Monday, December 2, 2024
Google search engine
Home Blog Page 326

ಎಲ್ಲರಿಗೂ ದಕ್ಕದ ಕೆಬಿಎಸ್

1

ಲೇಖಕರು

ಕೆ.ಈ.ಸಿದ್ದಯ್ಯ

ಪತ್ರಕರ್ತರು ಹಾಗೂ ಸಾಹಿತಿ

ಅದು ಕವಿ ದ್ವಾರನಕುಂಟೆ ಎಚ್. ಗೋವಿಂದಯ್ಯ ಅವರ ‘ಉರಿದು ಬಿದ್ದು ಮರ’ ಕವನ ಸಂಕಲನ ಬಿಡುಗಡೆ ಸಮಾರಂಭ. ನಡೆದದ್ದು ತುಮಕೂರಿನ ಕನ್ನಡ ಭವನದಲ್ಲಿ. ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟನೆ,ಕವಿ ಕೆ.ಬಿ.ಸಿದ್ದಯ್ಯ ಅತಿಥಿಗಳು. ನಾನೂ ವೇದಿಕೆಯ ಮೇಲಿದ್ದೆ. ಕೆ.ಬಿ. ಪಕ್ಕದಲ್ಲೇ ಕೂತಿದ್ದ ನನ್ನ ಕಿವಿಯಲ್ಲಿ ಈ ‘ದಲಿತ’ ತೆಗೆಯುತ್ತಾರಲ್ಲ ಯಾಕೆ ಗೊತ್ತೇ ಅಂದರು. ನಾನು ‘ಅದು ರಾಜಕೀಯ, ಆ ಪದವನ್ನೇ ಇಲ್ಲವಾಗಿಸಿದರೆ ದಲಿತರೇ ಇಲ್ಲವಾಗುತ್ತಾರಲ್ಲ ಅಂದೆ ಯು ಆರ್ ಕರೆಕ್ಟ್ ಅಂದರು. ನಂತರ ಕೆ.ಬಿ ಸಭೆಯಲ್ಲಿ ಮಾತನಾಡಿದರು. ‘ದಲಿತ ಪದ ತೆಗೆಯುವುದರ ಹಿಂದೆ ಸಾಂಸ್ಕøತಿಕ ರಾಜಕಾರಣವಿದೆ. ದಲಿತರ ಐಡೆಂಟಿಟಿಯನ್ನು ಇಲ್ಲವಾಗಿಸುವ ಪ್ರಯತ್ನ ಅದು’ ಎಂದು ಮಾತು ಮುಗಿಸಿ ಬಂದು ಮತ್ತೆ ಕುಳಿತರು. ‘ಸಿದ್ದಯ್ಯ ಕರೆಕ್ಟ್ ಅಲ್ವೇನೋ’ ಅಂದರು. ‘ಹೌದು’ ಎಂದಿದ್ದೆ. ಪ್ರತಿ ಭಾಷಣವೂ ಭಿನ್ನತೆಯಿಂದ ಕೂಡಿರುತ್ತಿತ್ತು.

ಹಿರಿಯರು ಮತ್ತು ಕಿರಿಯರು ಎನ್ನದೆ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ, ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದ ಅವರ ನಡವಳಿಕೆ ನನ್ನಂತಹವರು ಕುಗ್ಗುವಂತೆ ಮಾಡಿತ್ತಿತ್ತು. ಅಂಥ ಕೆಬಿ ಇಲ್ಲ, ಮುಂಜಾನೆಯೇ ತೀರಿಹೋದರೆಂಬ ಸುದ್ದಿ ನನ್ನನ್ನು ನಿದ್ರೆಯಿಂದ ಏಳುವಂತೆ ಮಾಡಿತ್ತು. ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಅವರು ಉಳಿಯುವ ಲಕ್ಷಣಗಳು ಇಲ್ಲದಿದ್ದರೂ ಒಂದು ಆಸೆಯಂತೂ ಚಿಗುರೊಡೆತ್ತು. ಆ ಚಿಗುರು ಮಳೆಗಾಲದ ರಭಸಕ್ಕೆ ಸಿಕ್ಕಿ ನಲುಗಿ ಹೋಯಿತು.
ಆಪ್ತ ವಲಯದಲ್ಲಿ ಬಕಾಲ ಮುನಿ ಮತ್ತು ಕೆಬಿ ಆಗಿದ್ದರು. ಇಂಗ್ಲೀಷ್ ಸಾಹಿತ್ಯದ ವ್ಯಾಪಕ ಓದು ಅವರೊಬ್ಬ ಪ್ರಬುದ್ಧ ಭಾಷಣಕಾರರನ್ನಾಗಿ ಮಾಡಿತ್ತು. ನನಗೆ ತಿಳಿದ ಮಟ್ಟಿಗೆ ಅವರ ಬರಹಕ್ಕಿಂತ ಭಾಷಣವೇ ತೀಕ್ಷ್ಣವಾಗಿರುತ್ತಿತ್ತು. ಭಾಷಣದಲ್ಲಿದ್ದ ಒಳನೋಟಗಳು ಬರಹದಲ್ಲಿ ಕಂಡುಬರಲಿಲ್ಲ. ಖಂಡಕಾವ್ಯ ಪರಂಪರೆ ಮುಂದುವರಿಕೆಗೆ ಪ್ರಯತ್ನಿಸಿದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನೆ ಎಂಬ ನಾಲ್ಕು ಖಂಡಕಾವ್ಯಗಳನ್ನು ಕೊಟ್ಟ ಕೆಬಿ ಸಮಾಜೋ-ಆಧ್ಯಾತ್ಮಿಕ ದೃಷ್ಟಿಕೋನದಿಂದ ಬರೆದರು. ಅವರ ಕಾವ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಆರೋಪಗಳು ಇವೆ. ಕತ್ತಲೊಡನೆ ಮಾತುಕತೆ, ಬುದ್ದನ ನಾಲ್ಕು ಸತ್ಯಗಳು ಎಂಬ ಗದ್ಯಕೃತಿಗಳು ಹೊರಬಂದಿವೆ.

