹಿತರು, ದಲಿತ ಸಂಘರ್ಷ ಸಮಿತಿ ಹಾಗು ಪ್ರಗತಿಪರ ಚಿಂತಕರ ಪದಾಧಿಕಾರುಗಳು, ಸಮುದಾಯದ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕೆಂದು ದಸಂಸ ಸಂಚಾಲಕ ದಂಡಿನಶಿವರ ಕುಮಾರ್ ವಿನಂತಿಸಿಕೊಂಡಿದ್ದಾರೆ.

ಇಂದು ಏಕತೆಯ ಹೋರಾಟಗಾರ ಬಿಡುಗಡೆ

ತುಮಕೂರು: ಚಿಂತಕ ಕೆ.ದೊರೈರಾಜ್‍ ರವರ ಬಗ್ಗೆ ಶಿಂಷಾ ಲಿಟರರಿ ಅಕಾಡೆಮಿ ಪ್ರಕಟಿಸಿರುವ ಏಕತೆಯ ಹೋರಾಟಗಾರ ಕೃತಿಯ ಲೋಕಾರ್ಪಣೆಯನ್ನು ಸೆಪ್ಟಂಬರ್ 2ರ ಶನಿವಾರ 10.30ಕ್ಕೆ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾಡಲಿದ್ದಾರೆ.

ಕೃತಿ ಕುರಿತು ಕವಿಗಳು ಹಾಗೂ ವಿಮರ್ಶಕರಾದ ಡಾ.ಕೆ.ಪಿ.ನಟರಾಜ್ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ವಹಿಸಲಿದ್ದು, ಶ್ರೀಮತಿ ಅನುರಾಧ ಮತ್ತು ಕೆ.ದೊರೈರಾಜ್ ಅವರು ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಗಳಾಗಿ ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಡಾ.ವೈ.ಕೆ.ಬಾಲಕೃಷ್ಣಪ್ಪ, ವಿಶ್ರಾಂತ ಪ್ರಾಂಶುಪಾಲರಾದ ಸಿ.ಚೌಡಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಗಾಂಧಿ ವಿಚಾರವಾದಿ ಎಂ.ಬಸವಯ್ಯ, ಭಾಗವಹಿಸಲಿದ್ದು, ಕೃತಿಯ ಸಂಪಾದಕರಾದ ಎಂ.ಎಚ್.ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಶಾಸಕರ ಹೋರಾಟದ ಫಲ: ಕ್ಷೇತ್ರಕ್ಕೆ 1505 ಮನೆಗಳು ಮಂಜೂರು

ತುರುವೇಕೆರೆ: ತಾಲ್ಲೂಕಿಗೆ ಮಂಜೂರಾಗಿದ್ದ ಮನೆಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿದ್ದನ್ನು ಖಂಡಿಸಿ ಸೆ.1ರಂದು ವಸತಿ ಸಚಿವರ ಮನೆಯ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಇಂದೇ 1505 ಮನೆಗಳನ್ನು ಮಂಜೂರು ಮಾಡಿರುವ ಕಾರಣ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಸರ್ಕಾರ 3375 ಹೆಚ್ಚುವರಿ ಮನೆಗಳನ್ನು 2022-23 ಸಾಲಿನಲ್ಲಿ ಮಂಜೂರು ಮಾಡಿತ್ತು.

ಆದರೆ ಸ್ಥಳೀಯ ಮಾಜಿ ಶಾಸಕ ಜಯರಾಮ್ ಎ.ಎಸ್ ಚಿತಾವಣೆಯಿಂದ ತಾಲ್ಲೂಕಿಗೆ ಮಂಜೂರಾಗಿದ್ದ ಅಷ್ಟೂ ಮನೆಗಳು ಕೈತಪ್ಪಿ ಕ್ಷೇತ್ರದ ಜನತೆಯನ್ನು ವಂಚಿಸುವ ಕೆಲಸ ಮಾಡಿದ್ದರು. ಕುಣಿಗಲ್ ಗೆ ಸದರಿ ಗುರಿಯ ಮನೆಗಳನ್ನು ಮರು ಹಂಚಿಕೆ ಮಾಡಲಾಗಿತ್ತು. ಇದರ ವಿರುದ್ಧ ವಸತಿ ಸಚಿವರ ಮನೆ ಎದುರು ಧರಣಿ ನಡೆಸುವುದಾಗಿ ಹೇಳಿದ್ದೆ. ಸರ್ಕಾರ ಇದಕ್ಕೆ ಹೆದರಿ ಮನೆಗಳನ್ನು ಮತ್ತೇ ಕ್ಷೇತ್ರಕ್ಕೆ ನೀಡಿದೆ ಎಂದು ಸಂತಸ ಹಂಚಿಕೊಂಡರು.

