Thursday, March 12, 2026
Google search engine
Home Blog Page 43

BJP ಗೆ 40 ಕೊಡಿ, ಕಾಂಗ್ರೆಸ್ ಗೆ ಅಧಿಕಾರ ಕೊಡಿ: ರಾಹುಲ್ ಗಾಂಧಿ

ತುರುವೇಕೆರೆ: ರಾಜ್ಯ ಬಿಜೆಪಿಗೆ 40ರ ನಂಬರ್‍ ಮೇಲೆ ಬಹಳ ಪ್ರೀತಿ ಇದ್ದು, ಅವರಿಗೆ ಈ ಬಾರಿ ಕೇವಲ 40 ಸೀಟುಗಳನ್ನು ನೀಡಿ. ಭ್ರಷ್ಟಾಚಾರ ಹಣದಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬರದಂತೆ ಮಾಡಲು ರಾಜ್ಯದ ಜನತೆ ಕಾಂಗೆಸ್‍ಗೆ 150 ಸ್ಥಾನ ನೀಡಿ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡರು.

ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಪರ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಮಹಿಳೆಯಿಗೆ ಉಚಿತವಾಗಿ ಬಸ್ ಸೌಲಭ್ಯ ನೀಡಲಾಗುವುದು. ಪ್ರತಿಯೊಬ್ಬ ಮಹಿಳೆಯರ ಖಾತೆಗೆ 2 ಸಾವಿರ ಹಣ ಜಮೆ ಮಾಡುವುದು, ಯುವಕರಿಗೆ ಯುವ ನಿಧಿ ಸೇರಿದಂತೆ 5 ಭರವಸೆಗಳನ್ನು ಈಡೇರಿಸುವ ಆಸ್ಥೆ ತೋರಿದರು.

ಮೇ10 ರಂದು ನಡೆಯುವ ಚುನಾವಣೆ ಯಾವುದೋ ವ್ಯಕ್ತಿಗಾಗಿ ಅಥವಾ ನರೇಂದ್ರ ಮೋದಿಗಾಗಿ ನಡೆಯುವ ಚುನಾವಣೆಯಲ್ಲ. ಅದು ಈ ರಾಜ್ಯದ ಸಮಸ್ತ ಯುವಕರ, ಹೆಣ್ಣು ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.

ಕಳೆದ ಬಾರಿ ರಾಜ್ಯದ ಜನತೆ ಬಿಜೆಪಿಗೆ ವೋಟ್ ಕೊಟ್ಟಿಲ್ಲ ಆದರೂ ಅವರು ನಮ್ಮ ಶಾಸಕರುಗಳಿಗೆ ದುಡ್ಡುಕೊಟ್ಟು ಅವರನ್ನು ಖರೀದಿ ಮಾಡಿ, ಲೋಕ ತಂತ್ರವನ್ನು ಹಾಳು ಮಾಡಿ ಸರ್ಕಾರ ಮಾಡಿದರು ಎಂದು ದೂರಿದರು.

ಈಗಿನ ಸರ್ಕಾರ ಕೆಲಸ ಶಿಕ್ಷಣ, ಆರೋಗ್ಯ ಮತ್ತು ರಸ್ತೆ ನಿರ್ಮಾಣ ಮಾಡುವುದರಲ್ಲಿ ಹಣವನ್ನು ತೊಡಗಿಸಬೇಕಿತ್ತು ಆದರೆ ಇಂತಹ ಕೆಲಸಗಳಿಗೆ ಹಣ ಹಾಕಲಿಲ್ಲ ಬದಲಾಗಿ, ರೈತರು, ಕೂಲಿಕಾರ್ಮಿಕರು, ಬಡವರ ಜೇಬಿನಿಂದ ಅವರ ಹಣವನ್ನು ಕಸಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಗುತ್ತಿಗೆದಾರ ಸಂಘದವರು ಕಾಮಗಾರಿ ಗಳಿಗೆ 40 ಪರ್ಸೆಂಟ್ ಲಂಚ ಕೇಳುತ್ತಿದ್ದಾ ರೆಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರೂ ಪ್ರಧಾನಿಗಳಿಂದ ಯಾವುದೇ ಉತ್ತರವಿಲ್ಲವೆಂದು ಚೇಡಿಸಿದರು.

ಪೊಲೀಸ್, ಪೊಫೆಸರ್, ಎಂಜಿನಿಯರ್, ಸಹಕಾರ ಸಂಘಗಗಳ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಿದೆ. ಬಿಜೆಪಿ ಶಾಸಕರೊಬ್ಬರೇ ಹೇಳುವಂತೆ ಎರಡುವರೆ ಸಾವಿರ ಕೋಟಿ ಹಣ ಕೊಟ್ಟು ಸಿ.ಎಂ ಆಗಿದ್ದಾರೆ. ರಾಜ್ಯದ ಪ್ರತಿಯೊಬ್ಬ ಮಗುವಿಗೂ ಈ ವಿಚಾರ ಗೊತ್ತಿದೆ ಅಂದ ಮೇಲೆ ಪ್ರಧಾನ ಮಂತ್ರಿಗೆ ಗೊತ್ತಿಲ್ಲದೆ ಇರುತ್ತದೆಯೇ ಎಂದು ಪ್ರಶ್ನಿಸಿದರು.