ಬರೆದಿದ್ದು ಕಡಿಮೆಯಾದರೂ ಎಲ್ಲವೂ ಮೌಲ್ವಿಕ ಕೃತಿಗಳೇ. ಕಿರಿದರೋಳ್ ಪಿರಿದರ್ಥವನ್ನು ಕಟ್ಟಿಕೊಡುವಂತಹವು. ವಿಮರ್ಶಕ ಕಿ.ರಂ. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮೊದಲಾದವರು ಕೆಬಿ ಅವರ ಖಂಡಕಾವ್ಯಗಳನ್ನು ಬಿಡುಗಡೆ ಮಾಡಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಮೇಲ್ನೋಟಕ್ಕೆ ಕೃತಿಗಳ ಶೀರ್ಷಿಕೆಗಳೆಲ್ಲವೂ ಕುಲಮೂಲದಿಂದ ಬಂದಥವುಗಳು ಎಂಬಂತೆ ಕಂಡುಬಂದರೂ ಕಾವ್ಯದ ಆಳದೊಳಗೆ ವಿಶ್ವವ್ಯಾಪಿ ವಿಷಯಗಳನ್ನು ಮುಖಾಮುಖಿಯಾಗಿಸುತ್ತವೆ. ಜಾಗತಿಕರಣದ ಹುನ್ನಾರಗಳಿಂದ ದೇಶೀ ಸಂಸ್ಕøತಿಗೆ ಪೆಟ್ಟು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅವರ ಬರಹ ಸಾಮಾನ್ಯ ಓದುಗನಿಗೆ ನಿಲುಕುವುದು ಕಷ್ಟ.
ತುಮಕೂರು ಮತ್ತು ರಾಜ್ಯದ ಸಾಹಿತ್ಯದ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೆಲವೊಮ್ಮೆ ಸಾಹಿತಿಯಂತೆ, ರಾಜಕಾರಣಿಯಂತೆ ಅವರ ನಡಿಗೆ ಇತ್ತು. ಯಾಕೆಂದರೆ ಹೋರಾಟಗಾರರಾಗಿದ್ದ ಕಾರಣ ಹಾಗೆ ಕಂಡಿದ್ದು ಸಹಜವೂ ಹೌದು. ಭಾಷಣದಲ್ಲಿ ಕೆಲವರಿಗೆ ಚಾಟಿ ಬೀಸಿ ಬಿಸಿ ಮುಟ್ಟಿಸಿದ್ದರು. ಆದರೆ ಅವರ ಬರಹಗಳಲ್ಲಿ ರಾಜಕೀಯ ಪ್ರವೇಶವಾಗದಂತೆ ನೋಡಿಕೊಂಡರು.

ಕೆ.ಬಿ.ಸಿದ್ದಯ್ಯ ಮತ್ತು ಸ್ನೇಹ ಬಳಗ ಕುಡಿಯಲು ಕೂತರೆ ಗಂಟೆಗಳೇ ಕಳೆಯುತ್ತಿದ್ದವು. ಅಲ್ಲಿ ಚರ್ಚೆಯಾಗುತ್ತಿದ್ದ ವಿಷಯ ಹಲವು. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕ, ವ್ಯಕ್ತಿಗತ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿತ್ತು. ಇಂಗ್ಲೀಷ್ ಸಾಹಿತ್ಯ ಷೇಕ್ಸ್‍ಪಿಯರ್ ನಾಟಕಗಳ ಸಾಲುಗಳನ್ನು ಉದ್ದರಿಸಿ ವಿವರಿಸುತ್ತಿದ್ದರು. ಉಳಿದವರು ಇವರ ಮಾತುಗಳನ್ನು ಕೇಳುತ್ತಾ ಮದ್ಯ ಹೀರುತ್ತಾ ಕೇಳಿಕೊಳ್ಳಬೇಕಾಗಿತ್ತು. ಹಾಗಿತ್ತು ಅವರ ವಾಗ್ಜರಿ. ಕೇಳಲು ಆನಂದ.

ದರೈಸ್ತ್ರಿ ಪ್ರಶಸ್ತಿ ಸ್ಥಾಪಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿವರ್ಷವು ಪ್ರಶಸ್ತಿ ಕೊಡಲು ಹಣಕಾಸಿನ ತೊಂದರೆಯಾಗುತ್ತದೆ ಎಂದು ಹೇಳಿದಾಗ ಹಾಗಾದರೆ ಏನು ಮಾಡಬೇಕು ಎಂದು ನನ್ನನ್ನೇ ಕೇಳಿದ್ದರು. ಮೂರು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿದರೆ ಒಳ್ಳೆಯದು. ಹಣ ಸಂಗ್ರಹಕ್ಕೂ ಕಷ್ಟವಾಗುವುದಿಲ್ಲ ಎಂದು ಹೇಳಿದಾಗ ಯೋಚನೆ ಮಾಡೋಣ ಎಂದಷ್ಟೇ ಹೇಳಿದ್ದರು. ಅಪಘಾತ ಆಗುವುದಕ್ಕೂ ಮೊದಲು ಸಿಕ್ಕಿದ್ದ ಕೆಬಿ ಪ್ರೀತಿಯಿಂದಲೇ ಮಾತಾಡಿ ಹೇಗಿದ್ದೀಯ ಎಂದು ಆರೋಗ್ಯ ವಿಚಾರಿಸಿ ಬೆನ್ನು ತಟ್ಟಿ ಹೋಗಿದ್ದರು. ಅದು ಇನ್ನೂ ನೆನಪಿದೆ ಆದರೆ ಅವರಿಲ್ಲ.

