ತುಮಕೂರು: ನಾಡೋಜ ಡಾ. ಬರಗೂರು ಪ್ರತಿಷ್ಠಾನದ ವತಿಯಿಂದ ಫೆಬ್ರವರಿ 15ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರೊ. ಬರಗೂರರು ರಾಮಚಂದ್ರಪ್ಪ ಅವರ ಹುಟ್ಟೂರಿನ ಮನೆಯ ಮಿನಿ ಮ್ಯೂಜಿಯಂ ತೊಟ್ಟಿಲು ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಚಲನಚಿತ್ರ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಸುಂದರರಾಜ್ ಚಲನ ಚಿತ್ರನಟಿ ರೇಖಾ,ಚಲನಚಿತ್ರ ಕಲಾವಿದ ಕುಮಾರ್ ಗೋವಿಂದ್ ಭಾಗವಹಿಸುವರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಸುಂದರರಾಜ ಅರಸು ರವರು ಆಶಯ ನುಡಿಗಳನ್ನಾಡುವರು, ಪ್ರೊ. ಬರಗೂರರು ಹುಟ್ಟಿದ ಮನೆ ಮಿನಿ ಮ್ಯೂಜಿಯಂ ತೊಟ್ಟಿಲು ಕುರಿತು ಸಾಹಿತಿ ಡಾ. ರಾಜಪ್ಪದಳವಾಯಿ ಮಾತನಾಡುವರು ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಡಾ. ಶಮಿತಾ ಮಲ್ನಾಡ್‍ರವರಿಂದ ಕನ್ನಡ ಗೀತಾಗಾಯನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರತಿಷ್ಠಾನದ ಪದಾಧಿಕಾರಿಗಳು, ಬರಗೂರರ ಕುಟುಂಬ ವರ್ಗ, ಬರಗೂರಿನ ಸಮಸ್ತ ನಾಗರಿಕರು ಮನವಿ ಮಾಡಿದ್ದಾರೆ.
ಮನಸನ್ನು ಯಾರೂ ನೋಡಲು ಸಾಧ್ಯವಿಲ್ಲ. ಅದು ಆತ್ಮವೇ? ನಮ್ಮೊಳಗಿನ ಬುದ್ಧಿ ಶಕ್ತಿಯೇ? ಇದು ಏಕೆ ಯಾರ ಕಣ್ಣಿಗೂ ಕಾಣುವುದಿಲ್ಲ. ಬಹುತೇಕ ಜನರಿಗೆ ಮಾತೂ ಕೇಳುವುದಿಲ್ಲ.
ಮನಸ್ಸು ಎಚ್ಚರ ತಪ್ಪದಂತೆ ನೋಡಿಕೊಳ್ಳುವುದೇ ಎಲ್ಲರ ಮುಂದಿರುವ ದೊಡ್ಡ ಸವಾಲು!
ಮನಸ್ಸು ಎಚ್ಚರ ತಪ್ಪಿದರೆ ಮನೆಯಲ್ಲಿ ಗಲಾಟೆ ಶತ ಸಿದ್ಧ. ನಮ್ಮ ಕಣ್ಣಿನ ನೇರಕ್ಕೆ ಬೇರೆಯವರು ನಡೆದುಕೊಳ್ಳುತ್ತಿಲ್ಲ, ನಡೆದುಕೊಂಡಿಲ್ಲ ಎಂಬ ಕಾರಣದಿಂದಲೇ ಬಹಳಷ್ಟು ಜನರಿಗೆ ಮನಸ್ಸು ಹಾದಿ ತಪ್ಪುವುದುಂಟು. ಇದರ ಪರಿಣಾಮ ಏನು?
ಇವರ ಹೆಸರು ಬೇಡ. ಒಳ್ಳೆಯ ವ್ಯವಹಾರಿ. ಸರಳ ವ್ಯಕ್ತಿ. ಕಾರು, ಮನೆ ಎಲ್ಲ ಇತ್ತು. ಆ ದಿನ ಸಣ್ಣ ವಿಚಾರಕ್ಕೆ ಹೆಂಡತಿ ನನ್ನ ಮಾತು ಕೇಳಲಿಲ್ಲ ಎಂದು ಕೋಪತಾಪದಲ್ಲಿ ಮನಸ್ಸು ಸಂಯಮ ಕಳೆದುಕೊಂಡಿತು. ಜಗಳ ಆರಂಭ.
ಪ್ರತಿ ದಿನ ಕಾರು ತೆಗೆದುಕೊಂಡು ಹೋಗುತ್ತಿದ್ದ ಅವರು ಜಗಳದ ಕಾರಣ ಕಾರು ಕೀ ಮನೆಯಲ್ಲೆ ಎಸೆದು ಬೈಕ್ ಹತ್ತಿದರು.
ಫ್ಯಾಕ್ಟರಿ ಸಮೀಪವೇ ಬೈಕ್ ಸ್ಕಿಡ್ ಆಗಿ ಬಿದ್ದರು. ತಲೆಗೆ ಪೆಟ್ಟಾಗಿ ಎಚ್ಚರ ತಪ್ಪಿದರು. ಲಕ್ಷಾಂತರ ರೂಪಾಯಿ ಆಸ್ಪತ್ರೆಗೆ ಸುರಿದರು. ಆದರೂ ಅವರು ಎಚ್ಚರಗೊಳ್ಳಲಿಲ್ಲ. ಎಲ್ಲರನ್ನೂ ಅಗಲಿದರು.
ಘಟನೆ ಎರಡು: ಆಗಷ್ಟೇ ಗಂಡನಿಗೆ ಹೆಂಡತಿ ಟೀ ಕೊಟ್ಟಿದ್ದಳು. ಟೀ ಕುಡಿದ ಗಂಡ ಟೀಪಾಯಿ ಮೇಲೆಯೇ ಲೋಟ ಮಡಗಿದ.
ಬೇರೆ ಕೆಲಸಗಳನ್ನು ಮಾಡುತ್ತಿದ್ದ ಹೆಂಡತಿ ಕೊನೆಯಲ್ಲಿ ಮನೆಯಿಂದ ಹೊರಗೆ ಹೋಗುವಾಗ ಲೋಟ ನೋಡಿ ನಖಾಶಿಖಾಂತ ಕೋಪ. ಒಮ್ಮೆಲೆ ತೆಗೆದು ಒಗೆದಳು, ಸೀದಾ ಲೋಟಾ ಟೀವಿಗೆ ಬಡಿಯಿತು. ಲಕ್ಷ ರೂಪಾಯಿ ಬೆಲೆಯ ಟೀವಿಯ ಗಾಜು ಒಡೆದು ಪುಡಿ ಪುಡಿ.
ಮನಸ್ಸಿನ ಮೇಲೆ ಸಂಯಮವನ್ನು ಬೆಳೆಸಿಕೊಳ್ಳಬೇಕು. ಬೇರೆಯವರ ಮೇಲೆ ಅಸಹನೆ ಆಗದಂತೆ ತಡೆಯಬೇಕು. ಶಾಂತ ಚಿತ್ತತೆಯ ಅನುಕೂಲ ಬಹಳ ಅಲ್ಲವೇ?
ತುರುವೇಕೆರೆ: ಶಿವರಾಮ ಕಾರಂತರು ಅಳಿದ ಮೇಲೆ ಕಾದಂಬರಿಯ ಮೂಲಕ ನೀಡಿರುವ ಸಂದೇಶವಾದ ಸಮಾಜದ ಋಣ ಸಂದಾಯದ ಉತ್ತರದಾಯಿತ್ವ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಮೌಲ್ಯಗಳ ಶೋಧನೆ ಸರ್ವಕಾಲಕ್ಕೂ ಪ್ರಸ್ತುತವೆನಿಸುತ್ತದೆ ಎಂದು ಬದರಿಕಾಶ್ರಮದ ಚಿಂತಕ, ಶಿಕ್ಷಕ ಎಸ್.ಎನ್.ಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಡಾ.ಕೆ.ಶಿವರಾಮ ಕಾರಂತರ ಅಳಿದ ಮೇಲೆ ಕೃತಿಯ ಪರಿಚಯ ಮಾಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಗತಿಸುವಾಗ ತಾನು ಸಮಾಜದಿಂದ ಪಡೆದದ್ದಕ್ಕಿಂತ ಹೆಚ್ಚಿನದನ್ನು ವಾಪಸ್ ಸಮಾಜಕ್ಕೆ ಕೊಟ್ಟು ಹೋಗಬೇಕು. ಹಣ,ಆಸ್ತಿಗಳು ಕೇವಲ ಬದುಕಿನ ಆಸರೆಗಳಾಗಬೇಕೇ ಹೊರತು ಅವು ಬೇರೊಬ್ಬರ ಶೋಷಣೆಯ ಮೂಲಕ ಬಂದ ಪಾಪದ ಸಂಪತ್ತಾಗಬಾರದು. ತನ್ನ ಬಳಿಯಿರುವ ದ್ರವ್ಯ ಸಮಾಜಕ್ಕೆ ಸೇರಿದ್ದು, ತಾನು ಅದನ್ನು ಕಾಯುವ ವಿಶ್ವಸ್ಥ ಪ್ರತಿನಿಧಿ ಎಂಬ ಭಾವನೆ ಬಂದಾಗಷ್ಟೇ ಸಮಾನತೆ,ಸಾಮಾಜಿಕ ಹಕ್ಕಿನ ಪ್ರಜ್ಞಾಪೂರ್ವಕ ಅರಿವುಂಟಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ಮಾತನಾಡಿ ನಾವು ಎಷ್ಟೇ ಪ್ರಜ್ಞಾವಂತರೂ, ಬುದ್ದಿವಂತರಾಗಿದ್ದರೂ ಸಹ ನಮ್ಮ ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರಬಾರದು. ಪ್ರತಿಯೊಬ್ಬರೂ ತಾವು ಕಂಡುಕೊಂಡ ಬೆಳಕಿನಲ್ಲೇ ನಡೆಯುವ ಸ್ವಾತಂತ್ಯ್ರದ ಹಕ್ಕನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎನ್.ಶಂಕರ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಂಶುಪಾಲ ಆನಂದರಾಜ್, ಬರಹಗಾರ ತುರುವೇಕೆರೆ ಪ್ರಸಾದ್, ಎಂ.ಎಸ್.ನಾಗರಾಜು, ಉಪನ್ಯಾಸಕಿ ರೂಪ ಶ್ರೀ, ಗ್ರಂಥಾಲಯ ಸಂಸ್ಥಾಪಕ ದಂಪತಿ ಲಲಿತಾ, ರಾಮಚಂದ್ರ, ಶರತ್, ಬದುಕು ಟ್ರಸ್ಟ್ನ ಉಮಾ ಇತರರು ಇದ್ದರು. ಕೃಷ್ಣಚೈತನ್ಯ ಕಾರ್ಯಕ್ರಮ ನಿರೂಪಿಸಿದರು.
ತುಮಕೂರು : ಚೆನ್ನೈ ಮತ್ತು ಬೆಂಗಳೂರಿನಂತೆ ತುಮಕೂರು ಸಹ ದೇಶದ ದೊಡ್ಡ ಕೈಗಾರಿಕಾ ವಲಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವಕರು, ಮಹಿಳೆಯರಿಗೆ ಈ ಬಜೆಟ್ ಅನುಕೂಲ ಆಗಲಿದೆ. ಮಹಿಳೆಯರನ್ನು ಸಶಕ್ತೀಕರಣ ಗೊಳಿಸುವ ಯೋಜನೆಯನ್ನು ಮುಂದಿಟ್ಟುಕೊಂಡು ಬಜೆಟ್ ಘೋಷಣೆ ಮಾಡಿದ್ದು, ನಾವು ಅವಶ್ಯಕತೆ, ಆಧಾರ ಮತ್ತು ಆದಾಯವನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಾಜದ ಎಲ್ಲ ವರ್ಗವನ್ನ ಸಶಕ್ತೀಕರಣ ಗೊಳಿಸುವುದು ಬಜೆಟ್‍ನ ಗುರಿಯಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಗುಬ್ಬಿಯ ಬಿದರೆಹಳ್ಳ ಕಾವಲ್ ನಲ್ಲಿ ನಿರ್ಮಾಣಗೊಂಡಿರುವ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6ರಂದು ಉದ್ಘಾಟಿಸಿ ಮಾತನಾಡಿದರು.
ಹೆಲಿಕಾಪ್ಟರ್ ತಯಾರಿಕಾ ಘಟಕದಿಂದ ಸಾವಿರಾರು ಯುವಕರಿಗೆ ಉದ್ಯೋಗ ಸಿಗುವ ಜೊತೆಗೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಪ್ರಧಾನಿಯವರಿಗೆ ಅಡಿಕೆ ಪೇಟ, ಹಾರ ಮತ್ತು ಸಿದ್ಧಗಂಗಾ ಶ್ರೀಗಳ ಫಲಕವನ್ನು ನೀಡಲಾಯಿತು.
ಪ್ರಧಾನಿಯವರಿಗೆ ತೊಡಿಸಿದ ಅಡಿಕೆ ಪೇಟ
ಪ್ರಧಾನಿಯವರು ತುಮಕೂರು ಆಧ್ಯಾತ್ಮಿಕ ನೆಲೆಯಾಗಿದ್ದು, ಸಿದ್ಧಗಂಗ ಮಠ ಮತ್ತು ಗುಬ್ಬಿಯ ಚಿದಂಬರ ಆಶ್ರಮಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮೊದಲಾದವರು ಉಪಸ್ಥಿತರಿದ್ದರು.