ನಾನು ಪ್ರಧಾನ ಮಂತ್ರಿಗಳನ್ನು ಕೇಳ ಬಯಸುತ್ತೇನೆ ಇಷ್ಟೆಲ್ಲಾ ಅನ್ಯಾಯ ಆಗುತಿದ್ದರೂ ನೀವು ಇಂತಹ ಲೂಟಿ ನಿಲ್ಲಿಸಲು ಏನು ಪ್ರಯತ್ನ ಮಾಡಿದ್ದೀರಾ? ಉತ್ತರಿಸಿ ಎಂದರು.

ನೀವು ಕರ್ನಾಟಕಕ್ಕೆ ಬಂದು ವೋಟ್ ಕೇಳುವುದಕ್ಕೆ ಮುಂಚೆ ಈ ದೇಶದ ಪ್ರಧಾನಿಗಳಾದ ನೀವು ರಾಜ್ಯದ ಭ್ರಷ್ಟಾಚಾರ ನಿಲ್ಲಿಸಲು ಏನು ಮಾಡಿದ್ದೀರಿ ಅಂತ ಜನರಿಗೆ ಹೇಳಿ ಎಂದು ಪ್ರಧಾನಿ ಅವರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ವರಿಷ್ಟರು, ನಾಯಕರು ಕರ್ನಾಟಕಕ್ಕೆ ಬಂದಾಗ ಇಲ್ಲಿನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಏನೇನು ಕೊಡುಗೆ ನೀಡಿದ್ದಾರೆ ಎಂದು ಮಾತನಾಡುತ್ತೇವೆ. ಆದರೆ ಬಿಜೆಪಿಯ ಕೇಂದ್ರ ನಾಯಕರು ಇಲ್ಲಿಗೆ ಬಂದಾಗ ತಮ್ಮದೇ ಪಕ್ಷದ ಮುಖ್ಯ ಮಂತ್ರಿ ಹೆಸರೇಳಲ್ಲ ಕೊನೆ ಪಕ್ಷ ಬಿ.ಎಸ್.ಯಡಿಯೂರಪ್ಪ ಸಾಧನೆಯನ್ನೂ ಹೇಳಲ್ಲ. ನೀವು ಕೇವಲ ಪ್ರಧಾನಿಗಳ ಬಗ್ಗೆ ಮಾತ್ರ ಭಾಷಣ ಬಿಗಿತಿರಿ ಎಂದು ತಿರುಗೇಟು ನೀಡಿದರು.

ಆ ಎಲ್ಲಾ ಹಣವನ್ನು ಕಾಂಗ್ರೆಸ್ ಮರಳಿ ನಿಮ್ಮ ಕಿಸೆಗೆ ತುಂಬಿಸುವ ಕೆಲಸ ಮಾಡುತ್ತದೆ. ಬಿಜೆಪಿ ಸರ್ಕಾರ ಒಂದು ಕಡೆ ಭ್ರಷ್ಟಾಚಾರ ಮಾಡಿ, ಇನ್ನೊಂಡು ಕಡೆ ಬೆಲೆ ಏರಿಕೆ ಮಾಡಿದರು. ಪ್ರಧಾನಿಗಳು ಸ್ನೇಹಿತರಿಗೆ ಸಹಾಯ ಮಾಡುವುದ ಕ್ಕೋಸ್ಕರ ಇಡೀ ದೇಶದಲ್ಲಿ ಬೆಲೆ ಏರಿಕೆ ಮಾಡಿದರೆಂದು ಪರೋಕ್ಷವಾಗಿ ಅದಾನಿ ಕುರಿತು ಹೇಳಿದರು.

ಸೇರಿದ್ದ ಜನಸ್ತೋಮ

ಬಿಜೆಪಿ ಸರ್ಕಾರ ಶಾಲಾ ಕಾಲೇಕು, ಯುನಿವರ್ಸಿಟಿಗಳನ್ನು ಖಾಸಗೀಕರಣ ಮಾಡಿದೆ. ನರೇಂದ್ರಮೋದಿ ನೋಟ್ ಬ್ಯಾನ್ ಮಾಡಿ, ಜಿಎಸ್ಟಿ ಹೆಚ್ಚಳ ಮಾಡಿದ್ದರಿಂದ ಈ ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದರು.

ಇದ್ದಕ್ಕೂ ಮೊದಲು ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದು ಪಟ್ಟಣದ ಜಿಜೆಸಿ ಕ್ರೀಡಾಂಗಣದಲ್ಲಿ ಇಳಿದು ಅಲ್ಲಿಂದ ವೇದಿಕೆ ಕಾರ್ಯಕ್ರಮದ ವರೆಗೆ ವಾಹನದಲ್ಲಿ ತೆರಳಿದರು.

ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ಸರಿಯಾಗಿ ಅಲ್ಲಾ ಕೂಗಿದರಿಂದ ಸು 3 ನಿಮಿಷ ಭಾಷಣ ನಿಲ್ಲಿಸಿ ಮೌನವಾದರು.

ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು ಬಿ.ಎಂ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಬದಲಾಯಿಸುತ್ತೇವೆ ಎಂದವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಸ್ ರಾಜ್ಯದಲ್ಲಿ 113 ಸ್ಥಾನಗಳೂ ಬರೋದಿಲ್ಲ ಹಾಗಾಗಿ ಜೆಡಿಎಸ್ಗೆ ಮತ ಹಾಕ ಬೇಡಿ. ಈ ಬಾರಿ ನನಗೆ ಮತನೀಡಿ ತಾಲ್ಲೂಕಿನ ಅಭಿವೃದ್ದಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‍, ಮುಖಂಡರುಗಳಾದ ರಾಯಸಂದ್ರ ರವಿಕುಮಾರ್, ಎನ್‍.ಆರ್‍.ಜಯರಾಮ್, ಗೀತಾರಾಜಣ್ಣ, ಬಿ.ಎಸ್‍.ವಂಸತ್‍ ಕುಮಾರ್, ಶ್ರೀಕಂಠೇಗೌಡ, ಗೋಣಿತುಮಕೂರು ಲಕ್ಷ್ಮೀಕಾಂತ್, ನಾಗೇಶ್‍, ಪ್ರಸನ್ನಕುಮಾರ್, ಜೋಗಿಪಾಳ್ಯ ಶಿವರಾಜ್‍, ಶ್ರೀನಿವಾಸ್‍,ಶಶಿಶೇಖರ್‍ ಇನ್ನಿತರರು ಉಪಸ್ಥಿತರಿದ್ದರು.

ಬಿಸಿಲಿನ ನಂತರದ ಮಳೆ

0

ಡಾ. ರಜನಿ ಎಂ


ಆಹಾ ಮನುಜನೇ ..
ನೀನು ಈ ರೀತಿ
ಭೂಮಿ ತಣ್ಣಗಾಗುವಂತೆ ಮಳೆ
ಸುರಿಸಬಲ್ಲೆಯಾ?

ಫಿಲಂ ಶೂಟಿಂಗ್ ಗೆ
ಒಂದರಿಯಲ್ಲಿ ಮಳೆ
ಸುರಿಸಿದಂತಲ್ಲ….
ಮೋಡಕ್ಕೆ ಬೀಜ
ಬಿತ್ತಿದಂತಲ್ಲ…

ತಾನೇ ತಾನಾಗಿ
ಅದ್ಯಾವಾಗ ಆವಿಯಾಗಿ
ಮಡುಗಟ್ಟಿ …
ಒಟ್ಟಿಗೆ ಮಾತಾಡಿಕೊಂಡು

ಮಿಂಚಿನ ಫ್ಲ್ಯಾಶ್ ಅನ್ಯೂ
ಗುಡುಗಿನ ಕ್ಲಾಪ್ ಮಾನ್ ಅನ್ನೂ
ಕಾಮನ ಬಿಲ್ಲಿನ ಬಣ್ಣಗಳ ಓಕುಳಿಯನ್ನೂ
ಟಿಪ್ ಟಿಪ್ …

ಭೂಮಿಗೇ
ಏರ್ ಕೂಲರ್ ಹಾಕಿದ ಹಾಗೆ
ಮಲಗಿದ್ದವರಿಗೆ
ಗುಡುಗು ಮಿಂಚು ನೋಡಿ
ಮತ್ತೆ ಪ್ರಕೃತಿಯ ಚಕ್ರಕ್ಕೆ ಬೆರಗಾಗುವ ಹಾಗೆ.

ಮಕ್ಕಳು ಬಾಗಿಲಿಗೆ
ಬಂದು ನೋಡಿ
ಅಂಗಳದಲ್ಲಿ ನೆನೆದ ಹಾಗೆ..

ನಾಯಿ ನಾಲಿಗೆ ಒಳಕ್ಕೆ ಹಾಕಿ
ಎತ್ತು ಮಲಗಿ ಮೂಗಿನ ಹೊಳ್ಳೆ
ಚಿಕ್ಕ ಮಾಡಿದ ಹಾಗೆ
ಕೋಗಿಲೆ ಕುಹೂ ಕುಹೂ
ಕೂಗಿದ ಹಾಗೆ

ಭರಣಿ ಮಳೆ
ಧರಣಿ ಬೆಳೆ ಎಂದು
ಮಾತಾಡಿದ ರೈತನ ಹಾಗೆ

ಬಟ್ಟೆ, ಸಂಡಿಗೆ
ಹಪ್ಪಳ ಒಳಗೆ
ತರಲು ಓಡಿದ ಒಡತಿಯ ಹಾಗೆ

ಚಿಗುರೆಲೆಯ
ಮನೆ ಮಾಡಿನ ಧೂಳು
ತೊಳೆದ ಹಾಗೆ..

ಉದುರಿದ ಹೊಂಗೆ ಹೊವಿನ
ಕಾದ ಮಣ್ಣಿನ ವಾಸನೆ
ಅಡರಿದ ಹಾಗೆ

ವರ್ಷ ಜಾಸ್ತಿ
ಆಯಿತು ಎನ್ನದೆ
ಮುಗುಳ್ನಕ್ಕು ..
ತಬ್ಬಿದ ಹೆಂಡತಿಯ ಹಾಗೆ…

ಬೇಸಿಗೆ ಮಾಯವಾಗುವ
ಮೊದಲ ಮಳೆಯತ್ತ
ಬೆರಗಾಗದೆ…

ಕವಿತೆ; ಬಿಸಿಲಿನ ನಂತರ ಮಳೆ

0

ಬಿಸಿಲಿನ ನಂತರದ ಮಳೆ


ಆಹಾ ಮನುಜನೇ ..
ನೀನು ಈ ರೀತಿ
ಭೂಮಿ ತಣ್ಣಗಾಗುವಂತೆ ಮಳೆ
ಸುರಿಸಬಲ್ಲೆಯಾ?

