Saturday, July 27, 2024
Google search engine
Homeಜಸ್ಟ್ ನ್ಯೂಸ್ಎಂ.ಟಿ.ಕೃಷ್ಣಪ್ಪ ಐತಿಹಾಸಿಕ ಗೆಲುವು: ಕಾರಣವೇನು?

ಎಂ.ಟಿ.ಕೃಷ್ಣಪ್ಪ ಐತಿಹಾಸಿಕ ಗೆಲುವು: ಕಾರಣವೇನು?

ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಎಂ.ಟಿ .ಕೃಷ್ಣಪ್ಪ ಅವರು ಜೆಡಿಎಸ್ ನಿಂದ 10 ಸಾವಿರ ಲೀಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ವಿರುದ್ಧ ಜಯಬೇರಿಗಳಿಸಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲೇ
ಎಂ.ಟಿ.ಕೃಷ್ಣಪ್ಪ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ 68163 ಮತಗಳನ್ನು ಪಡೆದಿದ್ದಾರೆ.

ಎಂ. ಟಿ. ಕೃಷ್ಣಪ್ಪ ಜಯಗಳಿಸುತ್ತಿದ್ದಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು
ಪಟ್ಟಣದ ತಾಲ್ಲೂಕು ವೃತ್ತ ಹಾಗು ಜೆಡಿಎಸ್ ಕಚೇರಿ ಮುಂದೆ ಪಟಾಕಿ‌ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಪಟ್ಟಣದ ಪ್ರಮುಖ ರಸ್ತೆಗಳು ಹಾಗು ವಿವಿಧ ವಾರ್ಡ್ ಗಳಲ್ಲಿ ಕಾರ್ಯಕರ್ತರು
ಜೆಡಿಎಸ್ ಪಕ್ಷದ ಬಾವುಟದೊಂದಿಗೆ ಬೈಕ್ ನಲ್ಲಿ ತೆರಳಿ ಎಂ.ಟಿ.ಕೃಷ್ಣಪ್ಪ ಪರ ಜಯ ಘೋಷ ಕೂಗಿ ಮೆರವಣಿಗೆ ನಡೆಸಿದರು.

ತಾಲ್ಲೂಕಿನ ಪ್ರತಿ ಗ್ರಾಮಗಳ ದ್ವಾರದಲ್ಲಿ ಕಾರ್ಯಕರ್ತರು ಜೆಡಿಎಸ್ ಬಾವುಟ ಕಟ್ಟಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಮತ ಎಣಿಕೆ ಕೇಂದ್ರದಿಂದ ನೇರವಾಗಿ ಎಂ.ಟಿ.ಕೃಷ್ಣಪ್ಪ ತನಗೆ ಹೆಚ್ಚು ಲೀಡ್ ಕೊಟ್ಟ ಸಿ.ಎಸ್.ಪುರ ಹೋಬಳಿಗೆ ತೆರಳಿ ಅಲ್ಲಿ ನೆರೆದಿದ್ದ ಅಪಾರ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ಆಚರಿಸಿ ಗೆಲುವು ನೀಡಿದ ಜನತೆಗೆ ಧನ್ಯವಾದ ತಿಳಿಸಿದರು.

ನಂತರ ತುರುವೇಕೆರೆ ಪಟ್ಟಣಕ್ಕೆ ಆಗಮಿಸಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ತೆರೆದವಾಹನದಲ್ಲಿ ಡಿ.ಜಿ.ಸೌಂಡ್ ನೊಂದಿಗೆ ಮೆರವಣಿಗೆ ನಡೆಸಿ, ಗೆಲುವಿಗೆ ಶ್ರಮಿಸಿದ ಎಲ್ಲರಿಗು ಕೃತಜ್ಞತೆ ಸಲ್ಲಿಸಿದರು.

ಎಂ.ಟಿ.ಕೃಷ್ಣ ಪ್ಪ ಅವರ ಗೆಲುವಿಗೆ ಮುಖ್ಯವಾಗಿ ಕಳೆದ ಬಾರಿ ಕೇವಲ ಅಲ್ಪ ಮತಗಳ‌ ಅಂತರಿಂದ‌ ಸೋಲು ಕಂಡಿದ್ದು ಈ ಬಾರಿ ಇದು ಕೊನೆ ಚುನಾವಣೆ ಎಂಬ ಅನುಕಂಪದ ಅಲೆ,
ಕಾರ್ಯಕರ್ತರು ಪಕ್ಷ ಹಾಗು ಎಂ.ಟಿ.ಕೃಷ್ಣ ಪ್ಪ ಅವರ ಮೇಲೆ ಇಟ್ಟಿರುವ ಅಚಲವಾದ ನಂಬಿಕೆ.

ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಶಾಶ್ವತ ಅಭಿವೃದ್ಧಿ ಕೆಲಸಗಳು, ಪಕ್ಷಕ್ಕೆ ವಲಸಿಗರ‌ ಸೇರ್ಪಡೆ, ಪಕ್ಷದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಕುಮಾರ್ ಸ್ವಾಮಿಯವರನ್ಬು ಮುಖ್ಯ ಮಂತ್ರಿಗಳನ್ನಾಗಿ ಮಾಡಬೇಕೆಂಬ ತುಡಿತ, ಪಕ್ಷದ ಪ್ರತಿಯೊಬ್ಬ ಮುಖಂಡರೇ ತಾವೇ ಆರ್ಥಿಕ ಸಂಪನ್ಮೂಲ ಒದಗಿಸಿಕೊಂಡು ತಮ್ಮ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿ ನಿಂತದ್ದು,

ಸಿ.ಎಸ್.ಪುರ ಮತ್ತು ದಬ್ಬೇಘಟ್ಟ ಹೋಬಳಿಗಳಲ್ಲಿ ಎಚ್ ಡಿ ದೇವೇಗೌಡರ ಪ್ರಚಾರ ನಡೆಸಿ ಬಿಜೆಪಿಗೆ ಮತ ವಿಭಜನೆಯಾಗದಂತೆ ನೋಡಿಕೊಂಡದ್ದು

ಜೆಡಿಎಸ್ ಈ ಬಾರಿ ಲಿಂಗಾಯತ ಮತಗಳನ್ನು ಸೆಳೆದು ಬಿಜೆಪಿ ಶಕ್ತಿ ಕುಗ್ಗಿಸಿದ್ದು
ಹಾಗು ತುರುವೇಕೆರೆ ಒಕ್ಕಲಿಗರ ಪ್ರಾಬಲ್ಯವಾಗಿದ್ದು ಜೆಡಿಎಸ್ ಭದ್ರಕೋಟೆಯಾಗಿದ್ದೆ ಎಂಬುದು ಮತ್ತೊಮ್ಮೆ ಸಾಭೀತು.

ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ 58240 ಮತಗಳನ್ನು ಪಡೆದಿದ್ದಾರೆ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ಅವರು ಗೆದ್ದೆ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ. ಜೆಡಿಎಸ್ ಎದುರು ತಮ್ಮ ರಾಜಕೀಯ ತಂತ್ರಗಳು ವಿಫಲವಾದದ್ದು,

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಮಿಷಗಳಿಗೆ ಕ್ಷೇತ್ರದ ಜನ ಒಳಗಾಗದಿರುವುದು.
ಹಿಂದೆ ಜಯರಾಮ್ ಗೆಲುವಿಗೆ ಕಾರಣರಾಗಿದ್ದ ಲಿಂಗಾಯಿತ ಮುಖಂಡರು, ಕಾರ್ಯಕರ್ತರ ಕಡಗಣನೆ, ಮತ್ತು ಪಕ್ಷದೊಳಗಿನ ಅಸಮಧಾನಿತರನ್ನು ಹಾಗು ಬೇರೆ ಪಕ್ಷಕ್ಕೆ ಪಕ್ಷಾಂತರ ಮಾಡಿದ ಮುಖಂಡರುಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಜಯರಾಮ್ ಎಡವಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ,

ಮೂರು ದಶಕಗಳ ಕಾಲ ಕಾಂಗ್ರೆಸ್ ಹಿಡಿತದಲ್ಲಿದ್ದ ತುರುವೇಕೆರೆ ಸಮರ್ಥ ನಾಯಕರಿಲ್ಲದೆ ಸೋಲುತ್ತಾ ಬಂದಿದೆ.

ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜ್ ಬಿ.ಎಂ 30536 ಮತಗಳನ್ನು ಪಡೆದಿದ್ದಾರೆ

ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಅವರು ಹೊರಗಿನಿಂದ ಬಂದು ವ್ಯಕ್ತಿ. ಸ್ಥಳೀಯ ನಾಯಕರ ಸ್ಪರ್ಧೆಗೆ ಅವಕಾಶ ಕೊಡದಿರುವುದು. ಪ್ರಮುಖ ಮುಖಂಡರು, ಕಾರ್ಯಕರ್ತರ ಪಕ್ಷಾಂತರ ಮಾಡಿದ್ದು.
ಸ್ಥಳೀಯ ನಾಯಕರು, ಮುಖಂಡರುಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಗೊಂದಲಗಳಿದ್ದರೂ ಅವೆಲ್ಲವುಗಳನ್ನು ಸಮನಾಗಿ ನಿಭಾಯಿಸಿಲ್ಲ.
ಈ ಬಾರಿ ಅಲ್ಪಸಂಖ್ಯಾತ ಮತಗಳು ಜೆಡಿಎಸ್ ಪಾಲಾಗಿರುವುದು. ಚುನಾವಣಾ ತಂತ್ರಗಾರಿಕೆ ಎಡೆವಿದ್ದು ಪಕ್ಷದ ಸೊಲಿಗೆ ಕಾರಣವಾಗಿದೆ.
ಕಾಂಗ್ರೆಸ್ ಈ ಬಾರಿ ಮೂರನೇ ಸ್ಥಾನಕ್ಕೆ ಪಡೆದಿ ಪಡೆದಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?