Wednesday, March 27, 2024
Google search engine
Homeಪೊಲಿಟಿಕಲ್ಕಾಂಗ್ರೆಸ್ ಗೆ ಮತ ಹಾಕಿ: ಲೇಖಕ ಕೆ.ಪಿ.ನಟರಾಜ್

ಕಾಂಗ್ರೆಸ್ ಗೆ ಮತ ಹಾಕಿ: ಲೇಖಕ ಕೆ.ಪಿ.ನಟರಾಜ್

ತುರುವೇಕೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕುಂದಿಸುವ, ಮತೀಯ, ಜಾತಿಯವಾದಿ ಶಕ್ತಿಗಳ ಬಗೆಗೆ ಜಿಲ್ಲೆಯ ಮತದಾರ ಎಚ್ಚರಿಕೆಯಿಂದ ಇದ್ದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬೆಲೆ ಕೊಟ್ಟು ದೇಶದ ಎಲ್ಲಾ ನಾಗರಿಕರ ಒಳಿತಿಗೆ ದುಡಿಯುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಲೇಖಕ ಡಾ.ಕೆ.ಪಿ ನಟರಾಜ್ ಮತದಾರರಲ್ಲಿ ಮನವಿ ಮಾಡಿಕೊಂಡರು.

ಪಟ್ಟಣದ ಕನ್ನಡ ಭವನದಲ್ಲಿ ತುಮಕೂರು ಜಾಗೃತ ಮತದಾರರ ವೇದಿಕೆ ಮತ್ತು ಎದ್ದೇಳು ಕರ್ನಾಟಕ ವತಿಯಿಂದ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆಯ ಹೊಸ್ತಿಲಿನಲ್ಲಿರುವ ಮತದಾರ ಯಾರಿಗೆ ಮತ ಕೊಡಬೇಕು ಎಂಬ ಗೊಂದಲದಲ್ಲಿದ್ದಾನೆ.

ಈ ಸನ್ನಿವೇಶವನ್ನು ಕುರುಕ್ಷೇತ್ರ ಯುದ್ಧ ನಡೆಯುವ ವೇಳೆ ಕೇಡಿನ ಪಕ್ಷಪಾತಿಯಾಗಿರುವ ರಕ್ತ ಸಂಬಂಧಿಕರು ಕೌರವನ ಜೊತೆಗಿದ್ದಾರೆ.ಇವರಲ್ಲಿ ಯಾರನ್ನು ಕೊಲ್ಲಬೇಕು, ಯಾರನ್ನು ಬಿಡಬೇಕು ಅನ್ನುವ ಗೊಂದಲ ಅರ್ಜುನನ್ನು ದ್ವಂದ್ವ ಆವರಿಸಿದ್ದನ್ನು ಕೃಷ್ಣ ಭಗವದ್ಗೀತೆ ಬೋಧಿಸಿ ಪರಿಹರಿಸಿದ.

ಇದೇ ಸನ್ನಿವೇಶ ಪ್ರಸ್ತುತ ಮತದಾರರ ಮುಂದಿದೆ. ಮತದಾರನಿಗೆ ಕೇಡಾವುದು, ಒಳಿತಾವುದು ಅನ್ನುವ ಕೃಷ್ಣನ ವಿವೇಕ ಜ್ಞಾನ ಬರಬೇಕಿದೆ ಎಂದರು.

ಚುನಾವಣೆಯಲ್ಲಿ ಹಣ, ಜಾತಿ ಆಮಿಷಕ್ಕೆ, ಮತೀಯ
ಶಕ್ತಿಗಳಿಗೆ ಬಲಿಯಾಗದೆ ಯಾವ ವ್ಯಕ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿದೆ, ವಿರೋಧಿಯಾಗಿದೆ ಅನ್ನುವ ತಾರತಮ್ಯ ಜ್ಞಾನವನ್ನು ಗುರುತಿಸಿ ಕೊಳ್ಳಬೇಕಾಗುತ್ತದೆ.ಇಲ್ಲವಾದಲ್ಲಿ ಮತ್ತೊಂದು ಗುಲಾಮಗಿರಿ ಶೋಷಕ ವ್ಯವಸ್ಥೆಗೆ ಮತದಾರ ಸಿಕ್ಕಿಕೊಳ್ಳಬೇಕಾಗುತ್ತದೆ ಎಂದು‌ ಎಚ್ಚರಿಸಿದರು.

ಕಳೆದ ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಆಯ್ಕೆಯಾಗುವಾಗ ಇಡೀ ದೇಶದೊಳಗೆ ಹೊಸ ಪ್ರಭುತ್ವ ವ್ಯವಸ್ಥೆಯ ನಿರೀಕ್ಷೆ ಇತ್ತು. ಆದರೆ ಅವರ ಆಡಳಿತ ಪ್ರಜಾಪ್ರಭುತ್ವ ಕಡೆಗಣಿಸಿ ಯಾವ ಬಗೆಯ ಆಡಳಿತ ನೀಡಿತು, ಸಮಸ್ತ ನಾಗರೀಕರ, ಮಹಿಳೆ, ದಲಿತರ ಶೋಷಣೆ ಮಾಡಿತು. ಮಿಗಿಲಾಗಿ

ಸಂವಿಧಾನ ಬದಲಾಯಿಸುವ ಸಾರ್ವಜನಿಕ ಹೇಳಿಕೆ ಗಳು ಜೀವ ವಿರೋಧಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುವ ವ್ಯವಸ್ಥೆಯೊಂದು ಎದುರಾಗಿದೆ ಎಂದರು.

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರವರು ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತಂದು ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಯಿತು.

ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜನ ಲೋಕಪಾಲ್ ಇದ್ದು ಇಲ್ಲದಂತಾಗಿದೆ ಎಂದು ಟೀಕಿಸಿದರು.

ನಾವು ಕಾಂಗ್ರೆಸ್ ಗೆ ಏಕೆ ಮತ ಹಾಕಬೇಕೆಂದರೆ ಕಾಂಗ್ರೆಸ್ ಪಕ್ಷ ಹೊಂದಿರುವ ಇತಿಹಾಸ ಚರಿತ್ರೆ ಚಾರಿತ್ಯ ಇವುಗಳನ್ನು ಆಧರಿಸಿ ಹೇಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ರಾಹುಲ್ ಗಾಂಧಿಯವರು ಒಡೆದ ಮನಸ್ಸುಗಳ ಮರು ಕಟ್ಟಲು ಇಡೀ ದೇಶದಾದ್ಯಂತ ಭಾರತ್ ಜೋಡ ಯಾತ್ರೆ ಮಾಡಿದವರು ಎಂದರು.

ಈ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ ಎಚ್ ವಿ ರಂಗಸ್ವಾಮಿ , ನಟರಾಜಪ್ಪ ಯರಗುಂಟೆ
ಇನ್ನಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?