ಫಿಲಂ ಶೂಟಿಂಗ್ ಗೆ
ಒಂದರಿಯಲ್ಲಿ ಮಳೆ
ಸುರಿಸಿದಂತಲ್ಲ….
ಮೋಡಕ್ಕೆ ಬೀಜ
ಬಿತ್ತಿದಂತಲ್ಲ…

ತಾನೇ ತಾನಾಗಿ
ಅದ್ಯಾವಾಗ ಆವಿಯಾಗಿ
ಮಡುಗಟ್ಟಿ …
ಒಟ್ಟಿಗೆ ಮಾತಾಡಿಕೊಂಡು

ಮಿಂಚಿನ ಫ್ಲ್ಯಾಶ್ ಅನ್ಯೂ
ಗುಡುಗಿನ ಕ್ಲಾಪ್ ಮಾನ್ ಅನ್ನೂ
ಕಾಮನ ಬಿಲ್ಲಿನ ಬಣ್ಣಗಳ ಓಕುಳಿಯನ್ನೂ
ಟಿಪ್ ಟಿಪ್ …

ಭೂಮಿಗೇ
ಏರ್ ಕೂಲರ್ ಹಾಕಿದ ಹಾಗೆ
ಮಲಗಿದ್ದವರಿಗೆ
ಗುಡುಗು ಮಿಂಚು ನೋಡಿ
ಮತ್ತೆ ಪ್ರಕೃತಿಯ ಚಕ್ರಕ್ಕೆ ಬೆರಗಾಗುವ ಹಾಗೆ.

ಮಕ್ಕಳು ಬಾಗಿಲಿಗೆ
ಬಂದು ನೋಡಿ
ಅಂಗಳದಲ್ಲಿ ನೆನೆದ ಹಾಗೆ..

ನಾಯಿ ನಾಲಿಗೆ ಒಳಕ್ಕೆ ಹಾಕಿ
ಎತ್ತು ಮಲಗಿ ಮೂಗಿನ ಹೊಳ್ಳೆ
ಚಿಕ್ಕ ಮಾಡಿದ ಹಾಗೆ
ಕೋಗಿಲೆ ಕುಹೂ ಕುಹೂ
ಕೂಗಿದ ಹಾಗೆ

ಭರಣಿ ಮಳೆ
ಧರಣಿ ಬೆಳೆ ಎಂದು
ಮಾತಾಡಿದ ರೈತನ ಹಾಗೆ

ಬಟ್ಟೆ, ಸಂಡಿಗೆ
ಹಪ್ಪಳ ಒಳಗೆ
ತರಲು ಓಡಿದ ಒಡತಿಯ ಹಾಗೆ

ಚಿಗುರೆಲೆಯ
ಮನೆ ಮಾಡಿನ ಧೂಳು
ತೊಳೆದ ಹಾಗೆ..

ಉದುರಿದ ಹೊಂಗೆ ಹೊವಿನ
ಕಾದ ಮಣ್ಣಿನ ವಾಸನೆ
ಅಡರಿದ ಹಾಗೆ

ವರ್ಷ ಜಾಸ್ತಿ
ಆಯಿತು ಎನ್ನದೆ
ಮುಗುಳ್ನಕ್ಕು ..
ತಬ್ಬಿದ ಹೆಂಡತಿಯ ಹಾಗೆ…

ಬೇಸಿಗೆ ಮಾಯವಾಗುವ
ಮೊದಲ ಮಳೆಯತ್ತ
ಬೆರಗಾಗದೆ…

ಡಾ. ರಜನಿ

ಸಿಡಿಲಿಗೆ 4 ಮಕ್ಕಳ ಸಾವು

ಮಾವಿನ ತೋಟದಲ್ಲಿ ಆಟವಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಮಕ್ಕಳು ಸಾವಿಗೀಡಾದ ಹೃದಯವಿದ್ರಾವಕ ಘಟನೆ ಜಾರ್ಖಂಡ್ ರಾಜ್ಯದ ಬಾಬೂಟೂಲಾ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಾಲ್ಕು ಮಕ್ಕಳು ರಜೆಯ ಕಾರಣ ಮಾವಿನ ಮರದ ತೋಟದಲ್ಲಿ ಆಟವಾಡುತ್ತಿದ್ದರು. ಮಳೆ ಬಂದ ಮರದಡಿ ರಕ್ಷಣೆ ಪಡೆಯಲು ಹೋಗಿದ್ದಾಗ ಸಿಡಿಲು ಬಡಿದಿದೆ.

ಗಾಯ ಲೆಕ್ಕಿಸದೇ ಪ್ರಚಾರ ಆರಂಭಿಸಿದ ಪರಮೇಶ್ವರ್

ತಲೆಗೆ ಬ್ಯಾಂಡಿಜ್ ಹಾಕಿಕೊಂಡು ಮತ್ತೆ ಪ್ರಚಾರಕ್ಕಿಳಿದ ಡಾ.ಜಿ.ಪರಮೇಶ್ವರ್
ಕೊರಟಗೆರೆಯಲ್ಲಿ ನಾಳೆ ಸಿದ್ದರಾಮಯ್ಯ  ಚುನಾವಣಾ ಪ್ರಚಾರ:

ತುಮಕೂರು: ಶುಕ್ರವಾರದಂದು ಪ್ರಚಾರದ ವೇಳೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಚಿಕಿತ್ಸೆ ಬಳಿಕ ಮತ್ತೆ ಕೊರಟಗೆರೆ ಇಂದಿನಿಂದ(ಭಾನುವಾರದಿಂದ) ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.

