ಬೆಂಗಳೂರು: ಇಲ್ಲಿ ನಡೆದ ಸಿ.ಎಂ.ಆರ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 17 ವಿದ್ಯಾರ್ಥಿಗಳು 18 ಚಿನ್ನದ ಪದಕಗಳನ್ನು ಪಡೆದರು.
ಭಾನುವಾರ ನಡೆದ ಸಮಾರಂಭದಲ್ಲಿ ಎಂ.ಕಾಂ ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದ ಪ್ರಿಯಾದರ್ಶಿನಿ ಸಿ.ಎಂ.ಆರ್ ಚಿನ್ನದ ಪದಕ ಮತ್ತು ಐಎಸ್‌ಡಿಸಿ ಚಿನ್ನದ ಪದಕವನ್ನು ಪಡೆದುಕೊಂಡರು. ಚಿತ್ರನಟ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು 216 ವಿದ್ಯಾರ್ಥಿಗಳಿಗೆ ಪದವಿ, ಮೂವರಿಗೆ ಡಾಕ್ಟರೇಟ್, 198 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ವಿತರಿಸಿದರು.
ವಿ. ರವಿಚಂದ್ರನ್ ಡಾಕ್ಟರೇಟ್ ಸ್ವೀಕರಿಸಿ, ಕಲಾ ಸೇವೆಯನ್ನು ಗುರುತಿಸಿ, ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ. ಗೌರವ ಡಾಕ್ಟರೇಟ್ ಅನ್ನು ನನ್ನನ್ನು ಸಿನಮಾ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂದು ಕನಸ್ಸು ಕಂಡು ಸಾಧನೆಗೆ ಪ್ರೋತ್ಸಾಹಿಸಿದ ತಂದೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.
Comment here