Thursday, March 12, 2026
Google search engine
Home Blog Page 41

ಕಾಂಗ್ರೆಸ್ ಗೆ ಮತ ಹಾಕಿ: ಲೇಖಕ ಕೆ.ಪಿ.ನಟರಾಜ್

ತುರುವೇಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಂದಿಸುವ, ಮತೀಯ, ಜಾತಿಯವಾದಿ ಶಕ್ತಿಗಳ ಬಗೆಗೆ ಜಿಲ್ಲೆಯ ಮತದಾರ ಎಚ್ಚರಿಕೆಯಿಂದ ಇದ್ದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಟ್ಟು ದೇಶದ ಎಲ್ಲಾ ನಾಗರಿಕರ ಒಳಿತಿಗೆ ದುಡಿಯುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಲೇಖಕ ಡಾ.ಕೆ.ಪಿ ನಟರಾಜ್ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪಟ್ಟಣದ ಕನ್ನಡ ಭವನದಲ್ಲಿ ತುಮಕೂರು ಜಾಗೃತ ಮತದಾರರ ವೇದಿಕೆ ಮತ್ತು ಎದ್ದೇಳು ಕರ್ನಾಟಕ ವತಿಯಿಂದ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆಯ ಹೊಸ್ತಿಲಿನಲ್ಲಿರುವ ಮತದಾರ ಯಾರಿಗೆ ಮತ ಕೊಡಬೇಕು ಎಂಬ ಗೊಂದಲದಲ್ಲಿದ್ದಾನೆ.

ಈ ಸನ್ನಿವೇಶವನ್ನು ಕುರುಕ್ಷೇತ್ರ ಯುದ್ಧ ನಡೆಯುವ ವೇಳೆ ಕೇಡಿನ ಪಕ್ಷಪಾತಿಯಾಗಿರುವ ರಕ್ತ ಸಂಬಂಧಿಕರು ಕೌರವನ ಜೊತೆಗಿದ್ದಾರೆ.ಇವರಲ್ಲಿ ಯಾರನ್ನು ಕೊಲ್ಲಬೇಕು, ಯಾರನ್ನು ಬಿಡಬೇಕು ಅನ್ನುವ ಗೊಂದಲ ಅರ್ಜುನನ್ನು ದ್ವಂದ್ವ ಆವರಿಸಿದ್ದನ್ನು ಕೃಷ್ಣ ಭಗವದ್ಗೀತೆ ಬೋಧಿಸಿ ಪರಿಹರಿಸಿದ.

ಇದೇ ಸನ್ನಿವೇಶ ಪ್ರಸ್ತುತ ಮತದಾರರ ಮುಂದಿದೆ. ಮತದಾರನಿಗೆ ಕೇಡಾವುದು, ಒಳಿತಾವುದು ಅನ್ನುವ ಕೃಷ್ಣನ ವಿವೇಕ ಜ್ಞಾನ ಬರಬೇಕಿದೆ ಎಂದರು.

ಚುನಾವಣೆಯಲ್ಲಿ ಹಣ, ಜಾತಿ ಆಮಿಷಕ್ಕೆ, ಮತೀಯ
ಶಕ್ತಿಗಳಿಗೆ ಬಲಿಯಾಗದೆ ಯಾವ ವ್ಯಕ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿದೆ, ವಿರೋಧಿಯಾಗಿದೆ ಅನ್ನುವ ತಾರತಮ್ಯ ಜ್ಞಾನವನ್ನು ಗುರುತಿಸಿ ಕೊಳ್ಳಬೇಕಾಗುತ್ತದೆ.ಇಲ್ಲವಾದಲ್ಲಿ ಮತ್ತೊಂದು ಗುಲಾಮಗಿರಿ ಶೋಷಕ ವ್ಯವಸ್ಥೆಗೆ ಮತದಾರ ಸಿಕ್ಕಿಕೊಳ್ಳಬೇಕಾಗುತ್ತದೆ ಎಂದು‌ ಎಚ್ಚರಿಸಿದರು.

ಕಳೆದ ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಆಯ್ಕೆಯಾಗುವಾಗ ಇಡೀ ದೇಶದೊಳಗೆ ಹೊಸ ಪ್ರಭುತ್ವ ವ್ಯವಸ್ಥೆಯ ನಿರೀಕ್ಷೆ ಇತ್ತು. ಆದರೆ ಅವರ ಆಡಳಿತ ಪ್ರಜಾಪ್ರಭುತ್ವ ಕಡೆಗಣಿಸಿ ಯಾವ ಬಗೆಯ ಆಡಳಿತ ನೀಡಿತು, ಸಮಸ್ತ ನಾಗರೀಕರ, ಮಹಿಳೆ, ದಲಿತರ ಶೋಷಣೆ ಮಾಡಿತು. ಮಿಗಿಲಾಗಿ

ಸಂವಿಧಾನ ಬದಲಾಯಿಸುವ ಸಾರ್ವಜನಿಕ ಹೇಳಿಕೆ ಗಳು ಜೀವ ವಿರೋಧಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುವ ವ್ಯವಸ್ಥೆಯೊಂದು ಎದುರಾಗಿದೆ ಎಂದರು.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತಂದು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಯಿತು.

ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನ ಲೋಕಪಾಲ್ ಇದ್ದು ಇಲ್ಲದಂತಾಗಿದೆ ಎಂದು ಟೀಕಿಸಿದರು.

ನಾವು ಕಾಂಗ್ರೆಸ್ ಗೆ ಏಕೆ ಮತ ಹಾಕಬೇಕೆಂದರೆ ಕಾಂಗ್ರೆಸ್ ಪಕ್ಷ ಹೊಂದಿರುವ ಇತಿಹಾಸ ಚರಿತ್ರೆ ಚಾರಿತ್ಯ ಇವುಗಳನ್ನು ಆಧರಿಸಿ ಹೇಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ರಾಹುಲ್ ಗಾಂಧಿಯವರು ಒಡೆದ ಮನಸ್ಸುಗಳ ಮರು ಕಟ್ಟಲು ಇಡೀ ದೇಶದಾದ್ಯಂತ ಭಾರತ್ ಜೋಡ ಯಾತ್ರೆ ಮಾಡಿದವರು ಎಂದರು.

ಈ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ ಎಚ್ ವಿ ರಂಗಸ್ವಾಮಿ , ನಟರಾಜಪ್ಪ ಯರಗುಂಟೆ
ಇನ್ನಿತರರು ಇದ್ದರು.