ಕ್ಷೇತ್ರದ ಸಾವಿರಾರು ಜನರ ಜತೆ ವಸತಿ ಸಚಿವರ ಮನೆ ಎದುರು ಸೆ.1ರಂದು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೆವು. ಅಷ್ಟರಲ್ಲಿ ವಸತಿ ಸಚಿವರು 31.8.2023ದಂದು ನಮ್ಮನ್ನು ಕರೆಯಿಸಿಕೊಂಡು 3375 ಮನೆಗಳ ಪೈಕಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ 1505 ಹಾಗು 1870 ಮನೆಗಳನ್ನು ಕುಣಿಗಲ್ ತಾಲ್ಲೂಕಿಗೆ ನೀಡಿದೆ. ಇದು ನಮ್ಮ ಹೋರಾಟದ ಫಲವಾಗಿ ಕ್ಷೇತ್ರಕ್ಕೆ ದಕ್ಕಿದ್ದು ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನ ಆಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಘು, ಯೋಗೀಶ್, ಬಸವಣ್ಣ ಮತ್ತು ಕಾರ್ಯಕರ್ತರು ಇದ್ದರು.

ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ: ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ…..

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕೆಲವು ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಚುಕ್ಕಾಣೆ ಹಿಡಿದು ಅದನ್ನು ಸರ್ವತೋಮುಖವಾಗಿ ಬೆಳೆಸಿದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ. ಇದು ಅವರ ಬದುಕಿನ ಮತ್ತು ಶಿಕ್ಷಣದತ್ತಿಯ ಸುವರ್ಣ ಅಧ್ಯಾಯ ಎನ್ನಬಹುದು.

ಡಾ‌. ಕೃಷ್ಣರವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಬಂದಾಗ ಇದ್ದ 9.4 0 0 ವಿದ್ಯಾರ್ಥಿಗಳ ಸಂಖ್ಯೆ ಇಂದು 21,000 ಕ್ಕೆ ಏರಿದೆ. 1200 ಮಂದಿ ಸಿಬ್ಬಂದಿಗಳಿದ್ದಾರೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ 33 ವಿದ್ಯಾಸಂಸ್ಥೆಗಳು ಹರಡಿವೆ ಇದು ಇವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ. ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಬೋಧಕ ಸಿಬ್ಬಂದಿ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವುದು ಡಾ. ಕೃಷ್ಣ ಅವರ ವಿಶೇಷತೆ.

ಕೃಷ್ಣರವರು ಕೇವಲ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ರಾಷ್ಟ್ರ, ಅಂತಾರಾಷ್ಟ್ರೀಯ ಶಿಕ್ಣಣದ ಮಹಾನ್ ಚಿಂತಕರು ಎಂಬುದು ಹೆಚ್ಚು ಸಮಂಜಸ. ಶಿಕ್ಷಣ ಕ್ಷೇತ್ರ ಡಾ.ಕೃಷ್ಣರವರ ಇಷ್ಟದ ಆಯ್ಕೆ‌. ‘ ನೀನು ಇಷ್ಟಪಟ್ಟದ್ದನ್ನು ಸಮರ್ಥವಾಗಿ ಮಾಡು’ ಎಂಬ ಇವರ ತಂದೆಯವರ ಮಾರ್ಗದರ್ಶನದಂತೆ ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಛಲ ಇವರದು. ತಾವು ಮಾಡಬೇಕಿರುವ ಯೋಜನೆಗಳ ಟಿಪ್ಪಣಿ ತಯಾರಿಸಿಕೊಂಡು ಒಂದೊಂದೇ ಕೆಲಸವನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರುತ್ತಾರೆ.

