ಡಾ.ಶ್ವೇತಾರಾಣಿ
ಮಾಲ್ ಗಳಲ್ಲಿ ತರಕಾರಿ, ಹಣ್ಣುಗಳ ಮೇಲೆ ಸಂಖ್ಯೆಗಳಿರುವ ಸ್ಟಿಕ್ಟರ್ ಅಂಟಿಸಿರುತ್ತಾರಲ್ಲ ಏಕೆ ಗೊತ್ತಾ? ಅಂದರೆ ಈ PLU ಕೋಡ್ ಅಂದ್ರೆ ಅದರ ಬೆಲೆ ಇರಬಹುದು ಎಂದು ಬಹುತೇಕರು ತಿಳಿದುಕೊಂಡಿರುತ್ತೀರಿ. ಆದರೆ ಇದು ಬೆಲೆಯನ್ನು ಹೇಳುವ ಸ್ಟಿಕ್ಕರ್ ಅಲ್ಲ. ಇಂಥ ಹಣ್ಣು, ತರಕಾರಿಗಳನ್ನು ತಿನ್ನಬಹುದಾ? ಮುಂದೆ ಓದಿ
ಹಣ್ಣು ಮತ್ತು ತರಕಾರಿ ಕೊಳ್ಳುವ ಮುನ್ನ ನೊವು ಈ ಕೋಡ್ ಗಮನಿಸಲೇ ಬೇಕು.ನಾವು ಯಾವುದೇ ತರಕಾರಿ ಮತ್ತು ಹಣ್ಣುಗಳನ್ನು ಸೂಪರ್ ಮಾರ್ಕೆಟ್ ಇಂದ ಖರೀದಿಸಿ ಮನೆಗೆ ತಂದ ಕೂಡಲೇ ಅದರ ಮೇಲಿನ ಸ್ಟಿಕ್ಕರ್ ಕಿತ್ತೆಸೆದು ತೊಳೆದು ನೇರವಾಗಿ ಬಳಸುತ್ತೇವೆ. ಆ ಸ್ಟಿಕ್ಕರ್ ಯಾಕೆ ಹಾಕಿದ್ದಾರೆ ಎಂದು ಗಮನಿಸಲು ಕೂಡ ಹೋಗುವುದಿಲ್ಲ. ಅಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸುವ ತಾಳ್ಮೆ, ಸಮಾಧಾನ, ಸಮಯ ಕೂಡ ನಮ್ಮ ಬಳಿ ಇರುವುದಿಲ್ಲ.
ಆ ಸಂಖ್ಯೆಗೆ PLU code ( price look up code ) ಎನ್ನುತ್ತಾರೆ ಏನು ಹಾಗೆಂದರೆ, ಯಾಕೆ ಹಾಕಿದ್ದಾರೆ ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದಾದರೆ, 1990 ರಿಂದ ಈ ಸಂಕೇತಗಳನ್ನು ಬಳಸಲಾಗುತ್ತಿದೆ. ಅಂತರಾಷ್ಟ್ರೀಯ ಉತ್ಪನ್ನಗಳ ಉನ್ನತಿಯ ಫೆಡರೇಶನ್ ( international federation for produce Standards) ಇದನ್ನು ಬಳಸಲು ಸೂಚಿಸಿದೆ.
ಸರಿ ಆ ಸ್ಟಿಕ್ಕರ್ ಮೇಲಿರುವ ಸಂಖ್ಯೆಗಳು ಏನನ್ನು ತಿಳಿಸತ್ತೆ ತಿಳಿದುಕೊಳ್ಳೊಣ ಬನ್ನಿ. ಈ ಸಂಖ್ಯೆಗಳು ಹಣ್ಣು, ತರಕಾರಿಗಳ ಅವುಗಳ ಗಾತ್ರ, ಮತ್ತು ಬೆಳವಣಿಗೆಯ ವಿಧಾನವನ್ನು ತಿಳಿಸುತ್ತವೆ.
5 ಸಂಖ್ಯೆಗಳಿದ್ದರೆ ಮತ್ತು 9 ಪ್ರಾರಂಭ ಸಂಖ್ಯೆಯಾಗಿದ್ದರೆ ಅದು ಸಾವಯವ ಕೃಷಿ ಪದ್ದತಿಯಿಂದ ಬೆಳೆದ ಹಣ್ಣು ಮತ್ತು ತರಕಾರಿ ಆಗಿರುತ್ತದೆ.
ಅದೇ conventionally ಎಂದರೆ ತಳಿಗಳನ್ನು ಅಭಿವೃದ್ಧಿ ಪಡಿಸಿ ಅನುಮತಿಸಿದ ರಾಸಾಯನಿಕಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳ ಮೇಲೆ 5 ಸಂಖ್ಯೆಗಳಿದ್ದರೂ ಅದರ ಪ್ರಾರಂಭ ಸಂಖ್ಯೆ 8 ಆಗಿರುತ್ತದೆ.
4 ಸಂಖ್ಯೆ ಹೊಂದಿದ್ದರೆ ಕ್ರಿಮಿನಾಶಕ ಗಳನ್ನು ಬಳಸಲಾಗಿದೆ ಎಂದರ್ಥ. ಜೊತೆ ಹಣ್ಣಾಗಿಸಲು ಕೂಡ ರಾಸಾಯನಿಕಗಳ ಬಳಕೆಯಾಗಿರುತ್ತದೆ. ಉದಾ : ಒಂದು ತರಕಾರಿಯ ಮೇಲೆ 4020 ಎಂಬ ಸಂಖ್ಯೆ ಇದ್ದರೆ ಅದು ರಾಸಾಯನಿಕ ಬಳಸಿರುವ ಉತ್ಪನ್ನವಾಗಿರುತ್ತದೆ. ಸಾವಯವದ್ದಾದರೆ ಅದೇ ಸಂಖ್ಯೆ 94020 ಆಗಿರುತ್ತದೆ
ಇದೇ 5 ಕ್ಕಿಂತ ಹೆಚ್ಚು ಸಂಖ್ಯೆ ಹೊಂದಿದ್ದಲ್ಲಿ ಅಂತರಾಷ್ಟ್ರೀಯ ಗುಣಮಟ್ಟವಲ್ಲದ ಬೆಳೆ ಎಂದು ಹೇಳಲಾಗುತ್ತದೆ.
ಸಾವಯವ ಹಾಗೂ ಸಾಂಪ್ರದಾಯಿಕ ವಿಧಾನಕ್ಕೆ ವ್ಯತ್ಯಾಸವೆಂದರೆ
ಸಾವಯವ ಎಂದರೆ ರಸಾಯನಿಕ ಮುಕ್ತ ಬೆಳವಣಿಗೆ ಆಗಿರುತ್ತದೆ. ಸಾವಯವ ಬೆಳೆಯುವಿಕೆ ವಿಧಾನಕ್ಕೆ ವಿರುದ್ಧವಾಗಿ ಬೆಳೆಯುವುದು ಸಾಂಪ್ರದಾಯಿಕ ಬೆಳೆ. ಅಂದರೆ ಋತುವಿನ ಹೊರಗೆ ( ವರ್ಷದ ಎಲ್ಲಾ ಕಾಲದಲ್ಲೂ ಮಾವಿನ ಹಣ್ಣು ಬೆಳೆಯುವುದು ನಿಸರ್ಗಕ್ಕೆ ವಿರುದ್ಧವಾಗಿ) ಹೆಚ್ಚು ಇಳುವರಿ ಪಡೆಯಲು ಅನುಮತಿಸಿರುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಹೆಚ್ಚಾಗಿ ಬಳಸಿ ಬೆಳೆದಿರುವ ಹಣ್ಣು ಮತ್ತು ತರಕಾರಿಗಳು ಎಂದರ್ಥ, ಅವುಗಳ ತಳಿ ಅಭಿವೃದ್ಧಿ ಮಾಡಿ ಬೆಳೆದ ಬೆಳೆಗಳಾಗಿರುತ್ತವೆ.
ಗ್ರಾಹಕರ ಒತ್ತಾಯದ ಮೇರೆಗೆ ಆಹಾರ ಪದಾರ್ಥಗಳ ಮಾರಾಟದಲ್ಲಿ ಪಾರದರ್ಶಕತೆ ಕಾಪಾಡಿ ಕೊಳ್ಳಲು USDA 2018 ರಿಂದ ಈ ಕೋಡ್ ನ್ನು ಕಡ್ಡಾಯಗೊಳಿಸಿದೆ.
ಉಪಯುಕ್ತ ವರದಿ. ಹೀಗೇ ಮುಂದುವರಿಯಲಿ.
ಅಂತರ್ಜಾಲ ಸಂಚಿಕೆಗೆ ಶುಭಾಶಯ.