ಸುರೇಶಗೌಡರಿಗೆ ಬೆಂಬಲ ಘೋಷಿಸಿದ ಲಿಂಗಾಯತ-ವೀರಶೈವರು

ತುಮಕೂರು; ಸಂಸದರಾದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ನಾಗವಲ್ಲಿ ಸಮೀಪದ ಶಕ್ತಿಸೌಧದಲ್ಲಿ ಶನಿವಾರ ಸೇರಿದ್ದ ಲಿಂಗಾಯತ, ವೀರಶೈವ ಮುಖಂಡರ ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಬಿ.ಸುರೇಶಗೌಡರನ್ನು ಬೆಂಬಲಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜ್ ಗ್ರಾಮಾಂತರ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯಿತ ಸಮುದಾಯದ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ವಿ.ಸುರೇಶಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
,ಕಳೆದ ಚುನಾವಣೆಯಲ್ಲಿ ಕೆಲವರು ಮಾಡಿದ ಅಪಪ್ರಚಾರದಿಂದಾಗಿ ವೀರಶೈವ ಸಮಾಜ ಸುರೇಶಗೌಡ ಅವರನ್ನು ಕೈಬಿಟ್ಟ ಪರಿಣಾಮ ಸಾವಿರ ಮತಗಳ ಅಂತರ ದಿಂದ ಸೋಲು ಅನುಭವಿಸಬೇಕಾಯಿತು. ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸಬೇಕೆಂದರು.


ಶಾಸಕ ಬಿ.ಸುರೇಶಗೌಡ ಅವರು ತಮ್ಮ ೧೦ ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ತಂದು ಕೆಲಸ ಮಾಡಿದ್ದಾರೆ. ಜಾತ್ಯಾತೀತವಾಗಿ ಕೆಲಸ ಮಾಡಿ,ಪೈಲೆಟ್ ಪ್ರಾಜೆಕ್ಟ್ ಮೂಲಕ ಪ್ರತಿ ರೈತರ ಪಂಪ್‌ಸೆಟ್‌ಗೆ ಪ್ರತ್ಯೇಕ ಟಿ.ಸಿ., ಮನೆ ಮನೆಗೆ ಕುಡಿಯುವ ನೀರು,ರಸ್ತೆ,ಚರಂಡಿ ಕಾಮಗಾರಿ ಕೈಗೊಂಡು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿ ಪಡಿಸಿದ್ದಾರೆ. ಹಾಗಾಗಿ ಅವರನ್ನು ವೀರಶೈವ-ಲಿಂಗಾಯಿತ ಸಮಾಜ ಈ ಬಾರಿ ಕೈ ಹಿಡಿದರೆ,ಶಾಸಕರಾಗಿ,ಮಂತ್ರಿಯೂ ಆಗುವ ಅವಕಾಶ ವಿದೆ ಎಂದು ಜಿ.ಎಸ್.ಬಸವರಾಜು ನುಡಿದರು.


ರವಿಶಂಕರ್ ಹೆಬ್ಬಾಕ ಮಾತನಾಡಿ,ಬಿಜೆಪಿ ಪಕ್ಷ ರಾಜ್ಯದಲ್ಲಿ,ರಾಷ್ಟ್ರದಲ್ಲಿ ಲಿಂಗಾ ಯಿತ,ವೀರಶೈವ ಸಮುದಾಯಕ್ಕೆ ಅತ್ಯಂತ ಜವಾಬ್ದಾರಿಯುತ ಸ್ಥಾನಗಳನ್ನು ನೀಡಿ,ರಾಜಕೀಯವಾಗಿ ಬೆಳೆಯಲು ಸಹಕಾರಿಯಾಗಿದೆ.ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾದರೆ,ಹಲವರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಿದ್ದಲ್ಲದೆ, ಪಕ್ಷದಲ್ಲಿಯೂ ಪ್ರಮುಖ ಸ್ಥಾನ ನೀಡಿದೆ.ರಾಜ್ಯದಲ್ಲಿ ಬಿಜೆಪಿ ಎಂದರೆ ವೀರಶೈವ-ಲಿಂಗಾಯಿತರು ಎಂಬಂತಾಗಿದೆ. ಜಿಲ್ಲೆಯಲ್ಲಿ ಸಮಾಜ ಬಿಜೆಪಿ ಬೆನ್ನಿಗೆ ನಿಂತಿದೆ ಎಂದರು.

ನನಗೆ ಮಂತ್ರಿಯಾಗುವ ಆಸೆಯಿಲ್ಲ.ಈ ಕ್ಷೇತ್ರದ ಸಮಗ್ರ ಅಭಿವೃದ್ದಿಯೊಂದೆ ನನ್ನ ಮುಂದಿರುವ ಗುರಿ ಎಂದು ಸುರೇಶಗೌಡ ತಿಳಿಸಿದರು.

ಸುರೇಶಗೌಡರು ಗ್ರಾಮಾಂತರದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನಮ್ಮ ಸಮುದಾಯದ ವ್ಯಕ್ತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಒದಗಿಸಿದ್ದಾರೆ.ಹಾಗಾಗಿ ನಾವೆಲ್ಲರೂ ಗ್ರಾಮಾಂತರದಲ್ಲಿ ಸುರೇಶಗೌಡ ರನ್ನು ಬೆಂಬಲಿಸಬೇಕಿದೆ ಎಂದು ರವಿ ಹೆಬ್ಬಾಕ ಮನವಿ ಮಾಡಿದರು.

ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮಾತನಾಡಿ,ವಿದ್ಯಾರ್ಥಿ ದಿಸೆಯಿಂದಲೂ ನನಗೆ ರಾಜಕೀಯ ಶಕ್ತಿ ನೀಡಿದವರು ಬಿ.ಎಸ್.ಯಡಿಯೂರಪ್ಪ ನವರು. ಅವರಿಗೆ ನನ್ನ ತಂದೆಗಿಂತಲೂ ಹೆಚ್ಚಿನ ಸ್ಥಾನವನ್ನು ನೀಡಿದ್ದೇನೆ.ನಾನು ಶಾಸಕನಾಗಿದ್ದ ಕಾಲದಲ್ಲಿ ಸುಮಾರು ೧೫ ಬಾರಿ ಕ್ಷೇತ್ರಕ್ಕೆ ಬಂದ ಯಡಿಯೂರಪ್ಪ,ನನ್ನ ಪ್ರತಿ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ.ಇದರ ಭಾಗವಾಗಿಯೇ ಹಲವಾರು ವರ್ಷಗಳಿಂದ ಆಗದ ಹೆಬ್ಬೂರು,ಗೂಳೂರು ಏತ ನೀರಾವರಿ ಯೋಜನೆ ಒಂದು ವರ್ಷದಲ್ಲಿಯೇ ಆಗಲು ಸಾಧ್ಯವಾಯಿತು.ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಪೈಲೆಟ್ ಪ್ರಾಜೆಕ್ಟನ್ನು ಸಮರ್ಥವಾಗಿ ನಿಭಾಯಿಸಿ ಸುಮಾರು ೨೫ ಸಾವಿರ ಟಿ.ಸಿ.ಗಳನ್ನು ರೈತರಿಗೆ ನೀಡಿದ್ದೇನೆ.ಜಲಜೀವನ್ ಮೀಷನ್ ಆರಂಭವಾಗುವ ಹತ್ತು ವರ್ಷ ಮೊದಲೇ ಮನೆ ಮನೆಗೆ ನೀರು ನೀಡಿದ್ದೇನೆ.ಕೆಲವರ ಅಪಪ್ರಚಾರದಿಂದ ಕಳೆದ ಚುನಾವಣೆಯಲ್ಲಿ ವೀರಶೈವ ಸಮಾಜದ ಕೆಲವರು ನನ್ನಿಂದ ದೂರ ಸರಿದ ಪರಿಣಾಮ ಸೋಲು ಕಾಣಬೇಕಾಯಿತು ಎಂದರು.