ಸ್ನೇಹ- ವಿಶ್ವಾಸಗಳಿಗೆ ಬೆಲೆ ಕೊಡುವ ಕೃಷ್ಣರವರು ಬುದ್ಧಿ ಮತ್ತು ಕಾರ್ಯಸಾಧನೆಯಿಂದ ಶೈಕ್ಷಣಿಕ ರಂಗದಲ್ಲಿ ಉಜ್ವಲವಾದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಮಾಜಕ್ಕೆ ಉತ್ತಮ ನಾಗರಿಕರನ್ನು ಒದಗಿಸುವ ಕೆಲಸದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಅಲ್ಲದೆ ಸದಾಶಿವನಗರ ಶಿಕ್ಷಣ ಸಂಸ್ಥೆಗಳು, ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯ ಮುಂತಾದ ವಿದ್ಯಾಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂದುವರೆಯುವುದು…….

ಕೃಷ್ಣ ರವರ ವೃತ್ತಿಜೀವನ

ಕಳೆದ ಸಂಚಿಕೆಯಿಂದ..

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಾ. ಕೃಷ್ಣ ಬೆಂಗಳೂರಿನ ಖ್ಯಾತ ಬಿ.ಎಂ.ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ 1987ರಲ್ಲಿ ಕೆಲಕಾಲ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದರೂ, 1989ರಲ್ಲಿ ಡಬ್ಲೂ.ಪಿ. ಕೃಷ್ಣ ಅಸೋಸಿಯೇಟ್ಸ್ ಮೂಲಕ ವೃತ್ತಿ ಜೀವನದಲ್ಲಿ ನೆಲೆ ನಿಂತರು. ಚಾರ್ಟರ್ಡ್ ಇಂಜಿನಿಯರ್ ಆಗಿ, ಕೈಗಾರಿಕಾ ಸ್ವತ್ತುಗಳ ನೋಂದಾಯಿತ ಮೌಲ್ಯಮಾಪಕರಾಗಿ ಹಾಗೂ ಕಾನೂನು ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ಆರ್ಬಿಟ್ರೇಟರ್ ಆಗಿ ವಿಶೇಷ ಸಾಧನೆಯನ್ಬು ಮಾಡಿದರು.

ನ್ಯಾಯಾಲಯಗಳ ಆಯುಕ್ತರಾಗಿ ಮಾತ್ರವಲ್ಲದೆ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಆರ್ಬಿಟ್ರೇಟರ್ ಆಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು. ಇಂಡಿಯನ್ ಕೌನ್ಸಿಲ್ ಆಫ್ ಆರ್ಬಿಟ್ರೇಶನ್ ನಲ್ಲಿ ಫೆಲೋಶಿಪ್ ದೊರೆತಿರುವ ಡಾ. ಕೃಷ್ಣರವರು ಹೈದರಾಬಾದ್, ಚೆನ್ನೈ, ಇಂದೋರ್, ದೆಹಲಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊಕದ್ದಮೆಗಳನ್ನು ನಡೆಸಿ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. 2010ರಲ್ಲಿ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆ ಡಿ.ಸಿ.ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಟೆಕ್ನಾಲಜಿ ಸಂಸ್ಥೆ ಯಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದರು.

ಭಾರತೀಯ ಇಂಜಿನಿಯರುಗಳ ಸಂಸ್ಥೆಯಲ್ಲಿ ಫಲೋ ಸದಸ್ಯರಾಗಿ, ಕರ್ನಾಟಕ ರಾಜ್ಯ ಕೇಂದ್ರದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿ ಈ ಸಂಸ್ಥೆ ಯನ್ನು ಉನ್ನತ ಸ್ಥಿತಿಗೆ ತಂದರು. ಇವರ ಸೇವಾವಧಿಯಲ್ಲಿ ರಾಜ್ಯ ಕೇಂದ್ರಕ್ಕೆ ಎರಡು ಬಾರಿ ‘ ಉತ್ತಮ ರಾಜ್ಯ ಕೇಂದ್ರ’ ಪ್ರಶಸ್ತಿ ದೊರೆತಿದೆ.

ಭಾರತೀಯ ಇಂಜಿನಿಯರುಗಳು ಸಂಸ್ಥೆಯ ರಾಷ್ಟ್ರೀಯ ಪರಿಷತ್ತಿಗೆ ಆಯ್ಕೆಯಾಗಿಯೂ ಕೆಲಸ ನಿರ್ವಹಿಸದರು. ಹೈದರಾಬಾದಿನ ಇಂಜಿನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಆಡಳಿತ ಮಂಡಳಿಯ ಸದಸ್ಯತ್ವ ನಾಸಿಕ್ ನಲ್ಲಿ ನಡೆದ 28ನೇ ಮೆಕ್ಯಾನಿಕಲ್ ಇಂಜಿನಿಯರುಗಳ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ಹಾಗೂ 2011 ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಭಾರತೀಯ ಇಂಜಿನಿಯರಿಂಗ್ ಕಾಂಗ್ರೆಸ್ಸಿನ ಸಂಚಾಲಕತ್ವ ಇವರಿಗೆ ದೊರೆತ ಇತರ ಗೌರವಗಳು. ಇದಲ್ಲದೆ ಭಾರತೀಯ ಇಂಜಿನಿಯರುಗಳ ಸಂಸ್ಥೆಯಿಂದ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಹಾಗೂ ಇಂಗ್ಲೆಂಡಿನ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಪ್ರತಿಷ್ಠಿತ ಫೆಲೋ ಗೌರವಗಳಿಗೆ ಭಾಜನರಾಗಿದ್ದಾರೆ. ಭಾರತೀಯ ಉತ್ತಪಾದನಾ ಇಂಜಿನಿಯರುಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.

ಇಂದು 20/08/2023 ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಶಿಕ್ಷಣ ಶಿಲ್ಪಿ ಕೃತಿಯ ನಾಲ್ಕನೆಯ ಆವೃತ್ತಿ ಬಿಡುಗಡೆಯಾಗುತ್ತಿದೆ.

ಮುಂದುವರೆಯುವುದು……..

ಶಿಕ್ಷಣ ಪವಿತ್ರವಾದ ಕ್ಷೇತ್ರ: ಶಾಸಕ ವಾಸಣ್ಣ

ಗುಬ್ಬಿ: ಶಿಕ್ಷಣ ಕ್ಷೇತ್ರವು ಪವಿತ್ರವಾದ ಕ್ಷೇತ್ರವಾಗಿದೆ ಎಂದು ಎಸ್.ಆರ್. ಶ್ರೀನಿವಾಸ್ ಅಭಿಪ್ರಾಯ ಪಟ್ಟರು.


ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ರಚಿಸಿದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಮಕ್ಕಳ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಬೇಕು. ತಾನು ಓದಿದ ಶಾಲೆಗೆ ಏನಾದರೂ ಕೊಡುಗೆಯನ್ನು ಕೊಡುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರಬೇಕು. ವಿದ್ಯಾವಂತರು ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಸಹಕಾರ ಮನೋಭಾವದಿಂದ ಇದ್ದಾಗ ಮಾತ್ರ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.


ಬಿಇಓ ಕಾಂತರಾಜು ಮಾತನಾಡಿ, ಶಿಕ್ಷಣ ಪಡೆದ ಶಾಲೆಗೆ ಕೊಡುಗೆಗಳನ್ನು ನೀಡುವ ಮನಃಸ್ಥಿತಿಯನ್ನು ಮೈಗೂಡಿಸಿಕೊಂಡು ಏನಾದರು ದಾನ ಮಾಡಬೇಕು. ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುವುದರಿಂದ ಪೋಷಕರು ಆಂಗ್ಲ ಮಾಧ್ಯಮ ಶಾಲೆಯನ್ನು ಬಿಟ್ಟು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಮಾಡಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಬಿ ಆರ್ ಸಿ ಮಧುಸೂದನ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಗದೀಶ್, ಪಿಡಿಒ ಸಿದ್ದರಾಮಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಗೋವಿಂದರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ, ಮಹೇಂದ್ರ ಕುಮಾರ್, ದಾನಿಗಳಾದ ರುದ್ರಣಮ್ಮ, ಮುಖ್ಯ ಶಿಕ್ಷಕ ಬಿ.ಎಲ್ ಲಕ್ಷ್ಮಣ್ ಹಾಗೂ ಶಿಕ್ಷಕರು, ಗ್ರಾಮಸ್ಥರು ಇತರರು ಇದ್ದರು