Thursday, March 12, 2026
Google search engine
Home Blog Page 39

ಅಮ್ಮ : ತಾಯಂದಿರದಿನದ ಕವನ

0

ರಜನಿ ಎಂ

ನನಗನಿಸುತ್ತದೆ
ನಿನ್ನಷ್ಟು ತಾಳ್ಮೆ ನನಗಿಲ್ಲ

ನಿನ್ನ ತರಹವೇ ಇದೇನೇ
ಎಂದು ನೂರು ಜನ ಹೇಳಿದರೂ
ನಿನ್ನಷ್ಟು ಸುಂದರ ಇಲ್ಲ..

ನೀನು ನಿನ್ನ ಮಕ್ಕಳಿಗೆ ಕೊಟ್ಟಷ್ಟು
ನಾನು….ಊಹೂ
ಕೊಡಲು ಸಾಧ್ಯವೇ ಇಲ್ಲ.

ನಿನಗೆ ನೀನೇ ಸಾಟಿ..
ನನ್ನ ಕಷ್ಟಗಳೆಲ್ಲ ನಿನ್ನ
ಅನುಭವದ ಮೂಸೆಯಲ್ಲಿ
… ಬರೇ.. ಬಿಟ್ಟ ಸ್ಥಳ ತುಂಬಿರಿ…

ನೀನು ಸಾದಾ ಕಾಟನ್ ಸೀರೆಯಲ್ಲಿ
ನಕ್ಕ ನಿಷ್ಕಲ್ಮಶ ನಗು…
ಇನ್ನೂ ನನ್ನ ಮುಖದಲ್ಲಿ ಉಕ್ಕಿಲ್ಲ..

ನಿನ್ನ ನಾಳೆಯ
ತಿಂಡಿ ತಯಾರಿ..ನಾನು
ಪರೀಕ್ಷೆಗೂ ಅಷ್ಟು ಶ್ರದ್ಧೆ ಇಲ್ಲ..

ಅರಮನೆಯೇ ಎದುರಿದ್ದರೂ
ಮಕ್ಕಳ ಹಿತಾಸಕ್ತಿಯೆ
ನಿನಗೆ ಹೆಚ್ಚು..

ಮನೆಯವರ ಕೋಪ
ತಾಪ ,ಹುಚ್ಚಾಟ..
ಮನಸ್ತಾಪ ಎಲ್ಲ …ಶಾಲೆಯಿಂದ
ಬಂದ ಕ್ಷಣ … ಎಲ್ಲಿಯೋ ಬಚ್ಚಿಡುತ್ತಿದ್ದೆ…
ಬಡತನವನ್ನೂ ಸೇರಿಸಿ .

ಬರೇ ಬೇಳೆ ಸಾರು ..
ನಿನ್ನಂತೆ ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೂ
ಓಹ್ …ನಿನ್ನ ಕೈ ರುಚಿ ಇಲ್ಲ.

ಆಗುತ್ತೆ ಆಗೆ ಆಗುತ್ತೇ
ಮಾಡುತ್ತೀಯ …ಇದೆ ನಿನ್ನ ಮಾತು … ನೀನು
ಕೌನ್ಸೆಲಿಂಗ್ ಕಲೆ ಎಲ್ಲಿ ಕಲಿತಿದ್ದೆ ??

ಬೆಟ್ಟ ಕಳಚಿ ಬಿದ್ದರೂ
ನೀನು ಅಂಗೈಲೀ …ಹಿಡಿದು
ಬಿಡುತ್ತಿದ್ದೆ…..

ಕಷ್ಟದಲ್ಲೂ
ಸುಖದಲ್ಲೂ ಸ್ಥಿತ ಪ್ರಜ್ಞೆ..

ದೋಸೆ ಹುಯ್ದರೂ
ಅಲ್ಲಿ ನಿನ್ನ ಅತ್ಮ, ಕಲೆ,ಶ್ರದ್ಧೆ,ಇತ್ತು
ಅಂದರೆ.. ಇನ್ನು…ನಿನ್ನ ಮಗಳನ್ನು
ಹೇಗೆ ನೀನು ಸಿದ್ಧ ಪಡಿಸಿರಬೇಕು ??