ಸುದೀರ್ಘ ಕಾಲ ಸಾಹಿತ್ಯ ಕ್ಷೇತ್ರದಲ್ಲಿದ್ದರೂ ಅವರು ಇನ್ನೂ ಬರೆಯಬೇಕಾಗಿತ್ತು. ಇಂಗ್ಲೀಷ್‍ನಿಂದ ಅನುವಾದ ಸಾಹಿತ್ಯ ಬರೇಕಿತ್ತು. ಆದರೆ ಅಂತಹ ಕೆಲಸಕ್ಕೆ ಕೈ ಹಾಕಲೇ ಇಲ್ಲವೆಂಬ ಬಗ್ಗೆ ಹಲವರಲ್ಲಿ ಸಿಟ್ಟು ಕೂಡ ಇದೆ. ಅದು ಪ್ರೀತಿ ಸಿಟ್ಟು. ದ್ವೇಷದ ಸಿಟ್ಟಲ್ಲ ಎಂಬುದನ್ನು ನಾವು ಮನಗಾಣಬೇಕಾಗಿದೆ.

ಗಾಂಧಿ ಅಸ್ಮಿತೆ ಪಡೆಯಿರಿ: ಶಾಸಕ ಜ್ಯೋತಿಗಣೇಶ್

ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಧಿಯ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನ ಹಲವು ಅಪರೂಪದ ಚಿತ್ರಗಳು ಗಮನ ಸೆಳೆದವು. ಅಕ್ಟೋಬರ್ 28ರವರೆಗೆ ಪ್ರದರ್ಶನ ಇರಲಿದೆ.

ವಾರ್ತಾ ಮತ್ತು ಪ್ರಸಾರ ಇಲಾಖೆ ಆಯೋಜಿಸಿದ್ದ ಪ್ರದರ್ಶನದಲ್ಲಿ ನೂರಾರು ಮಂದಿ ಪಾಲ್ಗೊಂಡು ಗಾಂಧಿ ಸ್ಮರಣೆ ಮಾಡಿಕೊಂಡರು. ಗಾಂಧಿ ಹಲವು ವೈವಿಧ್ಯಮ ಫೋಟೋಗಳು ನೋಡುಗರ ಗಮನ ಸೆಳೆದವು.ಸಾವಿರಾರು ಅಕ್ಷರಗಳಲ್ಲಿ ಹೇಳಬೇಕಾದ ವಿಷಯವು ಒಂದೊಂದು ಪೋಟೋಗಳು ಪ್ರೇಕ್ಷಕರಿಗೆ ಹೇಳಿದವು.

ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಯುವತಿಯರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಸಂಜೆಯವರೆಗೂ ನಡೆಯುವ ಗಾಂಧಿ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಸಾವಿರಾರು ಮಂದಿ ಭೇಟಿ ನೀರಿಕ್ಷೆ ವಾರ್ತಾ ಮತ್ತು ಪ್ರಸಾರ ಇಲಾಖೆಯದ್ದು. ಯುವ ಪೀಳಿಗೆಗೆ ಗಾಂಧಿ ಮಾಹಿತಿಯನ್ನು ರವಾನಿಸಿ ಗಾಂಧಿ ಮೌಲ್ಯಗಳನ್ನು ಪ್ರಚುರಪಡಿಸುವುದು ಪ್ರದರ್ಶನದ ಉದ್ದೇಶವಾಗಿದೆ.

ಪ್ರದರ್ಶನಕ್ಕೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಗಾಂಧೀ ಜೀವನ ಮೌಲ್ಯಗಳು ಹಾಗೂ ಅವರ ಹೋರಾಟಗಳ ಅಪರೂಪದ ಛಾಯಾಚಿತ್ರ ವೀಕ್ಷಿಸಿ ಸ್ಮರಣೆ ಮಾಡಿಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್ ಸತ್ಯ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಅಪಾರ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧೀ ಸ್ಮರಣೆ ಸದಾಕಾಲವೂ ನಮಗೆಲ್ಲ ಪ್ರೇರಕ. ಗಾಂಧೀ ಕನಸನ್ನು ನನಸಾಗಿಸುವಲ್ಲಿ ಯುವಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ವಿಭಾಗೀಯ ಸಂಚಾಲಕ ಫಕ್ರುದ್ದೀನ್, ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟಗಳಲ್ಲಿ ಮಹಾತ್ಮಾ ಗಾಂಧೀ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪøಶತೆ ನಿವಾರಣೆಗಾಗಿ ಗಾಂಧೀ ನಡೆಸಿದ ಆಂದೋಲನ, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ನಿಜದೊಳು ಪುಗಲಿಲ್ಲ ಗಲ್ಲೇಬಾನಿಯ

0

ಡಾ.ಓ.ನಾಗರಾಜು

ಬೆಳೆಸಲಿಲ್ಲ ಕರವಿಡಿದು ಒಳಗೊಳ್ಳಲಿಲ್ಲಎಂದು ಬರಿದೆ ದೂರಿದೆನಲ್ಲಓದಿಸಲಿಲ್ಲ ಬರೆಸಲಿಲ್ಲ ಬುದ್ದಿಗಲಸಿ ಮೇಲೆತ್ತಲಿಲ್ಲಎಂದೆಣಿಸಿದ ಸೆಡವಿನಲಿಬರಿದೆ ಅಂತರ ಕಾಯ್ದುಕೊಂಡೆನಲ್ಲಮುಡಿದಿದ್ದರು ಬುದ್ಧನಗೆಮಲ್ಲಿಗೆಯ ಶ್ವೇತಕುರುಳ ಶಿರೋರುಹದಲಿಮಿಂಚಿಸುತ್ತಿದ್ದರು ಅಲ್ಲಮನ ಜ್ಞಾನ ಪ್ರಭೆಯ ವೇದಿಕೆಯಲಿ ಬೆಳ್ಳಿದಾಡಿಯ ನೀವಿತೋರಿದ್ದರು ಅನಾತ್ಮನಮಳೆಬಿಲ್ಲ ಹುಬ್ಬಕುಣಿಸಿಚಂದ್ರಹಾಸನಲಿಅಬ್ಬರಿಸುತಿದ್ದರು ಅವರೆ ದಮನಿತ ದರೈಸ್ತ್ರೀ ದನಿಯಾಗಿ ದಂತ ಹೊಳಹಿನ ಕ್ರಾಂತಿ ಕಿಡಿಯಾಗಿಪರಂಪರೆಯ ದರ್ಶಿಸಿದ್ದರುಬಕಾಲನ ನುಡಿಸಿ ಬಡಿಸಿಆಯ್ದುಕೊಳಲಿಲ್ಲ ನಾವೆಚೆಲ್ಲಿದ ಅ ಆ ಸಂತನ ಚಿಂತನಾಮುತ್ತುಗಳನಿಜದೊಳು ಪುಗಲಿಲ್ಲ ಗಲ್ಲೇಬಾನಿಯಂತರಂಗಅಂಕಾಲನವಿನಾ ಜರಿದಾಡಿದೆವಲ್ಲ