ದೇಶದ ಹಿತದೃಷ್ಟಿಯಿಂದ ನರೇಂದ್ರಮೋದಿ ಅವರ ಕೈ ಬಲಪಡಿಸುವ ಉದ್ದೇಶದಿಂದ ಬಿಜೆಪಿಗೆ ಲೀಡ್ ಬರುವಂತೆ ನೋಡಿಕೊಂಡಿದ್ದೇನೆ.ಅಭಿವೃದ್ದಿಯೇ ಈ ಚುನಾವಣೆಯ ಪ್ರಮುಖ ವಿಚಾರವಾಗಿದೆ.ದೇಶ ಮತ್ತು ರಾಜ್ಯದ ಅಭಿವೃದ್ದಿಗೆ ವೀರಶೈವ-ಲಿಂಗಾಯಿತರ ಕೊಡುಗೆ ಮಹತ್ವ ದಾಗಿದೆ. ನಿಜಲಿಂಗಪ್ಪ,ವೀರೇಂದ್ರಪಾಟೀಲ್, ಬಿ.ಎಸ್.ವೈ,ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಗಳಾದರೆ, ಹಲವರು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ, ರಾಜ್ಯವನ್ನು ಅಭಿವೃದ್ದಿ ಪಡಿಸಿದ್ದಾರೆ.ಗ್ರಾಮಾಂತರ ಕ್ಷೇತ್ರ ಅಭಿವೃದ್ದಿಯಾಗಬೇಕೆಂದರೆ ಬಿಜೆಪಿ ಗೆಲ್ಲಬೇಕಿದೆ.ಹಾಗಾಗಿ ಮೇ.೧೦ರ ಚುನಾವಣೆಯ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿಯಾಗಿರುವ ನನಗೆ ಮತ ನೀಡಿ,ಗೆಲ್ಲಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.


ಕಾರ್ಯಕ್ರಮಕ್ಕೂ ಮುನ್ನ ಜಗಜ್ಯೋತಿ ಬಸವೇಶ್ವರರ, ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕರಣ್ಣ,ರೈತಮೋರ್ಚಾದ ಶಿವಪ್ರಸಾದ್,ರೇಣುಕಾಪ್ರಸಾದ್, ಹೊನ್ನೇಶಕುಮಾರ್,ಗೂಳೂರು ಶಿವಕುಮಾರ್, ಲೋಕೇಶಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕವನ: ಬಿಡದ ಹೊರತು

0

ಈ ಬಾರಿ ಬುದ್ಧ ಪೂರ್ಣಿಮಾವನ್ನು ಮೇ 5 ರಂದು ಶುಕ್ರವಾರ ಆಚರಿಸಲಾಗಿದೆ. ಗೌತಮ ಬುದ್ಧನು ತನ್ನ ಪ್ರವಚನಗಳಲ್ಲಿ ಮನುಷ್ಯ ತನ್ನ ಜೀವನವನ್ನು ಹೇಗೆ ಸಂತೋಷ ಮತ್ತು ಯಶಸ್ವಿಗೊಳಿಸಬಹುದು ಎಂದು ಹೇಳಿದ್ದಾನೆ. ಬುದ್ಧ ಹೇಳಿದ ವಿಷಯಗಳನ್ನು ನಾವು ಅಳವಡಿಸಿಕೊಳ್ಳುವುದರಿಂದ ಜೀವನದ ಅನೇಕ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ ಮತ್ತು ಹಿಂದೂ ಧರ್ಮದಲ್ಲಿ ಅವನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ

ಕವನ: ಬಿಡದ ಹೊರತು


ಬಿಟ್ಟಿದ್ದೇ ಬರುವುದು
ಇದ್ದದ್ದು ಇದ್ದಲ್ಲೇ ಇರುವುದು.

ಬಿಟ್ಟಿದ್ದು
ಹೆಚ್ಚಾದಷ್ಟೂ
..ಇರುವುದೇ ಹೊರೆ ಎನಿಸುವುದು.

ಬಿಡುವದು
ಬಲವಂತವಾಗಬರದು..

ಬಿಡದೆ ಹೋದಲ್ಲಿ
ಸಾವು ನೋವಾಗುವುದು..

ಮಧ್ಯ ವಯಸ್ಸಿಗೂ
ಮುಕ್ತಿ ..ಬೇಡದೆ ಹೋದಲ್ಲಿ
ಮತ್ತೆ ಆಟದ ಸಾಮಾನಿಗೆ
ಅತ್ತ ಮಗುವಂತೆ…

ಬಿಡಲು ಗಟ್ಟಿ ಮನಸು ಬೇಕು
ಪಡೆಯಲು ಅಲ್ಲ.

ಬಿಡಲು ಏನೂ ಇಲ್ಲ
ಕೊಡಲು ಬೇಕಾದಷ್ಟು ಇದೆ.

ಬಿಟ್ಟದ್ದು ನಿನ್ನ ಅಹಂಕಾರ
ಬೇರೆ ಏನೂ ಅಲ್ಲ.

ಬಿಟ್ಟದ್ದು ನೀನೇ
ನಿನಗೆ ಹಾಕಿಕೊಂಡ ಉರುಳು..

ಬಿಡುವುದು
ಬವಣೆಯನ್ನು
ಬದುಕನ್ನಲ್ಲ.

ಎಲ್ಲರಿಗೂ
ಬದ್ಧನಾದರೆ
ಬುದ್ಧ ಆಗೆ ಆಗುವೆ

ಯಾರನ್ನೂ ನೋಯಿಸದೆ.

ಡಾ. ರಜನಿ

BJP ಗೆ ಬಹುಮತ ನೀಡಿ: ಪ್ರಧಾನಿ ಮೋದಿ

0

ತುಮಕೂರು ಗ್ರಾಮಾಂತರ ಅಭ್ಯರ್ಥಿ ಸುರೇಶಗೌಡರನ್ನು ಆರ್ಶೀವದಿಸಿದ ಪ್ರಧಾನಿ ನರೇಂದ್ರ ಮೋದಿ.

