ಪಾವಗಡ : ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರ ಪತ್ನಿ ಶಶಿಕಲಾ ಅವರು ಇಂದು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ನನ್ನ ಸೆರಗೊಡಿ ಮತಕೇಳುತಿದೇನೆ ನನ್ನ ಪತಿಗೆ ನಿಮ್ಮ ಅಮೂಲ್ಯ ವಾದ ಮತ ಹಾಕಿ ವೆಂಕಟೇಶ್ ರವರನ್ನು ಗೆಲಿಸಬೇಕೆಂದು ಪ್ರಚಾರ ನಡೆಸಿದ ಪ್ರಸಂಗ ನಡೆಯಿತು .
ತಾಲ್ಲೂಕಿನ ವಿ ಹೆಚ್ ಪಾಳ್ಯ ಮದ್ದೆ,ಮಂಗಳವಾಡ,ಅರಸೀಕೆರೆ,ಹೊಸಹಳ್ಳಿ, ಜಂಗಮರಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಶಶಿಕಲಾ ರವರು ನನ್ನ ಮಾವ ವೆಂಕಟರಮಣಪ್ಪ ಮತ್ತು ಪತಿ ವೆಂಕಟೇಶ್ ರವರು ತಾಲ್ಲೂಕಿನ ಅಭಿವೃದ್ಧಿ ಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.2013 ರ ಚುನಾವಣೆಯಲ್ಲಿ ನನ್ನ ಪತಿ ಕಡಿಮೆ ಅಂತರದಲ್ಲಿ ಸೋತರು. ಈ ಬಾರಿ ನೀವೆಲ್ಲರೂ ಮತ ನೀಡಿ ಅತ್ಯಧಿಕ ಅಂತರದಲ್ಲಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಈ ಬಾರಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಿದೆ ಗೃಹಲಕ್ಷ್ಮೀ,ಯೋಜನೆ ಯಿಂದ ತಿಂಗಳಿಗೆ ಮನೆಯೊಡತಿ ಖಾತೆಗೆ ಎರಡುಸಾವಿರದಂತೆ ಐದು ವರ್ಷಗಳ ಕಾಲ ಒಂದು ಲಕ್ಷ ಇಪ್ಪತ್ತು ಸಾವಿರ ರೂ ಹಾಕಲಾಗುತ್ತದೆ. ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ,ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ ಜಿ ಅಕ್ಕಿ ,ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವಿಧರರಿಗೆ ಪ್ರತಿ ತಿಂಗಳು 3000 ಸಾವಿರದಂತೆ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯ ನೀಡಲಾಗುವುದು,ಡಿಪ್ಲೊಮಾ ಪದವಿಧರಿಗೆ ಮಾಸಿಕ 1500 ರೂಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಶ್ವತ ಯೋಜನೆಗಳನ್ನು ಪಾವಗಡ ತಾಲ್ಲೂಕಿಗೆ ತರುವುದೆ ನಮ್ಮ ಗುರಿ ಯಾಗಿದ್ದು ಈ ಭಾಗದ ಜನರ ಬಹು ನಿರೀಕ್ಷೆಯ ಆಸ್ಪತ್ರೆ ಯನ್ನು ಅರಸೀಕೆರೆ ಗ್ರಾಮದಲ್ಲಿ ನಿರ್ಮಾಣ ಮಾಡಲು ಶ್ರಮಿಸುತ್ತೆವೆ ಎಂದು ಭರವಸೆನೀಡಿದರು.
ಪಾವಗಡ ಪುರಸಭೆ ಮಾಜಿ ಅಧ್ಯಕ್ಷೆ ಸುಮಅನಿಲ್ , ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷೆ ಶಶಿಕಲಾ,ಬಿ ಹೊಸಹಳ್ಳಿ ಲತಾ,
ಅರಸೀಕೆರೆಯ ಗ್ರಾ ಪಂ ಮಾಜಿ ಸದಸ್ಯೆ ಸರ್ವಮ್ಮ ತ್ರೀವೆಣಿ,ಪ್ರೇಮ,ಪಂಕಜ,ಪದ್ಮ ನಿರ್ಮಲಮ್ಮ ,ತನುಜಾಕ್ಷಿ ,ರತ್ನಮ್ಮ ಮಂಜಮ್ಮ,ಸಾವಿತ್ರಮ್ಮ, ವಾಗೀಶ್ ವಿರೇಂದ್ರ,ಕಳ್ಳರಾಜನಹಳ್ಳಿ ಗೋವಿಂದರಾಜು,ಮಾಜಿ ಎಪಿಎಂಸಿ ಅಧ್ಯಕ್ಷ ಮಂಜಣ್ಣ ಹೊನ್ನೇಶ್ ಪಟೇಲ್ ತಿಪ್ಪೇಸ್ವಾಮಿ,ವಿ ಹೆಚ್ ಪಾಳ್ಯ ಹರೀಶ್, ಮತ್ತಿತರರು ಹಾಜರಿದ್ದರು.