ಚುನಾವಣಾ ಅಕ್ರಮದ ಕಾರಣ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಹೈಕೋರ್ಟ್ ಅನರ್ಹಗೊಳಿಸಿದೆ.
ಕಳೆದ ಚುನಾವಣೆಯಲ್ಲಿ ಮಕ್ಕಳಿಗೆ ನಕಲಿ ಬಾಂಡ್ ವಿತರಿಸಿ ಗೆಲುವು ಸಾಧಿಸಿದ್ದರು ಎಂದು ಮಾಜಿ ಶಾಸಕ, ಕಡಿಮೆ ಅಂತರದಿಂದ ಸೋಲು ಕಂಡಿದ್ದ ಸುರೇಶಗೌಡ ಅವರು ಹೈಕೋರ್ಟ್ ಗೆ ದೂರು ಸಲ್ಲಿಸಿದ್ದರು. ಐದು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.