ತಲೆಗೆ ಬ್ಯಾಂಡಿಜ್ ಹಾಕಿದ್ದು, ಟೋಪಿ ಧರಿಸಿಕೊಂಡು ಪ್ರಚಾರಕ್ಕೆ ಧುಮಕಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆ೧ರಂದು ಭಾಗವಹಿಸಲಿರುವ ಕೊರಟಗೆರೆ ರಾಜೀವ್ ಭವನದ ಸಮಾವೇಶದ ವೇದಿಕೆ ಪರಿಶೀಲನೆ ಮಾಡಿದರು.

ಇಲ್ಲಿ ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಆದ ಸಿದ್ಧರಾಮಯ್ಯ ನವರು ಪ್ರಚಾರ ಸಭೆಯಲ್ಲಿ ನಡೆಸಲಿದ್ದಾರೆ.


ಹಳ್ಳಿಗಳಲ್ಲಿ ಮತ ಪ್ರಚಾರ:
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ ಹೋಬಳಿಯ ಬೈರನಹಳ್ಳಿ ಕ್ರಾಸ್‌ನಿಂದಲೇ ಇಂದು ಮತ್ತೆ ಮತ ಪ್ರಚಾರ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ, ಕಲ್ಲೆಸತದ ಘಟನೆಯ ಬಗ್ಗೆ ಬೇಸರ ವ್ಯಕ್ಪಡಿಸಿ, ಜನತೆ ಆರ್ಶೀವಾದದ ರಕ್ಷಣೆ ಇರುವ ತನಕ ಯಾವುದಕ್ಕೂ ಅಂಜುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ನಂಬಿಕೆ ಇದೆ. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು. ಇದು ಚುನಾವಣಾ ಸಮಯ. ಶಾಂತಿಯಿಂದ ವರ್ತಿಸಿ. ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಮತ ನೀಡುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಿ ಎಂದು ಕರೆ ನೀಡಿದರು.


ನನಗೆ ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಅದರ ಅವಶ್ಯಕತೆ ನನಗೆ ಇಲ್ಲಾ. ೩೫ ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದೆ ರಾಜಕಾರಣ ಮಾಡಿದ್ದೇನೆ. ನಾನು ತೆರೆದ ಪುಸ್ತಕ. ಬೇಕಾದರೆ ಓದಿಕೊಳ್ಳಿ ಎಂದು ವಿರೋಧ ಪಕ್ಷಗಳ ಕೆಲವು ನಾಯಕರ ಹೇಳಿಕೆಗೆ ಪರಮೇಶ್ವರ್ ತಿರುಗೆಟು ನೀಡಿದರು.

ನಂತರ ರಾಯವಾರ- ಕಳ್ಳಿಪಾಳ್ಯ, ರೆಡ್ಡಿಹಳ್ಳಿ ಗ್ರಾಮದಲ್ಲಿ ಅತ್ಯಂತ ನಿರೀಕ್ಷಿತ ಜನಬೆಂಬಲ ವ್ಯಕ್ತವಾದರೆ, ಬೈಚಾಪುರ ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಭಾರೀ ಜನಬೆಂಬಲದೊಂದಿಗೆ ಪರಮೇಶ್ವರ ಅವರು ಮತಯಾಚನೆ ಮಾಡಿದರು.


ಬೈರನಹಳ್ಳಿಯಂದ ಚಿಕ್ಕೇನಹಳ್ಳಿ ತನಕ ೧೦ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ಪರಮೇಶ್ವರ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲಿದೆ ಎಂದರು.

ಪಕ್ಷಕ್ಕೆ ಸೇರ್ಪಡೆ:
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಳ್ಳಿಪಾಳ್ಯ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆಯಲ್ಲಿ ವಿಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಮುಖಂಡರು ಸೇರ್ಪಡೆಯಾದರು. ಬೈಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಮುಖಂಡ ಹಾಗೂ ನಿವೃತ್ತ ಶಿಕ್ಷಕರಾದ ರಾಮಕೃಷ್ಣಯ್ಯ ನವರು ಜೆಡಿಎಸ್ ಪಕ್ಷ ತೊರೆದು ಡಾ ಜಿ ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ವೇಳೆ ಆರ್ ವೆಂಕಟಾಪುರದ ಗ್ರಾಮದ ಬಿಜೆಪಿ ಮುಖಂಡ ಹನುಮಂತರಾಯಪ್ಪ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರಿದರೆ,ಸಿ.ಎನ್.ದುರ್ಗ ಹೋಬಳಿ ಗಟ್ಲಹಳ್ಳಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕರಿಯಣ್ಣ ಅವರನ್ನೂ ಕಾಂಗ್ರೆಸ್ಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ರಾಯಣ್ಣ ಪ್ರತಿಮೆ: ಸುರೇಶಗೌಡರ ಭರವಸೆ

0

ಶಕ್ತಿಸೌಧದಲ್ಲಿ ನಡೆದ ಕುರುಬರ ಬೃಹತ್ ಸಮಾವೇಶ: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ: ಸಿದ್ದರಾಮಯ್ಯಗೆ ಆಹ್ವಾನ ನೀಡುವೆ ಎಂದ ಸುರೇಶಗೌಡರು: ಸುರೇಶಗೌಡರ ಕೊಡುಗೆ ನೆನೆದು ಭಾವುಕರರಾದ ಕುರುಬ ಮುಖಂಡರು

ತುಮಕೂರು: ಹೆಬ್ಬೂರಿನಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಗೂ ಕುರುಬರ ಭವನ ನಿರ್ಮಿಸುವುದಾಗಿ ಮಾಜಿ ಶಾಸಕ ಬಿ.ಸುರೇಶಗೌಡರು ಭರವಸೆ ನೀಡಿದರು.
ನಾಗವಲ್ಲಿ ಸಮೀಪದ ಶಕ್ತಿ ಸೌಧದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕುರುಬರ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾನು ಶಾಸಕನಾಗಿ ಅಯ್ಕೆಯಾದ ಕೂಡಲೇ ರಾಯಣ್ಣ ಪ್ರತಿಮೆ ಮಾಡುವೆ. ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಆಹ್ವಾನಿಸುತ್ತೇನೆ. ಈ ಇಬ್ಬರೂ ಕುರುಬ ಸಮುದಾಯದ ಕಣ್ಮಣಿಗಳು ಎಂದು ಬಣ್ಣಿಸಿದರು.