ತುಮಕೂರು : ಚೆನ್ನೈ ಮತ್ತು ಬೆಂಗಳೂರಿನಂತೆ ತುಮಕೂರು ಸಹ ದೇಶದ ದೊಡ್ಡ ಕೈಗಾರಿಕಾ ವಲಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವಕರು, ಮಹಿಳೆಯರಿಗೆ ಈ ಬಜೆಟ್ ಅನುಕೂಲ ಆಗಲಿದೆ. ಮಹಿಳೆಯರನ್ನು ಸಶಕ್ತೀಕರಣ ಗೊಳಿಸುವ ಯೋಜನೆಯನ್ನು ಮುಂದಿಟ್ಟುಕೊಂಡು ಬಜೆಟ್ ಘೋಷಣೆ ಮಾಡಿದ್ದು, ನಾವು ಅವಶ್ಯಕತೆ, ಆಧಾರ ಮತ್ತು ಆದಾಯವನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. ಸಮಾಜದ ಎಲ್ಲ ವರ್ಗವನ್ನ ಸಶಕ್ತೀಕರಣ ಗೊಳಿಸುವುದು ಬಜೆಟ್‍ನ ಗುರಿಯಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಗುಬ್ಬಿಯ ಬಿದರೆಹಳ್ಳ ಕಾವಲ್ ನಲ್ಲಿ ನಿರ್ಮಾಣಗೊಂಡಿರುವ ಲಘು ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6ರಂದು ಉದ್ಘಾಟಿಸಿ ಮಾತನಾಡಿದರು.
ಹೆಲಿಕಾಪ್ಟರ್ ತಯಾರಿಕಾ ಘಟಕದಿಂದ ಸಾವಿರಾರು ಯುವಕರಿಗೆ ಉದ್ಯೋಗ ಸಿಗುವ ಜೊತೆಗೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಪ್ರಧಾನಿಯವರಿಗೆ ಅಡಿಕೆ ಪೇಟ, ಹಾರ ಮತ್ತು ಸಿದ್ಧಗಂಗಾ ಶ್ರೀಗಳ ಫಲಕವನ್ನು ನೀಡಲಾಯಿತು.
ಪ್ರಧಾನಿಯವರಿಗೆ ತೊಡಿಸಿದ ಅಡಿಕೆ ಪೇಟ
ಪ್ರಧಾನಿಯವರು ತುಮಕೂರು ಆಧ್ಯಾತ್ಮಿಕ ನೆಲೆಯಾಗಿದ್ದು, ಸಿದ್ಧಗಂಗ ಮಠ ಮತ್ತು ಗುಬ್ಬಿಯ ಚಿದಂಬರ ಆಶ್ರಮಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಇಂದು ಪ್ರಧಾನಿ ಮೋದಿ ಅವರು ಗುಬ್ಬಿ ಬಳಿ ಬಿದರೆಕಾವಲ್ ನಲ್ಲಿ ಲೋಕಾರ್ಪಣೆ ಮಾಡುತ್ತಿರುವ ಎಚ್ ಎಎಲ್ ಲಘು ಯುದ್ಧ ವಿಮಾನ ತಯಾರಿಕಾ ಘಟಕ ಇಲ್ಲಿಗೆ ಬರಲು ಕಡೇ ಕ್ಷಣದ ಪ್ರಯತ್ನ ರೋಚಕವಾಗಿತ್ತು.
ಕಡೇ ಕ್ಷಣದಲ್ಲಿ ಅಳೆದು ತೂಗಿ ಈ ವ್ಯಕ್ತಿಯ ಪ್ರಯೋಜನ ಪಡೆಯುವಾಗ ರಾತ್ರಿ ಹತ್ತು ದಾಟಿತ್ತು!
ಇಲ್ಲಿ ಎಚ್ ಎ ಎಲ್ ತರುವ ಹಿಂದೆ ನಡೆದ ಅನೇಕ ಕಥನಗಳು ಜನಜನಿತ. ಎಲ್ಲಿಯ ಯುದ್ಧ ವಿಮಾನ, ಎಲ್ಲಿಯ ಗುಬ್ಬಿ ಎಂದು ಆಡಿಕೊಂಡುವರು ಇದ್ದರು.
ಈ ಘಟಕದ ಹಿಂದಿನ ಮೊದಲ ಕನಸು ಅಭಿವೃದ್ಧಿ ರೆಸಲ್ಯೂಷನ್ ಫೋರಂ ನ, ಈಗ ಶಕ್ತಿ ಪೀಠದ ಕುಂದನರನಹಳ್ಳಿ ರಮೇಶ್ ಅವರದು. ನಂತರ ಈ ಯೋಜನೆ ಜಾರಿಗೆ ತರಬೇಕೆಂದು ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಭಿನ್ನವಿಸಿಕೊಂಡರು. ನಂತರ ಎರಡು ದಶಕದ ಕಾಲ ಹೋರಾಟದ ಕಥನ ಅದು. ಈ ಬಗ್ಗೆ ಈಗಾಗಲೇ ರಮೇಶ್ ಬರೆದುಕೊಂಡಿದ್ದಾರೆ.