ತುಮಕೂರು: ರಾಷ್ಟ್ರಾಭಿವೃದ್ಧಿಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕೆ ಹೆಚ್.ಎ.ಎಲ್. ನಿಂದ ದೊಡ್ಡ ಮಟ್ಟದ ಲಾಭವಾಗಿದೆ. ಹೆಚ್.ಎ. ಎಲ್.ಹೆಸರೇ ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಶುಕ್ರವಾರ ಸಂಜೆ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದರು.

ಜನರತ್ತ ಕೈ ಮುಗಿದ ಪ್ರಧಾನಿ ನರೇಂದ್ರ ಮೋದಿ

ನಮ್ಮ ಸರ್ಕಾರದಿಂದ ಹೆಚ್ ಎ ಎಲ್‍ನ್ನು ಉನ್ನತ ದರ್ಜೆಗೇರಿಸಿದ್ದೇವೆ. ಕರ್ನಾಟಕದ ತುಮಕೂರು ಜಿಲ್ಲೆಯಲ್ಲೂ ಇದರ ಘಟಕ ಕಾರ್ಯನಿರ್ವಹಿಸುತ್ತಿದೆ. ದೇಶದ ರಕ್ಷಣೆಗೆ ಸುಧಾರಿತ ಹೆಲಿಕ್ಯಾಪ್ಟರ್ ಅನ್ನು ತಯಾರು ಗೊಳಿಸುವ ಅತ್ಯುನ್ನತ ಕಂಪನಿ ಇದಾಗಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್‍ಎಎಲ್ ನ್ನೇ ದಿವಾಳಿಗೆ ತಂದಿತ್ತು. ಭ್ರಷ್ಟಾಚಾರದ ಮೂಲ ಭೇರು ಕಾಂಗ್ರೆಸ್‍ನಿಂದಲೇ ಚಿಗುರಿದೆ. ಕಾಂಗ್ರೆಸ್ 85% ಕಮೀಷನ್ ಪಡೆದು ದೇಶವನ್ನು ಹಾಳುಮಾಡಿದೆ ಎಂದರು.

ತುಮಕೂರಿನಲ್ಲಿ ಜನರಿಗೆ ವಂದಿಸಿದ ಪ್ರಧಾನಿ

ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರ ದೃಷ್ಟಿಇಲ್ಲ. ತನ್ನ ಸುಳ್ಳನ್ನು ಒಪ್ಪಿಕೊಳ್ಳದೇ ಬಿಜೆಪಿಯ ಜನಪರ ಕಾರ್ಯಕ್ರಮಗಳನ್ನು ವಿರೋಧಿ ಸುವುದೇ ಅದರ ಕೆಲಸವಾಗಿದೆ. ಜನರೇ ಎಚ್ಚೆತ್ತುಕೊಳ್ಳಿ , ಮೋಸ ಮಾಡಿದ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಾಂಗ್ರೆಸ್ ತೊಲಗಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ನೀಡಿ ಎಂದು ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ಸರ್ಕಾರ ತುಮಕೂರು ಜಿಲ್ಲೆಯನ್ನು ಅಭಿವೃದ್ಧಿ ಮಾಡಿದೆ. ಹೆಚ್‍ಎಎಲ್ ಸೇರಿದಂತೆ ತುಮಕೂರು-ರಾಯದುರ್ಗ, ತುಮಕೂರು-ಚಿತ್ರದುರ್ಗ ರೈಲ್ವೇ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಾರಿ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ನೀಡಿ ತುಮಕೂರು ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಯಾಗಲಿದೆ ಎಂದರು.

ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್, ಸೇರಿದಂತೆ ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದ ಅಭ್ಯ ರ್ಥಿಗಳು ಹಾಗೂ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನಾವರಣಗೊಂಡ ಬೌದ್ಧಿಕ ಶಿಕ್ಷಕಿಯ ದಾರಿ…

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಪ್ರೊ.ಎಸ್.ಡಿ.ಶಶಿಕಲಾ ವಿಭಿನ್ನ ನೆಲೆಯಲ್ಲಿ ನಿಲ್ಲುವವರು.

ಅವರ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಬೌದ್ಧಿಕ ಯಾತ್ರೆ ಹೆಸರಿನಲ್ಲಿ ಅವರ ಅಭಿನಂದನಾ ಗ್ರಂಥ ಹೊರ ತಂದಿರುವುದು ಸಂತಸದ ವಿಷಯ.

ಸ್ವಲ್ಪ ಕಠಿಣ ಎ‌ನ್ನಬಹುದಾದ ಶಶಿಕಲಾ ಅವರು ಎಂದಿಗೂ ರಾಜೀ ಸೂತ್ರಕ್ಕೆ ಬಗ್ಗದವರು. ತಮ್ಮ ವಿದ್ಯಾರ್ಥಿಗಳೇ ಇರಲಿ, ಯಾರೇ ಆಗಿರಲಿ, ಓದು, ಪಾಠ, ಬರಹ, ಸಂಶೋಧನೆಯ ಸಂದರ್ಭಗಳಲ್ಲಿ ಅವರು ತೋರುವ ಕಾಠಿಣ್ಯತೆ ಅವರನ್ನು ಎತ್ತರಕ್ಕೆ ಕೊಂಡೂಯ್ದಿದಿದೆ.

ಶಶಿಕಲಾ ಅವರನ್ನು ಡಾ.ಸಿ.ಪಿ.ಸಿದ್ದಾಶ್ರಮ ಅವರ ಬರಹದಲ್ಲಿ ಕಾಣಬಹುದು. ಅದನ್ನು ಕೆಳಗೆ ನೀಡಲಾಗಿದೆ.

ಡಾ.ಎಸ್‌.ಡಿ.ಶಶಿಕಲಾ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಮಹಿಳೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕಿಯಾಗಿರುವ ಇವರು ತಮ್ಮ ಕರ್ತವ್ಯವನ್ನು ಶ್ರದ್ಧೆ, ನಿಷ್ಠೆಯಿಂದ ನಿರ್ವಹಿಸಿಕೊಂಡು ಹೋಗುತ್ತಿರುವ ಶಿಸ್ತಿನ ಅಧ್ಯಾಪಕಿಯೆಂದು ಹೆಸರು ಮಾಡಿದ್ದಾರೆ.

ತಿಂಗಳಿಗೊಮ್ಮೆಯೇ ಇಲ್ಲವೆ ಚತುರ್ಮಾಸಕ್ಕೊಮ್ಮೆಯೆ ವಿದ್ಯಾರ್ಥಿಗಳಿಗೆ ಮುಖ ತೋರಿಸಿ ಹೋಗುವ ಜಾಯಮಾನದ ಅಧ್ಯಾಪಕಿ ಇವರಲ್ಲ. ಅರೆಬರೆ ಪಾಠ ಮಾಡುವುದು, ಕೆಲಸ ಕದಿಯುವುದು ಶಶಿಕಲಾ ಪ್ರವೃತ್ತಿಯಲ್ಲ. ಶಿಸ್ತಿನ ಅಧ್ಯಾಪಕಿಯಾಗಿರುವ ಇವರು ತಮ್ಮ ಪಾಲಿನ ಪಾಠ ಪ್ರವಚನಗಳನ್ನು ಆದಿಯಿಂದ ಅಂತ್ಯದವರೆಗೆ ವಿವರಣಾತ್ಮಕವಾಗಿ ವಿಮರ್ಶಾತ್ಮಕವಾಗಿ ವಿದ್ಯಾರ್ಥಿಗಳ ಮನದಾಳದಲ್ಲಿ ನಾಟುವಂತೆ ಬೋಧಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕಿಯೆಂದು ಮನ್ನಣೆ ಗಳಿಸಿದ್ದಾರೆ.

ಜಾತ್ಯಾತೀತ ಮನೋಭಾವದ ಶಶಿಕಲಾ ಅವರು ತಮ್ಮ ಬದುಕನ್ನು ಜಾತ್ಯಾತೀತ ನಲೆಯಲ್ಲೇ ರೂಪಿಸಿಕೊಂಡಿರುವುದು ಹೆಮ್ಮೆಯ ಸ೦ಗತಿ. ವಿಶ್ವವಿದ್ಯಾನಿಲಯಗಳೆಂದರೆ ಅವು ವಿಶ್ವದ ಎಲ್ಲ ಜ್ಞಾನ, ಶಿಸ್ತುಗಳನ್ನು ತಾರತಮ್ಯ ಭಾವವಿಲ್ಲದೆ ವಿದ್ಯಾರ್ಥಿಗಳಿಗೆ ತಲುಪಿಸುವ ಜ್ಞಾನ ದೇಗುಲಗಳೆಂಬ ಅನಿಸಿಕೆ ಸಾಮಾನ್ಯ. ಅಲ್ಲಿ ಈ ಅರಿವಿನ ಹಣತೆಯನ್ನು ಹಚ್ಚಬೇಕಾದವರು ಅಲ್ಲಿನ ಅಧ್ಯಾಪಕ ವೃಂದ. ಹಾಗಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ನೈತಿಕ ಹೊಣೆಗಾರಿಕೆಯನ್ನು ಸಮಾಜ ಅಧ್ಯಾಪಕರಿಂದ ನಿರೀಕ್ಷಿಸುವುದು ಸಾಮಾನ್ಯ ಮತ್ತು ಸಹಜ.

– ಹೀಗೆ ಒಟ್ಟು 56 ಲೇಖನಮಾಲೆಗಳ ಈ ಅಭಿನಂದನಾ ಗ್ರಂಥ ಸಮಗ್ರವಾಗಿದೆ. ಅಧ್ಯಾಪಕರು ಹೇಗಿರಬೇಕು ಎನ್ನುವವರೆಲ್ಲರಿಗೂ ಕೃತಿ ಮಾರ್ಗದರ್ಶಕವಾಗಿದೆಯಷ್ಟೇ ಅಲ್ಲ ನಿಜ ರೂಪದ ಅಭಿನಂದನಾ ಗ್ರಂಥವಾಗಿಯೂ ಮೂಡಿಬಂದಿದೆ. ಇಂಥ ಕೃತಿಯ ಸಂಪಾದಕರಾದ ಡಾ. ವಾಸಯ್ಯ ಎನ್. ಸಹ ಅಭಿನಂದಾರ್ಹರು.


ಪುಸ್ತಕ ಪರಿಚಯ: ನಂದನವನ

ಶ್ರೀಲಂಕಾದಲ್ಲಿ ಕನ್ನಡ ಚಿತ್ರೋತ್ಸವ ಉದ್ಘಾಟನೆ

0

ಭಾರತದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿ

ಶ್ರೀಲಂಕ: ಭಾರತ ಸರ್ಕಾರದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಆಕಾಡೆಮಿಯನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಶ್ರೀಲಂಕಾದ ವಾರ್ತಾ ಮತ್ತು ಸಾರಿಗೆ ಸಚಿವರಾದ ಡಾ ಬಂದುಲ ಗುಣವರ್ಧನೆ ಅವರು ತಿಳಿಸಿದರು.

ಶ್ರೀಲಂಕಾದ ಕೊಲಂಬೋದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇದೇ ಮೊದಲ ಬಾರಿಗೆ ಭಾರತೀಯ ಚಲನ ಚಿತ್ರಗಳ ಮೇಲೆ ಬೆಳಕು ಚೆಲ್ಲುವ ಉತ್ಸವ ಹಾಗೂ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ (ಎಸ್ ಎಲ್ ಟಿ ಪಿ ಬಿ), ಏಷಿಯಾ ಮಾಧ್ಯಮ ಮತ್ತು ಸಾಂಸ್ಕೃತಿಕ ಸಂಸ್ಥೆ (ಎ ಎಮ್ ಸಿ ಎ), ಶ್ರೀಲಂಕಾ ಚಲನಚಿತ್ರ ಮಂಡಳಿ (ಎನ್ ಎಫ್ ಸಿ ), ಭಾರತ ರಾಯಭಾರ ಕಚೇರಿ ಹಾಗೂ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ (ಐಸಿಸಿಆರ್) ಈ ಉತ್ಸವವನ್ನು ಹಮ್ಮಿಕೊಂಡಿತ್ತು.

ಭಾರತದ ಚಲನಚಿತ್ರ ಉದ್ಯಮಿಗಳ ಅಪಾರ ಅನುಭವವನ್ನು ಒಳಗೊಂಡಲ್ಲಿ ಈ ಚಲನಚಿತ್ರ ಅಕಾಡೆಮಿ ಸತ್ವಯುತವಾಗಲಿದೆ. ಶ್ರೀಲಂಕಾದ ಆರ್ಥಿಕ ಅಭಿವೃದ್ದಿಗೆ ಚಲನಚಿತ್ರ ಉದ್ಯಮ ಮಹತ್ವದ ಸೇತುವೆಯಾಗಲಿದೆ ಎಂದು ಅವರು ತಿಳಿಸಿದರು.

ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಉತ್ಸವದ ಸನ್ಮಾನವನ್ನು ಸ್ವೀಕರಿಸಿ ಕನ್ನಡ ಚಲನಚಿತ್ರ ರಂಗವು ಈಗ ವಿಶ್ವಾವ್ಯಾಪಿ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡ ಚಲನಚಿತ್ರಗಳು ದೃಶ್ಯ ಮಾಧ್ಯಮದ ಮಹತ್ವವನ್ನು ಹೆಚ್ಚಿಸಿದೆ. ಕನ್ನಡ ಚಲನಚಿತ್ರಗಳ ಗುಣಮಟ್ಟ ಜಾಗತಿಕವಾಗಿ ಪ್ರಶಂಸೆಗೆ ಒಳಪಟ್ಟಿದೆ.

ಚಲನಚಿತ್ರ ನನ್ನ ಪಾಲಿಗೆ ಮನರಂಜನೆಯ ಜೊತೆಗೆ ಸಮಾಜದ ಬಿಕ್ಕಟ್ಟುಗಳನ್ನು ನೋಡುಗರ ಮುಂದಿಡುವ ಮಾಧ್ಯಮ. ನನ್ನ ಚಲನಚಿತ್ರಗಳು ನನ್ನ ಒಳತೋಟಿಗಳ ಜತೆಗೆ ಸಾಮಾಜಿಕ ಅರಿವು ಮೂಡಿಸಲು ಪ್ರಯತ್ನಿಸಿದೆ. ಶ್ರೀಲಂಕಾದ ಪ್ರಕೃತಿ ಸಿರಿ ಭಾರತದ ಚಿತ್ರ ಉದ್ಯಮವನ್ನು ಸೆಳೆಯುವಂತಿದೆ. ಉದ್ಯಮ ಇಲ್ಲಿನ ಚಲನಚಿತ್ರ ತಾಣಗಳನ್ನು ಬಳಸಿಕೊಳ್ಳಬೇಕು ಎಂದರು.

ಶ್ರೀಲಂಕಾದಲ್ಲಿನ ಭಾರತದ ರಾಯಭಾರಿ ಗೋಪಾಲ ಭಾಗ್ಲೆ, ಭಾರತದ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕರಾದ ಪ್ರೊ ಅಂಕುರನ್ ದತ್ತ, ಶ್ರೀಲಂಕಾ ಚಲನಚಿತ್ರ ಮಂಡಳಿ ಅಧ್ಯಕ್ಷ ದೀಪಲ್ ಚಂದ್ರರತ್ನೆ, ಪ್ರವಾಸೋದ್ಯಮ ಪ್ರಚಾರ ಬ್ಯೂರೋದ ಉಪ ನಿರ್ದೇಶಕ ಚಮಿಂದ ಮುನಿಸಿಂಘೆ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಚಲನಚಿತ್ರ ನಟರುಗಳಾದ ನಿರೂಪ್ ಭಂಡಾರಿ, ಕಾವ್ಯಾ ಶೆಟ್ಟಿ, ಚಲನಚಿತ್ರ ತಂತ್ರಜ್ಞ ಎಸ್ ಕೆ ರಾವ್, ನಿರ್ಮಾಪಕ ಶಂಕರೇಗೌಡ, ಹಿರಿಯ ಪತ್ರಕರ್ತರುಗಳಾದ ಜಿ ಎನ್ ಮೋಹನ್ ಹಾಗೂ ಹೆಚ್ ಬಿ ಮದನ ಗೌಡ ಅವರು ಮಾತನಾಡಿದರು.

ಚಲನ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೆರಿಕಾ ಅಮೆರಿಕಾ, ಇಷ್ಟಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.

ಬಿಜೆಪಿ ಶಾಸಕರ ಕೈ ಹಿಡಿದ ಮುಖಂಡರು

0

ಸಿ.ಎಸ್.ಪುರ: ಇಲ್ಲಿನ ಚೆಂಗಾವಿ ಪಂಚಾಯತಿಯ‌ ಕೆಲ ಊರುಗಳ ಜೆಡಿಎಸ್, ಕಾಂಗ್ರೆಸ್ ಮುಖಂಡರು ಬಿಜೆಪಿ ಶಾಸಕ ಮಸಲಾ ಜಯರಾಂ ಕೈ ಹಿಡಿದರು.

ಈ ಭಾಗದಲ್ಲಿ ಶಾಸಕರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಸರಳ ವ್ಯಕ್ತಿ. ಎಲ್ಲರನ್ನು ಗೌರವದಿಂದ ಕಾಣುತ್ತಾರೆ. ಹೀಗಾಗಿ ನೂರಾರು ಗ್ರಾಮಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಶಿವಕುಮಾರ್ ತಿಳಿಸಿದರು.

ಚೆಂಗಾವಿ ಪಂಚಾಯತಿ ಹನುಮಂತೇಗೌಡನ ಪಾಳ್ಯದ ಗಂಗಾಧರಪ್ಪ, ರಾಜಣ್ಣ, ಕುಮಾರ್, ನಾಗರಾಜ್ ಹಾಗೂ ಇತರರು ಬಿಜೆಪಿ ಸೇರಿದರು. ಶಾಸಕ ಮಸಾಲ ಜಯರಾಂ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ತಿಗಳ ಸಮುದಾಯದ ಮನೆ ಮಗ ನಾನು: ಸುರೇಶಗೌಡ

0

ತುಮಕೂರು: ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ತಿಗಳ ಸಮುದಾಯ ಆರಂಭದಿಂದಲೂ ಜೊತೆಗಿದ್ದು ಸಹಕಾರ ನೀಡುತ್ತಾ ಬಂದಿದ್ದು,ನನ್ನನ್ನು ಶಾಸಕನಾಗಿ ನೋಡದೆ, ಓರ್ವ ಮನೆ ಮಗನಂತೆ ಪರಿಗಣಿಸಿದ್ದು, ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದ್ದಾರೆ.


ತುಮಕೂರು ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿಂದು ತಿಗಳ ಸಮುದಾಯಕ್ಕೆ ಸೇರಿದ ಯಜಮಾನರು, ಅಣೆಕಾರರು, ಮುದ್ರೆಯವರ ಸಭೆ ನಡೆಸಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದಿಂದ ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾಗುವುದು ಖಚಿತ.ತುಮಕೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ನೆನೆಗುದಿಗೆ ಬಿದ್ದಿರುವ ತಿಗಳ ಸಮಾಜದ ಸಮುದಾಯ ಭವನಗಳನ್ನು ಪೂರ್ಣಗೊಳಿಸಿಕೊಡುವ ಭರವಸೆ ನೀಡಿದರು.