ಕ್ಷೇತ್ರದಲ್ಲಿ ಕುರುಬರು ಮೊದಲಿನಿಂದಲೂ ನನ್ನ ಬೆಂಬಲಿಸಿದ್ದೀರಿ. ಕುರುಬರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿದ್ದೇನೆ. ಕುರುಬರನ್ನು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಸ್ಥಾನ, ಎಪಿಎಂ ಸಿ ಅಧ್ಯಕ್ಷ ಸ್ಥಾನ, ನಿರ್ದೇಶಕ ಸ್ಥಾನ, ಪಿ ಎಲ್ ಡಿ ಬ್ಯಾಂಕ್ ಸದಸ್ಯ, ಲ್ಯಾಂಡ್ ಟ್ರಿಬ್ಯೂನ್ ಸದಸ್ಯ ಹಾಗೂ ಮೂವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಾಡಿರುವೆ. ಕುರುಬ ಸಮುದಾಯದ ಅಭಿವೃದ್ಧಿ ಹಾಗೂ ರಾಜಕೀಯ ಸಮಾನ ಸ್ಥಾನಮಾನ ನೀಡಿದ್ದೇನೆ ಎಂದು ಹೇಳಿದರು.
ಕುರುಬ ಸಮುದಾಯ ಇರುವ ಕಡೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ. ಶಾಲೆಗಳನ್ನು ತೆರೆದು ಈ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವೆ ಎಂದು ಭರವಸೆ ನೀಡಿದರು.


ಸ್ಥಾನಮಾನಕೊಟ್ಟ ನಾಯಕ

ನಿಡುವಳಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ ಮಾತ‌ನಾಡಿ, ತಾಲ್ಲೂಕಿನಲ್ಲಿ ಕುರುಬ ಸಮುದಾಯವನ್ನು ಗುರುತಿಸಿದ ಮೊದಲ ಶಾಸಕರು ಸುರೇಶ್ ಗೌಡರು. ಸಮಾಜಕ್ಕೆ ರಾಜಕೀಯ ಸ್ಥಾನಮಾನ ಗಳಿಸಿಕೊಟ್ಟರು. ಸಮುದಾಯದ ಕಷ್ಟ ಸುಖ ಆಲಿಸಿದರು. ಕುರುಬ ಸಮುದಾಯ ಹೆಚ್ಚಿರುವ ಕಡೆ ರಸ್ತೆ, ನೀರು, ಮೂಲ ಸೌಕರ್ಯ ಒದಗಿಸಿಕೊಟ್ಟರು. ಸುರೇಶಗೌಡರು ಗೆಲ್ಲುವಲ್ಲಿ ಸಮುದಾಯದ ಯುವಕರು ಕೆಲಸ ಮಾಡಬೇಕು. ಎಲ್ಲ ಕಡೆ ತೆರಳಿ ಪ್ರಚಾರ ನಡೆಸಬೇಕು ಎಂದು ಹೇಳಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಸುರೇಶಗೌಡರನ್ನು ಸಮುದಾಯ ಬೆಂಬಲಿಸಬೇಕು. ಸುರೇಶಗೌಡರು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗ್ರಾಮಾಂತರದ ಸರ್ವೋತ್ತೋಮುಖ ಅಭಿವೃದ್ಧಿಗೆ ಸುರೇಶಗೌಡರ ಗೆಲುವು ಅತಿಮುಖ್ಯವಾಗಿದೆ. ಸಮುದಾಯ ಅವರ ಪರ ನಿಲ್ಲಬೇಕು ಎಂದರು.

ಇಲ್ಲಿ ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ…

0

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗ ತೊಡಗಿದೆ.

ಕಾಂಗ್ರೆಸ್ ನಿಂದ‌ ಷಣ್ಮುಖಪ್ಪ ಅವರಿಗೆ ಟಿಕೆಟ್ ನೀಡಿದ ಬಳಿಕ ಆ ಪಕ್ಷದಲ್ಲಿ ಅಳಿದುಳಿದ ನಾಯಕರು, ಕಾರ್ಯಕರ್ತರು ಸಹ ಅಲುಗಾಡ ತೊಡಗಿದ್ದಾರೆ.

ಗ್ರಾಮಾಂತರ ಶಾಸಕ ಗೌರಿಶಂಕರ್ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದ ಎಚ್.ನಿಂಗಪ್ಪ ಅವರು ಏಕಾಏಕಿ ಕಾಂಗ್ರೆಸ್ ಸೇರಿದ್ದರು. ಗ್ರಾಮಾಂತರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಗ್ಯಾರಂಟಿ ಅವರಿಗೆ ಇತ್ತು.‌ ಟಿಕೆಟ್ ನೀಡದ ಕಾರಣ ಅವರಿಗೆ ನಿರಾಶೆಯಾಗಿದೆ.

