Friday, December 8, 2023
spot_img
Homeಜೀವನ ಚರಿತ್ರೆಕೃಷ್ಣ ರವರ ವೃತ್ತಿಜೀವನ

ಕೃಷ್ಣ ರವರ ವೃತ್ತಿಜೀವನ

ಕಳೆದ ಸಂಚಿಕೆಯಿಂದ..

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಾ. ಕೃಷ್ಣ ಬೆಂಗಳೂರಿನ ಖ್ಯಾತ ಬಿ.ಎಂ.ಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ 1987ರಲ್ಲಿ ಕೆಲಕಾಲ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದರೂ, 1989ರಲ್ಲಿ ಡಬ್ಲೂ.ಪಿ. ಕೃಷ್ಣ ಅಸೋಸಿಯೇಟ್ಸ್ ಮೂಲಕ ವೃತ್ತಿ ಜೀವನದಲ್ಲಿ ನೆಲೆ ನಿಂತರು. ಚಾರ್ಟರ್ಡ್ ಇಂಜಿನಿಯರ್ ಆಗಿ, ಕೈಗಾರಿಕಾ ಸ್ವತ್ತುಗಳ ನೋಂದಾಯಿತ ಮೌಲ್ಯಮಾಪಕರಾಗಿ ಹಾಗೂ ಕಾನೂನು ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ಆರ್ಬಿಟ್ರೇಟರ್ ಆಗಿ ವಿಶೇಷ ಸಾಧನೆಯನ್ಬು ಮಾಡಿದರು.

ನ್ಯಾಯಾಲಯಗಳ ಆಯುಕ್ತರಾಗಿ ಮಾತ್ರವಲ್ಲದೆ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಆರ್ಬಿಟ್ರೇಟರ್ ಆಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು. ಇಂಡಿಯನ್ ಕೌನ್ಸಿಲ್ ಆಫ್ ಆರ್ಬಿಟ್ರೇಶನ್ ನಲ್ಲಿ ಫೆಲೋಶಿಪ್ ದೊರೆತಿರುವ ಡಾ. ಕೃಷ್ಣರವರು ಹೈದರಾಬಾದ್, ಚೆನ್ನೈ, ಇಂದೋರ್, ದೆಹಲಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊಕದ್ದಮೆಗಳನ್ನು ನಡೆಸಿ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. 2010ರಲ್ಲಿ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆ ಡಿ.ಸಿ.ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಟೆಕ್ನಾಲಜಿ ಸಂಸ್ಥೆ ಯಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದರು.

ಭಾರತೀಯ ಇಂಜಿನಿಯರುಗಳ ಸಂಸ್ಥೆಯಲ್ಲಿ ಫಲೋ ಸದಸ್ಯರಾಗಿ, ಕರ್ನಾಟಕ ರಾಜ್ಯ ಕೇಂದ್ರದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿ ಈ ಸಂಸ್ಥೆ ಯನ್ನು ಉನ್ನತ ಸ್ಥಿತಿಗೆ ತಂದರು. ಇವರ ಸೇವಾವಧಿಯಲ್ಲಿ ರಾಜ್ಯ ಕೇಂದ್ರಕ್ಕೆ ಎರಡು ಬಾರಿ ‘ ಉತ್ತಮ ರಾಜ್ಯ ಕೇಂದ್ರ’ ಪ್ರಶಸ್ತಿ ದೊರೆತಿದೆ.

ಭಾರತೀಯ ಇಂಜಿನಿಯರುಗಳು ಸಂಸ್ಥೆಯ ರಾಷ್ಟ್ರೀಯ ಪರಿಷತ್ತಿಗೆ ಆಯ್ಕೆಯಾಗಿಯೂ ಕೆಲಸ ನಿರ್ವಹಿಸದರು. ಹೈದರಾಬಾದಿನ ಇಂಜಿನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಆಡಳಿತ ಮಂಡಳಿಯ ಸದಸ್ಯತ್ವ ನಾಸಿಕ್ ನಲ್ಲಿ ನಡೆದ 28ನೇ ಮೆಕ್ಯಾನಿಕಲ್ ಇಂಜಿನಿಯರುಗಳ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ಹಾಗೂ 2011 ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಭಾರತೀಯ ಇಂಜಿನಿಯರಿಂಗ್ ಕಾಂಗ್ರೆಸ್ಸಿನ ಸಂಚಾಲಕತ್ವ ಇವರಿಗೆ ದೊರೆತ ಇತರ ಗೌರವಗಳು. ಇದಲ್ಲದೆ ಭಾರತೀಯ ಇಂಜಿನಿಯರುಗಳ ಸಂಸ್ಥೆಯಿಂದ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ ಹಾಗೂ ಇಂಗ್ಲೆಂಡಿನ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಪ್ರತಿಷ್ಠಿತ ಫೆಲೋ ಗೌರವಗಳಿಗೆ ಭಾಜನರಾಗಿದ್ದಾರೆ. ಭಾರತೀಯ ಉತ್ತಪಾದನಾ ಇಂಜಿನಿಯರುಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.

ಇಂದು 20/08/2023 ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಶಿಕ್ಷಣ ಶಿಲ್ಪಿ ಕೃತಿಯ ನಾಲ್ಕನೆಯ ಆವೃತ್ತಿ ಬಿಡುಗಡೆಯಾಗುತ್ತಿದೆ.

ಮುಂದುವರೆಯುವುದು……..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು