ಚುನಾವಣಾ ಅಕ್ರಮದ ಕಾರಣ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಹೈಕೋರ್ಟ್ ಅನರ್ಹಗೊಳಿಸಿದೆ.
ಕಳೆದ ಚುನಾವಣೆಯಲ್ಲಿ ಮಕ್ಕಳಿಗೆ ನಕಲಿ ಬಾಂಡ್ ವಿತರಿಸಿ ಗೆಲುವು ಸಾಧಿಸಿದ್ದರು ಎಂದು ಮಾಜಿ ಶಾಸಕ, ಕಡಿಮೆ ಅಂತರದಿಂದ ಸೋಲು ಕಂಡಿದ್ದ ಸುರೇಶಗೌಡ ಅವರು ಹೈಕೋರ್ಟ್ ಗೆ ದೂರು ಸಲ್ಲಿಸಿದ್ದರು. ಐದು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಇಂದಿನ ಫಾಸ್ಟ್ ಲೈಫ್ ನಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ತಿನ್ನುವವರೇ ಹೆಚ್ಚು.. ಆಗಂತ ಎಲ್ಲಾ ಆಹಾರಗಳು ಕೆಟ್ಟವಾಗಿರುವುದಿಲ್ಲ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ “ಇದಂ ಹಿತಂ”. ಅದೇ ರೀತಿ ಈ ಚಾಕಲೇಟ್ ಕೂಡ ಯಾರಿಗೆ ಇಷ್ಟ ಇಲ್ಲ ನೀವೇ ಹೇಳಿ..? ಚಿಕ್ಕ ಮಕ್ಕಳಿಂದ ವಯಸ್ಸಾದ ಮುದುಕ ರವರೆಗೂ ಇಷ್ಟಪಟ್ಟು ತಿನ್ನುವ ಒಂದು ತಿನಿಸು. ಆದರೆ ಸಣ್ಣ ಮಕ್ಕಳ ತಾಯಂದಿರ ಪಾಲಿನ ವಿಲನ್. ಮಕ್ಕಳ ಹಲ್ಲು ಆಳಾಗುತ್ತೆ ಎಂಬುದು ತಾಯಂದಿರ ಕಳಕಳಿ.
ಸರಿ ಡಾರ್ಕ್ ಚಾಕೊಲೇಟ್ ನಿಂದಾಗುವ ಪ್ರಯೋಜನಗಳ ಮತ್ತು ಪೌಷ್ಟಿಕ ಅಂಶಗಳ ಬಗ್ಗೆ ತಿಳಿಯೋಣ ಬನ್ನಿ. ಡಾರ್ಕ್ ಚಾಕೊಲೇಟ್ ತಿನ್ನಲು ಸ್ವಲ್ಪ ಕಹಿ, ಸಕ್ಕರೆ ಅಂಶ ಕಡಿಮೆ ಇರುವ ಡಾರ್ಕ್ ಚಾಕಲೇಟ್ ಆಂಟಿಆಕ್ಸಿಡೆಂಟ್‌ಗಳ ಆಗರ ಡಾರ್ಕ್ ಚಾಕೊಲೇಟ್ ಹೃದಯಕ್ಕೆ ಒಳ್ಳೆಯದು, ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸುವುದರಿಂದ ಹೃದ್ರೋಗದ ಹಲವಾರು ಪ್ರಮುಖ ಅಪಾಯಕಾರಿ ಅಂಶಗಳನ್ನು ಸುಧಾರಿಸಬಹುದು. ಕೋಕೋ ಪೌಡರ್ ಪುರುಷರಲ್ಲಿ ಆಕ್ಸಿಡೀಕೃತ ಕಂಡು ಬರುವ LDL (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು HDL ಕೊಲೆಸ್ಟ್ರಾಲ್ ಅನ್ನು ಸಹ ಹೆಚ್ಚಿಸುತ್ತದೆ.
ಡಾರ್ಕ್ ಚಾಕೊಲೇಟ್ ನಲ್ಲಿರುವ ಅತ್ಯಧಿಕ ಮಟ್ಟದ ಫ್ಲಾವನಾಲ್ ಮೆದುಳಿನ ಅಂಗಾಂಶಗಳಿಗೆ ರಕ್ತ ಸಂಚಾರ ಸುಗಮಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ.ಡಾರ್ಕ್ ಚಾಕೊಲೇಟ್‌ನಲ್ಲಿರುವ (DARK CHOCOLATE) ಫ್ಲಾವನಾಲ್‌ಗಳು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುವಂತೆ ಅಪಧಮನಿಗಳ ಒಳಪದರವಾದ ಎಂಡೋಥೀಲಿಯಂ ಅನ್ನು ಉತ್ತೇಜಿಸುತ್ತದೆ . ಇದು ವಿಶ್ರಾಂತಿಗಾಗಿ ಅಪಧಮನಿಗಳಿಗೆ ಸಂಕೇತಗಳನ್ನು ಕಳುಹಿಸುವುದರಿಂದ ರಕ್ತದ ಹರಿವಿಗೆ ಉಂಟಾಗುವ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ . ಅನೇಕ ನಿಯಂತ್ರಿತ ಅಧ್ಯಯನಗಳು ಕೋಕೋ ಮತ್ತು ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿವೆ.
ಓದುವಾಗ ಡಾರ್ಕ್ ಚಾಕೊಲೇಟ್ ತಿನ್ನುವುದಕ್ಕೆ ಸಲಹೆ ಮಾಡುತ್ತಾರೆ. ಇದು ಮೆಮೊರಿ ಮತ್ತು ಮೆದುಳಿನ ಕಾರ್ಯಕ್ಕೆ ಒಳ್ಳೆಯದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
ಸೌಂದರ್ಯ ಪ್ರಿಯರಿಗೂ ಇದು ಒಳ್ಳೆಯದು ಡಾರ್ಕ್ ಚಾಕೊಲೇಟ್ ಚರ್ಮಕ್ಕೆ ಒಳ್ಳೆಯದು ಎನ್ನುತ್ತಾರೆ ಸಂಶೋಧಕರು. ಚರ್ಮಕ್ಕೆ ಉತ್ತಮ ರಕ್ತದ ಹರಿವನ್ನು ಉಂಟುಮಾಡುತ್ತದೆ. ಚರ್ಮದ ಕಾಳಜಿ ಮಾಡುವವರಿಗೆ ಇದು ಉತ್ತಮ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಪ್ಲಾವನಾಲ್ ಚರ್ಮದ ಸಾಂದ್ರತೆ ಹೆಚ್ಚಿಸಿ ಹೆಚ್ಚು ತೇವಾಂಶದಿಂದ ಕೂಡಿರುವಂತೆ ನೊಡಿಕೊಳ್ಳುತ್ತದೆ. ಅಲ್ಲದೆ ಇದರಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ನಿಮ್ಮ ಚರ್ಮಕ್ಕೆ ಉತ್ತಮ. ಫ್ಲಾವನಾಲ್‌ಗಳು ಸೂರ್ಯನ ಹಾನಿಯಿಂದ ಉಂಟಾಗುವ ಸನ್ ಬರ್ನ್ ಮತ್ತು ಸನ್ ಟ್ಯಾನ್ ಗಳಿಂದ ರಕ್ಷಿಸುತ್ತದೆ, ಚರ್ಮಕ್ಕೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಲ್ಲಿರುವ zinc, iron ,ಸತು , ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ ಕೂದಲು ಉದುರುವಿಕೆಯನ್ನು ತಡೆಯುತ್ತವೆ. ಚಾಕಲೇಟ್ ನ್ನು ಕರಗಿಸಿ ಮುಖಕ್ಕೆ ಲೇಪಿಸಿದರೆ ಪಿಗ್ಮೆಂಟೆಶನ್ ತಡೆಯುತ್ತದೆ ಹಾಗೂ ಕಪ್ಪು ಕಲೆ ನಿವಾರಣೆ ಮಾಡುತ್ತದೆ.
Gym ನಲ್ಲಿ ಸಲಹೆ ಮಾಡುತ್ತಾರೆ : ಡಾರ್ಕ್ ಚಾಕೊಲೇಟ್ ತೂಕ ನಷ್ಟಕ್ಕೆ ಒಳ್ಳೆಯದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಡಾರ್ಕ್ ಚಾಕಲೇಟ್ ನಿಯಮಿತವಾಗಿ ತಿಂದರೆ ಬಾಡಿ ಮಾಸ್ ಇಂಡೆಕ್ಸ್ (BMI) ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ concentration ಹೆಚ್ಚಿಸುತ್ತದೆ. ಇದನ್ನು ತಿಂದಾಗ ಮೆದುಳಿನಲ್ಲಿ happy hormones ಬಿಡುಗಡೆ ಮಾಡುತ್ತದೆ ಒಂದು ರೀತಿಯ ಆಹ್ಲಾದಕರ ಮನಸ್ಥಿತಿ ಉಂಟಾಗುತ್ತದೆ.
ಹೆಚ್ಚಿನ ಕೋಕೋ ಅಂಶಹೊಂದಿರುವ ಡಾರ್ಕ್ ಚಾಕೊಲೇಟ್ ಅನ್ನು ಖರೀದಿಸಿದರೆ, ಅದು ಸಾಕಷ್ಟು ಪೌಷ್ಟಿಕವಾಗಿದೆ. ಇದು ಯೋಗ್ಯ ಪ್ರಮಾಣದ digstable ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಉತ್ತಮ ಖನಿಜಗಳಿಂದ ಕೂಡಿರುತ್ತದೆ. ಶೇ 70-85% ಕೋಕೋ ಹೊಂದಿರುವ ಡಾರ್ಕ್ ಚಾಕಲೇಟ್ ಫೈಬರ್, ಕಬ್ಬಿಣ, ಮೆಗ್ನೀಸಿಯಮ್ , ತಾಮ್ರ , ಮ್ಯಾಂಗನೀಸ್, ಇದರ ಜೊತೆಗೆ, ಇದು ಸಾಕಷ್ಟು ಪೊಟ್ಯಾಸಿಯಮ್, ರಂಜಕ, ಸತು ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ. antioxidants ಉತ್ತಮ ಮೂಲವಾಗಿದೆ ತಾಜಾ ಹಾಗೂ ಕಚ್ಚಾ ಸಂಸ್ಕರಿಸದ ಕೋಕೋ ಬೀನ್ಸ್ ಪರೀಕ್ಷೆಗೆ ಒಳಗಾದ ಅತಿ ಹೆಚ್ಚು ಸ್ಕೋರಿಂಗ್ ಆಹಾರಗಳಲ್ಲಿ ಒಂದಾಗಿದೆ. ಡಾರ್ಕ್ ಚಾಕೊಲೇಟ್ ಸಾವಯವ ಸಂಯುಕ್ತಗಳಿಂದ ತುಂಬಿರುತ್ತದೆ. ಅದು ಜೈವಿಕವಾಗಿ ಸಕ್ರಿಯವಾಗಿದೆ. ಇವುಗಳಲ್ಲಿ ಪಾಲಿಫಿನಾಲ್‌ಗಳು, ಫ್ಲಾವನಾಲ್‌ಗಳು ಮತ್ತು ಕ್ಯಾಟೆಚಿನ್ ಅಂಶ ಗಳು ಸೇರಿವೆ. ಚಾಕಲೇಟ್ ತಯಾರಿಸಲು ಬಳಸುವ ಕೋಕೋ ಹಣ್ಣಿನಲ್ಲಿ ಇತರೆ ಹಣ್ಣು ಮತ್ತು ತರಕಾರಿಗಳಲ್ಲಿರುವ antioxidantsಗಳಿಗಿಂತ ಹೆಚ್ಚು ಹೊಂದಿದೆ.ಜೊತೆಗೆ ಪಾಲಿಫಿನಾಲ್ಗಳು,ಫ್ಲಾವನಾಲ್ಗಳನ್ನು ಹೊಂದಿವೆ ಎಂಬುದು ಈ ಕುರಿತ ಸಂಶೋಧನೆಗಳು ತಿಳಿಸುತ್ತವೆ.
ಕೋಕೋ ವಿಶೇಷವಾಗಿ ಹೃದ್ರೋಗದಿಂದ ರಕ್ಷಿಸುತ್ತದೆ ಅಷ್ಟೇ ಅಲ್ಲ ಮಕ್ಕಳಾಗದೆ ಇರುವವರಿಗೂ ಕೂಡ ಇದು ಉತ್ತಮ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಪ್ರತಿದಿನ ಸಾಕಷ್ಟು ಎಷ್ಟು ಬೇಕೋ ಅಷ್ಟು ಚಾಕೊಲೇಟ್ ಸೇವಿಸಬೇಕು ಎಂದು ಇದರ ಅರ್ಥವಲ್ಲ. ಬಹುಶಃ ರಾತ್ರಿಯ ಊಟದ ನಂತರ ಒಂದು ಚೌಕ ವನ್ನು ತಿನ್ನಬಹುದು. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಚಾಕೊಲೇಟ್(Chocolate) ಪೌಷ್ಟಿಕವಲ್ಲ ಎಂಬುದನ್ನು ಕೂಡ ಗಮನಿಸಿ. 70% ಅಥವಾ ಹೆಚ್ಚಿನ ಕೋಕೋ ಅಂಶಹೊಂದಿರುವ ಡಾರ್ಕ್ ಚಾಕೊಲೇಟ್ಗಳು ಖರೀದಿಸಿ. ಮತ್ತಿನ್ನೆಕೆ ತಡ ಬನ್ನಿ ಒಂದು ಬೈಟ್ ತಿನ್ನೊಣ.