ಮುಂದುವರೆಸುತ್ತಿದ್ದೆನೆ?ಜರಿಯುವುದ ಆ ಒಂದು ವಿದ್ಯಮಾನ ಜರುಗದೇ ಹೋಗಿದ್ದರೆ..!ಆ ಒಂದು ದಿನ ಇಳಿಹೊತ್ತಿನ ಅಹರ್ನಿಶಿ ಸಂಕ್ರಮಣದಲಿಸಭಾಂಗಣದ ತುಂಬೆಲ್ಲಾ ತುಳುಕಿರಲು ಆಬಾಲಾವಯೋಕಲಾಭಿಜನರ್ಕಳುತ್ರಿಕರಣಗಳ ಸಹಿತ ಅಣಿಯಾಗಿದ್ದವಲ್ಲ ಮಾಧ್ಯಮಂಗಳು..!ಬಿಡುಗಡೆ ಮಾಡಿದಹೊತ್ತಿಗೆಯ ನೆತ್ತಿಯಲಿ ಹೊತ್ತರು ಕೆ ಬಿ ಸಿದ್ದಯ್ಯನೆರೆದವರ ದಂಗುಬಡಿಸಿಕುರಂಗರಾಜನ ಪಾದವಿದುಹೊತ್ತುನಾವ್ ಮೆರೆಸದೆ ಇನ್ನಾರು ಮೆರೆಸುವರುಎಂದುಘೋಷಿಸಿ ಬಿಟ್ಟರಲ್ಲ..!ನಂಬಿ…ಕೊಚ್ಚಿಹೋಯಿತು ಕ್ಷಣದಲಿಇಲ್ಲಿವರೆಗಿನ ಸ್ವಾರ್ಥತನು ಕೊಂಪೆಯ ಅಸಹನೆಅನಾದರ ಪಂಕತುಂಬಿಕೊಂಡೆನಾಗಲೆ ಅಆ ಸಂತನಸಂಚಿತ ಠೇವಣಿಯಾಗಿ ಈಗವರು ನೆನಕೆಯ ಭಂಡಾರಖಾಲಿತನ ಎಂಬುದಿಲ್ಲ ಈಗನನ್ನೊಳಗಿರವರು ಅನಾತ್ಮಕುರಂಗನ ಸಮಕ್ಷಮದಲಿ..ಇನಿತೂ ಅಂತರವಿಲ್ಲ ಅಗೊಬರುತಿಹರು ನಮ್ಮ ಅಲ್ಲಮ..ಬರಿದೆ ದೂರಿದೆವಲ್ಲ..?

-ಡಾ.ಓ.ನಾಗರಾಜು

ಸಾಹಿತಿ -ಸಂಶೋಧಕ ರಂಗಪ್ರೇಮಿತುಮಕೂರು

9448659646dr.o.nagaraj@gmail.com

ಅಬ್ಬಬ್ಬಾ! ಇಲ್ನೋಡಿ ಸ್ಮಾರ್ಟ್ ಸಿಟಿ

ತುಮಕೂರು: ಎಲ್ಲೆಡೆ ಜೋರು ಪ್ರಚಾರ ಪಡೆದುಕೊಂಡಿರುವ ಸ್ಮಾರ್ಟ್ ಸಿಟಿಗಳು ಹೇಗಿರಬಹುದು ಎಂಬ ಕುತೂಹಲವೇ?

ತುಮಕೂರು ನಗರಕ್ಕೆ ಬಂದು ನೋಡಿ ಎನ್ನುತ್ತಾರೆ ವಕೀಲ ಎಂ.ಬಿ.ನವೀನ ಕುಮಾರ್.

ದೇಶದಲ್ಲಿ ಎರಡನೇ ಹಂತದಲ್ಲಿ ಆಯ್ಕೆಯಾದ ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ನಗರ ಸಹ ಸೇರಿದೆ. ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾಗುತ್ತಿದ್ದಂತೆ ಜನ ಸಂಭ್ರಮಿಸಿದ್ದರು. ಈಗ ಅದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನಡೆಯುತ್ತಿರುವ ಕಾಮಗಾರಿಗಳು ಅವೈಜ್ಞಾನಿಕ ವಾಗಿವೆ. ಕುಂಟುತ್ತಾ ಸಾಗಿವೆ. ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕಾಮಗಾರಿಯಿಂದಾಗಿ ರಸ್ತೆ ಗಳ ದೂಳುಮಯವಾಗಿವೆ. ಇದರಿಂದ ಮಕ್ಕಳು, ದೊಡ್ಡವರು ಆಸ್ತಮಾ, ಜ್ವರ, ಕೆಮ್ಮಿನಿಂದ ನರಳುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಯಾರಿಗೂ ನೆಮ್ಮದಿ ಇಲ್ಲ. ಕಾಮಗಾರಿ ಇಷ್ಟು ನಿಧಾನವಾಗಿ ಮಾಡಬಾರದು. ಕಾಮಗಾರಿ ವೇಳೆ ರಸ್ತೆ ನಿರ್ವಹಣೆ ಗಾಗಿಯೇ ಹಣ ನೀಡುತ್ತಾರೆ. ಅಗೆದ‌ ಮಣ್ಣನ್ನು ಹೊರಗೆ ಸಾಗಿಸುವ ಬದಲು ರಸ್ತೆಯಲ್ಲೇ ಹರಡಲಾಗುತ್ತಿದೆ. ಇದರಿಂದ ದೂಳು ಹೆಚ್ಚಾಗಿದೆ. ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಾರೆ ವಕೀಲ ನವೀನ್.