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತಿಗಳ ಸಮುದಾಯ ರಾಜಕೀಯವಾಗಿ ಬೆಳೆಯಲು ಅಗತ್ಯವಿರುವ ಎಲ್ಲಾ ಅವಕಾಶಗಳನ್ನು ಕಲ್ಪಿಸಿದ್ದೇನೆ.ಅಲ್ಲದೆ ಶೈಕ್ಷಣಿಕ ಅಭಿವೃದ್ದಿಗಾಗಿ ಬುಗಡನಹಳ್ಳಿ, ಪಾಲಸಂದ್ರಗಳಲ್ಲಿ ಹೈಟೆಕ್ ಶಾಲೆ ನಿರ್ಮಾಣ ಮಾಡಿ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರದಲ್ಲಿ ಒಂದು ಎಕರೆ ಜಾಗ ಗುರುತಿಸಿ, ಬೃಹತ್ ಸಮುದಾಯಭವನ ನಿರ್ಮಿಸುವ ಗುರಿ ಹೊಂದಿದ್ದೇನೆ.ಇದರ ಜೊತೆಗೆ ದೇವಸ್ಥಾನಗಳ ಅಭಿವೃದ್ದಿಗೂ ಅದ್ಯತೆ ನೀಡುವುದಾಗಿ ಬಿ.ಸುರೇಶಗೌಡ ನುಡಿದರು.

ಶಾಸಕನಾಗಿರಲಿ, ಇಲ್ಲದಿರಲಿ ಕೇವಲ ಶಾಲು, ಹಾರಕ್ಕೆ ಸಿಮೀತವಾಗಿಲ್ಲ.ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ತಿಗಳ ಸಮುದಾಯದ ಕುಲದೈವ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಯನ್ನು ಸರಕಾರದ ಕಾರ್ಯಕ್ರಮವನ್ನಾಗಿಸಿ, ಗೌರವ ಸಲ್ಲಿಸಿದೆ. ಇದರ ಜೊತೆಗೆ ಸಮಸ್ತ ತಿಗಳ ಅಭಿವೃದ್ದಿ ನಿಗಮ ಸ್ಥಾಪನೆಗೆ ನನ್ನ ಶಕ್ತಿ ಮೀರಿ ಶ್ರಮಿಸಿದ್ದೇನೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದ್ದು, ಅದು ಮುಗಿದು ವರದಿ ಬಂದ ತಕ್ಷಣ.ಕೇಂದ್ರದೊಂದಿಗೆ ಮಾತನಾಡಿ ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶಗೌಡ ಭರವಸೆ ನೀಡಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಹೆಚ್.ಕೃಷ್ಣಪ್ಪ ಮಾತನಾಡಿ,ಕೃಷಿಯೇ ಮೂಲ ಕಸುಬಾಗಿರುವ ತಿಗಳ ಸಮುದಾಯದ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ,ರಾಜಕೀಯ ಅಭಿವೃದ್ದಿಗಾಗಿ ಸುರೇಶಗೌಡರು ಶಾಸಕರಾಗಿದ್ದಾಗ ಸಾಕಷ್ಟು ಅನುದಾನ ನೀಡಿದ್ದಾರೆ. ರಾಜಕೀಯವಾಗಿ ಮೂರು ಜನರಿಗೆ ತಾಲೂಕು ಪಂಚಾಯಿತಿ ಸದಸ್ಯರಾಗಲು, ಐದಕ್ಕೂ ಹೆಚ್ಚು ಗ್ರಾ.ಪಂ.ಗಳ ಅಧ್ಯಕ್ಷರಾಗಿ ಇಂದು ತಿಗಳ ಸಮುದಾಯದ ಜನರಿದ್ದರೆ, ಅದಕ್ಕೆ ಕಾರಣ ಸುರೇಶಗೌಡ.ಇವರ ಕಾರ್ಯವೈಖರಿಯನ್ನು ಮೆಚ್ಚಿಯೇ ನಾನು ಸೇರಿದಂತೆ ನನ್ನಂತಹ ಅನೇಕರು ಜೆಡಿಎಸ್ ತೊರೆದು ಬಿಜೆಪಿ ಸೇರಿ,ಸುರೇಶಗೌಡರ ಪರವಾಗಿ ಕೆಲಸ ಮಾಡುತಿದ್ದಾರೆ.ಸಮುದಾಯದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡುವ ಸುರೇಶಗೌಡ ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು.


ತುಮಕೂರು ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಮಾತನಾಡಿ,ಸುರೇಶಗೌಡರು ಗ್ರಾಮಾಂತರ ಕ್ಷೇತ್ರದಲ್ಲಿದ್ದರೂ ನಗರದಲ್ಲಿ ತಿಗಳ ಸಮುದಾಯ ರಾಜಕೀಯವಾಗಿ ಅಭಿವೃದ್ದಿ ಹೊಂದಲು ಅಗತ್ಯ ನೆರವು ನೀಡಿದ್ದಾರೆ. ಹಾಗಾಗಿಯೇ ನಾವು ಗ್ರಾಮಾಂತರದ ತಿಗಳ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿ, ಸುರೇಶಗೌಡರನ್ನು ಬೆಂಬಲಿಸುವಂತೆ ಕೋರುತ್ತಿದ್ದೇವೆ. ಜನಾಂಗದ ಕಷ್ಟ, ಸುಖಃಗಳಲ್ಲಿ ಭಾಗಿಯಾಗುವ ಸುರೇಶಗೌಡರು ಗೆಲ್ಲುವುದರಿಂದ ಮುಂದಿನ ದಿನಗಳಲ್ಲಿ ತಿಗಳ ಜನಾಂಗದ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಪುಟ್ಟಲಕ್ಷ್ಮಮ್ಮ, ತುಮಕೂರು ಗ್ರಾಮಾಂತರದ ವಿವಿಧ ಗ್ರಾಮಗಳ ತಿಗಳ ಸಮಾಜದ ಯಜಮಾನರಾದ ಬುಗುಡನಹಳ್ಳಿ ಪುಟ್ಟಯ್ಯ, ಲಿಂಗರಾಜು, ಚಿಕ್ಕೀರಪ್ಪ, ಕೆಂಪಣ್ಣ, ರಾಜಣ್ಣ, ನಾಗರಾಜು, ಮುದ್ದರಂಗಯ್ಯ, ನಿಂಗೇಗೌಡ, ನಿಂಗೇಗೌಡ, ಸಿದ್ದಗಂಗಯ್ಯ, ನಾಗಪ್ಪ, ದೊಡ್ಡಯ್ಯ, ಗುರುರಾಜಪ್ಪ, ಕೃಷ್ಣಪ್ಪ, ರಂಗಯ್ಯ, ಧರ್ಮರಾಜು, ತಿಮ್ಮಯ್ಯ ಹಾಗೂ ಅಣೆಕಾರರು, ಮುದ್ರೆಯವರು ಉಪಸ್ಥಿತರಿದ್ದರು.