ಆದರೆ ಕಡೇ ದಿನಗಳಲ್ಲಿ ಈ ಘಟಕವನ್ನು ಶಿರಾಗೆ ತೆಗೆದುಕೊಂಡು ಹೋಗಲು ಮಾಜಿ ಸಚಿವ ಟಿ.ಬಿ.ಜಯಚಂದ್ರ ಪ್ರಯತ್ನ ಪಟ್ಟು ಸೋತರು. ಯೋಜನೆಗಾಗಿ ತುಮಕೂರಿಗರ ನಡುವೆ ಪೈಪೋಟಿಯ ತೆರೆಮರೆಯ ಕತೆಗಳು ಚೆನ್ನಾಗಿತ್ತು.
ಇದರ ನಡುವೆ ಗೋವಾಗೆ ಯೋಜನೆ ತೆಗೆದುಕೊಂಡು ಹೋಗಲು ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ತೀವ್ರ ಪ್ರಯತ್ನಪಟ್ಟರು. ಯೋಜನೆ ಉಳಿಸಿಕೊಳ್ಳಲು ಆಗಿನ ರಾಜ್ಯ ಸರ್ಕಾರ ಸ್ವಲ್ಪ ಉದಾಸೀನದಂತೆಯೇ ನಮಗೆ ತೋರಿತು.
ಯೋಜನೆಯ ಮಂಜೂರಾತಿಯ ಕಡೇ ದಿನಗಳ ಪ್ರತಿ ದಿನದ ಬೆಳವಣಿಗೆಗಳನ್ನು ಕುಂದರನಹಳ್ಳಿ ರಮೇಶ್ ನನ್ನೊಂದಿಗೆ ಚರ್ಚಿಸುತ್ತಿದ್ದರು. ಕೆಲವೊಂದನ್ನು ಪ್ರಜಾವಾಣಿಯಲ್ಲಿ ವರದಿ ಮಾಡುತ್ತಿದ್ದೆ. ಕೆಲವೊಂದನ್ನು ವರದಿ ಮಾಡು ವಂತಿರಲಿಲ್ಲ.
ಯೋಜನೆಗೆ ಭೂಮಿ ಮಂಜೂರಾತಿಯ ಕಡೇ ದಿನ ಇಂಥದೇ ಇಕ್ಕಟ್ಟಿಗೆ ಸಿಲುಕಿದೆವು. ಆ ದಿನ ಹೋಟೆಲ್ ಹೊಯ್ಸಳದಲ್ಲಿ ನಾನು, ಕುಂದರನಹಳ್ಳಿ ರಮೇಶ್ ನಾಲ್ಕೈದು ಸಲ ಸಭೆ ಸೇರಿದವು. ಪ್ರಜಾಪ್ರಗತಿ ಅಯ್ಯರ್ ಅವರ ಸಲಹೆ ಕೂಡ ಪಡೆದ ನೆನಪು. ಪತ್ರಿಕೆಯಲ್ಲಿ ಸುದ್ದಿ ಬರೆದರೆ ಯೋಜನೆ ಉಳಿದುಕೊಳ್ಳಬಹದು ಅಥವಾ ಇದನ್ನು ರಕ್ಷಣಾ ಸಚಿವರು ತಮ್ಮ ಅಹಃ ಆಗಿ ತೆಗೆದುಕೊಂಡರೆ ಯೋಜನೆಯ ಕಡತವೇ ನನಗುದಿಗೆ ಬೀಳುವ ಸಂಭವ. ಹೀಗಾಗಿ ಅಂದಿನ ಘಟನೆಗಳ ವರದಿ ಮಾಡದಿರಲು ನಿರ್ಧರಿಸಲಾಯಿತು.
ಆದರೆ ರಾತ್ರಿ ಹತ್ತು ಗಂಟೆಯಲ್ಲಿ , ನಾಳೆಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಭೂಮಿ ನೀಡುವ ಕಡತ ಮಂಡಿಸಿದರೆ ಮಾತ್ರ ಯೋಜನೆ ಉಳಿಯಲಿದೆ. ಈ ಕೆಲಸ ಆಗಲೇಬೇಕು ಎಂದು ನಿರ್ಧಾರ ಮಾಡಿದೆವು.
ಆ ಕ್ಷಣವೇ ಪ್ರಜಾವಾಣಿ ಬೆಂಗಳೂರಿನಲ್ಲಿ ಹಿರಿಯ ವರದಿಗಾರರಾಗಿದ್ದ ಬಿ.ಎನ್.ಶ್ರೀಧರ್ ಅವರಿಗೆ ನಾನೇ ಕರೆ ಮಾಡಿದೆ. ಇಡೀ ವೃತಾಂತವನ್ನು ಹೇಳಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಮನಸ್ಸು ಮಾಡಿದರೆ ಕೆಲಸ ಆಗಲಿದೆ ಎಂದೂ ಹೇಳಿದೆ.