ಬಾರ್ ಲೈನ್ ರಸ್ತೆಯಲ್ಲಿ ಮೂರು ತಿಂಗಳಿಂದ ರಸ್ತೆ ಅಗೆತ ಆರಂಭಿಸಿರುವುದು ಇನ್ನು ಮುಗಿದಿಲ್ಲ. ಮಳೆ ಬಂದರೆ ರಸ್ತೆಗೆ ಕಾಲಿಡಲಾಗುವುದಿಲ್ಲ. ಮಳೆ ನಿಂತರೆ ದೂಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಇಂತ ಅದ್ವಾನ ಎಲ್ಲೂ ಕಂಡಿಲ್ಲ. ಶಾಸಕರು ಗಮನ ಹರಿಸಬೇಕು ಎಂದರು.

ಇನ್ನೊಂದೆಡೆ ‌ದುಂಡು ಮೇಜಿನ ಸಭೆ ನಡೆಸಿರುವ ನಾಗರಿಕ ಸಂಘಟನೆ ಗಳು ಇಡೀ ಯೋಜನೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಅತ್ತ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವರ ಸಹ ಭಾಗಿತ್ವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

( ಚಿತ್ರಗಳು: ನಿರಂಜನ್)

ದೀಪುಗೆ ಜೆಡಿಎಸ್ ಸಾರಥ್ಯ

ಕೆ.ಬಿ.ದಯಾನಂದ ಗೌಡ

ತುಮಕೂರು; ಜೆಡಿಎಸ್ ಹಿರಿಯ ಮುಖಂಡ, ಬೋರೇಗೌಡ ಅವರ ಪುತ್ರ ಕೆ.ಬಿ.ದಯಾನಂದ ಗೌಡ (ದೀಪು ಬೋರೇಗೌಡ) ಅವರನ್ನು ಜೆಡಿಎಸ್ ಯುವ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇಮಕ ಮಾಡಿದ್ದಾರೆ.
ಈ ಮೂಲಕ ಪಕ್ಷದ ಯುವ ಘಟಕದ ಚುಕ್ಕಾಣಿ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ, ತುಮಕೂರು ನಗರ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಯಲ್ಲಿ ಬೋರೇಗೌಡ ರು ಹಾಗೂ ದೀಪು ಪ್ರಮುಖ ಪಾತ್ರ ವಹಿಸಿದ್ದರು.

ತುಮಕೂರು ನಗರ ಕ್ಷೇತ್ರದಿಂದ‌ ಬೋರೇಗೌಡ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸ್ವ ಪಕ್ಷೀಯರ ಚಿತಾವಣೆಯಿಂದ‌ ಅವರಿಗೆ ಟಿಕೆಟ್ ತಪ್ಪಿತ್ತು.

ಚುನಾವಣೆ ಬಳಿಕ ಈ ಬಗ್ಗೆ ದೇವೇಗೌಡರು ಸಹ ವಿಷಾದಿಸಿದ್ದರು. ಈಗ ದೀಪು ಅವರಿಗೆ ಉನ್ನತ ಸ್ಥಾನ ನೀಡಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ ತಮ್ಮದೇ ಆದ‌ ಪ್ರಭಾವ ಹೊಂದಿರುದ್ದಾರೆ. ಅವರ ನೇಮಕ ಅವರ ಅಭಿಮಾನಿಗಳು, ಯುವಕರಿಗೆ ಖುಷಿ ಸಂದಿದೆ.

ದೇವೇಗೌಡರು ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ತುಮಕೂರು ಜಿಲ್ಲೆ ಮಾತ್ರ ಅಲ್ಲ, ರಾಜ್ಯದಲ್ಲಿ ಯುವಕರನ್ನು ಪಕ್ಷಕ್ಕೆ ಕರೆ ತಂದು ಪಕ್ಷ ಬಲಪಡಿಸಲು ಪಣ ತೊಟ್ಟು ಕೆಲಸ ಮಾಡುತ್ತೇನೆ ಎಂದು ದೀಪು ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದರು.

ಅಕ್ರಮ ಮರಳು ಶೇಖರಣೆ ಮೇಲೆ ತಹಶೀಲ್ದಾರ್ ದಾಳಿ

ತುಮಕೂರು:
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಿದ್ದ ಅಡ್ಡೆಯ ಮೇಲೆ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ಟ್ರಾಕ್ಟರ್ ಲೋಡು ಮರಳನ್ನು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೋಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿತಿಮ್ಮಪ್ಪ ಸ್ವಾಮಿ ದೇವಸ್ಥಾನದ ಸಮೀಪ ದೂರದ ಅರಣ್ಯ ಪ್ರದೇಶದ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಶೇಖರಣೆ ಮಾಡಲಾಗಿದೆ ಎಂಬ ಮಾಹಿತಿ ಅರಿತ ತಹಶೀಲ್ದಾರ್ ಹಾಗೂ ಸಿಬ್ಬಂಧಿ ದಿಢೀರ್ ದಾಳಿ ನಡೆಸಿ 4 ಟ್ರಾಕ್ಟರ್ ಲೋಡ್ ನಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ. ಹೊಳವನಹಳ್ಳಿ ಬಳಿ ಹರಿಯುವ ಜಯಮಂಗಲಿ ನದಿಯಿಂದ ಪ್ರತಿನಿತ್ಯ ಟ್ರಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿ ಅರಣ್ಯ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತಿತ್ತು. ಮಧ್ಯ ರಾತ್ರಿ 12 ಗಂಟೆ ನಂತರ ಶೇಖರಣೆ ಮಾಡಿದ ಮರಳನ್ನು ಲಾರಿಗೆ ತುಂಬಿ ಬೆಂಗಳೂರು ನಗರಕ್ಕೆ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಪ್ರತಿದಿನ ರಾತ್ರಿ ತಾಲ್ಲೂಕಿನ ಗಡಿಭಾಗ ಬೊಮ್ಮಲದೇವಿಪುರ, ಅಕ್ಕಾಜಿಹಳ್ಳಿ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಮರಳು ರಾತ್ರಿ ವೇಳೆ ದಂದೇಕೋರರು ಸಾಗಾಣಿಕೆ ಮಾಡುತ್ತಿದ್ದರು. ಈ ಬಗ್ಗೆ ಸ್ಥಳಿಯ ಜನರು ಪ್ರಶ್ನೆ ಮಾಡಿದರೆ ಜೀವ ಬೆದರಿಕೆ ಹಾಕುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