ಕಾಂಗ್ರೆಸ್ ನ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ತಮ್ಮ ಹಿಂಬಾಲಕರು, ಅಭಿಮಾನಿಗಳು, ಸಂಬಂಧಿಕರ ಜತೆ ಸಂಪರ್ಕ ಇಟ್ಟುಕೊಂಡಿರುವ ಅವರು ಚುನಾವಣೆಯಲ್ಲಿ ಯಾವ ದಾಳ ಉರುಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ನಿಂಗಪ್ಪ ಅವರಿಗೆ ಟಿಕೆಟ್ ಕೊಡದ ಕಾರಣ ಕಲ್ಲಹಳ್ಳಿ ದೇವರಾಜ್ ಸಹಿತ ಕಾಂಗ್ರೆಸ್ ನ ಹಲವು ಮೂಲ ಮುಖಂಡರು ಅಸಮಾಧಾನದಿಂದ ಕುದಿಯುತ್ತಿದ್ದಾರೆ.

ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸ್ಥಿತಿಯ ಬಗ್ಗೆ ಆ ಪಕ್ಷದ ಕಾರ್ಯಕರ್ತರೇ ನಗಾಡುವಂತೆ ಆಗಿದೆ.

ಕಾಂಗ್ರೆಸ್ ನ ಈ ಪರಿಸ್ಥಿತಿಯ ಲಾಭ ಬಿಜೆಪಿಗೆ ಆಗ‌ತೊಡಗಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ಬಹುತೇಕ ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸುವ ಮಾತುಗಳನ್ನಾಡುತ್ತಿರು ವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವಂತೆ ತಮ್ಮ ಆಪ್ತರಿಗೆ ಕರೆ ಮಾಡಿ ಹೇಳುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಇದು ಬಿಜೆಪಿಗೆ ನೆರವಾಗಲಿದೆ ಎಂಬುದು ಯಾರೂ ಬಿಡಿಸಿ ಹೇಳಬೇಕಾಗಿಲ್ಲ.

ಕಾಂಗ್ರೆಸ್ ನ ಗೂಳೂರು ವಿಜಯಕುಮಾರ್ ಸಹ ಈಗಾಗಲೇ ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್ ಉರುಳಿಸಿದ ರಾಜಕೀಯ ದಾಳ ಆ ಪಕ್ಷದ ಮೂಲ ಬೇರುಗಳನ್ನೇ ಕತ್ತರಿಸಿದೆ. ಅದರ ಲಾಭ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

JDS ನ ಪ್ರಮುಖ ಮುಖಂಡರಾದ ಬೆಳ್ಳಿ ಲೋಕೇಶ್, ವೈ.ಟಿ.ನಾಗರಾಜ್, ಎಚ್.ಟಿ.ಕೃಷ್ಣಪ್ಪ ಅವರು ಸಹ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಇನ್ನೂ ಕೆಲ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್, ಜೆಡಿಎಸ್ ನವರ ಮನೆ ಖಾಲಿ ಮಾಡುವವರ ಸಂಖ್ಯೆ ಹೆಚ್ಚತೊಡಗಿದ್ದು, ಬಿಜೆಪಿ ಜೋಳಿಗೆ ತುಂಬುವಂತೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೇವೇಗೌಡರಿಗೆ ಸವಾಲು ಹಾಕಿದ ಬೊಮ್ಮಾಯಿ

ಹುಬ್ಬಳ್ಳಿ: ಮೈತ್ರಿಗೆ ರಾಷ್ಟ್ರೀಯ ಪಕ್ಷಗಳ ಮುಖಂಡರು ಬಂದಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈತ್ರಿಗೆ ಬಂದವರ ಹೆಸರನ್ನು ಬಹಿರಂಗಪಡಿಸಲಿ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಂದಿನ ಮುಖ್ಯಮಂತ್ರಿ ನಾನೇ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿರುವುದು ನನ್ನ ಅದೃಷ್ಟ. ನನ್ನ ಮೇಲೆ ನಂಬಿಕೆ ಇಟ್ಟು ಆ ಮಾತುಗಳನ್ನಾಡಿದ್ದಾರೆ. ಎಲ್ಲರನ್ನು ಸರಿದೂಗಿಸಿಕೊಂಡು ಹೋಗುವಂತೆ ಅಮಿತ್ ಶಾ ಸಹ ತಿಳಿಸಿದ್ದರು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದರು.

ಸೋಮಣ್ಣ ಉಮೇದುವಾರಿಕೆ ರದ್ದು?

ಚಾಮರಾಜನಗರ: ಇಲ್ಲಿನ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ವಸತಿ ಸಚಿವ ವಿ.ಸೋಮಣ್ಣ ಅವರ ಉಮೇದುವಾರಿಕೆ ರದ್ದು ಆಗುವ ಸಂಭವವಿದೆ.

ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ( ಆಲೂರು ಮಲ್ಲು) ಅವರಿಗೆ ಕರೆ ಮಾಡಿ ಸ್ಪರ್ಧೆಯಿಂದ ಹಿಂತೆಗೆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡುವುದಾಗಿ ಆಮಿಷ ಒಡ್ಡಿದ್ದರು. ಈ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು.