ತುಮಕೂರು; ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದರೂ ಬಿಜೆಪಿಯಲ್ಲಿ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆಯಾಗಿಲ್ಲ.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ.ಸುರೇಶಗೌಡ, ತಿಪಟೂರಿಗೆ ಬಿ.ಸಿ.ನಾಗೇಶ್, ಚಿಕ್ಕನಾಯನಕಹಳ್ಳಿಗೆ ಜೆ.ಸಿ.ಮಾಧುಸ್ವಾಮಿ ಅವರೇ ಅಭ್ಯರ್ಥಿಗಳಾಗುವುದು ಖಚಿತ. ಈ ಕ್ಷೇತ್ರಗಳಲ್ಲಿ ಗೊಂದಲವೇ ಇಲ್ಲವಾಗಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶಗೌಡರು ಭರ್ಜರಿ ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣಾ ರಣಕಹಳೆ ಊದಿದ್ದಾರೆ.
ಸುರೇಶಗೌಡರ ಪರವಾಗಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಾದಿಯಾಗಿ ಹಲವು ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ಸುರೇಶಗೌಡರನ್ನೇ ಗೆಲ್ಲಿಸುವಂತೆ ಮನವಿ ಮಾಡಿ ಹೋಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರೇಶಗೌಡರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಹಿರಂಗವಾಗಿ ವ್ಯಕ್ಯಪಡಿಸಿ ಹೋಗಿದ್ದಾರೆ.
ಗ್ರಾಮಾಂತರ ಕ್ಷೇತ್ರದಲ್ಲಿ ಸಮಾವೇಶಗಳಿಗೆ ಜನಸಾಗರವೇ ಹರಿದುಬಂದಿದೆ. ಆದರೆ ಇದೇ ಸ್ಥಿತಿ ಉಳಿದ ಕ್ಷೇತ್ರಗಳಲ್ಲಿ ಇಲ್ಲವಾಗಿದೆ.
ಬಿ.ಸಿ.ನಾಗೇಶ್ ಮತ್ತು ಜೆ.ಸಿ.ಮಾಧುಸ್ವಾಮಿ ಸಚಿವರು. ಆದರೆ ಇವರಿಬ್ಬರು ಭರ್ಜರಿ ಪ್ರಚಾರಕ್ಕೆ ಮುನ್ನುಡಿ ಬರೆದಿಲ್ಲ. ಬದಲಿಗೆ, ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ಕೆಲಸ ಮಾಡಿದ್ದಾರೆ.
ತಿಪಟೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಯಾವುದೇ ಭರ್ಜರಿ ಸಮಾವೇಶಗಳು ನಡೆದಿಲ್ಲ. ಉನ್ನತ ನಾಯಕರು ಬಂದು ಹೋಗಿಲ್ಲ.
ಇನ್ನೂ ತುಮಕೂರು ನಗರದಲ್ಲಿ ಶಾಸಕ ಜ್ಯೋತಿ ಗಣೇಶ್ ಪ್ರಚಾರದಲ್ಲಿ ಮುಂದು ಇದ್ದಾರೆ. ಇಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಮತ ಜೋಳಿಗೆ ವಿಭಿನ್ನ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗಾಗಿ ಟಿಕೆಟ್ ವಿಷಯದಲ್ಲಿ ಗೊಂದಲ ಕಾಣಿಸಿಕೊಂಡಿದೆ.
Bjp ಗ್ರಾಮಾಂತರದ ಶಕ್ತಿ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಸಿದ್ದಗಂಗಾ ಶ್ರೀಗಳು
ಶಿವಣ್ಣ ಅವರ ಬೆಂಬಲಿಗರು ಶಿವಣ್ಣ ಅವರಿಗೇನೆ ಟಿಕೆಟ್ ಎನ್ನುತ್ತಿದ್ದಾರೆ. ಆದರೆ ಯಾರು ಏನೇ ಹೇಳಿಕೊಂಡರೂ ನನಗೆ ಪಕ್ಷ ಟಿಕೆಟ್ ನೀಡಲಿದೆ. ಕಳೆದ ಸಲವೂ ಹೀಗೆ ಹೇಳುತಿರಲ್ಲವೇ ಎಂದು ಜ್ಯೋತಿ ಗಣೇಶ್ ಮಾರ್ಮಿಕವಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರ ಕಾರಣದಿಂದ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಇನ್ನೂ, ಕುಣಿಗಲ್ ಕ್ಷೇತ್ರಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಡಿ.ಕೃಷ್ಣಕುಮಾರ್ ನಡುವೆ ಸ್ಪರ್ಧೆ ಇದೆ. ಟಿಕೆಟ್ ಸಿಗುವ ಭರವಸೆಯೊಂದಿಗೇನೆ ಎಸ್ ಪಿಎಂ ಬಿಜೆಪಿಗೆ ಬಂದಿದ್ದಾರೆ. ಅವರೀಗ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಡಬೇಕಾಗಿದೆ. ಆದರೆ ಬಿಜೆಪಿಯ ಹೈಕಮಾಂಡ್ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.
ಶಿರಾ ಕ್ಷೇತ್ರದಲ್ಲಿ ಶಾಸಕ ರಾಜೇಶ್ ಗೌಡ ಅವರಿಗೇನೆ ಟಿಕೆಟ್ ನೀಡಬಹುದು. ಆದರೆ ಅವರ ಬಗ್ಗೆಯೂ ಊಹಪೋಹಗಳಿವೆ.
ಮಧುಗಿರಿ, ಪಾವಗಡ, ಗುಬ್ಬಿ, ಕೊರಟಗೆರೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೇನೋ ಹೆಚ್ಚಿದ್ದಾರೆ. ಆದರೆ ಗೆಲ್ಲುವ ಅಭ್ಯರ್ಥಿಗಳಾ ಎನ್ನುವುದೇ ಬಿಜೆಪಿಯ ಪ್ರಶ್ನೆಯಾಗಿದೆ. ಅಭ್ಯರ್ಥಿಗಳ ಭಾರವೇ ಆ ಪಕ್ಷಕ್ಕೆ ಬರಬಹುದಾದ ಮತಗಳಿಗೆ ಕನ್ನ ಹಾಕಬಹುದೇ ಎಂಬ ಲೆಕ್ಕಾಚಾರವೂ ಇದೆ.
ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡರನ್ನು ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸಂಪೂರ್ಣವಾಗಿ ಬೆಂಬಲಿಸಲಿದೆ. ಬಿಜೆಪಿ ನಮಗೆ ಒಳ ಮೀಸಲಾತಿ ಜಾರಿಗೊಳಿಸಿದೆ ಎಂದು ಆ ಸಮುದಾಯದ ಹಿರಿಯ ಮುಖಂಡ, ಜಿ.ಪಂ. ಮಾಜಿ ಸದಸ್ಯ ವೈ.ಎಚ್.ಹುಚ್ಚಯ್ಯ ತಿಳಿಸಿದರು.
ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,, ಸುರೇಶಗೌಡರು ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಮಾಡಿದಷ್ಟು ಕೆಲಸವನ್ನು ಬೇರೆ ಯಾರು ಮಾಡಿಲ್ಲ ಎಂದರು. ಕ್ಷೇತ್ರದಲ್ಲಿ ಅವರ ಗೆಲುವು ನಿಶ್ಚಿತ ಎಂದರು.
ತುಮಕೂರು; ರಾಜ್ಯ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದೆ. ಇಂದು ದೆಹಲಿಯಲ್ಲಿ ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಪತ್ರಿಕಾಗೋಷ್ಟಿ ಕರೆದಿದ್ದು, ಚುನಾವಣೆ ಘೋಷಣೆ ಮಾಡಲಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಕೆ ಯಾವಾಗ, ನಾಮಪತ್ರ ಹಿಂದಕ್ಕೆ ಪಡೆಯುವ, ನಾಮಪತ್ರ ಪರಿಶೀಲನೆ , ಮತದಾನ ದಿನಾಂಕಗಳನ್ನು ಘೋಷಣೆ ಮಾಡಲಿದ್ದಾರೆ. ಕಳೆದ ಬಾರಿ ವಿಧಾನ ಸಭಾ ಚುನಾವಣೆ ಮೇ 12 ರಂದು ಮತದಾನ ನಡೆದು ಮೇ 15 ಕ್ಕೆ ಫಲಿತಾಂಶ ಪ್ರಕಟವಾಗಿತ್ತು.
ಮಾಲ್ ಗಳಲ್ಲಿ ತರಕಾರಿ, ಹಣ್ಣುಗಳ ಮೇಲೆ ಸಂಖ್ಯೆಗಳಿರುವ ಸ್ಟಿಕ್ಟರ್ ಅಂಟಿಸಿರುತ್ತಾರಲ್ಲ ಏಕೆ ಗೊತ್ತಾ? ಅಂದರೆ ಈ PLU ಕೋಡ್ ಅಂದ್ರೆ ಅದರ ಬೆಲೆ ಇರಬಹುದು ಎಂದು ಬಹುತೇಕರು ತಿಳಿದುಕೊಂಡಿರುತ್ತೀರಿ. ಆದರೆ ಇದು ಬೆಲೆಯನ್ನು ಹೇಳುವ ಸ್ಟಿಕ್ಕರ್ ಅಲ್ಲ. ಇಂಥ ಹಣ್ಣು, ತರಕಾರಿಗಳನ್ನು ತಿನ್ನಬಹುದಾ? ಮುಂದೆ ಓದಿ
ಹಣ್ಣು ಮತ್ತು ತರಕಾರಿ ಕೊಳ್ಳುವ ಮುನ್ನ ನೊವು ಈ ಕೋಡ್ ಗಮನಿಸಲೇ ಬೇಕು.ನಾವು ಯಾವುದೇ ತರಕಾರಿ ಮತ್ತು ಹಣ್ಣುಗಳನ್ನು ಸೂಪರ್ ಮಾರ್ಕೆಟ್ ಇಂದ ಖರೀದಿಸಿ ಮನೆಗೆ ತಂದ ಕೂಡಲೇ ಅದರ ಮೇಲಿನ ಸ್ಟಿಕ್ಕರ್ ಕಿತ್ತೆಸೆದು ತೊಳೆದು ನೇರವಾಗಿ ಬಳಸುತ್ತೇವೆ. ಆ ಸ್ಟಿಕ್ಕರ್ ಯಾಕೆ ಹಾಕಿದ್ದಾರೆ ಎಂದು ಗಮನಿಸಲು ಕೂಡ ಹೋಗುವುದಿಲ್ಲ. ಅಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸುವ ತಾಳ್ಮೆ, ಸಮಾಧಾನ, ಸಮಯ ಕೂಡ ನಮ್ಮ ಬಳಿ ಇರುವುದಿಲ್ಲ.
ಆ ಸಂಖ್ಯೆಗೆ PLU code ( price look up code ) ಎನ್ನುತ್ತಾರೆ ಏನು ಹಾಗೆಂದರೆ, ಯಾಕೆ ಹಾಕಿದ್ದಾರೆ ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದಾದರೆ, 1990 ರಿಂದ ಈ ಸಂಕೇತಗಳನ್ನು ಬಳಸಲಾಗುತ್ತಿದೆ. ಅಂತರಾಷ್ಟ್ರೀಯ ಉತ್ಪನ್ನಗಳ ಉನ್ನತಿಯ ಫೆಡರೇಶನ್ ( international federation for produce Standards) ಇದನ್ನು ಬಳಸಲು ಸೂಚಿಸಿದೆ.
ಸರಿ ಆ ಸ್ಟಿಕ್ಕರ್ ಮೇಲಿರುವ ಸಂಖ್ಯೆಗಳು ಏನನ್ನು ತಿಳಿಸತ್ತೆ ತಿಳಿದುಕೊಳ್ಳೊಣ ಬನ್ನಿ. ಈ ಸಂಖ್ಯೆಗಳು ಹಣ್ಣು, ತರಕಾರಿಗಳ ಅವುಗಳ ಗಾತ್ರ, ಮತ್ತು ಬೆಳವಣಿಗೆಯ ವಿಧಾನವನ್ನು ತಿಳಿಸುತ್ತವೆ.
5 ಸಂಖ್ಯೆಗಳಿದ್ದರೆ ಮತ್ತು 9 ಪ್ರಾರಂಭ ಸಂಖ್ಯೆಯಾಗಿದ್ದರೆ ಅದು ಸಾವಯವ ಕೃಷಿ ಪದ್ದತಿಯಿಂದ ಬೆಳೆದ ಹಣ್ಣು ಮತ್ತು ತರಕಾರಿ ಆಗಿರುತ್ತದೆ.
ಅದೇ conventionally ಎಂದರೆ ತಳಿಗಳನ್ನು ಅಭಿವೃದ್ಧಿ ಪಡಿಸಿ ಅನುಮತಿಸಿದ ರಾಸಾಯನಿಕಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳ ಮೇಲೆ 5 ಸಂಖ್ಯೆಗಳಿದ್ದರೂ ಅದರ ಪ್ರಾರಂಭ ಸಂಖ್ಯೆ 8 ಆಗಿರುತ್ತದೆ.
4 ಸಂಖ್ಯೆ ಹೊಂದಿದ್ದರೆ ಕ್ರಿಮಿನಾಶಕ ಗಳನ್ನು ಬಳಸಲಾಗಿದೆ ಎಂದರ್ಥ. ಜೊತೆ ಹಣ್ಣಾಗಿಸಲು ಕೂಡ ರಾಸಾಯನಿಕಗಳ ಬಳಕೆಯಾಗಿರುತ್ತದೆ. ಉದಾ : ಒಂದು ತರಕಾರಿಯ ಮೇಲೆ 4020 ಎಂಬ ಸಂಖ್ಯೆ ಇದ್ದರೆ ಅದು ರಾಸಾಯನಿಕ ಬಳಸಿರುವ ಉತ್ಪನ್ನವಾಗಿರುತ್ತದೆ. ಸಾವಯವದ್ದಾದರೆ ಅದೇ ಸಂಖ್ಯೆ 94020 ಆಗಿರುತ್ತದೆ
ಇದೇ 5 ಕ್ಕಿಂತ ಹೆಚ್ಚು ಸಂಖ್ಯೆ ಹೊಂದಿದ್ದಲ್ಲಿ ಅಂತರಾಷ್ಟ್ರೀಯ ಗುಣಮಟ್ಟವಲ್ಲದ ಬೆಳೆ ಎಂದು ಹೇಳಲಾಗುತ್ತದೆ.
ಸಾವಯವ ಹಾಗೂ ಸಾಂಪ್ರದಾಯಿಕ ವಿಧಾನಕ್ಕೆ ವ್ಯತ್ಯಾಸವೆಂದರೆ ಸಾವಯವ ಎಂದರೆ ರಸಾಯನಿಕ ಮುಕ್ತ ಬೆಳವಣಿಗೆ ಆಗಿರುತ್ತದೆ. ಸಾವಯವ ಬೆಳೆಯುವಿಕೆ ವಿಧಾನಕ್ಕೆ ವಿರುದ್ಧವಾಗಿ ಬೆಳೆಯುವುದು ಸಾಂಪ್ರದಾಯಿಕ ಬೆಳೆ. ಅಂದರೆ ಋತುವಿನ ಹೊರಗೆ ( ವರ್ಷದ ಎಲ್ಲಾ ಕಾಲದಲ್ಲೂ ಮಾವಿನ ಹಣ್ಣು ಬೆಳೆಯುವುದು ನಿಸರ್ಗಕ್ಕೆ ವಿರುದ್ಧವಾಗಿ) ಹೆಚ್ಚು ಇಳುವರಿ ಪಡೆಯಲು ಅನುಮತಿಸಿರುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಹೆಚ್ಚಾಗಿ ಬಳಸಿ ಬೆಳೆದಿರುವ ಹಣ್ಣು ಮತ್ತು ತರಕಾರಿಗಳು ಎಂದರ್ಥ, ಅವುಗಳ ತಳಿ ಅಭಿವೃದ್ಧಿ ಮಾಡಿ ಬೆಳೆದ ಬೆಳೆಗಳಾಗಿರುತ್ತವೆ.
ಗ್ರಾಹಕರ ಒತ್ತಾಯದ ಮೇರೆಗೆ ಆಹಾರ ಪದಾರ್ಥಗಳ ಮಾರಾಟದಲ್ಲಿ ಪಾರದರ್ಶಕತೆ ಕಾಪಾಡಿ ಕೊಳ್ಳಲು USDA 2018 ರಿಂದ ಈ ಕೋಡ್ ನ್ನು ಕಡ್ಡಾಯಗೊಳಿಸಿದೆ.
ಜಪಾನಿಸ್ ಚೆರ್ರಿ ಎಂದು ಕರೆಯಲ್ಪಡು ಈ ಹೂವುಗಳನ್ನು 1912 ರಲ್ಲಿ ಅಮೇರಿಕಾ ಮತ್ತು ಜಪಾನ್ ದೇಶದ ಸ್ನೇಹದ ಸಂಕೇತವಾಗಿ ಪ್ರಸ್ತುತಪಡಿಸಿದರು. ಅನಂತರ ಚೆರ್ರಿ ಹೂವುಗಳ ವೀಕ್ಷಣೆಯು ಹರಡಲು ಪ್ರಾರಂಭಿಸಿತು.