 

ಮಾಹಿತಿ ಕೊರತೆ: ಸಭೆ ಬಹಿಷ್ಕರಿಸಿದ ಹಿತರಕ್ಷಣಾ ಸಮಿತಿ ಸಭೆ ಎಸ್ಸಿ, ಎಸ್ಟಿ ಮುಖಂಡರು

0

ತುಮಕೂರು:
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಎಸ್ಸಿ, ಎಸ್ಟಿ ಜನಾಂಗದ ಹಿತರಕ್ಷಣಾ ಸಭೆಯಲ್ಲಿ ಇಲಾಖಾ ವಾರು ಕಾರ್ಯಸೂಚಿ ನೀಡಿಲ್ಲ ಎಂದು ಆಪಾಧಿಸಿ ಮುಖಂಡರು ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ಶುಕ್ರವಾರ ನಡೆಯಿತು.
ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆ ಎರಡು ವರ್ಷದ ನಂತರ ಕರೆದಿದ್ದಾರೆ. ಆದರೂ ಮುಖಂಡರಿಗೆ ಸಭೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸಭೆ ನಾಳೆ ಇದೆ ಎಂದಾಗ ಕೇವಲ ಒಂದು ದಿನ ಮಾತ್ರ ಮುಂಚಿತವಾಗಿ ಜನಾಂಗದ ಮುಖಂಡರಿಗೆ ಸಭೆ ಹಾಜರಾಗುವಂತೆ ಆತುರಾತುರವಾಗಿ ಆಹ್ವಾನ ನೀಡಲಾಗಿದೆ. ಈ ಹಿಂದೆ ಹಿತರಕ್ಷಣಾ ಸಭೆ ಇದ್ದಾಗ ಒಂದು ವಾರ ಮುಂಚಿತವಾಗಿ ಜನಾಂಗದ ಮುಖಂಡರಿಗೆ ಸಭೆಗೆ ಆಹ್ವಾನ ನೀಡುತ್ತಿದ್ದರು. ಆದರೆ ಈಗ ಏಕಾಏಕಿ ಸಭೆ ಕರೆಯಲಾಗಿದೆ. ಹಾಗೂ ಸಭಾ ಕಾರ್ಯಸೂಚಿ ಇಲ್ಲದೆ ಸಭೆ ವ್ಯವಸ್ಥೆ ಮಾಡಲಾಗಿದೆ ಎಂದು ಮುಖಂಡರು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಗ್ರಾಮಗಳ ಅಭಿವೃದ್ದಿಯ ಜೊತೆ ಸಮುದಾಯದ ಬಡಜನರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರದ ಜೊತೆ ಅಧಿಕಾರಿ ವರ್ಗವು ಸಂಪೂರ್ಣ ವಿಫಲವಾಗಿದೆ. ಕಳೆದ ಎರಡು ವರ್ಷದ ಹಿತರಕ್ಷಣಾ ಸಭೆಯಲ್ಲಿ ತಿಳಿಸಿರುವ ಸಮಸ್ಯೆಗಳೇ ಇನ್ನೂ ಜ್ವಲಂತವಾಗಿ ಉಳಿದಿವೆ. ನೂತನವಾಗಿ ವರ್ಗಾವಣೆ ಆಗಿ ಬಂದಿರುವ ಅಧಿಕಾರಿಗಳು ಹಿಂದಿನ ಸಭೆಯ ಮಾಹಿತಿ ಪಡೆದು ಸಭೆ ನಡೆಸಬೇಕು ಎಂದು ಆಗ್ರಹಪಡಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ, ಎರಡು ವರ್ಷಗಳ ಬಳಿಕ ಹಿತರಕ್ಷಣಾ ಸಮಿತಿ ಸಭೆ ಕರೆಯಲಾಗಿದೆಯಾದರೂ ಸರಿಯಾದ ಕಾರ್ಯಸೂಚಿ ಇಲ್ಲ. ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದಾಗಿ ಆತುರಾತುರವಾಗಿ ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ ವಿನಹ ಹಿತರಕ್ಷಣಾ ಸಭೆಯ ಉದ್ದೇಶದಿಂದ ಕರೆದಿಲ್ಲ. ಮೂರು ತಿಂಗಳಿಗೊಮ್ಮೆ ಮಾಡಬೇಕಾದ ಹಿತರಕ್ಷಣಾ ಸಮಿತಿ ಸಭೆ ವರ್ಷಗಳ ನಂತರ ಮಾಡಲು ಶುರು ಮಾಡಿದ್ದಾರೆ. ಇದು ದಲಿರ ಬಗ್ಗೆ ಇರುವ ನಿರ್ಲಕ್ಷವನ್ನು ತೋರುತ್ತದೆ ಎಂದರು.
ಹೊಳವನಹಳ್ಳಿ ಜಯರಾಮ್ ಮಾತನಾಡಿ, ಅಂಬೇಡ್ಕರ್ ಮತ್ತು ವಾಲ್ಮೀಕಿಅಭಿವೃದ್ದಿ ನಿಗಮದಿಂದ ಫಲಾನುಭವಿಗಳಿಗೆ ದೊರಕಬಹುದಾದ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಬಂದ ಹಣ ವಾಪಾಸ್ಸಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕನರಸಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ನಟರಾಜು, ಮುಖಂಡರಾದ ಬಿ.ಡಿ.ಪುರ ಸುರೇಶ್, ಚಿಕ್ಕರಂಗಯ್ಯ, ಹನುಂಂತರಾಜು, ದೊಡ್ಡಯ್ಯ, ಮಹೇಶ, ನರಸಿಂಹಮೂರ್ತಿ, ಗಂಗರಾಜು, ಸಿದ್ದೇಶ, ರಂಗರಾಜು, ಗಣೇಶ್, ಶ್ರೀರಾಮುಲು, ಲಕ್ಷ್ಮಿನಾರಾಯಣ, ಸಿಪಿಐ ಎಫ್.ಕೆ. ನದಾಪ್, ತಾಲ್ಲೂಕು ಪಂಚಾಯಿತಿ ಇಓ ಎಸ್. ಶಿವಪ್ರಕಾಶ್, ಕೃಷಿ ಇಲಾಖೆ ಎಡಿಎ ನಾಗರಾಜು, ರೇಷ್ಮೆಇಲಾಖೆ ಎಡಿಎ ಲಕ್ಷ್ಮೀನರಸಪ್ಪ, ಟಿಎಚ್ಓ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕುಮಾರ್, ಎಸ್ಕಾಂ ಇಲಾಖೆ ಮಲ್ಲಣ್ಣ, ಪಶು ಇಲಾಖೆ ಡಾ. ಶಶಿಕುಮಾರ, ಎಇಇಗಳಾದ ಗಂಗಾಧರ್ ಕೊಡ್ಲಿ, ರಂಗಪ್ಪ, ಮಂಜುನಾಥ, ಅರಣ್ಯಾಧಿಕಾರಿ ಸತೀಶ್ ಚಂದ್ರ ಇತರರು ಇದ್ದರು.