ಅಷ್ಟಾರಲ್ಲಾಗಲೇ ರಾತ್ರಿ 10.30 ದಾಟಿತ್ತು. ಈ ಸಮಯದಲ್ಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಕರೆ ಮಾಡಿದರೆ ಅವರು ಫೋನ್ ರಿಸೀವ್ ಮಾಡ್ತಾರೆ ಎಂಬುದೇ ಪ್ರಶ್ನೆ ಎಂದರು ಶ್ರೀಧರ್.
ಮರುದಿನದ ಪತ್ರಿಕೆಯಲ್ಲಿ ಒಂದು ಸಣ್ಣ ಸುದ್ದಿ, ಎಚ್ ಎಎಲ್ ಗೆ ಭೂಮಿಯನ್ನು ಇಂದಿನ ಸಚಿವ ಸಂಪುಟದಲ್ಲೇ ಮಂಜೂರು ಮಾಡಲು ಅನುಮೋದನೆ ನೀಡಲಾಗುವುದು. ಯೋಜನೆ ಜಾರಿಗೆ ಸರ್ಕಾರ ಶತಸಿದ್ಧ ಎಂದು ಕೌಶಿಕ್ ಮುಖರ್ಜಿ ಹೇಳಿದ್ದರು. ಮರು ದಿನವೇ ಭೂಮಿ ಮಂಜೂರಾಯಿತು. ಕನಸು ನನಸಾಯಿತು.
ಎಚ್ ಎ ಎಲ್ ಗೆ ಪ್ರಜಾವಾಣಿಯ ಕೊಡುಗೆಯೂ ಸೇರಿಹೋಯಿತು. ಹಿರಿಯ ಪತ್ರಕರ್ತ ಬಿ.ಎನ್. ಶ್ರೀಧರ್ ಅವರು ಈಗ ಬೆಂಗಳೂರಿನಲ್ಲಿದ್ದಾರೆ. ಅಂದ ಹಾಗೆ, ಅವರು ನಮ್ಮ ಜಿಲ್ಲೆಯ ಮಧುಗಿರಿಯವರು.
ತುಮಕೂರು: ಯುವಪೀಳಿಗೆಯ ಚಿಂತನೆಗಳು ನಮಗಿಂತ ಹತ್ತು ಮಾರು ಮುಂದಿವೆ.
ಯುವ ಪೀಳಿಗೆಯ ಬರಹಗಳು ಎಲ್ಲಿ ಓದು ನಿಂತಿತ್ತೋ ಅಲ್ಲಿಂದ ಮುಂದೆ ದಾಟಿಸುವ ಪ್ರಯತ್ನಗಳಾಗಿವೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ತುಮಕೂರಿನ ಕನ್ನಡ ಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟ, ಸ್ಟೂಡೆಂಟ್ ಬುಕ್ ಕಂಪನಿ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ರಚಿಸಿರುವ ಅಹಿಂಸಾ ಮಾರ್ಗ ಮತ್ತು ಮಾತಂಗಿ ಕುಲಕಥನ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇವನೂರು ಮಹಾದೇವ ಅವರು ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಎಂದಾದರೊಂದು ದಿನ ಮೊಳಕೆ ಹೊಡೆಯುತ್ತವೆ ಎಂದು ಹೇಳುತ್ತಾರೆ. ಇದು ಸತ್ಯ. ಆದರೆ ನನ್ನ ದೃಷ್ಟಿಯಲ್ಲಿ ಇದು ಅರ್ಧ ಸತ್ಯದಂತೆ ಕಂಡುಬರುತ್ತದೆ ಎಂದು ಹೇಳಿದರು.
ಬ್ರಿಟೀಷರುವ ಈ ದೇಶಕ್ಕೆ ಬರುವ ಮುನ್ನ ಗುರುಕುಲ ಪದ್ದತಿ ಅಸ್ತಿತ್ವದಲ್ಲಿತ್ತು. ಈಗಲೂ ಅದೇ ಪ್ರಸ್ತಾಪಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರಜ್ಞಾನವಂತ ಸಮೂಹ ಮೌನವಾಗಿದೆ. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಮೌನಕ್ಕಿಂತ ಮಾತಿಗೆ ಹೆಚ್ಚು ಮಹತ್ವವಿದೆ. ಗುರುಕುಲದಲ್ಲಿ ಯಾರಿಗೆ ಶಿಕ್ಷಣ ದೊರೆಯುತ್ತಿತ್ತು ಎಂಬುದನ್ನು ಗಮಿಸಬೇಕಾಗಿದೆ. ಆದ್ದರಿಂದ ಮಾತು ಆಡುವುದು ಉತ್ತಮ ಎಂದು ತಿಳಿಸಿದರು.
