Wednesday, December 4, 2024
Google search engine
HomeUncategorizedBJP: ತುಮಕೂರಲ್ಲಿ ಏನು? ಎತ್ತ?

BJP: ತುಮಕೂರಲ್ಲಿ ಏನು? ಎತ್ತ?

ತುಮಕೂರು; ಚುನಾವಣೆ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದರೂ ಬಿಜೆಪಿಯಲ್ಲಿ ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆಯಾಗಿಲ್ಲ.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ.ಸುರೇಶಗೌಡ, ತಿಪಟೂರಿಗೆ ಬಿ.ಸಿ.ನಾಗೇಶ್, ಚಿಕ್ಕನಾಯನಕಹಳ್ಳಿಗೆ ಜೆ.ಸಿ.ಮಾಧುಸ್ವಾಮಿ ಅವರೇ ಅಭ್ಯರ್ಥಿಗಳಾಗುವುದು ಖಚಿತ. ಈ ಕ್ಷೇತ್ರಗಳಲ್ಲಿ ಗೊಂದಲವೇ ಇಲ್ಲವಾಗಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶಗೌಡರು ಭರ್ಜರಿ ಸಮಾವೇಶಗಳನ್ನು ನಡೆಸುವ ಮೂಲಕ ಚುನಾವಣಾ ರಣಕಹಳೆ ಊದಿದ್ದಾರೆ.

ಸುರೇಶಗೌಡರ ಪರವಾಗಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಾದಿಯಾಗಿ ಹಲವು ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ಸುರೇಶಗೌಡರನ್ನೇ ಗೆಲ್ಲಿಸುವಂತೆ ಮನವಿ ಮಾಡಿ ಹೋಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುರೇಶಗೌಡರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಹಿರಂಗವಾಗಿ ವ್ಯಕ್ಯಪಡಿಸಿ ಹೋಗಿದ್ದಾರೆ.

ಗ್ರಾಮಾಂತರ ಕ್ಷೇತ್ರದಲ್ಲಿ ಸಮಾವೇಶಗಳಿಗೆ ಜನಸಾಗರವೇ ಹರಿದುಬಂದಿದೆ. ಆದರೆ ಇದೇ ಸ್ಥಿತಿ ಉಳಿದ ಕ್ಷೇತ್ರಗಳಲ್ಲಿ ಇಲ್ಲವಾಗಿದೆ.

ಬಿ.ಸಿ.ನಾಗೇಶ್ ಮತ್ತು ಜೆ.ಸಿ.ಮಾಧುಸ್ವಾಮಿ ಸಚಿವರು. ಆದರೆ ಇವರಿಬ್ಬರು ಭರ್ಜರಿ ಪ್ರಚಾರಕ್ಕೆ ಮುನ್ನುಡಿ ಬರೆದಿಲ್ಲ. ಬದಲಿಗೆ, ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ಕೆಲಸ ಮಾಡಿದ್ದಾರೆ.

ತಿಪಟೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಯಾವುದೇ ಭರ್ಜರಿ ಸಮಾವೇಶಗಳು ನಡೆದಿಲ್ಲ. ಉ‌ನ್ನತ ನಾಯಕರು ಬಂದು ಹೋಗಿಲ್ಲ.

ಇನ್ನೂ ತುಮಕೂರು ನಗರದಲ್ಲಿ ಶಾಸಕ ಜ್ಯೋತಿ ಗಣೇಶ್ ಪ್ರಚಾರದಲ್ಲಿ ಮುಂದು ಇದ್ದಾರೆ. ಇಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸಹ ಮತ ಜೋಳಿಗೆ ವಿಭಿನ್ನ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಹೀಗಾಗಿ ಟಿಕೆಟ್ ವಿಷಯದಲ್ಲಿ ಗೊಂದಲ ಕಾಣಿಸಿಕೊಂಡಿದೆ.

Bjp ಗ್ರಾಮಾಂತರದ ಶಕ್ತಿ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಸಿದ್ದಗಂಗಾ ಶ್ರೀಗಳು

ಶಿವಣ್ಣ ಅವರ ಬೆಂಬಲಿಗರು ಶಿವಣ್ಣ ಅವರಿಗೇನೆ ಟಿಕೆಟ್ ಎನ್ನುತ್ತಿದ್ದಾರೆ. ಆದರೆ ಯಾರು ಏನೇ ಹೇಳಿಕೊಂಡರೂ ನನಗೆ ಪಕ್ಷ ಟಿಕೆಟ್ ನೀಡಲಿದೆ. ಕಳೆದ ಸಲವೂ ಹೀಗೆ ಹೇಳುತಿರಲ್ಲವೇ ಎಂದು ಜ್ಯೋತಿ ಗಣೇಶ್ ಮಾರ್ಮಿಕವಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರ ಕಾರಣದಿಂದ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ.

ಇನ್ನೂ, ಕುಣಿಗಲ್ ಕ್ಷೇತ್ರಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಡಿ.ಕೃಷ್ಣಕುಮಾರ್ ನಡುವೆ ಸ್ಪರ್ಧೆ ಇದೆ. ಟಿಕೆಟ್ ಸಿಗುವ ಭರವಸೆಯೊಂದಿಗೇನೆ ಎಸ್ ಪಿಎಂ ಬಿಜೆಪಿಗೆ ಬಂದಿದ್ದಾರೆ. ಅವರೀಗ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಡಬೇಕಾಗಿದೆ. ಆದರೆ ಬಿಜೆಪಿಯ ಹೈಕಮಾಂಡ್ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

ಶಿರಾ ಕ್ಷೇತ್ರದಲ್ಲಿ ಶಾಸಕ ರಾಜೇಶ್ ಗೌಡ ಅವರಿಗೇನೆ ಟಿಕೆಟ್ ನೀಡಬಹುದು. ಆದರೆ ಅವರ ಬಗ್ಗೆಯೂ ಊಹಪೋಹಗಳಿವೆ.

ಮಧುಗಿರಿ, ಪಾವಗಡ, ಗುಬ್ಬಿ, ಕೊರಟಗೆರೆ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೇನೋ ಹೆಚ್ಚಿದ್ದಾರೆ. ಆದರೆ ಗೆಲ್ಲುವ ಅಭ್ಯರ್ಥಿಗಳಾ ಎನ್ನುವುದೇ ಬಿಜೆಪಿಯ ಪ್ರಶ್ನೆಯಾಗಿದೆ. ಅಭ್ಯರ್ಥಿಗಳ ಭಾರವೇ ಆ ಪಕ್ಷಕ್ಕೆ ಬರಬಹುದಾದ ಮತಗಳಿಗೆ ಕನ್ನ ಹಾಕಬಹುದೇ ಎಂಬ ಲೆಕ್ಕಾಚಾರವೂ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?