ಈ ಹಿಂದಿನ ಸಭೆಯಲ್ಲಿ ಏನಾಗಿದೆ ಎಂಬುದು ಗೊತ್ತಿಲ್ಲ. ನಾನು ಬಂದು ಒಂದು ತಿಂಗಳಲ್ಲಿ ಸಭೆ ಕರೆದಿದ್ದೇವೆ. ಗ್ರಾಮಪಂಚಾಯಿತಿಯ ಶೇ. 25ರ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ. ಮುಂದಿನ ಸಭೆಯ ದಿನಾಂಕ ನಿಗಧಿ ಪಡಿಸಿ ತಿಳಿಸಲಾಗುವುದು.
–ಶಮೀಮ್ ಉನ್ನಿಸಾ. ಸಮಾಜಕಲ್ಯಾಣಾದಿಕಾರಿ

ಎಸ್ಸಿ, ಎಸ್ಟಿ ಜನಾಂಗಕ್ಕೆ ಸರ್ಕಾರದಿಂದ ಬರುವ ಸೌಲಭ್ಯಗಳ ನಾಲ್ಕು ವರ್ಷದ ಮಾಹಿತಿ ಮುಂದಿನ ಸಭೆಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಇಲಾಖೆ ಅಧಿಕಾರಿಗಳು ಸಭೆಗೆ ಬರುವಾಗ ಸಮರ್ಪಕ ಮಾಹಿತಿಯೊಂದಿಗೆ ಬರುವಂತೆ ನೊಟೀಸ್ ಜಾರಿ ಮಾಡಲು ಸಮಾಜಕಲ್ಯಾಣಾಧಿಕಾರಿಗೆ ಸೂಚಿಸಲಾಗಿದೆ. ಮಾಹಿತಿ ನೀಡದಿದ್ದರೇ ಮೇಲಾಧಿಕಾರಿ ಗಮನಕ್ಕೆ ತರಲಾಗುವುದು.
–ಬಿ.ಎಂ. ಗೋವಿಂದರಾಜು. ತಹಶೀಲ್ದಾರ್.

 

 

ಧನ್ವಂತರಿ ಚಿಕಿತ್ಸಾ ಪದ್ದತಿ ಉತ್ತಮ

ತುಮಕೂರು ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯಿಂದ ಧನ್ವಂತರಿ ಜಯಂತಿ ಹಾಗೂ 4ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅಲೋಪತಿ ಚಿಕಿತ್ಸಾ ಪದ್ದತಿಯಿಂದ ಆಗುವ ಅಡ್ಡಪರಿಣಾಮ ಅರಿತು ಜನರು ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಆಯುರ್ವೇದ ಪದ್ದತಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಭಾರತದಲ್ಲಿ ಅನಾದಿ ಕಾಲದಿಂದಲೂ ಧನ್ವಂತರಿ ಚಿಕಿತ್ಸೆ ಅನುಸರಿಸುತ್ತಿದ್ದೇವೆ. ಬೇರೆ ದೇಶಗಳಲ್ಲಿ ಕೂಡ ಆಯುರ್ವೇದ ಪದ್ದತಿ ಅನುಸರಿಸಲಾಗುತ್ತಿದೆ. ಇದೊಂದು ಉತ್ತಮ ಪದ್ದತಿಯಾಗಿದ್ದು, ಆಯುರ್ವೇದ ಅಭ್ಯಾಸ ಮಾಡುವವರು ಅದರ ಬಗ್ಗೆ ಅರಿವು ಮೂಡಿಸಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ, ಆಯುರ್ವೇದ ನಮ್ಮ ದೇಶದ ಚಿಕಿತ್ಸಾ ಪದ್ದತಿಯಾಗಿದೆ. ‘ದೀರ್ಘಾಯುಕ್ಕಾಗಿ ಆಯುರ್ವೇದ’ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಹೀಗಾಗಿ ಇದನ್ನು ಪ್ರಚುರಪಡಿಸಬೇಕು ಇತ್ತೀಚೆಗೆ ಅಕಾಲಿಕ ಮರಣ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆರ್ಯುವೇದ ಪದ್ದತಿ ಅನುಸರಿಸಬೇಕು. ದೀರ್ಘಾಯುಷಿಗಳಾಗಬೇಕು ಎಂದರು.