ಅಹಿಂಸ ಮಾರ್ಗ, ಮಾತಂಗಿ ಕುಲಕಥನ ಕೃತಿಗಳ ಕರ್ತೃ ಡಾ.ಶಿವಣ್ಣ ತಿಮ್ಲಾಪುರ ದಂಪತಿಗೆ ಸನ್ಮಾನ ಮಾಡಲಾಯಿತು.
ಇಂದು ರಾಜಕಾರಣವನ್ನು ಬಿಟ್ಟು ಬದುಕುವ ಸ್ಥಿತಿ ಇಲ್ಲ. ರಾಜಕೀಯದ ಜೊತೆಗೆ ಇರಲೇಬೇಕು. ಈ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ನಮ್ಮ ಹಕ್ಕುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಹೊಸ ಓದಿನ ನೆಲೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಆ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮ ಓದು ಹೊಸ ದಿಕ್ಕಿನಂತೆ ಸಾಗಬೇಕು. ಹೊಸ ಓದಿನ ಕ್ರಮ ವಚನಕಾರರಿಂದಲೇ ಆರಂಭವಾಯಿತು. ಅದರಲ್ಲೂ ಕೂಡ ತಳವರ್ಗದ ವಚನಕಾರರು ಈ ಕೆಲಸವನ್ನು ಮಾಡಿದ್ದಾರೆ ಎಂದು ವಿವರಿಸಿದರು.
ವಚನ ಚಳವಳಿಯ ಸಂದರ್ಭದಲ್ಲಿ ವೈದಿಕತೆಯನ್ನು ವಿರೋಧಿಸಿದ 336 ವಚನಗಳು ದೊರಕಿವೆ. ಈ ವಚನಗಳನ್ನು ಬರೆದವರು 41 ಮಂದಿ ವಚನಕಾರರು. ಅವರು ವೈದಿಕವನ್ನು ವಿರೋಧಿಸಿದರು. ಜೊತೆಗೆ ವೇದ, ಆಗಮ, ಪುರಾಣ, ಸ್ಮೃತಿ, ಶೃತಿ, ತರ್ಕ, ಮೀಮಾಂಸೆ ಇವುಗಳನ್ನು ಬೆಂಕಿಗೆ ಹಾಕಿದರು. ಆದರೆ ಅದೇ ವಚನಕಾರರು ಉಪನಿಷತ್ತುಗಳ ವಿರುದ್ಧ ಮಾತನಾಡಿಲ್ಲ. ಉಪನಿಷತ್ತುಗಳ ನಿಸರ್ಗಕ್ಕೆ ಹತ್ತಿರವಾದವುಗಳು. ಹಾಗಾಗಿ ಅವುಗಳನ್ನು ವಿರೋಧ ಮಾಡಿಲ್ಲ ಎಂದು ಆಭಿಪ್ರಾಯಪಟ್ಟರು.
ಮಲೆ ಮಹದೇಶ್ವರ, ಮಂಟೇಸ್ವಾಮಿ ಮತ್ತು ಜುಂಬಪ್ಪನ ಕಾವ್ಯಗಳು ಶೈವವನ್ನು ಪ್ರತಿಪಾದಿಸುತ್ತವೆ. ಈ ನಾಯಕರೆಲ್ಲರೂ ಶೈವ ಪ್ರತಿಪಾದಕರಾಗಿದ್ದಾರೆ. ಇಂದು ಬಸವ ಧರ್ಮಕ್ಕೂ ಲಿಂಗಾಯತರಿಗೂ ಹೊಂದಾಣಿಕೆ ಇಲ್ಲವಾಗಿದೆ. ಗೊಲ್ಲರು ಕೃಷ್ಣನ ಬೆನ್ನ ಹಿಂದೆ ಬಿದ್ದು ಶೈವವನ್ನು ಮರೆತಿದ್ದಾರೆ ಎಂದು ವಿಷಾದಿಸಿದರು.
ಕೃತಿಗಳನ್ನು ಕುರಿತು ಡಾ.ಹುಲಿಕುಂಟೆ ಮೂರ್ತಿ, ಬರಹಗಾರ ಡಾ.ಹೆಚ್.ಲಕ್ಷ್ಮೀನಾರಾಯಣಸ್ವಾಮಿ ಮಾತನಾಡಿದರು. ಕಲೇಸಂ ಜಿಲ್ಲಾ ಶಾಖೆ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃತಿಗಳ ಕರ್ತೃ ಡಾ.ಶಿವಣ್ಣ ತಿಮ್ಲಾಪುರ ಮಾತನಾಡಿದರು.
ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ.ಟಿ.ಆರ್.ಲೀಲಾವತಿ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟದ ಡಾ.ಶಿವನಂಜಯ್ಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಉಪನ್ಯಾಸಕ ಕಂಟಲಗೆರೆ ಸಣ್ಣಹೊನ್ನಯ್ಯ ಉಪಸ್ಥಿತರಿದ್ದರು. ಯುವ ಮುಖಂಡ ಕೊಟ್ಟ ಶಂಕರ್ ಸ್ವಾಗತಿಸಿದರು.
ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಬಳ್ಳಾರಿಯ ವಕೀಲರ ತಂಡದ ಅಂಗಾಲುಗಳಲ್ಲಿ ಬೊಬ್ಬೆ ಗಳ ಸುರಿ ಮಳೆ.
ಕ್ಷಕಿದಾರರು, ನ್ಯಾಯಕ್ಕಾಗಿ ಅನೇಕ ವಕೀಲರು, ನ್ಯಾಯಾಧೀಶರು ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಅವರ ತ್ಯಾಗದ ಹಿಂದೆ ನಮ್ಮ ಈ ನೋವಿನ ಲೆಕ್ಕ ಬೇಡ ಸರ್ ಎಂದರು ಅವರುಗಳು.
ಸರ್ಕಾರ ವಕೀಲರಿಗೆ ಮೋಸ ಮಾಡಿದೆ. ವಿಶೇಷ ಅಧಿವೇಶನ ಕರೆದು ಮಸೂದೆ ಜಾರಿಗೆ ತರುವುದಾಗಿ ಹೇಳಿತ್ತು. ಬೆಳಗಾವಿಗೂ ವಕೀಲರು ಪಾದಯಾತ್ರೆ ನಡೆಸಿದರು. ಸರ್ಕಾರಕ್ಕೆ ತಾತ್ಸಾರ ಎಂದರು.
ಬಜೆಟ್ ಅಧಿವೇಶನವೇ ಈ ಸರ್ಕಾರದ ಕಡೇ ಅಧಿವೇಶನ. ಈಗಲಾದರೂ ಮಸೂದೆ ಜಾರಿಗೆ ತರಬೇಕು ಎಂದರು ಅವರು.
ಕಾಲುಗಳಲ್ಲಿ ಎದ್ದಿದ್ದ ಬೊಬ್ಬೆಗಳನ್ನು ತೋರಿಸಿದ ವಕೀಲ ಜೆ.ಎಂ. ಗಾದಿ ಲಿಂಗಪ್ಪ ಅವರು, ಹಾದಿಯುದ್ದಕ್ಕೂ ಜನರು ವಕೀಲರಿಗೂ ರಕ್ಷಣೆ ಕೊಡಬೇಕಾಗಿದೆ ಎಂದರು. ವಕೀಲರ ಕುರಿತ ಸರ್ಕಾರದ ಅಸಡ್ಡೆ ಬಗ್ಗೆ ಜನರಿಗೂ ಬೇಸರ ಇರುವುದು ಪಾದಯಾತ್ರೆಯಲ್ಲಿ ಕಂಡುಬಂತು. ಇದು ನಮ್ಮ ನೋವು ಮರೆಸಿದೆ ಎಂದರು.
ತಂಡದಲ್ಲಿದ್ದ ಮಹಿಳಾ ವಕೀಲೆ ಡಿ.ಎನ್.ಮಹಾಲಕ್ಷ್ಮೀ ಅವರ ಅಂಗಾಲುಗಳಲ್ಲೂ ಬೊಬ್ಬೆ ಮೂಡಿದ್ದವು. ಕಾಮೇಶ್ ಟಿ.ಕೆ., ಕೆ.ಕುರಿಯರ್, ಮರಿಸ್ವಾಮಿ, ಪರಮೇಶ್ವರಪ್ಪ ಪಾದಯಾತ್ರೆ ತಂಡದಲ್ಲಿದ್ದಾರೆ.
ತುಮಕೂರು ವಕೀಲರ ಸಂಘದಲ್ಲಿ ಪಾದಯಾತ್ರಿಗಳನ್ನು ಬರ ಮಾಡಿಕೊಳ್ಳಲಾಯಿತು. ವಕೀಲರ ಸಂಘದ ಬೆಂಬಲ ಸೂಚಿಸಲಾಯಿತು.
ಪಾದಯಾತ್ರಿಗಳ ಜತೆ ತುಮಕೂರು ವಕೀಲರ ತಂಡ
ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ.ಹಿಮಾನಂದ ಅವರು ಪಾದಯಾತ್ರಿಗಳ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ದೊಡ್ಮನೆ ಗೋಪಾಲಗೌಡ, ಸಂಘದ ಪದಾಧಿಕಾರಿಗಳು, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಇತರರು ಇದ್ದರು.