ಇದರ ಆಧಾರದಲ್ಲಿ ಕೇಂದ್ರ ಚುನಾವಣಾ ಆಯೋಗ ದ ಸೂಚನೆ ಮೇರೆಗೆ ಸೋಮಣ್ಣ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123 ರ ಅಡಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು. ಈ ಆಧಾರದಲ್ಲಿ ಸೋಮಣ್ಣ ಉಮೇದುವಾರಿಕೆ ರದ್ದುಪಡಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಈ ಆರೋಪ ಸಾಬೀತಾದರೆ ಒಂದು ವರ್ಷ ಜೈಲು ಅಥವಾ ದಂಡದ ಶಿಕ್ಷೆ ಇದೆ.

ಕುಮಾರಸ್ವಾಮಿ ಏಟು ತಿಂದಿಲ್ವಲ್ಲ: ಪರಂ‌ ಗರಂ

0

ಯಾರೋ ದುಷ್ಕರ್ಮಿಗಳು ನನ್ನ ಮೇಲೆ ಕಲ್ಲು ಎಸೆದು ಗಾಯಗೊಳ್ಳುವಂತೆ ಮಾಡಿದ್ದಾರೆ. ಇದು ಸೇರಿದಂತೆ ಮೂರು ಬಾರಿ ನನ್ನ ಮೇಲೆ ಈ ರೀತಿಯ ಘಟನೆಗಳು ನಡೆದಿವೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೇಳಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

ತುಮಕೂರಿನ ಸಿದ್ಧಾರ್ಥನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಲು ಹೂವಿನಲ್ಲಿ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಅದು ತುಂಬಾ ದಪ್ಪ ಕಲ್ಲು. ನನ್ನ ತಲೆಯ ಮೇಲೆ ಬಿದ್ದವೇಗವೇ ಯಾರೋ ದುಷ್ಕರ್ಮಿಗಳು ಎಸೆದಿರಬಹುದು ಎಂದು ಗೊತ್ತಾಗುತ್ತದೆ ಎಂದರು.

ಏಪ್ರಿಲ್ 28ರಂದು ಸಂಜೆ 4.30 ರ ಸುಮಾರಿಗೆ ಭೈರೇನಹಳ್ಳಿಗೆ ಪ್ರಚಾರಕ್ಕೆ ಬಂದೆ‌. ಅಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನನ್ನ ಎತ್ತುಕೋಬೇಡಿ ಅಂತಾ ಹೇಳುತ್ತಿದ್ದೆ. ಅಷ್ಟರಲ್ಲಿ ಜೆಸಿಬಿಯಲ್ಲಿ ಹೂವು, ಕ್ರೇನ್ ನ ಹಾರ ಹಾಕೋಕೆ ಪ್ರಾರಂಭಿಸಿದರು. ಇದೇ ವೇಳೆ ಸಡನ್ ಆಗಿ ನನ್ನ ತಲೆಗೆ ಏನೋ ಬಿದ್ದಂತಾಯಿತು. ನೋಡಿದರೆ ಕಲ್ಲು. ಕಲ್ಲು ಬಿದ್ದ ರಭಸಕ್ಕೆ ರಕ್ತವೂ ಬರೋಕೆ ಶುರುವಾಯಿತು. ನಾನು ಕೂಗಿಕೊಂಡೆ. ಆಗ ನನ್ನ ರಕ್ತವನ್ನ‌ ಗಮನಿಸಿ ಕೆಳಗೆ ಇಳಿಸಿದರು ಎಂದು ಘಟನೆಯ ವಿವರಗಳನ್ನು ಮಾಧ್ಯಮಗಳ ಮುಂದಿಟ್ಟರು.

ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಗಮ್ ಹಾಕಿದ್ದಾರೆ. ಸ್ವಲ್ಪ ನೋವಿದೆ, ವೈದ್ಯರು ತಿಳಿಸಿದರೆ ನಾಳೆಯೇ ಪ್ರಚಾರಕ್ಕೆ ಹೋಗುತ್ತೇನೆ. ಪರಮೇಶ್ವರ್ ಗೆ ಕಲ್ಲೆಸೆತ ಡ್ರಾಮ ಅನ್ನೋ ಕುಮಾರಸ್ವಾಮಿ ಹೇಳಿಕೆ ಅವರಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು, ನನಗೆ ಅತ್ತು‌ ಕರೆದು ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಏಕೆಂದರೆ ಏಟು ತಿಂದವನು ನಾನು ಅಲ್ವಾ, ಅವರಲ್ಲಾ ಎಂದು ತಿರುಗೇಟ್ಪ್ರ ನೀಡಿದರು.

ನಾನು 35 ವರ್ಷದಿಂದಲೂ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ‌ ಅಂದುಕೊಂಡಿದ್ದೇನೆ. ನಿನ್ನೆಯ ಘಟನೆ ನನಗೆ ಆತಂಕ ತರಿಸಿದೆ. ಈ ವಿಷಯದ ಕುರಿತು ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ. ತನಿಖೆ ಮಾಡುವಂತೆ ಹೇಳಿದ್ದೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನನ್ನ ಆರೋಗ್ಯ ವಿಚಾರಿಸಿದ್ದಾರೆ. ನನಗೆ ಭದ್ರತೆ ಅವಶ್ಯಕತೆ ಇಲ್ಲ ಅಂದುಕೊಂಡಿದ್ದೆ. ಆದರೆ ಈ ಘಟನೆ ನಡೆದ ಮೇಲೆ ಭದ್ರತೆ ಬೇಕು ಅನಿಸುತ್ತಿದೆ ಎಂದು ಹೇಳಿದರು.