ತಿಪಟೂರಿನಲ್ಲಿ ನಂದಿನಿ ಉಳಿಸಿ ಸಮಾವೇಶ

ತಿಪಟೂರು: ಕರ್ನಾಟಕ ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ, ತಾಲ್ಲೂಕು ಹಾಲು ಉತ್ಪಾದಕರ ಸಂಘಟನೆಗಳು ಮುಂತಾದ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ಸಹಯೋಗದಲ್ಲಿ ಇದೇ 6 ಶನಿವಾರ ಬೆಳಗ್ಗೆ 10 ಗಂಟೆಗೆ ಎಸ್ ವಿ ಪಿ ವಿದ್ಯಾ ಸಂಸ್ಥೆಯ ಆವರಣದಲ್ಲಿ
‘ನಂದಿನಿ ಉಳಿಸಿ’ ಜಾಗೃತಿ ಆಂದೋಲನವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಶಿವಸುಂದರ್, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಕೆ.ಟ. ಗಂಗಾಧರ್, ಪ್ರಾಂತ ರೈತ ಸಂಘದ ಯಶವಂತ್ ಹಾಗು ಕೆ.ಎಂ.ಎಫ್ ರಾಜ್ಯ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ಅವರೊಂದಿಗೆ
ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರು ಭಾಗವಹಿಸಲಿದ್ದಾರೆ ಎಂದು ರೈತ ಸಂಘದ ದೇವರಾಜ್ ತಿಮ್ಮಲಾಪುರ, ಚನ್ನಬಸವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತಿ ಎಚ್ ವಿ ವೆಂಕಟೇಶ್ ಪರ ಮತ ಬಿಕ್ಷೆ ಬೇಡಿದ ಶಶಿಕಲಾ.

0

ಪಾವಗಡ : ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರ ಪತ್ನಿ ಶಶಿಕಲಾ ಅವರು ಇಂದು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ನನ್ನ ಸೆರಗೊಡಿ ಮತ‌ಕೇಳುತಿದೇನೆ‌ ನನ್ನ ಪತಿಗೆ ನಿಮ್ಮ ಅಮೂಲ್ಯ ವಾದ‌ ಮತ‌ ಹಾಕಿ ವೆಂಕಟೇಶ್ ರವರನ್ನು ಗೆಲಿಸಬೇಕೆಂದು ಪ್ರಚಾರ ನಡೆಸಿದ ಪ್ರಸಂಗ ನಡೆಯಿತು .

‌ತಾಲ್ಲೂಕಿನ ವಿ ಹೆಚ್‌ ಪಾಳ್ಯ ಮದ್ದೆ,ಮಂಗಳವಾಡ,ಅರಸೀಕೆರೆ,ಹೊಸಹಳ್ಳಿ, ಜಂಗಮರಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಶಶಿಕಲಾ ರವರು ನನ್ನ ಮಾವ ವೆಂಕಟರಮಣಪ್ಪ ಮತ್ತು ಪತಿ ವೆಂಕಟೇಶ್ ‌ರವರು‌ ತಾಲ್ಲೂಕಿನ ಅಭಿವೃದ್ಧಿ ಗೆ‌ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.2013 ರ ಚುನಾವಣೆಯಲ್ಲಿ ನನ್ನ ಪತಿ ಕಡಿಮೆ ಅಂತರದಲ್ಲಿ ಸೋತರು. ಈ ಬಾರಿ ನೀವೆಲ್ಲರೂ ಮತ ನೀಡಿ ಅತ್ಯಧಿಕ ಅಂತರದಲ್ಲಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಈ ಬಾರಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ‌ರೂಪಿಸಲು ಚಿಂತನೆ ನಡೆಸಿದೆ‌ ಗೃಹಲಕ್ಷ್ಮೀ,ಯೋಜನೆ ಯಿಂದ ತಿಂಗಳಿಗೆ ಮನೆಯೊಡತಿ ಖಾತೆಗೆ ಎರಡು‌ಸಾವಿರದಂತೆ ಐದು ವರ್ಷಗಳ ಕಾಲ ಒಂದು ಲಕ್ಷ ಇಪ್ಪತ್ತು ಸಾವಿರ ರೂ ಹಾಕಲಾಗುತ್ತದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ,ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ ಜಿ ಅಕ್ಕಿ ,ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಪದವಿಧರರಿಗೆ ಪ್ರತಿ ತಿಂಗಳು 3000 ಸಾವಿರದಂತೆ ಎರಡು ವರ್ಷಗಳ ಕಾಲ‌ ನಿರುದ್ಯೋಗ ಭತ್ಯ ನೀಡಲಾಗುವುದು,ಡಿಪ್ಲೊಮಾ ‌ಪದವಿಧರಿಗೆ ಮಾಸಿಕ‌ 1500 ರೂಗಳನ್ನು ‌ನೀಡಲಾಗುತ್ತದೆ ಎಂದು ‌ತಿಳಿಸಿದರು.
ಶಾಶ್ವತ ಯೋಜನೆಗಳನ್ನು ಪಾವಗಡ‌ ತಾಲ್ಲೂಕಿಗೆ ತರುವುದೆ ನಮ್ಮ ಗುರಿ ಯಾಗಿದ್ದು ಈ ಭಾಗದ‌ ಜನರ ಬಹು ನಿರೀಕ್ಷೆಯ ಆಸ್ಪತ್ರೆ ಯನ್ನು ಅರಸೀಕೆರೆ ಗ್ರಾಮದಲ್ಲಿ ನಿರ್ಮಾಣ ಮಾಡಲು ಶ್ರಮಿಸುತ್ತೆವೆ ಎಂದು ಭರವಸೆ‌ನೀಡಿದರು.

ಪಾವಗಡ ಪುರಸಭೆ‌ ಮಾಜಿ ಅಧ್ಯಕ್ಷೆ ಸುಮಅನಿಲ್ ,‌ ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷೆ ಶಶಿಕಲಾ,ಬಿ ಹೊಸಹಳ್ಳಿ ಲತಾ,
ಅರಸೀಕೆರೆಯ ಗ್ರಾ ಪಂ ಮಾಜಿ ಸದಸ್ಯೆ ಸರ್ವಮ್ಮ ತ್ರೀವೆಣಿ,ಪ್ರೇಮ,ಪಂಕಜ,ಪದ್ಮ ನಿರ್ಮಲಮ್ಮ ,ತನುಜಾಕ್ಷಿ ,ರತ್ನಮ್ಮ ಮಂಜಮ್ಮ,ಸಾವಿತ್ರಮ್ಮ, ವಾಗೀಶ್ ವಿರೇಂದ್ರ‌,ಕಳ್ಳರಾಜನಹಳ್ಳಿ ಗೋವಿಂದರಾಜು,ಮಾಜಿ ಎಪಿಎಂಸಿ ಅಧ್ಯಕ್ಷ ಮಂಜಣ್ಣ ಹೊನ್ನೇಶ್ ಪಟೇಲ್ ತಿಪ್ಪೇಸ್ವಾಮಿ,ವಿ ಹೆಚ್ ಪಾಳ್ಯ ಹರೀಶ್, ಮತ್ತಿತರರು ಹಾಜರಿದ್ದರು.