ಕಲಾಭ್ಯಾಸದಿಂದ ಏಕಾಗ್ರತೆ ಸಾಧ್ಯ

ಕಲೆಯಲ್ಲಿ ತೊಡಗಿಸಿಕೊಂಡು ಅಭ್ಯಾಸ ಮಾಡುವುದರಿಂದ ಏಕಾಗ್ರತೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಭಿವೃದ್ಧಿ ಅಧಿಕಾರಿ ಕೆ.ಹೆಚ್. ಅಂಬಿಕಾ ತಿಳಿಸಿದರು.

ತುಮಕೂರಿನ ಬಾಲಭವನದಲ್ಲಿ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಆಯ್ಕೆ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು. 9-16 ವರ್ಷ ವಯೋಮಾನದ ಮಕ್ಕಳಿಗಾಗಿ ಸೃಜನಾತ್ಮಕ ಕಲೆ/ಸೃಜನಾತ್ಮಕ ಬರವಣಿಗೆ/ ಸೃಜನಾತ್ಮಕ ಪ್ರದರ್ಶನ ಕಲೆ/ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.

ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಕಲಾಶ್ರೀ ಶಿಬಿರವು ಸಹಕಾರಿಯಾಗಿದೆ. ಸೋಲು-ಗೆಲುವು ಮುಖ್ಯವಲ್ಲ. ಶಿಬಿರದಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಪ್ರತಿಯೊಂದು ಮಗುವೂ ಶಿಬಿರದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಬಾಲಭವನದ ಸದಸ್ಯ ಎಂ.ಬಸವಯ್ಯ ಮಾತನಾಡಿ ಬೇರೆಯವರಿಗೆ ಆನಂದ ನೀಡುವ ಶಕ್ತಿ ಕಲಾವಿದರಿಗೆ ಇರುತ್ತದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಹೊರತಂದು ಸಾಧನೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ. ಏಕಾಗ್ರತೆ, ಧ್ಯಾನ, ಮೌನ, ಪರಿಶ್ರಮದಿಂದ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಕಲಾಶ್ರೀ ಶಿಬಿರಕ್ಕೆ ಆಯ್ಕೆಯಾದ ಮಕ್ಕಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ರಂಗಭೂಮಿ ಕ್ಷೀಣಿಸುವುದಿಲ್ಲ..

ರಂಗಭೂಮಿ ಕ್ಷೀಣಿಸುವುದಿಲ್ಲ.. ಬದಲಿಗೆ ಅದು ಬೆಳವಣಿಗೆ ಕಂಡು ಬರುತ್ತಿದ್ದು ನಾಟಕ ನೋಡುವ ಆಸಕ್ತರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಯುವಬರಹಗಾರರ ಒಕ್ಕೂಟ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಸಾಧಕರೊಂದಿಗೆ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ರಂಗಭೂಮಿ ಕ್ಷೀಣಿಸುತ್ತಿದೆ ಅನ್ನಿಸುವುದಿಲ್ಲ.

ನಾಟಕ ಪ್ರಯೋಗಗಳು ನಡೆಯುತ್ತಿವೆ. ಆದರೆ ನೋಡುಗರ ಸಂಖ್ಯೆ ಹೆಚ್ಚಬೇಕು ಎಂದರು. ಕನ್ನಡ ಭಾಷೆಯೂ ಕೂಡ ಮರೆಯಾಗುತ್ತಿಲ್ಲ. ಕನ್ನಡ ಭಾಷೆ ನಶಿಸುವುದಿಲ್ಲ. ಕನ್ನಡ ಭಾಷೆ ಬೆಳೆಯುತ್ತದೆ. ಆದರೆ ಇಂಗ್ಲೀಷ್ ಭಾಷೆ ಕಳೆದುಹೋಬಹುದು. ಇಂಗ್ಲೀಷ್ ಭಾಷೆಯಲ್ಲಿ ಆಗುತ್ತಿರುವ ಬದಲಾವಣೆ ಪಲ್ಲಟಗಳು ಇದಕ್ಕೆ ಕಾರಣ ಎಂದರು.

ನಾನು ರಾಜ್ಯಸಭೆಗೆ ಆಯ್ಕೆಯಾದಾಗ ನನಗೆ ಯಾವುದೇ ಒಂದು ಕ್ಷೇತ್ರ ಇರಲಿಲ್ಲ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಪೂರ್ವ ಭಾಗದಿಂದ ಈಶಾನ್ಯ ರಾಜ್ಯಗಳವರೆಗೆ ನನಗೆ ಕ್ಷೇತ್ರ ವ್ಯಾಪ್ತಿ ಇತ್ತು. ನಾನು ರಾಜ್ಯಸಭೆ ಸದಸ್ಯರಾದ ಮೇಲೆ ಸಾಕಷ್ಟು ಕಲಿತೆ. ಹಲವು ಮಂದಿ ಪಂಡಿತರು, ಪ್ರಶಸ್ತಿ ಪುರಸ್ಕøತರನ್ನು ಭೇಟಿಯಾದೆ. ಇದರಿಂದ ನನಗೆ ಉತ್ತಮ ಸಂಪರ್ಕ ಬೆಳೆಯಿತು. ಸಂತೋಷವೂ ಆಯಿತು ಎಂದು ತಿಳಿದರು.

ಮುಖ್ಯ ಅತಿಥಿಯಾಗಿದ್ದ ಲೇಖಕಿ ಮಲ್ಲಿಕಾ ಬಸವರಾಜು ಮಾತನಾಡಿ, ಜಯಶ್ರೀ ಅವರನ್ನು ಕರೆಸಿರುವುದು ಒಳ್ಳೆಯದು ಎಂದರು. ಕಾವ್ಯ ಬದುಕನ್ನು ಮಾನವೀಯಗೊಳಿಸುತ್ತದೆ. ಕಾವ್ಯ ಓದುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ, ಹಿರಿಯ ಕಲಾವಿದ ಲಕ್ಷ್ಮಣ್ ದಾಸ್ ಮಾತನಾಡಿದರು. ಎಸ್‍ವಿಎಸ್ ಶಿಕ್ಷಣ ಮಹಾವಿದ್ಯಾಲಯ, ಬಸವೇಶ್ವರ ಕಾಲೇಜು ಮತ್ತು ಅಕ್ಷಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.