ನವದೆಹಲಿ: ಬಾಂಗ್ಲಾ ವಿರುದ್ಧ ಪಂತ್ ಮಾಡಿದ ಎಡವಟ್ಟುಗಳನ್ನು ಜೀರ್ಣಿಸಿಕೊಳ್ಳಲಾಗದ ಭಾರತದ ಕ್ರಿಕೆಟ್ ಅಭಿಮಾನಿಗಳು ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಾರೆ.
ಟಿ–20 ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ಎಸೆತಗಳು ಉಳಿದಿರುವಂತೆ ಏಳು ವಿಕೆಟ್‌ಗಳಿಂದ ಭಾರತದ ಎದುರು ಜಯಗಳಿಸಿತು. ದೋನಿ ಅನುಪಸ್ಥಿತಿ ಎ್ದು ಕಾಣುತ್ತಿತ್ತು. ದೋನಿಯ ಸ್ಥಾನದಲ್ಲಿ ವಿಕಟ್ ಕೀಪರ್ ಆಗಿದ್ದ ರಿಷಭ್ ಪಂತ್ ಅವರನ್ನು ಕಂಡು ಭಾರತದ ಅಭಿಮಾನಿಗಳು ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಕೆಟ್ ಕೀಪರ್ ಚುರುಕಾಗಿರಬೇಕು. ಮಹೇಂದ್ರ ಸಿಂಗ್ ದೋನಿಯಿಂದ ಪಂತ್ ಕಲಿಯಬೇಕಾಗಿದ್ದು ಸಾಕಷ್ಟಿದೆ. ಒಂದೇ ಓವರ್‌ನಲ್ಲಿ ಮೂರು ತಪ್ಪುಗಳನ್ನು ಮಾಡಿ ತಂಡದ ಸೋಲಿಗೆ ಪಂತ್ ಕಾರಣರಾದರೂ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಯಜುವೇಂದ್ರ ಚಹಲ್ ಅವರ ಓವರ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯುಗಾಗಿ ಡಿಆರ್‌ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಭ್ ಪಂತ್ ಅದನ್ನು ಪಡೆಯಲು ಮುಂದಾಗಲಿಲ್ಲ. ಪಂತ್ ಎಡವಟ್ಟಿನಿಂದ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಬಾಲ್ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್‌ಎಸ್ ಕಳೆದುಕೊಂಡಿತು. ದೋನಿ ಅವರ ಸಾನಿಧ್ಯ ಎಷ್ಟು ಎಂಬುದು ಇದರಿಂದಲೇ ತಿಳಿದು ಬರುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಪಂತ್ ರನ್ನು ಟ್ರೋಲ್ ಮಾಡುತ್ತಿದ್ದಾರೆ.