ಅದಕ್ಕೆ ನ್ಯಾಯ
ಒದಗಿಸುವ ಜವಾಬ್ದಾರಿ
ನನ್ನ ಮೇಲಿದೆ … ಅಮ್ಮಾ.

ಎಂ.ಟಿ.ಕೃಷ್ಣಪ್ಪ ಐತಿಹಾಸಿಕ ಗೆಲುವು: ಕಾರಣವೇನು?

ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಎಂ.ಟಿ .ಕೃಷ್ಣಪ್ಪ ಅವರು ಜೆಡಿಎಸ್ ನಿಂದ 10 ಸಾವಿರ ಲೀಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ವಿರುದ್ಧ ಜಯಬೇರಿಗಳಿಸಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ
ಎಂ.ಟಿ.ಕೃಷ್ಣಪ್ಪ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ 68163 ಮತಗಳನ್ನು ಪಡೆದಿದ್ದಾರೆ.

ಎಂ. ಟಿ. ಕೃಷ್ಣಪ್ಪ ಜಯಗಳಿಸುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು
ಪಟ್ಟಣದ ತಾಲ್ಲೂಕು ವೃತ್ತ ಹಾಗು ಜೆಡಿಎಸ್ ಕಚೇರಿ ಮುಂದೆ ಪಟಾಕಿ‌ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಪಟ್ಟಣದ ಪ್ರಮುಖ ರಸ್ತೆಗಳು ಹಾಗು ವಿವಿಧ ವಾರ್ಡ್ ಗಳಲ್ಲಿ ಕಾರ್ಯಕರ್ತರು
ಜೆಡಿಎಸ್ ಪಕ್ಷದ ಬಾವುಟದೊಂದಿಗೆ ಬೈಕ್ ನಲ್ಲಿ ತೆರಳಿ ಎಂ.ಟಿ.ಕೃಷ್ಣಪ್ಪ ಪರ ಜಯ ಘೋಷ ಕೂಗಿ ಮೆರವಣಿಗೆ ನಡೆಸಿದರು.

ತಾಲ್ಲೂಕಿನ ಪ್ರತಿ ಗ್ರಾಮಗಳ ದ್ವಾರದಲ್ಲಿ ಕಾರ್ಯಕರ್ತರು ಜೆಡಿಎಸ್ ಬಾವುಟ ಕಟ್ಟಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಮತ ಎಣಿಕೆ ಕೇಂದ್ರದಿಂದ ನೇರವಾಗಿ ಎಂ.ಟಿ.ಕೃಷ್ಣಪ್ಪ ತನಗೆ ಹೆಚ್ಚು ಲೀಡ್ ಕೊಟ್ಟ ಸಿ.ಎಸ್.ಪುರ ಹೋಬಳಿಗೆ ತೆರಳಿ ಅಲ್ಲಿ ನೆರೆದಿದ್ದ ಅಪಾರ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ಆಚರಿಸಿ ಗೆಲುವು ನೀಡಿದ ಜನತೆಗೆ ಧನ್ಯವಾದ ತಿಳಿಸಿದರು.

ನಂತರ ತುರುವೇಕೆರೆ ಪಟ್ಟಣಕ್ಕೆ ಆಗಮಿಸಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ತೆರೆದವಾಹನದಲ್ಲಿ ಡಿ.ಜಿ.ಸೌಂಡ್ ನೊಂದಿಗೆ ಮೆರವಣಿಗೆ ನಡೆಸಿ, ಗೆಲುವಿಗೆ ಶ್ರಮಿಸಿದ ಎಲ್ಲರಿಗು ಕೃತಜ್ಞತೆ ಸಲ್ಲಿಸಿದರು.

ಎಂ.ಟಿ.ಕೃಷ್ಣ ಪ್ಪ ಅವರ ಗೆಲುವಿಗೆ ಮುಖ್ಯವಾಗಿ ಕಳೆದ ಬಾರಿ ಕೇವಲ ಅಲ್ಪ ಮತಗಳ‌ ಅಂತರಿಂದ‌ ಸೋಲು ಕಂಡಿದ್ದು ಈ ಬಾರಿ ಇದು ಕೊನೆ ಚುನಾವಣೆ ಎಂಬ ಅನುಕಂಪದ ಅಲೆ,
ಕಾರ್ಯಕರ್ತರು ಪಕ್ಷ ಹಾಗು ಎಂ.ಟಿ.ಕೃಷ್ಣ ಪ್ಪ ಅವರ ಮೇಲೆ ಇಟ್ಟಿರುವ ಅಚಲವಾದ ನಂಬಿಕೆ.

ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಶಾಶ್ವತ ಅಭಿವೃದ್ಧಿ ಕೆಲಸಗಳು, ಪಕ್ಷಕ್ಕೆ ವಲಸಿಗರ‌ ಸೇರ್ಪಡೆ, ಪಕ್ಷದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಕುಮಾರ್ ಸ್ವಾಮಿಯವರನ್ಬು ಮುಖ್ಯ ಮಂತ್ರಿಗಳನ್ನಾಗಿ ಮಾಡಬೇಕೆಂಬ ತುಡಿತ, ಪಕ್ಷದ ಪ್ರತಿಯೊಬ್ಬ ಮುಖಂಡರೇ ತಾವೇ ಆರ್ಥಿಕ ಸಂಪನ್ಮೂಲ ಒದಗಿಸಿಕೊಂಡು ತಮ್ಮ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿ ನಿಂತದ್ದು,

ಸಿ.ಎಸ್.ಪುರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಎಚ್ ಡಿ ದೇವೇಗೌಡರ ಪ್ರಚಾರ ನಡೆಸಿ ಬಿಜೆಪಿಗೆ ಮತ ವಿಭಜನೆಯಾಗದಂತೆ ನೋಡಿಕೊಂಡದ್ದು

ಜೆಡಿಎಸ್ ಈ ಬಾರಿ ಲಿಂಗಾಯತ ಮತಗಳನ್ನು ಸೆಳೆದು ಬಿಜೆಪಿ ಶಕ್ತಿ ಕುಗ್ಗಿಸಿದ್ದು
ಹಾಗು ತುರುವೇಕೆರೆ ಒಕ್ಕಲಿಗರ ಪ್ರಾಬಲ್ಯವಾಗಿದ್ದು ಜೆಡಿಎಸ್ ಭದ್ರಕೋಟೆಯಾಗಿದ್ದೆ ಎಂಬುದು ಮತ್ತೊಮ್ಮೆ ಸಾಭೀತು.

ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ 58240 ಮತಗಳನ್ನು ಪಡೆದಿದ್ದಾರೆ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ಅವರು ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ. ಜೆಡಿಎಸ್ ಎದುರು ತಮ್ಮ ರಾಜಕೀಯ ತಂತ್ರಗಳು ವಿಫಲವಾದದ್ದು,

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಮಿಷಗಳಿಗೆ ಕ್ಷೇತ್ರದ ಜನ ಒಳಗಾಗದಿರುವುದು.
ಹಿಂದೆ ಜಯರಾಮ್ ಗೆಲುವಿಗೆ ಕಾರಣರಾಗಿದ್ದ ಲಿಂಗಾಯಿತ ಮುಖಂಡರು, ಕಾರ್ಯಕರ್ತರ ಕಡಗಣನೆ, ಮತ್ತು ಪಕ್ಷದೊಳಗಿನ ಅಸಮಧಾನಿತರನ್ನು ಹಾಗು ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡಿದ ಮುಖಂಡರುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಜಯರಾಮ್ ಎಡವಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ,

ಮೂರು ದಶಕಗಳ ಕಾಲ ಕಾಂಗ್ರೆಸ್ ಹಿಡಿತದಲ್ಲಿದ್ದ ತುರುವೇಕೆರೆ ಸಮರ್ಥ ನಾಯಕರಿಲ್ಲದೆ ಸೋಲುತ್ತಾ ಬಂದಿದೆ.

ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜ್ ಬಿ.ಎಂ 30536 ಮತಗಳನ್ನು ಪಡೆದಿದ್ದಾರೆ

ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಅವರು ಹೊರಗಿನಿಂದ ಬಂದು ವ್ಯಕ್ತಿ. ಸ್ಥಳೀಯ ನಾಯಕರ ಸ್ಪರ್ಧೆಗೆ ಅವಕಾಶ ಕೊಡದಿರುವುದು. ಪ್ರಮುಖ ಮುಖಂಡರು, ಕಾರ್ಯಕರ್ತರ ಪಕ್ಷಾಂತರ ಮಾಡಿದ್ದು.
ಸ್ಥಳೀಯ ನಾಯಕರು, ಮುಖಂಡರುಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಗೊಂದಲಗಳಿದ್ದರೂ ಅವೆಲ್ಲವುಗಳನ್ನು ಸಮನಾಗಿ ನಿಭಾಯಿಸಿಲ್ಲ.
ಈ ಬಾರಿ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಪಾಲಾಗಿರುವುದು. ಚುನಾವಣಾ ತಂತ್ರಗಾರಿಕೆ ಎಡೆವಿದ್ದು ಪಕ್ಷದ ಸೊಲಿಗೆ ಕಾರಣವಾಗಿದೆ.
ಕಾಂಗ್ರೆಸ್ ಈ ಬಾರಿ ಮೂರನೇ ಸ್ಥಾನಕ್ಕೆ ಪಡೆದಿ ಪಡೆದಿದೆ

7 ಕಾಂಗ್ರೆಸ್, 2 ಜೆಡಿಎಸ್, 2 ಬಿಜೆಪಿ

ತುರುವೇಕೆರೆ, ಚಿ.ನಾ.ಹಳ್ಳಿಯಲ್ಲಿ ಜೆಡಿಎಸ್ ಕೈ ಹಿಡಿದ ಮತದಾರ, ಗುಬ್ಬಿಯಲ್ಲಿ ದಾಖಲೆ ಬರೆದ ವಾಸಣ್ಣ

ತುಮಕೂರು : ತುಮಕೂರು ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ತಲಾ 2 ಸ್ಥಾನಗಳಲ್ಲಿ ಜಯಗಳಿಸಿವೆ.

ಕಾಂಗ್ರೆಸ್ ಪಕ್ಷವು ಕೊರಟಗೆರೆ-ಡಾ.ಜಿ.ಪರಮೇಶ್ವರ್,ಮಧುಗಿರಿ-ಕೆ.ಎನ್.ರಾಜಣ್ಣ, ಸಿರಾ-ಟಿ.ಬಿ.ಜಯಚಂದ್ರ, ತಿಪಟೂರು-ಕೆ.ಷಡಕ್ಷರಿ, ಕುಣಿಗಲ್-ರಂಗನಾಥ್,ಗುಬ್ಬಿ-ಎಸ್.ಆರ್.ಶ್ರೀನಿವಾಸ್,ಪಾವಗಡ-ಹೆಚ್.ವಿ.ವೆಂಕಟೇಶ್ ಅವರುಗಳು ಜಯಗಳಿಸಿದ್ದಾರೆ.

ಜೆಡಿಎಸ್ ಪಕ್ಷವು ತುರುವೇಕೆರೆ-ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ-ಸುರೇಶ್ ಬಾಬು ಅವರುಗಳು ಗೆಲುವು ಸಾದಿಸಿದ್ದರೆ, ಬಿಜೆಪಿಯಿಂದ ತುಮಕೂರು ನಗರ-ಜಿ.ಬಿ ಜ್ಯೋತಿಗಣೇಶ್.ತುಮಕೂರು ಗ್ರಾಮಾಂತರ-ಬಿಜೆಪಿ ಸುರೇಶ್ ಗೌಡ ಅವರುಗಳು ಜಯಗಳಿಸಿದ್ದಾರೆ

ಜ್ಯೋತಿಗಣೇಶ್ ಗೆ ಜಯ

0

ತುಮಕೂರು ನಗರದಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ ಜಯ ಗಳಿಸಿದ್ದಾರೆ.

ಗೆಲುವಿನ ನಗೆಬೀರಿದ ಸುರೇಶಗೌಡರು

0

ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶಗೌಡರು ಗೆಲುವಿನ‌ ನಗೆ ಬೀರಿ‌ದ್ದಾರೆ.

ಮಾಜಿ ಶಾಸಕ ಜೆಡಿಎಸ್ ನ ಡಿ.ಸಿ.ಗೌರಿಶಂಕರ್ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಜನರ ವಿಶ್ವಾಸಗಳಿಸಲು ಹೃದಯವಂತಿಕೆ ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಂಚೆ ಮತ ಎಣಿಕೆಯಲ್ಲು ಮುಂದೆ ಇದ್ದ ಅವರು ಯಾವುದೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಲಿಲ್ಲ.

ಜೆಡಿಎಸ್ ಜಿದ್ದಾಜಿದ್ದಿ ಪೈಪೋಟಿ ನೀಡಲಿದೆ ಎಂಬ ಲೆಕ್ಕಾಚಾರ ಸಹ ತಲೆಕೆಳಗಾಗಿದೆ.

ನಕಲಿ ಬಾಂಡ್ ವಿಚಾರ, ಕ್ಷೇತ್ರದಲ್ಲಿ ಹೆಚ್ಚಿದ್ದ ಕುಡುಕರ ಹಾವಳಿ ಹಾಗೂ ಅಭಿವೃದ್ಧಿ ಯಲ್ಲಿ ಹಿಂದೆ ಬಿದ್ದಿರುವುದನ್ನು ಪ್ರಚಾರದ ವೇಳೆ ಸುರೇಶಗೌಡರು ಮುಂದೆ ಮಾಡಿದ್ದರು.

ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಅವರು ಕ್ಷೇತ್ರದ ಜನರ ವಿಶ್ವಾಸಗಳಿಸಿದ್ದರು. ಕೊರೊನಾ ಕಾಲದಲ್ಲಿ ಮೊದಲಿಗೆ ಕ್ಷೇತ್ರದ ಜನರಿಗೆ ಕಿಟ್ ಹಂಚಿಕೆ ಮಾಡಿ ಇಡೀ ರಾಜ್ಯದ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.

ಅಲ್ಲದೇ ಕೊರೊನಾ ಪೀಡಿತ ರೋಗಿಯನ್ನು ಆಸ್ಪತ್ರೆಗೆ ತೆರಳಿ ನೋಡಿ ಬಂದಿದ್ದರು. ಆದರೆ ಮಾಜಿ ಶಾಸಕ ಗೌರಿಶಂಕರ್ ನಕಲಿ ಕೊರೊನಾ ವ್ಯಾಕ್ಸೀನ್ ನೀಡಿದ್ದಾರೆ ಎಂಬ ಆರೋಪ ಎದುರಿಸಿದರು. ಇದು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದೆ.‌

ಜಿಲ್ಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಸ್ಪಷ್ಟ ಮುನ್ನೋಟ ನೀಡಿದ ಹೆಗ್ಗಳಿಕೆಯೂ ಅವರಿಗಿದೆ.

ರಫ್ತು ಉದ್ಯಮ ಕೇಂದ್ರ, ಶಾಲೆ,‌ಕಾಲೇಜು, ಸಮುದಾಯ ಭವನಗಳನ್ನು ಕಟ್ಟುವ ಭರವಸೆಗಳನ್ನು ನೀಡುವ ಮೂಲಕ ಜನರ ವಿಶ್ವಾಸಗಳಿಸಿದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ್ದ ರಸ್ತೆ, ಉಚಿತ ಟ್ರಾನ್ಸ್ ಫಾರ್ಮರ್, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಇಂಥ ಕೆಲಸಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಿದರು.

ಜಾತಿವಾರು ಸ‌ಮಾವೇಶಗಳನ್ನು ಮಾಡಿ ಎಲ್ಲ ಜಾತಿ ಜನರಿಗೂ ಅವರ ಕಷ್ಟಕ್ಕೆ ಆಗುವ ಭರವಸೆ ತುಂಬಿದ್ದು ಸಹ ಅವರ ಕೈ ಹಿಡಿಯಿತು.

ಸುರೇಶಗೌಡರ ಬಾಯಿ ಸರಿ ಇಲ್ಲ ಎಂಬ ಮಾಜಿ ಶಾಸಕ ಗೌರಿಶಂಕರ್ ಅಂಡ್ ಟೀಮ್ ನ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಿದ್ದು, ಸಹ ಅವರಿಗೆ ಅನುಕೂಲವಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರುಗಳು ಸಹ ಸುರೇಶ್ ಗೌಡರ ಸಹೃದಯತೆ, ಸಿಟ್ಟು ಯಾಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆಯೇ ಮಾತ‌ನಾಡಿದ್ದು, ಅವರ ವಿರುದ್ಧದ ಅಪಪ್ರಚಾರ ತಡೆಯಲು ಅನುಕೂಲವಾಯಿತು. ಇದು ಸಹ ಗೆಲುವಿಗೆ ಕಾರಣವಾಯಿತು.

ಮುಸ್ಲಿಂರು ಸಹ ಸುರೇಶಗೌಡರನ್ನು ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದರು. ಅಭಿವೃದ್ಧಿ ಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದು, ಬಹುಸಂಖ್ಯೆಯ ಜನರು ಅವರನ್ನು ಬೆಂಬಲಿಸಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಗೆಲುವಿನ ನಗೆಬೀರಿದ ಸುರೇಶಗೌಡರು

0

ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡರು 5229 ಮತಗಳಿಂದ ಗೆಲವು ಬೀರಿ‌ ನಕ್ಕಿದ್ದಾರೆ.

ಮಾಜಿ ಶಾಸಕ ಜೆಡಿಎಸ್ ನ ಡಿ.ಸಿ.ಗೌರಿಶಂಕರ್ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಜನರ ವಿಶ್ವಾಸಗಳಿಸಲು ಹೃದಯವಂತಿಕೆ ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಂಚೆ ಮತ ಎಣಿಕೆಯಲ್ಲು ಮುಂದೆ ಇದ್ದ ಅವರು ಯಾವುದೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಲಿಲ್ಲ.

ಜೆಡಿಎಸ್ ಜಿದ್ದಾಜಿದ್ದಿ ಪೈಪೋಟಿ ನೀಡಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ.

ನಕಲಿ ಬಾಂಡ್ ವಿಚಾರ, ಕ್ಷೇತ್ರದಲ್ಲಿ ಹೆಚ್ಚಿದ್ದ ಕುಡುಕರ ಹಾವಳಿ ಹಾಗೂ ಅಭಿವೃದ್ಧಿ ಯಲ್ಲಿ ಹಿಂದೆ ಬಿದ್ದಿರುವುದನ್ನು ಪ್ರಚಾರದ ವೇಳೆ ಸುರೇಶಗೌಡರು ಮುಂದೆ ಮಾಡಿದ್ದರು.

ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಅವರು ಕ್ಷೇತ್ರದ ಜನರ ವಿಶ್ವಾಸಗಳಿಸಿದ್ದರು. ಕೊರೊನಾ ಕಾಲದಲ್ಲಿ ಮೊದಲಿಗೆ ಕ್ಷೇತ್ರದ ಜನರಿಗೆ ಕಿಟ್ ಹಂಚಿಕೆ ಮಾಡಿ ಇಡೀ ರಾಜ್ಯದ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.

ಅಲ್ಲದೇ ಕೊರೊನಾ ಪೀಡಿತ ರೋಗಿಯನ್ನು ಆಸ್ಪತ್ರೆಗೆ ತೆರಳಿ ನೋಡಿ ಬಂದಿದ್ದರು. ಆದರೆ ಮಾಜಿ ಶಾಸಕ ಗೌರಿಶಂಕರ್ ನಕಲಿ ಕೊರೊನಾ ವ್ಯಾಕ್ಸೀನ್ ನೀಡಿದ್ದಾರೆ ಎಂಬ ಆರೋಪ ಎದುರಿಸಿದರು. ಇದು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದೆ.‌

ಜಿಲ್ಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಸ್ಪಷ್ಟ ಮುನ್ನೋಟ ನೀಡಿದ ಹೆಗ್ಗಳಿಕೆಯೂ ಅವರಿಗಿದೆ.

ರಫ್ತು ಉದ್ಯಮ ಕೇಂದ್ರ, ಶಾಲೆ,‌ಕಾಲೇಜು, ಸಮುದಾಯ ಭವನಗಳನ್ನು ಕಟ್ಟುವ ಭರವಸೆಗಳನ್ನು ನೀಡುವ ಮೂಲಕ ಜನರ ವಿಶ್ವಾಸಗಳಿಸಿದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ್ದ ರಸ್ತೆ, ಉಚಿತ ಟ್ರಾನ್ಸ್ ಫಾರ್ಮರ್, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಇಂಥ ಕೆಲಸಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಿದರು.

ಜಾತಿವಾರು ಸ‌ಮಾವೇಶಗಳನ್ನು ಮಾಡಿ ಎಲ್ಲ ಜಾತಿ ಜನರಿಗೂ ಅವರ ಕಷ್ಟಕ್ಕೆ ಆಗುವ ಭರವಸೆ ತುಂಬಿದ್ದು ಸಹ ಅವರ ಕೈ ಹಿಡಿಯಿತು.

ಸುರೇಶಗೌಡರ ಬಾಯಿ ಸರಿ ಇಲ್ಲ ಎಂಬ ಮಾಜಿ ಶಾಸಕ ಗೌರಿಶಂಕರ್ ಅಂಡ್ ಟೀಮ್ ನ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಿದ್ದು, ಸಹ ಅವರಿಗೆ ಅನುಕೂಲವಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರುಗಳು ಸಹ ಸುರೇಶ್ ಗೌಡರ ಸಹೃದಯತೆ, ಸಿಟ್ಟು ಯಾಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆಯೇ ಮಾತ‌ನಾಡಿದ್ದು, ಅವರ ವಿರುದ್ಧದ ಅಪಪ್ರಚಾರ ತಡೆಯಲು ಅನುಕೂಲವಾಯಿತು. ಇದು ಸಹ ಗೆಲುವಿಗೆ ಕಾರಣವಾಯಿತು.

ಮುಸ್ಲಿಂರು ಸಹ ಸುರೇಶಗೌಡರನ್ನು ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದರು. ಅಭಿವೃದ್ಧಿ ಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದು, ಬಹುಸಂಖ್ಯೆಯ ಜನರು ಅವರನ್ನು ಬೆಂಬಲಿಸಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಗುಬ್ಬಿಯಲ್ಲಿ ವಾಸಣ್ಣ ಮುನ್ನಡೆ

ಗುಬ್ಬಿಯಲ್ಲಿ 1013 ಮತಗಳಿಂದ ಕಾಂಗ್ರೆಸ್ ನ ಶ್ರೀನಿವಾಸ್ (ವಾಸಣ್ಣ) ಮುನ್ನಡೆ

ಕಾಂಗ್ರೆಸ್ 14643
ಜೆಡಿಎಸ್ 13630
ಬಿಜೆಪಿ 11842

ಕೊರಟಗೆರೆ7 ನೇ ಸುತ್ತು

ಕಾಂಗ್ರೆಸ್-31406
ಜೆಡಿಎಸ್-24713
ಬಿಜೆಪಿ-10437
ಕಾಂಗ್ರೆಸ್ ಪರಮೇಶ್ವರ-6693‌ಮುನ್ನಡೆ

ಚಿಕ್ಕನಾಯಕನಹಳ್ಳಿ 21 ಮತಗಳಿಂದ ಜೆಡಿಎಸ್ ಮುನ್ನಡೆ

ಕಾಂಗ್ರೆಸ್ 29783
ಬಿಜೆಪಿ 28673
ಜೆಡಿಎಸ್ 29804

ಗ್ರಾಮಾಂತರ ಬಿಜೆಪಿ ಮುಂದೆ, ಚಿ.ನಾ.ಹಳ್ಳಿ ಹಿಂದೆ

0

ತುಮಕೂರು ಗ್ರಾಮಾಂತರ

BJP ಸುರೇಶ್ ಗೌಡ 50232 ಮುನ್ನಡೆ

JDS. 41274 ಮತ ಪಡೆದಿದ್ದಾರೆ.

ಚಿಕ್ಕನಾಯಕನಹಳ್ಳಿ8 ನೇ ಸುತ್ತು

ಕಾಂಗ್ರೆಸ್-26001
ಬಿಜೆಪಿ-24960
ಜೆಡಿಎಸ್-25956

ಕಾಂಗ್ರೆಸ್ 42 ಮತಗಳಿಂದ ಕಾಂಗ್ರೆಸ್ ಮುನ್ನಡೆ

ತುರುವೇಕೆರೆ JDS; ಕೊರಟಗೆರೆ ಕಾಂಗ್ರೆಸ್

ತುರುವೇಕೆರೆ ನಾಲ್ಕನೇ ಸುತ್ತು

ಜೆಡಿಎಸ್ ಎಂ.ಟಿ ಕೃಷ್ಣಪ್ಪ ಮನ್ನಡೆ 1335

ಎಂ.ಟಿ ಕೃಷ್ಣಪ್ಪ- ಜೆಡಿಎಸ್ – 14359

ಮಸಾಲೆ ಜಯರಾಮ್ – ಬಿಜೆಪಿ 13024
ಬೆಮಲ್ ಕಾಂತರಾಜು – ಕಾಂಗ್ರೆಸ್ – 8623

ಕೊರಟಗೆರೆಯಲ್ಲಿ 4233 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಕಾಂಗ್ರೆಸ್ – 21434
ಜೆಡಿಎಸ್- 17201
ಬಿಜೆಪಿ- 7645

ಕುಣಿಗಲ್7 ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಕಾಂಗ್ರೆಸ್ 30230
ಬಿಜೆಪಿ20794
ಜೆಡಿಎಸ್15385

9436 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಕುಣಿಗಲ್7 ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಕಾಂಗ್ರೆಸ್ 30230
ಬಿಜೆಪಿ20794
ಜೆಡಿಎಸ್15385

,9436 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಮಧುಗಿರಿ
ಕಾಂಗ್ರೆಸ್ 20547 ಮುನ್ನಡೆ
ಜೆಡಿಎಸ್ 15294
ಬಿಜೆಪಿ 3412

ತಿಪಟೂರು; ಕಾಂಗ್ರೆಸ್ ಮಿಠಾಯಿ ತಯಾರಿ

0

ತಿಪಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತತ ಉತ್ಸಾಹ ಇಮ್ಮಡಿಯಾಗಿದೆ.

ಕಾಂಗ್ರೆಸ್ ನ ಷಡಕ್ಷರಿ ಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಮನೆ ಮುಂದೆ ಶಾಮಿಯಾನ ಹಾಕಲಾಗಿದೆ. ರಾಶಿ,ರಾಶಿ ಮಿಠಾಯಿ ಇಡಲಾಗಿದೆ.

ಫಲಿತಾಂಶ ಬಂದ ಕೂಡಲೇ ಜನರಿಗೆ ಹಂಚುವ ಸಿದ್ಧತೆ ಮಾಡಿಟ್ಟುಕೊಳ್ಳಲಾಗಿದೆ