ತಮ್ಮ ಅತೀಂದ್ರಿಯ ಗುಲಾಬಿ ಹೂವುಗಳಿಂದಾಗಿ ಚೆರ್ರಿ ಜಪಾನ್‌ನಲ್ಲಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ವಸಂತಕಾಲದಲ್ಲಿ ಬೆಂಗಳೂರು ಕೂಡ ಚೆರ್ರಿ ಹೂಗಳನ್ನು ಹೊತ್ತು ಕಂಗೊಳಿಸುತ್ತಿದೆ. ಒಮ್ಮೆ ನಿಂತು ನೋಡಿ ಆಸ್ವಾದಿಸಿ. ಚೆರ್ರಿ ಹೂಗಳ ವೀಕ್ಷಣೆಗೆ “ಸಕುರ ಹನಾಮಿ” ಹಬ್ಬವಾಗಿದೆ . ಡಾ. ರಜನಿ ಬರೆದಿರುವ ಈ ಕವನ ನಿಮ್ಮ ಹೃದಯಗಳಿಗೆ ಕೂಡ ಹಬ್ಬವಾಗಲೀ.
ಹೂಗಳ ಹಬ್ಬ… ಹೂ ಎಂದರೆ ಯಾರಿಗೆ ಇಷ್ಟವಿಲ್ಲ?
ಅದರಲ್ಲೂ ಒಟ್ಟು ಒಟ್ಟಿಗೇ ಅರಳಿದ ಗುಲಾಬಿ ,ನೀಲಿ ,ಹಳದಿ ತೆಳು ಗುಲಾಬಿ ಹೂಗಳು … ಮರದ ಎಲೆಯೆ ಕಾಣದಂಥ ಹೂಗಳು.
ಯಾವ ಶಕ್ತಿ ನಿನ್ನನ್ನು ಒಟ್ಟಿಗೆ ಅರಳಿಸಿದೆ?
ಎಲೆ ಉದುರಿ ಬರಡಾಗಿದ್ದ ಬಾಳಲ್ಲಿ ಬಣ್ಣ ಬಣ್ಣದ ಹೂಗಳು ಎಂದರೆ ಹುಡುಗಾಟವೇ?
ಕಣ್ಣಿಗೆ ರಸದೂಟ.. ನೋಡದ ಕಣ್ಣುಗಳು ಆಸ್ವಾದಿಸದ ಹೃದಯ ಇದ್ದರೂ …ತಾನೇ ಯಾಕೆ??
ಬೆಳಗ್ಗಿನ ಬಿಸಿಲು ಸಂಜೆಯ ಇಬ್ಬೆಳಗಲ್ಲಿ ಮತ್ತಷ್ಟು ರಂಗೇರಿ …
ಇನ್ನೇನು ಸಾಯುವಾಗೆ ನೋಡಿದರೂ ಸಾವೇ ಮುಂದಕ್ಕೆ ಹೋಗುತ್ತದೆ…
ಆ ದೇವರಿಗೆ ಇಡೀ ಭೂಮಿಗೆ ಬಣ್ಣ ಹಚ್ಚುವ ಉಮೇದು…
ಅರಳಿ ಉದುರಿ ಉದುರಿ ಹೂವಿನ ಹಾಸಿಗೆ…
ಮತ್ತೆ ಈ ದೃಶ್ಯ ಮರೆಯಾಗುವ ಮುನ್ನ..
ಅರಳಿದ ಹೃದಯಗಳು ಚೆರ್ರಿ ಹೂಗಳ ಕೆಳಗೆ
ತನ್ನ ವಿರಹ ಗೀತೆಗೆ ..ವಿರಾಮ ನೀಡಿ
ಹೂ ಮುತ್ತು ಕದಿಯುವಾಗಲೇ ಗಾಳಿ ಬೀಸಿ ಹೂಗಳು ಪ್ರೇಮಿಗಳ ಮೇಲೆ ಉದುರುತಿರೆ…
ಮಾಗಿದ ಮನಸ್ಸು ಮರದ ಕೆಳಗೆ ಚಹ ಕುಡಿಯುತ್ತಾ .. ಒಣಗಿದ ಚೆರ್ರಿ ಹೂ ಅನ್ನು ಕೈಯಲ್ಲಿ ಹಿಡಿದು…